ಹೊಸ ಕಾರು ಮಾರಾಟದಲ್ಲಿ ಕರ್ನಾಟಕ ಎಷ್ಟನೇ ಸ್ಥಾನದಲ್ಲಿದೆ ಗೊತ್ತಾ?

ಫೆಡರೇಷನ್ ಆಫ್ ಆಟೋಮೊಬೈಲ್ ಡೀಲರ್ಸ್ ಅಸೊಸಿಯೇಷನ್ (ಫಾಡಾ) ಜೂನ್ ತಿಂಗಳಿನ ವಾಹನಗಳ ರಿಜಿಸ್ಟ್ರೇಷನ್ ಮಾಹಿತಿಯನ್ನು ಬಿಡುಗಡೆಗೊಳಿಸಿದ್ದು, ಪ್ಯಾಸೆಂಜರ್ ವಾಹನಗಳ ಮಾರಾಟದಲ್ಲಿ ಕುಸಿತವಾಗಿರುವುದು ಕಂಡು ಬರುತ್ತದೆ. ಫಾಡಾ ವರದಿಯ ಹಿನ್ನೆಲೆಯಲ್ಲಿ ಮಾತನಾಡಿರುವ, ಫಾಡಾ ಅಧ್ಯಕ್ಷರಾದ ಆಶೀಶ್ ಹರ್ಷರಾಜ್ ಕಾಳೆರವರು ಹಣದ ಹರಿವಿನ ಕೊರತೆ ಹಾಗೂ ಮಾನ್ಸೂನ್ ವಿಳಂಬದಿಂದಾಗಿ ಆಟೋಮೊಬೈಲ್ ಉದ್ಯಮವು ಸಮಸ್ಯೆಯನ್ನು ಎದುರಿಸುತ್ತಿದೆ ಎಂದು ಹೇಳಿದ್ದಾರೆ.

ಹೊಸ ಕಾರು ಮಾರಾಟದಲ್ಲಿ ಕರ್ನಾಟಕ ಎಷ್ಟನೇ ಸ್ಥಾನದಲ್ಲಿದೆ ಗೊತ್ತಾ?

2019ರ ಜೂನ್ ತಿಂಗಳಿನಲ್ಲಿ 30,358 ಕಾರುಗಳ ಮಾರಾಟದೊಂದಿಗೆ ಉತ್ತರಪ್ರದೇಶ ಮೊದಲನೇ ಸ್ಥಾನದಲ್ಲಿದ್ದರೆ, ಮಹಾರಾಷ್ಟ್ರ 24,806 ಕಾರುಗಳ ಮಾರಾಟದೊಂದಿಗೆ ಎರಡನೇ ಸ್ಥಾನ ಹಾಗೂ ಕರ್ನಾಟಕವು 18,288 ಕಾರುಗಳ ಮಾರಾಟದೊಂದಿಗೆ ಮೂರನೇ ಸ್ಥಾನದಲ್ಲಿದೆ. ಪ್ಯಾಸೆಂಜರ್ ವಾಹನಗಳ ಸೆಗ್‍‍ಮೆಂಟ್ ಸಮಾಧಾನಪಟ್ಟು ಕೊಳ್ಳುವ ಸಂಗತಿಯೆಂದರೆ, ಈ ಸೆಗ್‍‍ಮೆಂಟಿನಲ್ಲಿ 2019-20ರ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ ಕನಿಷ್ಟ ಪ್ರಮಾಣದ ಕುಸಿತ ಉಂಟಾಗಿದೆ.

ಹೊಸ ಕಾರು ಮಾರಾಟದಲ್ಲಿ ಕರ್ನಾಟಕ ಎಷ್ಟನೇ ಸ್ಥಾನದಲ್ಲಿದೆ ಗೊತ್ತಾ?

2018-19ರ ಮೊದಲ ತೈಮಾಸಿಕದಲ್ಲಿ 7,36,290 ಪ್ಯಾಸೆಂಜರ್ ವಾಹನಗಳನ್ನು ಮಾರಾಟ ಮಾಡಲಾಗಿದ್ದರೆ, 2019-20ರ ಮೊದಲ ತೈಮಾಸಿಕದಲ್ಲಿ 7,28,785 ಪ್ಯಾಸೆಂಜರ್ ವಾಹನಗಳನ್ನು ಮಾರಾಟ ಮಾಡಲಾಗಿದೆ. ಅಂದರೆ 1% ನಷ್ಟು ಕುಸಿತಕಂಡಿದೆ. ಉಳಿದ ಸೆಗ್‍‍ಮೆಂಟ್‍‍ಗಳಲ್ಲಿನ ಕುಸಿತವು ಇದಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿದೆ. ವ್ಯಾಪಾರಿ ದೃಷ್ಟಿಕೋನದಿಂದ ನೋಡುವುದಾದರೆ, ಪ್ಯಾಸೆಂಜರ್ ವಾಹನಗಳ ಸೆಗ್‍‍ಮೆಂಟಿನಲ್ಲಿರುವ ಮತ್ತೊಂದು ಸಕಾರಾತ್ಮಕ ಬೆಳವಣಿಗೆ ಎಂದರೆ ಮ್ಯಾನೇಜಬಲ್ ಲೆವೆಲ್‍‍ನಲ್ಲಿ ಹೆಚ್ಚಿನ ಪ್ರಮಾಣದ ದಾಸ್ತಾನು ತರಲಾಗಿದೆ.

ಹೊಸ ಕಾರು ಮಾರಾಟದಲ್ಲಿ ಕರ್ನಾಟಕ ಎಷ್ಟನೇ ಸ್ಥಾನದಲ್ಲಿದೆ ಗೊತ್ತಾ?

ಉತ್ಪಾದನೆಯನ್ನು ನಿಯಂತ್ರಿಸಿದ್ದಕ್ಕೆ ಹಾಗೂ ವಿತರಕರಿಗೆ ಸಗಟು ಬಿಲ್ಲಿಂಗ್ ಅನ್ನು ಕಡಿಮೆ ಮಾಡಿದ್ದಕ್ಕಾಗಿ ಪ್ಯಾಸೆಂಜರ್ ವಾಹನ ತಯಾರಕರಿಗೆ ಫಾಡಾ ಅಭಿನಂದನೆ ಸಲ್ಲಿಸಿದೆ. ಇದರಿಂದಾಗಿ ಹೆಚ್ಚಿನ ಪ್ರಮಾಣದ ದಾಸ್ತಾನು ಸಮಸ್ಯೆಯನ್ನು ನಿಭಾಯಿಸಲು ಅನುಕೂಲವಾಗಲಿದೆ. ಮುಂಬರುವ ದಿನಗಳಲ್ಲಿ, ಪ್ಯಾಸೆಂಜರ್ ವಾಹನಗಳಲ್ಲಿನ ದಾಸ್ತಾನು ದೇಶದ ಹಲವು ಪ್ರದೇಶಗಳಲ್ಲಿ ಸುಮಾರು 4 ವಾರಗಳ ನಂತರ ಕಡಿಮೆಯಾಗಲಿದೆ.

ಸ್ಥಾನ ರಾಜ್ಯ

ಜೂನ್ 19

ಜೂನ್ 18 ವ್ಯತ್ಯಾಸ %

1 ಉತ್ತರ ಪ್ರದೇಶ 30,358

32,317

-6.06

2 ಮಹಾರಾಷ್ಟ್ರ 24,806

30,695

-19.19

3 ಕರ್ನಾಟಕ

18,288

21,718

-15.79

4 ರಾಜಸ್ಥಾನ

17,648

16,207

8.89

5 ಗುಜರಾತ್ 16,606

22,991

-27.77

6 ತಮಿಳುನಾಡು 15,616

18,429

-15.26

7 ಹರಿಯಾಣ 14,681

15,232

-3.26

8 ಕೇರಳ 14,628

0

N/A

9 ದೆಹಲಿ 11,905

14,257

-16.50

10 ಪಂಜಾಬ್ 9,341

11,356

-17.74

ಹೊಸ ಕಾರು ಮಾರಾಟದಲ್ಲಿ ಕರ್ನಾಟಕ ಎಷ್ಟನೇ ಸ್ಥಾನದಲ್ಲಿದೆ ಗೊತ್ತಾ?

ಅದಾದ ನಂತರ, ಪ್ಯಾಸೆಂಜರ್ ವಾಹನಗಳಿಗಾಗಿ ಫಾಡಾ ಶಿಫಾರಸು ಮಾಡಿರುವ ಮೂರು ವಾರಗಳ ಅಂದರೆ 21 ದಿನಗಳ ದಾಸ್ತಾನು, ಸಾಧಿಸುವುದು ಸುಲಭವಾಗುತ್ತದೆ. ರಾಜ್ಯವಾರು ಪ್ಯಾಸೆಂಜರ್ ವಾಹನ ಮಾರಾಟದ ಅಂಕಿ ಅಂಶಗಳನ್ನು ಗಮನಿಸಿದಾಗ, ಹೆಚ್ಚಿನ ರಾಜ್ಯಗಳು ನಕಾರಾತ್ಮಕ ಬೆಳವಣಿಗೆಯನ್ನು ದಾಖಲಿಸಿರುವುದು ಕಂಡು ಬರುತ್ತದೆ. ಪ್ರತಿ ವರ್ಷದ ಬೆಳವಣಿಗೆಯನ್ನು ಗಮನಿಸಿದರೆ ರಾಜಸ್ಥಾನ 8.89%, ಚತ್ತೀಸ್‌ಗಢ 14.64%, ಜಾರ್ಖಂಡ್ 3.79%, ಹಿಮಾಚಲ ಪ್ರದೇಶ 5.38%, ಮೇಘಾಲಯ4.19%.

ಹೊಸ ಕಾರು ಮಾರಾಟದಲ್ಲಿ ಕರ್ನಾಟಕ ಎಷ್ಟನೇ ಸ್ಥಾನದಲ್ಲಿದೆ ಗೊತ್ತಾ?

ಹೋಂಡಾ ಸಿಟಿ ಮತ್ತು ಮಾರುತಿ ಸುಜುಕಿ ಸಿಯಾಜ್‌ಗೆ ಟಕ್ಕರ್ ನೀಡುತ್ತಿರುವ ಟೊಯೊಟಾ ಯಾರಿಸ್ ಖರೀದಿಗೆ ಈಗಲೇ ಟೆಸ್ಟ್ ಡ್ರೈವ್ ಮಾಡಿ..!

ಅರುಣಾಚಲ ಪ್ರದೇಶ 48.39%, ಮಣಿಪುರ 31.76%, ಮಿಜೋರಾಂ 85.06%, ನಾಗಾಲ್ಯಾಂಡ್ 19.46% ಹಾಗೂ ಸಿಕ್ಕಿಂ 19.22% - ರಾಜ್ಯಗಳು ಮಾತ್ರ ಧನಾತ್ಮಕ ಬೆಳವಣಿಗೆಯನ್ನು ದಾಖಲಿಸಿದ ಕೆಲವೇ ಕೆಲವು ರಾಜ್ಯಗಳಿವೆ. ಉಳಿದ ಎಲ್ಲಾ ರಾಜ್ಯಗಳು ಕಾರು ಮಾರಾಟದಲ್ಲಿ ಕುಸಿತ ದಾಖಲಿಸಿವೆ. 2019ರ ಜೂನ್‌ನಲ್ಲಿ ಉತ್ತರಪ್ರದೇಶದಲ್ಲಿ 30,358 ಕಾರುಗಳ ಮಾರಾಟವಾಗಿದ್ದರೆ, ಮಹಾರಾಷ್ಟ್ರದಲ್ಲಿ 24,806, ಕರ್ನಾಟಕದಲ್ಲಿ 18,288, ರಾಜಸ್ಥಾನದಲ್ಲಿ 17,648, ಗುಜರಾತ್‍‍ನಲ್ಲಿ 16,606, ತಮಿಳುನಾಡಿನಲ್ಲಿ 15,616, ಹರಿಯಾಣದಲ್ಲಿ 14,681, ಕೇರಳದಲ್ಲಿ 14,690 ಕಾರುಗಳನ್ನು ಮಾರಾಟ ಮಾಡಲಾಗಿದೆ.

ಹೊಸ ಕಾರು ಮಾರಾಟದಲ್ಲಿ ಕರ್ನಾಟಕ ಎಷ್ಟನೇ ಸ್ಥಾನದಲ್ಲಿದೆ ಗೊತ್ತಾ?

ಪಂಜಾಬ್‍‍ನಲ್ಲಿ 9,341, ಪಶ್ಚಿಮ ಬಂಗಾಳದಲ್ಲಿ 7,392, ಜಮ್ಮು ಕಾಶ್ಮೀರದಲ್ಲಿ 6,011, ಚತ್ತೀಸ್‌ಗಢ 5,779, ಅಸ್ಸಾಂನಲ್ಲಿ 5,262, ಬಿಹಾರದಲ್ಲಿ 5,150, ಜಾರ್ಖಂಡ್‍‍ನಲ್ಲಿ 4,214, ಒಡಿಶಾದಲ್ಲಿ 4,101 ಕಾರುಗಳ ಮಾರಾಟವಾಗಿವೆ. ಫಾಡಾದ ಪ್ರಕಾರ, ವ್ಯಾಪಾರಿ ಮಟ್ಟದಲ್ಲಿನ ಹಣದ ಹರಿವಿನ ಸಮಸ್ಯೆಗಳು, ಚಿಲ್ಲರೆ ಮಾರಾಟದಲ್ಲಿ ಪ್ರಯಾಣಿಕ ವಾಹನಗಳ ಮಾರಾಟಕ್ಕೆ ಅಡ್ಡಿಯಾಗಿವೆ. ಆದರೆ, ರಾಷ್ಟ್ರೀಕೃತ ಬ್ಯಾಂಕುಗಳ ಮರು ಬಂಡವಾಳೀಕರಣ ಹಾಗೂ ಸ್ಥಿರವಾದ ಎನ್‌ಬಿಎಫ್‌ಸಿಗಳು ರೂ.1 ಲಕ್ಷ ಕೋಟಿ ಹಣವನ್ನು ಒದಗಿಸುವಂತಹ ಇತ್ತೀಚಿನ ಸರ್ಕಾರದ ನಿರ್ಧಾರಗಳಿಂದಾಗಿ ದೀರ್ಘಕಾಲೀನ ದೃಷ್ಟಿಕೋನವು ಉತ್ತೇಜನಕಾರಿಯಾಗಿದೆ.

ಹೊಸ ಕಾರು ಮಾರಾಟದಲ್ಲಿ ಕರ್ನಾಟಕ ಎಷ್ಟನೇ ಸ್ಥಾನದಲ್ಲಿದೆ ಗೊತ್ತಾ?

ದೇಶದಲ್ಲಿ ವೆಹಿಕಲ್‍‍ಗಳ ಪೆನೆಟ್ರೇಷನ್ ಸಂಖ್ಯೆಯು ಪ್ರತಿ ಸಾವಿರಕ್ಕೆ 30 ಕಾರುಗಳಿಗಿಂತ ಕಡಿಮೆಯಿದೆ ಎಂದು ಫಾಡಾ ಹೇಳಿದೆ. ಇದು ಭವಿಷ್ಯದ ಬೆಳವಣಿಗೆಯ ಮಹತ್ವವನ್ನು ಸೂಚಿಸುತ್ತದೆ. ಏಷ್ಯಾದ ಇತರ ದೇಶಗಳಾದ ಥೈಲ್ಯಾಂಡ್, ಇಂಡೋನೇಷ್ಯಾ, ಮಲೇಷ್ಯಾ, ಫಿಲಿಪೈನ್ಸ್ ಹಾಗೂ ಶ್ರೀಲಂಕಾಗಳು ಹೆಚ್ಚಿನ ವಾಹನಗಳ ನುಗ್ಗುವಿಕೆಯನ್ನು ಹೊಂದಿದ್ದು, ಅವುಗಳ ಮಾರಾಟ ಮಾರುಕಟ್ಟೆಯು ಇನ್ನೂ ಪ್ರಬಲವಾಗಿದೆ.

ಹೊಸ ಕಾರು ಮಾರಾಟದಲ್ಲಿ ಕರ್ನಾಟಕ ಎಷ್ಟನೇ ಸ್ಥಾನದಲ್ಲಿದೆ ಗೊತ್ತಾ?

ಭಾರತದಲ್ಲಿ ಆರ್ಥಿಕ ಮೂಲಭೂತ ಅಂಶಗಳು ಸಕಾರಾತ್ಮಕವಾಗಿ ಉಳಿದಿದ್ದು, ವಾಹನ ವಲಯದಲ್ಲಿನ ಕುಸಿತವು ಒಂದು ತಾತ್ಕಾಲಿಕವಾಗಿದೆ ಎಂದು ಫಾಡಾ ಹೇಳಿದೆ. ಹೆಚ್ಚುತ್ತಿರುವ ಜನರ ಆದಾಯ, ಹೊಸ ಕಾರುಗಳನ್ನು ಕೊಳ್ಳುವ ಹಂಬಲ, ಹೊಸ ಕಾರುಗಳ ಬಿಡುಗಡೆ ಹಾಗೂ ಅಭಿವೃದ್ಧಿ ಹೊಂದುತ್ತಿರುವ ರಸ್ತೆಗಳಿಂದಾಗಿ ಪ್ಯಾಸೆಂಜರ್ ವಾಹನಗಳ ಸೆಗ್‍‍ಮೆಂಟ್ ಮತ್ತೆ ಚೇತರಿಸಿಕೊಳ್ಳಲಿದ್ದು, ಮುಂಬರುವ ದಿನಗಳಲ್ಲಿ ಮತ್ತಷ್ಟು ಏರಿಕೆಯನ್ನು ನಿರೀಕ್ಷಿಸಬಹುದು.

Most Read Articles

Kannada
English summary
Car sales June 2019 state wise – UP No 1, Maharashtra 2nd, Karnataka 3rd - Read in kannada
Story first published: Monday, July 22, 2019, 11:38 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X