Just In
- 25 min ago ಇನ್ಮುಂದೆ ಟೋಲ್ ಪ್ಲಾಜಾಗಳು ಕಣ್ಮರೆ: ಖುಷಿ ಪಡುವ ಮುನ್ನ ಈ ಸುದ್ದಿ ನೋಡಿ...
- 49 min ago Bullet Train: ಭಾರತದಲ್ಲಿ ಮೊದಲ ಬಾರಿಗೆ ನವೀನ ರೀತಿಯ ಹಳಿ ಬಳಕೆ.. 320 ಕಿ.ಮೀ ವೇಗದಲ್ಲಿ ಓಡುತ್ತೆ ರೈಲು!
- 49 min ago ಬ್ರಿಟೀಷ್ ಮಾರುಕಟ್ಟೆಯನ್ನು ಆಳಲು ಹೊರಟ ಭಾರತೀಯ ಬೈಕ್: ಯುಕೆ ನಲ್ಲಿ ಟ್ರಯಂಫ್ಗೆ ನೇರ ಹಣಾಹಣಿ!
- 1 hr ago Tata Curvv Vs Citroen Basalt: ಟಾಟಾಗೆ ಸೆಡ್ಡು ಹೊಡೆಯುವ ತಾಕತ್ತಿದೆಯೇ?
Don't Miss!
- Movies ಬಯಸಿದ್ದು ಬಾಲಿವುಡ್ ಸಿನಿಮಾ, ಗೆದ್ದಿದ್ದು ತೆಲುಗು ಸಿನಿಮಾ; ಈ ನಟಿಯ ಭವಿಷ್ಯವೇನು?
- News IT Company: ಐಟಿ-ಬಿಟಿ ಕಂಪನಿಗಳಿಗೆ ಜಲಮಂಡಳಿಯ ನೀರಿನ ಭರವಸೆ
- Sports CSK vs RCB: ದಾಖಲೆಯ ಪುಟ ಸೇರಿದ ಉದ್ಘಾಟನಾ ಪಂದ್ಯ: 16.8 ಕೋಟಿ ಜನರಿಂದ ವೀಕ್ಷಣೆ
- Finance ಮೃತರ ಖಾತೆಯಲ್ಲಿರುವ ಹಣವನ್ನು ಕುಟುಂಬಸ್ಥರು ಡ್ರಾ ಮಾಡಬಹುದಾ, ಬ್ಯಾಂಕ್ ನಿಯಮಾವಳಿ ಏನು ಹೇಳುತ್ತೆ?
- Lifestyle ಬಾಯಲ್ಲಿ ನೀರು ತರಿಸುವ ಮಾವಿನ ಕಾಯಿ ಚಟ್ನಿ..! 5 ನಿಮಿಷದಲ್ಲಿ ರೆಡಿ..!
- Technology Motorola: ಮೊಟೊರೊಲಾ ಎಡ್ಜ್ 50 ಅಲ್ಟ್ರಾ ಸ್ಮಾರ್ಟ್ಫೋನ್ ಫೀಚರ್ಸ್ ಲೀಕ್! ವಿಶೇಷತೆ ಏನು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಬಿಡುಗಡೆಗೆ ಸಿದ್ದವಾದ ಬಿಎಸ್-6 ಎಂಜಿನ್ ಪ್ರೇರಿತ ಮಾರುತಿ ಸುಜುಕಿ ಇಗ್ನಿಸ್ ಫೇಸ್ಲಿಫ್ಟ್
ಬಿಎಸ್-4 ಎಂಜಿನ್ ಮಾದರಿಗಳಿಂದ ಬಿಎಸ್-6 ವೈಶಿಷ್ಟ್ಯತೆಗೆ ಅನುಗುಣವಾಗಿ ಹೊಸ ಕಾರು ಆವೃತ್ತಿಗಳನ್ನು ಉನ್ನತಕರಿಸುವ ಪ್ರಕ್ರಿಯೆಗೆ ಮಾರುತಿ ಸುಜುಕಿ ಸಂಸ್ಥೆಯು ಈಗಾಗಲೇ ಚಾಲನೆ ನೀಡಿದ್ದು, ಬಲೆನೊ, ಸ್ವಿಫ್ಟ್, ಆಲ್ಟೋ ಮತ್ತು ವ್ಯಾಗನ್ಆರ್ ನಂತರ ಇದೀಗ ಮತ್ತೊಂದು ಜನಪ್ರಿಯ ಮಾದರಿಯಾದ ಇಗ್ನಿಸ್ ಫೇಸ್ಲಿಫ್ಟ್ ಆವೃತ್ತಿಯನ್ನು ಸಹ ಬಿಎಸ್-6 ಎಂಜಿನ್ನೊಂದಿಗೆ ಬಿಡುಗಡೆಗೊಳಿಸುವ ಯೋಜನೆಯಲ್ಲಿದೆಯೆಂತೆ.
ಹೌದು, 2020ರ ಏಪ್ರಿಲ್ 1ರಿಂದ ಕಡ್ಡಾಯಗೊಳ್ಳಲಿರುವ ಬಿಎಸ್-6 ನಿಯಮಕ್ಕೆ ಅನುಗುಣವಾಗಿ ಬಹುತೇಕ ಸಂಸ್ಥೆಗಳು ಹೊಸ ಎಂಜಿನ್ ಮಾದರಿಯನ್ನು ಬಿಡುಗಡೆಗೊಳಿಸಲು ಸಜ್ಜಾಗುತ್ತಿದ್ದು, ಇದರಲ್ಲಿ ಮಾರುತಿ ಸುಜುಕಿ ಸಂಸ್ಥೆಯು ಇತರೆ ಆಟೋ ಉತ್ಪಾದನಾ ಸಂಸ್ಥೆಗಳಿಂತಲೂ ಒಂದು ಹೆಜ್ಜೆ ಮುಂದೆ ಹೋಗಿ ಡೆಡ್ಲೈನ್ಗೂ ಮುನ್ನವೇ ಬಿಎಸ್-6 ಕಾರುಗಳ ಬಿಡುಗಡೆಗೆ ಚಾಲನೆ ನೀಡಿದೆ.
ದೇಶಾದ್ಯಂತ ಬಿಎಸ್-6 ಪ್ರೇರಿತ ವಾಹನಗಳನ್ನು ಕಡ್ಡಾಯಗೊಳಿಸುವ ಸಂಬಂಧ ಕೇಂದ್ರ ಸರ್ಕಾರವು ಮಹತ್ವದ ಯೋಜನೆಯೊಂದನ್ನು ಜಾರಿಗೊಳಿಸುತ್ತಿದ್ದು, ಅವಧಿಗೂ ಮುನ್ನವೇ ಮಾರುತಿ ಸುಜುಕಿ ಸಂಸ್ಥೆಯು ಬಿಎಸ್-6 ಎಂಜಿನ್ ಪ್ರೇರಿತ ಕಾರುಗಳನ್ನು ಬಿಡುಗಡೆ ಮಾಡುತ್ತಿರುವುದು ಹೊಸ ಸಂಚಲನಕ್ಕೆ ಕಾರಣವಾಗಿದೆ.
ಕಳೆದ ತಿಂಗಳ ಹಿಂದಷ್ಟೇ ಬಿಎಸ್-6 ಪ್ರೇರಿತ ಬಲೆನೊ ಪೆಟ್ರೋಲ್ ಆವೃತ್ತಿಯನ್ನು ಬಿಡುಗಡೆ ಮಾಡಿದ್ದ ಮಾರುತಿ ಸುಜುಕಿ ಸಂಸ್ಥೆಯು ಕಳೆದ ವಾರಷ್ಟೇ ಸ್ವಿಫ್ಟ್ ಮತ್ತು ವ್ಯಾಗನ್ಆರ್ ಕಾರುಗಳ ಪೆಟ್ರೋಲ್ ಮಾದರಿಯನ್ನು ಹೊಸ ನಿಯಮಗಳಿಗೆ ಉನ್ನತಿಕರಿಸಿ ಬಿಡುಗಡೆ ಮಾಡಿತ್ತು. ಇದೀಗ ಮುಂಬರುವ ದಿನಗಳಲ್ಲಿ ಬಿಡುಗಡೆಗೆ ಸಿದ್ದವಾಗಿರುವ ಇಗ್ನಿಸ್ ಫೇಸ್ಲಿಫ್ಟ್ ಕಾರನ್ನು ಸಹ ಹೊಸ ನಿಯಮದಂತೆ ಬಿಡುಗಡೆಗೊಳಿಸುತ್ತಿದೆ.
ಹೊಸ ನಿಯಮದಿಂದಾಗಿ ಇಗ್ನಿಸ್ ಫೇಸ್ಲಿಫ್ಟ್, ಸ್ವಿಫ್ಟ್ ಮತ್ತು ವ್ಯಾಗನ್ಆರ್ ಪೆಟ್ರೋಲ್ ಮಾದರಿಗಳಲ್ಲಿ ಕೆಲವು ತಾಂತ್ರಿಕ ಬದಲಾವಣೆಗಳಾಗಿದ್ದು, ಸುಧಾರಿತ ಎಂಜಿನ್ ಜೊತೆಗೆ ಕೆಲವು ಸುಧಾರಿತ ಮಾದರಿಯ ಸುರಕ್ಷಾ ಸೌಲಭ್ಯಗಳನ್ನು ಕಡ್ಡಾಯವಾಗಿ ಜೋಡಣೆ ಹೊಂದಲಿವೆ.
ಹೀಗಾಗಿ ಈ ಹಿಂದಿಗಿಂತಲೂ ಉತ್ತಮ ಪರ್ಫಾಮೆನ್ಸ್ ಪಡೆದುಕೊಳ್ಳಲಿರುವ ಹೊಸ ಬಿಎಸ್-6 ಕಾರುಗಳಲ್ಲಿ ಡ್ಯುಯಲ್ ಚಾನೆಲ್ ಏರ್ಬ್ಯಾಗ್, ಎಬಿಎಸ್ ಜೊತೆ ಇಬಿಡಿ, ರಿಯರ್ ಪಾರ್ಕಿಂಗ್ ಸೆನ್ಸಾರ್, ಸೀಟ್ ಬೆಲ್ಟ್ ರಿಮೆಂಡರ್, ಹೈ ಸ್ಪೀಡ್ ಅಲರ್ಟ್ ಸೇರಿದಂತೆ ಕೆಲವು ಸುರಕ್ಷಾ ಸೌಲಭ್ಯಗಳನ್ನು ಸ್ಟ್ಯಾಂಡರ್ಡ್ ಆಗಿ ನೀಡಲಾಗಿದೆ.
ಜೊತೆಗೆ ಹೊಸ ಎಂಜಿನ್ ಮಾದರಿಯು ಬಿಎಸ್-6 ವೈಶಿಷ್ಟ್ಯತೆಯಿಂದಾಗಿ ಮಾಲಿನ್ಯ ಹೊರಸೂಸುವಿಕೆ ಪ್ರಮಾಣದಲ್ಲಿ ಶೇ.25ರಷ್ಟು ಕಡಿತವಾಗಿದ್ದು, ಈ ಹಿಂದಿಗಿಂತಲೂ ಶೇ.10ರಿಂದ ಶೇ.15 ರಷ್ಟು ಹೆಚ್ಚು ಮೈಲೇಜ್ ನೀಡುವ ಮೂಲಕ ಮತ್ತಷ್ಟು ಹ್ಯಾಚ್ಬ್ಯಾಕ್ ಪ್ರಿಯರನ್ನು ಸೆಳೆಯುವ ತವಕದಲ್ಲಿದೆ.
ಹಾಗೆಯೇ ಬಿಎಸ್-6 ನಿಯಮದಿಂದಾಗಿ ಹೊಸ ಕಾರುಗಳ ಬೆಲೆಯೂ ಕೂಡಾ ತುಸು ದುಬಾರಿಯಾಗಿದ್ದು, ಸುಧಾರಿತ ಎಂಜಿನ್ ಮತ್ತು ಕೆಲವು ಸ್ಟ್ಯಾಂಡರ್ಡ್ ಸುರಕ್ಷಾ ಸೌಲಭ್ಯಗಳನ್ನು ಹೊರತುಪಡಿಸಿ ಯಾವುದೇ ಬದಲಾವಣೆಗಳನ್ನು ತರಲಾಗಿಲ್ಲ.
ಇನ್ನು ಕೇಂದ್ರ ಸರ್ಕಾರವು ಮಾಲಿನ್ಯ ಪ್ರಮಾಣವನ್ನು ತಗ್ಗಿಸುವ ಉದ್ದೇಶದಿಂದ ಬಿಎಸ್-4 ಎಂಜಿನ್ ವಾಹನಗಳ ಮಾರಾಟವನ್ನು ನಿಷೇಧಿಸಿ 2020ರ ಏಪ್ರಿಲ್ 1ರಿಂದಲೇ ಬಿಎಸ್-6 ವಾಹನಗಳ ಮಾರಾಟವನ್ನು ಕಡ್ಡಾಯಗೊಳಿಸುತ್ತಿದ್ದು, ಈ ನಿಟ್ಟಿನಲ್ಲಿ ಮಾರುತಿ ಸುಜುಕಿ ಸಂಸ್ಥೆಯು ಹೊಸ ಎಂಜಿನ್ಗಳನ್ನು ಅವಧಿಗೂ ಮುನ್ನವೇ ಬಿಡುಗಡೆಗೊಳಿಸುತ್ತಿದೆ.
MOST READ: ದಯವಿಟ್ಟು ಇತ್ತ ಗಮನಿಸಿ- ವಾಹನಗಳ ವಿಮಾ ಮೊತ್ತದಲ್ಲಿ ಏರಿಕೆ..!
ಇದರೊಂದಿಗೆ ಬಿಎಸ್-6 ವಾಹನಗಳ ಬೆಲೆಯು ಕೂಡಾ ದುಬಾರಿ ಎನ್ನಿಸಲಿದ್ದು, ಬಿಎಸ್-4 ವಾಹನಗಳ ಬೆಲೆಗಳಿಂತ ಬಿಎಸ್-6 ವಾಹನಗಳ ಬೆಲೆಯೂ ಸರಾಸರಿಯಾಗಿ ರೂ.80 ಸಾವಿರದಿಂದ ರೂ. 2.50 ಲಕ್ಷದಷ್ಟು ಹೆಚ್ಚುವರಿ ಬೆಲೆ ಪಡೆದುಕೊಳ್ಳಲಿವೆ.