ಸದ್ಯದಲ್ಲೇ ಪ್ರತಿ ವಾಹನಗಳಿಗೂ ಕಲರ್ ಕೋಡ್ ಕಡ್ಡಾಯ..!

ದೇಶಾದ್ಯಂತ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಹೊಸ ವಾಹನಗಳ ಸಂಖ್ಯೆಯಿಂದಾಗಿ ಮಾಲಿನ್ಯ ಪ್ರಮಾಣವು ಮಿತಿ ಮೀರಿದ್ದು, ಇದಕ್ಕೆ ಕಡಿವಾಣ ಹಾಕಲು ಮುಂದಾಗಿರುವ ಕೇಂದ್ರ ಸಾರಿಗೆ ಇಲಾಖೆಯು ಪ್ರತಿ ವಾಹನಗಳಿಗೂ ಕಲರ್ ಕೋಡಿಂಗ್ ಸೂತ್ರವನ್ನು ಅಳವಡಿಸುವ ಹೊಸ ಸಂಚಾರಿ ನಿಯಮಕ್ಕೆ ಚಾಲನೆ ನೀಡಲು ಮುಂದಾಗಿದೆ.

ಸದ್ಯದಲ್ಲೇ ಪ್ರತಿ ವಾಹನಗಳಿಗೂ ಕಲರ್ ಕೋಡ್ ಕಡ್ಡಾಯ..!

ರಾಜಧಾನಿ ದೆಹಲಿಯಲ್ಲಿ ಈ ಹಿಂದೆ ಸಮ-ಬೆಸ ಸೂತ್ರವನ್ನು ಅಳವಡಿಸುವ ಮೂಲಕ ಪೆಟ್ರೋಲ್ ಮತ್ತು ಡೀಸೆಲ್ ಕಾರುಗಳ ಓಡಾಟದ ಮೇಲೆ ನಿಯಂತ್ರಣ ಹೇರಿದ್ದ ಕೇಂದ್ರ ಸಾರಿಗೆ ಇಲಾಖೆಯು ಇದೀಗ ಮತ್ತೊಂದು ಹೊಸ ಸೂತ್ರವನ್ನು ಅಳವಡಿಸಲು ಮುಂದಾಗಿದ್ದು, ದೇಶದ ಪ್ರಮುಖ ಮಹಾನಗರಗಳಲ್ಲಿ ಹೆಚ್ಚುತ್ತಿರುವ ಮಾಲಿನ್ಯ ಪ್ರಮಾಣವನ್ನು ನಿಯಂತ್ರಣಕ್ಕೆ ತರಲು ಮಹತ್ವದ ಯೋಜನೆಯೊಂದನ್ನು ರೂಪಿಸಲಾಗಿದೆ.

ಸದ್ಯದಲ್ಲೇ ಪ್ರತಿ ವಾಹನಗಳಿಗೂ ಕಲರ್ ಕೋಡ್ ಕಡ್ಡಾಯ..!

ಕಲರ್ ಕೋಡ್‌ ಉಪಯೋಗ ಏನು?

ಯುರೋಪಿನ ಪ್ರಮುಖ ರಾಷ್ಟ್ರಗಳಲ್ಲಿ ಮಾಲಿನ್ಯ ನಿಯಂತ್ರಿಸುವ ನಿಟ್ಟಿನಲ್ಲಿ ಕಾರುಗಳಿಗೆ ಈಗಾಗಲೇ ಕಲರ್ ಕೋಡ್ ಸೂತ್ರವನ್ನು ಅಳವಡಿಸಲಾಗಿದ್ದು, ಇದರಿಂದ ಡಿಸೇಲ್ ಮತ್ತು ಪೆಟ್ರೋಲ್ ಸೇರಿದಂತೆ ಇತರೆ ವಾಹನಗಳ ಓಡಾಟದ ಮೇಲೆ ನಿಯಂತ್ರ ಸಾಧಿಸಲಾಗುತ್ತಿದೆ.

ಸದ್ಯದಲ್ಲೇ ಪ್ರತಿ ವಾಹನಗಳಿಗೂ ಕಲರ್ ಕೋಡ್ ಕಡ್ಡಾಯ..!

ಹೀಗಾಗಿ ಕೇಂದ್ರ ಸರ್ಕಾರವು ಸಹ ಕಲರ್ ಕೋಡಿಂಗ್ ಸೂತ್ರವನ್ನು ಜಾರಿಗೆ ಮುಂದಾಗಿದ್ದು, ಇದರಿಂದ ಸಮ-ಬೆಸ ಸೂತ್ರವನ್ನು ಮತ್ತಷ್ಟು ಪರಿಣಾಮಕಾರಿಯಾಗಿ ಜಾರಿಗೆ ತರಲು ಇದು ನೇರವಾಗಲಿದೆ ಎನ್ನಲಾಗಿದೆ. ಹಾಗೆಯೇ ಹೊಸ ನಿಯಮದ ಅಡಿ ಪೆಟ್ರೋಲ್ ಮತ್ತು ಡಿಸೇಲ್ ಕಾರುಗಳಿಗೆ ಪ್ರತ್ಯೇಕ ಬಣ್ಣದ ಆಯ್ಕೆ ಇರಲಿದ್ದು, ಇದು ಟ್ರಾಫಿಕ್ ಪೊಲೀಸರಿಗೆ ಪತ್ತೆಹಚ್ಚಲು ನೆರವಾಗಲಿದೆ.

ಸದ್ಯದಲ್ಲೇ ಪ್ರತಿ ವಾಹನಗಳಿಗೂ ಕಲರ್ ಕೋಡ್ ಕಡ್ಡಾಯ..!

ಕಾರಿನ ಫ್ರಂಟ್ ವೀಂಡ್‌ಶಿಲ್ಡ್ ಬಳಿಯೇ ಸಾರಿಗೆ ಇಲಾಖೆಯು ಕಲರ್ ಕೋಡ್ ವಲ್ಡ್ ಮಾದರಿಯಲ್ಲಿ ಬಣ್ಣ ಬಳಿಯಲಿದ್ದು, ಪೆಟ್ರೋಲ್, ಡೀಸೆಲ್, ಎಲೆಕ್ಟ್ರಿಕ್, ಹೈಡ್ರೊಜನ್ ಮತ್ತು ಹೈಬ್ರಿಡ್ ಕಾರುಗಳಿಗೆ ಇದು ಭಿನ್ನವಾರಲಿದೆ. ಈ ಮೂಲಕ ಕಲರ್ ಕೋಡ್ ಮೂಲಕವೇ ನಗರದಲ್ಲಿ ಅಕ್ರಮವಾಗಿ ಸಂಚರಿಸುವ ಕಾರುಗಳನ್ನ ಪತ್ತೆಹಚ್ಚಲು ನೇರವಾಗಲಿದ್ದು, ಅಕ್ರಮವಾಗಿ ನಗರಗಳಲ್ಲಿ ಸಂಚರಿಸುವ ವಾಹನಗಳನ್ನು ಸಿಸಿಟಿವಿ ನೆರವಿನೊಂದಿಗೆ ಪತ್ತೆಹಚ್ಚಿ ದಂಡವಿಧಿಸುವ ಯೋಜನೆ ಹೊಂದಲಾಗಿದೆ.

ಸದ್ಯದಲ್ಲೇ ಪ್ರತಿ ವಾಹನಗಳಿಗೂ ಕಲರ್ ಕೋಡ್ ಕಡ್ಡಾಯ..!

ಹೊಸ ನಿಯಮದಡಿ ಪೆಟ್ರೋಲ್ ಮತ್ತು ಸಿಎನ್‌ಜಿ ಎಂಜಿನ್ ವಾಹನಗಳು ತಿಳು ನೀಲಿ ಬಣ್ಣದ ಸ್ಟಿಕರ್ಸ್ ಪಡೆದುಕೊಳ್ಳಲಿದ್ದರೆ ಡೀಸೆಲ್ ಎಂಜಿನ್ ವಾಹನಗಳು ಕಿತ್ತಳೆ ಬಣ್ಣದ ಸ್ಟಿಕರ್ಸ್ ಹೊಂದಿರಲಿವೆ. ಇನ್ನು ಎಲೆಕ್ಟ್ರಿಕ್ ಮತ್ತು ಹೈಬ್ರಿಡ್ ಕಾರುಗಳು ಸಹ ವಿಶೇಷ ಬಣ್ಣದ ಆಯ್ಕೆಗಳನ್ನು ನೀಡಲಾಗುತ್ತಿದ್ದು, ಮುಂದಿನ ಕೆಲವೇ ದಿನಗಳಲ್ಲಿ ಹೊಸ ರೂಲ್ಸ್ ಅಧಿಕೃತವಾಗಿ ಜಾರಿಗೆ ಬರಲಿದೆ.

ಸದ್ಯದಲ್ಲೇ ಪ್ರತಿ ವಾಹನಗಳಿಗೂ ಕಲರ್ ಕೋಡ್ ಕಡ್ಡಾಯ..!

ಇನ್ನು ಹೊಸ ಯೋಜನೆಯನ್ನು ಸುಪ್ರೀಂ ಕೋರ್ಟ್ ಸೂಚನೆ ಮೇರೆಗೆ ಜಾರಿಗೆ ತರಲಾಗುತ್ತಿದ್ದು, ಸಮ-ಬೆಸ ಸಾರಿಗೆ ಸೂತ್ರ ಜಾರಿಗೆ ಹೊರತಾಗಿಯೂ ಸಾವಿರಾರು ಕಾರುಗಳು ದೆಹಲಿಯಲ್ಲಿ ಅಕ್ರಮವಾಗಿ ಸಂಚಾರ ಮಾಡುತ್ತಿರುವುದು ಮಾಲಿನ್ಯ ಸಮಸ್ಯೆಯು ಮತ್ತಷ್ಟು ಉಲ್ಬಣವಾಗುವಂತೆ ಮಾಡಿದೆ.

ಸದ್ಯದಲ್ಲೇ ಪ್ರತಿ ವಾಹನಗಳಿಗೂ ಕಲರ್ ಕೋಡ್ ಕಡ್ಡಾಯ..!

ಹೀಗಾಗಿಯೇ ಕೇಂದ್ರ ಸಾರಿಗೆ ಇಲಾಖೆಯನ್ನು ಕಳೆದ ವರ್ಷ ತರಾಟೆ ತೆಗೆದುಕೊಂಡಿದ್ದ ಸುಪ್ರೀಂಕೋರ್ಟ್ ಮಾಲಿನ್ಯ ನಿಯಂತ್ರಣ ಮಾಡುವಲ್ಲಿ ಸಮ-ಬೆಸ ಸೂತ್ರದಿಂದ ಯಾವುದೇ ಪ್ರಯೋಜನವಾಗುತ್ತಿಲ್ಲ ಎನ್ನುವ ಆಪಾದನೆ ಹಿನ್ನೆಲೆಯಲ್ಲಿ ಕೆಲವು ಕಠಿಣ ಕ್ರಮಗಳನ್ನು ಜಾರಿಗೊಳಿಸಲು ಹೊಸ ಯೋಜನೆಗಳನ್ನು ರೂಪಿಸುವಂತೆ ಎಚ್ಚರಿಕೆ ನೀಡಿತ್ತು.

MOST READ: ನಿಮ್ಮ ವಾಹನಗಳ ಮೈಲೇಜ್ ಕಡಿತವಾಗುತ್ತಿರುವುದಕ್ಕೆ ಅಸಲಿ ಕಾರಣ ಏನು ಗೊತ್ತಾ?

ಸದ್ಯದಲ್ಲೇ ಪ್ರತಿ ವಾಹನಗಳಿಗೂ ಕಲರ್ ಕೋಡ್ ಕಡ್ಡಾಯ..!

ಈ ಹಿನ್ನೆಲೆಯಲ್ಲಿ ಪ್ಯಾರಿಸ್‌ನಲ್ಲಿ ಜಾರಿಗೆ ತಂದಿರುವ ಕಲರ್ ಕೋಡ್ ಮಾದರಿಯಲ್ಲೇ ದೇಶದ ಪ್ರಮುಖ ನಗರಗಳಲ್ಲಿ ಜಾರಿಗೆ ತರಲು ಹೊಸ ನಿಯಮವನ್ನು ರೂಪಿಸಲಾಗುತ್ತಿದ್ದು, ಸಿಎನ್‌ಜಿ, ಎಲೆಕ್ಟ್ರಿಕ್ ಮತ್ತು ಹೈಬ್ರಿಡ್ ಎಂಜಿನ್ ವಾಹನಗಳನ್ನು ಹೊರತುಪಡಿಸಿ ಇನ್ನುಳಿದ ಪೆಟ್ರೋಲ್ ಮತ್ತು ಡೀಸೆಲ್ ವಾಹನಗಳ ಸಂಚಾರದ ಮೇಲೆ ಟ್ರಾಫಿಕ್ ಪೊಲೀಸರು ಹದ್ದಿನ ಕಣ್ಣಿಡಲಿದ್ದಾರೆ.

Most Read Articles

Kannada
English summary
Colour Coded Stickers For Cars, Bikes, And Other Vehicles — Coming Soon!
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X