ಅತ್ಯುತ್ತಮ ಮೈಲೇಜ್ ಹೊಂದಿರುವ ಟಾಪ್ 10 ಡೀಸೆಲ್ ಕಾರುಗಳಿವು..!

ಹೊಸ ವಾಹನಗಳನ್ನು ಖರೀದಿ ಮಾಡುವಾಗ ಪ್ರತಿಯೊಬ್ಬರುವ ಮೈಲೇಜ್ ವಿಚಾರವಾಗಿ ಹತ್ತಾರು ಬಾರಿ ಯೋಚನೆ ಮಾಡಿಯೇ ಮಾಡಿರುತ್ತಾರೆ. ಅದರಲ್ಲೂ ಕಾರು ಖರೀದಿ ಮಾಡುವಾಗ ಈ ಬಗ್ಗೆ ತುಸು ಹೆಚ್ಚೆ ಯೋಚನೆ ಮಾಡುವುದರಲ್ಲಿ ಎರಡು ಮಾತಿಲ್ಲ. ಯಾವ ಕಾರಿನಲ್ಲಿ ಹೆಚ್ಚು ಮೈಲೇಜ್ ಸಿಗಬಹುದು ಇಂಧನ ಉಳಿತಾಯಕ್ಕೆ ಎಂತಹ ಕಾರು ಸೂಕ್ತ ಎನ್ನುವ ಕುರಿತು ಸಾಕಷ್ಟು ಗೊಂದಲಗಳಿರುತ್ತವೆ. ಹಾಗಾದ್ರೆ ಕೈಗೆಟುಕುವ ಬೆಲೆಗಳಲ್ಲಿ ಖರೀದಿ ಮಾಡಬಹುದಾದ ಉತ್ತಮ ಮೈಲೇಜ್ ಪ್ರೇರಿತ ಟಾಪ್ 10 ಡೀಸೆಲ್ ಕಾರುಗಳ ಬಗೆಗೆ ಇಲ್ಲಿ ಮಾಹಿತಿ ನೀಡಲಾಗಿದೆ.

ಅತ್ಯುತ್ತಮ ಮೈಲೇಜ್ ಹೊಂದಿರುವ ಟಾಪ್ 10 ಡೀಸೆಲ್ ಕಾರುಗಳಿವು..!

ಕಾರು ಖರೀದಿಯ ವೇಳೆ ಬಹುತೇಕ ಮನಸ್ಸಿನಲ್ಲಿ ಪೆಟ್ರೋಲ್ ಕಾರು ಉತ್ತಮವೇ? ಅಥವಾ ಡೀಸೆಲ್ ಕಾರು ಉತ್ತಮವೇ? ಎನ್ನುವ ಪ್ರಶ್ನೆ ಕಾಡಿಯೇ ಕಾಡುತ್ತೆ. ಆದ್ರೆ ಸಂದರ್ಭಕ್ಕೆ ಅನುಗುಣವಾಗಿ ಎರಡು ಮಾದರಿಗಳು ಕೂಡಾ ಉತ್ತಮ ಎನ್ನಿಸಲಿದ್ದು, ದೂರದ ಪ್ರಯಾಣ ಮತ್ತು ವಾಣಿಜ್ಯ ಬಳಕೆಗಾಗಿ ಡೀಸೆಲ್ ಕಾರುಗಳೇ ಉತ್ತಮ ಎನ್ನುವುದರಲ್ಲಿ ಎರಡು ಮಾತಿಲ್ಲ. ಹೀಗಿರುವಾಗ ಡೀಸೆಲ್ ಕಾರುಗಳನ್ನು ಆಯ್ಕೆ ಮಾಡುವಾಗ ಕೆಲವು ವಿಚಾರಗಳನ್ನು ನೆನಪಿನಲ್ಲಿಟ್ಟುಕೊಂಡು ಖರೀದಿ ಮಾಡುವುದು ಒಳಿತು.

ಅತ್ಯುತ್ತಮ ಮೈಲೇಜ್ ಹೊಂದಿರುವ ಟಾಪ್ 10 ಡೀಸೆಲ್ ಕಾರುಗಳಿವು..!

ಕಾರು ಖರೀದಿ ವೇಳೆ ಪ್ರತಿಯೊಬ್ಬ ಗ್ರಾಹಕರು ಕೂಡಾ ಒಂದೊಂದು ರೀತಿಯಲ್ಲಿ ಮೋಸಕ್ಕೆ ಒಳಗಾಗುತ್ತಲೇ ಇರುತ್ತಾರೆ. ಅದರಲ್ಲೂ ಮೈಲೇಜ್ ವಿಚಾರವಾಗಿ ಮೋಸ ಹೋಗುವವರೇ ಹೆಚ್ಚು. ಪ್ರತಿ ಲೀಟರ್‌ಗೆ ಅಷ್ಟು ಮೈಲೇಜ್ ಬರುತ್ತೆ. ನಾವೇ ನಂ.1 ಅಂತೆಲ್ಲಾ ಹೇಳಿಕೊಳ್ಳುವ ಆಟೋ ಉತ್ಪಾದನಾ ಸಂಸ್ಥೆಗಳು ಮೈಲೇಜ್ ವಿಚಾರದಲ್ಲಿ ತುಸು ಹೆಚ್ಚೆ ಸುಳ್ಳು ಹೇಳುತ್ತವೆ. ಹೀಗಾಗಿ ಆಟೋ ಕಾರ್ ಇಂಡಿಯಾ ಸಂಸ್ಥೆಯು ನಡೆಸಿದ ಕಾರು ಚಾಲನಾ ಕಾರ್ಯಾಗಾರದಲ್ಲಿ ಕಾರುಗಳ ಅಸಲಿ ಮೈಲೇಜ್ ಮಾಹಿತಿ ಎಷ್ಟು ಎನ್ನುವ ಮಾಹಿತಿ ನೀಡಿದೆ.

ಅತ್ಯುತ್ತಮ ಮೈಲೇಜ್ ಹೊಂದಿರುವ ಟಾಪ್ 10 ಡೀಸೆಲ್ ಕಾರುಗಳಿವು..!

01. ಮಾರುತಿ ಸುಜುಕಿ ಡಿಜೈರ್

ಡಿಜೈರ್ ಕಂಪ್ಯಾಕ್ಟ್ ಎಸ್‌ಯುವಿ ಮಾದರಿಯು ಸದ್ಯ ದೇಶದ ನಂ.1 ಕಾರು ಮಾದರಿಯಾಗಿ ಮಾರಾಟಗೊಳ್ಳುತ್ತಿದ್ದು, ಉತ್ತಮ ಮೈಲೇಜ್ ಮತ್ತು ಕೈಗೆಟುಕುವ ಬೆಲೆಗಳಿಂದಾಗಿ ಡಿಜೈರ್ ಕಾರು ಮಾರುಕಟ್ಟೆಯಲ್ಲಿ ಅತಿಹೆಚ್ಚು ಬೇಡಿಕೆ ಹೊಂದಿದೆ. ಡೀಸೆಲ್ ಆವೃತ್ತಿಯಲ್ಲಿ 1.3-ಲೀಟರ್ ಎಂಜಿನ್ ಹೊಂದಿರುವ ಈ ಕಾರು ಪ್ರತಿ ಲೀಟರ್‌ಗೆ ರೋಡ್ ಟೆಸ್ಟಿಂಗ್‌ನಲ್ಲಿ 21 ಕಿ.ಮಿ ಮೈಲೇಜ್ ಹೊಂದಿದ್ದು, ಕಾರಿನ ಬೆಲೆಯು ಎಕ್ಸ್‌ಶೋರೂಂ ಪ್ರಕಾರ ರೂ.6.72 ಲಕ್ಷದಿಂದ ರೂ.9.58 ಲಕ್ಷ ಬೆಲೆ ಹೊಂದಿದೆ.

ಅತ್ಯುತ್ತಮ ಮೈಲೇಜ್ ಹೊಂದಿರುವ ಟಾಪ್ 10 ಡೀಸೆಲ್ ಕಾರುಗಳಿವು..!

02. ಮಾರುತಿ ಸುಜುಕಿ ಸ್ವಿಫ್ಟ್(ಪ್ರತಿ ಲೀಟರ್‌ಗೆ 19.3ಕಿ.ಮಿ)

ಮಾರುತಿ ಸಂಸ್ಥೆಯ 2ನೇ ಜನಪ್ರಿಯ ಕಾರು ಆವೃತ್ತಿಯಾಗಿರುವ ಸ್ವಿಫ್ಟ್ ಆವೃತ್ತಿಯು 1.3-ಲೀಟರ್ ಡೀಸೆಲ್ ಎಂಜಿನ್ ಹೊಂದಿದ್ದು, ಕಂಪನಿ ನೀಡಿರುವ ಮಾಹಿತಿಯ ಪ್ರಕಾರ ಸ್ವಿಫ್ಟ್ ಕಾರು ಪ್ರತಿ ಲೀಟರ್‌ಗೆ 28.4ಕಿ.ಮಿ ಎಂದು ಹೇಳಲಾಗಿದೆ. ಆದ್ರೆ ರೋಡ್ ಟೆಸ್ಟಿಂಗ್ ವೇಳೆ ಈ ಕಾರು ಸರಾಸರಿಯಾಗಿ 19.3 ಕಿ.ಮಿ ಮೈಲೇಜ್ ಹೊಂದಿರುವುದು ಖಚಿತವಾಗಿದೆ.

ಅತ್ಯುತ್ತಮ ಮೈಲೇಜ್ ಹೊಂದಿರುವ ಟಾಪ್ 10 ಡೀಸೆಲ್ ಕಾರುಗಳಿವು..!

ಹೋಂಡಾ ಸಿಟಿ ಮತ್ತು ಮಾರುತಿ ಸುಜುಕಿ ಸಿಯಾಜ್‌ಗೆ ಟಕ್ಕರ್ ನೀಡುತ್ತಿರುವ ಟೊಯೊಟಾ ಯಾರಿಸ್ ಖರೀದಿಗೆ ಈಗಲೇ ಟೆಸ್ಟ್ ಡ್ರೈವ್ ಮಾಡಿ..!

03. ಮಾರುತಿ ಸುಜುಕಿ ಸಿಯಾಜ್ ಸ್ಮಾರ್ಟ್ ಹೈಬ್ರಿಡ್(16.15ಕಿ.ಮಿ)

ಸ್ಮಾರ್ಟ್ ಹೈಬ್ರಿಡ್ ಎಂಜಿನ್ ಮೂಲಕ ಕಾರು ಮಾರಾಟದಲ್ಲಿ ಹೊಸ ಸಂಚಲನಕ್ಕೆ ಕಾರಣವಾಗಿರುವ ಸಿಯಾಜ್ ಸೆಡಾನ್ ಮಾದರಿಯು ಪ್ರಸ್ತುತ ಮಾರುಕಟ್ಟೆಯಲ್ಲಿ 1.5-ಲೀಟರ್ ಡೀಸೆಲ್ ಎಂಜಿನ್ ಹೊಂದಿದ್ದು, ಸ್ಮಾರ್ಟ್ ಹೈಬ್ರಿಡ್ ಸಹಾಯದೊಂದಿಗೆ 90-ಬಿಎಚ್‌ಪಿ ಉತ್ಪಾದನೆ ಮಾಡಬಲ್ಲದು. ಆದರೆ ಕಂಪನಿ ಹೇಳಿಕೊಂಡಂತೆ ಸಿಯಾಜ್ ಕಾರು ಪ್ರತಿ ಲೀಟರ್ ಡೀಸೆಲ್‌ಗೆ 28.09 ಕಿ.ಮಿ ಬದಲಾಗಿ ರೋಡ್ ಟೆಸ್ಟಿಂಗ್‌ನಲ್ಲಿ 16.15 ಕಿಮಿ ಮೈಲೇಜ್ ನೀಡಬಲ್ಲದು.

ಅತ್ಯುತ್ತಮ ಮೈಲೇಜ್ ಹೊಂದಿರುವ ಟಾಪ್ 10 ಡೀಸೆಲ್ ಕಾರುಗಳಿವು..!

04. ಮಾರುತಿ ಸುಜುಕಿ ಬಲೆನೊ(18.15ಕಿ.ಮಿ)

ಪ್ರೀಮಿಯಂ ಹ್ಯಾಚ್‌ಬ್ಯಾಕ್ ಕಾರುಗಳಲ್ಲಿ ಉತ್ತಮ ಎನ್ನಿಸುವ ಬಲೆನೊ ಆವೃತ್ತಿಯು 1.2-ಲೀಟರ್ ಮೈಲ್ಡ್ ಹೈಬ್ರಿಡ್ ಪೆಟ್ರೋಲ್ ಮತ್ತು 1.3-ಲೀಟರ್ ಡೀಸೆಲ್ ಎಂಜಿನ್ ಆಯ್ಕೆ ಹೊಂದಿದೆ. ಪ್ರತಿ ಲೀಟರ್ ಡೀಸೆಲ್‌ಗೆ ಬಲೆನೊ ಕಾರು ಎಆರ್‌ಎಐ ಸಂಸ್ಥೆಯು ಪ್ರಮಾಣಿಕರಿಸಿದಂತೆ 27ಕಿ.ಮಿ ಬದಲಾಗಿ ರೋಡ್ ಟೆಸ್ಟಿಂಗ್ ವೇಳೆ 18.15 ಸರಾಸರಿ ಮೈಲೇಜ್ ಪಡೆದುಕೊಂಡಿದೆ.

ಅತ್ಯುತ್ತಮ ಮೈಲೇಜ್ ಹೊಂದಿರುವ ಟಾಪ್ 10 ಡೀಸೆಲ್ ಕಾರುಗಳಿವು..!

05. ಹೋಂಡಾ ಜಾಝ್(17.1ಕಿ.ಮಿ)

ಪ್ರೀಮಿಯಂ ಹ್ಯಾಚ್‌ಬ್ಯಾಕ್‌ಗಳಲ್ಲಿ ಬಲೆನೊ ನಂತರ ಅತಿ ಹೆಚ್ಚು ಬೇಡಿಕೆ ಹೊಂದಿರುವ ಕಾರುಗಳಲ್ಲಿ ಹೋಂಡಾ ಜಾಝ್ ಕೂಡಾ ಒಂದು. 1.5-ಲೀಟರ್ ಡೀಸೆಲ್ ಎಂಜಿನ್ ಆಯ್ಕೆ ಹೊಂದಿರುವ ಈ ಕಾರು ಎಆರ್‌ಎಐ ಸಂಸ್ಥೆಯು ಪ್ರಮಾಣಿಕರಿಸಿದಂತೆ 27.3ಕಿ.ಮಿ ಬದಲಾಗಿ ರೋಡ್ ಟೆಸ್ಟಿಂಗ್ ವೇಳೆ 17.1 ಕಿ.ಮಿ ಸರಾಸರಿ ಮೈಲೇಜ್ ಪಡೆದುಕೊಂಡಿದೆ.

ಅತ್ಯುತ್ತಮ ಮೈಲೇಜ್ ಹೊಂದಿರುವ ಟಾಪ್ 10 ಡೀಸೆಲ್ ಕಾರುಗಳಿವು..!

06. ಹೋಂಡಾ ಅಮೇಜ್(19.67ಕಿ.ಮಿ)

ಕಂಪ್ಯಾಕ್ಟ್ ಸೆಡಾನ್ ವೈಶಿಷ್ಟ್ಯತೆ ಅಮೇಜ್ ಕಾರು ಕೂಡಾ 1.5-ಲೀಟರ್ ಡೀಸೆಲ್ ಎಂಜಿನ್ ಆಯ್ಕೆಯೊಂದಿಗೆ ಉತ್ತಮ ಬೇಡಿಕೆ ಹೊಂದಿದ್ದು, ಅಮೇಜ್ ಕಾರು ಎಆರ್‌ಎಐ ಸಂಸ್ಥೆಯು ಪ್ರಮಾಣಿಕರಿಸಿದಂತೆ 27.4ಕಿ.ಮಿ ಬದಲಾಗಿ ರೋಡ್ ಟೆಸ್ಟಿಂಗ್ ವೇಳೆ 19.67ಕಿ.ಮಿ ಸರಾಸರಿ ಮೈಲೇಜ್ ಪಡೆದುಕೊಂಡಿದೆ.

ಅತ್ಯುತ್ತಮ ಮೈಲೇಜ್ ಹೊಂದಿರುವ ಟಾಪ್ 10 ಡೀಸೆಲ್ ಕಾರುಗಳಿವು..!

07. ಟಾಟಾ ಟಿಯಾಗೊ

ಹ್ಯಾಚ್‌ಬ್ಯಾಕ್ ಕಾರುಗಳಲ್ಲಿ ಉತ್ತಮ ಬೇಡಿಕೆ ಹೊಂದಿರುವ ಟಿಯಾಗೊ ಕಾರು 1.05-ಲೀಟರ್ ಡೀಸೆಲ್ ಎಂಜಿನ್ ಹೊಂದಿದ್ದು, 70-ಬಿಎಚ್‌ಪಿ ಉತ್ಪಾದನಾ ವೈಶಿಷ್ಟಯತೆ ಹೊಂದಿದೆ. ಈ ಕಾರು ಎಆರ್‌ಎಐ ಸಂಸ್ಥೆಯು ಪ್ರಮಾಣಿಕರಿಸಿದಂತೆ 27.28 ಕಿ.ಮಿ ಬದಲಾಗಿ ರೋಡ್ ಟೆಸ್ಟಿಂಗ್ ವೇಳೆ 21 ಕಿ.ಮಿ ಸರಾಸರಿ ಮೈಲೇಜ್ ಪಡೆದುಕೊಂಡಿದೆ.

ಅತ್ಯುತ್ತಮ ಮೈಲೇಜ್ ಹೊಂದಿರುವ ಟಾಪ್ 10 ಡೀಸೆಲ್ ಕಾರುಗಳಿವು..!

08. ಹೋಂಡಾ ಸಿಟಿ(16.15ಕಿ.ಮಿ)

ಸೆಡಾನ್ ಕಾರುಗಳಲ್ಲಿ ಮಾರುತಿ ಸಿಯಾಜ್, ಹ್ಯುಂಡೈ ವೆರ್ನಾ ಮತ್ತು ಹೋಂಡಾ ಸಿಟಿ ಕಾರುಗಳಿಗೆ ಉತ್ತಮ ಪೈಪೋಟಿ ಇದ್ದು, ಸಿಟಿ ಸೆಡಾನ್ ಮಾದರಿಯು 1.5-ಲೀಟರ್ ಡೀಸೆಲ್ ಎಂಜಿನ್ ಜೊತೆಗೆ ಅತ್ಯುತ್ತಮ ಪ್ರೀಮಿಯಂ ಫೀಚರ್ಸ್‌ಗಳನ್ನು ಹೊಂದಿದೆ. ಈ ಕೂಡಾ ಎಆರ್‌ಎಐ ಸಂಸ್ಥೆಯು ಪ್ರಮಾಣಿಕರಿಸಿದಂತೆ 25.6ಕಿ.ಮಿ ಬದಲಾಗಿ ರೋಡ್ ಟೆಸ್ಟಿಂಗ್ ವೇಳೆ 16.15 ಕಿ.ಮಿ ಸರಾಸರಿ ಮೈಲೇಜ್ ಪಡೆದುಕೊಂಡಿದೆ.

ಅತ್ಯುತ್ತಮ ಮೈಲೇಜ್ ಹೊಂದಿರುವ ಟಾಪ್ 10 ಡೀಸೆಲ್ ಕಾರುಗಳಿವು..!

09. ಫೋರ್ಡ್ ಆಸ್ಪೈರ್

ಕಂಪ್ಯಾಕ್ಟ್ ಸೆಡಾನ್ ಮಾದರಿಯಾದ ಫೋರ್ಡ್ ಆಸ್ಪೈರ್ ಮಾದರಿಯು 1.5-ಲೀಟರ್ ಡೀಸೆಲ್ ಎಂಜಿನ್ ಹೊಂದಿದ್ದು, ಇದೇ ಎಂಜಿನ್ ಮಾದರಿಯು ಇಕೋಸ್ಪೋರ್ಟ್, ಫ್ರೀ ಸ್ಟೈಲ್ ಕಾರುಗಳಲ್ಲೂ ಬಳಕೆ ಮಾಡಲಾಗಿದೆ. ಈ ಎಂಜಿನ್ ಕೂಡಾ ಎಆರ್‌ಎಐ ಸಂಸ್ಥೆಯು ಪ್ರಮಾಣಿಕರಿಸಿದಂತೆ 26.1 ಕಿ.ಮಿ ಬದಲಾಗಿ ರೋಡ್ ಟೆಸ್ಟಿಂಗ್ ವೇಳೆ 18 ಕಿ.ಮಿ ಸರಾಸರಿ ಮೈಲೇಜ್ ಪಡೆದುಕೊಂಡಿದೆ.

ಅತ್ಯುತ್ತಮ ಮೈಲೇಜ್ ಹೊಂದಿರುವ ಟಾಪ್ 10 ಡೀಸೆಲ್ ಕಾರುಗಳಿವು..!

10. ಫೋರ್ಡ್ ಫಿಗೊ

ಹ್ಯಾಚ್‌ಬ್ಯಾಕ್ ಮಾದರಿಯಾದ ಫಿಗೊ ಕಾರು ಕೂಡಾ ಆಸ್ಪೈರ್ ಮಾದರಿಯಲ್ಲೇ 1.5-ಲೀಟರ್ ಡೀಸೆಲ್ ಎಂಜಿನ್ ಆಯ್ಕೆಯನ್ನು ಹೊಂದಿದ್ದು, ಈ ಎಂಜಿನ್ ಕೂಡಾ ಎಆರ್‌ಎಐ ಸಂಸ್ಥೆಯು ಪ್ರಮಾಣಿಕರಿಸಿದಂತೆ 26.1 ಕಿ.ಮಿ ಬದಲಾಗಿ ರೋಡ್ ಟೆಸ್ಟಿಂಗ್ ವೇಳೆ 18 ಕಿ.ಮಿ ಸರಾಸರಿ ಮೈಲೇಜ್ ಪಡೆದುಕೊಂಡಿದೆ.

Most Read Articles

Kannada
English summary
Best fuel efficient diesel cars in India. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X