Just In
- 40 min ago ಟಿವಿಎಸ್ ಐಕ್ಯೂಬ್ಗೆ ನಡುಕ ಶುರು!: ಸದ್ಯದಲ್ಲೇ ಕಡಿಮೆ ಬೆಲೆ ಮಾರುಕಟ್ಟೆಗೆ ಬಜಾಜ್ ಚೇತಕ್ ಎಲೆಕ್ಟ್ರಿಕ್
- 1 hr ago ರಾಜ್ಯದಲ್ಲಿ ತಯಾರಾಗುವ ಟೊಯೊಟಾ ಇನ್ನೋವಾ ಹೈಕ್ರಾಸ್ಗೆ ಸೆಲೆಬ್ರಿಟಿಗಳು ಫಿಧಾ: ಈ ಕಾರು ಖರೀದಿಸಿದ ನಟಿ
- 1 hr ago ಹ್ಯುಂಡೈನ ಈ ಕಾರಿಗೆ ಭಾರತದಲ್ಲಿ ಭರ್ಜರಿ ಡಿಸ್ಕೌಂಟ್: ಇದಕ್ಕಿಂತ ಉತ್ತಮ ಆಫರ್ ಸದ್ಯಕ್ಕಿಲ್ಲ!
- 1 hr ago ರೈತರ ವಿಶ್ವಾಸದೊಂದಿಗೆ 40 ಲಕ್ಷ ಟ್ರ್ಯಾಕ್ಟರ್ ಮಾರಾಟ ಮೈಲಿಗಲ್ಲು ಸಾಧಿಸಿದ ಮಹೀಂದ್ರಾ
Don't Miss!
- Lifestyle ಸೌರಮಂಡಲದಲ್ಲಿದೆ 9ನೇ ಗ್ರಹ..! ಯಾವುದದು..? ಎಲ್ಲಿದೆ..?
- News Lok Sabha Election 2024: ಈ 6 ಜಿಲ್ಲೆಗಳಲ್ಲಿ 0% ಮತದಾನ-ಎಲ್ಲಿ ಹಾಗೂ ಕಾರಣ ಏನು?
- Technology ಅಗ್ಗದ ಬೆಲೆಯಲ್ಲಿ ಎಂಟ್ರಿ ಕೊಡಲು ಸಜ್ಜಾಗಿದೆ ಐಟೆಲ್ S24 ಸ್ಮಾರ್ಟ್ಫೋನ್!
- Movies ಮಂಡ್ಯದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ನಟ ದರ್ಶನ್ ಪ್ರಚಾರ; ಸುಮಲತಾ ಅಂಬರೀಶ್ ಪ್ರತಿಕ್ರಿಯೆ
- Sports LSG vs CSK IPL 2024: ಲಕ್ನೋ vs ಚೆನ್ನೈ ಪಂದ್ಯದ ವರದಿ, ಫ್ಯಾಂಟಸಿ ಡ್ರೀಮ್ ಟೀಂ, ಸಂಭಾವ್ಯ ಆಡುವ 11ರ ಬಳಗ
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ವಿದೇಶಿ ಮಾರುಕಟ್ಟೆಯಲ್ಲಿ ಉತ್ತಮ ಬೇಡಿಕೆ ಪಡೆಯುತ್ತಿರುವ ಬಿಎಂಡಬ್ಲ್ಯು ಜಿ310 ಟ್ವಿನ್ ಬೈಕ್ಗಳು
ಬಿಎಂಡಬ್ಲ್ಯು ಸಂಸ್ಥೆಯು ಟಿವಿಎಸ್ ಮೋಟಾರ್ನೊಂದಿಗೆ ಜೊತೆಗೂಡಿ ಮೇಡ್ ಇನ್ ಇಂಡಿಯಾ ಖ್ಯಾತಿಯ ಜಿ310ಆರ್ ಮತ್ತು ಜಿ310ಗಿಎಸ್ ಬೈಕ್ಗಳನ್ನು ಜೂನ್ 2018 ರಲ್ಲಿ ಬಿಡುಗಡೆ ಮಾಡಲಾಗಿತ್ತು. ದೇಶಿಯ ಮಾರುಕಟ್ಟೆಯಲ್ಲಿ ಒಂದು ವರ್ಷ ಪೂರೈಸಿದ ಬಿಎಂಡಬ್ಲ್ಯೂ ಜಿ310 ಟ್ವಿನ್ ಬೈಕ್ಗಳು ಪ್ರತೀ ತಿಂಗಳು ಸುಮಾರು 150 ಯೂನಿಟ್ ಮಾರಾಟಗೊಳ್ಳಿತ್ತಿದೆ ಎಂದು ವರದಿಗಳು ಹೇಳುತ್ತಿದೆ.
ಬಿಡುಗಡೆಗೊಂಡಾಗಿನಿಂದಲೂ ಮಾರುಕಟ್ಟೆಯಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದ್ದ ಈ ಬೈಕ್ಗಳು ಕಳೆದ ಕೆಲವು ತಿಂಗಳಿನಿಂದ ಕಳಪೆ ಮಾರಾಟದ ಸಂಖ್ಯೆಯನ್ನು ಕಾಣುತ್ತಿದೆ. ದೇಶಿಯ ಮಾರುಕಟ್ಟೆಯಲ್ಲಿ ಈ ಬೈಕ್ಗಳ ಮಾರಾಟವು ಕಡಿಮೆಯಾದರೂ ಸಹ ರಶ್ಲೇನ್ ವರದಿ ಪ್ರಕಾರ ಈ ಬೈಕ್ಗಳಿಗೆ ಇನ್ನಿತರೆ ದೇಶಗಳಲ್ಲಿ ಹೆಚ್ಚಿನ ಬೇಡಿಕೆಯನ್ನು ಪಡೆಯುತ್ತಿದೆ. ಈ ನಿಟ್ಟಿನಲ್ಲಿ ಸಂಸ್ಥೆಯು ಈ ಬೈಕ್ಗಳ ಉತ್ಪಾದನೆಯನ್ನು ಸಾಧಾರಣ ಸಂಖ್ಯೆಯಲ್ಲಿ ಉತ್ಪಾದನೆ ಮಾಡಿ ಅವುಗಳನ್ನು ವಿದೇಶಿ ಮಾರುಕಟ್ಟೆಗೆ ರಫ್ತು ಮಾಡಲಾಗುತ್ತಿದೆ.
2018-19ರ ಹಣಕಾರು ವರ್ಷದಲ್ಲಿ ಸುಮಾರು 4,872 ಯೂನಿಟ್ ಬಿಎಂಡಬ್ಲ್ಯು ಜಿ310 ಟ್ವಿನ್ ಬೈಕ್ಗಳನ್ನು ಉತ್ಪಾದನೆ ಮಾಡಲಾಗಿದ್ದು, ಕೇವಲ 2,727 ಯೂನಿಟ್ಗಳು ಮಾರಾಟವಾಗಿದೆ ಎನ್ನಲಾಗಿದೆ. ಈ ನಿಟ್ಟಿನಲ್ಲಿ ಸಂಸ್ಥೆಯು ಈ ಬೈಕ್ಗಳ ಮಾರಾಟವನ್ನು ಹೆಚ್ಚಿಸಲು ಖರೀದಿಯ ಮೇಲೆ ರಿಯಾಯಿತಿಯನ್ನು ಮತ್ತು ವಿವಿಧ ಆಫರ್ ಅನ್ನು ನೀಡಲಾಗುತ್ತಿದೆ.
ಬಿಎಂಡಬ್ಲ್ಯೂ ತಾವು ಹೊಸದಾಗಿ ಬಿಡುಗಡೆ ಮಾಡಿದ ಜಿ 310 ಆರ್ ಮತ್ತು ಜಿ 310 ಜಿಎಸ್ ಬೈಕ್ಗಳ ಮೇಲೆ ಶೇಕಡ 10ರಷ್ಟು ರಿಯಾಯಿತನ್ನು ನೀಡಲು ಮುಂದಾಗಿದೆ. ಇವುಗಳ ಜೊತೆಗೆ ಶೇಕಡ 0 ರಷ್ಟು ಬಡ್ದಿ ದರ, ಶೇಕಡ 0ರಷ್ಟು ಡೌನ್ ಪೇಮೆಂಟ್ ಆಫರ್ ಅನ್ನು ನೀಡಲಾಗಿದ್ದು, ಈ ಬೈಕ್ಗಳ ಆನ್ ರೋಡ್ ಬೆಲೆಯ ಮೇಲೆ ಗ್ರಾಹಕರು ಸುಮಾರು 40,000ವರೆಗು ಕಡಿತವನ್ನು ಪಡೆಯಬಹುದಾಗಿದೆ.
ಬಿಎಂಡಬ್ಲ್ಯು ಸಂಸ್ಥೆಯ ಬೈಕ್ ಉತ್ಪಾದನಾ ವಿಭಾಗವಾದ ಬಿಎಂಡಬ್ಲ್ಯು ಮೊಟೊರಾಡ್ನಿಂದ ಭಾರತೀಯ ಗ್ರಾಹಕರಿಗಾಗಿಯೇ ಜಿ 310 ಆರ್ ಮತ್ತು ಜಿ 310 ಜಿಎಸ್ ಬೈಕ್ಗಳನ್ನು ವಿಶೇಷವಾಗಿ ಅಭಿವೃದ್ಧಿ ಪಡಿಸಿದ್ದು, ದೆಹಲಿ ಎಕ್ಸ್ಶೋರಂ ಪ್ರಕಾರ ಜಿ 310 ಆರ್ ಬೈಕ್ ಮಾದರಿಯು ರೂ. 2.99 ಲಕ್ಷಕ್ಕೆ ಮತ್ತು ಜಿ 310 ಜಿಎಸ್ ಬೈಕ್ ಮಾದರಿಯು ರೂ.3.49 ಲಕ್ಷಕ್ಕೆ ಖರೀದಿಗೆ ಲಭ್ಯವಾಗಿದ್ದವು.
ಜಿ 310 ಆರ್ ಬೈಕ್ (ಸ್ಟ್ರೀಟ್ ಫೈಟರ್)
ಬಿಎಂಡಬ್ಲ್ಯು ಜಿ 310 ಆರ್ ಬೈಕ್ ಆವೃತ್ತಿಯು ಸಹ ನಕೆಡ್ ಮೋಟಾರ್ ಸೈಕಲ್ ವಿನ್ಯಾಸಗಳೊಂದಿಗೆ ಗ್ರಾಹಕರ ಕೈ ಸೇರಿದ್ದು, ಬಿಎಂಡಬ್ಲ್ಯು ಎಸ್ 1000 ಬೈಕ್ ಮಾದರಿಯಲ್ಲೇ 41ಎಂಎಂ ಯುಎಸ್ಡಿ ಗೋಲ್ಡನ್ ಫೋಕ್ಸ್, 17-ಇಂಚಿನ ಫೈವ್ ಸ್ಪೋಕ್ ಕಾಸ್ಟ್ ಅಲ್ಯುನಿಯಂ ವೀಲ್ಹ್ಗಳನ್ನು ಪಡೆದುಕೊಂಡಿದೆ.
ಬರೋಬ್ಬರಿ 158.5 ಕೆ.ಜಿ ತೂಕ ಹೊಂದಿರುವ ಜಿ 310 ಆರ್ ಬೈಕ್ಗಳು ಡ್ಯುಯಲ್ ಚಾನೆಲ್ ಎಬಿಎಸ್, 140ಎಂಎಂ ಫ್ರಂಟ್ ಸಸ್ಷೆಷನ್, 131ಎಂಎಂ ರಿಯರ್ ಸಸ್ಷೆಷನ್, 300ಎಂಎಂ ಫ್ರಂಟ್ ಡಿಸ್ಕ್ ಮತ್ತು 200ಎಂಎಂ ರಿಯರ್ ಡಿಸ್ಕ್ ಬ್ರೇಕ್ ಸೌಲಭ್ಯವನ್ನು ಹೊಂದಿದೆ.
ಜಿ 310 ಜಿಎಸ್(ಅಡ್ವೆಂಚರ್)
ಬಿಎಂಡಬ್ಲ್ಯು ಸಂಸ್ಥೆಯು ಬಿಡುಗಡೆಗೊಳಿಸಿರುವ ಜಿ 310 ಜಿಎಸ್ ಬೈಕ್ಗಳು ಸಿಂಗಲ್ ಸಿಲಿಂಡರ್ ಅಡ್ವೆಂಚರ್ ಪ್ರಿಮಿಯಂ ಬೈಕ್ ಮಾದರಿಗಳಲ್ಲೇ ಅತಿ ಕಡಿಮೆ ಬೆಲೆಗಳಲ್ಲಿ ಬಿಡುಗಡೆಯಾಗಿರುವ ಬೈಕ್ ಆವೃತ್ತಿಯಾಗಿದ್ದು, ಆಪ್ ರೋಡ್ ಮೋಟಾರ್ ಸೈಕಲ್ ಪ್ರೇಮಿಗಳಿಗೆ ಇದೊಂದು ಹಬ್ಬ ಅಂದ್ರೆ ತಪ್ಪಾಗುವುದಿಲ್ಲ.
ಬಿಎಂಡಬ್ಲ್ಯು ಸಂಸ್ಥೆಯ ಆರ್ 1200 ಜಿಎಸ್ ಬೈಕ್ಗಳಲ್ಲಿ ಬಳಸಲಾಗಿರುವ 'ಬೆಬಿ ಜಿಸ್' ಡಿಸೈನ್ಗಳನ್ನು ಹೊಸ ಜಿ 310 ಜಿಎಸ್ ಬೈಕ್ಗಳಲ್ಲೂ ಬಳಸಲಾಗಿದ್ದು, ಬ್ರೇಕ್ ಫೆಂಡರ್ ಸೇರಿದಂತೆ ಆಪ್ ರೋಡ್ ಬೈಕ್ಗಳ ಪ್ರಮುಖ ಗುಣಲಕ್ಷಣವಾದ ಲಗ್ಗೆಜ್ ರಾಕ್ ಕೂಡಾ ಇದರಲ್ಲಿದೆ.
ಸ್ಟ್ರೀಟ್ ಫೈಟರ್ ಖ್ಯಾತಿಯ ಜಿ 310 ಆರ್ ಬೈಕಿಗಿಂತಲೂ ಉದ್ದಳತೆಯಲ್ಲಿ ಹೆಚ್ಚಿರುವ ಜಿ 310 ಜಿಎಸ್ ಬೈಕ್ಗಳು 169.5 ಕೆ.ಜಿ ತೂಕ ಪಡೆದುಕೊಂಡಿದ್ದು, ಮುಂಭಾಗದಲ್ಲಿ 19 ಇಂಚಿನ ವೀಲ್ಹ್ಗಳನ್ನ ಬಳಕೆ ಮಾಡಿದ್ದಲ್ಲಿ ಹಿಂಭಾಗ ಚಕ್ರಗಳು 17 ಇಂಚು ಗಾತ್ರ ಹೊಂದಿವೆ.
ಸುರಕ್ಷತೆಯಲ್ಲೂ ಜಿ 310 ಜಿಎಸ್ ಬೈಕಿನಲ್ಲಿ ಹೆಚ್ಚಿನ ಗಮನಹರಿಸಲಾಗಿದ್ದು, ಜಿ 310 ಆರ್ ಬೈಕಿನಂತೆಯೇ ಡ್ಯುಯಲ್ ಚಾನೆಲ್ ಎಬಿಎಸ್ 300ಎಂಎಂ ಫ್ರಂಟ್ ಡಿಸ್ಕ್ ಮತ್ತು 200ಎಂಎಂ ರಿಯರ್ ಡಿಸ್ಕ್ ಬ್ರೇಕ್ ಸೌಲಭ್ಯವನ್ನ ಸೇರಿಸಲಾಗಿದೆ.
ಎಂಜಿನ್ ಸಾಮರ್ಥ್ಯ
ಬಿಎಂಡಬ್ಲ್ಯು ಜಿ 310 ಆರ್ ಮತ್ತು ಜಿ 310 ಜಿಎಸ್ ಎರಡು ಬೈಕ್ಗಳು ತಾಂತ್ರಿಕವಾಗಿ ಬೇರೆ ಬೇರೆ ವಿನ್ಯಾಸಗಳನ್ನು ಪಡೆದುಕೊಂಡಿದ್ದರೂ ಒಂದೇ ಮಾದರಿಯ ಎಂಜಿನ್ ಪಡೆದುಕೊಂಡಿವೆ. ಎರಡು ಬೈಕ್ಗಳಲ್ಲೂ 313 ಸಿಸಿ ಇನ್ಲೈನ್ಡ್ ಸಿಂಗಲ್ ಸಿಲಿಂಡರ್ ಎಂಜಿನ್ ಬಳಕೆ ಮಾಡಲಾಗಿದೆ. ಇದೇ ಎಂಜಿನ್ ಅನ್ನು ಟಿವಿಎಸ್ ಅಪಾಚೆ ಆರ್ಆರ್310 ಬೈಕ್ನಲ್ಲಿ ನೋಡಬಹುದಾಗಿದೆ.
313 ಸಿಸಿ ಇನ್ಲೈನ್ ಸಿಂಗಲ್ ಸಿಲಿಂಡರ್ ಎಂಜಿನ್ಗಳು 34-ಬಿಎಚ್ಪಿ ಮತ್ತು 28-ಎನ್ಎಂ ಟಾರ್ಕ್ ಉತ್ಪಾದನಾ ಗುಣಹೊಂದಿದ್ದು, ಎರಡು ಬೈಕ್ ಮಾದರಿಗಳಲ್ಲೂ 6-ಸ್ಪೀಡ್ ಗೇರ್ಬಾಕ್ಸ್ ಜೋಡಿಸಲಾಗಿದೆ. ಈ ಮೂಲಕ ಪ್ರತಿ ಗಂಟೆಗೆ 145 ಟಾಪ್ ಸ್ಪೀಡ್ ಹೊಂದಿರುವ ಬಿಎಂಡಬ್ಲ್ಯು ಹೊಸ ಬೈಕ್ಗಳು ಇಂಧನ ದಕ್ಷತೆಯಲ್ಲೂ ಉತ್ತಮವಾಗಿದ್ದು, ಪ್ರತಿ ಲೀಟರ್ ಪೆಟ್ರೋಲ್ಗೆ 30ರಿಂದ 35 ಕಿ.ಮೀ ಮೈಲೇಜ್ ಹಿಂದಿರುಗಿಸಬಲ್ಲವು.