ಅಚ್ಚರಿಯಾದರೂ ನಿಜ: ಭಾರತದಲ್ಲಿಲ್ಲದ ಈ ಕಾರುಗಳು ಪಾಕಿಸ್ತಾನದಲ್ಲಿವೆ..!

ಭಾರತದ ಆಟೋ ಮೊಬೈಲ್ ಮಾರುಕಟ್ಟೆಯು ವಿಶ್ವದ ಅತಿ ದೊಡ್ಡ ಮಾರುಕಟ್ಟೆಗಳಲ್ಲಿ ಒಂದಾಗಿದೆ. ವಿಶ್ವದ ಬಹುತೇಕ ದೊಡ್ಡ ಕಂಪನಿಗಳು ತಮ್ಮ ವಾಹನಗಳನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸುತ್ತವೆ. ಕಳೆದ ಒಂದು ದಶಕದಿಂದ ಏರುಗತಿಯಲ್ಲಿದ್ದ ದೇಶಿಯ ಆಟೋಮೊಬೈಲ್ ಮಾರುಕಟ್ಟೆಯು ಕಳೆದ ಕೆಲ ಸಮಯದಿಂದ ನಿಧಾನಗತಿಯ ಪ್ರಗತಿಯನ್ನು ಹೊಂದುತ್ತಿದೆ.

ಅಚ್ಚರಿಯಾದರೂ ನಿಜ: ಭಾರತದಲ್ಲಿಲ್ಲದ ಈ ಕಾರುಗಳು ಪಾಕಿಸ್ತಾನದಲ್ಲಿವೆ..!

ವಿಶ್ವದ ದೊಡ್ಡ ಮಾರುಕಟ್ಟೆಯೇ ಆಗಿದ್ದರೂ ಕೆಲವು ಕಾರುಗಳನ್ನು ಭಾರತದಲ್ಲಿ ಬಿಡುಗಡೆಗೊಳಿಸಿಲ್ಲ. ಈ ಕಾರುಗಳನ್ನು ನೆರೆಯ ಪಾಕಿಸ್ತಾನದಲ್ಲಿ ಬಿಡುಗಡೆಗೊಳಿಸಲಾಗಿದೆ. ಯಾವ ಕಾರುಗಳನ್ನು ಪಾಕಿಸ್ತಾನ ಹೊಂದಿದೆ. ಭಾರತ ಹೊಂದಿಲ್ಲ ಎಂಬುದರ ಬಗ್ಗೆ ಈ ಲೇಖನದಲ್ಲಿ ನೋಡೋಣ.

ಅಚ್ಚರಿಯಾದರೂ ನಿಜ: ಭಾರತದಲ್ಲಿಲ್ಲದ ಈ ಕಾರುಗಳು ಪಾಕಿಸ್ತಾನದಲ್ಲಿವೆ..!

ಟೊಯೊಟಾ ಹಿಲಕ್ಸ್

ಪಿಕ್ ಅಪ್ ಮಾದರಿಯ ಟ್ರಕ್‍‍ಗಳನ್ನು ಭಾರತದ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿರಲಿಲ್ಲ. ಇತ್ತೀಚಿಗೆ ಈ ಸೆಗ್‍‍ಮೆಂಟಿನಲ್ಲಿ ಬಿಡುಗಡೆಯಾದ ಇಸುಜು ಡಿ ಮ್ಯಾಕ್ಸ್ ವಿ ಕ್ರಾಸ್ ವಾಹನವು ಜನಪ್ರಿಯತೆಯನ್ನು ಹೊಂದಿ ಹೆಚ್ಚಿನ ಪ್ರಮಾಣದಲ್ಲಿ ಮಾರಾಟವಾಗುತ್ತಿದೆ.

ಅಚ್ಚರಿಯಾದರೂ ನಿಜ: ಭಾರತದಲ್ಲಿಲ್ಲದ ಈ ಕಾರುಗಳು ಪಾಕಿಸ್ತಾನದಲ್ಲಿವೆ..!

ಆದರೆ ಪಾಕಿಸ್ತಾನದಲ್ಲಿ ಈ ರೀತಿಯ ವಾಹನಗಳಿಗೆ ಹೆಚ್ಚಿನ ಬೇಡಿಕೆಯಿರುವ ಕಾರಣ, ಟೊಯೊಟಾ ಕಂಪನಿಯು ಹಿಲಕ್ಸ್ ವಾಹನವನ್ನು ಸಿಂಗಲ್ ಹಾಗೂ ಡಬಲ್ ಕ್ಯಾಬ್ ಮಾದರಿಗಳಲ್ಲಿ ಬಿಡುಗಡೆಗೊಳಿಸಿದೆ. ದುಬಾರಿ ಬೆಲೆ ಹಾಗೂ ಹೆಚ್ಚಿನ ಫೀಚರ್‍‍ಗಳನ್ನು ಹೊಂದಿರುವ ಟೊಯೊಟಾ ಫಾರ್ಚೂನರ್ ಕಾರು ಹಿಲಕ್ಸ್ ಕಾರನ್ನು ಆಧಾರಿಸಿ ತಯಾರಿಸಲಾಗಿದೆ. ಪಾಕಿಸ್ತಾನದಲ್ಲಿರುವ ಈ ಹಿಲಕ್ಸ್ ಕಾರಿನಲ್ಲಿ 2755 ಸಿಸಿ 4 ಸಿಲಿಂಡರ್‍‍ನ ಟರ್ಬೊಚಾರ್ಜ್ಡ್ ಡೀಸೆಲ್ ಎಂಜಿನ್ ಅಳವಡಿಸಲಾಗಿದೆ. ಈ ಎಂಜಿನ್ 128 ಬಿ‍‍ಹೆಚ್‍‍ಪಿ ಪವರ್ ಹಾಗೂ 420 ಎನ್‍ಎಂ ಟಾರ್ಕ್ ಉತ್ಪಾದಿಸುತ್ತದೆ.

ಅಚ್ಚರಿಯಾದರೂ ನಿಜ: ಭಾರತದಲ್ಲಿಲ್ಲದ ಈ ಕಾರುಗಳು ಪಾಕಿಸ್ತಾನದಲ್ಲಿವೆ..!

ಟೊಯೊಟಾ ಅವಂಜಾ

ಟೊಯೊಟಾ ಅವಂಜಾ ಕಾರ್ ಅನ್ನು ಟೊಯೊಟಾ ಇನ್ನೋವಾ ಕ್ರಿಸ್ಟಾದ ಸಣ್ಣ ಆವೃತ್ತಿಯ ಕಾರ್ ಎಂದು ಹೇಳಬಹುದು. ಈ ಕಾರ್ ಅನ್ನು ಪಾಕಿಸ್ತಾನದಲ್ಲಿ ಬಹಳಷ್ಟು ವರ್ಷಗಳಿಂದ ಮಾರಾಟ ಮಾಡಲಾಗುತ್ತಿದೆ. ಈ ಎಂಪಿವಿಯಲ್ಲಿರುವ 1.5 ಲೀಟರಿನ ಪೆಟ್ರೋಲ್ ಎಂಜಿನ್, 103 ಬಿಹೆಚ್‌ಪಿ ಪವರ್ ಉತ್ಪಾದಿಸುತ್ತದೆ.

ಅಚ್ಚರಿಯಾದರೂ ನಿಜ: ಭಾರತದಲ್ಲಿಲ್ಲದ ಈ ಕಾರುಗಳು ಪಾಕಿಸ್ತಾನದಲ್ಲಿವೆ..!

ಈ ಕಾರು ಆಗ್ನೇಯ ಏಷ್ಯಾದ ಮಾರುಕಟ್ಟೆಗಳಲ್ಲಿ ಜನಪ್ರಿಯ ವಾಹನವಾಗಿದೆ. ಈ ಕಾರು ದೊಡ್ಡದಾಗಿಲ್ಲದೇ ಇದ್ದರೂ, ಇತ್ತೀಚೆಗೆ ಭಾರತದಲ್ಲಿ ಬಿಡುಗಡೆಯಾದ ಮಾರುತಿ ಸುಜುಕಿ ಎಕ್ಸ್‌ಎಲ್ 6ನಂತೆಯೇ ಏಳು ಸೀಟರ್‍‍ಗಳನ್ನು ಹೊಂದಿದೆ. ಟೊಯೊಟಾ ಕಂಪನಿಯು ಅವಂಜಾ ಕಾರ್ ಅನ್ನು ಭಾರತದಲ್ಲಿ ಬಿಡುಗಡೆಗೊಳಿಸುವ ಬಗ್ಗೆ ಯಾವುದೇ ಮಾಹಿತಿಯನ್ನು ನೀಡಿಲ್ಲ.

ಅಚ್ಚರಿಯಾದರೂ ನಿಜ: ಭಾರತದಲ್ಲಿಲ್ಲದ ಈ ಕಾರುಗಳು ಪಾಕಿಸ್ತಾನದಲ್ಲಿವೆ..!

ಸುಜುಕಿ ಜಿಮ್ನಿ

ಸುಜುಕಿ ಕಂಪನಿಯು, ಜಿಮ್ನಿ ವಾಹನವನ್ನು ಭಾರತದಲ್ಲಿ ಬಿಡುಗಡೆಗೊಳಿಸದಿರುವುದು ಬಹುಶಃ ಭಾರತದ ವಾಹನ ಪ್ರಿಯರಿಗೆ ನಿರಾಸೆಯನ್ನುಂಟು ಮಾಡಿದೆ. ಜಿಮ್ನಿ ವಾಹನವನ್ನು ಪಾಕಿಸ್ತಾನದಲ್ಲಿ ಬಹಳಷ್ಟು ವರ್ಷಗಳ ಹಿಂದೆಯೇ ಬಿಡುಗಡೆಗೊಳಿಸಲಾಗಿದೆ. ಆದರೂ ಇದುವರೆಗೆ ಈ ವಾಹನದ ನವೀಕೃತ ವಾಹನವನ್ನು ಬಿಡುಗಡೆಗೊಳಿಸಿಲ್ಲ.

MOST READ: ಭಾರತದ ವಿವಿಧ ರಾಜ್ಯಗಳ ಪೊಲೀಸರ ಬಳಿಯಿರುವ ಬೈಕುಗಳಿವು

ಅಚ್ಚರಿಯಾದರೂ ನಿಜ: ಭಾರತದಲ್ಲಿಲ್ಲದ ಈ ಕಾರುಗಳು ಪಾಕಿಸ್ತಾನದಲ್ಲಿವೆ..!

ಪಾಕಿಸ್ತಾನದಲ್ಲಿ ಮಾರಾಟವಾಗುತ್ತಿರುವ ಜಿಮ್ನಿ ಸಣ್ಣ ಗಾತ್ರವನ್ನು ಹೊಂದಿದ್ದು ಒರಟುತನವನ್ನು ಹೊಂದಿರುವ ಎಸ್‍‍ಯು‍‍ವಿಯಾಗಿದೆ. ಈ ಎಸ್‍‍ಯುವಿಯಲ್ಲಿ 4ಡಬ್ಯುಡಿ ಸಿಸ್ಟಂ ಅಳವಡಿಸಲಾಗಿದೆ. ಜಿಪ್ಸಿ ಕಾರಿನಲ್ಲಿರುವಂತಹ ಜಿ13 1.3 ಲೀಟರಿನ ಪೆಟ್ರೋಲ್ ಎಂಜಿನ್ ಅಳವಡಿಸಲಾಗಿದೆ. ಈ ಎಂಜಿನ್ 80 ಬಿಎಚ್‌ಪಿ ಪವರ್ ಹಾಗೂ 110 ಎನ್‌ಎಂ ಟಾರ್ಕ್ ಉತ್ಪಾದಿಸುತ್ತದೆ. ಸುಜುಕಿ ಕಂಪನಿಯು ಶೀಘ್ರದಲ್ಲೇ ಜಿಮ್ನಿ ವಾಹನವನ್ನು ಭಾರತದಲ್ಲಿ ಬಿಡುಗಡೆಗೊಳಿಸುವ ಸಾಧ್ಯತೆಗಳಿರುವ ಬಗ್ಗೆ ವರದಿಯಾಗಿದೆ.

MOST READ: ವಾಹನ ಸವಾರರೇ ಎಚ್ಚರ: ನಕಲಿ ಪೊಲೀಸರಿಂದ ಹಗಲು ದರೋಡೆ

ಅಚ್ಚರಿಯಾದರೂ ನಿಜ: ಭಾರತದಲ್ಲಿಲ್ಲದ ಈ ಕಾರುಗಳು ಪಾಕಿಸ್ತಾನದಲ್ಲಿವೆ..!

ಹೋಂಡಾ ಹೆಚ್ಆರ್- ವಿ

ಹೋಂಡಾ ಎಚ್‌ಆರ್-ವಿ ಅಥವಾ ವೆಜೆಲ್ ಎಂದು ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಖ್ಯಾತಿಯನ್ನು ಪಡೆದಿರುವ ಈ ಕ್ರಾಸ್ಒವರ್ ಎಸ್‌ಯುವಿಯನ್ನು ಪಾಕಿಸ್ತಾನದಲ್ಲಿ ಮಾರಾಟ ಮಾಡಲಾಗುತ್ತಿದೆ. ಈ ಕಾರು ಹೋಂಡಾ ಬಿಆರ್-ವಿ ಹಾಗೂ ಸಿಆರ್-ವಿ ನಡುವೆ ಇರಲಿದೆ.

MOST READ: ಹಳೆಯದಾದಷ್ಟು ದುಬಾರಿಯಾಗುತ್ತವೆ ಈ ಜನಪ್ರಿಯ ಬೈಕುಗಳು

ಅಚ್ಚರಿಯಾದರೂ ನಿಜ: ಭಾರತದಲ್ಲಿಲ್ಲದ ಈ ಕಾರುಗಳು ಪಾಕಿಸ್ತಾನದಲ್ಲಿವೆ..!

ಈ ಕಾರು ಜಾಗತಿಕವಾಗಿ ಸಾಕಷ್ಟು ಜನಪ್ರಿಯವಾಗಿದೆ. ಈ ಕಾರಿನಲ್ಲಿರುವ 1.5 ಲೀಟರಿನ ಐ ವಿಟಿಇಸಿ ಪೆಟ್ರೋಲ್ ಎಂಜಿನ್ 118 ಬಿಹೆಚ್‌ಪಿ ಹಾಗೂ 145 ಎನ್‌ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಕಾರು ಸಿವಿಟಿ ಟ್ರಾನ್ಸ್ ಮಿಷನ್ ಹೊಂದಿದೆ. ಭಾರತದ ಮಾರುಕಟ್ಟೆಯಲ್ಲಿ ಹಲವಾರು ಜನಪ್ರಿಯ ಕಾರುಗಳನ್ನು ಬಿಡುಗಡೆಗೊಳಿಸಿರುವ ಹೋಂಡಾ ಕಂಪನಿಯು, ಈ ಕಾರ್ ಅನ್ನು ಈ ವರ್ಷದ ದೀಪಾವಳಿಯ ವೇಳೆಗೆ ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸುವ ಸಾಧ್ಯತೆಗಳಿವೆ.

ಅಚ್ಚರಿಯಾದರೂ ನಿಜ: ಭಾರತದಲ್ಲಿಲ್ಲದ ಈ ಕಾರುಗಳು ಪಾಕಿಸ್ತಾನದಲ್ಲಿವೆ..!

ಸುಜುಕಿ ವಿಟಾರಾ

ಪಾಕಿಸ್ತಾನದಲ್ಲಿ ನವೀಕರಿಸಿದ ಸುಜುಕಿ ಕಾರುಗಳನ್ನು ಸಾಕಷ್ಟು ಪ್ರಮಾಣದಲ್ಲಿ ಮಾರಾಟ ಮಾಡುತ್ತಿಲ್ಲ. ಪಾಕಿಸ್ತಾನದಲ್ಲಿ ವಿಟಾರಾ ಕಾರ್ ಅನ್ನು ಮಾರಾಟ ಮಾಡಲಾಗುತ್ತಿದೆ. ಈ ಕಾರು ಇನ್ನೂ ಭಾರತದಲ್ಲಿ ಬಿಡುಗಡೆಯಾಗಿಲ್ಲ. ಭಾರತದಲ್ಲಿ ಮಾರಾಟವಾಗುವ ವಿಟಾರಾ ಬ್ರಿಝಾ ಕಾರ್ ಅನ್ನು ಈ ಎಸ್‍‍ಯುವಿಯ ಆಧಾರದ ಮೇಲೆ ತಯಾರಿಸಲಾಗಿದೆ. ಪಾಕಿಸ್ತಾನದ ಮಾರುಕಟ್ಟೆಲ್ಲಿರುವ ಈ ಕಾರು 1.6 ಲೀಟರಿನ, ನಾಲ್ಕು ಸಿಲಿಂಡರ್ ಪೆಟ್ರೋಲ್ ಎಂಜಿನ್‌ ಹೊಂದಿದ್ದು, 115 ಬಿಹೆಚ್‌ಪಿ ಪವರ್ ಉತ್ಪಾದಿಸುತ್ತದೆ. ಸುಜುಕಿ ಭಾರತದಲ್ಲಿಯೂ ಸಹ ವಿಟಾರಾವನ್ನು2020ರ ಮಧ್ಯ ಭಾಗದಲ್ಲಿ ಬಿಡುಗಡೆಗೊಳಿಸುವ ಸಾಧ್ಯತೆಗಳಿವೆ.

ಅಚ್ಚರಿಯಾದರೂ ನಿಜ: ಭಾರತದಲ್ಲಿಲ್ಲದ ಈ ಕಾರುಗಳು ಪಾಕಿಸ್ತಾನದಲ್ಲಿವೆ..!

ಟೊಯೊಟಾ ರಶ್

ಟೊಯೊಟಾ ರಶ್ ಆಕರ್ಷಕವಾಗಿ ಕಾಣುವ ಕ್ರಾಸ್ಒವರ್ ಆಗಿದ್ದು, ಪಾಕಿಸ್ತಾನದಲ್ಲಿ ಹಲವಾರು ವರ್ಷಗಳಿಂದ ಮಾರಾಟವಾಗುತ್ತಿದೆ. ಇದು ಫಾರ್ಚೂನರ್‌ ಕಾರಿನ ಸಣ್ಣ ಆವೃತ್ತಿಯಾಗಿದೆ. ಈ ಕಾರಿನಲ್ಲಿರುವ 1.5 ಲೀಟರಿನ ಡ್ಯುಯಲ್ ವಿವಿಟಿ-ಐ ನಾಲ್ಕು ಸಿಲಿಂಡರ್ ಪೆಟ್ರೋಲ್ ಎಂಜಿನ್‌ 6,000 ಆರ್‌ಪಿಎಂನಲ್ಲಿ 103 ಬಿ‍‍ಹೆಚ್‍‍ಪಿ ಹಾಗೂ 4,200 ಆರ್‌ಪಿಎಂನಲ್ಲಿ 136 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಕ್ರಾಸ್ಒವರ್ ಎಸ್‍‍ಯು‍‍ವಿಯಲ್ಲಿ 5 ಸ್ಪೀಡ್ ಮ್ಯಾನ್ಯುವಲ್ ಟ್ರಾನ್ಸ್ ಮಿಷನ್ ಅಥವಾ 4 ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್ಸ್ ಮಿಷನ್ ಲಭ್ಯವಿದೆ. ಈ ಟ್ರಾನ್ಸ್ ಮಿಷನ್ ಹಿಂದಿನ ಚಕ್ರಗಳಿಗೆ ಪವರ್ ನೀಡುತ್ತವೆ. ಟೊಯೊಟಾ ಮುಂದಿನ ವರ್ಷ ಭಾರತದಲ್ಲಿ ರಶ್ ಕಾರ್ ಅನ್ನು 2021ರಲ್ಲಿ ಬಿಡುಗಡೆಗೊಳಿಸುವ ಸಾಧ್ಯತೆಗಳಿವೆ.

ಅಚ್ಚರಿಯಾದರೂ ನಿಜ: ಭಾರತದಲ್ಲಿಲ್ಲದ ಈ ಕಾರುಗಳು ಪಾಕಿಸ್ತಾನದಲ್ಲಿವೆ..!

ಕಿಯಾ ಸ್ಪೋರ್ಟೇಜ್

ಕಿಯಾ ಕಂಪನಿಯು ಸೆಲ್ಟೋಸ್ ಬಿಡುಗಡೆಗೊಳಿಸುವ ಮೂಲಕ ಭಾರತೀಯ ಮಾರುಕಟ್ಟೆಗೆ ಕಾಲಿಟ್ಟಿದೆ. ಪಾಕಿಸ್ತಾನದಲ್ಲಿ ಕಿಯಾ ಕಂಪನಿಯ ಕಾರುಗಳನ್ನು ಬಹಳ ಹಿಂದೆಯೇ ಬಿಡುಗಡೆಗೊಳಿಸಲಾಗಿದೆ. ದಕ್ಷಿಣ ಕೊರಿಯಾ ಮೂಲದ ವಾಹನ ತಯಾರಕ ಕಂಪನಿಯು ಜಾಗತಿಕವಾಗಿ ಮೆಚ್ಚುಗೆ ಪಡೆದ ಕಾರುಗಳಲ್ಲಿ ಒಂದಾದ ಸ್ಪೋರ್ಟೇಜ್ ಕಾರ್ ಅನ್ನು ಪಾಕಿಸ್ತಾನದ ಮಾರುಕಟ್ಟೆಯಲ್ಲಿ ಮಾರಾಟ ಮಾಡುತ್ತಿದೆ. , ಕಿಯಾ ತನ್ನ ಕಂಪನಿಯ ಎಲ್ಲಾ ವಾಹನಗಳನ್ನು ಪಾಕಿಸ್ತಾನದಲ್ಲಿ ಮಾರಾಟ ಮಾಡುತ್ತಿದೆ. ಸ್ಪೋರ್ಟೇಜ್ ಕಾರಿನಲ್ಲಿ 2.4 ಲೀಟರಿನ ಪೆಟ್ರೋಲ್ ಎಂಜಿನ್‌ ಅಳವಡಿಸಲಾಗಿದೆ. ಈ ಎಂಜಿನ್ 182 ಬಿಎಚ್‌ಪಿ ಪವರ್ ಉತ್ಪಾದಿಸುತ್ತದೆ.

ಅಚ್ಚರಿಯಾದರೂ ನಿಜ: ಭಾರತದಲ್ಲಿಲ್ಲದ ಈ ಕಾರುಗಳು ಪಾಕಿಸ್ತಾನದಲ್ಲಿವೆ..!

ಟೊಯೊಟಾ ಹಿಯಾಸ್

ಟೊಯೊಟಾ ಹಿಯಾಸ್ ದೊಡ್ಡ ವ್ಯಾನ್ ಆಗಿದ್ದು, ಪಾಕಿಸ್ತಾನದ ಕಾರು ಮಾರುಕಟ್ಟೆಯಲ್ಲಿ ಹೆಚ್ಚು ಮಾರಾಟವಾಗುತ್ತಿರುವ ಕಾರುಗಳಲ್ಲಿ ಒಂದಾಗಿದೆ. ಕಮರ್ಷಿಯಲ್ ವೆಹಿಕಲ್ ಸೆಗ್‍‍ಮೆಂಟಿನಲ್ಲಿ ಈ ಎಂಪಿವಿ ಹೆಚ್ಚು ಜನಪ್ರಿಯವಾಗಿದೆ. ಇದರಲ್ಲಿ 13 ಜನರು ಆರಾಮವಾಗಿ ಸಂಚರಿಸಬಹುದಾಗಿದೆ. ಈ ವಾಹನವನ್ನು 2.5 ಲೀಟರ್ ಡೀಸೆಲ್ ಎಂಜಿನ್ ಅಥವಾ 2.7-ಲೀಟರ್ ಪೆಟ್ರೋಲ್ ಎಂಜಿನ್‍‍‍ನಲ್ಲಿ ಮಾರಾಟ ಮಾಡಲಾಗುವುದು. ಕೆಲವು ವರ್ಷಗಳ ಹಿಂದೆ ಹಿಯಾಸ್ ವಾಹನವನ್ನು ಭಾರತದಲ್ಲಿಯೂ ಬಿಡುಗಡೆಗೊಳಿಸಲಾಗುವುದು ಎಂದು ಹೇಳಲಾಗಿತ್ತು. ಟೊಯೊಟಾ ಈ ವಾಹನದ ಬದಲಿಗೆ ವೆಲ್‌ಫೈರ್‌ ವಾಹನವನ್ನು ಬಿಡುಗಡೆಗೊಳಿಸಿದೆ.

Most Read Articles

Kannada
English summary
Cars sold in pakistan but not in India - Read in kannada
Story first published: Monday, August 26, 2019, 16:18 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X