ಬಿಎಸ್-4 ವಾಹನಗಳ ಮೇಲೆ ಭರ್ಜರಿ ಆಫರ್

ಭಾರತದ ಹೆಚ್ಚಿನ ವಾಹನ ತಯಾರಕರು ಈಗಾಗಲೇ ಹೊಸ ತಲೆಮಾರಿನ ಬಿಎಸ್-6 ಎಂಜಿನ್ ವಾಹನಗಳನ್ನು ಬಿಡುಗಡೆಗೊಳಿಸಲು ಆರಂಭಿಸಿದ್ದಾರೆ. ಬಿಎಸ್-6 ಮಾಲಿನ್ಯ ನಿಯಮದ ಗಡುವು ಇನ್ನೂ ಐದು ತಿಂಗಳು ಇರುವಾಗಲೇ ಕಂಪನಿಗಳು ಬಿಎಸ್-6 ವಾಹನಗಳನ್ನು ಬಿಡುಗಡೆಗೊಳಿಸಲು ಪ್ರಾರಂಭಿಸಿದ್ದಾರೆ. ದೇಶಿಯ ಮಾರುಕಟ್ಟೆಯ ಗ್ರಾಹಕರಿಗೆ ಬಿಎಸ್-4 ಎಂಜಿನ್ ವಾಹನಗಳಿಗೆ ಭರ್ಜರಿ ಆಫರ್‍‍ಗಳನ್ನು ಘೋಷಿಸಿದ್ದಾರೆ.

ಬಿಎಸ್-4 ವಾಹನಗಳ ಮೇಲೆ ಭರ್ಜರಿ ಆಫರ್

ವಾಹನ ತಾಯಾರಕರು ಬಿಎಸ್-4 ವಾಹನಗಳನ್ನು ಮಾಡಲು ನಗದು ರಿಯಾಯಿತಿ, ಕಾರ್ಪೋರೇಟ್ ರಿಯಾಯಿತಿ ಮತ್ತು ಉಚಿತ ಪರಿಕರಗಳನ್ನು ಒಳಗೊಂಡ ಭಾರೀ ರಿಯಾಯಿತಿಗಳನ್ನು ಮತ್ತು ಕೊಡುಗೆಗಳನ್ನು ಘೋಷಿಸಿದ್ದಾರೆ. ಕೆಲವು ಕಂಪನಿಗಳು ರೂ.1.75 ಲಕ್ಷಗಳವರೆಗೆ ರಿಯಾಯಿತಿಯನ್ನು ಘೋಷಿಸಿವೆ.

ಬಿಎಸ್-4 ವಾಹನಗಳ ಮೇಲೆ ಭರ್ಜರಿ ಆಫರ್

ಈ ಭರ್ಜರಿ ರಿಯಾಯಿತಿಗಳು ಮತ್ತು ಕೊಡುಗೆಗಳು ಹಬ್ಬದ ವೇಳೆಯಲ್ಲಿ ಮೊದಲ ಹತ್ತು ದಿನಗಳಲ್ಲಿ ದಸರಾ ಹಬ್ಬಕ್ಕೆ ಮಾರಾಟವನ್ನು ಸ್ವಲ್ಪ ಮಟ್ಟಿಗೆ ಹೆಚ್ಚಿಸಿದೆ. ಎಕನಾಮಿಕ್ ಟೈಮ್ಸ್ ಆಟೋ ಪ್ರಕಾರ, ಮಾರುತಿ ಸುಜುಕಿ ರಿಟೇಲ್ ಮತ್ತು ಹೊಲ್ ಸೇಲ್ ಮಾರಾಟದಲ್ಲಿ ಶೇ.7ರಷ್ಟು ಹೆಚ್ಚಾಗಿದೆ.

ಬಿಎಸ್-4 ವಾಹನಗಳ ಮೇಲೆ ಭರ್ಜರಿ ಆಫರ್

ಮಾರುತಿ ಸುಜುಕಿ ಸಂಸ್ಥೆಯ ಅಧ್ಯಕ್ಷ ಆ‍ರ್.ಸಿ ಭಾರ್ಗವರವರು, ಬಿಎಸ್-6 ವಾಹನ ಮಾರಾಟವು ಹೆಚ್ಚಾಗುತ್ತಿಲ್ಲ ಮತ್ತು ಹೆಚ್ಚು ಮಾರಾಟವಾಗದ ಬಿಎಸ್-4 ವಾಹನಗಳು ಹೆಚ್ಚಿನ ಪ್ರಮಾಣದಲ್ಲಿ ಇಲ್ಲ. ಬಿಎಸ್-6 ಮಾಲಿನ್ಯ ನಿಯಮದ ಗಡುವಿನ ಮುಂಚಿತವಾಗಿ ಬಿಡುಗಡೆ ಮಾಡಲು ನಾವು ಚಿಂತಿಸಿದ್ದೇವೆ ಎಂದು ಹೇಳಿದರು.

ಬಿಎಸ್-4 ವಾಹನಗಳ ಮೇಲೆ ಭರ್ಜರಿ ಆಫರ್

ಮತ್ತೊಂದೆಡೆ ಮಾಸ್ ಸೆಗ್‍‍ಮೆಂಟ್‍ನಲ್ಲಿ ಮೊದಲೇ ಬಿಎಸ್-6 ಪ್ರೇರಿತ ಪೆಟ್ರೋಲ್ ಎಂಜಿನ್ ಅನ್ನು ವಾಹನಗಳಲ್ಲಿ ಮಾರುತಿ ಸುಜುಕಿ ಕಂಪನಿ ಅಳವಡಿಕೊಂಡಿದೆ. ಈ ವರ್ಷದ ಏಪ್ರಿಲ್ ತಿಂಗಳಲ್ಲಿ ಕಂಪನಿಯು ತನ್ನ ಮೊದಲ ಬಿಎಸ್-6 ವಾಹನವನ್ನು ಬಿಡುಗಡೆ ಮಾಡಿದ ಆರು ತಿಂಗಳಲ್ಲಿ 2 ಲಕ್ಷ ಯು‍ನಿ‍ಟ್‍ಗಳನ್ನು ಮಾರಾಟ ಮಾಡಿದೆ.

ಬಿಎಸ್-4 ವಾಹನಗಳ ಮೇಲೆ ಭರ್ಜರಿ ಆಫರ್

ಹ್ಯುಂಡೈ ಮೋಟಾರ್ ಸಹ ಬಿಎಸ್-6 ಮಾನದಂಡಗಳನ್ನು ಮೊದಲೇ ಅಳವಡಿಸಿಕೊಂಡಿದೆ. ಬಿಎಸ್‍-4 ಮಾದರಿಗಳು ಮಾರಾಟದಲ್ಲಿ ಬಿಎಸ್-6 ಮಾದರಿಗಳನ್ನು ಮೀರಿಸುತ್ತಿವೆ ಎಂಬುದು ಕಂಪನಿಯ ಅಭಿಪ್ರಾಯವಾಗಿದೆ. ಭರ್ಜರಿ ರಿಯಾಯಿತಿ ಮತ್ತು ಕೊಡುಗೆಗಳಿಂದ ಹೆಚ್ಚು ಮಾರಾಟವಾಗಿದೆ ಎಂದು ಕಂಪನಿಯ ವಾದವಾಗಿದೆ. ಎರಡರಲ್ಲಿ ವ್ಯತಾಸವನ್ನು ನೋಡಿದಾಗ ಬೆರಳಣಿಕೆಯಷ್ಟು ಗ್ರಾಹಕರು ಮಾತ್ರ ಬಿಎಸ್-6 ವಾಹನಗಳನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ.

ಬಿಎಸ್-4 ವಾಹನಗಳ ಮೇಲೆ ಭರ್ಜರಿ ಆಫರ್

ವಾಹನ ತಯಾರಕರು ಬಿಎಸ್-4 ಮತ್ತು ಬಿಎಸ್-6 ಎರಡೂ ಮಾದರಿಗಳಲ್ಲಿ ರಿಯಾಯಿತಿಗಳು ಮತ್ತು ಕೊಡುಗೆಗಳನ್ನು ನೀಡಬೇಕೆಂದು ಡೀಲರ್‍‍ಗಳು ಭಾವಿಸಿದ್ದಾರೆ. ಇದರಿಂದಾಗಿ ಖರೀದಿಸುವ ಗ್ರಾಹಕರು ಉತ್ಪನ್ನದ ಮೌಲ್ಯವನ್ನು ತಿಳಿಯಲು ಸಾಧ್ಯವಾಗುತ್ತದೆ ಎಂದು ಡೀಲರ್‍‍ಗಳು ಹೇಳುತ್ತಾರೆ.

MOST READ: ಹಳೆ ವಾಹನವನ್ನು ಗುಜರಿಗೆ ಹಾಕುವ ಮಾಲೀಕರಿಗೆ ಆಫರ್

ಬಿಎಸ್-4 ವಾಹನಗಳ ಮೇಲೆ ಭರ್ಜರಿ ಆಫರ್

ಬಿಎಸ್-6 ವಾಹನಗಳ ನಿರ್ವಹಣಾ ವೆಚ್ಚದ ಬಗ್ಗೆ ಈಗ ಹೇಳಲು ಸಾಧ್ಯವಿಲ್ಲದ ಕಾರಣ, ಬಿಎಸ್-4 ವಾಹನಗಳು ಭವಿಷ್ಯದಲ್ಲಿ ರಿಸೇಲ್ ಮೌಲ್ಯವನ್ನು ನೀಡುತ್ತವೆ ಎಂಬುದು ಡೀಲರ್‍‍ಗಳ ಅಭಿಪ್ರಾಯವಾಗಿದೆ. ಇದಕ್ಕೆ ಕಾರಣಗಳೆಂದರೆ ಹಲವಾರು ಉಪಯೋಗಿಸಿದ ಕಾರು‍ಗಳ ಗಾತ್ರ. ಬಿಎಸ್-4 ವಾಹನಗಳ ಬೇಡಿಕೆಯು ಹೆಚ್ಚಾದಾಗ ಡೀಲರ್‍‍ಗಳು ಹೆಚ್ಚು ಲಾಭವನ್ನು ಪಡೆಯಲಿದ್ದಾರೆ.

MOST READ: ಬೈಕ್ ಸವಾರನ ಪ್ರಾಣ ಉಳಿಸಿದ ಆಪಲ್ ವಾಚ್..!

ಬಿಎಸ್-4 ವಾಹನಗಳ ಮೇಲೆ ಭರ್ಜರಿ ಆಫರ್

ಡೀಸೆಲ್ ಎಂಜಿನ್ ತಯಾರಕರು ನಿಧಾನವಾಗಿ ಬಿಎಸ್-6 ಎಂಜಿನ್‍‍ಗಳನ್ನು ಅಭಿವೃದ್ಧಿಪಡಿಸುತ್ತಿದ್ದಾರೆ. ಉದಾಹರಣೆಗೆ, ಮಹೀಂದ್ರಾದಂತಹ ಜನಪ್ರಿಯ ಕಂಪನಿಗಳು ಇನ್ನೂ ಬಿಎಸ್-6 ವಾಹನಗಳನ್ನು ಬಿಡುಗಡೆಗೊಳಿಸಲಿಲ್ಲ. ಬಿಎಸ್-6 ಡೀಸೆಲ್ ಇನ್ನೂ ದೇಶದಲ್ಲಿ ಲಭ್ಯವಿಲ್ಲದ ಕಾರಣ ಅವರು ನಿಧಾನವಾಗಿ ಅಭಿವೃದ್ಧಿಪಡಿಸುತ್ತಿದ್ದಾರೆ. ಡೀಸೆಲ್ ಎಂಜಿನ್‍‍ಗಳನ್ನು ಅಪ್‍‍ಗ್ರೇಡ್‍ ಮಾಡುವುದು ವೆಚ್ಚವು ಪೆಟ್ರೋಲ್ ಎಂಜಿನ್‍ಗಳಿಗಿಂತ ದುಬಾರಿಯಾಗಿದೆ.

MOST READ: ಬೈಕ್ ಚಲಾಯಿಸಿದ್ದು ಮಗ, ದಂಡ ಬಿದ್ದಿದ್ದು ಅಪ್ಪನಿಗೆ..!

ಬಿಎಸ್-4 ವಾಹನಗಳ ಮೇಲೆ ಭರ್ಜರಿ ಆಫರ್

ಡ್ರೈವ್‍‍ಸ್ಪಾರ್ಕ್ ಅಭಿಪ್ರಾಯ

ವಾಹನ ತಯಾರಕರು ತಮ್ಮ ಬಿಎಸ್-4 ಪೋರ್ಟ್ಪೋಲಿಯೊ ಅಡಿಯಲ್ಲಿ ವಾಹನಗಳಿಗೆ ರಿಯಾಯಿತಿಯನ್ನು ಘೋಷಿಸಿ ಅದರಲ್ಲಿ ಯಶ್ವಸಿಯಾಗಿದ್ದಾರೆ. ಹಬ್ಬದ ವೇಳೆಯಲ್ಲಿ ಭರ್ಜರಿ ರಿಯಾಯಿತಿ ಮತ್ತು ಕೊಡುಗೆಗಳಿಂದ ಮಾರಾಟವು ಹೆಚ್ಚಾಗುವ ಸಾಧ್ಯತೆಗಳಿವೆ. ಮುಂದಿನ ವರ್ಷ ಮಾರ್ಚ್ ತಿಂಗಳ 31ರವರೆಗೆ ರಿಯಾಯಿತಿಗಳು ಇರುವ ಸಾಧ್ಯತೆಗಳಿವೆ.

Most Read Articles

Kannada
English summary
BS-IV Models Outselling BS-VI Models This Festive Season: Heavy Discounts Being Offered - Read in Kannada
Story first published: Wednesday, October 23, 2019, 12:29 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X