ಮರ್ಸಿಡಿಸ್ ಬೆಂಝ್ ಸಿ‍ಇ‍ಒ ವಿದಾಯವನ್ನು ಟ್ರೋಲ್ ಮಾಡಿದ ಬಿ‍ಎಂ‍‍ಡಬ್ಲ್ಯು

ಜರ್ಮನ್ ಮೂಲದ ಆಡಿ, ಬಿ‍ಎಂ‍‍ಡಬ್ಲ್ಯು, ಮರ್ಸಿಡಿಸ್ ಬೆಂಝ್ ಕಂಪನಿಗಳು ವಿಶ್ವದ್ಯಾಂತ ತಮ್ಮ ಐಷಾರಾಮಿ ವಾಹನಗಳ ತಯಾರಿಕೆಯಿಂದ ಪ್ರಸಿದ್ಧಿ ಪಡೆದಿವೆ. ಈ ಕಂಪನಿಗಳ ನಡುವೆ ಆರೋಗ್ಯಕರ ಪೈಪೋಟಿಯು ಹಲವಾರು ದಶಕಗಳಿಂದ ಇದೆ. ಕಳೆದ ಕೆಲ ಸಮಯದಿಂದ ಈ ಕಂಪನಿಗಳು ಒಬ್ಬರಿಗೊಬ್ಬರು ಟ್ರೋಲ್ ಮಾಡುತ್ತಾ ಬಂದಿವೆ.

ಮರ್ಸಿಡಿಸ್ ಬೆಂಝ್ ಸಿ‍ಇ‍ಒ ವಿದಾಯವನ್ನು ಟ್ರೋಲ್ ಮಾಡಿದ ಬಿ‍ಎಂ‍‍ಡಬ್ಲ್ಯು

ಬಿ‍ಎಂ‍‍ಡಬ್ಲ್ಯು ಕಂಪನಿಯು ಇತ್ತೀಚಿಗೆ ವೀಡಿಯೊವೊಂದನ್ನು ಬಿಡುಗಡೆ ಮಾಡಿ, ಮರ್ಸಿಡಿಸ್ ಬೆಂಝ್ ಕಂಪನಿಯನ್ನು ಟ್ರೋಲ್ ಮಾಡಿದೆ. ಬಿ‍ಎಂ‍‍ಡಬ್ಲ್ಯು ಬಿಡುಗಡೆ ಮಾಡಿರುವ ವೀಡಿಯೊದಲ್ಲಿ ಡೈಮ್ಲರ್‍‍‍ನ ಸಿ‍ಇ‍ಒ ಡೈಟರ್ ಜೆಟ್ಸ್ ರನ್ನು ಕಾಣಬಹುದು. ಸೆಪ್ಟೆಂಬರ್ 2018ರಲ್ಲಿ ಡೈಮ್ಲರ್ ಕಂಪನಿಯು ಡೈಟರ್ ಜೆಟ್ಸ್ ರವರ ಜಾಗದಲ್ಲಿ ಒಲಾ ಕಲೆನಿಸ್ ರವರನ್ನು ನೇಮಕ ಮಾಡುವುದಾಗಿ ತಿಳಿಸಿತ್ತು. ಜೆಟ್ಸ್ ರವರು ಇತ್ತೀಚಿಗಷ್ಟೆ ಕಂಪನಿಯಿಂದ ಹೊರಹೋಗುವುದಾಗಿ ತಿಳಿಸಿದ್ದರು.

ಜೆಟ್ಸ್ ರವರು ತಮ್ಮ ಅಧಿಕೃತ ಹೇಳಿಕೆ ನೀಡುವ ಕೆಲವೇ ಗಂಟೆಗಳ ಮುಂಚೆ, ಬಿ‍ಎಂ‍‍ಡಬ್ಲ್ಯು ತನ್ನ ಪ್ರತಿಸ್ಪರ್ಧಿ ಕಂಪನಿಯ ಮಾಜಿ ಸಿ‍ಇ‍ಒ ಇರುವ ವೀಡಿಯೊ ಬಿಡುಗಡೆ ಮಾಡಿದೆ. ಜೆಟ್ಸ್ ರವರ ಅಧಿಕಾರವಧಿಯು ಒಪ್ಪಂದದ ಪ್ರಕಾರ ಎರಡು ವರ್ಷಗಳ ಮುಂಚೆಯೇ ವಿವಿಧ ಕಾರಣಗಳಿಗಾಗಿ ಕೊನೆಗೊಂಡಿದೆ.

ಮರ್ಸಿಡಿಸ್ ಬೆಂಝ್ ಸಿ‍ಇ‍ಒ ವಿದಾಯವನ್ನು ಟ್ರೋಲ್ ಮಾಡಿದ ಬಿ‍ಎಂ‍‍ಡಬ್ಲ್ಯು

ಎರಡು ದೊಡ್ಡ ಕಂಪನಿಗಳ ನಡುವೆ ಪೈಪೋಟಿಯಿರುವುದು ಹೊಸ ಸಂಗತಿಯೇನಲ್ಲ. ಆದರೆ ನಿವೃತ್ತಿಯಾಗುತ್ತಿರುವ ಮರ್ಸಿಡಿಸ್ ಬೆಂಝ್‍ನ ಸಿ‍ಇ‍ಒ ಡೈಟರ್ ಜೆಟ್ಸ್ ರವರಿಗೆ ಸಂಬಂಧಿಸಿದಂತೆ ಬಿಡುಗಡೆ ಮಾಡಿರುವ ವೀಡಿಯೊದಲ್ಲಿ, ಮರ್ಸಿಡಿಸ್ ಕಂಪನಿಯನ್ನು ಟ್ರೋಲ್ ಮಾಡಲಾಗಿದೆ.

ಮರ್ಸಿಡಿಸ್ ಬೆಂಝ್ ಸಿ‍ಇ‍ಒ ವಿದಾಯವನ್ನು ಟ್ರೋಲ್ ಮಾಡಿದ ಬಿ‍ಎಂ‍‍ಡಬ್ಲ್ಯು

ಟ್ರೋಲ್ ಮಾಡಲಾಗಿರುವ ಈ ವೀಡಿಯೊದಲ್ಲಿ ಬಿ‍ಎಂ‍‍ಡಬ್ಲ್ಯು ಕಂಪನಿಯು ಜೆಟ್ಸ್ ರವರನ್ನು ಹೋಲುವ ನಟನನ್ನು ಬಳಸಿಕೊಂಡಿದೆ. ಇದರಲ್ಲಿ ತಮ್ಮ ನಿವೃತ್ತಿಯ ನಂತರ ಎದುರಾಳಿ ಕಂಪನಿಯ ಕಾರನ್ನು ಚಾಲನೆ ಮಾಡುತ್ತಿರುವಂತೆ ತೋರಿಸಲಾಗಿದೆ. ಈ ವೀಡಿಯೊ ಜೆಟ್ಸ್ ತಮ್ಮ ಸಹೋದ್ಯೋಗಿಗಳಿಗೆ ವಿದಾಯವನ್ನು ಹೇಳುವುದರೊಂದಿಗೆ ಪ್ರಾರಂಭವಾಗುತ್ತದೆ. ವಿದಾಯ ಹೇಳಿದ ನಂತರ ಅವರು ಕಚೇರಿಯಿಂದ ಹೊರಡಲು ತಯಾರಾಗುತ್ತಾರೆ.

ಮರ್ಸಿಡಿಸ್ ಬೆಂಝ್ ಸಿ‍ಇ‍ಒ ವಿದಾಯವನ್ನು ಟ್ರೋಲ್ ಮಾಡಿದ ಬಿ‍ಎಂ‍‍ಡಬ್ಲ್ಯು

ನಂತರ ತಮ್ಮ ಮನೆಗೆ ಮರ್ಸಿಡಿಸ್ ಬೆಂಝ್‍ನ ಎಸ್ ಕ್ಲಾಸ್ ಕಾರಿನಿಂದ ಹೊರಡುತ್ತಾರೆ. ಮನೆ ತಲುಪಿದ ನಂತರ, ತಮ್ಮ ಗ್ಯಾರೇಜ್‍‍ನಲ್ಲಿರುವ ಆರೇಂಜ್ ಬಣ್ಣದ ಬಿ‍ಎಂ‍‍ಡಬ್ಲ್ಯು ಐ8 ಕಾರನ್ನು ಚಲಾಯಿಸಿಕೊಂಡು ಹೊರಬರುವುದರೊಂದಿಗೆ ವೀಡಿಯೊ ಕೊನೆಯಾಗುತ್ತದೆ. ಈ ವೀಡಿಯೊಗೆ ಫ್ರೀ ಅಟ್ ಲಾಸ್ಟ್ ಎನ್ನುವ ಒಕ್ಕಣೆ ನೀಡಲಾಗಿದೆ.

ಮರ್ಸಿಡಿಸ್ ಬೆಂಝ್ ಸಿ‍ಇ‍ಒ ವಿದಾಯವನ್ನು ಟ್ರೋಲ್ ಮಾಡಿದ ಬಿ‍ಎಂ‍‍ಡಬ್ಲ್ಯು

ಈ ವೀಡಿಯೊ ಒಂದು ರೀತಿಯಲ್ಲಿ ವಿದಾಯದ ವೀಡಿಯೊವಾಗಿದೆ. ವೀಡಿಯೊದ ಕೊನೆಯಲ್ಲಿ ಜೆಟ್ಸ್ ರವರಿಗೆ ಧನ್ಯವಾದ ಸಲ್ಲಿಸುತ್ತಾ, ಥಾಂಕ್ಯೂ ಡೈಟರ್ ಜೆಟ್ಸ್, ಇಷ್ಟು ವರ್ಷಗಳ ಕಾಲ ಪ್ರೇರಣೆಯ ಪೈಪೋಟಿ ನೀಡಿದ್ದಕ್ಕೆ ಧನ್ಯವಾದ ಎಂದು ತೋರಿಸಲಾಗುತ್ತದೆ.

MOST READ: ಸ್ಮಾರ್ಟ್ ಹೈಬ್ರಿಡ್ ಟೆಕ್ನಾಲಜಿಯೊಂದಿಗೆ ಮಾರಾಟದಲ್ಲಿ ಮಿಂಚುತ್ತಿದೆ ಮಾರುತಿ ಬಲೆನೊ

ಈ ವೀಡಿಯೊವನ್ನು 2.72 ಮಿಲಿಯನ್‍‍ಗೂ ಹೆಚ್ಚು ಬಾರಿ ವೀಕ್ಷಿಸಲಾಗಿದ್ದರೆ, 28,762 ಕ್ಕೂ ಹೆಚ್ಚು ಲೈಕ್ಸ್ ಪಡೆದಿದೆ. ಟ್ವಿಟರ್ ಸಂಸ್ಥೆ ಬಿ‍ಎಂ‍‍ಡಬ್ಲ್ಯು ಕಂಪನಿಯ ಕ್ರಿಯೆಟಿವಿಟಿಯನ್ನು ಶ್ಲಾಘಿಸಿದೆ. ಮರ್ಸಿಡಿಸ್ ಬೆಂಝ್ ಕಂಪನಿಯು ಸಹ ಈ ಟ್ರೋಲ್‍‍ಗೆ ತಿರುಗೇಟು ನೀಡಿದೆ. ಕಂಪನಿಯು ತಮ್ಮ ಟ್ವಿಟರ್ ಖಾತೆಯಲ್ಲಿ ನಮ್ಮ ಬಾಸ್ ನಿಜವಾದ ಹಾರ್ಸ್ ಪವರ್ ಅನ್ನು ಚಾಲನೆ ಮಾಡಲಿದ್ದಾರೆ, ನಿಮ್ಮ ಗೌರವಕ್ಕೆ ಹಾಗೂ ಪೈಪೋಟಿಗೆ ಧನ್ಯವಾದ ಎಂದು ಬರೆದುಕೊಂಡಿದೆ.

MOST READ: ಸಿಸಿಟಿವಿಯಿಂದಾಗಿ ಕಡಿಮೆಯಾದ ಸಿಗ್ನಲ್ ಜಂಪ್ ಪ್ರಕರಣಗಳು

ಮರ್ಸಿಡಿಸ್ ಬೆಂಝ್ ಸಿ‍ಇ‍ಒ ವಿದಾಯವನ್ನು ಟ್ರೋಲ್ ಮಾಡಿದ ಬಿ‍ಎಂ‍‍ಡಬ್ಲ್ಯು

ಡೈಟರ್‍‍ರವರು ಡೈಮ್ಲರ್ ಸೂಪರ್‍‍ವೈಸರಿ ಬೋರ್ಡ್‍‍ನ ಚೇರ್ಮನ್ ಆಗಿ ಮನ್‍‍ಫ್ರೆಡ್ ಬಿಷಪ್‍‍ರವರ ಜಾಗಕ್ಕೆ ನೇಮಕಗೊಂಡಿದ್ದಾರೆ. ಆದರೆ ಈ ಹುದ್ದೆಯನ್ನು ಡೈಟರ್‍‍ರವರು 2021ರಲ್ಲಿ ಅಲಂಕರಿಸಲಿದ್ದಾರೆ.

MOST READ: ಯಾವ ಯಾವ ರಾಜಕಾರಣಿಗಳ ಬಳಿ ಯಾವೆಲ್ಲಾ ಐಷಾರಾಮಿ ಕಾರುಗಳಿವೆ ಗೊತ್ತಾ?

ಮರ್ಸಿಡಿಸ್ ಬೆಂಝ್ ಸಿ‍ಇ‍ಒ ವಿದಾಯವನ್ನು ಟ್ರೋಲ್ ಮಾಡಿದ ಬಿ‍ಎಂ‍‍ಡಬ್ಲ್ಯು

ಡೈಟರ್ ಜೆಟ್ಸ್ ರವರು ಡೈಮ್ಲರ್ ಬೆಂಜ್ ಕಂಪನಿಗೆ 1976ರಲ್ಲಿ ಸೇರಿ ಕಂಪನಿಯ ಭಾಗವೇ ಆಗಿದ್ದರು. 2000 ನೇ ಇಸವಿಯಲ್ಲಿ ಅವರು ಕ್ರಿಸ್ಲರ್ ಗ್ರೂಪ್‍‍ನ ಸಿ‍ಇ‍ಒ ಹಾಗೂ ಅಧ್ಯಕ್ಷರಾದರು. 2006ರಲ್ಲಿ ಚೇರ್ಮನ್ ಹುದ್ದೆಗೆ ಬಡ್ತಿ ಪಡೆದರು. ಡೈಮ್ಲರ್ ಹಾಗೂ ಕ್ರಿಸ್ಲರ್ ಕಂಪನಿಗಳು 1998ರಲ್ಲಿ ಒಂದುಗೂಡಿದವು. ಟೈಮ್ ಮ್ಯಾಗಜೀನ್, 2006ರಲ್ಲಿ ಜೆಟ್ಸ್ ರವರಿಗೆ ಅತಿ ಯಶಸ್ವಿ ಉದ್ಯಮಿ ಎಂಬ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ.

Most Read Articles

Kannada
English summary
BMW trolls Mercedes former CEO - Read in kannada
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X