5 ಲಕ್ಷದೊಳಗೆ ದೊರೆಯುವ ಟಾಪ್ ಕಾರ್‍‍ಗಳು

ಪ್ರತಿಯೊಬ್ಬರು ಸ್ವಂತ ಕಾರನ್ನು ಖರೀದಿಸಬೇಕೆಂಬ ಆಸೆಯನ್ನು ಹೊಂದಿರುತ್ತಾರೆ. ಆದರೆ ಭಾರತದಲ್ಲಿರುವ ಮಧ್ಯಮ ವರ್ಗದ ಜನರು ಕಾರು ಖರೀದಿಸಲು ಹರಸಾಹಸ ಪಡಬೇಕು. ಹಲವು ಜನರು ಕೂಡಿಟ್ಟ ಹಣದಲ್ಲಿ ಆಧುನಿಕ ತಂತ್ರಜ್ಞಾನ ಹಾಗೂ ಇತರ ಫೀಚರ್ಸ್ ಒಳಗೊಂಡ ಕಾರು ಖರೀದಿಸಲು ಸಾಧ್ಯವಿಲ್ಲ ಎಂದು ನಿರಾಸೆಯಾಗಿ ಕಾರು ಖರೀದಿಸುವ ಸಾಹಸಕ್ಕೆ ಮುಂದಾಗುವುದಿಲ್ಲ.

5 ಲಕ್ಷದೊಳಗೆ ದೊರೆಯುವ ಟಾಪ್ ಕಾರ್‍‍ಗಳು

ಆದರೆ ಭಾರತದಲ್ಲಿ ಅತ್ಯಂತ ಕಡಿಮೆ ಬೆಲೆಯಲ್ಲಿ ಹಾಗೂ ಆಟೋಮ್ಯಾಟಿಕ್ ಫೀಚರ್ ಹೊಂದಿರುವ ಕಾರುಗಳಿವೆ. 5 ಲಕ್ಷಕ್ಕಿಂತ ಕಡಿಮೆ ಬೆಲೆಯಲ್ಲಿ ಭಾರತದಲ್ಲಿ ಅತ್ಯುತ್ತಮ ಕಾರು ಲಭ್ಯವಿದೆ. ಇಷ್ಟೇ ಅಲ್ಲ ಈ ಕಾರುಗಳು ಚಿಕ್ಕ ಕುಟಂಬಕ್ಕೆ ಆರಾಮದಾಯಕ ಅನ್ನೋದರಲ್ಲಿ ಎರಡು ಮಾತಿಲ್ಲ. 5 ಲಕ್ಷಕ್ಕಿಂತ ಕಡಿಮೆ ದರವನ್ನು ಹೊಂದಿರುವ ಕಾರುಗಳ ಮಾಹಿತಿ ಇಲ್ಲಿದೆ

5 ಲಕ್ಷದೊಳಗೆ ದೊರೆಯುವ ಟಾಪ್ ಕಾರ್‍‍ಗಳು

ಮಾರುತಿ ಸುಜುಕಿ ಆಲ್ಟೋ 800

ಆಲ್ಟೋ 800 ಫೇಸ್‌ಲಿಫ್ಟ್ ಆವೃತ್ತಿಯನ್ನು ಭಾರತದಲ್ಲಿ ಇತ್ತೀಚೆಗೆ ಬಿಡುಗಡೆಗೊಳಿಸಲಾಗಿದೆ. ಅಗ್ಗದ ಬೆಲೆಯಲ್ಲಿ ಅತ್ಯುತ್ತಮ ತಾಂತ್ರಿಕ ಸೌಲಭ್ಯಗಳನ್ನ ಹೊತ್ತು ಮಾರುಕಟ್ಟೆ ಪ್ರವೇಶಿಸಿತು. ಮಾರುತಿ ಸುಜುಕಿ ಆಲ್ಟೋ 800 ಬಿಎಸ್-6 ಎಂಜಿನ್ ಹೊಂದಿದೆ. ಕಾರಿನಲ್ಲಿ ಏರ್‍‍ಬ್ಯಾಗ್, ಆರಾಮದಾಯಕ ಸೀಟ್‍‍ಗಳು, ಹೊಸ ಡ್ಯಾಶ್‍‍ಬೋರ್ಡ್,ಆಡಿಯೋ ಸಿಸ್ಟಂ ಹೊಂದಿರುವ ಬ್ಲೂಟೂಥ್, ಯುಎಸ್‍ಬಿ ಮತ್ತು ಆಕ್ಸ್-ಇನ್ ಕನೆಕ್ಟಿವಿಟಿ ವೈಶಿಷ್ಟ್ಯತೆಯನ್ನು ಅಳವಡಿಸಲಾಗಿದೆ.

5 ಲಕ್ಷದೊಳಗೆ ದೊರೆಯುವ ಟಾಪ್ ಕಾರ್‍‍ಗಳು

ಪ್ರಯಾಣಿಕರ ಸುರಕ್ಷತೆಗಾಗಿ ಈ ಕಾರಿನಲ್ಲಿ ಡ್ರೈವರ್ ಸೈಡ್ ಏರ್‍‍ಬ್ಯಾಗ್, ಎಬಿಎಸ್, ಇಬಿಡಿ, ರಿವರ್ಸ್ ಪಾರ್ಕಿಂಗ್ ಸೆನ್ಸಾರ್ಸ್, ಸೀಟ್ ಬೆಲ್ಟ್ ಮತ್ತು ಸ್ಪೀಡ್ ಅಲರ್ಟ್ ಸಿಸ್ಟಂ ಅನ್ನು ಸ್ಟ್ಯಾಂಡರ್ಡ್ ಆಗಿ ನೀಡಲಾಗಿದೆ. ಮಾರುತಿ ಸುಜುಕಿ ಆಲ್ಟೋ ಕಾರು ಬಿಎಸ್-6ನ 796ಸಿಸಿ, 3 ಸಿಲಿಂಡರ್ ಎಂಜಿನ್ ಸಹಾಯದಿಂದ 47 ಬಿಹೆಚ್‍ಪಿ ಪವರ್ ಮತ್ತು 69 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಎಂಜಿನ್‍‍ಗೆ 5 ಸ್ಪೀಡ್ ಮ್ಯಾನುವಲ್ ಗೇರ್‍‍ಬಾಕ್ಸ್ ಅನ್ನು ಅಳವಡಿಸಲಾಗಿದೆ. ಆಲ್ಟೋ ಮೂರು ರೂಪಾಂತರಗಳಲ್ಲಿ ಲಭ್ಯವಿದೆ. ಈ ಕಾರಿನ ಪ್ರಾರಂಭಿಕ ಬೆಲೆ ಭಾರತದ ಎಕ್ಸ್ ಶೋರೂಂ ಪ್ರಕಾರ ರೂ.2.93 ಲಕ್ಷಗಳಾಗಿದೆ.

5 ಲಕ್ಷದೊಳಗೆ ದೊರೆಯುವ ಟಾಪ್ ಕಾರ್‍‍ಗಳು

ರೆನಾಲ್ಟ್ ಕ್ವಿಡ್

ರೆನಾಲ್ಟ್ ಕ್ವಿಡ್ ಕಾರು ನಾಲ್ಕು ವರ್ಷದಲ್ಲಿ ಮೂರು ಲಕ್ಷಕ್ಕೂ ಅಧಿಕ ಮಾರಾಟವಾಗಿದೆ. ಕ್ವಿಡ್ 1.0 ಲೀಟರ್ ಎಂಜಿನ್ ಜೊತೆ ಎಎಂ‍ಟಿ ಆಯ್ಕೆಯನ್ನು ಹೊಂದಿದೆ.ಕಾರಿನ ಒಳಭಾಗದಲ್ಲಿ ಹೊಸದಾಗಿ 7 ಇಂಚಿನ ಇನ್ಫೋಟೈನ್‍‍ಮೆಂಟ್ ಸಿಸ್ಟಂ, ಇಂಟಿಗ್ರೇಟೆಡ್ ನ್ಯಾವಿಗೇಷನ್, ಡಿಜಿಟಲ್ ಇನ್ಸ್ ಟ್ರೋಮೆಂಟ್ ಕ್ಲಸ್ಟರ್, ಲೇನ್-ಚೇಂಜ್ ಇಂಡಿಕೇಟರ್ ಮತ್ತು ಸೀಟ್‍‍ಬೆಲ್ಟ್ ಎಂಬ ವೈಶಿಷ್ಟ್ಯತೆಗಳನ್ನು ಅಳವಡಿಸಲಾಗಿದೆ. ರೆನಾಲ್ಟ್ ಕ್ವಿಡ್ ಕಾರಿನ ಬೆಲೆಯು ಭಾರತದ ಎಕ್ಸ್ ಶೋರೂಂ ಪ್ರಕಾರ ದರದಂತೆ ರೂ.2.76 ದಿಂದ ರೂ.4.75 ಲಕ್ಷಗಳಾಗಿದೆ.

5 ಲಕ್ಷದೊಳಗೆ ದೊರೆಯುವ ಟಾಪ್ ಕಾರ್‍‍ಗಳು

ರೆನಾಲ್ಟ್ ಟ್ರೈಬರ್

ರೆನಾಲ್ಟ್ ಟ್ರೈಬರ್ ಕಾರು ನಾಲ್ಕು ಮಾದರಿಗಳಲ್ಲಿ ಲಭ್ಯವಿದೆ. ಈ ಕಾರು 1.0 ಲೀಟರ್ ಮೂರು ಸಿಲಿಂಡರ್ ಬಿಎಸ್-6 ಎಂಜಿನ್ 72 ಪಿ‍ಎಸ್ ಪವರ್ ಮತ್ತು 96 ಎನ್‍ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಫ್ರಂಟ್ ವ್ಹೀಲ್‍‍ಗೆ 5-ಸ್ಪೀಡ್ ಮ್ಯಾನುವಲ್ ಗೇರ್‍‍ಬಾಕ್ಸ್ ಅನ್ನು ಅಳವಡಿಸಲಾಗಿದೆ. ಟ್ರೈಬರ್ ಕಾರಿನಲ್ಲಿ 15-ಇಂಚಿನ ಅಲಾಯ್ ವೀಲ್ಹ್‌ಗಳನ್ನು ಜೋಡಿಸಲಾಗಿದ್ದು, ರೂಫ್ ರೈಲ್ಸ್, ಮ್ಯಾಟ್ ಬ್ಲ್ಯಾಕ್ ಕ್ಲ್ಯಾಡಿಂಗ್, ವ್ಹೀಲ್ ಆರ್ಚ್, ಸಿಗ್ನಲ್ ಇಂಡಿಕೇಟರ್, ರೀವರ್ಸ್ ಲ್ಯಾಂಪ್ ಮತ್ತು ಟೈಲ್ ಲ್ಯಾಂಪ್ ಗಮನಸೆಳೆಯಲಿದ್ದು, ಒಟ್ಟು 5 ವಿವಿಧ ಆಕರ್ಷಕ ಬಣ್ಣಗಳಲ್ಲಿ(ಐಸ್ ಕೂಲ್ ವೈಟ್, ಮೂನ್‌ಲೈಟ್ ಸಿಲ್ವರ್, ಎಲೆಕ್ಟ್ರಿಕ್ ಬ್ಲ್ಯೂ, ಫ್ಲೈರಿ ರೆಡ್, ಆರೇಂಜ್) ಖರೀದಿಗೆ ಲಭ್ಯವಿರಲಿದೆ. ಭಾರತದ ಎಕ್ಸ್ ಶೋರೂಂ ಪ್ರಕಾರ ರೆನಾಲ್ಟ್ ಕಾರು ರೂ.4.95 ಲಕ್ಷದಲ್ಲಿ ಲಭ್ಯವಿದೆ.

5 ಲಕ್ಷದೊಳಗೆ ದೊರೆಯುವ ಟಾಪ್ ಕಾರ್‍‍ಗಳು

ಮಾರುತಿ ವ್ಯಾಗನ್‍ಆರ್

ಹೊಸ ಜನರೇಷನ್ ವ್ಯಾಗನ್‍ಆರ್ ಈ ವರ್ಷದಲ್ಲೇ ಬಿಡುಗಡೆಯಾಗಲಿದೆ ಎಂಬ ಮಾಹಿತಿ ಇದೆ. ಹೊಸ ವ್ಯಾಗನ್‍ಆರ್ ಬಿ‍ಎಸ್-6 ಪ್ರೇರಿತ ಎಂಜಿನ್ ಅನ್ನು ಅಳವಡಿಸಿದೆ. ಇದು ಎರಡು ಎಂಜಿನ್‍‍ಗಳ ಆಯ್ಕೆಗಳನ್ನು ಹೊಂದಿದ್ದು, 1.0 ಲೀಟರ್ ಎಂಜಿನ್‍‍ನಲ್ಲಿ 82 ಬಿಎಚ್‍‍ಪಿ ಉತ್ಪಾದಿಸುವ ಗುಣ ಹೊಂದಿದ್ದರೆ, 1.2 ಲೀಟರ್ ಎಂಜಿನ್‍‍ನಲ್ಲಿ 82 ಬಿ‍ಎಚ್‍‍ಪಿ ಪವರ್ ಅನ್ನು ಉತ್ಪಾದಿಸುತ್ತದೆ.

5 ಲಕ್ಷದೊಳಗೆ ದೊರೆಯುವ ಟಾಪ್ ಕಾರ್‍‍ಗಳು

ಹೊಸ ವ್ಯಾಗನ್ ಆರ್ ಕಾರಿನ ಒಳಭಾಗದಲ್ಲಿ ಡ್ಯುಯಲ್ ಟೋನ್ ಡ್ಯಾಶ್‍ಬೋರ್ಡ್, ಆ್ಯಪಲ್ ಕಾರ್ ಪ್ಲೇ ಮತ್ತು ಆಂಡ್ರಾಯ್ಡ್ ಆಟೋ ಸಪೋರ್ಟ್ ಮಾಡುವ 7 ಇಂಚಿನ ಟಚ್‍ಸ್ಕ್ರೀನ್ ಇನ್ಫೋಟೈನ್‍‍ಮೆಂಟ್ ಸಿಸ್ಟಂ, ಮ್ಯಾನುವಲ್ ಎಸಿ ಕಂಟ್ರೋಲ್, ಒಆರ್‍‍ವಿಎಂ, ಸ್ಟೀರಿಂಗ್ ಮೌಂಟೆಡ್ ಆಡಿಯೋ ಕಂಟ್ರೋಲ್ಸ್, ಪವರ್ ಮೀಟರ್ ಮತ್ತು ಅನಾಲಾಗ್ ಸ್ಪೀಡೊಮೀಟರ್ ಅನ್ನು ಅಳವಡಿಸಲಾಗಿದೆ. ಮಾರುತಿ ಸುಜುಕಿ ವ್ಯಾಗನ್‍‍ಆರ್‍ ಕಾರು ಭಾರತದ ಎಕ್ಸ್ ಶೋರೂಂ ಪ್ರಕಾರ ಪ್ರಾರಂಭಿಕ ಬೆಲೆಯು ರೂ.4.34 ಲಕ್ಷ ಹೊಂದಿರಲಿದೆ.

MOST READ: ಸೀಟ್ ಬೆಲ್ಟ್ ಧರಿಸದ ಪೊಲೀಸರನ್ನೇ ಅಡ್ಡಗಟ್ಟಿದ ಭೂಪ..!

5 ಲಕ್ಷದೊಳಗೆ ದೊರೆಯುವ ಟಾಪ್ ಕಾರ್‍‍ಗಳು

ಹ್ಯುಂಡೈ ಗ್ರ್ಯಾಂಡ್ ಐ10

ಹ್ಯುಂಡೈ ಗ್ರ್ಯಾಂಡ್ ಐ 10 ನವೀಕರಿಸಿದ ಕಾರಿನಲ್ಲಿ ಬಿಎಸ್-6 ಎಂಜಿನ್ ಅಳವಡಿಸಲಾಗಿದೆ. 1.2-ಲೀಟರ್ ಪೆಟ್ರೋಲ್ ಮತ್ತು 1.2-ಲೀಟರ್ ಡೀಸೆಲ್ ಎಂಜಿನ್‌ನೊಂದಿಗೆ ಖರೀದಿಗೆ ಲಭ್ಯವಿರುವ ಗ್ರ್ಯಾಂಡ್ ಐ10 ಕಾರುಗಳು 5-ಸ್ಪೀಡ್ ಆಟೋಮ್ಯಾಟಿಕ್ ಮತ್ತು 4-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಹೊಂದಿದ್ದು, ಚಾಲಕ ಮತ್ತು ಮುಂಭಾಗದ ಸಹ ಪ್ರಯಾಣಿಕನ ಬಳಿ ಫ್ರಂಟ್ ಡ್ಯುಯಲ್ ಏರ್‌ಬ್ಯಾಗ್ ಸೌಲಭ್ಯಗಳಿವೆ. 1.2 ಪೆಟ್ರೋಲ್ ಎಂಜಿನ್ 83 ಬಿ‍ಎಚ್‍ಪಿ ಪವರ್ ಮತ್ತು 114 ಎನ್‍‍ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

5 ಲಕ್ಷದೊಳಗೆ ದೊರೆಯುವ ಟಾಪ್ ಕಾರ್‍‍ಗಳು

ಹುಂಡೈ ಗ್ರ್ಯಾಂಡ್ ಐ 10 ಟಾಪ್ ಎಂಡ್ ಮಾಡೆಲ್‌ಗಳಲ್ಲಿ 15-ಇಂಚಿನ ಡೈಮಂಡ್ ಕಟ್ ಅಲಾಯ್ ವ್ಹೀಲ್, ಲೆಥರ್ ಸ್ಟಿರಿಂಗ್ ವೀಲ್ಹ್, ಶಾರ್ಕ್ ಫಿನ್ ಆಂಟೆನಾ, ಪ್ರೊಜೆಕ್ಟರ್ ಹೆಡ್‌ಲ್ಯಾಂಪ್, ರೇರ್ ಪಾರ್ಕಿಂಗ್ ಕ್ಯಾಮೆರಾ, ವೈರ್‌ಲೆಸ್ ಚಾರ್ಜಿಂಗ್, ಫುಶ್ ಬಟನ್ ಸ್ಟಾರ್ಟ್/ಸ್ಟಾಪ್ ಸೌಲಭ್ಯಗಳನ್ನು ನೀಡಲಾಗಿದೆ. ಭಾರತದ ಎಕ್ಸ್ ಶೋರೂಂ ಪ್ರಕಾರ ಈ ಕಾರಿನ ಬೆಲೆಯು ರೂ.5.2 ಲಕ್ಷ ದಿಂದ ರೂ.7.9 ಲಕ್ಷಗಳಾಗುವ ಸಾಧ್ಯತೆಗಳಿವೆ. ಈ ಕಾರು ಮಾರುತಿ ಸುಜುಕಿ ಸ್ವಿಫ್ಟ್ ಮತ್ತು ಫಾರ್ಡ್ ಫಿಗೊ ಕಾರುಗಳಿಗೆ ಪೈಪೋಟಿ ನೀಡಲಿದೆ.

MOST READ: ತಡೆದು ನಿಲ್ಲಿಸಿದ್ದು ಒಂದು ಕಾರಣಕ್ಕೆ, ದಂಡ ವಿಧಿಸಿದ್ದು ಇನ್ನೊಂದಕ್ಕೆ..!

5 ಲಕ್ಷದೊಳಗೆ ದೊರೆಯುವ ಟಾಪ್ ಕಾರ್‍‍ಗಳು

ಟಾಟಾ ಟಿಯಾಗೊ

ಹೊಸ ಟಾಟಾ ಟಿಯಾಗೊ ಕಾರ್ ಅನ್ನು ಇತ್ತೀಚಿಗೆ ಸ್ಪಾಟ್ ಟೆಸ್ಟ್ ಮಾಡಲಾಗಿದೆ. ಹೊಸ ಟಾಟಾ ಟಿಯಾಗೊ 1.2 ಲೀಟರ್ ಬಿಎಸ್-6 ಎಂಜಿನ್ ಹೊಂದಿರಲಿದೆ ಎಂದು ನಿರೀಕ್ಷಿಸುತ್ತೇವೆ. ಟಾಟಾ, ಟಿಯಾಗೊ ಫೇಸ್‍ಲಿ‍ಫ್ಟ್ ಕಾರನ್ನು ಈ ವರ್ಷದ ಅಂತ್ಯದೊಳಗಡೆ ಬಿಡುಗಡೆಗೊಸಲಿದೆ. ಟಾಟಾ ಟಿಯಾಗೊ ಪೆಟ್ರೋಲ್ ಆವೃತ್ತಿಯ ಬೆಲೆಯು ಭಾರತದ ಎಕ್ಸ್ ಶೋರೂಂ ದರದಂತೆ ರೂ. 4.40 ಲಕ್ಷದಿಂದ 6.77 ಲಕ್ಷಗಳಾಗಲಿದೆ. ಟಾಟಾ ಟಿಯಾಗೊ 15 ಮಾದರಿಗಳಲ್ಲಿ ಮತ್ತು 7 ಬಣ್ಣಗಳಲ್ಲಿ ಲಭ್ಯವಿದೆ.

Most Read Articles

Kannada
English summary
Top Cars Under 5 Lakhs in India – 2019 - Read in Kannada
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X