ಸಿ‍ಎನ್‍‍ಜಿ ಬಸ್‍‍ಗಳನ್ನು ಪರಿಚಯಿಸಲಿದೆ ಕೊಲ್ಕತ್ತಾ ಸಾರಿಗೆ ಸಂಸ್ಥೆ

ಭಾರತದ ಬಹುತೇಕ ಎಲ್ಲಾ ನಗರಗಳಲ್ಲೂ ವಾಯು ಮಾಲಿನ್ಯದ್ದೇ ಸಮಸ್ಯೆ. ವಾಯು ಮಾಲಿನ್ಯವನ್ನು ಕಡಿಮೆ ಮಾಡಲು ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರಗಳು ಹತ್ತು ಹಲವು ಯೋಜನೆಗಳನ್ನು ಹಮ್ಮಿಕೊಳ್ಳುತ್ತಲೇ ಇರುತ್ತವೆ.

ಸಿ‍ಎನ್‍‍ಜಿ ಬಸ್‍‍ಗಳನ್ನು ಪರಿಚಯಿಸಲಿದೆ ಕೊಲ್ಕತ್ತಾ ಸಾರಿಗೆ ಸಂಸ್ಥೆ

ಇವುಗಳಲ್ಲಿ ಎಲೆಕ್ಟ್ರಿಕ್ ಬಸ್‍ ಹಾಗೂ ಸಿ‍ಎನ್‍ಜಿ ಬಸ್‍‍ಗಳನ್ನು ಅಳವಡಿಸುವುದು ಸಹ ಸೇರಿವೆ. ಇದೇ ಮೊದಲ ಬಾರಿಗೆ ಪಶ್ಚಿಮ ಬಂಗಾಳ ಸರ್ಕಾರವು ಪರಿಸರ ಸ್ನೇಹಿ ಸಿ‍ಎನ್‍‍ಜಿ ಬಸ್ಸುಗಳನ್ನು ಕೊಲ್ಕತ್ತಾ ನಗರದಲ್ಲಿ ರಸ್ತೆಗಿಳಿಸಲಿದೆ.

ಸಿ‍ಎನ್‍‍ಜಿ ಬಸ್‍‍ಗಳನ್ನು ಪರಿಚಯಿಸಲಿದೆ ಕೊಲ್ಕತ್ತಾ ಸಾರಿಗೆ ಸಂಸ್ಥೆ

ಈ ಸಿ‍ಎನ್‍‍ಜಿ ಬಸ್ಸುಗಳು ಮುಂದಿನ ವರ್ಷದ ಮಾರ್ಚ್‍‍ನಿಂದ ರಸ್ತೆಗಿಳಿಯಲಿವೆ. ಈ ಬಸ್ಸುಗಳಿಗೆ ಸಿ‍ಎನ್‍‍ಜಿ ತುಂಬಲು ರಾಜ್ಯ ಸಾರಿಗೆ ಇಲಾಖೆಯು ಕಸಬಾ ಬಸ್ ಡಿಪೋನಲ್ಲಿ ರಿಫಿಲ್ಲಿಂಗ್ ಸ್ಟೇಷನ್‍‍ಗಳನ್ನು ತೆರೆಯಲಿದೆ. ಇದರ ಜೊತೆಗೆ ಸಾರಿಗೆ ಇಲಾಖೆಯು 2020ರ ಮಾರ್ಚ್ ವೇಳೆಗೆ 70 ಹೊಸ ಎಲೆಕ್ಟ್ರಿಕ್ ಬಸ್‍‍ಗಳನ್ನು ರಸ್ತೆಗಿಳಿಸಲಿದೆ.

ಸಿ‍ಎನ್‍‍ಜಿ ಬಸ್‍‍ಗಳನ್ನು ಪರಿಚಯಿಸಲಿದೆ ಕೊಲ್ಕತ್ತಾ ಸಾರಿಗೆ ಸಂಸ್ಥೆ

ಈ 70 ಬಸ್ಸುಗಳನ್ನು ರಸ್ತೆಗಿಳಿಸಿದ ನಂತರ ಸಾರಿಗೆ ಇಲಾಖೆಯಲ್ಲಿರುವ ಎಲೆಕ್ಟ್ರಿಕ್ ಬಸ್ಸುಗಳ ಸಂಖ್ಯೆಯು 150ಕ್ಕೆ ಏರಲಿದೆ. ಈ ಬಗ್ಗೆ ವಿಧಾನಸಭೆಯಲ್ಲಿ ಮಾತನಾಡಿದ ಪಶ್ಚಿಮ ಬಂಗಾಳದ ಸಾರಿಗೆ ಸಚಿವ ಸುಬೆಂದು ಅಧಿಕಾರಿರವರು, ರಾಜ್ಯ ಸಾರಿಗೆ ಇಲಾಖೆ 10 ಸಿ‍ಎನ್‍‍ಜಿ ಬಸ್ಸುಗಳನ್ನು ಮುಂದಿನ ವರ್ಷದ ಮಾರ್ಚ್‍‍ನಿಂದ ರಸ್ತೆಗಿಳಿಸಲಿದೆ.

ಸಿ‍ಎನ್‍‍ಜಿ ಬಸ್‍‍ಗಳನ್ನು ಪರಿಚಯಿಸಲಿದೆ ಕೊಲ್ಕತ್ತಾ ಸಾರಿಗೆ ಸಂಸ್ಥೆ

ಸಿ‍ಎನ್‍‍ಜಿ ರಿಫಿಲ್ ಮಾಡಲು ಯಾವುದೇ ಸೌಲಭ್ಯವಿಲ್ಲದ ಕಾರಣಕ್ಕೆ ಕಸಬಾ ಡಿಪೋದಲ್ಲಿ ರಿಫಿಲ್ಲಿಂಗ್ ಸ್ಟೇಷನ್ ಆರಂಭಿಸಲಾಗುವುದು. ಸಿ‍ಎನ್‍‍ಜಿಯನ್ನು ಟ್ಯಾಂಕರ್‍‍ಗಳಲ್ಲಿ ತಂದು ರಿಫಿಲ್ಲಿಂಗ್ ಮಾಡಲು ಜಿ‍ಎ‍ಐ‍ಎಲ್ ಜೊತೆಗೆ ಒಪ್ಪಂದ ಮಾಡಿಕೊಳ್ಳಲಾಗಿದೆ.

ಸಿ‍ಎನ್‍‍ಜಿ ಬಸ್‍‍ಗಳನ್ನು ಪರಿಚಯಿಸಲಿದೆ ಕೊಲ್ಕತ್ತಾ ಸಾರಿಗೆ ಸಂಸ್ಥೆ

ಮುಂಬರುವ ದಿನಗಳಲ್ಲಿ ಹೆಚ್ಚಿನ ಪ್ರಮಾಣದ ಪರಿಸರ ಸ್ನೇಹಿ ಬಸ್ಸುಗಳನ್ನು ರಸ್ತೆಗಿಳಿಸುವ ಯೋಜನೆಯನ್ನು ಹಾಕಿಕೊಳ್ಳಲಾಗಿದೆ ಎಂದು ಹೇಳಿದರು. ರಾಜ್ಯ ಸರ್ಕಾರವು ಈ ಹಿಂದೆ ಸಿಎನ್‌ಜಿ ಬಸ್‌ಗಳನ್ನು ಅಸನ್ಸೋಲ್ ಮತ್ತು ದುರ್ಗಾಪುರಗಳಲ್ಲಿ ರಸ್ತೆಗಿಳಿಸಿತ್ತು.

ಸಿ‍ಎನ್‍‍ಜಿ ಬಸ್‍‍ಗಳನ್ನು ಪರಿಚಯಿಸಲಿದೆ ಕೊಲ್ಕತ್ತಾ ಸಾರಿಗೆ ಸಂಸ್ಥೆ

ಕೆಲವು ಸಿಎನ್‌ಜಿ ಬಸ್‌ಗಳು ಸಾಲ್ಟ್ ಲೇಕ್‌ನಲ್ಲಿರುವ ಎಸ್‌ಪ್ಲನೇಡ್ ಹಾಗೂ ಕರುಣಮೊಯಿ ಬಸ್ ನಿಲ್ದಾಣದಿಂದ ಅಸನ್ಸೋಲ್ ಹಾಗೂ ದುರ್ಗಾಪುರಕ್ಕೆ ಚಲಿಸುತ್ತವೆ. ಇದೇ ಮೊದಲ ಬಾರಿಗೆ ಸಿಎನ್‌ಜಿ ಬಸ್‌ಗಳು ನಗರದೊಳಗೆ ಸಂಚರಿಸಲಿವೆ.

ಸಿ‍ಎನ್‍‍ಜಿ ಬಸ್‍‍ಗಳನ್ನು ಪರಿಚಯಿಸಲಿದೆ ಕೊಲ್ಕತ್ತಾ ಸಾರಿಗೆ ಸಂಸ್ಥೆ

ಸರ್ಕಾರವು ಕೊಲ್ಕತ್ತಾ ನಗರವನ್ನು ಮಾಲಿನ್ಯ ಮುಕ್ತವಾಗಿಸಲು ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಎಲೆಕ್ಟ್ರಿಕ್ ಬಸ್ಸುಗಳನ್ನು ರಸ್ತೆಗಿಳಿಸುವ ಯೋಜನೆಯನ್ನು ಹೊಂದಿದೆ. ನಗರದ ವಿವಿಧ ಮಾರ್ಗಗಳಲ್ಲಿ ಈಗಾಗಲೇ 80 ಎಲೆಕ್ಟ್ರಿಕ್ ಬಸ್ಸುಗಳು ಸಂಚರಿಸುತ್ತಿವೆ.

ಸಿ‍ಎನ್‍‍ಜಿ ಬಸ್‍‍ಗಳನ್ನು ಪರಿಚಯಿಸಲಿದೆ ಕೊಲ್ಕತ್ತಾ ಸಾರಿಗೆ ಸಂಸ್ಥೆ

ಈ ಬಸ್ಸುಗಳು ಭಾರೀ ಯಶಸ್ಸನ್ನು ಪಡೆದಿವೆ. ಇವುಗಳ ಜೊತೆಗೆ ಸಾರಿಗೆ ಇಲಾಖೆಯು ಇನ್ನೂ 70 ಎಲೆಕ್ಟ್ರಿಕ್ ಬಸ್ಸುಗಳನ್ನು ರಸ್ತೆಗಿಳಿಸಲಿದೆ. ಇದರಿಂದಾಗಿ ಎಲೆಕ್ಟ್ರಿಕ್ ಬಸ್ಸುಗಳ ಸಂಖ್ಯೆಯು 150ಕ್ಕೆ ಏರಲಿದೆ. ಕೊಲ್ಕತ್ತಾದಲ್ಲಿ 55 ಚಾರ್ಜಿಂಗ್ ಸ್ಟೇಷನ್‍‍ಗಳಿವೆ.

ಸಿ‍ಎನ್‍‍ಜಿ ಬಸ್‍‍ಗಳನ್ನು ಪರಿಚಯಿಸಲಿದೆ ಕೊಲ್ಕತ್ತಾ ಸಾರಿಗೆ ಸಂಸ್ಥೆ

ಸಾರಿಗೆ ಇಲಾಖೆಯು ಇವುಗಳ ಸಂಖ್ಯೆಯನ್ನು ಮತ್ತಷ್ಟು ಹೆಚ್ಚಿಸಲಿದೆ. ಇವುಗಳ ಜೊತೆಗೆ ಬಸ್ ಡಿಪೋಗಳ ಅಭಿವೃದ್ಧಿ ಕಾರ್ಯವನ್ನೂ ಕೈಗೆತ್ತಿಕೊಳ್ಳಲಾಗಿದೆ ಎಂದು ಸಚಿವರು ಹೇಳಿದರು. ಸಾರಿಗೆ ಇಲಾಖೆಯ ಯಶಸ್ಸಿನ ಬಗ್ಗೆ ವಿವರ ನೀಡಿದ ಸಚಿವರು, 2011ರಲ್ಲಿ 2 ಲಕ್ಷ ಜನರು ಪ್ರತಿದಿನ ಸರ್ಕಾರಿ ಬಸ್‌ಗಳಲ್ಲಿ ಪ್ರಯಾಣಿಸುತ್ತಿದ್ದರು.

ಸಿ‍ಎನ್‍‍ಜಿ ಬಸ್‍‍ಗಳನ್ನು ಪರಿಚಯಿಸಲಿದೆ ಕೊಲ್ಕತ್ತಾ ಸಾರಿಗೆ ಸಂಸ್ಥೆ

ಈಗ ಕೋಲ್ಕತಾ ಹಾಗೂ ಅದರ ಪಕ್ಕದಲ್ಲಿರುವ ನಗರಗಳ 6 ರಿಂದ 8 ಲಕ್ಷ ಪ್ರಯಾಣಿಕರು ಸರ್ಕಾರಿ ಬಸ್‌ಗಳಲ್ಲಿ ಪ್ರಯಾಣಿಸುತ್ತಾರೆ. ಇದು ಪ್ರಯಾಣಿಕರು ಸರ್ಕಾರಿ ಬಸ್ಸುಗಳ ಮೇಲಿಟ್ಟಿರುವ ನಂಬಿಕೆಯನ್ನು ತೋರಿಸುತ್ತದೆ. ಈ ಮೊದಲು ನಷ್ಟದಲ್ಲಿದ್ದ ಸಾರಿಗೆ ಇಲಾಖೆ ಈಗ ಆದಾಯವನ್ನು ಗಳಿಸಲು ಆರಂಭಿಸಿದೆ ಎಂದು ಹೇಳಿದರು.

ಸಿ‍ಎನ್‍‍ಜಿ ಬಸ್‍‍ಗಳನ್ನು ಪರಿಚಯಿಸಲಿದೆ ಕೊಲ್ಕತ್ತಾ ಸಾರಿಗೆ ಸಂಸ್ಥೆ

2019ರ ಮಾರ್ಚ್ 31ರ ವೇಳೆಗೆ ಸಾರಿಗೆ ಇಲಾಖೆಯು ಬಸ್‌ಗಳಿಂದ ರೂ.2500 ಕೋಟಿ ಆದಾಯ ಗಳಿಸಿದೆ. ಈ ಮೊದಲು 2016ರಲ್ಲಿ ರೂ.1700 ಕೋಟಿ ಹಾಗೂ 2011ರಲ್ಲಿ ರೂ.900 ಕೋಟಿ ಆದಾಯ ಗಳಿಸಲಾಗಿತ್ತು. ಮುಂದಿನ ಹಣಕಾಸು ವರ್ಷದಲ್ಲಿ ರೂ.3000 ಕೋಟಿ ಆದಾಯ ಗಳಿಸುವ ಗುರಿಯನ್ನು ಹೊಂದಿದ್ದೇವೆ ಎಂದು ತಿಳಿಸಿದರು.

Most Read Articles

Kannada
English summary
CNG buses to be introduced public transport in kolkata - Read in Kannada
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X