ಭಾರತದಲ್ಲಿ ಮೊದಲ ಬಾರಿಗೆ ಕಾಣಿಸಿಕೊಂಡ ಬುಗಾಟಿ ವೇರಾನ್

ಬುಗಾಟಿ ವೇರಾನ್ ಕಾರು ಪ್ರಪಂಚದಲ್ಲಿರುವ ದುಬಾರಿ ಕಾರುಗಳಲ್ಲಿ ಒಂದು. ಈ ಕಾರ್ ಅನ್ನು ಹೈಪರ್ ಕಾರು ಎಂದೂ ಸಹ ಕರೆಯಲಾಗುತ್ತದೆ. ಈ ಕಾರಿನ ಬಿಡುಗಡೆಯ ನಂತರ ಬುಗಾಟಿ ಕಂಪನಿಯು ತನ್ನ ಕಳೆದುಹೋಗಿದ್ದ ಗತವೈಭವವನ್ನು ಮರಳಿ ಪಡೆದು, ಆಟೋ ಮೋಬೈಲ್ ಉದ್ಯಮದಲ್ಲಿ ಮತ್ತೆ ಮುಂಚೂಣಿಗೆ ಬಂದಿತು.

ಭಾರತದಲ್ಲಿ ಮೊದಲ ಬಾರಿಗೆ ಕಾಣಿಸಿಕೊಂಡ ಬುಗಾಟಿ ವೇರಾನ್

ಫೋಕ್ಸ್ ವ್ಯಾಗನ್ ಕಂಪನಿಯು ಈ ಕಾರಿನ ಮಾಲೀಕತ್ವವನ್ನು ಹೊಂದಿದೆ. ಚಿರೋನ್ ಹಾಗೂ ಡಿವೊ ಬುಗಾಟಿಯ ಇತ್ತೀಚಿನ ಕಾರುಗಳಾಗಿವೆ. ಭಾರತದಲ್ಲಿ ಈ ಕಾರನ್ನು 2010ರಲ್ಲಿ ಬಿಡುಗಡೆ ಮಾಡಲಾಗಿತ್ತು. ಬ್ಲಾಕ್ ವೇರಾನ್ ಕಾರನ್ನು ಬಿಡುಗಡೆಗೊಳಿಸಿ ಆಸಕ್ತಿ ಹೊಂದಿದ್ದ ಗ್ರಾಹಕರಿಗೆ ಟೆಸ್ಟ್ ಡ್ರೈವ್ ನೀಡಲಾಗಿತ್ತು. ಕಾರ್ ಕ್ರೇಜಿ ಇಂಡಿಯಾದ, ಇನ್ಸ್ಟಾಗ್ರಾಮ್ ಪೇಜಿನಲ್ಲಿ ಇತ್ತೀಚಿಗೆ ಪ್ರಕಟಿಸಲಾಗಿರುವ ಚಿತ್ರದಲ್ಲಿ ಬುಗಾಟಿ ವೇರಾನ್ ಕಾರನ್ನು ಭಾರತದಲ್ಲಿ ಮೊದಲನೆಯ ಬಾರಿಗೆ, ಮುಂಬೈನಲ್ಲಿ ಚಲಾಯಿಸಿರುವ ಸುದ್ದಿಯನ್ನು ಶೇರ್ ಮಾಡಲಾಗಿದೆ.

ಭಾರತದಲ್ಲಿ ಮೊದಲ ಬಾರಿಗೆ ಕಾಣಿಸಿಕೊಂಡ ಬುಗಾಟಿ ವೇರಾನ್

ಬುಗಾಟಿ ಕಾರು ಪ್ರಪಂಚದಲ್ಲಿರುವ ಅತಿ ಹೆಚ್ಚಿನ ಪವರ್ ಹೊಂದಿರುವ ಹಾಗೂ ಅತಿ ವೇಗದ ಕಾರ್ ಆಗಿದೆ. 2010ರಲ್ಲಿ ಭಾರತದಲ್ಲಿ ಈ ಕಾರು ಬಿಡುಗಡೆಯಾದಾಗ, ಅನೇಕ ಟೆಸ್ಟ್ ಡ್ರೈವ್‍‍ಗಳನ್ನು ನೀಡಿದ್ದರೂ ಈ ಕಾರ್ ಅನ್ನು ಯಾರೂ ಖರೀದಿಸಿರಲಿಲ್ಲ.

ಭಾರತದಲ್ಲಿ ಮೊದಲ ಬಾರಿಗೆ ಕಾಣಿಸಿಕೊಂಡ ಬುಗಾಟಿ ವೇರಾನ್

ಈ ಕಾರಿನ ಬೆಲೆಯನ್ನು ಆಗ ರೂ.16 ಕೋಟಿಗಳೆಂದು ಹೇಳಲಾಗಿತ್ತು. ಆಗ ಇದರ ಬೆಲೆಯು ಭಾರತದಲ್ಲಿದ್ದ ಇತರ ದುಬಾರಿ ಕಾರುಗಳಿಗಿಂತ ಮೂರು ಪಟ್ಟು ಹೆಚ್ಚಾಗಿತ್ತು. ಬುಗಾಟಿ ವೇರಾನ್ ಕಾರು ಪ್ರಪಂಚದಲ್ಲಿರುವ ಕಾರುಗಳಿಗೆ ಹೋಲಿಸಿದರೆ, ತನ್ನದೇ ಆದ ವಿಭಿನ್ನತೆಯನ್ನು ಹೊಂದಿದೆ.

ಭಾರತದಲ್ಲಿ ಮೊದಲ ಬಾರಿಗೆ ಕಾಣಿಸಿಕೊಂಡ ಬುಗಾಟಿ ವೇರಾನ್

ಈ ಕಾರು ಬಿಡುಗಡೆಯಾದ ನಂತರ ಹೈಪರ್ ಕಾರುಗಳಲ್ಲಿ ಹೊಸ ಯುಗವೊಂದು ಸೃಷ್ಠಿಯಾಯಿತು. ಬುಗಾಟಿ ವೇರಾನ್ 16.4 ಗ್ರಾಂಡ್ ಸ್ಪೋರ್ಟ್ ಕಾರಿನಲ್ಲಿ 8.0 ಲೀಟರಿನ ಎಂಜಿನ್‍‍ಯಿದ್ದು, 1001 ಬಿ‍‍ಹೆಚ್‍‍ಪಿ ಹಾಗೂ 1,250 ಎನ್‍ಎಂ ಟಾರ್ಕ್ ಉತ್ಪಾದಿಸುತ್ತದೆ. 0-100 ಕಿ.ಮೀ ವೇಗವನ್ನು ಕೇವಲ 2.7 ಸೆಕೆಂಡುಗಳಲ್ಲಿ ಕ್ರಮಿಸುತ್ತದೆ. ಈ ಕಾರಿನ ಟಾಪ್ ಸ್ಪೀಡ್ ಅನ್ನು ಪ್ರತಿ ಗಂಟೆಗೆ 407 ಕಿ.ಮೀ ಎಂದು ನಿಗದಿಪಡಿಸಲಾಗಿದೆ. ಈ ಕಾರಿನ ಉತ್ಪಾದನೆಯನ್ನು ಸೀಮಿತ ಪ್ರಮಾಣದಲ್ಲಿ ಮಾಡಲಾಗಿತ್ತು.

ಭಾರತದಲ್ಲಿ ಮೊದಲ ಬಾರಿಗೆ ಕಾಣಿಸಿಕೊಂಡ ಬುಗಾಟಿ ವೇರಾನ್

ಕೂಪೆ, ರೋಡ್‍‍ಸ್ಟರ್, ಸೂಪರ್‍‍ಸ್ಫೋರ್ಟ್ಸ್ ಹಾಗೂ ಇನ್ನಿತರ ಮಾದರಿಗಳೂ ಸೇರಿದಂತೆ ಕೇವಲ 450 ಕಾರುಗಳನ್ನು ತಯಾರಿಸಲಾಗಿತ್ತು. ವೇರಾನ್ ಕಾರ್ ಅನ್ನು ಟಿಟಾನಿಯಂ, ಕಾರ್ಬನ್ ಫೈಬರ್ ಹಾಗೂ ಮ್ಯಾಗ್ನೆಷಿಯಂ ಮುಂತಾದ ಬಿಡಿ ಭಾಗಗಳನ್ನು ಬಳಸಿ ಉತ್ಪಾದಿಸಲಾಗಿದೆ. ಇದರಲ್ಲಿರುವ ಡಬ್ಲ್ಯು16, 8 ಲೀಟರಿನ ಎಂಜಿನ್ ಅನ್ನು ಕಂಪನಿಯ ಮುಖ್ಯ ಕಚೇರಿಯಿರುವ ಫ್ರಾನ್ಸ್ ನ ಮೊಲ್‍‍ಶಿಮ್‍‍ನಲ್ಲಿ ತಯಾರಿಸಲಾಗಿದೆ.

ಭಾರತದಲ್ಲಿ ಮೊದಲ ಬಾರಿಗೆ ಕಾಣಿಸಿಕೊಂಡ ಬುಗಾಟಿ ವೇರಾನ್

ಇದರ ಬೆಲೆಯು ಹೆಚ್ಚಾಗಿದ್ದರೂ, ಉನ್ನತ ದರ್ಜೆಯ ಆರ್ ಅಂಡ್ ಡಿ ಹಾಗೂ ನಿರ್ಮಾಣ ವೆಚ್ಚದಿಂದಾಗಿ, ಫೋಕ್ಸ್ ವ್ಯಾಗನ್ ಕಂಪನಿಗೆ ಮಾರಾಟವಾದ ಪ್ರತಿಯೊಂದು ಬುಗಾಟಿ ವೇರಾನ್ ಕಾರಿನ ಮೇಲೆ 6.25 ಮಿಲಿಯನ್ ಡಾಲರ್ ನಷ್ಟವಾಗಿದೆ. ಈ ಕಾರಿನಲ್ಲಿ ಅಳವಡಿಸಲಾಗಿರುವ ಪೈಲಟ್ ಸ್ಪೋರ್ಟ್ 2ಎಸ್ ಹೆಸರಿನ ಟಯರ್‍‍ಗಳನ್ನು ಮಿಚೆಲಿನ್ ಕಂಪನಿಯು ಈ ಕಾರುಗಳಿಗಾಗಿಯೇ ವಿಶೇಷವಾಗಿ ತಯಾರಿಸಿದೆ.

MOST READ: ಬುಗಾಟಿ ಹೈಪರ್ ಕಾರು ಹೊಂದಿರುವ ಭಾರತೀಯರು

ಭಾರತದಲ್ಲಿ ಮೊದಲ ಬಾರಿಗೆ ಕಾಣಿಸಿಕೊಂಡ ಬುಗಾಟಿ ವೇರಾನ್

ಈ ಟಯರ್‍‍ಗಳ ಬದಲಾವಣೆಗಾಗಿಯೇ ಮಾಲೀಕರು 30,000 ದಿಂದ 42,000 ಡಾಲರ್‍‍‍ಗಳನ್ನು ಖರ್ಚು ಮಾಡಬೇಕಿದೆ. ಭಾರತದಲ್ಲಿ ಯಾರೂ ಸಹ ಬುಗಾಟಿ ಕಾರ್ ಅನ್ನು ಹೊಂದಿಲ್ಲ. ಆದರೆ ಪ್ರಪಂಚದ ಬೇರೆ ಬೇರೆ ಪ್ರದೇಶಗಳಲ್ಲಿರುವ ಅನಿವಾಸಿ ಭಾರತೀಯರು ಈ ಕಾರ್ ಅನ್ನು ಹೊಂದಿದ್ದಾರೆ.

MOST READ: ಹೊಸ ಟೆಕ್ನಾಲಜಿಯೊಂದಿಗೆ ಬಿಡುಗಡೆಯಾದ ದಟ್ಸನ್ ಗೊ, ಗೋ ಪ್ಲಸ್

ಭಾರತದಲ್ಲಿ ಮೊದಲ ಬಾರಿಗೆ ಕಾಣಿಸಿಕೊಂಡ ಬುಗಾಟಿ ವೇರಾನ್

ಈ ಕಾರ್ ಅನ್ನು ಅನೇಕ ಸಲ ಅದರಲ್ಲಿರುವ ವಿನ್ಯಾಸದ ಕಾರಣಕ್ಕಾಗಿ ಬಗ್ ಎಂದು ಕರೆಯಲಾಗುತ್ತದೆ. ಈ ವಿನ್ಯಾಸವನ್ನು ಏರೋ ಡೈನಾಮಿಕ್ ದಕ್ಷತೆಗಾಗಿ ನಿರ್ಮಿಸಲಾಗಿದೆ. ಇತ್ತೀಚಿಗೆ ಬುಗಾಟಿ ತನ್ನ ಇನ್ನೊಂದು ದುಬಾರಿ ಬೆಲೆಯ ಕಾರ್ ಅನ್ನು 2019ರ ಜಿನಿವಾ ಮೋಟಾರ್ ಶೋದಲ್ಲಿ ಅನಾವರಣಗೊಳಿಸಿತು. ಈ ಕಾರಿಗೆ ಲಾ ವಾಯ್‍‍ಚರ್ ನೈರ್ ಎಂದು ಹೆಸರಿಡಲಾಗಿದೆ.

MOST READ: ಗ್ರಾಹಕರ ಬೇಡಿಕೆಯಂತೆ ಹೊಸ ಬೈಕ್ ಪೂರೈಸದ ಜಾವಾ ವಿರುದ್ದ ಆಕ್ರೋಶ

ಭಾರತದಲ್ಲಿ ಮೊದಲ ಬಾರಿಗೆ ಕಾಣಿಸಿಕೊಂಡ ಬುಗಾಟಿ ವೇರಾನ್

ಲಾ ವಾಯ್‍‍ಚರ್ ನೈರ್ ಕಾರಿನ ಬೆಲೆಯು 12.5 ಮಿಲಿಯನ್ ಡಾಲರ್ ಆಗಿದ್ದು, ಭಾರತದ ಕರೆನ್ಸಿಯಲ್ಲಿ ಎಕ್ಸ್ ಶೋ ರೂಂ ದರದಂತೆ ರೂ.87 ಕೋಟಿಯಾಗುತ್ತದೆ. ಎಲ್ಲಾ ತೆರಿಗೆಗಳನ್ನು ಪಾವತಿಸಿ ರಸ್ತೆಗಿಳಿದ ನಂತರ ರೂ.132 ಕೋಟಿಯಾಗುತ್ತದೆ. ಈ ಕಾರಿನಲ್ಲಿರುವ ತಂತ್ರಜ್ಞಾನವು ಬುಗಾಟಿ ಚಿರೊನ್ ಕಾರಿನ ತಂತ್ರಜ್ಞಾನದ ಮೇಲೆ ಆಧಾರಿತವಾಗಿದೆ. ಈ ಕಾರ್ ಅನ್ನು ಬುಗಾಟಿ ಟೈಪ್ 57ಎಸ್‍‍ಸಿ ಅಟ್ಲಾಂಟಿಕ್‍‍ನ ನೆನೆಪಿನಲ್ಲಿ ತಯಾರಿಸಲಾಗಿದೆ.

Source: CarcrazyIndia

Most Read Articles

Kannada
English summary
Bugatti Veyron in Indian roads for the very first time - Read in kannada
Story first published: Tuesday, June 4, 2019, 10:49 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X