ಮಾರುತಿ ಬ್ರೆಝಾ ಕಾರಿಗೆ ಪೈಪೋಟಿಯಾಗಿ ಸಿಟ್ರನ್ ಹೊಸ ಕಂಪ್ಯಾಕ್ಟ್ ಎಸ್‌ಯುವಿ

ಭಾರತದಲ್ಲಿ ಸದ್ಯ ವಿದೇಶಿ ಕಾರು ಉತ್ಪಾದನಾ ಸಂಸ್ಥೆಗಳು ತಮ್ಮ ವಿನೂತನ ಉತ್ಪನ್ನಗಳ ಮೂಲಕ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದು, ಈ ನಿಟ್ಟಿನಲ್ಲಿ ಫ್ರೆಂಚ್ ಜನಪ್ರಿಯ ಕಾರು ಉತ್ಪಾದನಾ ಸಂಸ್ಥೆಯಾದ ಸಿಟ್ರನ್ ಸಂಸ್ಥೆಯು ದೇಶಿಯ ಮಾರುಕಟ್ಟೆಯಲ್ಲಿ ಭಾರೀ ಸಂಚಲನ ಮೂಡಿಸುತ್ತಿದೆ. ಭಾರತೀಯ ಗ್ರಾಹಕರ ಬೇಡಿಕೆಗೆ ತಕ್ಕಂತೆ ಹಲವು ಹೊಸ ಕಾರುಗಳನ್ನು ಪರಿಚಯಿಸುತ್ತಿರುವ ಸಿಟ್ರನ್ ಸಂಸ್ಥೆಯು ಸ್ಪರ್ಧಾತ್ಮಕ ಬೆಲೆಗಳಲ್ಲಿ ಹೊಸ ಅಧ್ಯಾಯ ಶುರು ಮಾಡುತ್ತಿದೆ.

ಮಾರುತಿ ಬ್ರೆಝಾ ಕಾರಿಗೆ ಪೈಪೋಟಿಯಾಗಿ ಸಿಟ್ರನ್ ಹೊಸ ಕಂಪ್ಯಾಕ್ಟ್ ಎಸ್‌ಯುವಿ

ಸದ್ಯ ಯುರೋಪ್ ಮಾರುಕಟ್ಟೆಗಳಲ್ಲಿ ಈಗಾಗಲೇ ಭಾರೀ ಪ್ರಮಾಣದ ಕಾರು ಮಾರಾಟ ಮಾಡುತ್ತಿರುವ ಪಿಎಸ್ಎ ಗ್ರೂಪ್ ಅಂಗಸಂಸ್ಥೆಯಾದ ಸಿಟ್ರನ್ ಸಂಸ್ಥೆಯು ಭಾರತದಲ್ಲೂ ಕೂಡಾ ಹೊಸ ಅಧ್ಯಾಯ ಶುರು ಮಾಡಿದ್ದು, ಮೊದಲ ಹಂತವಾಗಿ ಬಿಡುಗಡೆ ಮಾಡಲಿರುವ ಕಾರನ್ನ ಈಗಾಗಲೇ ಪ್ರದರ್ಶನ ಮಾಡಿದ್ದಲ್ಲದೇ 2020ರ ಆರಂಭದಲ್ಲಿ ಬಿಡುಗಡೆ ಮಾಡುವುದಾಗಿ ಅಧಿಕೃತವಾಗಿ ಹೇಳಿಕೊಂಡಿದೆ. ಇದರ ಮಧ್ಯೆ ಮತ್ತೊಂದು ಗೇಮ್ ಚೆಂಜರ್ ಕಾರು ಬಿಡುಗಡೆಯ ಸುಳಿವು ನೀಡಿದೆ.

ಮಾರುತಿ ಬ್ರೆಝಾ ಕಾರಿಗೆ ಪೈಪೋಟಿಯಾಗಿ ಸಿಟ್ರನ್ ಹೊಸ ಕಂಪ್ಯಾಕ್ಟ್ ಎಸ್‌ಯುವಿ

ಹೌದು, ಸಿಟ್ರನ್ ಸಂಸ್ಥೆಯು ಸಿ5 ಏರೋಕ್ರಾಸ್ ಎಸ್‌ಯುವಿ ಕಾರು ಬಿಡುಗಡೆಯ ನಂತರ ಮತ್ತೊಂದು ಗೇಮ್‌ಚೆಂಜರ್ ಕಂಪ್ಯಾಕ್ಟ್ ಎಸ್‌ಯುವಿ ಕಾರು ಮಾದರಿಯನ್ನು ಬಿಡುಗಡೆಯ ತವಕದಲ್ಲಿದ್ದು, ಮಾರುತಿ ಸುಜುಕಿ ಬ್ರೆಝಾ, ಮಹೀಂದ್ರಾ ಎಕ್ಸ್‌ಯುವಿ300 ಮತ್ತು ಹ್ಯುಂಡೈ ವೆನ್ಯೂ ಮತ್ತು ಟಾಟಾ ನೆಕ್ಸಾನ್ ಕಾರುಗಳಿಗೆ ಪೈಪೋಟಿ ನೀಡುವ ತವಕದಲ್ಲಿದೆ.

ಮಾರುತಿ ಬ್ರೆಝಾ ಕಾರಿಗೆ ಪೈಪೋಟಿಯಾಗಿ ಸಿಟ್ರನ್ ಹೊಸ ಕಂಪ್ಯಾಕ್ಟ್ ಎಸ್‌ಯುವಿ

ಸಿ5 ಏರೋಕ್ರಾಸ್ ಎಸ್‌ಯುವಿ ಕಾರು ರೂ. 15 ಲಕ್ಷದಿಂದ ರೂ.20 ಲಕ್ಷ ಬೆಲೆ ಅಂತರದೊಂದಿಗೆ ಟಾಟಾ ಹ್ಯಾರಿಯರ್, ಜೀಪ್ ಕಂಪಾಸ್ ಕಾರುಗಳಿಗೆ ಪೈಪೋಟಿ ನೀಡಲಿದ್ದರೆ ಇನ್ನು ಹೆಸರಿಡದ ಹೊಸ ಕಂಪ್ಯಾಕ್ಟ್ ಎಸ್‌ಯುವಿ ಮಾದರಿಯು ರೂ.7 ಲಕ್ಷ ಆರಂಭಿಕ ಬೆಲೆ ಹೊಂದಲಿಯೆಂತೆ.

ಮಾರುತಿ ಬ್ರೆಝಾ ಕಾರಿಗೆ ಪೈಪೋಟಿಯಾಗಿ ಸಿಟ್ರನ್ ಹೊಸ ಕಂಪ್ಯಾಕ್ಟ್ ಎಸ್‌ಯುವಿ

ಪ್ರಸ್ತುತ ಮಾರುಕಟ್ಟೆಯಲ್ಲಿ ಬಹುತೇಕ ಕಂಪ್ಯಾಕ್ಟ್ ಎಸ್‌ಯುವಿ ಕಾರುಗಳು ಆರಂಭಿಕವಾಗಿ ರೂ.6.50 ಲಕ್ಷದಿಂದ ರೂ. 11.50 ಲಕ್ಷ ಬೆಲೆ ಅಂತರದಲ್ಲಿ ಮಾರಾಟವಾಗುತ್ತಿದ್ದು, ಇದನ್ನೇ ಪ್ರಧಾನವಾಗಿಟ್ಟುಕೊಂಡಿರುವ ಸಿಟ್ರನ್ ಸಂಸ್ಥೆಯು ಅಂತರಾಷ್ಟ್ರೀಯ ಮಟ್ಟದಲ್ಲಿ ಜನಪ್ರಿಯವಾಗಿರುವ ಸಿ3 ಕಾರನ್ನು ಭಾರತದಲ್ಲಿ ಬದಲಿ ಹೆಸರಿನೊಂದಿಗೆ ಮರುಬಿಡುಗಡೆಯಾಗಿ ಚಿಂತನೆ ನಡೆಸಿದೆ.

ಮಾರುತಿ ಬ್ರೆಝಾ ಕಾರಿಗೆ ಪೈಪೋಟಿಯಾಗಿ ಸಿಟ್ರನ್ ಹೊಸ ಕಂಪ್ಯಾಕ್ಟ್ ಎಸ್‌ಯುವಿ

ಇದಕ್ಕಾಗಿಯೇ ಸಿಟ್ರನ್ ಸಂಸ್ಥೆಯು ಕಾರುಗಳ ಬೆಲೆಗಳನ್ನು ತಗ್ಗಿಸುವ ಸಂಬಂಧ ಮಹತ್ವದ ಹೆಜ್ಜೆಯಿರಿಸಿದ್ದು, ಶೇ.95ರಷ್ಟು ಸ್ಥಳೀಯವಾಗಿಯೇ ಹೊಸ ಕಾರುಗಳನ್ನು ಅಭಿವೃದ್ಧಿಪಡಿಸಿ ಮಾರಾಟ ಮಾಡುವ ಗುರಿಹೊಂದಿರುವ ಸಿಟ್ರನ್ ಸಂಸ್ಥೆಯು ಇತರೆ ಕಾರು ಸಂಸ್ಥೆಗಳಿಂತಲೂ ಅತಿ ಕಡಿಮೆ ಬೆಲೆಯಲ್ಲಿ ಕಾರು ಮಾರಾಟ ಮಾಡುವ ಸುಳಿವು ನೀಡಿದೆ.

ಮಾರುತಿ ಬ್ರೆಝಾ ಕಾರಿಗೆ ಪೈಪೋಟಿಯಾಗಿ ಸಿಟ್ರನ್ ಹೊಸ ಕಂಪ್ಯಾಕ್ಟ್ ಎಸ್‌ಯುವಿ

ಮೇಕ್ ಇನ್ ಇಂಡಿಯಾ ಯೋಜನೆಯು ಸಿಟ್ರನ್ ಸಂಸ್ಥೆಯ ಹೊಸ ಕಾರು ಭಾರತದಲ್ಲೂ ಬಿಡುಗಡೆಯಾಗುವುದಕ್ಕೆ ಪ್ರಮುಖ ಕಾರಣವಾಗಿದ್ದು, ಈ ಹಿಂದೆಯೂ ಬಿಡುಗಡೆಗಾಗಿ ಮುಂದಾಗಿದ್ದ ಸಿಟ್ರನ್ ಸಂಸ್ಥೆಗೆ ದುಬಾರಿ ಉತ್ಪಾದನಾ ವೆಚ್ಚಗಳ ಕಾರಣದಿಂದಾಗಿ ಹಿಂದೆ ಸರಿದಿತ್ತು.

ಮಾರುತಿ ಬ್ರೆಝಾ ಕಾರಿಗೆ ಪೈಪೋಟಿಯಾಗಿ ಸಿಟ್ರನ್ ಹೊಸ ಕಂಪ್ಯಾಕ್ಟ್ ಎಸ್‌ಯುವಿ

ಆದ್ರೆ, ಈ ಬಾರಿ ಮೇಕ್ ಇನ್ ಇಂಡಿಯಾ ಯೋಜನೆಯನ್ನು ಸಮರ್ಥವಾಗಿ ಬಳಸಿಕೊಳ್ಳುವ ಮೂಲಕ ಭಾರತದಲ್ಲೇ ಶೇ.95 ರಷ್ಟು ಕಾರು ನಿರ್ಮಾಣವನ್ನು ಪೂರ್ಣಗೊಳಿಸಲು ನಿರ್ಧರಿಸಿರುವ ಸಿಟ್ರನ್ ಸಂಸ್ಥೆಯು ಬಹುತೇಕ ಬಿಡಿ ಭಾಗಗಳನ್ನು ಸ್ಪದೇಶಿ ಸಂಸ್ಥೆಗಳಿಂದ ಎರವಲು ಪಡೆಯಲು ನಿರ್ಧರಿಸಿದೆ.

MOST READ: ನಿಮ್ಮ ವಾಹನಗಳ ಮೈಲೇಜ್ ಕಡಿತವಾಗುತ್ತಿರುವುದಕ್ಕೆ ಅಸಲಿ ಕಾರಣ ಏನು ಗೊತ್ತಾ?

ಮಾರುತಿ ಬ್ರೆಝಾ ಕಾರಿಗೆ ಪೈಪೋಟಿಯಾಗಿ ಸಿಟ್ರನ್ ಹೊಸ ಕಂಪ್ಯಾಕ್ಟ್ ಎಸ್‌ಯುವಿ

ಇದರಿಂದ ಕೈಗೆಟುಕುವ ಬೆಲೆಗಳಲ್ಲಿ ಉತ್ತಮ ಕಾರುಗಳನ್ನು ನೀಡಲು ಯೋಜಿಸಿರುವ ಸಿಟ್ರನ್ ಸಂಸ್ಥೆಯು ಈಗಾಗಲೇ ದೇಶಾದ್ಯಂತ ಬ್ರಾಂಡ್ ಅರಿವು ಮೂಡಿಸುವ ಕಾರ್ಯಕ್ರಮಗಳಿಗೆ ಚಾಲನೆ ನೀಡಿದ್ದು, ಸಿ5 ಏರೋಕ್ರಾಸ್ ಕಾರುಗಳು ತುಸು ದುಬಾರಿ ಬೆಲೆಗಳಲ್ಲಿ ಐಷಾರಾಮಿ ಕಾರು ಮಾದರಿಯಾಗಿ ಮಾರಾಟವಾಗಲಿದ್ದರೆ, ಮಧ್ಯಮ ವರ್ಗದ ಬೇಡಿಕೆ ಪೂರೈಸಲು ಕಂಪ್ಯಾಕ್ಟ್ ಎಸ್‌ಯುವಿ ಕಾರು ರಸ್ತೆಗಿಳಿಯಲಿದೆ.

ಮಾರುತಿ ಬ್ರೆಝಾ ಕಾರಿಗೆ ಪೈಪೋಟಿಯಾಗಿ ಸಿಟ್ರನ್ ಹೊಸ ಕಂಪ್ಯಾಕ್ಟ್ ಎಸ್‌ಯುವಿ

ಮಾಹಿತಿಗಳ ಪ್ರಕಾರ, ಸಿ5 ಏರೋಕ್ರಾಸ್ ಕಾರು 2020ರ ದೆಹಲಿ ಆಟೋಮೇಳದಲ್ಲಿ ಭಾಗಿಯಾದ ನಂತರವಷ್ಟೇ ಬಿಡುಗಡೆಯಾಗಲಿದ್ದು, ತದನಂತರವಷ್ಟೇ 2020ರ ಕೊನೆಯಲ್ಲಿ ಇಲ್ಲವೇ 2021ರ ಆರಂಭದಲ್ಲಿ ಹೊಸ ಕಂಪ್ಯಾಕ್ಟ್ ಕಾರು ಖರೀದಿಗೆ ಲಭ್ಯವಾಗಲಿದೆ.

MOST READ: ಜೀಪ್ ಕಂಪಾಸ್ ಕಾರಿನ ರಿಪೇರಿ ಬಿಲ್ ಕೇಳಿ ಮಾಲೀಕ ಕಕ್ಕಾಬಿಕ್ಕಿ..!

ಮಾರುತಿ ಬ್ರೆಝಾ ಕಾರಿಗೆ ಪೈಪೋಟಿಯಾಗಿ ಸಿಟ್ರನ್ ಹೊಸ ಕಂಪ್ಯಾಕ್ಟ್ ಎಸ್‌ಯುವಿ

ಇನ್ನು ಸಿ5 ಏರೋಕ್ರಾಸ್ ಕಾರು 1.5-ಲೀಟರ್ ಪೆಟ್ರೋಲ್, 1.5-ಲೀಟರ್ ಡೀಸೆಲ್ ಮತ್ತು ಪರ್ಫಾಮೆನ್ಸ್ ಪ್ರಿಯರಿಗಾಗಿ 2.0-ಲೀಟರ್ ಡೀಸೆಲ್ ಎಂಜಿನ್ ಪಡೆಯಲಿದ್ದರೆ, ಕಂಪ್ಯಾಕ್ಟ್ ಎಸ್‌ಯುವಿ ಮಾದರಿಯು 1.2-ಲೀಟರ್ ತ್ರಿ ಸಿಲಿಂಡರ್ ಪೆಟ್ರೋಲ್ ಮತ್ತು 1.5-ಲೀಟರ್ ಡೀಸೆಲ್ ಎಂಜಿನ್‌ನೊಂದಿಗೆ ಉತ್ತಮ ಪರ್ಫಾಮೆನ್ಸ್ ಹೊಂದಿರಲಿವೆ.

Source: ACI

Most Read Articles

Kannada
English summary
French car maker, Citroen is planning to launch sub-compact suv in India by 2021.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X