ಜಗತ್ತಿನ ಅತಿ ದುಬಾರಿ ಹೈಪರ್ ಕಾರನ್ನು ಅನಾವರಣಗೊಳಿಸಿದ ಬುಗಾಟಿ

ಫ್ರೆಂಚ್ ಆಟೋ ಉತ್ಪಾದನಾ ಸಂಸ್ಥೆಯಾದ ಬುಗಾಟಿ ತನ್ನ ಬಹುನಿರೀಕ್ಷಿತ ಲೊ ವೆಟ್ರಿ ನವಾ ಎನ್ನುವ ಅತಿ ದುಬಾರಿ ಬೆಲೆಯ ಹೈಪರ್ ಕಾರು ಮಾದರಿಯನ್ನು ಜಿನೆವಾ ಆಟೋ ಮೇಳದಲ್ಲಿ ಅನಾವರಣಗೊಳಿಸಿದ್ದು, ಇದು ಜಗತ್ತಿನಲ್ಲಿ ಇದುವರೆಗೆ ಉತ್ಪಾದನೆಯಾಗಿರುನ ಕಾರುಗಳ ಪೈಕಿ ಅತಿ ಹೆಚ್ಚು ಬೆಲೆ ಪಡೆದುಕೊಂಡಿದೆ.

ಜಗತ್ತಿನ ಅತಿ ದುಬಾರಿ ಹೈಪರ್ ಕಾರನ್ನು ಅನಾವರಣಗೊಳಿಸಿದ ಬುಗಾಟಿ

ಕಾರು ಉತ್ಪಾದನೆಯಲ್ಲಿ ಸುಮಾರು 110 ವರ್ಷಗಳನ್ನು ಪೂರೈಸಿರುವ ಬುಗಾಟಿ ಸಂಸ್ಥೆಯು ಹೈಪರ್ ಕಾರುಗಳ ಉತ್ಪಾದನೆಯಲ್ಲಿ ಈಗಾಗಲೇ ಭಾರೀ ಸಂಚಲನ ಸೃಷ್ಠಿಸಿದ್ದು, ಇದೀಗ ಪರಿಚಯಿಸಲಾಗಿರುವ ಲೊ ವೆಟ್ರಿ ನವಾ(ಫ್ರೆಂಚ್ ಪದ) ಕಾರು ಕೂಡಾ ಈ ಹಿಂದೆಂದಿಗಿಂತಲೂ ಅತಿ ವಿನೂತನ ಸೌಲಭ್ಯಗಳನ್ನು ಹೊಂದಿಕೊಂಡಿರುವುದು ಹಲವು ವಿಶೇಷತೆಗಳಿಗೆ ಕಾರಣವಾಗಿದೆ.

ಜಗತ್ತಿನ ಅತಿ ದುಬಾರಿ ಹೈಪರ್ ಕಾರನ್ನು ಅನಾವರಣಗೊಳಿಸಿದ ಬುಗಾಟಿ

1936ರಲ್ಲಿ ನಿರ್ಮಾಣಗೊಂಡಿದ್ದ ಟೈಪ್ 57 ಎಸ್‌ಸಿ ಅಂಟ್ಲಾಟಿಕ್ ಎನ್ನುವ ಟೂರರ್ ಕಾರಿನ ನೆನಪಿಗಾಗಿ ಲೊ ವೆಟ್ರಿ ನವಾ ಕಾರನ್ನು ಸಿದ್ದಪಡಿಸಿರುವ ಬುಗಾಟಿ ಸಂಸ್ಥೆಯು 80 ವರ್ಷಗಳ ಹಿಂದೆ ನಡೆದಿದ್ದ ಒಂದು ಘಟನೆಯನ್ನು ಸ್ಪೂರ್ತಿಯಾಗಿಸಿಕೊಂಡು ಈ ದುಬಾರಿ ಕಾರುನ್ನು ಸಿದ್ದಪಡಿಸಿದೆ.

ಜಗತ್ತಿನ ಅತಿ ದುಬಾರಿ ಹೈಪರ್ ಕಾರನ್ನು ಅನಾವರಣಗೊಳಿಸಿದ ಬುಗಾಟಿ

ಅದು 1939ರ 2ನೇ ಮಹಾಯುದ್ದದ ಅವಧಿ. ಆಗ ತಾನೆ ಆಟೋ ಉದ್ಯಮದಲ್ಲಿ ಹೊಸ ಹೊಸ ಆವಿಷ್ಕಾರ ಆಗುತ್ತಿರುವಾಗಲೇ ಬುಗಾಟಿ ಸಂಸ್ಥಾಪಕ ಜೀನ್ ಬುಗಾಟಿ ಕೂಡಾ ತನ್ನ ಕನಸಿನ ಕಾರು ಮಾದರಿಯಾದ ಟೈಪ್ 57 ಎಸ್‌ಸಿ ಅಂಟ್ಲಾಟಿಕ್ ಮಾದರಿಗಳನ್ನು ನಿರ್ಮಾಣ ಮಾಡಿದ್ದರು.

ಜಗತ್ತಿನ ಅತಿ ದುಬಾರಿ ಹೈಪರ್ ಕಾರನ್ನು ಅನಾವರಣಗೊಳಿಸಿದ ಬುಗಾಟಿ

ಕೇವಲ ನಾಲ್ಕು ಟೈಪ್ 57 ಎಸ್‌ಸಿ ಅಂಟ್ಲಾಟಿಕ್ ಕಾರುಗಳನ್ನು ಉತ್ಪಾದನೆ ಮಾಡಿದ್ದ ಜೀನ್ ಬುಗಾಟಿಯವರು ಇದರಲ್ಲಿ ಎರಡು ಕಾರುಗಳನ್ನು ಮಾರಾಟ ಮಾಡಿ ಇನ್ನೇರಡು ಕಾರುಗಳನ್ನು ತಮ್ಮ ಬಳಿ ಇಟ್ಟುಕೊಂಡಿದ್ದರು. ಆದ್ರೆ ಮಾರಾಟವಾದ ಆ ಎರಡು ಕಾರುಗಳ ಹಿಂದಿನ ಕಥೆಯೇ ಇಲ್ಲಿ ರೋಚಕವಾಗಿದೆ.

ಜಗತ್ತಿನ ಅತಿ ದುಬಾರಿ ಹೈಪರ್ ಕಾರನ್ನು ಅನಾವರಣಗೊಳಿಸಿದ ಬುಗಾಟಿ

ಎರಡನೇ ಮಹಾಯುದ್ಧದ ಸಂದರ್ಭದಲ್ಲಿ ಫ್ರಾನ್ಸ್ ದೇಶದ ಆಲ್ಸೆ ಲೊರೆನ್ ಎನ್ನುವ ಪ್ರದೇಶದ ಮೇಲೆ ಜರ್ಮನಿಯ ನಾಜಿ ಪಡೆಯ ದಾಳಿಯ ಸಂದರ್ಭದಲ್ಲಿ ಭಾರೀ ಪ್ರಮಾಣದ ಹಿಂಸಾಚಾರವಾಗಿದ್ದಲ್ಲದೇ ನಾಜಿ ಪಡೆಯು ಆಲ್ಸೆ ಲೊರೆನ್ ಪ್ರದೇಶದಲ್ಲಿ ಭಾರೀ ಪ್ರಮಾಣದ ಲೂಟಿ ಕೂಡಾ ಮಾಡಿದ್ದರು.

ಜಗತ್ತಿನ ಅತಿ ದುಬಾರಿ ಹೈಪರ್ ಕಾರನ್ನು ಅನಾವರಣಗೊಳಿಸಿದ ಬುಗಾಟಿ

ಇದೇ ವೇಳೆ ಟೈಪ್ 57 ಎಸ್‌ಸಿ ಅಂಟ್ಲಾಟಿಕ್ ಕಾರುಗಳು ಕೂಡಾ ಕಳ್ಳತನವಾಗಿದ್ದಲ್ಲದೇ ಅವುಗಳು ಇದುವರೆಗೂ ಪತ್ತೆಯಾಗಿಲ್ಲ. ಕೇವಲ ಜೀನ್ ಬುಗಾಟಿ ಬಳಿಯೇ ಇದ್ದ ಎರಡು ಟೈಪ್ 57 ಎಸ್‌ಸಿ ಅಂಟ್ಲಾಟಿಕ್ ಕಾರುಗಳು ಇದುವರೆಗೂ ಬುಗಾಟಿ ಒಡೆತನದಲ್ಲೇ ಇವೆ.

ಜಗತ್ತಿನ ಅತಿ ದುಬಾರಿ ಹೈಪರ್ ಕಾರನ್ನು ಅನಾವರಣಗೊಳಿಸಿದ ಬುಗಾಟಿ

ಹೀಗಾಗಿ ಕಳೆದು ಹೋದ ಕಾರುಗಳ ನೆನಪಿಗಾಗಿ ಲೊ ವೆಟ್ರಿ ನವಾ ಹೈಪರ್ ಕಾರು ಮಾದರಿಯನ್ನು ನಿರ್ಮಾಣ ಮಾಡಿರುವ ಬುಗಾಟಿ ಸಂಸ್ಥೆಯು ಹೊಸ ಕಾರಿನ ಬೆಲೆಯನ್ನು 11 ಮಿಲಿಯನ್ ಯುರೋ(ರೂ.87.67 ಕೋಟಿ) ನಿಗದಿಪಡಿಸಿದೆ.

MOST READ: ಕೇವಲ 2 ಸೆಕೆಂಡುಗಳಲ್ಲಿ 100ಕಿ.ಮಿ ವೇಗದಲ್ಲಿ ಚಲಿಸುತ್ತೆ ಮಹೀಂದ್ರಾ ಒಡೆತನದ ಈ ಹೈಪರ್ ಕಾರು

ಜಗತ್ತಿನ ಅತಿ ದುಬಾರಿ ಹೈಪರ್ ಕಾರನ್ನು ಅನಾವರಣಗೊಳಿಸಿದ ಬುಗಾಟಿ

ಇನ್ನೊಂದು ವಿಶೇಷ ಅಂದ್ರೆ, ಕೇವಲ ಒಂದೇ ಒಂದು ಲೊ ವೆಟ್ರಿ ನವಾ ಕಾರನ್ನು ಸಿದ್ದಪಡಿಸಿ ಮಾರಾಟ ಮಾಡುತ್ತಿರುವ ಬುಗಾಟಿ ಸಂಸ್ಥೆಯು ಇದನ್ನು ಕೂಡಾ ಈಗಾಗಲೇ ಮಾರಾಟ ಮಾಡಿದ್ದು, ಬುಗಾಟಿ ಸಂಸ್ಥೆಯ ಉದ್ಯೋಗಿಯೇ ಈ ಕಾರಿನ ಮಾಲೀಕನಾಗಿದ್ದಾನೆ.

ಜಗತ್ತಿನ ಅತಿ ದುಬಾರಿ ಹೈಪರ್ ಕಾರನ್ನು ಅನಾವರಣಗೊಳಿಸಿದ ಬುಗಾಟಿ

ಇನ್ನು ಈ ಕಾರಿನ ಪ್ರತಿ ಇಂಚಿಂಚೂ ಕೂಡಾ ಒಂದೊಂದು ಹೊಸ ವೈಶಿಷ್ಟ್ಯತೆಗಳನ್ನು ಪಡೆದುಕೊಂಡಿದ್ದು, ಕಾರಿನ ಕೆಲವು ತಾಂತ್ರಿಕ ಅಂಶಗಳನ್ನು ಶಿರೋನ್ ಸ್ಪೆಷಲ್ ಎಡಿಷನ್‌ನಿಂದ ಎರವಲು ಪಡೆಯಲಾಗಿದ್ದು, ಕಾರಿನ ಹೊರ ವಿನ್ಯಾಸವು ಸಾಕಷ್ಟು ಆಕರ್ಷಣೆಯಾಗಿದೆ.

MOST READ: ಕೊಹ್ಲಿಗೆ ಟೋಪಿ ಹಾಕಿದ ಕಾಲ್ ಸೆಂಟರ್ ಕಿಲಾಡಿ- ಠಾಣೆಯಲ್ಲೇ ಅನಾಥವಾಗಿ ಬಿದ್ದ ರೂ. 3 ಕೋಟಿ ಕಾರು..!

ಜಗತ್ತಿನ ಅತಿ ದುಬಾರಿ ಹೈಪರ್ ಕಾರನ್ನು ಅನಾವರಣಗೊಳಿಸಿದ ಬುಗಾಟಿ

ಹಾಗೆಯೇ ಹೊಸ ಲೊ ವೆಟ್ರಿ ನವಾ ಕಾರಿನ ಎಂಜಿನ್ ಸಾಮರ್ಥ್ಯವು ಕೂಡಾ ಗಮನ ಸೆಳೆಯಲಿದ್ದು, ಕ್ವಾರ್ಡೋ ಟರ್ಬೋ 8.0-ಲೀಟರ್(8 ಸಾವಿರ ಸಿಸಿ) ವಿ16 ಎಂಜಿನ್‌ನೊಂದಿಗೆ 1,479-ಬಿಎಚ್‌ಪಿ ಮತ್ತು 1,600-ಎನ್ಎಂ ಟಾರ್ಕ್ ಉತ್ಪಾದನಾ ಗುಣಹೊಂದಿದೆ.

Most Read Articles

Kannada
English summary
2019 Geneva Motor Show: Bugatti La Voiture Noire Revealed — The World's Most Expensive Car. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X