ದುಬಾರಿ ಬೆಲೆಯ ಐಷಾರಾಮಿ ಮಾಡಿಫೈ ಸೌಲಭ್ಯ ಪಡೆದ ಮಹೀಂದ್ರಾ ಮರಾಜೋ

ಸದ್ಯ ಎಂಪಿವಿ ಕಾರುಗಳಲ್ಲಿ ಉತ್ತಮ ಬೇಡಿಕೆಯೊಂದಿಗೆ ಮಾರುತಿ ಸುಜುಕಿ ಎರ್ಟಿಗಾ ಕಾರಿಗೆ ಟಕ್ಕರ್ ನೀಡುತ್ತಿರುವ ಮಾರಾಜೋ ಕಾರು ಮಧ್ಯಮ ವರ್ಗದ ಎಂಪಿವಿ ಕಾರು ಖರೀದಿದಾರರ ಪಟ್ಟಿಯಲ್ಲಿ ಮುಂಚೂಣಿ ಸಾಧಿಸುತ್ತಿದ್ದು, ಇದೀಗ ಡಿಸಿ ಡಿಸೈನ್ ಸಂಸ್ಥೆಯು ಪರಿಚಯಿಸಿರುವ ಮಾಡಿಫೈ ಹೊಸ ವಿನ್ಯಾಸವು ಐಷಾರಾಮಿ ಕಾರು ಪ್ರಿಯರನ್ನು ಸಹ ಸೆಳೆಯುತ್ತಿದೆ.

ದುಬಾರಿ ಬೆಲೆಯ ಐಷಾರಾಮಿ ಮಾಡಿಫೈ ಸೌಲಭ್ಯ ಪಡೆದ ಮಹೀಂದ್ರಾ ಮರಾಜೋ

ಹೌದು, ಮುಂಬೈ ಮೂಲದ ಜನಪ್ರಿಯ ಮಾಡಿಫೈ ಸಂಸ್ಥೆಯಾದ ಡಿಸಿ ಡಿಸೈನ್ ಸಂಸ್ಥೆಯು ತನ್ನ ವಿನೂತನ ವಿನ್ಯಾಸ ತಂತ್ರಜ್ಞಾನದ ಮೂಲಕ ಅಂತರಾಷ್ಟ್ರೀಯ ಮಟ್ಟದಲ್ಲಿ ಬೇಡಿಕೆ ಪಡೆದುಕೊಳ್ಳತ್ತಿದ್ದು, ಮಾರುಕಟ್ಟೆಗೆ ಪ್ರವೇಶಿಸುವ ಬಹುತೇಕ ಹೊಸ ಕಾರುಗಳಲ್ಲಿ ತನ್ನದೆ ವಿಶಿಷ್ಟ್ಯ ಶೈಲಿಯ ಮಾಡಿಫೈ ವಿನ್ಯಾಸವನ್ನು ಪರಿಚಯಿಸುವ ಮೂಲಕ ಮಾಡಿಫೈ ಪ್ರಿಯರ ಆಕರ್ಷಣೆಗೆ ಕಾರಣವಾಗಿದೆ.

ದುಬಾರಿ ಬೆಲೆಯ ಐಷಾರಾಮಿ ಮಾಡಿಫೈ ಸೌಲಭ್ಯ ಪಡೆದ ಮಹೀಂದ್ರಾ ಮರಾಜೋ

ಈಗಾಗಲೇ ಸಾವಿರಾರು ವಾಹನಗಳನ್ನು ವಿಶೇಷ ಡಿಸೈನ್‌ನೊಂದಿಗೆ ಮಾಡಿಫೈ ಮಾಡುವ ಮೂಲಕ ಭಾರೀ ಬೇಡಿಕೆ ಪಡೆದುಕೊಳ್ಳುತ್ತಿರುವ ಡಿಸಿ ಡಿಸೈನ್ ಸಂಸ್ಥೆಯು ಕಳೆದ ಕೆಲ ತಿಂಗಳ ಹಿಂದಷ್ಟೇ ಬಿಡುಗಡೆಯಾಗಿದ್ದ ಮಹೀಂದ್ರಾ ಮರಾಜೋ ಕಾರಿಗೂ ಹೊಸ ಮಾಡಿಫೈ ಡಿಸೈನ್ ಒಂದನ್ನು ಪರಿಚಯಿಸಿದೆ.

ದುಬಾರಿ ಬೆಲೆಯ ಐಷಾರಾಮಿ ಮಾಡಿಫೈ ಸೌಲಭ್ಯ ಪಡೆದ ಮಹೀಂದ್ರಾ ಮರಾಜೋ

ಸದ್ಯ ಎಂಪಿವಿ ಕಾರುಗಳಲ್ಲಿ ಉತ್ತಮ ಬೇಡಿಕೆಯೊಂದಿಗೆ ಮಾರುತಿ ಸುಜುಕಿ ಎರ್ಟಿಗಾ ಕಾರಿಗೆ ಟಕ್ಕರ್ ನೀಡುತ್ತಿರುವ ಮಾರಾಜೋ ಕಾರು ಮಧ್ಯಮ ವರ್ಗದ ಎಂಪಿವಿ ಕಾರು ಖರೀದಿದಾರರ ಪಟ್ಟಿಯಲ್ಲಿ ಮುಂಚೂಣಿ ಸಾಧಿಸುತ್ತಿದ್ದು, ಇದೀಗ ಡಿಸಿ ಡಿಸೈನ್ ಸಂಸ್ಥೆಯು ಪರಿಚಯಿಸಿರುವ ಮಾಡಿಫೈ ಹೊಸ ವಿನ್ಯಾಸವು ಐಷಾರಾಮಿ ಕಾರು ಪ್ರಿಯರನ್ನು ಸಹ ಸೆಳೆಯುತ್ತಿದೆ.

ದುಬಾರಿ ಬೆಲೆಯ ಐಷಾರಾಮಿ ಮಾಡಿಫೈ ಸೌಲಭ್ಯ ಪಡೆದ ಮಹೀಂದ್ರಾ ಮರಾಜೋ

ಮಾಡಿಫೈಗೊಂಡಿರುವ ಡಿಸಿ ಡಿಸೈನ್ ಮರಾಜೋ ಕಾರು ಮೂಲ ಕಾರಿಗಿಂತಲೂ ಸಾಕಷ್ಟು ಬದಲಾವಣೆ ಪಡೆದುಕೊಂಡಿದ್ದು, ಐಷಾರಾಮಿ ಸೌಲಭ್ಯಗಳೊಂದಿಗೆ ಕೋಟಿಗೂ ಅಧಿಕ ಬೆಲೆಯ ಐಷಾರಾಮಿ ಕಾರಗಳನ್ನು ಹಿಂದಿಕ್ಕುವ ರೀತಿಯಲ್ಲಿ ಸಿದ್ದಗೊಂಡಿದೆ. ಇದಕ್ಕೆ ಕಾರಣ, ಡಿಸಿ ಡಿಸೈನ್ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ದಿಲೀಪ್ ಚಾಬ್ರಿಯಾ ಅವರೇ ವಿಶೇಷ ಆಸಕ್ತಿ ವಹಿಸಿ ಮಾರಾಜೋ ಕಾರಿಗೆ ಹೊಸ ವಿನ್ಯಾಸದ ಡಿಸೈನ್ ಸಿದ್ದಪಡಿಸಿದ್ದಾರೆ.

ದುಬಾರಿ ಬೆಲೆಯ ಐಷಾರಾಮಿ ಮಾಡಿಫೈ ಸೌಲಭ್ಯ ಪಡೆದ ಮಹೀಂದ್ರಾ ಮರಾಜೋ

ದಿಲೀಪ್ ಅವರ ಪ್ರಕಾರ, ವಿನೂತನ ಮಾಡಿಫೈ ವಿನ್ಯಾಸ ಹೊಂದಿರುವ ಮಾರಾಜೋ ಕಾರನ್ನು ಒಂದೂವರೆ ಕೋಟಿ ರೂಪಾಯಿ ಮೌಲ್ಯದ ಆಡಿ ಎ8 ವಿನ್ಯಾಸಕ್ಕೆ ಹೋಲಿಕೆ ಮಾಡಿದ್ದು, ಅತ್ಯಂತ ಕಡಿಮೆ ಬೆಲೆಯಲ್ಲಿ ಗರಿಷ್ಠ ಮಟ್ಟದ ಮಾಡಿಫೈ ಮಾಡಿರುವುದಾಗಿ ಮಾಹಿತಿ ಬಿಚ್ಚಿಟ್ಟಿದ್ದಾರೆ.

ದುಬಾರಿ ಬೆಲೆಯ ಐಷಾರಾಮಿ ಮಾಡಿಫೈ ಸೌಲಭ್ಯ ಪಡೆದ ಮಹೀಂದ್ರಾ ಮರಾಜೋ

ಮಾಡಿಫೈ ಮಾರಾಜೋ ಕಾರಿನ ಒಳಭಾಗವನ್ನು ಸಂಪೂರ್ಣವಾಗಿ ಬದಲಾವಣೆ ಮಾಡಿರುವ ಡಿಸಿ ಸಂಸ್ಥೆಯು ಲೆದರ್ ಸೀಟುಗಳೊಂದಿಗೆ ಕ್ರೊಮ್, ವುಡನ್ ಇಂಟಿರಿಯರ್ ಫಿನಿಷಿಂಗ್, ಪ್ರತಿ ಸೀಟುಗಳಲ್ಲೂ ಟಚ್ ಸ್ಕ್ರೀನ್ ಮಲ್ಟಿ ಇನ್‌ಫಾರ್ಮೆಷನ್ ಡಿಸ್‌ಪ್ಲೇ, ಸೀಟುಗಳಲ್ಲೇ ಕತ್ತರಿಸಿದ ಮಾದರಿಯಲ್ಲಿ ಸಿದ್ದಪಡಿಸಲಾಗಿರುವ ಫುಟ್ ರೆಸ್ಟ್, 7-ಸೀಟರ್ ಸಾಮರ್ಥ್ಯದ ರೆಫ್ರಿಜೇಟರ್ ಸೇರಿದಂತೆ ಬೆರಳತುದಿಯಲ್ಲೇ ಕಾರಿನ ತಾಂತ್ರಿಕ ಸೌಲಭ್ಯಗಳನ್ನು ನಿಯಂತ್ರಿಸಬಹುದಾದ ಬಟನ್ ಸೌಲಭ್ಯಗಳನ್ನು ನೀಡಲಾಗಿದೆ.

ದುಬಾರಿ ಬೆಲೆಯ ಐಷಾರಾಮಿ ಮಾಡಿಫೈ ಸೌಲಭ್ಯ ಪಡೆದ ಮಹೀಂದ್ರಾ ಮರಾಜೋ

ಈ ಮೂಲಕ ಐಷಾರಾಮಿ ಕಾರು ಪ್ರಯಾಣಕ್ಕೆ ಬೇಕಾದ ಹಲವಾರು ಸೌಲಭ್ಯಗಳನ್ನು ಒಂದೇ ಸೂರಿನಡಿ ನೀಡಿರುವ ಡಿಸಿ ಸಂಸ್ಥೆಯು ಮಾಡಿಫೈಗೆ ಅನುಕೂರವಾಗುವ ಮಾದರಿಯಲ್ಲಿ ಕಾರು ಸಿದ್ದಪಡಿಸಿದ ಮಹೀಂದ್ರಾ ಸಂಸ್ಥೆಗೂ ಧನ್ಯವಾದ ತಿಳಿಸಿದ್ದು, ಮುಂಬರುವ ದಿನಗಳಲ್ಲಿ ಮತ್ತಷ್ಟು ವಿನ್ಯಾಸಗಳನ್ನು ಪರಿಚಯಿಸುವುದಾಗಿ ತಿಳಿಸಿದೆ.

ದುಬಾರಿ ಬೆಲೆಯ ಐಷಾರಾಮಿ ಮಾಡಿಫೈ ಸೌಲಭ್ಯ ಪಡೆದ ಮಹೀಂದ್ರಾ ಮರಾಜೋ

ಮಾಡಿಫೈ ಕಾರಿನ ಬೆಲೆ

ಸದ್ಯ ಮಾರುಕಟ್ಟೆಯಲ್ಲಿ ಮಾರಾಜೋ ಕಾರು ಮಾದರಿಯು ಆನ್‌ರೋಡ್ ಬೆಲೆಗಳಿಗೆ ಅನುಗುಣವಾಗಿ ರೂ.11.50 ಲಕ್ಷ ಆರಂಭಿಕವಾಗಿ ಮತ್ತು ಟಾಪ್ ಎಂಡ್ ಮಾದರಿಗೆ ರೂ.17.06 ಲಕ್ಷ ಬೆಲೆ ನಿಗದಿಪಡಿಸಲಾಗಿದ್ದು, ಡಿಸಿ ಡಿಸೈನ್ ಸಂಸ್ಥೆಯು ಮಾಡಿಫೈ ಮಾಡಲಾದ ಕಾರನ್ನು ರೂ.20 ಲಕ್ಷದಿಂದ ರೂ.25 ಲಕ್ಷ ಬೆಲೆಗಳಿಗೆ ಮಾರಾಟಮಾಡುತ್ತಿದೆ.

ಮುಂಬೈ, ಬೆಂಗಳೂರು, ಹೈದ್ರಾಬಾದ್, ಚೆನ್ನೈ ಮತ್ತು ದೆಹಲಿ ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ ತನ್ನ ಮಾಡಿಫೈ ಕೇಂದ್ರಗಳ ಮೂಲಕ ಬೇಡಿಕೆ ಸಲ್ಲಿಸುವ ಗ್ರಾಹಕರಿಗೆ ಮಾರಾಜೋ ಮಾಡಿಫೈ ಕಾರನ್ನು ಮಾರಾಟ ಮಾಡುತ್ತಿದ್ದು, ಬೇಡಿಕೆ ಸಲ್ಲಿಸಿದ ಒಂದು ವಾರದಲ್ಲಿ ಹೊಸ ಮಾಡಿಫೈ ಕಾರನ್ನು ಸಿದ್ದಪಡಿಸಲಿದೆ.

MOST READ: ಹೊಸ ಕಾರು ವಿತರಣೆಯಲ್ಲಿ ವಿಳಂಬ- ಜೀಪ್ ಡೀಲರ್ಸ್‌ಗೆ ಬಿತ್ತು ರೂ. 50 ಸಾವಿರ ದಂಡ..!

ದುಬಾರಿ ಬೆಲೆಯ ಐಷಾರಾಮಿ ಮಾಡಿಫೈ ಸೌಲಭ್ಯ ಪಡೆದ ಮಹೀಂದ್ರಾ ಮರಾಜೋ

ಇನ್ನು 1.5-ಲೀಟರ್ ಡೀಸೆಲ್ ಎಂಜಿನ್ ಆಯ್ಕೆಯನ್ನು ಮಾತ್ರ ಹೊಂದಿರುವ ಮಾರಾಜೋ ಕಾರು ಇನೋವಾ ಕ್ರಿಸ್ಟಾಗೂ ಪ್ರತಿಸ್ಪರ್ಧಿಯಾಗುತ್ತಿದ್ದು, ಮುಂಬರುವ ದಿನಗಳಲ್ಲಿ ಬಿಡುಗಡೆಗೆ ಸಿದ್ದವಾಗುತ್ತಿರುವ ಪೆಟ್ರೋಲ್ ಆವೃತ್ತಿಯು ಮತ್ತಷ್ಟು ಬೇಡಿಕೆ ಪಡೆದುಕೊಳ್ಳುವ ತವಕದಲ್ಲಿವೆ.

Most Read Articles

Kannada
English summary
DC Modified Mahindra Marazzo: Dilip Chhabria Video. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X