ಮಾರುಕಟ್ಟೆಯಲ್ಲಿ 6 ಲಕ್ಷದೊಳಗೆ ದೊರೆಯುತ್ತಿರುವ ಬೆಸ್ಟ್ ಎಎಂಟಿ ಕಾರುಗಳಿವು

ಮಾರುಕಟ್ಟೆಯಲ್ಲಿ ವಾರಕ್ಕೆರಡು ಹೊಸ ವಾಹನಗಳು ಬಿಡುಗಡೆಯಾಗುತ್ತಿದ್ದು, ಗ್ರಾಹಕರ ಬೇಡಿಕೆಯ ಅನುಸಾರ ಆ ಕಾರುಗಳಲ್ಲಿ ಅನೇಕ ಫೀಚರ್‍‍ಗಳನ್ನು ನೀಡಿರುತ್ತಾರೆ. ಇದೀಗ ಟ್ರಾಫಿಕ್ ಭರಿತ ನಗರಗಳಲ್ಲಿ ಆಟೋಮ್ಯಾಟಿಕ್ ಗೇರ್‍‍ಬಾಕ್ಸ್ ಉಳ್ಳ ವಾಹನ ಚಲಾವಣೆ ಮಾಡಲು ಮಂದಿ ಇಷ್ಟ ಪಡುತ್ತಿದ್ದು, ಇದು ಸುಲಭವಾದ ವಿಧಾನ ಎಂದು ತಿಳಿದು ಗ್ರಾಹಕರು ಮ್ಯಾನುವಲ್ ಗೇರ್‍‍ಬಾಕ್ಸ್ ಆಯ್ಕೆಗಿಂತಲೂ ಆಟೋಮ್ಯಾಟಿಕ್ ಗೇರ್‍‍ಬಾಕ್ಸ್ ಹೊಂದಿರುವ ವಾಹನಗಳನ್ನು ಹೆಚ್ಚಾಗಿ ಖರೀದಿ ಮಾಡುತ್ತಿದ್ದಾರೆ.

ಮಾರುಕಟ್ಟೆಯಲ್ಲಿ 6 ಲಕ್ಷದೊಳಗೆ ದೊರೆಯುತ್ತಿರುವ ಬೆಸ್ಟ್ ಎಎಂಟಿ ಕಾರುಗಳಿವು

ಈ ಹಿಂದೇ ಆಟೋಮ್ಯಾಟಿಕ್ ಗೇರ್‍‍ಬಾಕ್ಸ್ ಉಳ್ಳ ವಾಹನಗಳನ್ನು ಖರೀದಿ ಮಾಡಬೇಕಾದರೆ ತುಂಬಾನೇ ಖರ್ಚಾಗುತ್ತಿತ್ತು. ಆದರೆ ಇದೀಗ ಮಾರುಕಟ್ಟೆಯಲ್ಲಿ ಎಂಟ್ರಿ ಲೆವೆಲ್ ಕಾರುಗಳಲ್ಲಿ ಸಹ ಆಟೋಮ್ಯಾಟಿಕ್ ಗೇರ್‍‍ಬಾಕ್ಸ್ ಆಯ್ಕೆಗಳನ್ನು ವಾಹನ ಉತ್ಪಾದನ ಸಂಸ್ಥೆಗಳು ನೀಡುತ್ತಿದೆ. ಈ ನಿಟ್ಟಿನಲ್ಲಿ ಸಧ್ಯ ಮಾರುಕಟ್ಟೆಯಲ್ಲಿ 6 ಲಕ್ಷದೊಳಗೆ ದೊರೆಯುತ್ತಿರುವ ಆಟೋಮ್ಯಾಟಿಕ್ ಗೇರ್‍‍ಬಾಕ್ಸ್ ಉಳ್ಳ ವಾಹನಗಳ ಬಗ್ಗೆ ಈ ಲೇಖನದಲ್ಲಿ ನಿಮಗೆ ಮಾಹಿತಿಯನ್ನು ನೀಡಲಿದ್ದೇವೆ.

ಮಾರುಕಟ್ಟೆಯಲ್ಲಿ 6 ಲಕ್ಷದೊಳಗೆ ದೊರೆಯುತ್ತಿರುವ ಬೆಸ್ಟ್ ಎಎಂಟಿ ಕಾರುಗಳಿವು

ಹ್ಯುಂಡೈ ಸ್ಯಾಂಟ್ರೋ

ಮರುಕಟ್ಟೆಯಲಿಲ್ ದೊರೆಯುತ್ತಿರುವ ಆಟೋಮ್ಯಾತಿಕ್ ಕಾರುಗಳಲ್ಲಿ ಹ್ಯುಂಡೈ ಸ್ಯಾಂಟ್ರೋ ಉತ್ತಮವೆಂದೆ ಹೆಳಬಹುದು ಏಕೆಂದರೆ ನೀಡುವ ಬೆಲೆಗಿಂತಲೂ ಹೆಚ್ಚಿನ ವೈಶಿಷ್ಟ್ಯತೆಗಳನ್ನು ಈ ಕಾರು ಪಡೆದುಕೊಂಡಿದೆ. ಸುಮಾರು 20 ವರ್ಷಗಳ ಬಳಿಕ ಮಾರುಕಟ್ಟೆಗೆ ಕಾಲಿಟ್ಟ ಈ ಕಾರು ಮಾರುತಿ ಸುಜುಕಿ ವ್ಯಾಗನ್ ಆರ್ ಕಾರುಗಳಿ ಪೋಟಿಯನ್ನು ನೀಡುತ್ತಿದೆ. ಈ ಕಾರಿನಲ್ಲಿರುವ 1.1 ಲೀಟರ್ ಮಾದರಿಯ ಕಾರಿನಲ್ಲಿ 5 ಸ್ಪೀಡ್ ಮ್ಯಾನುವಲ್ ಗೇರ್‍ ಆಯ್ಕೆಯನ್ನು ಪಡೆಯಬಹುದಾಗಿದೆ.

ಮಾರುಕಟ್ಟೆಯಲ್ಲಿ 6 ಲಕ್ಷದೊಳಗೆ ದೊರೆಯುತ್ತಿರುವ ಬೆಸ್ಟ್ ಎಎಂಟಿ ಕಾರುಗಳಿವು

ಈ ಎಂಜಿನ್ 68 ಬಿಹೆಚ್‍ಪಿ ಮತ್ತು 99 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದುಕೊಂಡಿದ್ದು, ಒಂದು ಲೀಟರ್‍‍ಗೆ ಸುಮಾರು 20.3 ಕಿಲೋಮೀಟರ್‍‍ನ ಮೈಲೇಜ್ ನೀಡಬಲ್ಲದು. ಆಟೋಮ್ಯಾಟಿಮ್ ಮಾದರಿಯ ಹ್ಯುಂಡೈ ಸ್ಯಾಂಟ್ರೋ ಕಾರು 5.18 ಲಕ್ಷದಿಂದ 5.46 ಲಕ್ಷದ ಎಕ್ಸ್ ಶೋರುಂ ಬೆಲೆಯನ್ನು ಪಡೆದುಕೊಂಡಿದ್ದು, ಇವುಗಳನ್ನು ಹೊರತು ಪಡಿಸಿ ಈ ಕಾರು ಆಪಲ್ ಕಾರ್ ಪ್ಲೇ ಮತ್ತು ಆಂಡ್ರಾಯ್ಡ್ ಆಟೋ ಪ್ಲೇ ಸಹಕರಿಸುವ ಟಚ್‍ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಂ ಅನ್ನು ಸಹ ಪಡೆದುಕೊಂಡಿದೆ.

ಮಾರುಕಟ್ಟೆಯಲ್ಲಿ 6 ಲಕ್ಷದೊಳಗೆ ದೊರೆಯುತ್ತಿರುವ ಬೆಸ್ಟ್ ಎಎಂಟಿ ಕಾರುಗಳಿವು

ಟಾಟಾ ಟಿಯಾಗೋ

ಸಧ್ಯ ಮಾರುಕಟ್ಟೆಯಲ್ಲಿ ಸೇಫೆಸ್ಟ್ ಕಾರುಗಳನ್ನು ಉತ್ಪಾದನೆ ಮಾದಿ ಮಾರಾಟ ಮಾಡುತ್ತಿರುವ ದೇಶಿಯ ಟಾಟಾ ಮೋಟಾರ್ಸ್ ಹಲವಾರು ವಾಹನಗಳನ್ನು ಮಾರುಕಟ್ಟೆಯಲ್ಲಿ ಮಾರಾಟ ಮಾಡುತ್ತಿದೆ. ಟಾಟಾ ಮೋಟಾರ್ಸ್‍ನಲ್ಲಿನ ಟಿಯಾಗೋ ಹ್ಯಾಚ್‍ಬ್ಯಾಕ್ ಕಾರು ನಮ್ಮ್ ಅಈ ಪಟ್ಟಿಯಲ್ಲಿ ಸ್ಥಾನವನ್ನು ಪಡೆದುಕೊಂಡಿದ್ದು, ಈ ಕಾರಿನಲ್ಲಿನ 1.2 ಲೀಟರ್ ಎಂಜಿನ್ 5 ಸ್ಪೀಡ್ ಆಟೋಮ್ಯಾಟಿಕ್ ಗೇರ್‍‍‍ಬಾಕ್ಸ್ ಜೋಡಣೆಯನ್ನು ಪಡೆದುಕೊಂಡಿದೆ.

ಮಾರುಕಟ್ಟೆಯಲ್ಲಿ 6 ಲಕ್ಷದೊಳಗೆ ದೊರೆಯುತ್ತಿರುವ ಬೆಸ್ಟ್ ಎಎಂಟಿ ಕಾರುಗಳಿವು

ಈ ಎಂಜಿನ್ 84 ಬಿಹೆಚ್‍ಪಿ ಮತ್ತು 114ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದುಕೊಂದಿದ್ದು, ಪ್ರತೀ ಲೀಟರ್‍‍ಗೆ ಸುಮಾರು 23.8 ಕಿಲೋಮೀಟರ್‍‍‍ನ ಮೈಲೇಜ್ ನೀಡಬಲ್ಲದು. ಆಟೋಮ್ಯಾಟಿಕ್ ಟಾಟಾ ಟಿಯಾಗೋ ಕಾರುಗಳು ಮಾರುಕಟ್ಟೆಯಲ್ಲಿ ರೂ. 5.04 ರಿಂದ 5.63 ಲಕ್ಷದ ಎಕ್ಸ್ ಶೋರುಂ ಬೆಲೆಯನ್ನು ಪಡೆದುಕೊಂಡಿದ್ದು, ಹ್ಯುಂಡೈ ಸ್ಯಾಂಟ್ರೋ ಕಾರಿಗೆ ಹೋಲಿಸಿದರೆ ಕಡಿಮೆ ಫೀಚರ್‍‍ಗಳನ್ನು ಈ ಕಾರು ಪಡೆದುಕೊಂಡಿದೆ ಅಂತಾನೇ ಹೇಳ್ಬೊದು. ಆದ್ರೆ ಈ ಕಾರಿನಲ್ಲಿ ವಿಶಾಲವಾದ ಬೂಟ್ ಅನ್ನು ನೀಡಲಾಗಿದೆ.

ಮಾರುಕಟ್ಟೆಯಲ್ಲಿ 6 ಲಕ್ಷದೊಳಗೆ ದೊರೆಯುತ್ತಿರುವ ಬೆಸ್ಟ್ ಎಎಂಟಿ ಕಾರುಗಳಿವು

ಮಾರುತಿ ಸುಜುಕಿ ಸೆಲೆರಿಯೊ

ಮಾರುಕಟ್ಟೆಯಲ್ಲಿ ಮಾರುತಿ ಸುಜಿಕಿ ಕಾರುಗಳಿಗೆ ಬಹಳಾನೇ ಡಿಯಾಂಡ್ ಇದೇ ಅಂತಾನೇ ಹೇಳ್ಬೋದು. ಏಕೆಂದರೆ ಸುಮಾರು ವರ್ಷಗಳಿಂದ ಎಂಟ್ರಿ ಲೆವೆಲ್ ಕಾರು ಮಾರಾಟದಲ್ಲಿ ಅಗ್ರ ಸ್ಥಾನವನ್ನು ಪಡೆದಿದೆ ಈ ಸಂಸ್ಥೆ. ಮಾರುತಿ ಸುಜುಕಿ ಸಂಸ್ಥೆಯಲ್ಲಿನ ಸೆಲೆರಿಯೊ ಹ್ಯಾಚ್‍ಬ್ಯಾಕ್ ಕಾರಿನ ಎಎಂಟಿ ಮಾದರಿಯು ಹೆಚ್ಚು ಬೇಡಿಕೆಯನ್ನು ಪಡೆದಿದ್ದು, ಅದರಲಿನ ಲೀ ಲೀಟರ್ ಮೋಟರ್ ಎಂಜಿನ್ ಹೆಚ್ಚು ಡಿಮ್ಯಾಂಡ್ ಪಡೆದಿದೆ.

MOST READ: ವಾಹನ ಚಾಲಕರೇ ಇತ್ತ ಗಮನಿಸಿ - ಇನ್ಮುಂದೆ ಕ್ರಿಮಿನಲ್ ಕೇಸ್ ಎದುರಿಸಲು ಸಜ್ಜಾಗಿ..

ಮಾರುಕಟ್ಟೆಯಲ್ಲಿ 6 ಲಕ್ಷದೊಳಗೆ ದೊರೆಯುತ್ತಿರುವ ಬೆಸ್ಟ್ ಎಎಂಟಿ ಕಾರುಗಳಿವು

ಈ ಎಂಜಿನ್ 67ಬಿಹೆಚ್‍ಪಿ ಮತ್ತು 90 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದುಕೊಂಡಿದ್ದು, ಎಂಜಿನ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದುಕೊಂಡಿದ್ದು, ಕಡಿಮೆ ಬೆಲೆಯಲ್ಲಿ ಲಭ್ಯವಿರುವ ಮೊದಲ ಎಎಂ ಟಿ ಕಾರು ಎಂದು ಇದನ್ನು ಕರೆಯಲಾಗುತ್ತಿತ್ತು. ಈ ಕಾರು ಪ್ರತೀ ಲೀಟರ್‍‍ಗೆ ಸುಮಾರು 23.1 ಕಿಲೋಮೀಟರ್‍‍ನ ಮೈಲೇಜ್ ನೀಡಬಲ್ಲದು ಮತ್ತು ಈ ಕಾರು ಮಾರುಕಟ್ಟೆಯಲ್ಲಿ ರೂ. 4.97 ರಿಂದ 5.40 ಲಕ್ಷದ ಎಕ್ಸ್ ಶೋರುಂ ಬೆಲೆಯಲ್ಲಿ ಮಾರಾಟವಾಗುತ್ತಿದೆ. ಈ ಕಾರಿನ ಟಾಪ್ ಸ್ಪೆಕ್ ಮಾಡಲ್ ಟಚ್‍ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಂ ಅನ್ನು ಸಹ ಪಡೆದುಕೊಂಡಿದೆ.

ಮಾರುಕಟ್ಟೆಯಲ್ಲಿ 6 ಲಕ್ಷದೊಳಗೆ ದೊರೆಯುತ್ತಿರುವ ಬೆಸ್ಟ್ ಎಎಂಟಿ ಕಾರುಗಳಿವು

ಮಾರುತಿ ಸುಜುಕಿ ಆಲ್ಟೋ ಕೆ10

ಮೇಲೆ ಹೇಳಿರುವ ಹಾಗೆ ಟ್ರಾಫಿಕ್ ಭರಿತ ನಗರಗಳಲ್ಲಿ ಆಟೋಮ್ಯಾಟಿಕ್ ವೇರಿಯೆಂಟ್ ಹ್ಯಾಚ್‍ಬ್ಯಾಕ್ ಕಾರುಗಳನ್ನು ಬಳಸುವುದು ಉತ್ತಮ. ಅಂತಹ ಕಾರುಗಳಲ್ಲಿ ಎಂಟ್ರಿ ಲೆವೆಲ್ ಮಾರುತಿ ಸುಜುಕಿ ಆಲ್ಟೋ ಕೆ10 ಕೂಡಾ ಒಂದು. ಈ ಕಾರಿನಲ್ಲಿನ 1 ಲೀಟರ್ ಎಂಜಿನ್‍‍ನ ಆಟೋಮ್ಯಾಟಿಕ್ ವೇರಿಯೆಂಟ್ ಉತ್ತಮ ಬೇಡಿಕೆಯನ್ನು ಪಡೆಯುತ್ತಿದೆ. ಈ ಎಂಜಿನ್ 67 ಬಿಹೆಚ್‍ಪಿ ಮತ್ತು 90 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದಿದ್ದು, ಪ್ರತೀ ಲೀಟರ್‍‍ಗೆ ಸುಮಾರು 24.07 ಕಿಲೋಮೀಟರ್ ಮೈಲೇಜ್ ನೀಡಬಲ್ಲದು.

MOST READ: ಮಾರುಕಟ್ಟೆಯಿಂದ ಹೊರ ಬಂದರೂ ಸೇನೆಯಿಂದ ಭಾರೀ ಬೇಡಿಕೆ ಪಡೆಯುತ್ತಿರುವ ಮಾರುತಿ ಸುಜುಕಿ ಜಿಪ್ಸಿ

ಮಾರುಕಟ್ಟೆಯಲ್ಲಿ 6 ಲಕ್ಷದೊಳಗೆ ದೊರೆಯುತ್ತಿರುವ ಬೆಸ್ಟ್ ಎಎಂಟಿ ಕಾರುಗಳಿವು

ಪ್ರತೀ ತಿಂಗಳಿಗೆ ಸುಮಾರು ಸಂಖ್ಯೆಯಲ್ಲಿ ಮಾರಾಟವಾಗುತ್ತಿರುವ ಈ ಕಾರು ಮಾರುಕಟ್ಟೆಯಲ್ಲಿ ಕಾಲಿಟ್ಟು ತುಂಬಾ ವರ್ಶಗಳಾದರೂ ಸಹ ಇಂದಿಗೂ ಗ್ರಾಹಕರು ಈ ಕಾರನ್ನು ಖರೀದಿ ಮಾದಲು ಮುಂದಾಗುತ್ತಿದ್ದಾರೆ . ಏಕೆಂದರೆ ಈ ಕಾರಿನಲ್ಲಿ ಅಂತಹ ವೈಶಿಷ್ಟ್ಯತೆಗಳನ್ನು ನೀಡಲಾಗಿದ್ದು, ಟಚ್‍ಸ್ಕ್ರೀನ್ ಇಲ್ಲದೆ ಇದ್ದರೂ ಸಹ ಈ ಕಾರಿನಲ್ಲಿ ಇನ್‍ಬ್ಯುಲ್ಟ್ ಆಡಿಯೋ ಮತ್ತು ಬ್ಲೂಟೂಥ್ ಇಂಟಿಗ್ರೇಷನ್ ಅನ್ನು ಒಳಗೊಂಡಿದೆ. ಈ ಕಾರು ಮಾರುಕಟ್ಟೆಯಲ್ಲಿ ರೂ. 4.54 ಲಕ್ಷಕ್ಕೆ ಮಾರಾಟವಾಗುತ್ತಿದೆ.

ಮಾರುಕಟ್ಟೆಯಲ್ಲಿ 6 ಲಕ್ಷದೊಳಗೆ ದೊರೆಯುತ್ತಿರುವ ಬೆಸ್ಟ್ ಎಎಂಟಿ ಕಾರುಗಳಿವು

ರೆನಾಲ್ಟ್ ಕ್ವಿಡ್

ರೆನಾಲ್ಟ್ ಸಂಸ್ಥೆಯು ತಮ್ಮ ಬೇರೆ ವಾಹನಗಳಿಂದ ಜನಪ್ರಿಯತೆಯನ್ನು ಪಡೆಯದೇ ಇದ್ದರೂ ಎಂಟ್ರಿ ಲೆವೆಲ್ ಮತ್ತು ಆಕರ್ಷಕ ವಿನ್ಯಾಸವುಳ್ಳ ಕ್ವಿಡ್ ಹ್ಯಾಚ್‍ಬ್ಯಾಕ್ ಕಾರಿಂದ ಜನಪ್ರೀಯತೆಯನ್ನು ಪಡೆದಿದೆ. ಈ ಕಾರು ಸ್ಮಾಲ್ ಸಿಟಿ ಕಾರು ಎಂದು ಕರೆಲ್ಪಡುತ್ತಿದ್ದು, ಈ ಕಾರಿನ 1 ಲೀಟರ್ ಎಂಜಿನ್ ಆಟೋಮ್ಯಾಟಿಕ್ ಗೇರ್‍‍ಬಾಕ್ಸ್ ಆಯ್ಕೆಯನ್ನು ಪಡೆದುಕೊಂಡಿದೆ. ಈ ಎಂಜಿನ್ 67 ಬಿಹೆಚ್‍ಪಿ ಮತ್ತು 91ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದುಕೊಂಡಿದೆ.

MOST READ: ಟಾಟಾ ಹ್ಯಾರಿಯರ್‍‍‍ಗಿಂತಲೂ ಕಡಿಮೆ ಬೆಲೆಯಲ್ಲಿ ದೊರೆಯಲಿದೆ ಎಂಜಿ ಹೆಕ್ಟರ್.?

ಮಾರುಕಟ್ಟೆಯಲ್ಲಿ 6 ಲಕ್ಷದೊಳಗೆ ದೊರೆಯುತ್ತಿರುವ ಬೆಸ್ಟ್ ಎಎಂಟಿ ಕಾರುಗಳಿವು

ಈ ಎಂಜಿನ್ ಪ್ರತೀ ಲೀಟರ್‍‍ಗೆ 24.04 ಕಿಲೋಮೀಟರ್‍ ಮೈಲೇಜ್ ನೀಡಲಿದ್ದು, ಈ ಸೆಗ್ಮೆಂಟ್‍ನಲ್ಲಿನ ಕಾರುಗಳುಗೆ ಹೋಲಿಸಿದರೇ ಈ ಕಾರು ವಿಶಾಲವಾದ ಬೂಟ್ ಅನ್ನು ಪಡೆದುಕೊಂಡಿದೆ. ಹಾಗೆಯೆ ಈ ಕಾರಿನ ಎಎಂಟಿ ಮಾಡಲ್‍‍ಗಳಲ್ಲಿ ಇನ್‍ಬ್ಯುಲ್ಟ್ ನ್ಯಾವಿಗೇಷನ್ ಒಳಗೊಂಡ ಟಚ್‍ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಂ ಅನ್ನು ನೀಡಲಾಗಿದ್ದು, ಈ ಕಾರು ಮಾರುಕಟ್ಟೆಯಲ್ಲಿ ರೂ. 4.35 ರಿಂದ 4.63 ಲಕ್ಷದ ಬೆಲೆಯಲ್ಲಿ ಮಾರಾಟವಾಗುತ್ತಿದೆ.

Most Read Articles

Kannada
English summary
Best AMt Cars You Can Buy Under 6 Lakhs. Read In Kannada
Story first published: Monday, June 24, 2019, 11:39 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X