ಟಾಟಾ ನೆಕ್ಸಾನ್ ಕಾರಿನ ಮೇಲೆ ಬಿಲ್‍ಬೋರ್ಡ್ ಬಿದ್ದರೂ, ಕಾರಿನಲ್ಲಿದ್ದವರಿಗೆ ಏನೂ ಆಗಲಿಲ್ಲ..!

ಅಪಘಾತ ಅನ್ನೊದು ಹೇಳಿ ಕೇಳಿ ಬರಲ್ಲ, ಅದು ಯಾವ ರೀತಿಯಲ್ಲಾದರು ಸಂಭವಿಸಬಹುದು. ಅಂತಹ ಒಂದು ವಿಚಾರದ ಬಗ್ಗೆ ನಿಮಗೆ ಈ ಲೇಖನದಲ್ಲಿ ನಿಮಗೆ ಮಾಹಿತಿಯನ್ನು ನೀಡಲಿದ್ದೇವೆ. ಪಾರ್ಕಿಂಗ್ ಮಾಡಿದ ಒಂದು ಕಾರಿನ ಮೇಲೆ ಬಿಲ್‍ಬೋರ್ಡ್ ಬಿದ್ದಿದ್ದು, ಕಾರಿನಲ್ಲಿದ್ದವರು ಪ್ರಾಣಪಾಯದಿಂದ ಪಾರಾಗಿದ್ದಾರೆ ಎಂದ್ರೆ ನೀವು ನಂಬಲೇಬೇಕು. ಹಾಗಾದರೆ ಪ್ರಯಾಣಿಕರನ್ನು ರಕ್ಷಿಸಿದ ಆ ಕಾರು ಯಾವುದು ಮತ್ತು ನಡೆದ ಘಟನೆ ಬಗ್ಗೆ ಸಂಪೂರ್ಣವಾಗಿ ತಿಳಿಯಲು ಮುಂದಕ್ಕೆ ಓದಿರಿ...

ಟಾಟಾ ನೆಕ್ಸಾನ್ ಕಾರಿನ ಮೇಲೆ ಬಿಲ್‍ಬೋರ್ಡ್ ಬಿದ್ದರೂ, ಕಾರಿನಲ್ಲಿದ್ದವರಿಗೆ ಏನೂ ಆಗಲಿಲ್ಲ..!

ಶಾಪಿಂಗ್‍ಗೆ ಹೋದಾಗ ಪಾರ್ಕಿಂಗ್ ಮಾಡಿದ ಕಾರಿನ ಮೇಲೆ ಜಾಹೀರಾತಿಗಾಗಿ ನಿಲ್ಲಿಸಿದ ಬಿಲ್‍ಬೋರ್ಡ್ ಒಂದು ಟಾಟಾ ನೆಕ್ಸಾನ್ ಕಾರಿನ ಮೇಲೆ ಬಿದ್ದಿರುವ ಘಟನೆ ಡೆಹ್ರಾಡೂನ್‍ನಲ್ಲಿ ನಡೆದಿದೆ. ಅದೃಷ್ಟವಶಾತ್ ಟಾಟಾ ಸಂಸ್ಥೆಯು ತಮ್ಮ ನೆಕ್ಸಾನ್ ಕಾರನ್ನು ಉತ್ಪಾದಿಸಿರುವ ಗುಣಮಟ್ಟದಿಂದ ಕಾರಿನಲ್ಲಿದ್ದವರಿಗೆ ಏನೂ ಆಗಿಲ್ಲ. ಬಿಲ್‍ಬೋರ್ಡ್ ಬಿದ್ದ ತಕ್ಷಣವೇ ಕಾರಿನಲ್ಲಿದ್ದ ಅವರಿಗೆ ಏನೂ ಆಗದಂತೆ ಹೊರ ಬಂದಿದ್ದಾರೆ ಎಂದರೆ ನೀವು ನಂಬುತ್ತೀರಾ.?

ಟಾಟಾ ನೆಕ್ಸಾನ್ ಕಾರಿನ ಮೇಲೆ ಬಿಲ್‍ಬೋರ್ಡ್ ಬಿದ್ದರೂ, ಕಾರಿನಲ್ಲಿದ್ದವರಿಗೆ ಏನೂ ಆಗಲಿಲ್ಲ..!

ಬಹುಶಃ ಆಗಷ್ಟೆ ಮಳೆಯಲ್ಲಿ ಶಾಪಿಂಗ್ ಮುಗಿಸಿ ಬಂದ ಫ್ಯಾಮಿಲಿಯೊಂದು ಕಾರಿನ ಬಳಿ ಬಂದು ಹೊರತೆಗೆಯಲು ಪ್ರಯತ್ನಿಸುತ್ತಿದ್ದರು. ಅತಿಯಾದ ಮಳೆಯಿಂದಾಗಿ ಮತ್ತು ಗಾಳಿಯ ರಭಸದಿಂದಾಗಿ ಕಾರಿನ ಮುಂದೆಯೇ ನಿಲ್ಲಿಸಲಾಗಿದ್ದ ಜಾಹಿರಾತಿನ ಬಿಲ್‍ಬೋರ್ಡ್ ಕಾರಿನ ಮೇಲೆ ಬಿದ್ದಿದೆ. ಆದ್ರೆ ಅದಾದ ಬಳಿಕ ಕಾರಿನಲ್ಲಿದ್ದ ಎಲ್ಲರೂ ಹೊರ ಬಂದಿದ್ದಾರೆ.

ಟಾಟಾ ನೆಕ್ಸಾನ್ ಕಾರಿನ ಮೇಲೆ ಬಿಲ್‍ಬೋರ್ಡ್ ಬಿದ್ದರೂ, ಕಾರಿನಲ್ಲಿದ್ದವರಿಗೆ ಏನೂ ಆಗಲಿಲ್ಲ..!

ಟಾಟಾ ನೆಕ್ಸಾನ್ ಕಾರಿನ ಬಗ್ಗೆ ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. ಯಾಕಂದ್ರೆ ಕಳೆದ ವರ್ಷ ನಡೆಸಿದ ಕ್ರ್ಯಾಶ್ ಟೆಸ್ಟಿಂಗ್‍ನಲ್ಲಿ ಒಟ್ಟು 5 ಕ್ಕೆ 5 ಅಂಕವನ್ನು ಪಡೆದು ದೇಶಿಯವಾಗಿ ನಿರ್ಮಾಣವಾದ ಕಾರಿನ ಶಕ್ತಿಯನ್ನು ನಿರೂಪಿಸಿದ್ದು, ಈ ಕಾರು ದೇಶದ ಸೇಫೆಸ್ಟ್ ಕಾರು ಎಂಬ ಖ್ಯಾತಿಯನ್ನು ಪಡೆದುಕೊಂಡಿದೆ.

2017ರ ಸೆಪ್ಟೆಂಬರ್‌ನಲ್ಲಿ ಬಿಡುಗಡೆಯಾಗಿದ್ದ ಟಾಟಾ ಜನಪ್ರಿಯ ನೆಕ್ಸಾನ್ ಎಸ್‌ಯುವಿ ಕಾರುಗಳು ಸದ್ಯ ಮಾರಾಟದಲ್ಲಿ ಹೊಸ ದಾಖಲೆ ಸೃಷ್ಠಿಸುತ್ತಿದ್ದು, ಇದರೊಂದಿಗೆ ಸುರಕ್ಷತೆಯಲ್ಲೂ ಹೊಸ ಭರವಸೆ ಮೂಡಿಸುವ ಮೂಲಕ ಪ್ರತಿಷ್ಠಿತ ಗ್ಲೋಬಲ್ ಎನ್‌ಸಿಎಪಿ ಕ್ರ್ಯಾಶ್ ಟೆಸ್ಟಿಂಗ್‌ನಲ್ಲಿ ಅತ್ಯುತ್ತಮ ರೇಟಿಂಗ್ ತನ್ನದಾಗಿಸಿಕೊಂಡಿದೆ.

ಟಾಟಾ ನೆಕ್ಸಾನ್ ಕಾರಿನ ಮೇಲೆ ಬಿಲ್‍ಬೋರ್ಡ್ ಬಿದ್ದರೂ, ಕಾರಿನಲ್ಲಿದ್ದವರಿಗೆ ಏನೂ ಆಗಲಿಲ್ಲ..!

ಹೊಸ ಕಾರುಗಳ ಸುರಕ್ಷಾ ವಿಚಾರಕ್ಕೆ ಸಂಬಂಧಿಸಿದಂತೆ ಗ್ಲೋಬಲ್ ನ್ಯೂ ಕಾರ್ ಅಸೆಸ್‌ಮೆಂಟ್ ಪ್ರೋಗ್ರಾಮ್ (ಎನ್‌ಸಿಎಪಿ) ಏಜೆನ್ಸಿಯು ನಡೆಸುವ ಕ್ರ್ಯಾಶ್ ಟೆಸ್ಟಿಂಗ್‌ನಲ್ಲಿ ಖರೀದಿಗೆ ಅತ್ಯುತ್ತಮ ಎನಿಸಿರುವ ಟಾಟಾ ನೆಕ್ಸಾನ್ ಎಸ್‌ಯುವಿ ಕಾರುಗಳು ಪೂರ್ಣ ಪ್ರಮಾಣದ 5 ಸ್ಟಾರ್ ರೇಟಿಂಗ್ ತನ್ನದಾಗಿಸಿಕೊಂಡಿದ್ದು, ಕಂಪ್ಯಾಕ್ಟ್ ಎಸ್‌ಯುವಿ ಸದ್ಯ ಹೊಸ ಮೈಲಿಗಲ್ಲಿಗೆ ಕಾರಣವಾಗಿದೆ.

ಟಾಟಾ ನೆಕ್ಸಾನ್ ಕಾರಿನ ಮೇಲೆ ಬಿಲ್‍ಬೋರ್ಡ್ ಬಿದ್ದರೂ, ಕಾರಿನಲ್ಲಿದ್ದವರಿಗೆ ಏನೂ ಆಗಲಿಲ್ಲ..!

ಇದು ಭಾರತೀಯ ಆಟೋ ಉತ್ಪಾದನಾ ಸಂಸ್ಥೆಯೊಂದು ನಿರ್ಮಾಣ ಮಾಡಿದ ಕಾರೊಂದು 5 ಸ್ಟಾರ್ ರೇಟಿಂಗ್ ಪಡೆದ ಹೆಗ್ಗಳಿಕೆಗೆ ಪಾತ್ರವಾಗಿದ್ದು, ಐಷಾರಾಮಿ ಕಾರುಗಳನ್ನು ಹೊರತುಪಡಿಸಿ ಮಧ್ಯಮ ಗಾತ್ರದ ಕಾರುಗಳಲ್ಲಿ ಪೂರ್ಣ ಪ್ರಮಾಣದ ಸುರಕ್ಷಾ ರೇಟಿಂಗ್ ಬಂದಿದ್ದು ನೆಕ್ಸಾನ್ ಕಾರಿಗೆ ಮಾತ್ರ ಎನ್ನುವುದು ಬಹುಮುಖ್ಯ ವಿಚಾರ.

ಟಾಟಾ ನೆಕ್ಸಾನ್ ಕಾರಿನ ಮೇಲೆ ಬಿಲ್‍ಬೋರ್ಡ್ ಬಿದ್ದರೂ, ಕಾರಿನಲ್ಲಿದ್ದವರಿಗೆ ಏನೂ ಆಗಲಿಲ್ಲ..!

ಅಷ್ಟೆ ಅಲ್ಲದೇ, ದೇಶಿಯ ಸಂಸ್ಥೆಗಳ ವಾಹನ ಉತ್ಪಾದಕರ ಕಾರುಗಳಲ್ಲಿ ನೆಕ್ಸಾನ್ ಕ್ರ್ಯಾಶ್ ಟೆಸ್ಟಿಂಗ್‍ನಲ್ಲಿ ಸಂಪೂರ್ಣ ಅಂಕವನ್ನು ಪಡೆದ ಕಾರೆಂಬ ಹೆಗ್ಗಳಿಕೆ ಪಾತ್ರವಾಗಿದ್ದು, ಈ ಕುರಿತಾಗಿ ಮಹೀಂದ್ರಾ & ಮಹಿಂದ್ರಾ ಸಂಸ್ಥೆಯ ಅಧ್ಯಕ್ಷರಾದ ಆನಂದ್ ಮಹಿಂದ್ರಾರವರು ಕೂಡಾ ಟಾಟಾ ಮೋಟಾರ್ಸ್ ಅನ್ನು ಅಭಿನಂದಿಸಿದ್ದರು.

ಟಾಟಾ ನೆಕ್ಸಾನ್ ಕಾರಿನ ಮೇಲೆ ಬಿಲ್‍ಬೋರ್ಡ್ ಬಿದ್ದರೂ, ಕಾರಿನಲ್ಲಿದ್ದವರಿಗೆ ಏನೂ ಆಗಲಿಲ್ಲ..!

ಆನಂದ್ ಮಹೀಂದ್ರಾರವರು ಟಾಟಾ ಮೋಟಾರ್ಸ್ ಅನ್ನು ಅಭಿನಂದಿಸುತ್ತಾ ಮಾಡಿದ ಟ್ವೀಟ್‍ನಲ್ಲಿ 'ಟಾಟಾ ಮೋಟಾರ್ಸ್ ಸಂಸ್ಥೆಯು ಕ್ರ್ಯಾಶ್ ಟೆಸ್ಟಿಂಗ್‍ನಲ್ಲಿ ನೆಕ್ಸಾನ್ ಕಾರು ಗರಿಷ್ಠ ಮಟ್ಟದ ಐದು ಅಂಕಗಳನ್ನು ಪಡೆದ ಕಾರಣಕ್ಕೆ ಅಭಿನಂದಿಸಿದ್ದು, ಮುಂದಿನ ದಿನಗಳಲ್ಲಿ ಮಹೀಂದ್ರಾ ಸಂಸ್ಥೆಯು ಕೂಡಾ ಪ್ರಯಾಣಿಕರಿಗೆ ಸುರಕ್ಷೆತಯನ್ನು ಹೆಚ್ಚಿನ ಆದ್ಯತೆ ನೀಡುವುದಾಗಿ ಭರವಸೆ ನೀಡಿದ್ದಾರೆ.

Source: Rushlane

Most Read Articles

Kannada
English summary
BillBoard Fallen On Tata Nexon And Passengers Came Out Safely. Read In Kannada
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X