ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡಿದ ಸಿಎಂ ಕುಮಾರಸ್ವಾಮಿ ಐಷಾರಾಮಿ ಕಾರಿನ ಮೇಲೆ ಕೇಸ್..!

ಸಂಚಾರಿ ನಿಯಮಗಳ ಉಲ್ಲಂಘನೆಯಿಂದಾಗಿ ದಿನಂಪ್ರತಿ ನೂರಾರು ಅಪಘಾತಗಳು ಸಂಭವಿಸುತ್ತಿದ್ದು, ಸಂಚಾರಿ ನಿಯಮ ಉಲ್ಲಂಘಿಸುವ ವಾಹನಗಳ ಮೇಲೆ ಕೇಸ್ ಜಡಿದು ಭಾರೀ ಪ್ರಮಾಣದ ದಂಡವನ್ನು ವಿಧಿಸಲಾಗುತ್ತಿದೆ. ಆದ್ರೆ ನಿಯಮ ಪಾಲಿಸಬೇಕಾದ ರಾಜ್ಯದ ಮುಖ್ಯಮಂತ್ರಿಯವರ ಕಾರಿನ ಮೇಲೆಯೇ ಕೇಸ್ ದಾಖಲಾಗಿರುವುದು ಬೆಳಕಿಗೆ ಬಂದಿದೆ.

ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡಿದ ಸಿಎಂ ಕುಮಾರಸ್ವಾಮಿ ಐಷಾರಾಮಿ ಕಾರಿನ ಮೇಲೆ ಕೇಸ್..!

ಹೌದು, ಸಂಚಾರಿ ನಿಯಮಗಳನ್ನು ಉಲ್ಲಂಘಿಸಿ ಕಾರು ಚಾಲನೆ ಮಾಡಲಾಗುತ್ತಿದ್ದ ಸಿಎಂ ಕುಮಾರಸ್ವಾಮಿಯವರ ಐಷಾರಾಮಿ ಕಾರಿನ ಮೇಲೆ ಕೇಸ್ ದಾಖಲಾಗಿದ್ದು, ಅತಿ ವೇಗ ಹಾಗೂ ಕಾರು ಚಾಲನೆ ವೇಳೆ ಮೊಬೈಲ್ ಬಳಕೆ ಹಿನ್ನೆಲೆಯಲ್ಲಿ ದೂರು ದಾಖಲಾಗಿದೆ. ಆದ್ರೆ ಇಂಟ್ರಸ್ಟಿಂಗ್ ವಿಚಾರ ಅಂದ್ರೆ ಇದುವರೆಗೂ ದಂಡವನ್ನು ಪಾವತಿ ಮಾಡಿಲ್ಲ.

ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡಿದ ಸಿಎಂ ಕುಮಾರಸ್ವಾಮಿ ಐಷಾರಾಮಿ ಕಾರಿನ ಮೇಲೆ ಕೇಸ್..!

ಕಳೆದ ತಿಂಗಳು ಫೆಬ್ರುವರಿ 10 ಮತ್ತು ಫೆಬ್ರುವರಿ 22ರಂದು ಎರಡು ದಿನ ಅವಧಿಯಲ್ಲಿ ಎರಡು ಬಾರಿ ಸಂಚಾರಿ ನಿಯಮ ಉಲ್ಲಂಘಿಸಿದ್ದಕ್ಕಾಗಿ ರೇಂಜ್ ರೋವರ್ ವೋಗ್ ಐಷಾರಾಮಿ ಕಾರಿನ ಮೇಲೆ ದೂರು ದಾಖಲಾಗಿದೆ.

ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡಿದ ಸಿಎಂ ಕುಮಾರಸ್ವಾಮಿ ಐಷಾರಾಮಿ ಕಾರಿನ ಮೇಲೆ ಕೇಸ್..!

ಸಿಗ್ನಲ್‌ಗಳಲ್ಲಿ ಅಳವಡಿಸಿರುವ ಆಟೋಮೆಟೆಡ್ ಎನ್‌ಫೋರ್ಸ್‌ಮೆಂಟ್ ಕ್ಯಾಮೆರಾದಲ್ಲಿ ರೇಂಜ್ ರೋವರ್ ವೋಗ್ ಕಾರಿನ ಸಂಚಾರಿ ನಿಯಮ ಉಲ್ಲಂಘನೆ ಪ್ರಕರಣಗಳು ಪತ್ತೆಯಾಗಿದ್ದು, ಇ-ಚಲನ್ ಮೂಲಕ ದಂಡ ವಿಧಿಸಲಾಗಿದೆ.

ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡಿದ ಸಿಎಂ ಕುಮಾರಸ್ವಾಮಿ ಐಷಾರಾಮಿ ಕಾರಿನ ಮೇಲೆ ಕೇಸ್..!

ಫೆಬ್ರುವರಿ 10ರಂದು ಬೆಳಗ್ಗೆ 9. 27ಕ್ಕೆ ಸದಾಶಿವನಗರದ ಬಳಿ ಕಾರು ಚಾಲನೆಯಲ್ಲಿ ಮೊಬೈಲ್ ಬಳಸಿದ್ದಕ್ಕೆ ರೂ.300 ದಂಡ ಹಾಗೂ ಫೆಬ್ರವರಿ 22ರ ಮಧ್ಯಾಹ್ನ 12.35 ಕ್ಕೆ ಬಸವೇಶ್ವರ ಸರ್ಕಲ್ ಬಳಿ ಓವರ್ ಸ್ಪೀಡ್ ಮಾಡಿರುವ ಹಿನ್ನೆಲೆಯಲ್ಲಿ 300 ರೂ. ದಂಡ ಹಾಕಲಾಗಿದ್ದು, ನೋಟಿಸ್ ನೀಡಿ ಎರಡು ವಾರಗಳಾದ್ರು ಇದುವರೆಗೆ ದಂಡ ಪಾವತಿ ಮಾಡಲಾಗಿಲ್ಲ.

MOST READ: ಕೊಹ್ಲಿಗೆ ಟೋಪಿ ಹಾಕಿದ ಕಾಲ್ ಸೆಂಟರ್ ಕಿಲಾಡಿ- ಠಾಣೆಯಲ್ಲೇ ಅನಾಥವಾಗಿ ಬಿದ್ದ ರೂ. 3 ಕೋಟಿ ಕಾರು..!

ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡಿದ ಸಿಎಂ ಕುಮಾರಸ್ವಾಮಿ ಐಷಾರಾಮಿ ಕಾರಿನ ಮೇಲೆ ಕೇಸ್..!

ಸದ್ಯ ಕುಮಾರಸ್ವಾಮಿಯವರು ಸರ್ಕಾರಿ ವಾಹನವನ್ನು ಬಿಟ್ಟು ಅಧಿಕೃತ ಓಡಾಟಕ್ಕೆ ತಮ್ಮ ಸ್ವಂತ ಬಳಕೆಯ ರೇಂಜ್ ರೋವರ್ ವೋಗ್ (ಕೆಎ 42 ಪಿ 0002) ಕಾರನ್ನೇ ಬಳಕೆ ಮಾಡುತ್ತಿದ್ದು, ಕಸ್ತೂರಿ ಮಿಡಿಯಾ ಪ್ರೈ.ಲಿ ಸಂಸ್ಥೆಯ ಹೆಸರಿನಲ್ಲಿ ಸಿಎಂ ಬಳಕೆಯ ರೇಂಜ್ ರೋವರ್ ವೋಗ್ ಕಾರು ನೋಂದಣಿಯಾಗಿದೆ.

ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡಿದ ಸಿಎಂ ಕುಮಾರಸ್ವಾಮಿ ಐಷಾರಾಮಿ ಕಾರಿನ ಮೇಲೆ ಕೇಸ್..!

4.4-ಲೀಟರ್ ಡೀಸೆಲ್ ಎಂಜಿನ್ ಹೊಂದಿರುವ ಸಿಎಂ ಕುಮಾರಸ್ವಾಮಿ ಬಳಕೆ ಕಾರು ಸುರಕ್ಷಾ ದೃಷ್ಠಿಯಿಂದ ಹಲವು ಗುಣಮಟ್ಟದ ವೈಶಿಷ್ಟ್ಯತೆಗಳನ್ನು ಹೊಂದಿದ್ದು, ಆನ್ ರೋಡ್ ಬೆಲೆಗಳ ಪ್ರಕಾರ ಈ ಕಾರು ರೂ. 2.93 ಕೋಟಿ ಬೆಲೆ ಪಡೆದುಕೊಂಡಿದೆ.

MOST READ: ಟ್ರಾಫಿಕ್ ಪೊಲೀಸರಿಂದ ತಪ್ಪಿಸಿಕೊಳ್ಳಲು ಈ ಸ್ಕೂಟರ್ ಮಾಲೀಕ ಮಾಡಿದ್ದೇನು ಗೊತ್ತಾ?

ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡಿದ ಸಿಎಂ ಕುಮಾರಸ್ವಾಮಿ ಐಷಾರಾಮಿ ಕಾರಿನ ಮೇಲೆ ಕೇಸ್..!

ಇನ್ನು ಸಂಚಾರಿ ನಿಯಮ ಉಲ್ಲಂಘಿಸಿದಾಗ ಮುಖ್ಯಮಂತ್ರಿ ಎಂದು ನೋಡದೇ ಪ್ರಕರಣ ದಾಖಲಿಸಿರುವ ಪೊಲೀಸರ ಕ್ರಮಕ್ಕೆ ಸಾರ್ವಜನಿಕ ವಲಯದಲ್ಲಿ ಶ್ಲಾಘನೆ ವ್ಯಕ್ತವಾಗಿದ್ದು, ಹೆಚ್ಚುತ್ತಿರುವ ಅಪಘಾತ ಪ್ರಕರಣಗಳನ್ನು ತಗ್ಗಿಸಲು ಪ್ರತಿಯೊಬ್ಬರು ಕೂಡಾ ಸಂಚಾರಿ ನಿಯಮಗಳನ್ನು ತಪ್ಪದೇ ಪಾಲಿಸುವ ಅವಶ್ಯಕತೆಯಿದೆ.

Source:newindianexpress

Most Read Articles

Kannada
English summary
Chief Minister H D Kumaraswamy’s personal high-end car, a Range Rover, has been booked for violating traffic rules in February. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X