Just In
- 5 hrs ago
ವಾಣಿಜ್ಯ ವಾಹನಗಳ ಖರೀದಿಗಾಗಿ ಹಲವು ಆಕರ್ಷಕ ಸಾಲಸೌಲಭ್ಯಗಳಿಗೆ ಚಾಲನೆ ನೀಡಿದ ಟಾಟಾ
- 5 hrs ago
2021ರ ಜೀಪ್ ಕಂಪಾಸ್ ಫೇಸ್ಲಿಫ್ಟ್ ಎಸ್ಯುವಿ ವೆರಿಯೆಂಟ್ ಮಾಹಿತಿ ಬಹಿರಂಗ
- 6 hrs ago
ವಿದೇಶಿ ಮಾರುಕಟ್ಟೆಗೂ ಲಗ್ಗೆಯಿಟ್ಟ ಮೇಡ್ ಇನ್ ಇಂಡಿಯಾ ಹೋಂಡಾ ಹೈನೆಸ್ ಸಿಬಿ 350
- 6 hrs ago
ಎಂಟೇ ನಿಮಿಷಗಳಲ್ಲಿ ರಸ್ತೆ ಗುಂಡಿಗಳನ್ನು ಸರಿ ಪಡಿಸಲಿದೆ ಜೆಸಿಬಿಯ ಈ ಹೊಸ ಯಂತ್ರ
Don't Miss!
- News
Biden Inauguration live updates: ಅಮೆರಿಕ ಅಧ್ಯಕ್ಷರಾಗಿ ಜೋ ಬೈಡನ್ ಪದಗ್ರಹಣದ ನೇರಪ್ರಸಾರ
- Finance
ಸಿಯೆಟ್ ಲಿಮಿಟೆಡ್ ಲಾಭದ ಪ್ರಮಾಣ ಎರಡೂವರೆ ಪಟ್ಟು ಹೆಚ್ಚಳ
- Sports
ಐಎಸ್ಎಲ್: ಹೈದರಾಬಾದ್ ಜಯಕ್ಕೆ ಅಡ್ಡಿಯಾದ ಕಳಿಂಗ ವಾರಿಯರ್ಸ್
- Education
AAI Recruitment 2021: 7 ಸಲಹೆಗಾರ ಹುದ್ದೆಗಳಿಗೆ ಅರ್ಜಿ ಆಹ್ವಾನ
- Movies
ಅಂಧ ವ್ಯಕ್ತಿಯ ಬಾಳಿಗೆ ಬೆಳಕಾದ ಕಿಚ್ಚ ಸುದೀಪ ಚಾರಿಟೇಬಲ್ ಸೊಸೈಟಿ
- Lifestyle
ಜ. 25ಕ್ಕೆ ಕುಂಭ ರಾಶಿಗೆ ಬುಧನ ಸಂಚಾರ: 12 ರಾಶಿಗಳ ಮೇಲೆ ಇದರ ಪ್ರಭಾವವೇನು?
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಬರೋಬ್ಬರಿ 12 ಕೋಟಿ ಮೌಲ್ಯದ ಬೆಂಟ್ಲಿ ಮೊಜಾನ್ ಕಾರು ಖರೀದಿಸಿದ ಬೆಂಗಳೂರು ಉದ್ಯಮಿ
ಬ್ರಿಟಿಷ್ ಐಷಾರಾಮಿ ಕಾರು ಉತ್ಪಾದನಾ ಸಂಸ್ಥೆಯಾದ ಬೆಂಟ್ಲಿ ಮೋಟಾರ್ಸ್ ತನ್ನ ಮೊದಲ ಮೊಜಾನ್ ಎಕ್ಸ್ಟೆಂಡ್ ಲಾಂಗ್ ವೀಲ್ಹ್ ಬೇಸ್ ಸೆಂಚ್ಯುರಿ ಎಡಿಷನ್ ಕಾರಿನ ಮೊದಲ ಯುನಿಟ್ ಅನ್ನು ಮಾರಾಟ ಮಾಡಿದ್ದು, ಹೊಸ ಕಾರಿಗೆ ಬೆಂಗಳೂರು ಮೂಲದ ಉದ್ಯಮಿ ವಿ.ಎಸ್ ರೆಡ್ಡಿ ಮೊದಲ ಮಾಲೀಕರಾಗಿದ್ದಾರೆ.

ಬೆಂಗಳೂರಿನ ಜಯನಗರದಲ್ಲಿರುವ ಬ್ರಿಟಿಷ್ ಬಯೋಲಾಜಿಕಲ್ ಕಂಪನಿಯ ವ್ಯವಸ್ಥಾಪಕ ನಿರ್ದೇಶಕರಾಗಿರುವ ವಿ.ಎಸ್ ರೆಡ್ಡಿ ಅವರು ಬೆಂಟ್ಲಿ ಮೊಜಾನ್ ಸ್ಪೆಷಲ್ ಎಡಿಷನ್ ಕಾರು ಖರೀದಿಸಿದ್ದು, ಹೊಸ ಕಾರು ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ.9.50 ಕೋಟಿ ಬೆಲೆ ಹೊಂದಿದೆ. ಇದು ಆನ್‌ರೋಡ್ ಬೆಲೆಗಳಲ್ಲಿ ರೂ.12 ಕೋಟಿಗೂ ಅಧಿಕ ಬೆಲೆ ಹೊಂದಿದ್ದು, ಬೆಂಟ್ಲಿ ಸಂಸ್ಥೆಯು ತನ್ನ ಹೊಸ ಕಾರಿನ ಮೊದಲ ಯುನಿಟ್ ಅನ್ನು ಭಾರತದಲ್ಲಿ ಮಾರಾಟ ಮಾಡುವ ಮೂಲಕ ಹೊಸ ಸಂಚಲನಕ್ಕೆ ಕಾರಣವಾಗಿದೆ.

ಹತ್ತಾರು ಅತ್ಯಾಧುನಿಕ ತಂತ್ರಜ್ಞಾನ ಸೌಲಭ್ಯಗಳನ್ನು ಹೊಂದಿರುವ ಮೊಜಾನ್ ಕಾರು ಜಾಗತಿಕ ಆಟೋ ಉದ್ಯಮದಲ್ಲಿ ಯಶಸ್ವಿ ನೂರು ವರ್ಷಗಳನ್ನು ಪೂರೈಸಿದ್ದು, ಈ ಹಿನ್ನಲೆಯಲ್ಲಿ ಮೊಜಾನ್ ಸ್ಪೆಷಲ್ ಎಡಿಷನ್ ಕಾರನ್ನು ಎಕ್ಸ್ಟೆಂಡ್ ಲಾಂಗ್ ವೀಲ್ಹ್ ಬೇಸ್ ವೈಶಿಷ್ಟ್ಯತೆಯೊಂದಿಗೆ ಬಿಡುಗಡೆಗೊಳಿಸಲಾಗಿದೆ.

ಸದ್ಯ ಜರ್ಮನ್ ಬ್ರಾಂಡ್ ಫೋಕ್ಸ್‌ವ್ಯಾಗನ್ ಸಂಸ್ಥೆಯ ಅಧೀನದಲ್ಲಿ ಕಾರ್ಯನಿರ್ವಹಣೆ ಮಾಡುತ್ತಿರುವ ಬೆಂಟ್ಲಿ ಸಂಸ್ಥೆಯು ಮೊಜಾನ್ ಲಿಮೊಸಿನ್ ಕಾರು ಉತ್ಪಾದನೆಯಲ್ಲಿ ಹಲವಾರು ಬದಲಾವಣೆಗಳೊಂದಿಗೆ ಐಷಾರಾಮಿ ಕಾರು ಪ್ರಿಯರ ಆಕರ್ಷಣೆಗೆ ಕಾರಣವಾಗಿದ್ದು, ಸೆಂಚ್ಯುರಿ ಎಡಿಷನ್ ಅನ್ನು ಭಾರತದಲ್ಲೇ ಮೊದಲ ಬಾರಿಗೆ ವಿತರಣೆ ಮಾಡಿದೆ.

ಮತ್ತೊಂದು ವಿಶೇಷ ಅಂದರೆ, ವಿಎಸ್ ರೆಡ್ಡಿ ಅವರು ಹೊಸ ಬೆಂಟ್ಲಿ ಕಾರಿನ ವಿತರಣೆಯನ್ನು ತಮ್ಮ ಉದ್ಯಮ ಯಶಸ್ವಿಗೆ ಕಾರಣರಾದ ಸಹದ್ಯೋಗಿಗಳ ಸಮ್ಮುಖದಲ್ಲಿ ಪಡೆದುಕೊಂಡಿದ್ದಾರೆ. ಕೆಲವೇ ವರ್ಷಗಳ ಹಿಂದೆ ಬಡಕುಟುಂಬದಿಂದ ಬಂದಿದ್ದ ವಿಎಸ್ ರೆಡ್ಡಿಯವರು ಅತಿ ಕಡಿಮೆ ಬಂಡವಾಳದೊಂದಿಗೆ ಪೌಷ್ಠಿಕಾಂಶ ಉತ್ಪನ್ನಗಳ ಉತ್ಪಾದನೆಯಲ್ಲಿ ಯಶಸ್ವಿ ಸಾಧಿಸುವ ಮೂಲಕ ಬ್ರಿಟಿಷ್ ಬಯೋಲಾಜಿಕಲ್ ಸಂಸ್ಥೆಯನ್ನು ಹುಟ್ಟುಹಾಕಿದ್ದರು. ಸದ್ಯ ಪೌಷ್ಠಿಕಾಂಶ ಉತ್ಪನ್ನಗಳ ಮಾರುಕಟ್ಟೆಯಲ್ಲಿ ಬ್ರಿಟಿಷ್ ಬಯೋಲಾಜಿಕಲ್ ಸಂಸ್ಥೆಯು ಮುಂಚೂಣಿಯಲ್ಲಿದ್ದು, ವಿಶ್ವದ ಶ್ರೇಷ್ಠ ಕಾರುಗಳ ಪೈಕಿ ಒಂದಾಗಿರುವ ಬೆಂಟ್ಲಿ ಮೊಜಾನ್ ಕಾರು ಖರೀದಿಸಿರುವ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದ್ದಾರೆ.

ಇನ್ನು ಬೆಂಟ್ಲಿ ಮೊಜಾನ್ ಎಕ್ಸ್ಟೆಂಡ್ ಲಾಂಗ್ ವೀಲ್ಹ್ ಬೇಸ್ ಸೆಂಚ್ಯುರಿ ಎಡಿಷನ್ ಕಾರು ಬರೋಬ್ಬರಿ 5,825-ಎಂಎಂ ಉದ್ದ, 2,208-ಎಂಎಂ ಅಗಲ, 1,541-ಎಂಎಂ ಎತ್ತರ ಮತ್ತು 3,516-ಎಂಎಂ ನಷ್ಟು ವೀಲ್ಹ್‌ಬೆಸ್ ಪಡೆದುಕೊಂಡಿದೆ.

ಹೊಸ ಕಾರು ಬೆಲೆಗೆ ತಕ್ಕಂತೆ ಹಲವಾರು ಸುಧಾರಿತ ತಂತ್ರಜ್ಞಾನ ಪ್ರೇರಿತ ಸೌಲಭ್ಯಗಳನ್ನು ಪಡೆದುಕೊಂಡಿದ್ದು, ಸ್ಟೈನ್‌ಲೆಸ್ ಸ್ಟೀಲ್ ವರ್ಟಿಕಲ್ ರೆಡಿಯೆಟರ್ ಗ್ರೀಲ್, ಫುಲ್ ಎಲ್‌ಇಡಿ ಹೆಡ್‌ಲ್ಯಾಂಪ್ ಜೊತೆಗೆ ಟರ್ನ್ ಇಂಡಿಕೇಟರ್, ಬಿ ಆಕಾರದಲ್ಲಿ ಟೈಲ್ ಲ್ಯಾಂಪ್ ಕ್ಲಸ್ಟರ್, 21-ಇಂಚಿನ ಅಯಾಲ್ ವೀಲ್ಹ್ ಮತ್ತು ಡ್ಯುಯಲ್ ಟೋನ್ ಪೇಟಿಂಗ್ ನೀಡಲಾಗಿದೆ.

ಬೆಂಟ್ಲಿ ಸಂಸ್ಥೆಯು ಹೊಸ ಕಾರಿನಲ್ಲಿ ವಿಶೇಷವಾಗಿ ಮೇಲ್ಭಾಗವನ್ನು ರೋಸ್ ಗೋಲ್ಡ್ ಬಣ್ಣದಿಂದ ಮತ್ತು ಸೈಡ್ ಪ್ಯಾನೆಲ್‌ಗಳನ್ನು ಮೆಟಾಲಿಕ್ ಗ್ರೇ ಬಣ್ಣವನ್ನು ಲೇಪನ ಮಾಡಲಾಗಿದ್ದು, ಕಾರಿನ ಹಿಂಬದಿಯಲ್ಲಿ 100 ವರ್ಷಗಳನ್ನು ಪೂರೈಸಿದ ವಿಶೇಷ ಬ್ಯಾಡ್ಜ್ ಗಮನಸೆಳೆಯುತ್ತದೆ.

ಗಮನ ಸೆಳೆಯುವ 'ಫ್ಲೈಯಿಂಗ್ ಬಿ'
ಬೆಂಟ್ಲಿ ಕಾರಿಗೆ ಮತ್ತಷ್ಟು ಐಷಾರಾಮಿ ಲುಕ್ ನೀಡುವ ಪ್ರಮುಖ ತಾಂತ್ರಿಕ ಅಂಶ ಅಂದರೆ ಅದು 'ಫ್ಲೈಯಿಂಗ್ ಬಿ' ಲಾಂಛನ. ಸಾಮಾನ್ಯವಾಗಿ ಬೆಂಟ್ಲಿ ಇತರೆ ಕಾರುಗಳಿಂತಲೂ ಸೆಂಚ್ಯುರಿ ಎಡಿಷನ್‌ನಲ್ಲಿರುವ ಫ್ಲೈಯಿಂಗ್ ಬಿ ಲಾಂಛನವು ತುಸು ವಿಭಿನ್ನವಾಗಿದ್ದು, ಬಂಗಾರದ ಲೇಪನ ಹೊಂದಿದೆ.

ಇದು ಯಾವುದೇ ತುರ್ತು ಸಂದರ್ಭಗಳಲ್ಲೂ ಕೆಲವೇ ಸೆಕೇಂಡುಗಳಲ್ಲಿ ಕಾರಿನ ಬ್ಯಾನೆಟ್ ತಳಭಾಗದಲ್ಲಿ ಅವಿತುಕೊಳ್ಳುವಂತಹ ತಂತ್ರಜ್ಞಾನ ಸೌಲಭ್ಯವನ್ನು ನೀಡಲಾಗಿದ್ದು, ಈ ಕಾರಣದಿಂದಲೇ ಫ್ಲೈಯಿಂಗ್ ಬಿ ಲಾಂಛನವು ಯಾವುದೇ ಕಾರಣಕ್ಕೂ ಖದೀಮರ ಕೈಗೆ ಸಿಗಲು ಸಾಧ್ಯವೇ ಇಲ್ಲ ಎನ್ನುತ್ತಾರೆ ಬೆಂಟ್ಲಿ ಹಿರಿಯ ಅಧಿಕಾರಿಗಳು.

ಇದರೊಂದಿಗೆ ಕಾರಿನ ಬಹುತೇಕ ತಾಂತ್ರಿಕ ಅಂಶಗಳು ಅಂತರಾಷ್ಟ್ರೀಯ ಮಟ್ಟದ ಗುಣಮಟ್ಟವನ್ನು ಹೊಂದಿದ್ದು, ಕಾರಿನ ಒಳಭಾಗದ ತಾಂತ್ರಿಕ ಅಂಶಗಳನ್ನು ಮಾಲೀಕರ ಬೇಡಿಕೆಗೆ ಅನುಗುಣವಾಗಿ ಕೆಲವು ಮಹತ್ವದ ಬದಲಾವಣೆಗಳನ್ನು ಮಾಡಲಾಗಿದೆ.

ಕಾರಿನ ಹಿಂಭಾಗದ ಆಸನ ಮಧ್ಯದಲ್ಲಿರುವ ಕನ್ಸೊಲ್‌ನಲ್ಲಿ ಹೆಚ್ಚಿನ ಮಟ್ಟದ ಫೀಚರ್ಸ್‌ಗಳನ್ನು ನೀಡಲಾಗಿದ್ದು, ಖಾಸಗಿ ಮಾತುಕತೆಗಾಗಿ ಕರ್ಟನ್ ಸೌಲಭ್ಯದೊಂದಿಗೆ 10.4-ಇಂಚಿನ ಇನ್ಪೋಟೈನ್‌ಮೆಂಟ್ ಹೆಡ್ ಡಿಸ್‌ಪ್ಲೇ, ಟೆಬಲ್ ಸ್ಟೈಲ್ ಸ್ಕೀನ್ ಜೋಡಿಸಿರುವುದು ಒಂದು ಸಣ್ಣದಾದ ಮಿಟಿಂಗ್ ರೂಂ ಅನುಭವವನ್ನು ನೀಡುತ್ತದೆ.

ಜೊತೆಗೆ ಹೊಸ ಕಾರಿನಲ್ಲಿ ವಿವಿಧ ತಾಂತ್ರಿಕ ಸೌಲಭ್ಯಗಳ ನಿಯಂತ್ರಿಸಬಲ್ಲ ಲೆದರ್ ಹೊದಿಕೆಯ ಫೋರ್-ಸ್ಪೋಕ್ ಸ್ಟೀರಿಂಗ್ ವೀಲ್ಹ್, ಫೇಡಲ್ ಶಿಫ್ಟರ್, ಸ್ಟಾರ್ಟ್/ಸ್ಟಾಪ್ ಬಟನ್, ಕ್ರೂಸ್ ಕಂಟ್ರೋಲ್ ಜೊತೆಗೆ ಮಲ್ಟಿ ಇನ್ಪಾರ್ಮೆಷನ್ ಡಿಸ್ಪೈ ಮಾಡುವ ಸೆಂಟ್ರಲ್ ಕನ್ಸೊಲ್, ಇನ್‌ಸ್ಟ್ರುಮೆಂಟಲ್ ಕ್ಲಸ್ಟರ್ ನೀಡಲಾಗಿದೆ.

ಎಂಜಿನ್ ಸಾಮರ್ಥ್ಯ
ಬೆಂಟ್ಲಿ ಮೊಜಾನ್ ಎಕ್ಸ್ಟೆಂಡ್ ಲಾಂಗ್ ವೀಲ್ಹ್ ಬೇಸ್ ಸೆಂಚ್ಯುರಿ ಎಡಿಷನ್ ಕಾರು 6.75-ಲೀಟರ್(6,750 ಸಿಸಿ) ವಿ8 ಪೆಟ್ರೋಲ್ ಎಂಜಿನ್ ಹೊಂದಿದ್ದು, 8-ಸ್ಪೀಡ್ ಜೆಡ್ಎಫ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್‌ನೊಂದಿಗೆ 506-ಬಿಎಚ್‌ಪಿ ಮತ್ತು 1020-ಎನ್ಎಂ ಟಾರ್ಕ್ ಉತ್ಪಾದನಾ ಗುಣಹೊಂದಿದೆ.

ಈ ಮೂಲಕ 5.5 ಸೇಕೆಂಡುಗಳಲ್ಲಿ ಸೊನ್ನೆಯಿಂದ 100 ಕಿ.ಮೀ ವೇಗ ಪಡೆದುಕೊಳ್ಳಬಲ್ಲ ಬೆಂಟ್ಲಿ ಮೊಜಾನ್ ಕಾರು ಪ್ರತಿ ಗಂಟೆಗೆ 296 ಕಿ.ಮೀ ಟಾಪ್ ಸ್ಪೀಡ್ ಹೊಂದಿದ್ದು, ಕಾರಿನಲ್ಲಿ ಗರಿಷ್ಠ ಸುರಕ್ಷತೆಗಾಗಿ ಕಾರ್ಬನ್ ಸೆರಾಮಿಕ್ ಡಿಸ್ಕ್ ಬ್ರೇಕ್, 9 ಏರ್ ಬ್ಯಾಗ್‌ಗಳನ್ನು ನೀಡಲಾಗಿದೆ.

ಒಟ್ಟಿನಲ್ಲಿ ಬೆಂಟ್ಲಿ ಮೊಜಾನ್ ಸೆಂಚ್ಯುರಿ ಎಡಿಷನ್ ಕಾರು ಹಲವು ವಿಶೇಷತೆಗಳೊಂದಿಗೆ ಮಾರುಕಟ್ಟೆ ಪ್ರವೇಶಿಸಿದ್ದು, ಹೊಸ ಕಾರನ್ನು ಸಿದ್ದಪಡಿಸಲು ಬರೋಬ್ಬರಿ 6 ತಿಂಗಳು ಕಾಲಾವಕಾಶ ತೆಗೆದುಕೊಳ್ಳಲಾಗಿದೆ. ಈ ಮೂಲಕ ಭಾರತದಲ್ಲಿ ಪ್ರತಿ ವರ್ಷ 5ರಿಂದ 6 ಮೊಜೊನ್ ಕಾರುಗಳನ್ನು ಮಾರಾಟ ಗುರಿ ಹೊಂದಿರುವ ಬೆಂಟ್ಲಿ ಸಂಸ್ಥೆಯು ಯುಕೆನಲ್ಲಿಯೇ ಹೊಸ ಕಾರನ್ನು ಉತ್ಪಾದನೆ ಮಾಡಿ ವಿಶ್ವದ ಪ್ರಮುಖ ಮಾರುಕಟ್ಟೆಗಳಿಗೆ ಸಿಕೆಡಿ ಆಮದು ನೀತಿಯಡಿ ರಫ್ತು ಮಾಡಲಿದೆ.