ದುಬಾರಿಯಾಯ್ತು ದಟ್ಸನ್ ಗೋ, ಗೋ ಪ್ಲಸ್ ಎಜಿ‍ಎಸ್ ಕಾರುಗಳ ಬೆಲೆ

ದಟ್ಸನ್ ಇಂಡಿಯಾ ದೇಶಿಯ ಮಾರುಕಟ್ಟೆಯಲ್ಲಿರುವ ಗೋ ಮತ್ತು ಗೋ ಪ್ಲಸ್ ಮಾದರಿಗಳ ಬೆಲೆಯನ್ನು ಹೆಚ್ಚಿಸಿದೆ. ದಟ್ಸನ್ ಗೋ ಮತ್ತು ಗೋ ಪ್ಲಸ್ ಮಾದರಿಗಳ ಬೆಲೆಯನ್ನು ಭಾರತದಲ್ಲಿ ಶೇ.5 ರಷ್ಟು ಹೆಚ್ಚಳ ಮಾಡಲಾಗಿದೆ. ಬೆಲೆ ಏರಿಕೆಯು ಈ ತಿಂಗಳಿನಿಂದಲೇ ಜಾರಿಗೆ ಬಂದಿದೆ.

ದುಬಾರಿಯಾಯ್ತು ದಟ್ಸನ್ ಗೋ, ಗೋ ಪ್ಲಸ್ ಎಜಿ‍ಎಸ್ ಕಾರುಗಳ ಬೆಲೆ

ದಟ್ಸನ್ ಗೋ ಮತ್ತು ದಟ್ಸನ್ ಗೋ ಪ್ಲಸ್ ಎರಡು ಮಾದರಿಗಳ ಬೆಲೆಯನ್ನು ರೂ.30,000ದವರೆಗೆ ಹೆಚ್ಚಿಸಲಾಗಿದೆ. ಆದರೆ ಈ ಬೆಲೆಯು ಕಾರು ಮತ್ತು ಅದರ ಮಾದರಿಯನ್ನು ಅವಲಂಬಿಸಿರುತ್ತದೆ. ಪ್ರಸ್ತುತ ಭಾರತೀಯ ಎಕ್ಸ್ ಶೋರೂಂ ಪ್ರಕಾರ ದಟ್ಸನ್ ಗೋ ಕಾರಿನ ಬೆಲೆಯು ರೂ.3.35 ಲಕ್ಷದಿಂದ ರೂ.5.20 ಲಕ್ಷಗಳಾಗಿದ್ದರೆ, ಗೋ ಪ್ಲಸ್ ಕಾರಿನ ಬೆಲೆಯು ರೂ.3.86 ಲಕ್ಷದಿಂದ ರೂ.5.94 ಲಕ್ಷಗಳಾಗಿದೆ.

ದುಬಾರಿಯಾಯ್ತು ದಟ್ಸನ್ ಗೋ, ಗೋ ಪ್ಲಸ್ ಎಜಿ‍ಎಸ್ ಕಾರುಗಳ ಬೆಲೆ

ನಿಸ್ಸಾನ್ ಮೋಟಾರ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಎಂಡಿ ರಾಕೇಶ್ ಶ್ರೀನಿವಾಸ್‍‍ರವರು ಮಾತನಾಡಿ, ಹೆಚ್ಚಿನ ಸುರಕ್ಷತೆಯೊಂದಿಗೆ ಜಪಾನಿನ ಎಂಜಿನಿಯರ್‍‍‍ಗಳ ಪ್ರಮಾಣಿತ ಮಾದರಿ ಮತ್ತು ನೀಡುವ ಹಣದ ಮೌಲ್ಯಕ್ಕೆ ತಕ್ಕ ಉತ್ಪನ್ನಗಳನ್ನು ನೀಡಲು ದಟ್ಸನ್ ಬದ್ದವಾಗಿದೆ. ದೇಶಿಯ ಮಾರುಕಟ್ಟೆಯಲ್ಲಿರುವ ದಟ್ಸನ್ ಗೋ ಮತ್ತು ದಟ್ಸನ್ ಗೋ ಪ್ಲಸ್ ಮಾದರಿಗಳ ಬೆಲೆಯನ್ನು ಯೋಜನಾಬದ್ದವಾಗಿ ಹೆಚ್ಚಿಸುತ್ತಿದ್ದೇವೆ ಎಂದು ಹೇಳಿದರು.

ದುಬಾರಿಯಾಯ್ತು ದಟ್ಸನ್ ಗೋ, ಗೋ ಪ್ಲಸ್ ಎಜಿ‍ಎಸ್ ಕಾರುಗಳ ಬೆಲೆ

ಬೆಲೆ ಏರಿಕೆಯನ್ನು ಸರಿದೂಗಿಸಲು ಎರಡೂ ಮಾದರಿಗಳು ಸ್ಟಾಂಡರ್ಡ್ ಸುರಕ್ಷತೆ ಮತ್ತು ಸೀ‍‍ಟ್‍-ಬೆಲ್ಟ್ ರಿಮೈಂಡರ್ ಅನ್ನು ಹೊಂದಿದೆ. ದಟ್ಸನ್ ಗೋ ಮತ್ತು ಗೋ ಪ್ಲಸ್ ಕಾರುಗಳ ಟಾಪ್ ಎಂಡ್ ಮಾದರಿಗಳಲ್ಲಿ ಡೈನಾಮಿಕ್ ಕಂಟ್ರೋಲ್ ಅನ್ನು ಅಳವಡಿಸಲಾಗುತ್ತದೆ.

ದುಬಾರಿಯಾಯ್ತು ದಟ್ಸನ್ ಗೋ, ಗೋ ಪ್ಲಸ್ ಎಜಿ‍ಎಸ್ ಕಾರುಗಳ ಬೆಲೆ

ದಟ್ಸನ್ ಪ್ರಸ್ತುತ ದೇಶಿಯ ಮಾರುಕಟ್ಟೆಯಲ್ಲಿ ಎರಡು ಮಾದರಿಗಳಲ್ಲಿ ಸಿವಿ‍ಟಿ ಆಟೋಮ್ಯಾಟಿಕ್ ಗೇರ್‍‍ಬಾಕ್ಸ್ ಅನ್ನು ಅಳವಡಿಸಲಾಗುತ್ತದೆ. ದಟ್ಸನ್ ಗೋ ಮತ್ತು ಗೋ ಪ್ಲಸ್ ಎರಡು ಪ್ರಸ್ತುತ 1.2 ಲೀಟರ್ ಮೂರು ಸಿಲಿಂಡರ್ ಪೆಟ್ರೋಲ್ ಎಂಜಿನ್‍ ಅನ್ನು ಹೊಂದಿದ್ದು, ಎಂಜಿನ್ 68 ಬಿ‍ಎಚ್‍ಪಿ ಪವರ್ ಮತ್ತು 90 ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಎಂಜಿನ್ ನೊಂದಿಗೆ ಸ್ಟ್ಯಾಂಡರ್ಡ್ 5-ಸ್ಪೀಡ್ ಮ್ಯಾನುವಲ್ ಗೇರ್‍‍ಬಾಕ್ಸ್ ಅನ್ನು ಹೊಂದಿದೆ. ಸಿವಿ‍‍ಟಿ ಆಟೋಮ್ಯಾಟಿಕ್ ಗೇರ್‍‍ಬಾಕ್ಸ್ ಅನ್ನು ಅಳವಡಿಸಿ ಶೀಘ್ರದಲ್ಲೇ ದೇಶಿಯ ಮಾರುಕಟ್ಟೆಯಲ್ಲಿ ಟಾಪ್-ಸ್ಪೆಕ್ ಎರಡು ಮಾದರಿಗಳು ಮಾರಾಟವಾಗಲಿದೆ.

ದುಬಾರಿಯಾಯ್ತು ದಟ್ಸನ್ ಗೋ, ಗೋ ಪ್ಲಸ್ ಎಜಿ‍ಎಸ್ ಕಾರುಗಳ ಬೆಲೆ

ದಟ್ಸನ್ ಗೋ ಮತ್ತು ದಟ್ಸನ್ ಗೋ ಪ್ಲಸ್ ಕಾರುಗಳಲ್ಲಿ ಇನ್ಫೋಟೈನ್‍‍ಮೆಂಟ್ ಕ್ಲಸ್ಟರ್, ಟಾಕೊಮೀಟರ್ ಅನ್ನು ಹೊಂದಿದೆ. ಕಾರಿನಲ್ಲಿ 6.5 ಇಂಚಿನ ಟಚ್‍‍ಸ್ಕ್ರೀನ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಅನ್ನು ಅಳವಡಿಸಲಾಗಿದೆ.

ದುಬಾರಿಯಾಯ್ತು ದಟ್ಸನ್ ಗೋ, ಗೋ ಪ್ಲಸ್ ಎಜಿ‍ಎಸ್ ಕಾರುಗಳ ಬೆಲೆ

ಇದಲ್ಲದೆ ಈ ಕಾರುಗಳಲ್ಲಿ ಎಲೆಕ್ಟ್ರಾನಿಕ್ ಅಡ್ಜೆಸ್ಟ್ ಮಿರರ್, ರೇ‍‍ರ್ ಪಾರ್ಕಿಂಗ್ ಸೆನ್ಸಾರ್, ಪವರ್ ವಿಂಡೋ, ರೇರ್ ವೈಶಿಷ್ಟ್ಯಗಳ ಜೊತೆಗೆ ಪ್ರಯಾಣಿಕರ ಸುರಕ್ಷತೆಗಾಗಿ ಎ‍‍ಬಿಎಸ್ ಮತ್ತು ಏರ್‍‍ಬ್ಯಾಗ್ ಅನ್ನು ಅಳವಡಿಸಲಾಗಿದೆ.

MOST READ: ಸೀಟ್ ಬೆಲ್ಟ್ ಧರಿಸದ ಪೊಲೀಸರನ್ನೇ ಅಡ್ಡಗಟ್ಟಿದ ಭೂಪ..!

ದುಬಾರಿಯಾಯ್ತು ದಟ್ಸನ್ ಗೋ, ಗೋ ಪ್ಲಸ್ ಎಜಿ‍ಎಸ್ ಕಾರುಗಳ ಬೆಲೆ

ದಟ್ಸನ್ ಗೋ ಮತ್ತು ಗೋ ಪ್ಲಸ್ ದೇಶಿಯ ಮಾರುಕಟ್ಟೆಯ ಪ್ರವೇಶ ಮಟ್ಟದ ಹ್ಯಾಚ್‍‍ಬ್ಯಾಕ್ ಮತ್ತು ಎಂಪಿ‍‍ವಿ ವಿಭಾಗದಲ್ಲಿ ಸ್ಥಾನ ಪಡೆದಿವೆ. ಈ ಎರಡು ಮಾದರಿಗಳು ಮಾರುಕಟ್ಟೆಯಲ್ಲಿ ಉತ್ತಮವಾಗಿ ಮಾರಾಟವಾಗುತ್ತವೆ. ದೇಶಿಯ ಮಾರುಕಟ್ಟೆಯಲ್ಲಿ ಫೋರ್ಡ್ ಫೀಗೊ, ಮಾರುತಿ ಸುಜುಕಿ ಸ್ವಿಫ್ಟ್ ಮತ್ತು ಟಾಟಾ ಟಿಯಾಗೊ ಕಾರುಗಳಿಗೆ ದಟ್ಸನ್ ಗೋ ಕಾರು ಪೈಪೋಟಿ ನೀಡುತ್ತದೆ. ದಟ್ಸನ್ ಗೋ ಪ್ಲಸ್ ಕಾರು, ಇತ್ತೀಚೆಗೆ ಬಿಡುಗಡೆಯಾದ ರೆನಾಲ್ಟ್ ಟ್ರೈಬರ್ ಮತ್ತು ಮಾರುತಿ ಸುಜುಕಿ ಎರ್ಟಿಗಾ ಕಾರುಗಳಿಗೆ ಪೈಪೋಟಿ ನೀಡಲಿದೆ.

MOST READ: ತಡೆದು ನಿಲ್ಲಿಸಿದ್ದು ಒಂದು ಕಾರಣಕ್ಕೆ, ದಂಡ ವಿಧಿಸಿದ್ದು ಇನ್ನೊಂದಕ್ಕೆ..!

ದುಬಾರಿಯಾಯ್ತು ದಟ್ಸನ್ ಗೋ, ಗೋ ಪ್ಲಸ್ ಎಜಿ‍ಎಸ್ ಕಾರುಗಳ ಬೆಲೆ

ದಟ್ಸನ್ ಗೊ ಹ್ಯಾಚ್‍‍ಬ್ಯಾಕ್ ಮತ್ತು ಗೋ ಪ್ಲಸ್ ಎಂಪಿ‍ವಿ ಹಲವಾರು ವೈಶಿಷ್ಟ್ಯಗಳು ಮತ್ತು ಸಲಕರಣೆಗಳನ್ನು ಹೊಂದಿದೆ. ಭಾರತದಲ್ಲಿರುವ ಕಾರಿನ ವಿನ್ಯಾಸದಲ್ಲಿ ಕಳೆದ ವರ್ಷ ಪ್ರಮುಖವಾದ ನವೀಕರಣವನ್ನು ಮಾಡಲಾಗಿದೆ. ದಟ್ಸನ್ ಗೋ ಮತ್ತು ಗೋ ಪ್ಲಸ್ ಕಾರುಗಳು ಸ್ಥಿರವಾದ ಮಾರಾಟವನ್ನು ಕಂಡಿವೆ.

Most Read Articles

Kannada
Read more on ದಟ್ಸನ್ datsun
English summary
Datsun GO & GO+ Prices Increased From 1st October: CVT Variants To Be Introduced Soon - Read in Kannada
Story first published: Thursday, October 3, 2019, 16:48 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X