ಹೆಚ್ಚಾಗಲಿದೆ ಬಿ‍ಎಸ್ 6 ಪೆಟ್ರೋಲ್ ಹಾಗೂ ಡೀಸೆಲ್ ದರ

ಬಿ‍ಎಸ್ 6 ಇಂಧನ ದರಗಳು ಹೊಸ ಮಾಲಿನ್ಯ ನಿಯಮಗಳು ಜಾರಿಗೆ ಬಂದ ಬಳಿಕ ಹೆಚ್ಚಾಗಲಿವೆ. ಎಲೆಕ್ಟ್ರಿಕ್ ವಾಹನಗಳ ಬಗೆಗಿನ ಪ್ರಚಾರಗಳೆನೇ ಇದ್ದರೂ, ಬಿ‍ಎಸ್6 ನಿಯಮಗಳು ಜಾರಿಯಾದ ನಂತರ ದೇಶದಲ್ಲಿರುವ ಪೆಟ್ರೋಲ್, ಡೀಸೆಲ್ ಹಾಗೂ ಸಿ‍ಎನ್‍‍ಜಿ ಚಾಲಿತ ವಾಹನಗಳು 2020ರ ಏಪ್ರಿಲ್‍‍ನಿಂದ, ಸ್ವಚ್ಛವಾದ ಹಾಗೂ ಹಸಿರುಮಯವಾದ ವಾತಾವರಣಕ್ಕೆ ಬದಲಾಗಲಿವೆ. ವಾಹನಗಳ ತಯಾರಕರು, ಹಾಗೂ ಇವರ ಜೊತೆಗಿರುವ ಕಂಪನಿಗಳು ಬಿಎಸ್6 ಮಾಲಿನ್ಯ ನಿಯಮಗಳ ಜಾರಿಗೆ ವಿಧಿಸಲಾಗಿರುವ ಗಡುವನ್ನು ಮುಟ್ಟಲು ತೀವ್ರವಾದ ಒತ್ತಡದಲ್ಲಿವೆ.

ಹೆಚ್ಚಾಗಲಿದೆ ಬಿ‍ಎಸ್ 6 ಪೆಟ್ರೋಲ್ ಹಾಗೂ ಡೀಸೆಲ್ ದರ

ಬಿ‍ಎಸ್6 ಮಾಲಿನ್ಯ ನಿಯಮಗಳಿಗೆ ಹೊಂದಿಕೊಳ್ಳಬೇಕಾದರೆ, ವಾಹನಗಳಲ್ಲಿ ಪರಿಷ್ಕರಿಸಿದ ಇಂಧನವನ್ನು ಬಳಸಬೇಕಾಗುತ್ತದೆ. ಇದು ಕಂಪನಿಗಳ ಚಿಂತೆಗೆ ಕಾರಣವಾಗಿದೆ. ಬಹುತೇಕ ಆಯಿಲ್ ರಿಫೈನರಿಗಳು, ಸ್ವಚ್ಛವಾದ ಹಾಗೂ ಪರಿಷ್ಕರಿಸಿದ ಬಿ‍ಎಸ್6 ಇಂಧನ ತಯಾರಿಸಲು ಅನುಕೂಲವಾಗಲೆಂದು ತಮ್ಮ ಘಟಕಗಳನ್ನು ಅಭಿವೃದ್ಧಿಪಡಿಸುತ್ತಿದ್ದು, ರೂ.30,000 ಕೋಟಿ ಖರ್ಚು ಮಾಡಿವೆ ಎಂದು ತಿಳಿದು ಬಂದಿದೆ.

ಹೆಚ್ಚಾಗಲಿದೆ ಬಿ‍ಎಸ್ 6 ಪೆಟ್ರೋಲ್ ಹಾಗೂ ಡೀಸೆಲ್ ದರ

ಈ ವೆಚ್ಚವನ್ನು ಗ್ರಾಹಕರ ಮೇಲೆ ಹೇರಲಾಗುವುದು. ಇದರಿಂದಾಗಿ ಪೆಟ್ರೋಲ್ ಹಾಗೂ ಡೀಸೆಲ್‍‍ಗಳ ಬೆಲೆ ಏರಿಕೆಯಾಗುವುದು ಖಚಿತವಾಗಿದೆ. ಹಿಂದೂಸ್ಥಾನ್ ಟೈಮ್ಸ್ ವರದಿಗಳ ಪ್ರಕಾರ, ತೈಲ ಕಂಪನಿಗಳು ತೈಲ ಉತ್ಪಾದನೆಯ ವೆಚ್ಚವನ್ನು ಗ್ರಾಹಕರ ಮೇಲೆ ಹೇರುವುದರಿಂದ, 2020ರ ಏಪ್ರಿಲ್‍‍ನಿಂದ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಗಳಲ್ಲಿ ಏರಿಕೆಯಾಗಲಿದೆ ಎಂದು ಹೇಳಲಾಗಿದೆ. ಸರ್ಕಾರಿ ತೈಲ ಕಂಪನಿಯ ಹಿರಿಯ ಅಧಿಕಾರಿಯೊಬ್ಬರು ಇದರ ಬಗ್ಗೆ ಮಾತನಾಡಿದ್ದಾರೆ.

ಹೆಚ್ಚಾಗಲಿದೆ ಬಿ‍ಎಸ್ 6 ಪೆಟ್ರೋಲ್ ಹಾಗೂ ಡೀಸೆಲ್ ದರ

ಅವರ ಪ್ರಕಾರ, ನಾವು ಬಿಎಸ್6 ಇಂಧನವನ್ನು ಅಭಿವೃದ್ಧಿಪಡಿಸಲು ದೊಡ್ಡ ಮಟ್ಟದಲ್ಲಿ ಬಂಡವಾಳ ಹೂಡಿಕೆ ಮಾಡಿದ್ದೇವೆ. ನಾವು ಮಾಡಿರುವ ಹೂಡಿಕೆಯ ಲಾಭವನ್ನು ನಾವು ಪಡೆಯಬೇಕಾಗಿದೆ. ಇದು ಲಾಜಿಕ್ ಆಗಿದೆ. ಇದು ಲಾಭ ನಷ್ಟದ ಪ್ರಶ್ನೆಯಲ್ಲ. ನಾವು ಹೂಡಿರುವ ಬಂಡವಾಳವನ್ನು ವಾಪಸ್ ಪಡೆಯಬೇಕಿದೆ ಎಂದು ಹೇಳಿದ್ದಾರೆ. ಕೆಲವು ಮೂಲಗಳ ಪ್ರಕಾರ ಬೆಲೆ ಪ್ರತಿ ಲೀಟರ್‌ಗೆ ಕೆಲವು ಪೈಸೆಗಳಿಂದ ರೂ.2ಗಳವರೆಗೆ ಏರಿಕೆಯಾಗಲಿದೆ.

ಹೆಚ್ಚಾಗಲಿದೆ ಬಿ‍ಎಸ್ 6 ಪೆಟ್ರೋಲ್ ಹಾಗೂ ಡೀಸೆಲ್ ದರ

ಈ ಬೆಲೆ ಹೆಚ್ಚಳವು ಆಟೋಮೊಬೈಲ್ ಕಂಪನಿಗಳಿಗೆ ಖಂಡಿತ ಶುಭ ಸುದ್ದಿಯಲ್ಲ. ಆಟೋ‍‍ಮೊಬೈಲ್ ಉದ್ಯಮವು ಕಳೆದ ಕೆಲವು ತಿಂಗಳುಗಳಿಂದ ನಿರಂತರ ಕುಸಿತ ಕಾಣುತ್ತಿದ್ದು, ಹೆಚ್ಚಿನ ವಾಹನ ಕಂಪನಿಗಳು ನಷ್ಟವನ್ನು ಅನುಭವಿಸುತ್ತಿವೆ. ಆದ ಕಾರಣ, ಈ ಕಂಪನಿಗಳು ಜಿಎಸ್‍‍ಟಿ ಕಡಿತ ಮಾಡಬೇಕೆಂದು ಕೋರಿ ಸರ್ಕಾರಕ್ಕೆ ಮನವಿ ಮಾಡುತ್ತಿವೆ. ಆದರೆ, ಈ ಮನವಿಗೆ ಸರ್ಕಾರವು ಸೂಕ್ತವಾಗಿ ಸ್ಪಂದಿಸಿಲ್ಲ.

ಹೆಚ್ಚಾಗಲಿದೆ ಬಿ‍ಎಸ್ 6 ಪೆಟ್ರೋಲ್ ಹಾಗೂ ಡೀಸೆಲ್ ದರ

ಹೋಂಡಾ ಸಿಟಿ ಮತ್ತು ಮಾರುತಿ ಸುಜುಕಿ ಸಿಯಾಜ್‌ಗೆ ಟಕ್ಕರ್ ನೀಡುತ್ತಿರುವ ಟೊಯೊಟಾ ಯಾರಿಸ್ ಖರೀದಿಗೆ ಈಗಲೇ ಟೆಸ್ಟ್ ಡ್ರೈವ್ ಮಾಡಿ..!

ಬಿಎಸ್6 ಮಾಲಿನ್ಯ ನಿಯಮಗಳ ಜಾರಿಯ ನಂತರ ಎಲ್ಲಾ ರೀತಿಯ ಎಲ್ಲಾ ಸೆಗ್‍‍ಮೆಂಟ್‍‍ಗಳ ವಾಹನಗಳ ಬೆಲೆ ಹೆಚ್ಚಾಗಲಿದೆ. ಪ್ರಯಾಣಿಕ ಮೋಟಾರ್‌ಸೈಕಲ್ ಆಗಿರಲಿ, ಪ್ರಯಾಣಿಕರ ಕಾರು ಅಥವಾ ದೊಡ್ಡ ಟ್ರಕ್ ಆಗಿರಲಿ, ಬಿಎಸ್6 ನಿಯಮಗಳಿಗೆ ತಕ್ಕಂತೆ ಬದಲಿಸುವುದು ವೆಚ್ಚದಾಯಕವಾಗಿರಲಿದೆ. ಇದು ಫ್ಯೂಯಲ್ ಇಂಜೆಕ್ಷನ್ ಇರಬಹುದು, ಉತ್ತಮವಾದ ಎಕ್ಸಾಸ್ಟ್ ಸಿಸ್ಟಂ ಇರಬಹುದು ಅಥವಾ ಹೊಸ ಎಂಜಿನ್‌ನ ಅಭಿವೃದ್ಧಿಯಾಗಿರಬಹುದು, ಎಲ್ಲವೂ ವೆಚ್ಚದಾಯಕವಾಗಿರಲಿದೆ.

ಹೆಚ್ಚಾಗಲಿದೆ ಬಿ‍ಎಸ್ 6 ಪೆಟ್ರೋಲ್ ಹಾಗೂ ಡೀಸೆಲ್ ದರ

ಈ ಎಲ್ಲಾ ಬದಲಾವಣೆಗಳಿಗೆ ಹೆಚ್ಚು ವ್ಯಯವಾಗುವ ಕಾರಣ ವಾಹನಗಳ ಬೆಲೆಯಲ್ಲೂ ಏರಿಕೆಯಾಗಲಿದೆ. ವಾಹನಗಳ ಬೆಲೆ ಏರಿಕೆಯಾದಾಗ ಗ್ರಾಹಕರು ವಾಹನಗಳನ್ನು ಖರೀದಿಸದೇ ಹೋಗಬಹುದು. ಇದರಿಂದಾಗಿ ವಾಹನ ಕಂಪನಿಗಳು ಮತ್ತಷ್ಟು ನಷ್ಟ ಅನುಭವಿಸುವ ಸಾಧ್ಯತೆಗಳಿವೆ.

ಹೆಚ್ಚಾಗಲಿದೆ ಬಿ‍ಎಸ್ 6 ಪೆಟ್ರೋಲ್ ಹಾಗೂ ಡೀಸೆಲ್ ದರ

ಡ್ರೈವ್‍‍ಸ್ಪಾರ್ಕ್ ಅಭಿಪ್ರಾಯ

ಮೇಲಿನ ಎಲ್ಲಾ ಅಂಶಗಳು, ಭಾರತೀಯ ವಾಹನ ಉದ್ಯಮದ ಅಭಿವೃದ್ಧಿಗೆ ಪೂರಕವಾಗಿ ಕಾಣುವುದಿಲ್ಲ. ವಾಹನ ತಯಾರಕರು ತಮ್ಮ ಬೆಳವಣಿಗೆಯ ಬಗ್ಗೆ ಸಕಾರಾತ್ಮಕವಾಗಿದ್ದು, ದೇಶಿಯ ಮಾರುಕಟ್ಟೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಹೂಡಿಕೆ ಮಾಡುತ್ತಿದ್ದಾರೆ. ಅಲ್ಲದೆ, ಹೊಸ ಕಂಪನಿಗಳ ಆಗಮನವು ಭವಿಷ್ಯದ ಬಗ್ಗೆ ಭರವಸೆ ನೀಡುತ್ತಿದೆ. ಆದರೆ, ಏಪ್ರಿಲ್ 2020ರ ನಂತರ ಏನಾಗಲಿದೆ ಎಂಬುದನ್ನು ಕಾದು ನೋಡಬೇಕಿದೆ.

Most Read Articles

Kannada
English summary
BS-VI Petrol & Diesel Prices Will Increase Post April 2020 — Another Challenge For The Auto Sector - Read in kannada
Story first published: Thursday, July 18, 2019, 18:44 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X