ಬಿಡುಗಡೆಯಾಯ್ತು ನವೆಂಬರ್ ತಿಂಗಳ ಕಾರು ಮಾರಾಟ ವರದಿ

2019ರ ನವೆಂಬರ್ ತಿಂಗಳಿನ ದೇಶಿಯ ಮಾರುಕಟ್ಟೆಯಲ್ಲಿನ ಕಾರು ಮಾರಾಟದ ವರದಿಯನ್ನು ಬಿಡುಗಡೆಗೊಳಿಸಲಾಗಿದೆ. ಬಹುತೇಕ ಕಾರು ತಯಾರಕ ಕಂಪನಿಗಳು ತಮ್ಮ ಪ್ರತಿ ತಿಂಗಳ ಮಾರಾಟದ ವರದಿಯನ್ನು ಬಿಡುಗಡೆಗೊಳಿಸಿವೆ.

ಬಿಡುಗಡೆಯಾಯ್ತು ನವೆಂಬರ್ ತಿಂಗಳ ಕಾರು ಮಾರಾಟ ವರದಿ

ಈ ವರದಿಯ ಪ್ರಕಾರ ದೇಶಿಯ ಮಾರುಕಟ್ಟೆಯಲ್ಲಿನ ಕಾರು ಮಾರಾಟವು ಕುಸಿತವನ್ನು ಕಂಡಿದೆ. ಆದರೆ ಹ್ಯುಂಡೈ ಹಾಗೂ ಫೋಕ್ಸ್‌ವ್ಯಾಗನ್ ಕಂಪನಿಗಳು ಈ ಕುಸಿತದ ನಡುವೆಯೂ ತಮ್ಮ ಮಾರಾಟವನ್ನು ಹೆಚ್ಚಿಸಿಕೊಂಡಿವೆ. ಯಾವ ಯಾವ ಕಂಪನಿಯ ಕಾರುಗಳು ಎಷ್ಟು ಪ್ರಮಾಣದಲ್ಲಿ ಮಾರಾಟವಾಗಿವೆ ಎಂಬುದನ್ನು ಈ ಲೇಖನದಲ್ಲಿ ನೋಡೋಣ.

ಬಿಡುಗಡೆಯಾಯ್ತು ನವೆಂಬರ್ ತಿಂಗಳ ಕಾರು ಮಾರಾಟ ವರದಿ

ಮಾರುತಿ ಸುಜುಕಿ

ಮಾರುತಿ ಸುಜುಕಿ ಕಂಪನಿಯು ಭಾರತದ ಬಹುದೊಡ್ಡ ಕಾರು ತಯಾರಕ ಕಂಪನಿಯಾಗಿದೆ. ಮಾರುತಿ ಸುಜುಕಿ ದೇಶಿಯ ಮಾರುಕಟ್ಟೆಯಲ್ಲಿ ಹೆಚ್ಚಿನ ಪ್ರಮಾಣದ ಶೇರುಗಳನ್ನು ಹೊಂದಿದೆ. ಆದರೆ ಈ ವರ್ಷದ ಆರಂಭದಿಂದ ಮಾರುತಿ ಸುಜುಕಿ ಕಂಪನಿಯ ಮಾರಾಟವು ಕುಸಿತ ಕಾಣುತ್ತಲೇ ಇದೆ.

ಬಿಡುಗಡೆಯಾಯ್ತು ನವೆಂಬರ್ ತಿಂಗಳ ಕಾರು ಮಾರಾಟ ವರದಿ

ಈ ಕುಸಿತವು ನವೆಂಬರ್ ತಿಂಗಳಿನಲ್ಲಿಯೂ ಮುಂದುವರೆದಿದೆ. ಕಳೆದ ತಿಂಗಳು ಮಾರುತಿ ಸುಜುಕಿ ಕಂಪನಿಯ ಮಾರಾಟವು 3.2%ನಷ್ಟು ಕುಸಿತ ಕಂಡಿದೆ. ಕಳೆದ ವರ್ಷದ ನವೆಂಬರ್ ತಿಂಗಳಿನಲ್ಲಿ 1,46,018 ಯುನಿ‍ಟ್‍ಗಳು ಮಾರಾಟವಾಗಿದ್ದರೆ, ಈ ವರ್ಷದ ನವೆಂಬರ್‍‍ನಲ್ಲಿ 1,41,400 ಯುನಿ‍‍ಟ್‍‍ಗಳು ಮಾರಾಟವಾಗಿವೆ.

ಬಿಡುಗಡೆಯಾಯ್ತು ನವೆಂಬರ್ ತಿಂಗಳ ಕಾರು ಮಾರಾಟ ವರದಿ

ದೇಶಿಯ ಮಾರುಕಟ್ಟೆಯಲ್ಲಿನ ಮಾರಾಟವು ಮಾತ್ರವಲ್ಲದೇ ಮಾರುತಿ ಸುಜುಕಿ ಕಂಪನಿಯ ರಫ್ತು ಪ್ರಮಾಣದಲ್ಲಿಯೂ ಕುಸಿತ ಉಂಟಾಗಿದೆ. 2018ರ ನವೆಂಬರ್‍‍ನಲ್ಲಿ 7,521 ಯುನಿ‍ಟ್‍ಗಳು ಮಾರಾಟವಾಗಿದ್ದರೆ, ಈ ವರ್ಷದ ನವೆಂಬರ್‍‍ನಲ್ಲಿ 6,944 ಯುನಿ‍ಟ್‍‍ಗಳು ಮಾರಾಟವಾಗಿವೆ. ಮಾರುತಿ ಸುಜುಕಿ ಕಂಪನಿಯ ಮಾರಾಟವು ಹಿಂದಿನ ತಿಂಗಳಿಗೆ ಹೋಲಿಸಿದರೆ ನವೆಂಬರ್‍‍ನಲ್ಲಿ ಚೇತರಿಕೆ ಕಂಡಿದೆ.

ಬಿಡುಗಡೆಯಾಯ್ತು ನವೆಂಬರ್ ತಿಂಗಳ ಕಾರು ಮಾರಾಟ ವರದಿ

ಟಾಟಾ ಮೋಟಾರ್ಸ್

ಟಾಟಾ ಮೋಟಾರ್ಸ್ ದೇಶಿಯ ಮಾರುಕಟ್ಟೆಯಲ್ಲಿನ ತನ್ನ ಮಾರಾಟದಲ್ಲಿ ನಿರಂತರ ಕುಸಿತವನ್ನು ಕಾಣುತ್ತಿದೆ. 2018ರ ನವೆಂಬರ್ ತಿಂಗಳಿನಲ್ಲಿ ಟಾಟಾ ಮೋಟಾರ್ಸ್ 50,470 ಯುನಿ‍‍ಟ್‍‍ಗಳನ್ನು ಮಾರಾಟ ಮಾಡಿತ್ತು. ಆದರೆ ಈ ವರ್ಷದ ನವೆಂಬರ್‍‍ನಲ್ಲಿ 38,057 ಯುನಿಟ್‍‍ಗಳು ಮಾರಾಟವಾಗಿವೆ.

ಬಿಡುಗಡೆಯಾಯ್ತು ನವೆಂಬರ್ ತಿಂಗಳ ಕಾರು ಮಾರಾಟ ವರದಿ

ಮಹೀಂದ್ರಾ

ದೇಶಿಯ ಮಾರುಕಟ್ಟೆಯಲ್ಲಿನ ಮಾರಾಟದಲ್ಲಿ ಕುಸಿತ ದಾಖಲಿಸಿದ ಮೂರನೇ ಭಾರತೀಯ ಕಾರು ತಯಾರಕ ಕಂಪನಿ ಮಹೀಂದ್ರಾ. ಮಹೀಂದ್ರಾ ಕಂಪನಿಯು ಮಾರಾಟದಲ್ಲಿ ಸುಮಾರು 7% ನಷ್ಟು ಕುಸಿತವನ್ನು ದಾಖಲಿಸಿದೆ. 2019 ರ ನವೆಂಬರ್‌ನಲ್ಲಿ 38,614 ಯುನಿಟ್‍‍ಗಳು ಮಾರಾಟವಾಗಿವೆ. 2018ರ ನವೆಂಬರ್ ತಿಂಗಳಿನಲ್ಲಿ 41,564 ಯುನಿಟ್‌ಗಳು ಮಾರಾಟವಾಗಿದ್ದವು.

MOST READ: ಖರೀದಿಸಿದ ಬೈಕ್ ಪಡೆಯಲು ಕಾನೂನು ಹೋರಾಟ ಮಾಡಿದ ಉದ್ಯಮಿ

ಬಿಡುಗಡೆಯಾಯ್ತು ನವೆಂಬರ್ ತಿಂಗಳ ಕಾರು ಮಾರಾಟ ವರದಿ

ಹ್ಯುಂಡೈ

ಕೊರಿಯಾ ಮೂಲದ ಕಾರು ತಯಾರಕ ಕಂಪನಿಯಾದ ಹ್ಯುಂಡೈ ನವೆಂಬರ್ ತಿಂಗಳಿನ ಮಾರಾಟದಲ್ಲಿ ಏರಿಕೆಯನ್ನು ದಾಖಲಿಸಿದೆ. ಆದರೆ ಈ ಪ್ರಮಾಣವು 44,600 ಯುನಿಟ್‍ಗಳ ಮಾರಾಟದೊಂದಿಗೆ ಕೇವಲ 2%ನಷ್ಟಾಗಿದೆ. ಆದರೆ ತನ್ನ ಕಂಪನಿಯ ವಾಹನಗಳ ರಫ್ತಿನಲ್ಲಿ 25.2%ನಷ್ಟು ಏರಿಕೆಯನ್ನು ದಾಖಲಿಸಿದೆ.

MOST READ: ಹುಡುಗಿಯರಿಗೆ ಗೇರ್ ಬದಲಿಸಲು ಬಿಟ್ಟು ಡಿ‍ಎಲ್ ಕಳೆದುಕೊಂಡ ಡ್ರೈವರ್..!

ಬಿಡುಗಡೆಯಾಯ್ತು ನವೆಂಬರ್ ತಿಂಗಳ ಕಾರು ಮಾರಾಟ ವರದಿ

ಹ್ಯುಂಡೈ ಕಂಪನಿಯು ಕಳೆದ ತಿಂಗಳು 15,900 ಯುನಿಟ್‍‍ಗಳನ್ನು ರಫ್ತು ಮಾಡಿದೆ. ದೇಶಿಯ ಮಾರುಕಟ್ಟೆಯಲ್ಲಿನ ಮಾರಾಟ ಹಾಗೂ ರಫ್ತುಗಳೆರಡನ್ನೂ ಪರಿಗಣಿಸಿದರೆ ಹ್ಯುಂಡೈ ಕಂಪನಿಯು 60,500 ಯುನಿಟ್‍‍ಗಳ ಮಾರಾಟದೊಂದಿಗೆ 10%ನಷ್ಟು ಬೆಳವಣಿಗೆಯನ್ನು ದಾಖಲಿಸಿದೆ. 2018ರ ನವೆಂಬರ್‍‍ನಲ್ಲಿ ಈ ಪ್ರಮಾಣವು 56,411 ಯುನಿಟ್‍‍ಗಳಷ್ಟಿತ್ತು.

ಬಿಡುಗಡೆಯಾಯ್ತು ನವೆಂಬರ್ ತಿಂಗಳ ಕಾರು ಮಾರಾಟ ವರದಿ

ಹೋಂಡಾ ಕಾರ್ಸ್

ಹೋಂಡಾ ಕಂಪನಿಯು ನವೆಂಬರ್ ತಿಂಗಳಿನಲ್ಲಿ ಭಾರೀ ಪ್ರಮಾಣದ ಕುಸಿತವನ್ನು ದಾಖಲಿಸಿದೆ. ದೇಶಿಯ ಮಾರುಕಟ್ಟೆಯಲ್ಲಿ 6,459 ಯುನಿಟ್‍ಗಳನ್ನು ಮಾರಾಟ ಮಾಡಿದ್ದರೆ, 105 ಯುನಿಟ್‍‍ಗಳನ್ನು ರಫ್ತು ಮಾಡಿದೆ.

ಬಿಡುಗಡೆಯಾಯ್ತು ನವೆಂಬರ್ ತಿಂಗಳ ಕಾರು ಮಾರಾಟ ವರದಿ

ಕಳೆದ ವರ್ಷದ ನವೆಂಬರ್ ತಿಂಗಳಿಗೆ ಹೋಲಿಸಿದರೆ 50%ನಷ್ಟು ಕುಸಿತವನ್ನು ಕಂಡಿದೆ. 2018ರ ನವೆಂಬರ್‍‍ನಲ್ಲಿ 13,006 ಯುನಿಟ್‍‍ಗಳನ್ನು ಮಾರಾಟ ಮಾಡಲಾಗಿತ್ತು.

ಬಿಡುಗಡೆಯಾಯ್ತು ನವೆಂಬರ್ ತಿಂಗಳ ಕಾರು ಮಾರಾಟ ವರದಿ

ಟೊಯೊಟಾ

ಜಪಾನ್ ಮೂಲದ ಟೊಯೊಟಾ ಕಂಪನಿಯು ಸಹ ದೇಶಿಯ ಮಾರುಕಟ್ಟೆಯಲ್ಲಿನ ತನ್ನ ಕಾರು ಮಾರಾಟದಲ್ಲಿ ಕುಸಿತವನ್ನು ಅನುಭವಿಸಿದೆ. 2018ರ ನವೆಂಬರ್ ತಿಂಗಳಿನಲ್ಲಿ 11,390 ಯುನಿಟ್‍‍ಗಳು ಮಾರಾಟವಾಗಿದ್ದವು.

ಬಿಡುಗಡೆಯಾಯ್ತು ನವೆಂಬರ್ ತಿಂಗಳ ಕಾರು ಮಾರಾಟ ವರದಿ

ಈ ವರ್ಷದ ನವೆಂಬರ್‍‍ನಲ್ಲಿ 9,241 ಯುನಿಟ್‍‍ಗಳ ಮಾರಾಟದೊಂದಿಗೆ 19%ನಷ್ಟು ನಷ್ಟ ಅನುಭವಿಸಿದೆ. ಟೊಯೊಟಾ ಕಂಪನಿಯು ನವೆಂಬರ್‍‍ನಲ್ಲಿ 8,312 ಯುನಿಟ್‍‍ಗಳನ್ನು ದೇಶಿಯ ಮಾರುಕಟ್ಟೆಯಲ್ಲಿ ಮಾರಾಟ ಮಾಡಿದ್ದರೆ, 929 ಯುನಿಟ್‍‍ಗಳನ್ನು ರಫ್ತು ಮಾಡಿದೆ.

ಬಿಡುಗಡೆಯಾಯ್ತು ನವೆಂಬರ್ ತಿಂಗಳ ಕಾರು ಮಾರಾಟ ವರದಿ

ಫೋಕ್ಸ್‌ವ್ಯಾಗನ್

ಜರ್ಮನಿ ಮೂಲದ ಕಾರು ತಯಾರಕ ಕಂಪನಿಯಾದ ಫೋಕ್ಸ್‌ವ್ಯಾಗನ್ ದೇಶಿಯ ಮಾರುಕಟ್ಟೆಯಲ್ಲಿನ ಮಾರಾಟದಲ್ಲಿ ನವೆಂಬರ್ ತಿಂಗಳಿನಲ್ಲಿ 17%ನಷ್ಟು ಬೆಳವಣಿಗೆಯನ್ನು ದಾಖಲಿಸಿದೆ. 2018ರ ನವೆಂಬರ್ ತಿಂಗಳಿನಲ್ಲಿ 2,501 ಯುನಿಟ್‍‍ಗಳು ಮಾರಾಟವಾಗಿದ್ದರೆ, ಈ ವರ್ಷದ ನವೆಂಬರ್‍‍ನಲ್ಲಿ 2,937 ಯುನಿಟ್‍‍ಗಳು ಮಾರಾಟವಾಗಿವೆ.

ಬಿಡುಗಡೆಯಾಯ್ತು ನವೆಂಬರ್ ತಿಂಗಳ ಕಾರು ಮಾರಾಟ ವರದಿ

ಡ್ರೈವ್‍‍ಸ್ಪಾರ್ಕ್ ಅಭಿಪ್ರಾಯ

ಭಾರತದ ಆಟೋ ಮೊಬೈಲ್ ಉದ್ಯಮವು ವರ್ಷದ ಆರಂಭದಿಂದಲೂ ಮಾರಾಟದಲ್ಲಿ ದೊಡ್ಡ ಕುಸಿತವನ್ನು ಅನುಭವಿಸುತ್ತಿದೆ. ಹಬ್ಬದ ಸಮಯದಲ್ಲಿ ಕೆಲವು ಕಂಪನಿಗಳ ವಾಹನಗಳು ಹೆಚ್ಚಿನ ಪ್ರಮಾಣದಲ್ಲಿ ಮಾರಾಟವಾದರೂ, ದೇಶಿಯ ಮಾರುಕಟ್ಟೆಯು ಇನ್ನೂ ಪೂರ್ಣವಾಗಿ ಚೇತರಿಸಿಕೊಂಡಿಲ್ಲ. ಬಿಎಸ್ 6 ನಿಯಮಗಳು ಜಾರಿಯಾದ ನಂತರ ದೇಶಿಯ ಮಾರುಕಟ್ಟೆಯಲ್ಲಿನ ಕಾರು ಮಾರಾಟವು ಮತ್ತೆ ಚೇತರಿಸಿಕೊಳ್ಳುವ ಸಾಧ್ಯತೆಗಳಿವೆ.

Most Read Articles

Kannada
English summary
Car Sales Report In India For November: Auto Brands Continue With Their Downward Sales Trend - Read in Kannada
Story first published: Tuesday, December 3, 2019, 11:11 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X