ಪರ್ವತದ ಹಾದಿಯಲ್ಲಿ ಹೊಸ ದಾಖಲೆ ಬರೆದ ಬೆಂಟ್ಲಿ ಕಾಂಟಿನೆಂಟಲ್ ಜಿ‍ಟಿ

ಬೆಂಟ್ಲಿ ಕಾಂಟಿನೆಂಟಲ್ ಜಿಟಿ ಕಾರು, ತಾನು ಇದುವರೆಗಿನ ಅತ್ಯುತ್ತಮ ಗ್ರ್ಯಾಂಡ್ ಟೂರರ್ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದೆ. ಅಮೆರಿಕಾದ ಕೊಲೊರಾಡೋದಲ್ಲಿ 2019ರ ಜೂನ್30ರಂದು ನಡೆದ ಪೈಕ್ಸ್ ಪೀಕ್ ಇಂಟರ್‍‍ನ್ಯಾಷನಲ್ ಹಿಲ್ ಕ್ಲೈಂಬ್‍‍ನಲ್ಲಿ ಕಾಂಟಿನೆಂಟಲ್ ಜಿಟಿಯ ಉತ್ಪಾದನಾ ಕಾರು ದಾಖಲೆಯನ್ನು ಬರೆದಿದೆ. ಈ ಅಲ್ಟಿಮೇಟ್ ಗ್ರ್ಯಾಂಡ್ ಟೂರರ್ ಕಾರ್ ಅನ್ನು ಚಲಾಯಿಸಿದ ರೈಸ್ ಮಿಲ್ಲೆನ್‍‍ರವರು 10:18.488ರ ದಾಖಲೆಯ ಸಮಯದಲ್ಲಿ ಈ ಸ್ಪರ್ಧೆಯನ್ನು ಪೂರ್ಣಗೊಳಿಸಿದರು.

ಪರ್ವತದ ಹಾದಿಯಲ್ಲಿ ಹೊಸ ದಾಖಲೆ ಬರೆದ ಬೆಂಟ್ಲಿ ಕಾಂಟಿನೆಂಟಲ್ ಜಿ‍ಟಿ

ಹಿಂದಿನ ಅಂತರರಾಷ್ಟ್ರೀಯ ದಾಖಲೆಯನ್ನು 8 ಸೆಕೆಂಡುಗಳ ಅಂತರದಿಂದ ಮುರಿದರು. ಬೆಂಟ್ಲಿ ಕಂಪನಿಯ 100ನೇ ವಾರ್ಷಿಕೋತ್ಸವದ ನೆನಪಿಗಾಗಿ ಈ ಕಾರಿಗೆ 100ನೇ ಸಂಖ್ಯೆಯ ನಂಬರ್ ನೀಡಲಾಗಿತ್ತು. ಕಾಂಟಿನೆಂಟಲ್ ಜಿಟಿಯನ್ನು ಮೂರು ಬಾರಿಯ ಚಾಂಪಿಯನ್ ಹಾಗೂ ಕಿಂಗ್ ಆಫ್ ದಿ ಮೌಂಟೇನ್ ಎಂದು ಖ್ಯಾತರಾಗಿರುವ ನ್ಯೂಜಿಲೆಂಡ್ ಮೂಲದ ರೈಸ್ ಮಿಲ್ಲೆನ್ ಚಲಾಯಿಸಿದರು. ಈ ಕಾರು ಪೂರ್ತಿ ರೇಸ್ ಮುಗಿಯುವವರೆಗೂ ಸುಮಾರು 112 ಕಿಲೋಮೀಟರ್ ವೇಗವನ್ನು ಹೊಂದಿ, 156 ಬೆಂಡ್‌ಗಳ ಮೂಲಕ ಸುಮಾರು 5,000 ಅಡಿಗಳಷ್ಟು ಮೇಲಕ್ಕೇರಿತು.

ಪರ್ವತದ ಹಾದಿಯಲ್ಲಿ ಹೊಸ ದಾಖಲೆ ಬರೆದ ಬೆಂಟ್ಲಿ ಕಾಂಟಿನೆಂಟಲ್ ಜಿ‍ಟಿ

ತಮ್ಮ ಚಾಲನಾ ಕೌಶಲ್ಯಗಳಿಂದ ಈ ದಾಖಲೆಯನ್ನು ನಿರ್ಮಿಸಲು ಮಿಲೆನ್‍‍ರವರು ಪ್ರಪಂಚದ ಅತ್ಯಾಧುನಿಕ 12 ಸಿಲಿಂಡರ್ ಎಂಜಿನ್‌ ಹೊಂದಿದ್ದ ಕಾರ್ ಅನ್ನು ಬಳಸಿದ್ದರು. ಕಳೆದ ವರ್ಷದ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ವಿಶ್ವದ ಅತ್ಯಂತ ಐಷಾರಾಮಿ ಎಸ್‍‍ಯು‍‍ವಿ ಬೆಂಟ್ಲಿ ಬೆಂಟಾಯ್ಗಾ ಕೂಡ ಉತ್ತಮ ಪ್ರದರ್ಶನ ನೀಡಿತ್ತು. ಉತ್ಪಾದನಾ ಹಂತದಲ್ಲಿದ್ದ ಬೆಂಟಾಯ್ಗಾ ಎಸ್‍‍ಯು‍‍ವಿ ಈ ಸ್ಪರ್ಧೆಯಲ್ಲಿ ಹೊಸ ದಾಖಲೆಯನ್ನು ಬರೆದಿತ್ತು. ಆ ಸ್ಪರ್ಧೆಯಲ್ಲಿಯೂ ಭಾಗವಹಿಸಿದ್ದ ರೈಸ್ ಮಿಲ್ಲೆನ್‍‍ರವರು ಬೆಂಟಾಯ್ಗಾವನ್ನು ಚಾಲನೆ ಮಾಡಿ 10:49.9 ನಿಮಿಷದಲ್ಲಿ ಸ್ಪರ್ಧೆಯನ್ನು ಯಶಸ್ವಿಯಾಗಿ ಮುಗಿಸಿದ್ದರು.

ಪರ್ವತದ ಹಾದಿಯಲ್ಲಿ ಹೊಸ ದಾಖಲೆ ಬರೆದ ಬೆಂಟ್ಲಿ ಕಾಂಟಿನೆಂಟಲ್ ಜಿ‍ಟಿ

ಅದಕ್ಕಿಂತ ಮುಂಚಿತವಾಗಿ ದಾಖಲಾಗಿದ್ದ ವಿಶ್ವ ದಾಖಲೆಯನ್ನು ಎರಡು ನಿಮಿಷಗಳ ಅಂತರದಿಂದ ಮುರಿದಿದ್ದರು. ಬೆಂಟ್ಲಿಯ ಮೋಟಾರ್‍‍ಸ್ಪೋರ್ಟ್‍‍ನ ನಿರ್ದೇಶಕರಾದ ಬ್ರಿಯಾನ್ ಗುಷ್‍‍ರವರು ಮಾತನಾಡಿ ಈ ಹೊಸ ದಾಖಲೆಯು ಬೆಂಟ್ಲಿ ಕಂಪನಿಯು ಯಾವುದೇ ಸ್ಥಳಗಳಲ್ಲಿಯೂ ಸಹ ಸಮರ್ಥವಾಗಿ ಕಾರ್ಯನಿರ್ವಹಿಸುವುದನ್ನು ಸಾಬೀತುಪಡಿಸಿದೆ. ಇದು ಕಾಂಟಿನೆಂಟಲ್ ಜಿಟಿಯ ಬೆರಗುಗೊಳಿಸುವ ಸಾಮರ್ಥ್ಯವನ್ನು ಸ್ಪಷ್ಟವಾಗಿ ತೋರಿಸುತ್ತದೆ ಎಂದು ತಿಳಿಸಿದರು.

ಪರ್ವತದ ಹಾದಿಯಲ್ಲಿ ಹೊಸ ದಾಖಲೆ ಬರೆದ ಬೆಂಟ್ಲಿ ಕಾಂಟಿನೆಂಟಲ್ ಜಿ‍ಟಿ

ಈ ಪ್ರದರ್ಶನದ ನಂತರ ಮಾತನಾಡಿದ ಮಿಲೆನ್‍‍ರವರು, ತೇವದಿಂದ ಕೂಡಿದ್ದ, ಹಿಮಭರಿತವಾದ ಪೈಕ್ಸ್ ಶಿಖರದ 2019ರ ಸ್ಪರ್ಧೆಯು ಮುಕ್ತಾಯವಾಗಿದೆ. ಉತ್ಪಾದನಾ ಹಂತದಲ್ಲಿರುವ ಕಾರ್ ಅನ್ನು ಪರ್ವತದ ಮೇಲೆ ವೇಗವಾಗಿ ಚಲಾಯಿಸಿ ಹೊಸ ದಾಖಲೆಯನ್ನು ನಿರ್ಮಿಸುವ ಗುರಿಯನ್ನಿಟ್ಟುಕೊಂಡು ಇಲ್ಲಿಗೆ ಬಂದಿದ್ದೇವು. ಈ ವಾರವು ಬಹಳಷ್ಟು ಸವಾಲಿನಿಂದ ಕೂಡಿತ್ತು. ಪ್ರತಿಕೂಲ ಹವಾಮಾನವು ಸಹ ನಮಗೆ ಸವಾಲಾಗಿತ್ತು. ಆದರೆ ಬಲಶಾಲಿಯಾದ ಕಾಂಟಿನೆಂಟಲ್ ಜಿಟಿಯ ಸಾಮರ್ಥ್ಯದಿಂದ ನಾವು ಮೊದಲ ಸ್ಥಾನದಲ್ಲಿದ್ದೇವೆ ಎಂದು ತಿಳಿಸಿದರು.

ಮೋಟರ್‍‍ಸ್ಪೋರ್ಟ್ ಕಾರುಗಳಿಂದ ಹಿಡಿದು ಆಧುನಿಕ ಯುಗದ ಶಕ್ತಿಯುತವಾದ ರಸ್ತೆ ಕಾರುಗಳವರೆಗೆ, ಬೆಂಟ್ಲಿಯ ಎಲ್ಲಾ ಕಾರುಗಳು ಹೊಸತನದಿಂದ ಕೂಡಿವೆ. 2019ರ ಜುಲೈ10ರಂದು ಬೆಂಟ್ಲಿಯ 100 ನೇ ವರ್ಷವನ್ನು ಆಚರಿಸಲಾಯಿತು. ಕೆಲವು ಕಂಪನಿಗಳು ಮಾತ್ರವೇ 100 ವರ್ಷದಿಂದ ಕಾರ್ಯನಿರ್ವಹಿಸುತ್ತಿವೆ. ಬೆಂಟ್ಲಿ ಕಂಪನಿಯು 2019ರಲ್ಲಿ ವಿಶ್ವದಾದ್ಯಂತ ಈ ರೀತಿಯ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಈ ಕಾರ್ಯಕ್ರಮಗಳಲ್ಲಿ ಕಂಪನಿಯು ಕಳೆದ 100 ವರ್ಷಗಳಲ್ಲಿ ನಡೆದು ಬಂದ ಹಾದಿಯನ್ನು ತೋರಿಸಲಿದೆ.

ಪರ್ವತದ ಹಾದಿಯಲ್ಲಿ ಹೊಸ ದಾಖಲೆ ಬರೆದ ಬೆಂಟ್ಲಿ ಕಾಂಟಿನೆಂಟಲ್ ಜಿ‍ಟಿ

ಡ್ರೈವ್‍‍ಸ್ಪಾರ್ಕ್ ಅಭಿಪ್ರಾಯ

ಬೆಂಟ್ಲಿ ವಿಶ್ವದ ಅತ್ಯುತ್ತಮ ಕಾರ್ಯಕ್ಷಮತೆ ಕಾರುಗಳನ್ನು ಉತ್ಪಾದಿಸುತ್ತದೆ. ನಮ್ಮ ದೇಶದಲ್ಲಿ ಬೆಂಟ್ಲಿ ಕಾರುಗಳನ್ನು ಐಷಾರಾಮಿ ವಾಹನವಾಗಿ ನೋಡಲಾಗುತ್ತಿದ್ದು, ಅವುಗಳನ್ನು ಹೊಂದಿರುವವರು ತೋರಿಕೆಗಾಗಿ ಬಳಸುತ್ತಾರೆ. ಲ್ಯಾಂಡ್ ರೋವರ್ ಕಾರ್ ಸಹ ಹೆಚ್ಚು ಸಾಮರ್ಥ್ಯ, ನಂಬಲಾಗದ ಕಾರ್ಯಕ್ಷಮತೆಯನ್ನು ಹೊಂದಿದೆ. ಆದರೆ ಈ ಕಾರ್ ಅನ್ನು ಸಹ ಭಾರತದಲ್ಲಿ ಶ್ರೀಮಂತಿಕೆಯನ್ನು ತೋರಿಸಲು ಬಳಸಲಾಗುತ್ತಿದೆ.

Most Read Articles

Kannada
English summary
Bentley Continental GT Conquers Pikes Peak — Sets New Course Record - Read in kannada
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X