ಬಿಡುಗಡೆಯಾಯ್ತು 2019ರ ದಟ್ಸನ್ ರೆಡಿ ಗೋ

ದಟ್ಸನ್ ಕಂಪನಿಯು 2019ರ ರೆಡಿ ಗೋ ಹ್ಯಾಚ್‍‍ಬ್ಯಾಕ್ ಅನ್ನು ಹಲವಾರು ಅಪ್‍‍ಡೇಟ್‍‍ಗಳೊಂದಿಗೆ ಬಿಡುಗಡೆಗೊಳಿಸಿದೆ. ಹೊಸ ದಟ್ಸನ್ ರೆಡಿ ಗೋ ಕಾರು ಈಗ ಹಲವಾರು ಅಧಿಕ ಸುರಕ್ಷಾ ಅಪ್‍‍ಡೇಟ್ ಹಾಗೂ ಫೀಚರ್‍‍ಗಳನ್ನು ಒಳಗೊಂಡಿದೆ. ದಟ್ಸನ್ ರೆಡಿ ಗೋ ಹ್ಯಾಚ್‍‍ಬ್ಯಾಕ್ ಕಾರಿನ ಬೆಲೆಯನ್ನು ದೆಹಲಿಯ ಎಕ್ಸ್ ಶೋರೂಂ ದರದಂತೆ ರೂ.2.79 ಲಕ್ಷಗಳೆಂದು ನಿಗದಿಪಡಿಸಲಾಗಿದೆ. ಈ ಕಾರಿನಲ್ಲಿ ಹಲವಾರು ಹೊಸ ಫೀಚರ್‍‍ಗಳಿವೆ.

ಬಿಡುಗಡೆಯಾಯ್ತು 2019ರ ದಟ್ಸನ್ ರೆಡಿ ಗೋ

ಅವುಗಳೆಂದರೆ ಡ್ರೈವರ್ ಏರ್‍‍ಬ್ಯಾಗ್, ಇ‍‍ಬಿ‍‍ಡಿ ಹೊಂದಿರುವ ಎ‍‍ಬಿ‍ಎಸ್, ರೇರ್ ಪಾರ್ಕಿಂಗ್ ಅಸಿಸ್ಟ್ ಸೆನ್ಸಾರ್, ಹೈ ಸ್ಪೀಡ್ ವಾರ್ನಿಂಗ್, ಚಾಲಕ ಹಾಗೂ ಸಹ ಪ್ರಯಾಣಿಕರಿಗೆ ಸೀಟ್ ಬೆಲ್ಟ್ ರಿಮ್ಯಾಂಡರ್‍‍ಗಳನ್ನು ಹೊಂದಿದೆ. ನಿಸ್ಸಾನ್ ಇಂಡಿಯಾದ ಸೇಲ್ಸ್ ಹಾಗೂ ಕಮರ್ಷಿಯಲ್‍‍ನ ನಿರ್ದೇಶಕರಾದ ಹರ್ದೀಪ್ ಸಿಂಗ್ ಬ್ರಾರ್‍‍ರವರು ಮಾತನಾಡಿ, ದಟ್ಸನ್ ಕಂಪನಿಯ ಗ್ರಾಹಕರನ್ನು ಸಂತೋಷಪಡಿಸಲು ಹಾಗೂ ಅವರ ಅನುಭವವನ್ನು ಹೆಚ್ಚಿಸಲು ನಾವು ಬದ್ಧರಾಗಿದ್ದೇವೆ.

ಬಿಡುಗಡೆಯಾಯ್ತು 2019ರ ದಟ್ಸನ್ ರೆಡಿ ಗೋ

ನಮ್ಮ ಜನಪ್ರಿಯ ಮಾದರಿಯಾದ ದಟ್ಸನ್ ರೆಡಿ ಗೋ ಕಾರಿನಲ್ಲಿ, ಈಗ ಹಲವಾರು ಸುರಕ್ಷತಾ ಫೀಚರ್‍‍ಗಳನ್ನು ಸ್ಟ್ಯಾಂಡರ್ಡ್ ಆಗಿ ನೀಡಲಿದ್ದು, ಸುರಕ್ಷತೆ, ತಂತ್ರಜ್ಞಾನ, ಸ್ಟೈಲ್ ಹಾಗೂ ಅನುಕೂಲತೆಯಿಂದ ಬೆಂಬಲಿತ ಪ್ರಗತಿಶೀಲ ಮೊಬಿಲಿಟಿಯನ್ನು ನೀಡುತ್ತಿರುವ ನಮ್ಮ ಬದ್ದತೆಗೆ ಮತ್ತೊಂದು ಸಾಕ್ಷ್ಯವಾಗಿದೆ ಎಂದು ತಿಳಿಸಿದರು. 2019ರ ದಟ್ಸನ್ ರೆಡಿ ಗೋ 0.8-ಲೀಟರ್ ಅಂದರೆ 799 ಸಿಸಿ ಅಥವಾ 1.0 ಲೀಟರ್ ಪೆಟ್ರೋಲ್ ಎಂಜಿನ್‍‍ಗಳನ್ನು ಹೊಂದಿದೆ.

ಬಿಡುಗಡೆಯಾಯ್ತು 2019ರ ದಟ್ಸನ್ ರೆಡಿ ಗೋ

799ಸಿಸಿ ಎಂಜಿನ್ 54 ಬಿಹೆಚ್‌ಪಿ ಹಾಗೂ 72 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. 1.0 ಲೀಟರ್ ಎಂಜಿನ್ 68 ಬಿಹೆಚ್‌ಪಿ ಹಾಗೂ 91 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಎರಡೂ ಎಂಜಿನ್‌ಗಳಲ್ಲಿ ಸ್ಟಾಂಡರ್ಡ್ 5 ಸ್ಪೀಡ್ ಗೇರ್‌ಬಾಕ್ಸ್‌ಗೆ ಅಳವಡಿಸಲಾಗಿದೆ. 1.0ಲೀಟರ್ ಎಂಜಿನ್ ಹೆಚ್ಚುವರಿಯಾಗಿ ಸ್ಮಾರ್ಟ್ ಡ್ರೈವ್ ಆಟೋ ಟ್ರಾನ್ಸ್ ಮಿಷನ್ ಹೊಂದಿರಲಿದೆ. ದಟ್ಸನ್ ರೆಡಿ ಗೋ ಅತ್ಯುತ್ತಮವಾದ ಫ್ಯೂಯಲ್ ಎಫಿಶಿಯನ್ಸಿ ಅಂಕಿಅಂಶಗಳನ್ನು ಹೊಂದಿದೆ.

ಬಿಡುಗಡೆಯಾಯ್ತು 2019ರ ದಟ್ಸನ್ ರೆಡಿ ಗೋ

0.8 ಲೀಟರ್ ಎಂಜಿನ್ ಪ್ರತಿ ಲೀಟರಿಗೆ 22.7 ಕಿ.ಮೀ ಮೈಲೇಜ್ ನೀಡಿದರೆ, 1.0ಲೀಟರ್ ಎಂಜಿನ್ ಪ್ರತಿ ಲೀಟರಿಗೆ 22.5 ಕಿ.ಮೀ ಮೈಲೇಜ್ ನೀಡುತ್ತದೆ. ರೆಡಿ ಗೋ ಟಾಲ್ ಬಾಯ್ ವಿನ್ಯಾಸವನ್ನು ನೀಡುತ್ತದೆ. ಈ ಕಾರಿನ ಒಳಗೆ ಸಾಕಷ್ಟು ಸ್ಥಳಾವಕಾಶವಿದ್ದು, 185 ಎಂಎಂ ಗ್ರೌಂಡ್ ಕ್ಲಿಯರೆನ್ಸ್ ಹೊಂದಿದೆ.

ಬಿಡುಗಡೆಯಾಯ್ತು 2019ರ ದಟ್ಸನ್ ರೆಡಿ ಗೋ

ಹೋಂಡಾ ಸಿಟಿ ಮತ್ತು ಮಾರುತಿ ಸುಜುಕಿ ಸಿಯಾಜ್‌ಗೆ ಟಕ್ಕರ್ ನೀಡುತ್ತಿರುವ ಟೊಯೊಟಾ ಯಾರಿಸ್ ಖರೀದಿಗೆ ಈಗಲೇ ಟೆಸ್ಟ್ ಡ್ರೈವ್ ಮಾಡಿ..!

ಹೊಸ ಅಪ್‌ಡೇಟ್‌ಗಳನ್ನು ಹೊರತು ಪಡಿಸಿದರೆ, ದಟ್ಸನ್ ಗೋ 2 ವರ್ಷದವರೆಗೆ ಅಥವಾ ಅನಿಯಮಿತ ಕಿ.ಮೀಗಳ ಸ್ಟ್ಯಾಂಡರ್ಡ್ ವಾರಂಟಿ ನೀಡಲಿದೆ. ವಾರಂಟಿಯನ್ನು 2 ರಿಂದ 3 ವರ್ಷಗಳಿಗೆ ಅಥವಾ ಅನಿಯಮಿತ ಕಿ.ಮೀಗಳಿಗೆ ವಿಸ್ತರಿಸಿಕೊಳ್ಳಬಹುದು. ಇದರಲ್ಲಿ ಗ್ರಾಹಕರಿಗೆ ನೀಡಲಾಗುವ ರೋಡ್ ಸೈಡ್ ಅಸಿಸ್ಟೆನ್ಸ್ ಸಹ ಸೇರಿದೆ.

ಬಿಡುಗಡೆಯಾಯ್ತು 2019ರ ದಟ್ಸನ್ ರೆಡಿ ಗೋ

ದಟ್ಸನ್ ಗ್ರಾಹಕರಿಗೆ ದಟ್ಸನ್ ಕೇರ್ ಎಂಬ ಸೌಲಭ್ಯವನ್ನು ನೀಡಲಿದೆ. ಇದು ಗ್ರಾಹಕರ ಸರ್ವಿಸ್ ಪ್ಯಾಕೇಜ್ ಆಗಿರಲಿದೆ. ಈ ಪ್ಯಾಕೇಜ್ ಬಿಡಿಭಾಗಗಳ ಮೇಲೆ, ರೆಗ್ಯುಲರ್ ಮೆಂಟೆನೆನ್ಸ್ ಹಾಗೂ ಲೇಬರ್ ಚಾರ್ಜ್‍‍ಗಳ ಮೇಲೆ 100% ಕವರೇಜ್ ನೀಡಲಿದೆ.

ಬಿಡುಗಡೆಯಾಯ್ತು 2019ರ ದಟ್ಸನ್ ರೆಡಿ ಗೋ

ಡ್ರೈವ್‍‍ಸ್ಪಾರ್ಕ್ ಅಭಿಪ್ರಾಯ

ದಟ್ಸನ್ ತನ್ನ ಎಂಟ್ರಿ ಲೆವೆಲ್‍‍ನ ರೆಡಿ ಗೋ ಹ್ಯಾಚ್‌ಬ್ಯಾಕ್ ಅನ್ನು ದೇಶಿಯ ಮಾರುಕಟ್ಟೆಗಾಗಿ ನವೀಕರಿಸಿದೆ. ದಟ್ಸನ್ ರೆಡಿ ಗೋ, 2019ರ ಏಪ್ರಿಲ್‍‍ನಿಂದ ಕಡ್ಡಾಯವಾಗಿರುವ ಎಲ್ಲಾ ಸುರಕ್ಷತಾ ಫೀಚರ್‍‍ಗಳನ್ನು ಹೊಂದಿದೆ. ದಟ್ಸನ್ ಗೋ ದೇಶಿಯ ಮಾರುಕಟ್ಟೆಯಲ್ಲಿ ಮಾರುತಿ ಸುಜುಕಿ ಆಲ್ಟೊ ಹಾಗೂ ರೆನಾಲ್ಟ್ ಕ್ವಿಡ್‍‍ಗಳಿಗೆ ಪೈಪೋಟಿ ನೀಡಲಿದೆ.

Most Read Articles

Kannada
Read more on ದಟ್ಸನ್ datsun
English summary
2019 Datsun Redi-GO Launched: Updated With New Features & Safety Equipment - Read in kannada
Story first published: Friday, July 19, 2019, 10:45 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X