ಜುಲೈ 25ಕ್ಕೆ ಬಿಡುಗಡೆಯಾಗಲಿದೆ ಕೋಟಿ ಮೌಲ್ಯದ ಬಿಎಂಡಬ್ಲ್ಯು 7 ಸೀಟರ್ ಎಸ್‌ಯುವಿ..!

ಬಿಎಂಡಬ್ಲ್ಯು ನಿರ್ಮಾಣದ ಮೊದಲ 7 ಸೀಟರ್ ಎಸ್‌ಯುವಿ ಮಾದರಿಯಾದ ಎಕ್ಸ್7 ಐಷಾರಾಮಿ ಕಾರು ಹಲವು ವಿಶೇಷತೆಗಳಿಗೆ ಕಾರಣವಾಗಿದ್ದು, ಸದ್ಯ ಭಾರತದಲ್ಲಿ ರೋಡ್ ಟೆಸ್ಟಿಂಗ್ ಪ್ರಕ್ರಿಯೆಯಲ್ಲಿ ಭಾಗಿಯಾಗಿರುವ ಹೊಸ ಕಾರು ಮುಂದಿನ ತಿಂಗಳು ಜುಲೈ 25ರಂದು ಅಧಿಕೃತವಾಗಿ ಬಿಡುಗಡೆಯಾಗುವುದು ಪಕ್ಕಾ ಆಗಿದೆ.

ಜುಲೈ 25ಕ್ಕೆ ಬಿಡುಗಡೆಯಾಗಲಿದೆ ಕೋಟಿ ಮೌಲ್ಯದ ಬಿಎಂಡಬ್ಲ್ಯು 7 ಸೀಟರ್ ಎಸ್‌ಯುವಿ..!

ಜನಪ್ರಿಯ ಎಕ್ಸ್ ರೇಂಜ್ ಎಸ್‌ಯುವಿ ಕಾರುಗಳ ಸರಣಿಯಲ್ಲಿ ಇದೇ ಮೊದಲ ಬಾರಿಗೆ 7 ಸೀಟರ್ ಆಸನವುಳ್ಳ ಎಕ್ಸ್7 ಕಾರು ಮಾದರಿಯನ್ನು ಹೊರತರುತ್ತಿರುವ ಬಿಎಂಡಬ್ಲ್ಯು ಸಂಸ್ಥೆಯು ಐಷಾರಾಮಿ ಎಸ್‌ಯುವಿ ವಿಭಾಗದಲ್ಲಿ ಹೊಸ ಸಂಚಲನ ಸೃಷ್ಠಿಸಿದ್ದು, ಅತ್ಯಾಧುನಿಕ ತಾಂತ್ರಿಕ ಸೌಲಭ್ಯಗಳನ್ನು ಹೊಂದಿರುವ ಈ ಹೊಸ ಕಾರು ಭಾರತದಲ್ಲಿ ಮಾತ್ರವಲ್ಲದೇ ವಿಶ್ವದ ಪ್ರಮುಖ ರಾಷ್ಟ್ರಗಳಲ್ಲಿ ಬಿಡುಗಡೆಯಾಗುತ್ತಿರುವುದು ಹೊಸ ಅಲೆಗೆ ಕಾರಣವಾಗಿದೆ.

ಜುಲೈ 25ಕ್ಕೆ ಬಿಡುಗಡೆಯಾಗಲಿದೆ ಕೋಟಿ ಮೌಲ್ಯದ ಬಿಎಂಡಬ್ಲ್ಯು 7 ಸೀಟರ್ ಎಸ್‌ಯುವಿ..!

ಮಾಹಿತಿಗಳ ಪ್ರಕಾರ, ಹೊಸ ಬಿಎಂಡಬ್ಲ್ಯು ಎಕ್ಸ್7 ಕಾರು ಒಂದು ಪೆಟ್ರೋಲ್ ಮಾದರಿಯಲ್ಲಿ ಹಾಗು ಎರಡು ಡೀಸೇಲ್ ಮಾದರಿಯ ಎಂಜಿನ್ ಆಯ್ಕೆಗಳಲ್ಲಿ ಲಭ್ಯವಿರಲಿದ್ದು, ಭವಿಷ್ಯದಲ್ಲಿ ಮತ್ತೆರಡು ಎರಡು ಪೆಟ್ರೋಲ್ ಹಾಗು ಎರಡು ಡೀಸೆಲ್ ಎಂಜಿನ್ ಆಯ್ಕೆಗಳು ಲಭ್ಯವಿರಲಿವೆ ಎನ್ನಲಾಗಿದೆ.

ಜುಲೈ 25ಕ್ಕೆ ಬಿಡುಗಡೆಯಾಗಲಿದೆ ಕೋಟಿ ಮೌಲ್ಯದ ಬಿಎಂಡಬ್ಲ್ಯು 7 ಸೀಟರ್ ಎಸ್‌ಯುವಿ..!

ಸದ್ಯಕ್ಕೆ ಬಿಡುಗಡೆಯಾಗಲಿರುವ ಪೆಟ್ರೊಲ್ ಆಧರಿತ ಕಾರು 340-ಬಿಎಚ್‌ಪಿ ಉತ್ಪಾದನೆಯ 3.0-ಲೀಟರ್ ಸ್ಟೈಟ್ ಸಿಕ್ಸ್ ಟರ್ಬೋ ಪೆಟ್ರೋಲ್ ಎಂಜಿನ್ ಹೊಂದಿದ್ದಲ್ಲಿ ಡಿಸೇಲ್ ಎಂಜಿನ್‌ ಪ್ರೇರಿತ ಮತ್ತೆರಡು ಕಾರುಗಳು ಸಹ 3.0-ಲೀಟರ್ ಎಂಜಿನ್‌ನೊಂದಿಗೆ 265-ಬಿಎಚ್‌ಪಿ ಮತ್ತು ಟಾಪ್ ಎಂಡ್ ಮಾದರಿಯು 400-ಬಿಎಚ್‌ಪಿ ಉತ್ಪಾದನೆ ಮಾಡಬಲ್ಲ ಸಾಮರ್ಥ್ಯ ಹೊಂದಿವೆ.

ಜುಲೈ 25ಕ್ಕೆ ಬಿಡುಗಡೆಯಾಗಲಿದೆ ಕೋಟಿ ಮೌಲ್ಯದ ಬಿಎಂಡಬ್ಲ್ಯು 7 ಸೀಟರ್ ಎಸ್‌ಯುವಿ..!

ಇನ್ನು ಹೊಸ ಎಕ್ಸ್7 ಕಾರು 5151-ಎಂಎಂ ಉದ್ದ, 1805-ಎಂಎಂ ಎತ್ತರ, 2000-ಎಂಎಂ ಅಗಲ ಮತ್ತು 3105-ಎಂಎಂ ವ್ಹೀಲ್‍ಬೇಸ್ ಅನ್ನು ಪಡೆದುಕೊಂಡಿದ್ದು, ಸದ್ಯ ಮಾರುಕಟ್ಟೆಯಲ್ಲಿರುವ ಎಕ್ಸ್6 ಕಾರಿಗಿಂತಲೂ 9-ಎಎಂ ಹೆಚ್ಚಿನ ಉದ್ದ ಮತ್ತು 3 ಇಂಚಿನಷ್ಟು ಕಡಿಮೆ ವ್ಹೀಲ್‍ಬೇಸ್ ಅನ್ನು ಪಡೆದುಕೊಂಡಿರಲಿದ್ದು, ಎಕ್ಸ್‌ ಸ್ಯಾಂಡ್, ಎಕ್ಸ್ ಗ್ರ್ಯಾವೆಲ್, ಎಕ್ಸ್‌ ರಾಕ್ಸ್ ಮತ್ತು ಎಕ್ಸ್‌ ಸ್ನೋ ಎನ್ನುವ ಡ್ರೈವಿಂಗ್ ಮೋಡ್‌ಗಳನ್ನು ಹೊಂದಿರುವ ಹೊಸ ಕಾರು 8 ಸ್ಪೀಡ್ ಆಟೋಮ್ಯಾಟಿಕ್ ಗೇರ್‍‍ಬಾಕ್ಸ್ ನೊಂದಿಗೆ ಆಫ್ ರೋಡ್ ಕೌಶಲ್ಯ ಪ್ರದರ್ಶನದಲ್ಲೂ ಸಾಕಷ್ಟು ಗಮನಸೆಳೆಯಲಿವೆ.

ಜುಲೈ 25ಕ್ಕೆ ಬಿಡುಗಡೆಯಾಗಲಿದೆ ಕೋಟಿ ಮೌಲ್ಯದ ಬಿಎಂಡಬ್ಲ್ಯು 7 ಸೀಟರ್ ಎಸ್‌ಯುವಿ..!

ಕಾರಿನ ಹೊರ ವಿನ್ಯಾಸ ಬಿಎಂಡಬ್ಲ್ಯು ಎಕ್ಸ್7 ಎಸ್‍ಯುವಿ ಕಾರು ಮುಂಭಾಗದಲ್ಲಿ ಚೌಕಾಕಾರದ ಮತ್ತು ಉದ್ದನೆಯ ಸಿಗ್ನೇಚರ್ ಗ್ರೀಲ್ ಅನ್ನು ಪಡೆದುಕೊಂಡಿರಲಿದ್ದು, ಬಿಎಂಡಬ್ಲ್ಯು ನಿರ್ಮಾಣದ ಬೇರೆ ಯಾವುದೇ ಕಾರಿಗೂ ನೀಡಲಾಗದ ಗ್ರೀಲ್ ಅನ್ನು ಇದರಲ್ಲಿ ಅಳವಡಿಸಲಾಗಿದ್ದು, ಹಾಗೆಯೇ ಎಲ್ಇಡಿ ಹೆಡ್‍ಲ್ಯಾಂಪ್‍ಗಳನ್ನು ಸಹ ಒದಗಿಸಲಾಗಿದೆ. ಭವಿಷ್ಯದಲ್ಲಿ ಲೇಜರ್ ಟೆಕ್ ಹೆಡ್‍ಲ್ಯಾಂಪ್‍ಗಳನ್ನು ಆಯ್ಕೆಯಾಗಿ ನೀಡಲಾಗುವುದು ಎನ್ನಲಾಗಿದ್ದು, ಈ ಲೇಜರ್ ಟೆಕ್ ಹೆಡ್‍ಲ್ಯಾಂಪ್‍ಗಳು ಸಾಧಾರಣ ಎಲ್ಇಡಿ ಹೆಡ್‍ಲ್ಯಾಂಪ್‍ಗಳಿಗಿಂತಲೂ ಎರಡು ಪಟ್ಟು ಅಧಿಕ ಬೆಳಕನ್ನು ಹೊರಸೂಸಬಲ್ಲವು.

ಜುಲೈ 25ಕ್ಕೆ ಬಿಡುಗಡೆಯಾಗಲಿದೆ ಕೋಟಿ ಮೌಲ್ಯದ ಬಿಎಂಡಬ್ಲ್ಯು 7 ಸೀಟರ್ ಎಸ್‌ಯುವಿ..!

ಜೊತೆಗೆ ಈ ಕಾರಿನ ಹಿಂಭಾಗದಲ್ಲಿ 2 ಸೆಕ್ಷನ್ ವಿಭಜಿತ ಟೈಲ್‍ಗೇಟ್ ವಿನ್ಯಾಸವನ್ನು ನೀಡಲಾಗಿದ್ದು, 326-ಲೀಟರ್‍‍ನಷ್ಟು ಬೂಟ್ ಸ್ಪೇಸ್ ಅನ್ನು ಇದು ಪಡೆದುಕೊಳ್ಳಲಿದೆ. ಇದಲ್ಲದೇ ಎರಡನೆಯ ಮತ್ತು ಮೂರನೆಯ ಸೀಟ್ ಅನ್ನು ಫೋರ್ಡ್ ಮಾಡಿದಲ್ಲಿ ಸುಮಾರು 2120-ಲೀಟರ್‍‍ನಷ್ಟು ಹೆಚ್ಚುವರಿ ಸ್ಥಳಾವಕಾಶ ಮಾಡಿಕೊಳ್ಳಬಹುದು.

ಜುಲೈ 25ಕ್ಕೆ ಬಿಡುಗಡೆಯಾಗಲಿದೆ ಕೋಟಿ ಮೌಲ್ಯದ ಬಿಎಂಡಬ್ಲ್ಯು 7 ಸೀಟರ್ ಎಸ್‌ಯುವಿ..!

ಕಾರಿನ ಒಳವಿನ್ಯಾಸ

ಮೇಲೆ ಹೇಳಿದ ಹಾಗೆ ಇದು ಬಿಎಂಡಬ್ಲ್ಯು ಮೊದಲ 7 ಆಸನವುಳ್ಳ ಎಸ್‍ಯುವಿ ಕಾರಾಗಿದ್ದು, ಪ್ರಯಾಣಕ್ಕೆ ಅನುಕೂಲಕರವಾಗುವಂತೆ ಮಧ್ಯದಲ್ಲಿರುವ ಸೀಟ್‍‍ಗಳನ್ನು ಕೊಂಚ ದೊಡ್ಡದಾಗಿಯೇ ನೀಡಲಾಗಿದೆ. ಜೊತೆಗೆ ಈ ಕಾರು ಫೋರ್ ಜೋನ್ ಕ್ಲೈಮೇಟ್ ಕಂಟ್ರೋಲ್, ಏಂಬಿಯೆಂಟ್ ಲೈಟ್ನಿಂಗ್, 3 ಸೆಕ್ಷನ್ ಪನೋರಮಿಕ್ ಗ್ಲಾಸ್ ರೂಫ್ ಅನ್ನು ಸ್ಟ್ಯಾಂಡರ್ಡ್ ಆಗಿ ಪಡೆದಿದ್ದು, 12-ಇಂಚಿನ ಟ್ವಿನ್ ಸ್ಕ್ರೀನ್‍ಗಳನ್ನು ಸಹ ಒದಗಿಸಲಾಗಿದೆ. ಇಷ್ಟು ಮಾತ್ರವಲ್ಲದೇ ಪನೋರಮಿಕ್ ಗ್ಲಾಸ್ ರೂಫ್ ಸ್ಕೈ ಆನ್, ಬೋವರ್ಸ್ ಮತ್ತು ವಿಲ್ಕಿಂನ್ಸ್ ಡೈಮಂಡ್-ಸರೌಂಡ್ ಸಿಸ್ಟಂ, ರಿರಯ್ ಸೀಟ್ ಎಂಟರ್‍‍ಟೈನೆಂಟ್ ಮತ್ತು ಗ್ಲಾಸ್ ಅಪ್ಲಿಕೇಶನ್ ಕಂಟ್ರೋಲ್‍ಗಳನ್ನು ಅಳವಡಿಸಲಾಗಿದೆ.

MOST READ: ರೂ. 1,300 ಕೋಟಿ ವೆಚ್ಚದಲ್ಲಿ ಐಷಾರಾಮಿ ಖಾಸಗಿ ಜೆಟ್ ಖರೀದಿಸಿದ ರ‍್ಯಾಪ್ ಸಿಂಗರ್

ಜುಲೈ 25ಕ್ಕೆ ಬಿಡುಗಡೆಯಾಗಲಿದೆ ಕೋಟಿ ಮೌಲ್ಯದ ಬಿಎಂಡಬ್ಲ್ಯು 7 ಸೀಟರ್ ಎಸ್‌ಯುವಿ..!

ಇದರಿಂದ ಪ್ರಸ್ತುತ ಮಾರುಕಟ್ಟೆಯಲ್ಲಿರುವ ಆಡಿ ಕ್ಯೂ7, ಮರ್ಸಿಡಿಸ್ ಬೆಂಝ್ ಜಿಎಲ್ಎಸ್ ಮತ್ತು ಲ್ಯಾಂಡ್ ರೋವರ್ ಡಿಸ್ಕವರಿ ಕಾರುಗಳಿಗೆ ಪೈಪೋಟಿ ನೀಡುವ ಎಲ್ಲಾ ಗುಣಲಕ್ಷಣಗಳನ್ನು ಹೊಂದಿರುವ ಎಕ್ಸ್‌7 ಕಾರಿನಲ್ಲಿ ಪ್ರಯಾಣಿಕರ ಸುರಕ್ಷತೆಗೂ ಹೆಚ್ಚಿನ ಒತ್ತು ನೀಡಲಾಗಿದ್ದು, 9 ಏರ್‌‌ಬ್ಯಾಗ್, ಆಲ್ ವೀಲ್ಹ್ ಡ್ರೈವ್ ಟೆಕ್ನಾಲಜಿ, 360 ಡಿಗ್ರಿ ವ್ಯೂ ಕ್ಯಾಮೆರಾ ಸೇರಿದಂತೆ ಹಲವು ಅತ್ಯಾಧುನಿಕ ತಾಂತ್ರಿಕ ಸೌಲಭ್ಯಗಳಿವೆ. ಹೀಗಾಗಿ ಕಾರಿನ ಬೆಲೆಯು ಎಕ್ಸ್‌ಶೋರೂಂ ಪ್ರಕಾರ ರೂ. 1.15 ಕೋಟಿಯಿಂದ ರೂ.1.30 ಕೋಟಿ ಇರಬಹುದೆಂದು ಅಂದಾಜಿಸಲಾಗಿದೆ.

Most Read Articles

Kannada
English summary
BMW X7 India-Launch Date Confirmed — The First-Ever 7-Seater Beemer Will Soon Be Available In India.
Story first published: Monday, June 24, 2019, 18:05 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X