ಕಾಂಪ್ಯಾಕ್ಟ್ ಎಸ್‍‍ಯುವಿ ಮಾರಾಟದಲ್ಲಿ ವಿಟಾರಾ ಬ್ರಿಝಾಗೆ ಅಗ್ರಸ್ಥಾನ

ಕಾಂಪ್ಯಾಕ್ಟ್ ಎಸ್‌ಯುವಿ ಸೆಗ್‍‍ಮೆಂಟಿನ ಕಾರುಗಳ ಮಾರಾಟದಲ್ಲಿ ಮಾರುತಿ ಸುಜುಕಿ ಕಂಪನಿಯ ವಿಟಾರಾ ಬ್ರಿಝಾ ಸತತ ಮೂರನೇ ತಿಂಗಳು ಅಗ್ರಸ್ಥಾನದಲ್ಲಿ ಮುಂದುವರೆದಿದೆ. ಭಾರತದ ಅತಿದೊಡ್ಡ ಕಾರು ತಯಾರಕ ಕಂಪನಿಯಾದ ಮಾರುತಿ ಸುಜುಕಿ ಕಂಪನಿಯು, ವಿಟಾರಾ ಬ್ರಿಝಾ ಕಾರುಗಳ ಮೇಲೆ ಮಾರಾಟದ ಮೇಲೆ ರಿಯಾಯಿತಿಯನ್ನು ನೀಡುತ್ತಿದೆ.

ಕಾಂಪ್ಯಾಕ್ಟ್ ಎಸ್‍‍ಯುವಿ ಮಾರಾಟದಲ್ಲಿ ವಿಟಾರಾ ಬ್ರಿಝಾಗೆ ಅಗ್ರಸ್ಥಾನ

ಇದರಿಂದಾಗಿ ಎಸ್‍‍ಯುವಿ ಸೆಗ್‍‍ಮೆಂಟಿನಲ್ಲಿ ವಿಟಾರಾ ಬ್ರಿಝಾ ಮತ್ತೆ ಮೊದಲ ಸ್ಥಾನಕ್ಕೆ ಬರಲು ಸಾಧ್ಯವಾಗಿದೆ. ಹ್ಯುಂಡೈ ಕಂಪನಿಯ ವೆನ್ಯೂ ಬಿಡುಗಡೆಯಾದ ನಂತರ ಬ್ರಿಝಾದ ಮಾರಾಟವು ಕುಸಿತಗೊಂಡಿದೆ.

ಕಾಂಪ್ಯಾಕ್ಟ್ ಎಸ್‍‍ಯುವಿ ಮಾರಾಟದಲ್ಲಿ ವಿಟಾರಾ ಬ್ರಿಝಾಗೆ ಅಗ್ರಸ್ಥಾನ

ಎಕ್ಸ್‌ಶೋರೂಂ ದರದಂತೆ ರೂ. 6.50 ಲಕ್ಷ ಬೆಲೆಯನ್ನು ಹೊಂದಿರುವ ಮೂರು ಎಂಜಿನ್ ಆಯ್ಕೆಗಳಲ್ಲಿ ಮಾರಾಟ ಮಾಡಲಾಗುವ ವೆನ್ಯೂ ಎಸ್‍‍ಯುವಿ, ಮೂರು ವರ್ಷಗಳಿಗಿಂತ ಹೆಚ್ಚು ಕಾಲ ಈ ಸೆಗ್‍‍ಮೆಂಟಿನಲ್ಲಿ ಅಗ್ರಸ್ಥಾನದಲ್ಲಿದ್ದ ವಿಟಾರಾ ಬ್ರಿಝಾಗೆ ತೀವ್ರ ಪೈಪೋಟಿ ನೀಡುತ್ತಿದೆ.

ಕಾಂಪ್ಯಾಕ್ಟ್ ಎಸ್‍‍ಯುವಿ ಮಾರಾಟದಲ್ಲಿ ವಿಟಾರಾ ಬ್ರಿಝಾಗೆ ಅಗ್ರಸ್ಥಾನ

ಈ ವರ್ಷದ ಮಧ್ಯದಲ್ಲಿ ಬಿಡುಗಡೆಯಾದ ವೆನ್ಯೂ ಈ ಸೆಗ್‍‍ಮೆಂಟಿನಲ್ಲಿಯೇ ಮೊದಲು ಎನ್ನಲಾದ ಹಲವಾರು ಫೀಚರ್‍‍ಗಳನ್ನು ಹೊಂದಿದೆ. ಅವುಗಳಲ್ಲಿ ಬ್ಲೂ ಲಿಂಕ್ ಕನೆಕ್ಟಿವಿಟಿ ಹಾಗೂ ಹೊಸ ಫೀಚರ್ಸ್ ಹಾಗೂ ಟೆಕ್ನಾಲಜಿಯನ್ನು ಹೊಂದಿರುವ ಇಂಟಿರಿಯರ್ ಪ್ರಮುಖವಾಗಿವೆ.

ಕಾಂಪ್ಯಾಕ್ಟ್ ಎಸ್‍‍ಯುವಿ ಮಾರಾಟದಲ್ಲಿ ವಿಟಾರಾ ಬ್ರಿಝಾಗೆ ಅಗ್ರಸ್ಥಾನ

2019ರ ನವೆಂಬರ್‌ನಲ್ಲಿ ಬ್ರಿಝಾ ಎಸ್‍‍ಯುವಿಯ 12,033 ಯುನಿಟ್‌ಗಳನ್ನು ಮಾರಾಟ ಮಾಡಲಾಗಿದೆ. 2018ರ ನವೆಂಬರ್‍‍ನಲ್ಲಿ 14,378 ಯುನಿಟ್‌ಗಳನ್ನು ಮಾರಾಟ ಮಾಡಲಾಗಿತ್ತು. ವರ್ಷದ ಮಾರಾಟಕ್ಕೆ ಹೋಲಿಸಿದರೆ ಈ ವರ್ಷ 16%ನಷ್ಟು ಇಳಿಕೆಯಾಗಿದೆ.

ಕಾಂಪ್ಯಾಕ್ಟ್ ಎಸ್‍‍ಯುವಿ ಮಾರಾಟದಲ್ಲಿ ವಿಟಾರಾ ಬ್ರಿಝಾಗೆ ಅಗ್ರಸ್ಥಾನ

ಕಳೆದ ತಿಂಗಳು ವೆನ್ಯೂವಿನ 9,665 ಯುನಿಟ್‍‍ಗಳನ್ನು ಮಾರಾಟ ಮಾಡಲಾಗಿದೆ. ಇದೇ ವೇಳೆ ಟಾಟಾ ಕಂಪನಿಯ ನೆಕ್ಸಾನ್ ಎಸ್‍‍ಯುವಿಯ 3,437 ಯುನಿಟ್‍‍ಗಳನ್ನು ಮಾರಾಟ ಮಾಡಲಾಗಿದೆ. 2018ರ ನವೆಂಬರ್ ತಿಂಗಳಿನಲ್ಲಿ ನೆಕ್ಸಾನ್‍‍ನ 4,224 ಯುನಿಟ್‍‍ಗಳನ್ನು ಮಾರಾಟ ಮಾಡಲಾಗಿತ್ತು.

ಸ್ಥಾನ ಮಾದರಿಗಳು ನವೆಂಬರ್ 2019 ನವೆಂಬರ್ 2018
1

ಮಾರುತಿ ಸುಜುಕಿ ವಿಟಾರಾ ಬ್ರಿಝಾ

12,033

14,378

2 ಹ್ಯುಂಡೈ ವೆನ್ಯೂ

9,665

-
3

ಟಾಟಾ ನೆಕ್ಸಾನ್

3,437

4,224

4

ಫೋರ್ಡ್ ಇಕೊಸ್ಪೋರ್ಟ್

2,822

2,724

5

ಮಹೀಂದ್ರಾ ಎಕ್ಸ್ ಯುವಿ300

2,224

-
6

ಹೋಂಡಾ ಡಬ್ಲ್ಯು ಆರ್ - ವಿ

721

2,786

7

ಮಹೀಂದ್ರಾ ಟಿಯುವಿ 300

683

99

ಕಾಂಪ್ಯಾಕ್ಟ್ ಎಸ್‍‍ಯುವಿ ಮಾರಾಟದಲ್ಲಿ ವಿಟಾರಾ ಬ್ರಿಝಾಗೆ ಅಗ್ರಸ್ಥಾನ

ವರ್ಷದ ಮಾರಾಟಕ್ಕೆ ಹೋಲಿಸಿದರೆ ನೆಕ್ಸಾನ್ ಮಾರಾಟದಲ್ಲಿ 19%ನಷ್ಟು ಕುಸಿತವಾಗಿದೆ. ಟಾಟಾ ಮೋಟಾರ್ಸ್ ಕಂಪನಿಯು ನೆಕ್ಸಾನ್ ಎಸ್‍‍ಯುವಿಯ ಫೇಸ್‍‍ಲಿಫ್ಟ್ ಅನ್ನು ಅಭಿವೃದ್ಧಿಪಡಿಸುತ್ತಿದ್ದು, ಮುಂಬರುವ ತಿಂಗಳುಗಳಲ್ಲಿ ಬಿಡುಗಡೆಗೊಳಿಸಲಿದೆ.

MOST READ: ಕಾರು ಖರೀದಿಸಿದ ಮಾಲೀಕನ ಮೇಲೆ ಕೇಸ್ ಜಡಿದ ಎಂಜಿ ಮೋಟಾರ್..!

ಕಾಂಪ್ಯಾಕ್ಟ್ ಎಸ್‍‍ಯುವಿ ಮಾರಾಟದಲ್ಲಿ ವಿಟಾರಾ ಬ್ರಿಝಾಗೆ ಅಗ್ರಸ್ಥಾನ

ಈ ಫೇಸ್‍‍ಲಿಫ್ಟ್ ಕಾರಿನ ಮುಂಭಾಗದಲ್ಲಿ ಇಂಪ್ಯಾಕ್ಟ್ 2.0ಯ ಫಾಸ್ಕಿಯಾವನ್ನು ಅಳವಡಿಸಲಾಗಿದೆ. ಇದರ ಜೊತೆಗೆ ನೆಕ್ಸಾನ್ ಕಾರಿನ ಎಲೆಕ್ಟ್ರಿಕ್ ಆವೃತ್ತಿಯನ್ನು 2020ರ ಆರಂಭದಲ್ಲಿ ಬಿಡುಗಡೆಗೊಳಿಸಲಾಗುವುದು.

MOST READ: ಡಿಸೆಂಬರ್ 1ರಿಂದ ಜಾರಿಗೆ ಬರಲಿರುವ ಫಾಸ್ಟ್‌ಟ್ಯಾಗ್ ಬಗ್ಗೆ ನಿಮಗೆಷ್ಟು ಗೊತ್ತು?

ಕಾಂಪ್ಯಾಕ್ಟ್ ಎಸ್‍‍ಯುವಿ ಮಾರಾಟದಲ್ಲಿ ವಿಟಾರಾ ಬ್ರಿಝಾಗೆ ಅಗ್ರಸ್ಥಾನ

ಫೋರ್ಡ್ ಕಂಪನಿಯ ಇಕೊಸ್ಪೋರ್ಟ್ 2,822 ಯುನಿಟ್‍ಗಳ ಮಾರಾಟದೊಂದಿಗೆ ನಾಲ್ಕನೇ ಸ್ಥಾನದಲ್ಲಿದೆ. 2018ರ ನವೆಂಬರ್ ತಿಂಗಳಿಗೆ ಹೋಲಿಸಿದರೆ, ಇಕೊಸ್ಪೋರ್ಟ್‍‍ನ ಮಾರಾಟದಲ್ಲಿ 4%ನಷ್ಟು ಏರಿಕೆಯಾಗಿದೆ.

MOST READ: ಬಡ ದೇಶದ ರಾಜನಿಗೆ 15 ಮಡದಿಯರು, 19 ದುಬಾರಿ ಕಾರುಗಳು..!

ಕಾಂಪ್ಯಾಕ್ಟ್ ಎಸ್‍‍ಯುವಿ ಮಾರಾಟದಲ್ಲಿ ವಿಟಾರಾ ಬ್ರಿಝಾಗೆ ಅಗ್ರಸ್ಥಾನ

2018ರ ನವೆಂಬರ್ ತಿಂಗಳಿನಲ್ಲಿ 2,724 ಯುನಿಟ್‍ಗಳು ಮಾರಾಟವಾಗಿದ್ದವು. 2019ರ ಫೆಬ್ರವರಿಯಲ್ಲಿ ಬಿಡುಗಡೆಯಾದ ಎಕ್ಸ್‌ಯುವಿ 300ನ 2,224 ಯುನಿಟ್‌ಗಳು ಮಾರಾಟವಾಗಿದೆ. ಈ ಎಸ್‍‍ಯುವಿಯು ವೆನ್ಯೂ ಹಾಗೂ ನೆಕ್ಸಾನ್‌ಗಳಿಂದ ತೀವ್ರ ಸ್ಪರ್ಧೆಯನ್ನು ಎದುರಿಸುತ್ತಿದೆ.

ಕಾಂಪ್ಯಾಕ್ಟ್ ಎಸ್‍‍ಯುವಿ ಮಾರಾಟದಲ್ಲಿ ವಿಟಾರಾ ಬ್ರಿಝಾಗೆ ಅಗ್ರಸ್ಥಾನ

74%ನಷ್ಟು ಕುಸಿತದೊಂದಿಗೆ ಹೋಂಡಾ ಡಬ್ಲ್ಯುಆರ್ ವಿಯ 721 ಯುನಿಟ್‌ಗಳು ಮಾರಾಟವಾಗಿವೆ. ಟಿಯುವಿ300, 31%ನಷ್ಟು ಕುಸಿತವನ್ನು ದಾಖಲಿಸಿದೆ. ನವೆಂಬರ್ ತಿಂಗಳಿನಲ್ಲಿ ಟಿಯುವಿ300ನ ಕೇವಲ 683 ಯುನಿಟ್‍‍ಗಳು ಮಾರಾಟವಾಗಿವೆ.

Most Read Articles

Kannada
English summary
Compact SUV sales Nov 2019 - Read in Kannada
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X