ಸಾಮಾನ್ಯ ಕಾರುಗಳನ್ನೇ ಹೈಬ್ರಿಡ್ ಅಥವಾ ಎಲೆಕ್ಟ್ರಿಕ್ ಮಾದರಿಗಳನ್ನಾಗಿ ಬದಲಿಸಲಿದೆ ಸಿಟ್ರನ್

ಫ್ರೆಂಚ್ ಕಾರು ಉತ್ಪಾದನಾ ಸಂಸ್ಥೆಯಾಗಿರುವ ಸಿಟ್ರನ್ ಸದ್ಯ ಎಲೆಕ್ಟ್ರಿಕ್ ಮತ್ತು ಹೈಬ್ರಿಡ್ ವರ್ಷನ್ ಕಾರು ಆವೃತ್ತಿಗಳ ಅಭಿವೃದ್ಧಿ ಮೇಲೆ ಹೆಚ್ಚಿನ ಒತ್ತು ನೀಡುತ್ತಿದ್ದು, ಸಾಮಾನ್ಯ ಕಾರುಗಳನ್ನೇ ಹಸಿರು ವಾಹನಗಳನ್ನಾಗಿ ಪರಿವರ್ತಿಸುವ ಬಗ್ಗೆ ಸುಳಿವು ನೀಡಿದೆ. ಹೌದು, 2030ರ ವೇಳೆಗೆ ಶೇ.100ರಷ್ಟು ಎಲೆಕ್ಟ್ರಿಕ್ ಮತ್ತು ಹೈಬ್ರಿಡ್ ವಾಹನಗಳನ್ನು ರಸ್ತೆಗಿಳಿಸುವ ಬಗ್ಗೆ ವಿಶ್ವಾದ್ಯಂತ ವಿವಿಧ ಯೋಜನೆಗಳನ್ನು ರೂಪಿಸಲಾಗುತ್ತಿದ್ದು, ಸಿಟ್ರನ್ ಸೇರಿದಂತೆ ಬಹುತೇಕ ಆಟೋ ಉತ್ಪಾದನಾ ಸಂಸ್ಥೆಗಳು ಹಸಿರುವಾಹನಗಳ ಉತ್ಪಾದನೆ ಮೇಲೆ ಭಾರೀ ಪ್ರಮಾಣದ ಹೂಡಿಕೆ ಮಾಡುತ್ತಿವೆ.

ಸಾಮಾನ್ಯ ಕಾರುಗಳನ್ನೇ ಹೈಬ್ರಿಡ್ ಅಥವಾ ಎಲೆಕ್ಟ್ರಿಕ್ ಮಾದರಿಗಳನ್ನಾಗಿ ಬದಲಿಸಲಿದೆ ಸಿಟ್ರನ್

ಹೆಚ್ಚುತ್ತಿರುವ ಮಾಲಿನ್ಯವನ್ನು ತಡೆಯುವ ಉದ್ದೇಶದಿಂದ ಪೆಟ್ರೋಲ್ ಮತ್ತು ಡೀಸೆಲ್ ವಾಹನಗಳನ್ನು ತಗ್ಗಿಸಲು ಹಲವಾರು ಕ್ರಮಗಳನ್ನು ಕೈಗೊಳ್ಳಲಾಗುತ್ತಿದ್ದು, ಭಾರತದಲ್ಲೂ ಸಹ ಎಲೆಕ್ಟ್ರಿಕ್ ವಾಹನಗಳನ್ನು ಉತ್ತೇಜಿಸುವ ನಿಟ್ಟಿನಲ್ಲಿ ಪ್ರಮುಖ ನಿರ್ಣಯಗಳನ್ನು ಪ್ರಕಟಿಸಲಾಗಿದೆ. ಎಲೆಕ್ಟ್ರಿಕ್ ಕಾರುಗಳ ಉತ್ಪಾದನಾ ಸಂಸ್ಥೆಗಳ ಜೊತೆಗೆ ಖರೀದಿದಾರರಿಗೂ ಸಬ್ಸಡಿ, ತೆರಿಗೆ ವಿನಾಯ್ತಿ ಸೌಲಭ್ಯಗಳನ್ನು ನೀಡಲಾಗುತ್ತಿದ್ದು, ಇದೀಗ ಭಾರತದಲ್ಲಿ ಮೊದಲ ಬಾರಿಗೆ ಕಾರು ಮಾರಾಟವನ್ನು ಆರಂಭಿಸುತ್ತಿರುವ ಸಿಟ್ರನ್ ಕೂಡಾ ವಿನೂತನ ಯೋಜನೆಯೊಂದನ್ನು ರೂಪಿಸಿದೆ.

ಸಾಮಾನ್ಯ ಕಾರುಗಳನ್ನೇ ಹೈಬ್ರಿಡ್ ಅಥವಾ ಎಲೆಕ್ಟ್ರಿಕ್ ಮಾದರಿಗಳನ್ನಾಗಿ ಬದಲಿಸಲಿದೆ ಸಿಟ್ರನ್

2025ರ ವೇಳೆಗೆ ಶೇ.100ರಷ್ಟು ಎಲೆಕ್ಟ್ರಿಕ್ ಮತ್ತು ಹೈಬ್ರಿಡ್ ವಾಹನಗಳನ್ನು ಮಾತ್ರವೇ ಉತ್ಪಾದನೆ ಮತ್ತು ಮಾರಾಟ ಪ್ರಕ್ರಿಯೆಯನ್ನು ಕೈಗೊಳ್ಳುವುದಾಗಿ ಭರವಸೆ ನೀಡಿರುವ ಸಿಟ್ರನ್ ಸಂಸ್ಥೆಯು ವಿಶೇಷ ತಂತ್ರಜ್ಞಾನ ಬಳಕೆಯೊಂದಿಗೆ ಸದ್ಯ ಮಾರುಕಟ್ಟೆಯಲ್ಲಿರುವ ಸಾಮಾನ್ಯ ವಾಹನಗಳನ್ನು ಸಹ ಎಲೆಕ್ಟ್ರಿಕ್ ಮತ್ತು ಹೈಬ್ರಿಡ್ ಎಂಜಿನ್ ಆಗಿಯೂ ಪರಿವರ್ತನೆ ಮಾಡುವ ಯೋಜನೆಗೂ ಚಾಲನೆ ನೀಡುವುದಾಗಿ ಹೇಳಿದೆ.

ಸಾಮಾನ್ಯ ಕಾರುಗಳನ್ನೇ ಹೈಬ್ರಿಡ್ ಅಥವಾ ಎಲೆಕ್ಟ್ರಿಕ್ ಮಾದರಿಗಳನ್ನಾಗಿ ಬದಲಿಸಲಿದೆ ಸಿಟ್ರನ್

ಅಂದರೆ, ನಿಮ್ಮ ಬಳಿಯಿರುವ ಸಾಮಾನ್ಯ ಪೆಟ್ರೋಲ್ ಮತ್ತು ಡೀಸೆಲ್ ಕಾರುಗಳನ್ನೇ ಎಲೆಕ್ಟ್ರಿಕ್ ಮತ್ತು ಹೈಬ್ರಿಡ್ ಮಾದರಿಗಳಿಗೆ ಪರಿವರ್ತನೆ ಮಾಡಿಕೊಡುವ ಸಿಟ್ರನ್ ಸಂಸ್ಥೆಯು ಹೊಸ ಕಾರು ಉತ್ಪಾದನೆಯಷ್ಟೇ ಆದಾಯ ಗಳಿಕೆಯ ಮಾರ್ಗವನ್ನು ಸೂಚಿಸಿದೆ. ಇದು ಎಲೆಕ್ಟ್ರಿಕ್ ಕಾರು ಖರೀದಿ ಮಾಡಬೇಕೆಂಬ ಗ್ರಾಹಕರಿಗೆ ವರವಾಗಲಿದ್ದು, ಹೆಚ್ಚುತ್ತಿರುವ ಮಾಲಿನ್ಯ ಪ್ರಮಾಣವನ್ನು ಇದರಿಂದ ಅತಿ ಕಡಿಮೆ ಅವಧಿಯಲ್ಲಿ ಪರಿಣಮಕಾರಿಯಾಗಿ ತಗ್ಗಿಸಬಹುದಾಗಿದೆ.

ಸಾಮಾನ್ಯ ಕಾರುಗಳನ್ನೇ ಹೈಬ್ರಿಡ್ ಅಥವಾ ಎಲೆಕ್ಟ್ರಿಕ್ ಮಾದರಿಗಳನ್ನಾಗಿ ಬದಲಿಸಲಿದೆ ಸಿಟ್ರನ್

ಇನ್ನು ಭಾರತದಲ್ಲಿ ಸದ್ಯ ವಿದೇಶಿ ಕಾರು ಉತ್ಪಾದನಾ ಸಂಸ್ಥೆಗಳು ತಮ್ಮ ವಿನೂತನ ಉತ್ಪನ್ನಗಳ ಮೂಲಕ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದು, ಈ ನಿಟ್ಟಿನಲ್ಲಿ ಫ್ರೆಂಚ್ ಜನಪ್ರಿಯ ಕಾರು ಉತ್ಪಾದನಾ ಸಂಸ್ಥೆಯಾದ ಸಿಟ್ರನ್ ಸಂಸ್ಥೆಯು ದೇಶಿಯ ಮಾರುಕಟ್ಟೆಯಲ್ಲಿ ಭಾರೀ ಸಂಚಲನ ಮೂಡಿಸುತ್ತಿದೆ. ಭಾರತೀಯ ಗ್ರಾಹಕರ ಬೇಡಿಕೆಗೆ ತಕ್ಕಂತೆ ಹಲವು ಹೊಸ ಕಾರುಗಳನ್ನು ಪರಿಚಯಿಸುತ್ತಿರುವ ಸಿಟ್ರನ್ ಸಂಸ್ಥೆಯು ಸ್ಪರ್ಧಾತ್ಮಕ ಬೆಲೆಗಳಲ್ಲಿ ಹೊಸ ಕಾರುಗಳನ್ನು ಅಭಿವೃದ್ಧಿಪಡಿಸುತ್ತಿದೆ.

ಸಾಮಾನ್ಯ ಕಾರುಗಳನ್ನೇ ಹೈಬ್ರಿಡ್ ಅಥವಾ ಎಲೆಕ್ಟ್ರಿಕ್ ಮಾದರಿಗಳನ್ನಾಗಿ ಬದಲಿಸಲಿದೆ ಸಿಟ್ರನ್

ಹೋಂಡಾ ಸಿಟಿ ಮತ್ತು ಮಾರುತಿ ಸುಜುಕಿ ಸಿಯಾಜ್‌ಗೆ ಟಕ್ಕರ್ ನೀಡುತ್ತಿರುವ ಟೊಯೊಟಾ ಯಾರಿಸ್ ಖರೀದಿಗೆ ಈಗಲೇ ಟೆಸ್ಟ್ ಡ್ರೈವ್ ಮಾಡಿ..!

ಸಿಟ್ರನ್ ಸಂಸ್ಥೆಯು ಈಗಾಗಲೇ ಸಿ5 ಏರೋಕ್ರಾಸ್ ಎಸ್‌ಯುವಿ ಕಾರನ್ನು ಬಿಡುಗಡೆಗೊಳಿಸುವ ಸಂಬಂಧ ಪ್ರದರ್ಶನ ಮಾಡಿದ್ದು, ತದನಂತರ ಮತ್ತೊಂದು ಗೇಮ್‌ಚೆಂಜರ್ ಕಂಪ್ಯಾಕ್ಟ್ ಎಸ್‌ಯುವಿ ಕಾರು ಮಾದರಿಯನ್ನು ಬಿಡುಗಡೆ ಮಾಡುವುದಾಗಿ ಹೇಳಿಕೊಂಡಿದೆ. ಮಾರುತಿ ಸುಜುಕಿ ಬ್ರೆಝಾ, ಮಹೀಂದ್ರಾ ಎಕ್ಸ್‌ಯುವಿ300 ಮತ್ತು ಹ್ಯುಂಡೈ ವೆನ್ಯೂ ಮತ್ತು ಟಾಟಾ ನೆಕ್ಸಾನ್ ಕಾರುಗಳಿಗೆ ಸಿಟ್ರನ್ ಹೊಸ ಕಂಪ್ಯಾಕ್ಟ್ ಎಸ್‌ಯುವಿ ಕಾರು ಪೈಪೋಟಿ ನೀಡಲಿದೆ.

ಸಾಮಾನ್ಯ ಕಾರುಗಳನ್ನೇ ಹೈಬ್ರಿಡ್ ಅಥವಾ ಎಲೆಕ್ಟ್ರಿಕ್ ಮಾದರಿಗಳನ್ನಾಗಿ ಬದಲಿಸಲಿದೆ ಸಿಟ್ರನ್

ಸಿ5 ಏರೋಕ್ರಾಸ್ ಎಸ್‌ಯುವಿ ಕಾರು ರೂ. 15 ಲಕ್ಷದಿಂದ ರೂ.20 ಲಕ್ಷ ಬೆಲೆ ಅಂತರದೊಂದಿಗೆ ಟಾಟಾ ಹ್ಯಾರಿಯರ್, ಜೀಪ್ ಕಂಪಾಸ್ ಕಾರುಗಳಿಗೆ ಪೈಪೋಟಿ ನೀಡಲಿದ್ದರೆ ಇನ್ನೂ ಹೆಸರಿಡದ ಹೊಸ ಕಂಪ್ಯಾಕ್ಟ್ ಎಸ್‌ಯುವಿ ಮಾದರಿಯು ರೂ.7 ಲಕ್ಷ ಆರಂಭಿಕ ಬೆಲೆಯೊಂದಿಗೆ ಅತ್ಯುತ್ತಮ ಮಾರಾಟ ಕಾರು ಮಾದರಿಯಾಗುವ ತವಕದಲ್ಲಿದೆ.

ಸಾಮಾನ್ಯ ಕಾರುಗಳನ್ನೇ ಹೈಬ್ರಿಡ್ ಅಥವಾ ಎಲೆಕ್ಟ್ರಿಕ್ ಮಾದರಿಗಳನ್ನಾಗಿ ಬದಲಿಸಲಿದೆ ಸಿಟ್ರನ್

ಪ್ರಸ್ತುತ ಮಾರುಕಟ್ಟೆಯಲ್ಲಿ ಬಹುತೇಕ ಕಂಪ್ಯಾಕ್ಟ್ ಎಸ್‌ಯುವಿ ಕಾರುಗಳು ಆರಂಭಿಕವಾಗಿ ರೂ.6.50 ಲಕ್ಷದಿಂದ ರೂ. 11.50 ಲಕ್ಷ ಬೆಲೆ ಅಂತರದಲ್ಲಿ ಮಾರಾಟವಾಗುತ್ತಿದ್ದು, ಇದನ್ನೇ ಪ್ರಧಾನವಾಗಿಟ್ಟುಕೊಂಡಿರುವ ಸಿಟ್ರನ್ ಸಂಸ್ಥೆಯು ಅಂತರಾಷ್ಟ್ರೀಯ ಮಟ್ಟದಲ್ಲಿ ಜನಪ್ರಿಯವಾಗಿರುವ ಸಿ3 ಕಾರನ್ನು ಭಾರತದಲ್ಲಿ ಬದಲಿ ಹೆಸರಿನೊಂದಿಗೆ ಮರುಬಿಡುಗಡೆಯಾಗಿ ಚಿಂತನೆ ನಡೆಸಿದೆ.

ಸಾಮಾನ್ಯ ಕಾರುಗಳನ್ನೇ ಹೈಬ್ರಿಡ್ ಅಥವಾ ಎಲೆಕ್ಟ್ರಿಕ್ ಮಾದರಿಗಳನ್ನಾಗಿ ಬದಲಿಸಲಿದೆ ಸಿಟ್ರನ್

ಇದಕ್ಕಾಗಿಯೇ ಸಿಟ್ರನ್ ಸಂಸ್ಥೆಯು ಕಾರುಗಳ ಬೆಲೆಗಳನ್ನು ತಗ್ಗಿಸುವ ಸಂಬಂಧ ಮಹತ್ವದ ಹೆಜ್ಜೆಯಿರಿಸಿದ್ದು, ಶೇ.95ರಷ್ಟು ಸ್ಥಳೀಯವಾಗಿಯೇ ಹೊಸ ಕಾರುಗಳನ್ನು ಅಭಿವೃದ್ಧಿಪಡಿಸಿ ಮಾರಾಟ ಮಾಡುವ ಗುರಿಹೊಂದಿರುವ ಸಿಟ್ರನ್ ಸಂಸ್ಥೆಯು ಇತರೆ ಕಾರು ಸಂಸ್ಥೆಗಳಿಂತಲೂ ಅತಿ ಕಡಿಮೆ ಬೆಲೆಯಲ್ಲಿ ಕಾರು ಮಾರಾಟ ಮಾಡುವ ಸುಳಿವು ನೀಡಿದೆ.

ಸಾಮಾನ್ಯ ಕಾರುಗಳನ್ನೇ ಹೈಬ್ರಿಡ್ ಅಥವಾ ಎಲೆಕ್ಟ್ರಿಕ್ ಮಾದರಿಗಳನ್ನಾಗಿ ಬದಲಿಸಲಿದೆ ಸಿಟ್ರನ್

ಮೇಕ್ ಇನ್ ಇಂಡಿಯಾ ಯೋಜನೆಯು ಸಿಟ್ರನ್ ಸಂಸ್ಥೆಯ ಹೊಸ ಕಾರು ಭಾರತದಲ್ಲೂ ಬಿಡುಗಡೆಯಾಗುವುದಕ್ಕೆ ಪ್ರಮುಖ ಕಾರಣವಾಗಿದ್ದು, ಈ ಹಿಂದೆಯೂ ಬಿಡುಗಡೆಗಾಗಿ ಮುಂದಾಗಿದ್ದ ಸಿಟ್ರನ್ ಸಂಸ್ಥೆಗೆ ದುಬಾರಿ ಉತ್ಪಾದನಾ ವೆಚ್ಚಗಳ ಕಾರಣದಿಂದಾಗಿ ಹಿಂದೆ ಸರಿದಿತ್ತು. ಆದ್ರೆ, ಈ ಬಾರಿ ಮೇಕ್ ಇನ್ ಇಂಡಿಯಾ ಯೋಜನೆಯನ್ನು ಸಮರ್ಥವಾಗಿ ಬಳಸಿಕೊಳ್ಳುವ ಮೂಲಕ ಭಾರತದಲ್ಲೇ ಶೇ.95 ರಷ್ಟು ಕಾರು ನಿರ್ಮಾಣವನ್ನು ಪೂರ್ಣಗೊಳಿಸಲು ನಿರ್ಧರಿಸಿರುವ ಸಿಟ್ರನ್ ಸಂಸ್ಥೆಯು ಬಹುತೇಕ ಬಿಡಿ ಭಾಗಗಳನ್ನು ಸ್ಪದೇಶಿ ಸಂಸ್ಥೆಗಳಿಂದ ಎರವಲು ಪಡೆಯಲು ನಿರ್ಧರಿಸಿದೆ.

ಸಾಮಾನ್ಯ ಕಾರುಗಳನ್ನೇ ಹೈಬ್ರಿಡ್ ಅಥವಾ ಎಲೆಕ್ಟ್ರಿಕ್ ಮಾದರಿಗಳನ್ನಾಗಿ ಬದಲಿಸಲಿದೆ ಸಿಟ್ರನ್

ಇದರಿಂದ ಕೈಗೆಟುಕುವ ಬೆಲೆಗಳಲ್ಲಿ ಉತ್ತಮ ಕಾರುಗಳನ್ನು ನೀಡಲು ಯೋಜಿಸಿರುವ ಸಿಟ್ರನ್ ಸಂಸ್ಥೆಯು ಈಗಾಗಲೇ ದೇಶಾದ್ಯಂತ ಬ್ರಾಂಡ್ ಅರಿವು ಮೂಡಿಸುವ ಕಾರ್ಯಕ್ರಮಗಳಿಗೆ ಚಾಲನೆ ನೀಡಿದ್ದು, ಸಿ5 ಏರೋಕ್ರಾಸ್ ಕಾರುಗಳು ತುಸು ದುಬಾರಿ ಬೆಲೆಗಳಲ್ಲಿ ಐಷಾರಾಮಿ ಕಾರು ಮಾದರಿಯಾಗಿ ಮಾರಾಟವಾಗಲಿದ್ದರೆ, ಮಧ್ಯಮ ವರ್ಗದ ಬೇಡಿಕೆ ಪೂರೈಸಲು ಕಂಪ್ಯಾಕ್ಟ್ ಎಸ್‌ಯುವಿ ಕಾರು ರಸ್ತೆಗಿಳಿಯಲಿದೆ.

Most Read Articles

Kannada
English summary
Citroen Reveals Plan To Convert All Its Cars To Electric Or Plug-In Hybrids By 2025.
Story first published: Tuesday, July 23, 2019, 15:48 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X