ಅನಾವರಣವಾಯ್ತು ದುಬಾರಿ ಬೆಲೆಯ ಬುಗಾಟಿ ಸೆಂಟೊಡೀಚಿ

ಫ್ರಾನ್ಸ್ ಮೂಲದ ಸೂಪರ್ ಕಾರು ತಯಾರಕ ಕಂಪನಿಯಾದ ಬುಗಾಟಿ ತನ್ನ ಸೀಮಿತ ಆವೃತ್ತಿಯ ಮಾದರಿಯನ್ನು ಪೆಬಲ್ ಬೀಚ್ ಕಾನ್‍‍ಕೋರ್ಸ್ ಡಿ ಎಲಿಗೆನ್ಸ್ ನಲ್ಲಿ ಅನಾವರಣಗೊಳಿಸಿದೆ. ಹೊಸ ಕಾರಿಗೆ ಸೆಂಟೊ‍‍ಡೀಚಿ ಎಂದು ಹೆಸರಿಡಲಾಗಿದೆ. ಈ ಹೆಸರಿನ ಅರ್ಥವು ಇಟಲಿ ಭಾಷೆಯಲ್ಲಿ 110 ಎಂಬುದಾಗಿದೆ.

ಅನಾವರಣವಾಯ್ತು ದುಬಾರಿ ಬೆಲೆಯ ಬುಗಾಟಿ ಸೆಂಟೊಡೀಚಿ

ಈ ಮೂಲಕ ಬುಗಾಟಿ 1991ರಲ್ಲಿ ತಯಾರಾದ ಐತಿಹಾಸಿಕ ಹಿನ್ನೆಲೆಯ ಇಬಿ110 ಕಾರಿಗೆ ಗೌರವ ನೀಡಿದೆ. ಆಸಕ್ತಿಕರ ವಿಷಯವೆಂದರೆ, ಇಬಿ110 ಕಾರ್ ಅನ್ನು ಕಂಪನಿಯ ಸ್ಥಾಪಕರಾದ ಇಟೋರ್ ಬುಗಾಟಿರವರ 110ನೇ ಜನ್ಮದಿನದ ಹಿನ್ನೆಲೆಯಲ್ಲಿ ತಯಾರಿಸಲಾಗಿತ್ತು. ಹೊಸ ಸೆಂಟೊಡೀಚಿ ಕಾರಿನ ಕೇವಲ 10 ಯುನಿಟ್‍‍ಗಳನ್ನು ತಯಾರಿಸಲಾಗುವುದು. ಈ ಕಾರಿನ ಬೆಲೆಯು 8 ಮಿಲಿಯನ್ ಯೂರೋಗಳಾಗಲಿದೆ.

ಅನಾವರಣವಾಯ್ತು ದುಬಾರಿ ಬೆಲೆಯ ಬುಗಾಟಿ ಸೆಂಟೊಡೀಚಿ

ಭಾರತೀಯ ರೂಪಾಯಿ ಮೌಲ್ಯದಲ್ಲಿ ರೂ.63.14 ಕೋಟಿಗಳಾಗಲಿದೆ. ಇದರ ಜೊತೆಗೆ ಪ್ರತ್ಯೇಕವಾಗಿ ತೆರಿಗೆಗಳನ್ನು ಪಾವತಿಸಬೇಕಾಗುತ್ತದೆ. ಬುಗಾಟಿಯ ಅಧ್ಯಕ್ಷರಾದ ಸ್ಟೀಫನ್ ವಿಂಕೆಲ್‍‍ಮನ್‍‍ರವರು ಮಾತನಾಡಿ, ಸೆಂಟೊಡೀಚಿ ತಯಾರಿಸಿ ನಾವು 1990ರ ದಶಕದಲ್ಲಿ ನಿರ್ಮಿಸಲಾದ ಇಬಿ 110 ಸೂಪರ್ ಸ್ಪೋರ್ಟ್ಸ್ ಕಾರಿಗೆ ಗೌರವ ಸಲ್ಲಿಸಿದ್ದೇವೆ.

ಅನಾವರಣವಾಯ್ತು ದುಬಾರಿ ಬೆಲೆಯ ಬುಗಾಟಿ ಸೆಂಟೊಡೀಚಿ

ಇದು ನಮ್ಮ ಇತಿಹಾಸದ ಒಂದು ಭಾಗವಾಗಿದೆ. 1956ರಲ್ಲಿ ಬಿಡುಗಡೆಗೊಳಿಸಲಾದ ಇಬಿ 110 ಕಾರಿನ ನಂತರ ಬುಗಾಟಿ ಆಟೋಮೋಟಿವ್ ಉದ್ಯಮದಲ್ಲಿ ಅಗ್ರಸ್ಥಾನಕ್ಕೇರಿತು. ನಾವು ದೀರ್ಘವಾದ ಇತಿಹಾಸವನ್ನು ಹೊಂದಿರುವುದು ಹೆಮ್ಮೆಯ ಸಂಗತಿಯಾಗಿದೆ. ಇಬಿ110 ಈ ಇತಿಹಾಸದ ಭಾಗವಾಗಿದೆ.

ಅನಾವರಣವಾಯ್ತು ದುಬಾರಿ ಬೆಲೆಯ ಬುಗಾಟಿ ಸೆಂಟೊಡೀಚಿ

ಈ ಕಾರಣಕ್ಕಾಗಿ ನಾವು ಈ ಅಸಾಧಾರಣ ವಾಹನದ ನೆನಪಿನಲ್ಲಿ ಸೆಂಟೊಡೀಚಿಯನ್ನು ಬಿಡುಗಡೆಗೊಳಿಸಿದ್ದೇವೆ. ಇಟಲಿ ಭಾಷೆಯಲ್ಲಿ ಸೆಂಟೊಡೀಚಿ ಎಂದರೆ 110 ಎಂದಾಗಿದೆ ಎಂದು ಹೇಳಿದರು. ಫ್ರೆಂಚ್ ತಯಾರಕ ಕಂಪನಿಯು ಬುಗಾಟಿ ಸೆಂಟೊಡೀಚಿಯಲ್ಲಿ ಹೆಚ್ಚು ಆಕ್ರಮಣಕಾರಿಯಾದ ವಿನ್ಯಾಸವನ್ನು ಬಿಡುಗಡೆಗೊಳಿಸಿದೆ.

ಅನಾವರಣವಾಯ್ತು ದುಬಾರಿ ಬೆಲೆಯ ಬುಗಾಟಿ ಸೆಂಟೊಡೀಚಿ

ಈ ವಿನ್ಯಾಸವನ್ನು ಮೂರು ಡೈಮೆಂಷನ್ನಿನ ವಿನ್ಯಾಸವೆಂದು ಕರೆಯಲಾಗಿದೆ. ಹೊಸ ಸೆಂಟೊಡೀಚಿ ಕಾರು, ಬುಗಾಟಿ ತಯಾರಿಸಿರುವ ಅತ್ಯಂತ ಬಲಶಾಲಿಯಾದ ಕಾರುಗಳಲ್ಲಿ ಒಂದಾಗಿದೆ. ಸೆಂಟೊಡೀಚಿ ಕಾರಿನಲ್ಲಿರುವ ವಿನ್ಯಾಸವನ್ನು ಇಬಿ110 ಕಾರಿನಿಂದ ಪಡೆಯಲಾಗಿದೆ.

ಅನಾವರಣವಾಯ್ತು ದುಬಾರಿ ಬೆಲೆಯ ಬುಗಾಟಿ ಸೆಂಟೊಡೀಚಿ

ಹೊಸ ಕಾರಿನಲ್ಲಿರುವ ಸಿಗ್ನೇಚರ್ ಬುಗಾಟಿ ಹಾರ್ಸ್ ಶೂ ಗ್ರಿಲ್ ಕಂಪನಿಯ ಕಾರುಗಳಾದ ಚಿರೋನ್, ಡಿವೊ ಹಾಗೂ ಲಾ ವಾಯ್ಟರ್ ನಾಯ್ರ್ ಕಾರುಗಳಲ್ಲಿರುವ ಗ್ರಿಲ್‍‍ಗಿಂತ ಚಿಕ್ಕದಾಗಿದೆ. ಈ ಕಾರಿನಲ್ಲಿರುವ ಬೃಹತ್ ಗಾತ್ರದ ಎಂಜಿನ್ ಅನ್ನು ತಂಪಾಗಿಸಲು ಏರ್ ಫ್ಲೋ ಹೆಚ್ಚಿಸುವುದಕ್ಕಾಗಿ ಸೆಂಟೊಡೀಚಿಯು ಮೂರು ವಿಭಾಗಗಳ ಏರ್ ಇನ್‍‍ಟೇಕ್ ಹೊಂದಿದೆ.

MOST READ: ಬುಗಾಟಿ ಹೈಪರ್ ಕಾರು ಹೊಂದಿರುವ ಭಾರತೀಯರು

ಅನಾವರಣವಾಯ್ತು ದುಬಾರಿ ಬೆಲೆಯ ಬುಗಾಟಿ ಸೆಂಟೊಡೀಚಿ

ಬುಗಾಟಿಯ ಇತ್ತೀನ ಕಾರುಗಳಲ್ಲಿ ಕಂಡುಬರುವ ಬುಗಾಟಿಯ ಸಿಗ್ನೇಚರ್‍‍ನ ಸಿ ಶೇಪಿನ ಬಿ ಪಿಲ್ಲರ್‍‍ನ ಬದಲಿಗೆ ಐದು ಡೈಮಂಡ್ ಶೇಪಿನ ಏರ್ ಇನ್‍‍ಲೆಟ್‍‍ಗಳನ್ನು ಅಳವಡಿಸಲಾಗಿದೆ. ಹಿಂಭಾಗದಲ್ಲಿ ದೊಡ್ಡ ಗಾತ್ರದ ಸ್ಪಾಯ್ಲರ್, ಅಸಾಧಾರಣ ಎಂಟು ಪೀಸಿನ ಎಲ್ಇಡಿ ಟೇಲ್‍‍ಲೈಟ್ ಎಲಿಮೆಂಟ್‍‍ಗಳನ್ನು ಹೊಂದಿದೆ.

MOST READ: ತಡೆದು ನಿಲ್ಲಿಸಿದ್ದು ಒಂದು ಕಾರಣಕ್ಕೆ, ದಂಡ ವಿಧಿಸಿದ್ದು ಇನ್ನೊಂದಕ್ಕೆ..!

ಅನಾವರಣವಾಯ್ತು ದುಬಾರಿ ಬೆಲೆಯ ಬುಗಾಟಿ ಸೆಂಟೊಡೀಚಿ

ಬೃಹತ್ ಗಾತ್ರದ ಹಿಂಭಾಗದ ಗ್ರಿಲ್‍‍ಗಳ ಜೊತೆಗೆ ಆಕ್ರಮಣಕಾರಿಯಾಗಿ ಕಾಣುವ ಪರ್ಫಾಮೆನ್ಸ್ ಡಿಫ್ಯೂಸರ್ ಹಾಗೂ ಕ್ವಾಡ್ ಎಕ್ಸಾಸ್ಟ್ ಪೈಪ್‌ಗಳನ್ನು ಹೊಂದಿದೆ. ಬುಗಾಟಿ, ಚಿರೋನ್ ಹಾಗೂ ಡಿವೊ ಹೈಪರ್ ಸ್ಪೋರ್ಟ್ ಕಾರುಗಳಿಗಿಂತ ಸೆಂಟೊಡೀಚಿ ಕಾರ್ ಅನ್ನು ಸ್ಪೋರ್ಟಿಯರ್ ಹಾಗೂ ಹೆಚ್ಚು ತೀವ್ರತೆಯನ್ನು ಮಾಡಲು ಬಯಸಿರುವುದಾಗಿ ಕಂಪನಿಯು ಹೇಳಿಕೊಂಡಿದೆ.

MOST READ: ಸೀಟ್ ಬೆಲ್ಟ್ ಧರಿಸದ ಪೊಲೀಸರನ್ನೇ ಅಡ್ಡಗಟ್ಟಿದ ಭೂಪ..!

ಅನಾವರಣವಾಯ್ತು ದುಬಾರಿ ಬೆಲೆಯ ಬುಗಾಟಿ ಸೆಂಟೊಡೀಚಿ

ಸೆಂಟೊಡೀಚಿ ಕಾರ್ ಅನ್ನು ಲಾ ವಾಯ್ಟರ್ ನಾಯ್ರ್ ನಂತೆ ಎಲಿಗೆಂಟ್ ಆಗಿ ಇಡಲಾಗುವುದು. ಬುಗಾಟಿಯ ಮುಖ್ಯ ವಿನ್ಯಾಸಕರಾದ ಅಕಾಮ್ ಅನ್ಚೀಡ್ಟ್ ರವರು ಮಾತನಾಡಿ, ಈ ಐತಿಹಾಸಿಕ ವಾಹನದ ವಿನ್ಯಾಸದಿಂದ ತಮ್ಮನ್ನು ಹೆಚ್ಚು ಸೆರೆಹಿಡಿಯಲು ಹಾಗೂ ರೆಟ್ರೋಸ್ಪೆಕ್ಟ್ ನಲ್ಲಿ ಕೆಲಸ ಮಾಡಲು ಅವಕಾಶ ನೀಡದಿರುವುದು ದೊಡ್ಡ ಸವಾಲು.

ಅನಾವರಣವಾಯ್ತು ದುಬಾರಿ ಬೆಲೆಯ ಬುಗಾಟಿ ಸೆಂಟೊಡೀಚಿ

ಅದರ ಜೊತೆಗೆ ಆ ಕಾಲದ ಶೇಪ್ ಹಾಗೂ ಟೆಕ್ನಾಲಜಿಯನ್ನು ಮತ್ತೆ ತಯಾರಿಸುವುದು ಇನ್ನೂ ಹೆಚ್ಚಿನ ಸವಾಲಾಗಿತ್ತು ಎಂದು ಹೇಳಿದರು. ಸೀಮಿತ ಆವೃತ್ತಿಯ ಬುಗಾಟಿ ಸೆಂಟೊಡೀಚಿ, ಚಿರೋನ್ ಕಾರಿಗಿಂತ ಸುಮಾರು 20 ಕೆ.ಜಿ ಕಡಿಮೆ ತೂಕವನ್ನು ಹೊಂದಿದೆ.

ಅನಾವರಣವಾಯ್ತು ದುಬಾರಿ ಬೆಲೆಯ ಬುಗಾಟಿ ಸೆಂಟೊಡೀಚಿ

ಕಂಪನಿಯು ಸಾಕಷ್ಟು ಪ್ರಮಾಣದ ಕಾರ್ಬನ್ ಫೈಬರ್‍‍ಗಳನ್ನು ಈ ಕಾರಿನಲ್ಲಿ ಅಳವಡಿಸಿರುವುದರಿಂದ ಕಾರಿನ ತೂಕವು ಕಡಿಮೆಯಾಗಿದೆ. ಕಾರಿನ ವಿಂಡ್‌ಶೀಲ್ಡ್ ವೈಪರ್‌ ಹಾಗೂ ಸ್ಟೆಬಿಲೈಜರ್‌ಗಳನ್ನು ಸಹ ಕಾರ್ಬನ್ ಫೈಬರ್‍‍ನಿಂದ ತಯಾರಿಸಲಾಗಿದೆ.

ಅನಾವರಣವಾಯ್ತು ದುಬಾರಿ ಬೆಲೆಯ ಬುಗಾಟಿ ಸೆಂಟೊಡೀಚಿ

ನಿರ್ಮಾಣ ಸಾಮಗ್ರಿಗಳ ಮೇಲಿನ ನಿರ್ಬಂಧದಿಂದಾಗಿ, ಪವರ್ ಟು ವೇಟ್ ಅನುಪಾತವು ಪ್ರತಿ ಹಾರ್ಸ್ ಪವರ್‍‍‍ಗೆ ಕೇವಲ 1.13 ಕೆ.ಜಿಗಳಾಗಿದೆ. 90 ಕೆ.ಜಿಗಿಂತಲೂ ಹೆಚ್ಚಿನ ಡೌನ್ ಫೋರ್ಸ್ ಹೊಂದಿರುವುದರಿಂದಾಗಿ ಬುಗಾಟಿ ಡಿವೊದಲ್ಲಿರುವಂತಹ ಕಾರ್ ಕಾರ್ನರಿಂಗ್‍‍ಗಳಿರುವುದಾಗಿ ಬುಗಾಟಿ ಹೇಳಿದೆ.

ಅನಾವರಣವಾಯ್ತು ದುಬಾರಿ ಬೆಲೆಯ ಬುಗಾಟಿ ಸೆಂಟೊಡೀಚಿ

ಹೊಸ ಬುಗಾಟಿ ಸೆಂಟೊಡೀಚಿ ಕಾರು, 8.0 ಲೀಟರಿನ ಡಬ್ಲ್ಯು 16 ಎಂಜಿನ್ ಹೊಂದಿದೆ. ಈ ಎಂಜಿನ್ 7,000 ಆರ್‌ಪಿಎಂನಲ್ಲಿ 1600 ಬಿಹೆಚ್‌ಪಿ ಉತ್ಪಾದಿಸುತ್ತದೆ. ಈ ಕಾರು ಕೇವಲ 2.4 ಸೆಕೆಂಡುಗಳಲ್ಲಿ 0 ರಿಂದ 100 ಕಿ.ಮೀ ವೇಗವನ್ನು, 6.1 ಸೆಕೆಂಡುಗಳಲ್ಲಿ 0 ರಿಂದ 200 ಕಿ.ಮೀ ವೇಗವನ್ನು ಹಾಗೂ 13.1 ಸೆಕೆಂಡುಗಳಲ್ಲಿ 0 ರಿಂದ 300 ಕಿ.ಮೀ ವೇಗವನ್ನು ಆಕ್ಸೆಲೆರೇಟ್ ಮಾಡುತ್ತದೆ. ಈ ಕಾರಿನ ಟಾಪ್ ಸ್ಪೀಡ್ ಅನ್ನು ಪ್ರತಿ ಗಂಟೆಗೆ 380 ಕಿ.ಮೀಗೆ ನಿಗದಿಪಡಿಸಲಾಗಿದೆ.

ಡ್ರೈವ್‍‍ಸ್ಪಾರ್ಕ್ ಅಭಿಪ್ರಾಯ

ಬುಗಾಟಿ ಸೆಂಟೊಡೀಚಿ ಕಾರಿನಲ್ಲಿ ಮುಂದಿನ ಹಂತದ ಎಂಜಿನ್ ಅಳವಡಿಸಲಾಗಿದೆ. ಯಾವುದೇ ಕಾರು 1600 ಬಿಎಚ್‌ಪಿ ಉತ್ಪಾದಿಸುವುದು ಸುಲಭವಲ್ಲ. ಹೊಸ ಸೆಂಟೊಡೀಚಿ ಆಕರ್ಷಕವಾಗಿ ಕಾಣಿಸುತ್ತದೆ. ಬಹುಶಃ ಈ ಕಾರು ಮುಂದಿನ ವರ್ಷ ನಡೆಯಲಿರುವ ಆಟೋ ಎಕ್ಸ್‌ಪೋ 2020ರಲ್ಲಿ ಪ್ರದರ್ಶನವಾಗುವ ಸಾಧ್ಯತೆಗಳಿವೆ.

Most Read Articles

Kannada
English summary
New Bugatti Centodieci Unveiled: Pays Homage To 110 Years Of Bugatti & The Iconic EB110 - Read in kannada
Story first published: Wednesday, August 21, 2019, 11:20 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X