ನಕಲಿ ಕಾರು ಮಾರಿ ಟೋಪಿ ಹಾಕಿದ ಡೀಲರ್...!!

ಸ್ಕೋಡಾ ಡೀಲರ್‍‍ಶಿಪ್‍ನಿಂದ ರೆಗ್ಯುಲರ್ ಸ್ಕೋಡಾವನ್ನು ಲಿಮಿಟೆಡ್ ಎಡಿಷನ್ ನ ಬ್ಲಾಕ್ ಪ್ಯಾಕೇಜ್ ಕಾರು ಎಂದು ನಂಬಿಸಿ ಗ್ರಾಹಕರಿಗೆ ಮಾರಾಟ ಮಾಡಲಾಗಿದೆ. 3 ವರ್ಷಗಳ ನಂತರ ಸ್ಕೋಡಾ ಕಂಪನಿಯು ಹೊಸ ಸ್ಕೋಡಾ ಮಾಂಟೇ ಕಾರ್ಲೊ ಕಾರನ್ನು ಮೋಸ ಹೋದ ಗ್ರಾಹಕರಿಗೆ ನೀಡಿದೆ.

ನಕಲಿ ಕಾರು ಮಾರಿ ಟೋಪಿ ಹಾಕಿದ ಡೀಲರ್...!!

ಈ ವಿಲಕ್ಷಣ ಘಟನೆ ನಡೆದಿರುವುದು ಬೆಂಗಳೂರಿನಲ್ಲಿ. ಟೀಮ್ ಬಿ‍‍ಹೆಚ್‍‍‍ಪಿಯ ಸದಸ್ಯ ಸುಹಾಸ್ ಮಂಜುನಾಥ್‍‍ರವರು, 2016ರಲ್ಲಿ ಹೊಸ ಕಾರನ್ನು ಖರೀದಿಸಲು ನಿರ್ಧರಿಸಿದರು. ಅದರಂತೆ ಗುಣಮಟ್ಟ ಹಾಗೂ ಕೈಗೆಟುಕುವ ದರದಲ್ಲಿದ್ದ ಕಾರಣ ಅವರು ಸ್ಕೋಡಾ ರ್‍ಯಾಪಿಡ್ ಕಾರನ್ನು ಖರೀದಿಸಲು ನಿರ್ಧರಿಸಿದರು. ಅದರಂತೆ ಅವರು ಲಿಮಿಟೆಡ್ ಎಡಿಷನ್‍‍ನಲ್ಲಿದ್ದ ಬ್ಲಾಕ್ ಪ್ಯಾಕೇಜ್ ಸ್ಕೋಡಾ ರ್‍ಯಾಪಿಡ್ ಕಾರಿನ ಬಗ್ಗೆ ವಿಚಾರಿಸಿದರು. ಡೀಲರ್ ಆ ಕಾರು ಲಭ್ಯವಿಲ್ಲವೆಂದು ತಿಳಿಸಿದ ಕಾರಣ ಅವರು ವಿನಾಯಕ ಸ್ಕೋಡಾ ಡೀಲರ್ ಬಳಿ ತೆರಳಿದರು.

ನಕಲಿ ಕಾರು ಮಾರಿ ಟೋಪಿ ಹಾಕಿದ ಡೀಲರ್...!!

ಡೀಲರ್‍‍ರವರು ತಮ್ಮ ಬಳಿ ಸ್ಕೋಡಾ ರ್‍ಯಾಪಿಡ್ ಬ್ಲಾಕ್ ಪ್ಯಾಕೇಜಿನ ಒಂದೇ ಒಂದು ಕಾರು ಇರುವುದಾಗಿ, ಅದನ್ನು ತ್ವರಿತವಾಗಿ ಖರೀದಿಸಬೇಕೆಂದು ತಿಳಿಸಿದರು. ಸುಹಾಸ್‍‍ರವರು ಕ್ಯಾಂಡಿ ವೈಟ್ ಕಲರ್‍‍ನಲ್ಲಿದ್ದ ಸ್ಕೋಡಾ ರ್‍ಯಾಪಿಡ್ ನ 1.6 ಎಂ‍‍ಟಿ ಬ್ಲಾಕ್ ಪ್ಯಾಕೇಜ್ ಕಾರನ್ನು ಹಲವು ವಿನಾಯಿತಿಗಳನ್ನು ಪಡೆದ ನಂತರ ವಿನಾಯಕ ಸ್ಕೋಡಾ ಡೀಲರ್‍‍ರವರಿಂದ ಖರೀದಿಸಿದರು.

ನಕಲಿ ಕಾರು ಮಾರಿ ಟೋಪಿ ಹಾಕಿದ ಡೀಲರ್...!!

ಈ ಕಾರನ್ನು 11.80 ಲಕ್ಷ ರೂ.ಗಳಿಗೆ ಆನ್ ರೋಡ್ ಬೆಲೆಯಲ್ಲಿ ಮಾರಾಟ ಮಾಡಲಾಯಿತು. ಸುಹಾಸ್ ರವರು 14ನೇ ಅಕ್ಟೋಬರ್ 2016ರಂದು 20,000ರೂ.ಗಳನ್ನು ಬುಕ್ಕಿಂಗ್ ಹಣವೆಂದು ಪಾವತಿಸಿದರು. 18ನೇ ಅಕ್ಟೋಬರ್ 2016ರಂದು ಡೀಲರ್ 30,000 ರೂ.ಗಳನ್ನು ಹೆಚ್ಚುವರಿಯಾಗಿ ನೀಡಿ ಪ್ರೊಫಾರ್ಮ ಇನ್‍‍‍ವಾಯ್ಸ್ ಪಡೆಯಲು ಹಾಗೂ ಕಾರನ್ನು ಬ್ಲಾಕ್ ಮಾಡಲು ಹೇಳಿದರು.

ನಕಲಿ ಕಾರು ಮಾರಿ ಟೋಪಿ ಹಾಕಿದ ಡೀಲರ್...!!

ಅದೇ ದಿನ ಅವರು ಡೀಲರ್ ಹೇಳಿದಂತೆ 30,000ರೂ.ಗಳನ್ನು ಪಾವತಿಸಿ, ಬ್ಯಾಂಕಿನಿಂದ ಸಾಲವನ್ನು ಮಂಜೂರು ಮಾಡಿಸಿಕೊಂಡರು. ಅಕ್ಟೋಬರ್ 24 ರಂದು ಡೀಲರ್‍‍ರವರು, ಕಾರನ್ನು ಅಕ್ಟೋಬರ್ 26ರಂದು ಡೆಲಿವರಿ ಮಾಡಲಾಗುವುದೆಂದು ತಿಳಿಸಿದರು. ಕೊನೆಗೆ ಅವರು ಅಕ್ಟೋಬರ್ 31ರಂದು ರ್‍ಯಾಪಿಡ್ ಕಾರಿನ ಡೆಲಿವರಿ ಪಡೆದರು. ಕಾರಿನ ಡೆಲಿವರಿ ಪಡೆದ ನಂತರ ಸುಹಾಸ್‍‍ರವರು ಪರಿಶೀಲಿಸಿದಾಗ ಡಾಕ್ಯುಮೆಂಟಿನಲ್ಲಿರುವ ಬೆಲೆಗೂ, ಡೀಲರ್ ಹೇಳಿದ ಬೆಲೆಗೂ ಹೊಂದಾಣಿಕೆಯಾಗದೇ ಇರುವುದು ಕಂಡು ಬಂತು.

ನಕಲಿ ಕಾರು ಮಾರಿ ಟೋಪಿ ಹಾಕಿದ ಡೀಲರ್...!!

ಟ್ಯಾಕ್ಸ್ ಇನ್ವಾಯ್ಸ್‍‍ನಲ್ಲಿ ಸುಮಾರು 48,000 ರೂ.ಗಳಷ್ಟು ವ್ಯತ್ಯಾಸವಿರುವುದು ಕಂಡು ಬಂತು. 9,72,617 ರೂ.ಗಳ ಬದಲು ಡೀಲರ್ 9,24,740 ರೂ.ಗಳೆಂದು ಎಕ್ಸ್ ಶೋರೂಂ ಬೆಲೆಯನ್ನು ನಿಗದಿಪಡಿಸಿರುವುದು ಕಂಡು ಬಂತು.

ನಕಲಿ ಕಾರು ಮಾರಿ ಟೋಪಿ ಹಾಕಿದ ಡೀಲರ್...!!

ಡಾಕ್ಯುಮೆಂಟ್‍‍ಗಳಲ್ಲಿ ಎಲ್ಲಿಯೂ ಲಿಮಿಟೆಡ್ ಎಡಿಷನ್ ನ ಬ್ಲಾಕ್ ಪ್ಯಾಕೇಜ್‍‍ನ ಕಾರು ಎಂದು ನಮೂದಿಸಿರುವುದು ಕಂಡು ಬರಲಿಲ್ಲ. ಈ ಬಗ್ಗೆ ವಿಚಾರಿಸಿದಾಗ ಡೀಲರ್ ಸುಹಾಸ್‍ರವರನ್ನು ರಜಾಗಳಿರುವ ಕಾರಣ ನವೆಂಬರ್ 2ರಂದು ಬರಲು ತಿಳಿಸಿದರು. ಬೆಲೆಗಳಲ್ಲಿ ವ್ಯತ್ಯಾಸ ಕಂಡು ಬಂದಿದ್ದರಿಂದ ಡೀಲರ್ ಸುಹಾಸ್‍‍ರವರಿಗೆ ರೂ.67,605 ಗಳನ್ನು ವಾಪಸ್ ಕೊಡುವುದಾಗಿ ತಿಳಿಸಿದರು. ಆದರೆ ಅವರಿಗೆ ಹಣವನ್ನು ಅದೇ ದಿನ ವಾಪಸ್ ಮಾಡಲಿಲ್ಲ. ವಾದ -ವಿವಾದಗಳ ನಂತರ ಬ್ಯಾಂಕ್ ಅಧಿಕಾರಿಗಳು, ಡೀಲರ್‍‍ಗಳೊಂದಿಗೆ ಚರ್ಚಿಸಿ ಹಣವನ್ನು ವಾಪಸ್ ಮಾಡಲು ಒಪ್ಪಿಗೆ ನೀಡಿದರು.

ನಕಲಿ ಕಾರು ಮಾರಿ ಟೋಪಿ ಹಾಕಿದ ಡೀಲರ್...!!

ಆದರೂ ಕಾರಿನ ನೈಜತೆ ಬಗ್ಗೆ ಅನುಮಾನವಿದ್ದ ಸುಹಾಸ್‍‍ರವರು ಕಾರನ್ನು ನವೆಂಬರ್ 18, 2016ರಂದು ಪರೀಕ್ಷೆಗೊಳಪಡಿಸಿದರು, ಅದರಲ್ಲಿ ಕಾರಿನ ಹೆಡ್ ಲ್ಯಾಂಪ್‍‍ನ ಫ್ಲಾಶ್ ಮತ್ತು ಹೈ ಬೀಮ್‍‍ಗಳು ಕೆಲಸ ಮಾಡದೇ ಇರುವುದು ಕಂಡು ಬಂತು. ಯಾವುದೇ ಡಾಕ್ಯುಮೆಂಟುಗಳಲ್ಲೂ ಬ್ಲಾಕ್ ಪ್ಯಾಕೇಜ್ ಎಂದು ನಮೂದಾಗದೇ ಇರುವುದು ಕಂಡು ಬಂದ ಕಾರಣ ಸುಹಾಸ್‍‍ರವರು ಡೀಲರ್‍‍ರವರಿಗೆ ಕರೆ ಮಾಡಿ ಈ ಬಗ್ಗೆ ಹಾಗೂ ಕಾರಿನಲ್ಲಿರುವ ಸಮಸ್ಯೆಗಳ ಬಗ್ಗೆ ತಿಳಿಸಿದರು.

ನಕಲಿ ಕಾರು ಮಾರಿ ಟೋಪಿ ಹಾಕಿದ ಡೀಲರ್...!!

ಡೀಲರ್‍‍ಗಳು ಟ್ಯಾಕ್ಸ್ ಇನ್ವಾಯ್ಸ್‍‍ಅನ್ನು ಎಡಿಟ್ ಮಾಡಿ ಬ್ಲಾಕ್ ಪ್ಯಾಕೇಜ್ ಎಂದು ನಮೂದಿಸಿ ಅದರ ಪ್ರತಿಯನ್ನು ಸುಹಾಸ್ ರವರಿಗೆ ಕಳುಹಿಸಿ ಅದನ್ನೇ ಸರ್ವಿಸ್ ಸೆಂಟರ್‍‍ನಲ್ಲೂ ಉಪಯೋಗಿಸಲು ತಿಳಿಸಿದರು. ಸುಹಾಸ್‍‍ರವರು ಡಿಸೆಂಬರ್ 27ರಂದು ಶೋರೂಂಗೆ ಹೋಗಿ ಕಾರಿನಲ್ಲಿರುವ ಸಮಸ್ಯೆಗಳ ಬಗ್ಗೆ ತಿಳಿಸಿದರು. ಶೋರೂಂ ನವರು ಇದರ ಬಗ್ಗೆ ತಿಳಿಯಲು 8 ರಿಂದ 10 ದಿನಗಳು ಬೇಕಾಗಿದ್ದು, ಅಲ್ಲಿಯವರೆಗೆ ಕಾರನ್ನು ನಾರ್ಮಲ್ ಆಗಿ ಚಲಾಯಿಸಲು ತಿಳಿಸಿದರು.

ನಕಲಿ ಕಾರು ಮಾರಿ ಟೋಪಿ ಹಾಕಿದ ಡೀಲರ್...!!

ಜನವರಿ 6ರಂದು ಸರ್ವಿಸ್ ಸೆಂಟರ್ ನವರು ಅವರಿಗೆ ರೆಗ್ಯುಲರ್ ಸ್ಕೋಡಾ ರ್‍ಯಾಪಿಡ್‍‍ನ ಹೆಡ್‍‍ಲ್ಯಾಂಪ್ ಗಳು ಕೆಲಸ ಮಾಡುತ್ತಿದ್ದು, ಬ್ಲಾಕ್ ಪ್ಯಾಕೇಜ್‍‍ನ ಜೊತೆ ನೀಡಲಾಗುವ ಪ್ರೊಜೆಕ್ಟರ್ ಲ್ಯಾಂಪ್‍‍ಗಳು ಕಾರ್ಯನಿರ್ವಹಿಸುತ್ತಿಲ್ಲವೆಂದು ತಿಳಿಸಿದರು.

MOST READ: ಮತ್ತೊಂದು ರಾಡಾರ್ ಉಡಾಯಿಸಲಿರುವ ಇಸ್ರೋ

ನಕಲಿ ಕಾರು ಮಾರಿ ಟೋಪಿ ಹಾಕಿದ ಡೀಲರ್...!!

ಆಗ ಸುಹಾಸ್‍‍ರವರಿಗೆ ಡೀಲರ್ ರೆಗ್ಯುಲರ್ ಸ್ಕೋಡಾ ಕಾರಿನಲ್ಲಿರುವ ಬಿಡಿ ಭಾಗಗಳನ್ನು ಬದಲಿಸಿ, ಬ್ಲಾಕ್ ಪ್ಯಾಕೇಜ್‍‍ನಲ್ಲಿರುವ ಬಿಡಿ ಭಾಗಗಳನ್ನು ಅಳವಡಿಸಿ ಕಾರನ್ನು ಲಿಮಿಟೆಡ್ ಎಡಿಷನ್ ಎಂದು ಬಿಂಬಿಸಿ ಮೋಸದಿಂದ ಮಾರಾಟ ಮಾಡಿರುವುದು ಕಂಡು ಬಂತು. ಸುಹಾಸ್‍‍ರವರಿಗೆ ಜನವರಿ 20ರಂದು ಕರೆ ಮಾಡಿದ ಶೋರೂಂನವರು ಹೆಡ್‍‍ಲ್ಯಾಂಪ್‍‍ಗಳನ್ನು ಸ್ಪೇಷಲ್‍‍‍ ಆಗಿ ಆರ್ಡರ್ ಮಾಡಲಾಗಿದ್ದು ಅದನ್ನು ಕಾರಿನಲ್ಲಿ ಅಳವಡಿಸಿಕೊಡಲಾಗುವುದೆಂದು ತಿಳಿಸಿದರು.

ನಕಲಿ ಕಾರು ಮಾರಿ ಟೋಪಿ ಹಾಕಿದ ಡೀಲರ್...!!

ಸುಹಾಸ್ ರವರು ಮೈಸ್ಕೋಡಾ ಆ‍ಪ್ ನಲ್ಲಿ ಪರಿಶೀಲಿಸಿದಾಗ ಅವರು ಖರೀದಿಸಿದ್ದ ಕಾರು ರೆಗ್ಯುಲರ್ ಆವೃತ್ತಿಯಾದಾಗಿದ್ದು, ಲಿಮಿಟೆಡ್ ಎಡಿಷನ್ನಿನ ಕಾರು ಅಲ್ಲವೆಂದು ಕಂಡು ಬಂತು. ಸುಹಾಸ್‍‍ರವರು ತಮಗೆ ಮೋಸ ಮಾಡಿರುವ ಬಗ್ಗೆ ಗ್ರಾಹಕ ನ್ಯಾಯಲಯದಲ್ಲಿ ಕೇಸ್ ದಾಖಲಿಸಿದರು. ಗ್ರಾಹಕ ನ್ಯಾಯಲಯದಲ್ಲಿನ ಸುದೀರ್ಘ ಹೋರಾಟದ ನಂತರ ಸ್ಕೋಡಾ ಮತ್ತು ಸುಹಾಸ್‍‍‍ರವರ ನಡುವೆ ಒಪ್ಪಂದವೇರ್ಪಟ್ಟು ಸ್ಕೋಡಾ ಕಂಪನಿಯವರು ಸುಹಾಸ್‍‍ರವರಿಗೆ ಹೊಸ ಕಾರು ನೀಡುವುದಾಗಿ ತಿಳಿಸಿದರು.

ನಕಲಿ ಕಾರು ಮಾರಿ ಟೋಪಿ ಹಾಕಿದ ಡೀಲರ್...!!

ಸುಹಾಸ್‍‍‍ರವರ ಈ ಹೋರಾಟದಲ್ಲಿ ಅವರಿಗೆ ಅನೇಕ ಅಡೆ ತಡೆಗಳು ಎದುರಾದವು. ಸ್ಕೋಡಾ ಸುಹಾಸ್‍‍ರವರಿಗೆ ಹೊಸ ಕಾರನ್ನು ನೀಡಿರುವುದಾಗಿ ತಿಳಿಸಿ ಪ್ರಕರಣ ಮುಕ್ತಾಯಗೊಳಿಸಲು ಕೋರಿತು. ಸುಹಾಸ್‍‍ರವರು ಸ್ಕೋಡಾ ಕಂಪನಿ ಅವರಿಗೆ ನೀಡಿದ್ದ ಅನೇಕ ಕಾರುಗಳ ಬಾಡಿಗಳು ಸ್ಕ್ರಾಚ್‍‍ಆಗಿ ಹಾಳಾಗಿದ್ದ ಕಾರಣದಿಂದಾಗಿ ತಿರಸ್ಕರಿಸಿದ್ದರು. ನ್ಯಾಯಲಯವು ಸುಹಾಸ್‍‍ರವರಿಗೆ ಹೊಸ ಕಾರನ್ನು ನೀಡಿ ಪ್ರಕರಣವನ್ನು ಮುಕ್ತಾಯಗೊಳಿಸುವಂತೆ ಸ್ಕೋಡಾ ಕಂಪನಿಗೆ ಆದೇಶ ನೀಡಿತು. ಮಾರ್ಚ್ 19ರಂದು ಸುಹಾಸ್‍‍ರವರು ತಾವು ನಿರೀಕ್ಷಿಸುತ್ತಿದ್ದ ಕಾರಿನ ಪ್ರಿ-ಡೆಲಿವರಿ ಇನ್ಸ್ ಪೆಕ್ಷನ್ ಮಾಡಿದರು. ಮಾರ್ಚ್ 23ರಂದು ಅವರು ಕಾರಿನ ಡೆಲಿವರಿ ಪಡೆದರು. ಮಾರ್ಚ್ 27ರಂದು ಎರಡೂ ಕಡೆಯವರು ಪ್ರಕರಣವನ್ನು ಇತ್ಯರ್ಥಪಡಿಸಿಕೊಳ್ಳಲಾಗಿದೆ ಎಂದು ನ್ಯಾಯಲಯಕ್ಕೆ ಅಫಿಡವಿಟ್ ಸಲ್ಲಿಸಿ ಪ್ರಕರಣವನ್ನು ಮುಕ್ತಾಯಗೊಳಿಸಿಕೊಂಡರು.

Photo Courtesy: Teambhp

Most Read Articles

Kannada
English summary
Dealer sells customer a fake Rapid Black edition sedan: Skoda replaces it with a new car - Read in kannada
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Drivespark sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Drivespark website. However, you can change your cookie settings at any time. Learn more