ಇನ್ಮುಂದೆ ಹೊಸ ವಾಹನಗಳ ನೋಂದಣಿ ಅಷ್ಟು ಸುಲಭವಲ್ಲ..!

ಪ್ರಯಾಣಿಕ ಕಾರುಗಳ ನವೀಕರಣ ಶುಲ್ಕವನ್ನು ಈಗಿರುವ ರೂ. 1,000 ರೂಗಳಿಂದ ಗರಿಷ್ಠ ರೂ. 10,000 ರೂಗಳಿಗೆ ಹೆಚ್ಚಿಸಲು ರಸ್ತೆ ಸಚಿವಾಲಯ ಪ್ರಸ್ತಾವನೆ ಸಲ್ಲಿಸಿದೆ. ವಾಹನ ಮಾಲಿನ್ಯವನ್ನು ನಿಯಂತ್ರಿಸುವ ಸಲುವಾಗಿ ಮೋದಿ ಸರ್ಕಾರ ಹೊಸ ಕಠಿಣ ಕ್ರಮಗಳನ್ನು ಪ್ರಸ್ತಾಪಿಸಿದೆ ಎಂದು ವರದಿಯಾಗಿದೆ. ಹಳೆಯ ವಾಹನಗಳನ್ನು ರಸ್ತೆಗಿಳಿಯದಂತೆ ತಡೆಯುವ ಸಲುವಾಗಿ ಕೇಂದ್ರ ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಸಚಿವಾಲಯವು ಹೊಸ ವಾಹನಗಳ ನೋಂದಣಿ ಶುಲ್ಕದ ಜೊತೆಗೆ ನವೀಕರಣ ಶುಲ್ಕವನ್ನೂ ಸಹ 15 ವರ್ಷಗಳ ನಂತರ ಹೆಚ್ಚಿಸಲು ಬಯಸಿದೆ ಎಂದು ಕೇಂದ್ರ ಸರ್ಕಾರದ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

ಶೇ.400ರಷ್ಟು ಏರಿಕೆಯಾಗಲಿದೆ ಹೊಸ ವಾಹನಗಳ ನೋಂದಣೆ ಶುಲ್ಕ

ಹಳೆಯ ವಾಹನಗಳಿಗೆ ಆಗಾಗ್ಗೆ ಫಿಟ್‌ನೆಸ್ ಪರೀಕ್ಷೆಯನ್ನು ನಡೆಸಲು ಸಹ ಪ್ರಸ್ತಾವನೆಯನ್ನು ಸಲ್ಲಿಸಲಾಗಿದೆ. 20 ವರ್ಷ ಹಳೆಯ ವಾಹನಗಳನ್ನು ಕಡ್ಡಾಯವಾಗಿ ಸ್ಕ್ರ್ಯಾಪ್ ಮಾಡುವ ಯೋಜನೆಯನ್ನು ಸರ್ಕಾರವು ಸದ್ಯಕ್ಕೆ ತಡೆಹಿಡಿದಿದೆ. ಈ ತಿಂಗಳ ಆರಂಭದಲ್ಲಿ, ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರು ದೀರ್ಘಕಾಲದಿಂದ ಬಾಕಿ ಇರುವ ನೀತಿ ಬದಲಾವಣೆಗಳಿಗೆ ತಾತ್ವಿಕವಾಗಿ ಅನುಮೋದನೆ ನೀಡಿದ್ದಾರೆ. ಕರಡು ಅಧಿಸೂಚನೆಯನ್ನು ಶೀಘ್ರದಲ್ಲೇ ಹೊರಡಿಸಲಾಗುವುದು.

ಶೇ.400ರಷ್ಟು ಏರಿಕೆಯಾಗಲಿದೆ ಹೊಸ ವಾಹನಗಳ ನೋಂದಣೆ ಶುಲ್ಕ

ಜನರು ಹೆಚ್ಚಿನ ವಾಹನಗಳನ್ನು ಖರೀದಿಸುವುದನ್ನು ತಡೆಯಲು, ರಸ್ತೆ ಸಚಿವಾಲಯವು ಪ್ರಯಾಣಿಕ ಹಾಗೂ ವಾಣಿಜ್ಯ ವಾಹನಗಳ ನೋಂದಣಿ ಶುಲ್ಕವನ್ನು ಹೆಚ್ಚಿಸಲು ಪ್ರಸ್ತಾವನೆ ಸಲ್ಲಿಸಿದೆ. ಪ್ರಯಾಣಿಕ ಕಾರುಗಳ ನೋಂದಣಿ ಶುಲ್ಕವನ್ನು ರೂ.1,000ಗಳಿಂದ ರೂ.5,000ಗಳಿಗೆ ಹೆಚ್ಚಿಸಲು ಸಚಿವಾಲಯ ಚಿಂತನೆ ನಡೆಸಿದೆ. ಇದರಿಂದಾಗಿ ಶೇಕಡಾ 400ರಷ್ಟು ಹೆಚ್ಚಳವಾಗಲಿದೆ. ಟ್ರಕ್‌ಗಳ ನೋಂದಣಿ ಶುಲ್ಕವನ್ನುರೂ.1,500 ದಿಂದ ರೂ.20,000ಗಳವರೆಗೆ ಅಂದರೆ 1,200%ನಷ್ಟು ಹೆಚ್ಚಳ ಮಾಡಬಹುದು ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

ಶೇ.400ರಷ್ಟು ಏರಿಕೆಯಾಗಲಿದೆ ಹೊಸ ವಾಹನಗಳ ನೋಂದಣೆ ಶುಲ್ಕ

15 ವರ್ಷ ಹಳೆಯದಾದ ವಾಹನಗಳ ನೋಂದಣಿ ನವೀಕರಣಕ್ಕಾಗಿ ಸಚಿವಾಲಯವು ಭಾರಿ ಪ್ರಮಾಣದ ಹೆಚ್ಚಳವನ್ನು ಪ್ರಸ್ತಾಪಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪ್ರಯಾಣಿಕ ಕಾರುಗಳ ನವೀಕರಣ ಶುಲ್ಕವನ್ನು ಈಗಿರುವ 1,000 ರೂಗಳಿಂದ ಗರಿಷ್ಠ 10,000 ರೂ.ಗೆ ಹೆಚ್ಚಿಸಬಹುದು. ವಾಣಿಜ್ಯ ಟ್ಯಾಕ್ಸಿಗಳ ನವೀಕರಣ ಶುಲ್ಕವನ್ನು ಈಗಿರುವ ರೂ.1,000ಗಳಿಂದ ಸುಮಾರು ರೂ.15,000ಗಳಿಗೆ ಹೆಚ್ಚಿಸಲು ಸಚಿವಾಲಯ ಚಿಂತನೆ ನಡೆಸಿದೆ. ಟ್ರಕ್‌ಗಳ ನವೀಕರಣ ಶುಲ್ಕವನ್ನು ಈಗಿರುವ ರೂ.2,000ಗಳಿಂದ ರೂ.40,000ಗಳಿಗೆ ಹೆಚ್ಚಿಸುವ ಸಾಧ್ಯತೆಗಳಿವೆ.

ಶೇ.400ರಷ್ಟು ಏರಿಕೆಯಾಗಲಿದೆ ಹೊಸ ವಾಹನಗಳ ನೋಂದಣೆ ಶುಲ್ಕ

ಕೇಂದ್ರ ಮೋಟಾರ್ ವೆಹಿಕಲ್ ಕಾಯಿದೆ 1989 ರ ಪ್ರಕಾರ, ಪ್ರತಿ 15 ವರ್ಷಗಳಿಗೊಮ್ಮೆ ವಾಹನದ ನೋಂದಣಿಯನ್ನು ಕಡ್ಡಾಯವಾಗಿ ನವೀಕರಿಸಬೇಕಾಗುತ್ತದೆ. ನೀತಿ ಆಯೋಗದ ಅಧಿಕಾರಿಗಳ ಜೊತೆ ನಡೆಸಿದ ಹಲವಾರು ಸುತ್ತಿನ ಮಾತುಕತೆಯ ಬಳಿಕ ರಸ್ತೆ ಸಚಿವಾಲಯವು ಬದಲಾವಣೆಗಳನ್ನು ಅಂತಿಮಗೊಳಿಸಿದೆ ಎಂದು ಸರ್ಕಾರಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಭಾರಿ ಪ್ರಮಾಣದ ಹೆಚ್ಚಳದಿಂದಾಗಿ ಹಳೆಯ ವಾಹನಗಳ ಮಾಲೀಕರು ಅವುಗಳನ್ನು ಬಳಸಿ ಪರಿಸರವನ್ನು ಕಲುಷಿತಗೊಳಿಸುವುದನ್ನು ನಿಲ್ಲಿಸಲಿದ್ದಾರೆ ಎಂಬ ಅಭಿಪ್ರಾಯವಿದೆ.

ಶೇ.400ರಷ್ಟು ಏರಿಕೆಯಾಗಲಿದೆ ಹೊಸ ವಾಹನಗಳ ನೋಂದಣೆ ಶುಲ್ಕ

ಅವರು ಇನ್ನೂ ಹಳೆಯ ವಾಹನಗಳಲ್ಲಿಯೇ ಮುಂದುವರೆಯಲು ಬಯಸಿದರೆ ನವೀಕರಣ ಶುಲ್ಕವನ್ನು ಇಡಬೇಕಾಗುತ್ತದೆ ಎಂದು ಹೆಸರು ಹೇಳಲಿಚ್ಛಿಸಿದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಹಳೆಯ ವಾಹನಗಳನ್ನು ಕಡ್ಡಾಯವಾಗಿ ಸ್ಕ್ರ್ಯಾಪ್ ಮಾಡುವ ಪ್ರಸ್ತಾಪವನ್ನು ಸದ್ಯಕ್ಕೆ ತಡೆಹಿಡಿಯಲಾಗಿದೆ. 2020ರಿಂದ ಹಳೆಯ ವಾಹನಗಳನ್ನು ಕಡ್ಡಾಯವಾಗಿ ಸ್ಕ್ರ್ಯಾಪ್ ಮಾಡುವುದನ್ನು ಸಚಿವಾಲಯವು ಪ್ರಸ್ತಾಪಿಸಿತ್ತು. ಆದರೆ ಪ್ರಧಾನಿಯವರ ಕಚೇರಿಯು ಇದಕ್ಕೆ ಒಪ್ಪಿಗೆ ಸೂಚಿಸದೇ ಇದ್ದ ಕಾರಣ ಯೋಜನೆಯನ್ನು ಸ್ವಯಂಪ್ರೇರಿತವಾಗಿ ಜಾರಿಗೊಳಿಸುವಂತೆ ಸಚಿವಾಲಯಕ್ಕೆ ನಿರ್ದೇಶನ ನೀಡಿದ ನಂತರ ಈ ಪ್ರಸ್ತಾಪವನ್ನು ತಡೆಹಿಡಿಯಲಾಗಿದೆ.

MOST READ: ಕಾರಿನೊಳಗೆ ಸಿಲುಕಿದ್ದ ಮಗು- ಕೊನೆಗೂ ಬಚಾವ್ ಆಗಿದ್ದು ಹೇಗೆ ಗೊತ್ತಾ?

ಶೇ.400ರಷ್ಟು ಏರಿಕೆಯಾಗಲಿದೆ ಹೊಸ ವಾಹನಗಳ ನೋಂದಣೆ ಶುಲ್ಕ

ಈ ಪ್ರಸ್ತಾಪದ ಬಗ್ಗೆ ಅಭಿಪ್ರಾಯ ಪಡೆಯಲು ರಾಜ್ಯ ಸರ್ಕಾರಗಳನ್ನು ಸಂಪರ್ಕಿಸಲು ಸೂಚಿಸಲಾಗಿದೆ. ಇಲ್ಲಿಯವರೆಗೆ, ಬೆರಳೆಣಿಕೆಯಷ್ಟು ರಾಜ್ಯಗಳು ಮಾತ್ರ ತಮ್ಮ ಅಭಿಪ್ರಾಯವನ್ನು ಸಚಿವಾಲಯಕ್ಕೆ ನೀಡಿವೆ. ಸದ್ಯಕ್ಕೆ ಹಳೆಯ ವಾಹನಗಳನ್ನು ಕಡ್ಡಾಯವಾಗಿ ಸ್ಕ್ರಾಪ್ ಮಾಡುವ ಯೋಜನೆಯನ್ನು ಮುಂದುವರಿಸದಿರಲು ನಿರ್ಧರಿಸಿದ್ದೇವೆ. ಆದರೆ ರಸ್ತೆಯ ಮೇಲೆ ಚಲಾಯಿಸಲು ಆರಂಭಿಸಿದರೆ ಅವುಗಳ ನೋಂದಣಿಯನ್ನು ನವೀಕರಿಸಲು ಕಠಿಣ ದಂಡ ವಿಧಿಸುತ್ತೇವೆ ಎಂದು ಅಧಿಕಾರಿಯೊಬ್ಬರು ಹೇಳಿದರು.

ಶೇ.400ರಷ್ಟು ಏರಿಕೆಯಾಗಲಿದೆ ಹೊಸ ವಾಹನಗಳ ನೋಂದಣೆ ಶುಲ್ಕ

ಆದರೆ ಅಧಿಕೃತ ಕೇಂದ್ರಗಳ ಮೂಲಕ ಹಳೆಯ ವಾಹನಗಳನ್ನು ಸ್ಕ್ರ್ಯಾಪ್ ಮಾಡುವುದನ್ನು ಉತ್ತೇಜಿಸಲು, ಅಂತಹ ವಾಹನಗಳ ಮಾಲೀಕರಿಗೆ ಪ್ರಮಾಣಪತ್ರವನ್ನು ನೀಡಬೇಕೆಂದು ಸರ್ಕಾರ ಈಗ ಪ್ರಸ್ತಾಪಿಸಿದೆ. ಈ ಪ್ರಮಾಣ ಪತ್ರಗಳನ್ನು ಬಳಸಿ ಹೊಸ ವಾಹನಗಳ ನೋಂದಣಿ ಶುಲ್ಕದ ಮೇಲೆ ರಿಯಾಯಿತಿ ಪಡೆಯಬಹುದು. ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯ ಅಂಕಿಅಂಶಗಳ ಆಧಾರದ ಮೇಲೆ ರಸ್ತೆ ಸಚಿವಾಲಯಕ್ಕಾಗಿ ಕನ್ಸಲ್ಟೆನ್ಸಿ ಸಂಸ್ಥೆ ಎಟಿ ಕಿಯರ್ನಿ ಸಲ್ಲಿಸಿರುವ ವಿಶ್ಲೇಷಣೆಯ ಪ್ರಕಾರ ಭಾರತದಲ್ಲಿ 2000 ಡಿಸೆಂಬರ್ 31 ಕ್ಕೆ ಮೊದಲು ತಯಾರಾದ ಸರಿಸುಮಾರು 700,000 ಟ್ರಕ್‌ಗಳು, ಬಸ್‌ಗಳು ಹಾಗೂ ಟ್ಯಾಕ್ಸಿಗಳಿವೆ.

MOST READ: ಬಿ‍ಎಂ‍‍ಡಬ್ಲ್ಯು ಎಂ8 ಕಾರು ಗೆದ್ದ ಭಾರತೀಯ ಗಾಲ್ಫ್ ಆಟಗಾರ

ಶೇ.400ರಷ್ಟು ಏರಿಕೆಯಾಗಲಿದೆ ಹೊಸ ವಾಹನಗಳ ನೋಂದಣೆ ಶುಲ್ಕ

ಹಳೆಯ ವಾಹನಗಳಿಂದಾಗಿ 15-20%ರಷ್ಟು ವಾಯು ಮಾಲಿನ್ಯವುಂಟಾಗುತ್ತಿದೆ. ಹಳೆಯ, ಮಾಲಿನ್ಯಕಾರಕ ವಾಹನಗಳು ಸದ್ಯಕ್ಕೆ ಚಾಲ್ತಿಯಲ್ಲಿರುವ ವಾರ್ಷಿಕ ಫಿಟ್‍‍ನೆಸ್ ಪ್ರಮಾಣಪತ್ರದ ಬದಲು ಆರು ತಿಂಗಳಿಗೊಮ್ಮೆ ಫಿಟ್‌ನೆಸ್ ಸರ್ಟಿಫಿಕೇಟ್ ಪಡೆಯಬೇಕು ಎಂದು ರಸ್ತೆ ಸಚಿವಾಲಯ ಪ್ರಸ್ತಾವನೆ ಸಲ್ಲಿಸಿದೆ. 15 ವರ್ಷಕ್ಕಿಂತ ಹಳೆಯದಾದ ವಾಹನಗಳಿಗೆ ಫಿಟ್‌ನೆಸ್ ಶುಲ್ಕವನ್ನು ದ್ವಿಗುಣಗೊಳಿಸಲು ನಾವು ಪ್ರಸ್ತಾಪಿಸಿದ್ದೇವೆ ಎಂದು ಮತ್ತೊಬ್ಬ ಅಧಿಕಾರಿ ಹೇಳಿದರು. 15 ವರ್ಷಕ್ಕಿಂತ ಮೇಲ್ಪಟ್ಟ ವಾಹನಗಳ ರಸ್ತೆ ತೆರಿಗೆಯನ್ನು ಹೆಚ್ಚಿಸಲು ಸಚಿವಾಲಯವು ರಾಜ್ಯ ಸರ್ಕಾರಗಳಿಗೆ ಪತ್ರ ಬರೆಯಲಿದೆ.

ಶೇ.400ರಷ್ಟು ಏರಿಕೆಯಾಗಲಿದೆ ಹೊಸ ವಾಹನಗಳ ನೋಂದಣೆ ಶುಲ್ಕ

ನಗರದೊಳಗೆ ಹಳೆಯ ಮಾಲಿನ್ಯಸೂಸುವ ವಾಹನಗಳ ಪ್ರವೇಶಕ್ಕೆ ನಿರ್ಬಂಧಗಳನ್ನು ಜಾರಿಗೊಳಿಸುವಂತೆ ನಾವು ರಾಜ್ಯ ಸರ್ಕಾರಗಳನ್ನು ಕೋರುತ್ತೇವೆ ಎಂದು ಹೆಸರನ್ನು ಹೇಳಲು ಬಯಸದ ಅಧಿಕಾರಿಯೊಬ್ಬರು ತಿಳಿಸಿದರು. ಇನ್ನೊಬ್ಬ ಅಧಿಕಾರಿ ಮಾತನಾಡಿ ಈ ನಿಯಮಗಳು ಜಾರಿಯಾದ ನಂತರ ಹಳೆಯ ವಾಹನಗಳ ಮಾಲೀಕರು, ವಿಶೇಷವಾಗಿ ವಾಣಿಜ್ಯೋದ್ಯಮಿಗಳು ಕಟ್ಟುನಿಟ್ಟಾದ ನಿಯಮಗಳಿಂದಾಗಿ 15 ವರ್ಷ ಹಳೆಯ ವಾಹನಗಳಲ್ಲಿ ರಸ್ತೆಯಲ್ಲಿ ಚಲಿಸುವುದು ಕಷ್ಟವಾಗಲಿದೆ ಎಂದು ಹೇಳಿದರು.

MOST READ: ಇನ್ಮುಂದೆ ಈ ಜನಪ್ರಿಯ ಕಾರುಗಳು ಖರೀದಿಗೆ ಸಿಗೋದಿಲ್ಲ..!

ಶೇ.400ರಷ್ಟು ಏರಿಕೆಯಾಗಲಿದೆ ಹೊಸ ವಾಹನಗಳ ನೋಂದಣೆ ಶುಲ್ಕ

ರಸ್ತೆ ಸಚಿವಾಲಯವು ಶೀಘ್ರದಲ್ಲೇ ಹೊಸ ಪ್ರಸ್ತಾವನೆಯ ಕುರಿತು ಆಕ್ಷೇಪಣೆಗಳನ್ನು ಆಹ್ವಾನಿಸುವ ಕರಡು ಅಧಿಸೂಚನೆಯನ್ನು ಹೊರಡಿಸಲಿದೆ. ಅದಾದ ನಂತರ ಅಂತಿಮ ಅಧಿಸೂಚನೆಯನ್ನು ಹೊರಡಿಸಲಾಗುವುದು ಎಂದು ಹೇಳಿದರು. ಎಟಿ ಕೀರ್ನಿ ವಿಶ್ಲೇಷಣೆಯ ಪ್ರಕಾರ ಕಚ್ಚಾ ತೈಲ ಆಮದು ಹಾಗೂ ದೇಶೀಯ ಉಕ್ಕಿನ ಸ್ಕ್ರ್ಯಾಪ್ ಉತ್ಪಾದನೆಯ ಉಳಿತಾಯದ ಈ ಕ್ರಮಗಳಿಂದಾಗಿ ದೇಶಕ್ಕೆ ಸುಮಾರು ರೂ.3,900 ಕೋಟಿಗಳಷ್ಟು ನಿವ್ವಳ ಆರ್ಥಿಕ ಲಾಭವಾಗಲಿದೆ.

Most Read Articles

Kannada
English summary
Car registration could now cost 400% more - Read in kannada
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Drivespark sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Drivespark website. However, you can change your cookie settings at any time. Learn more