ತೀವ್ರ ಕುಸಿತ ಕಂಡ ಮಾರುತಿ ಸುಜುಕಿ ಕಾರುಗಳ ಮಾರಾಟ

ಭಾರತದ ಆಟೋಮೊಬೈಲ್ ಉದ್ಯಮವು ಕಳೆದ ಕೆಲವು ತಿಂಗಳುಗಳಿಂದ ಭಾರೀ ಕುಸಿತವನ್ನು ಕಾಣುತ್ತಿದೆ. ಭಾರತದ ಆಟೋಮೊಬೈಲ್ ಮಾರುಕಟ್ಟೆಯಲ್ಲಿ ಮುಂಚೂಣಿಯಲ್ಲಿರುವ ಮಾರುತಿ ಸುಜುಕಿ ಕಂಪನಿಯು ಸಹ ಭಾರೀ ಕುಸಿತವನ್ನು ಅನುಭವಿಸುತ್ತಿದೆ. ಮಾರುತಿ ಸುಜುಕಿ ಕಂಪನಿಯು ಕಳೆದ ಐದು ತಿಂಗಳುಗಳಿಂದ ಸತತ ಕುಸಿತವನ್ನು ಕಾಣುತ್ತಿದೆ.

ತೀವ್ರ ಕುಸಿತ ಕಂಡ ಮಾರುತಿ ಸುಜುಕಿ ಕಾರುಗಳ ಮಾರಾಟ

ಈ ವರ್ಷದ ಜನವರಿಯಲ್ಲಿ ಮಾರುತಿ ಸುಜುಕಿ ಕಂಪನಿಯು ಮಾರಾಟದಲ್ಲಿ 0.2%ನಷ್ಟು ಏರಿಕೆ ಕಂಡ ನಂತರ, ನಿರಂತರವಾಗಿ ಕುಸಿತವನ್ನು ಕಾಣುತ್ತಿದೆ. ಈ ಕುಸಿತದ ತೀವ್ರತೆ ಎಷ್ಟಿದೆಯೆಂದರೆ ಮಾರುತಿ ಸುಜುಕಿ ಕಂಪನಿಯು 2019ರ ಜುಲೈ ತಿಂಗಳಿನಲ್ಲಿ 48.16%ನಷ್ಟು ಕುಸಿತ ಕಂಡಿದೆ. ಜೂನ್ ತಿಂಗಳಿನಲ್ಲಿಯೂ ಸಹ ಮಾರುತಿ ಸುಜುಕಿ ಕಂಪನಿಯ ಮಾರಾಟದಲ್ಲಿ ಕುಸಿತವಾಗಿತ್ತು. ಇಕೋ, ವ್ಯಾಗನ್ ಆರ್, ಎರ್ಟಿಗಾ ಹಾಗೂ ಸಿಯಾಜ್ ವಾಹನಗಳನ್ನು ಹೊರತುಪಡಿಸಿ ಉಳಿದ ವಾಹನಗಳ ಮಾರಾಟದಲ್ಲಿ ಕುಸಿತವಾಗಿದೆ.

ತೀವ್ರ ಕುಸಿತ ಕಂಡ ಮಾರುತಿ ಸುಜುಕಿ ಕಾರುಗಳ ಮಾರಾಟ

2018ರ ಜುಲೈ ತಿಂಗಳಿನಲ್ಲಿ 1,52,427 ವಾಹನಗಳ ಮಾರಾಟವಾಗಿದ್ದರೆ, 2019ರ ಇದೇ ಅವಧಿಯಲ್ಲಿ 96,478 ವಾಹನಗಳ ಮಾರಾಟವಾಗಿ 37%ನಷ್ಟು ಕುಸಿತ ಉಂಟಾಗಿದೆ. 2019ರ ಜೂನ್ ತಿಂಗಳಿನಲ್ಲಿ 1,11,014 ವಾಹನಗಳ ಮಾರಾಟವಾಗಿ, 2019ರ ಜುಲೈ ತಿಂಗಳಿಗಿಂತ 13% ನಷ್ಟು ಹೆಚ್ಚು ಏರಿಕೆಯಾಗಿತ್ತು.

ತೀವ್ರ ಕುಸಿತ ಕಂಡ ಮಾರುತಿ ಸುಜುಕಿ ಕಾರುಗಳ ಮಾರಾಟ

ವಾಹನಗಳ ಮಾದರಿಗಳು ಮಾರಾಟವಾದ ಬಗ್ಗೆಗಿನ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ. ಮಾರುತಿ ಕಂಪನಿಯ ಅತಿ ಹೆಚ್ಚು ಮಾರಾಟವಾಗುವ ವಾಹನಗಳಾದ ಬ್ರಿಝಾ ಹಾಗೂ ಎಸ್ ಕ್ರಾಸ್‍‍ಗಳು ಭಾರೀ ಕುಸಿತವನ್ನು ಕಂಡಿವೆ. ಎಸ್ ಕ್ರಾಸ್‍‍ನ 654 ಯೂನಿಟ್ ಮಾರಾಟವಾಗಿ 88%ನಷ್ಟು ಕುಸಿತ ಉಂಟಾಗಿದೆ.

ಮಾದರಿಗಳು

ಜುಲೈ-19 ಜುಲೈ-18 ವ್ಯತ್ಯಾಸ%
1 ವ್ಯಾಗನ್ ಆರ್

15,062 14,339 5.04
2 ಡಿಜೈರ್ 12,923 25,647 -49.61
3 ಸ್ವಿಫ್ಟ್ 12,677 19,993 -36.59
4 ಆಲ್ಟೋ

11,577 23,371 -50.46
5 ಬಲೆನೋ 10,482 17,960 -41.64
6 ಇಕೋ

9,814 7,578 29.51
7 ಎರ್ಟಿಗಾ

9,222 5,764 59.99
8 ಬ್ರಿಝಾ 5,302 14,181 -62.61
9 ಸೆಲೆರಿಯೊ 4,805 7,376 -34.86
10 ಸಿಯಾಜ್ 2,397 48 4,893.75
11 ಇಗ್ನಿಸ್

1,563 3,397 -53.99
12 ಎಸ್-ಕ್ರಾಸ್

654 5,308 -87.68
13 ಒಮ್ನಿ

- 8,213 -
14 ಜಿಪ್ಸಿ - 252 -
ತೀವ್ರ ಕುಸಿತ ಕಂಡ ಮಾರುತಿ ಸುಜುಕಿ ಕಾರುಗಳ ಮಾರಾಟ

2018ರ ಜುಲೈನಲ್ಲಿ 5,308 ವಾಹನಗಳ ಮಾರಾಟವಾಗಿದ್ದರೆ, ಈ ಪ್ರಮಾಣವು ಈ ವರ್ಷದ ಇದೇ ಅವಧಿಯಲ್ಲಿ 1,359 ವಾಹನಗಳಿಗೆ ಕುಸಿದಿದೆ. ಹ್ಯುಂಡೈ ಕಂಪನಿಯ ಕ್ರೆಟಾ ಕಾರು ಎಸ್ ಕ್ರಾಸ್ ಕಾರಿಗೆ ತೀವ್ರ ಸ್ಪರ್ಧೆಯನ್ನು ನೀಡುತ್ತಿರುವ ಕಾರಣ, ಎಸ್ ಕ್ರಾಸ್ ವಾಹನದ ಮಾರಾಟದಲ್ಲಿ ತೀವ್ರ ಕುಸಿತ ಉಂಟಾಗಿದೆ.

ತೀವ್ರ ಕುಸಿತ ಕಂಡ ಮಾರುತಿ ಸುಜುಕಿ ಕಾರುಗಳ ಮಾರಾಟ

2018ರ ಜುಲೈ ತಿಂಗಳಿನಲ್ಲಿ 14,181 ಯುನಿಟ್‍‍ಗಳಷ್ಟು ಮಾರಾಟವಾಗಿದ್ದ ವಿಟಾರಾ ಬ್ರಿಝಾ ಮಾರಾಟ ಪ್ರಮಾಣವು 2019ರ ಜುಲೈ ತಿಂಗಳಿನಲ್ಲಿ 5,302 ಯೂನಿಟ್‍‍ಗಳಿಗೆ ತಲುಪಿ 63%ನಷ್ಟು ಇಳಿಕೆಯಾಗಿದೆ. 2019ರ ಜೂನ್ ತಿಂಗಳಿನಲ್ಲಿ 8,871 ಯುನಿಟ್‍‍ಗಳ ಮಾರಾಟವಾಗಿತ್ತು. ಮಾರಾಟ ಪ್ರಮಾಣವು ಜೂನ್ ತಿಂಗಳಿಗೆ ಹೋಲಿಸಿದರೆ ಕಳೆದ ತಿಂಗಳು 40%ನಷ್ಟು ಕಡಿಮೆಯಾಗಿದೆ.

ತೀವ್ರ ಕುಸಿತ ಕಂಡ ಮಾರುತಿ ಸುಜುಕಿ ಕಾರುಗಳ ಮಾರಾಟ

ಹ್ಯುಂಡೈ ಕಂಪನಿಯ ವೆನ್ಯೂ ಬಿಡುಗಡೆಯ ನಂತರ ಬ್ರಿಝಾ ತೀವ್ರ ಪೈಪೋಟಿಯನ್ನು ಎದುರಿಸುತ್ತಿದೆ. ಇನ್ನು ಇಕೊ ಕಾರುಗಳ ಬಗ್ಗೆ ಹೇಳುವುದಾದರೆ, 2018ರ ಜುಲೈ ತಿಂಗಳಿನಲ್ಲಿ 7,578 ಯುನಿಟ್‌ಗಳ ಮಾರಾಟವಾಗಿದ್ದರೆ, ಕಳೆದ ತಿಂಗಳು 9,814 ಯುನಿಟ್‍‍ಗಳ ಮಾರಾಟವಾಗಿ, 30% ನಷ್ಟು ಏರಿಕೆ ಕಂಡಿದೆ.

MOST READ: ಅಬ್ಬಾ..ಒಂದೇ ಆಟೋದಲ್ಲಿ ಪ್ರಯಾಣಿಸಿದ 24 ಜನ..!

ತೀವ್ರ ಕುಸಿತ ಕಂಡ ಮಾರುತಿ ಸುಜುಕಿ ಕಾರುಗಳ ಮಾರಾಟ

2019ರ ಜೂನ್ ತಿಂಗಳಿನ 9,265 ಯುನಿಟ್‌ಗಳ ಮಾರಾಟಕ್ಕೆ ಹೋಲಿಸಿದರೆ ಈ ಮಾದರಿಯ ಮಾರಾಟವು 6%ನಷ್ಟು ಹೆಚ್ಚಾಗಿದೆ. ವ್ಯಾಗನ್ಆರ್ ಮಾರಾಟವು ಕಳೆದ ತಿಂಗಳಿನಲ್ಲಿ 5%ನಷ್ಟು ಹೆಚ್ಚಳವಾಗಿ 15,062 ಯುನಿಟ್‍‍ಗಳಿಗೆ ತಲುಪಿದೆ. 2018ರ ಜುಲೈನಲ್ಲಿ 14,229 ಯುನಿಟ್‍‍ಗಳ ಮಾರಾಟವಾಗಿತ್ತು.

MOST READ: ಆರ್ಟಿಕಲ್ 370 ರದ್ದಾದ ಬೆನ್ನಲ್ಲೆ ಜಮ್ಮು ಕಾಶ್ಮೀರದಲ್ಲಿ ಶುರುವಾಗಿದೆ ಹೊಸ ಕೈಗಾರಿಕಾ ಕ್ರಾಂತಿ

ತೀವ್ರ ಕುಸಿತ ಕಂಡ ಮಾರುತಿ ಸುಜುಕಿ ಕಾರುಗಳ ಮಾರಾಟ

2019ರ ಜೂನ್ ನಲ್ಲಿ 10,228 ಯುನಿಟ್ ಮಾರಾಟವಾಗಿತ್ತು. 2019ರ ಜುಲೈ ತಿಂಗಳಿನಲ್ಲಿ 47%ನಷ್ಟು ಹೆಚ್ಚಾಗಿದೆ. ಎರ್ಟಿಗಾ ಕಾರಿನ ಮಾರಾಟವು 2018ರ ಜುಲೈ ತಿಂಗಳಿಗಿಂತ 94%ನಷ್ಟು ಹೆಚ್ಚಾಗಿದೆ. 2018ರ ಜುಲೈ ತಿಂಗಳಿನಲ್ಲಿ 4,764 ಯುನಿಟ್‍‍ಗಳ ಮಾರಾಟವಾಗಿದ್ದರೆ, 2019ರ ಜುಲೈ ತಿಂಗಳಿನಲ್ಲಿ 9,222 ಯುನಿಟ್‍‍ಗಳ ಮಾರಾಟವಾಗಿದೆ.

MOST READ: ಪೊಲೀಸರನ್ನು ತರಾಟೆಗೆ ತೆಗೆದುಕೊಂಡ ಮಮತಾ ಬ್ಯಾನರ್ಜಿ..!

ತೀವ್ರ ಕುಸಿತ ಕಂಡ ಮಾರುತಿ ಸುಜುಕಿ ಕಾರುಗಳ ಮಾರಾಟ

2019ರ ಜೂನ್ ತಿಂಗಳಿನಲ್ಲಿ 7,567 ಯುನಿಟ್‍‍ಗಳ ಮಾರಾಟವಾಗಿತ್ತು. ಮಾರುತಿ ಸುಜುಕಿ ಸಿಯಾಜ್‌ನ ಮಾರಾಟವು 2018 ಜುಲೈ ತಿಂಗಳಿಗಿಂತ 4,894%ನಷ್ಟು ಏರಿಕೆಯಾಗಿದೆ. 2018ರ ಜುಲೈನಲ್ಲಿ 48 ಯುನಿಟ್‌ಗಳ ಮಾರಾಟವಾಗಿದ್ದರೆ, ಕಳೆದ ತಿಂಗಳು 2,397 ಯುನಿಟ್‌ಗಳ ಮಾರಾಟವಾಗಿದೆ.

ತೀವ್ರ ಕುಸಿತ ಕಂಡ ಮಾರುತಿ ಸುಜುಕಿ ಕಾರುಗಳ ಮಾರಾಟ

2019ರ ಜೂನ್‌ನಲ್ಲಿ 2,322 ಯುನಿಟ್‌ಗಳ ಮಾರಾಟವಾಗಿತ್ತು. ಈ ಮೂರು ಮಾದರಿಗಳ ಜೊತೆಗೆ, ಆಲ್ಟೊ ಕಾರಿನ ಮಾರಾಟವು 2019ರ ಜುಲೈ ತಿಂಗಳಿನಲ್ಲಿ 50%ನಷ್ಟು ಕುಸಿದು 11,577 ಯುನಿಟ್‌ಗಳಿಗೆ ತಲುಪಿದೆ. ಹಿಂದಿನ ವರ್ಷದ ಇದೇ ತಿಂಗಳಲ್ಲಿ 23,371 ಯುನಿಟ್‌ಗಳ ಮಾರಾಟವಾಗಿತ್ತು.

ತೀವ್ರ ಕುಸಿತ ಕಂಡ ಮಾರುತಿ ಸುಜುಕಿ ಕಾರುಗಳ ಮಾರಾಟ

2019ರ ಜೂನ್‌ನಲ್ಲಿ 18,733 ಯುನಿಟ್‌ಗಳ ಮಾರಾಟವಾಗಿತ್ತು. ಮಾರುತಿ ಸುಜುಕಿ ಇಗ್ನಿಸ್ ಮಾರಾಟವು ಕಳೆದ ತಿಂಗಳಲ್ಲಿ 54%ನಷ್ಟು ಕುಸಿದು, ಕೇವಲ 1,563 ಯುನಿಟ್‍‍ಗಳ ಮಾರಾಟವಾಗಿದೆ. 2018ರ ಜುಲೈ ತಿಂಗಳಿನಲ್ಲಿ 3,397 ಯುನಿಟ್ ಹಾಗೂ 2019ರ ಜೂನ್‌ನಲ್ಲಿ 2,911 ಯುನಿಟ್‌ಗಳ ಮಾರಾಟವಾಗಿದ್ದವು.

ತೀವ್ರ ಕುಸಿತ ಕಂಡ ಮಾರುತಿ ಸುಜುಕಿ ಕಾರುಗಳ ಮಾರಾಟ

ಸೆಲೆರಿಯೊ ಮಾರಾಟವೂ 2019ರ ಜುಲೈ ತಿಂಗಳಿನಲ್ಲಿ 35%ನಷ್ಟು ಕುಸಿದಿದೆ. 2018ರ ಜುಲೈ ತಿಂಗಳಿನಲ್ಲಿ 7,376 ಯುನಿಟ್‌ಗಳಷ್ಟಿದ್ದ ಮಾರಾಟವು ಕಳೆದ ತಿಂಗಳು 4,805 ಯುನಿಟ್‌ಗಳಿಗೆ ಕುಸಿದು, 2019ರ ಜೂನ್ ತಿಂಗಳಿಗಿಂತ 1%ನಷ್ಟು ಕಡಿಮೆಯಾಗಿದೆ.

ತೀವ್ರ ಕುಸಿತ ಕಂಡ ಮಾರುತಿ ಸುಜುಕಿ ಕಾರುಗಳ ಮಾರಾಟ

2019ರ ಜೂನ್ ತಿಂಗಳಿನಲ್ಲಿ 4,871 ಯುನಿಟ್‌ಗಳ ಮಾರಾಟವಾಗಿತ್ತು. ಮಾರುತಿ ಸುಜುಕಿ ಇಗ್ನಿಸ್ ಕಾರಿನ ಮಾರಾಟವು ಕಳೆದ ತಿಂಗಳು 42%ನಷ್ಟು ಕುಸಿದಿದೆ. 2018 ಜುಲೈ ತಿಂಗಳಿನಲ್ಲಿ 17,960 ಯೂನಿಟ್‍‍ಗಳ ಮಾರಾಟವಾಗಿದ್ದರೆ, ಕಳೆದ ತಿಂಗಳು 10,482 ಯುನಿಟ್‌ಗಳ ಮಾರಾಟವಾಗಿದೆ.

ತೀವ್ರ ಕುಸಿತ ಕಂಡ ಮಾರುತಿ ಸುಜುಕಿ ಕಾರುಗಳ ಮಾರಾಟ

2019ರ ಜೂನ್ ತಿಂಗಳಿನ 13,689 ಯುನಿಟ್‌ಗಳ ಮಾರಾಟಕ್ಕೆ ಹೋಲಿಸಿದರೆ, ಕಳೆದ ತಿಂಗಳು 23%ನಷ್ಟು ಕುಸಿತ ಉಂಟಾಗಿದೆ. ಬಲೆನೊ ಕಾರು ಟೊಯೊಟಾ ಗ್ಲಾಂಜಾದಿಂದ ಪೈಪೋಟಿಯನ್ನು ಎದುರಿಸುತ್ತಿದೆ. ಗ್ಲಾಂಜಾ, ಬಲೆನೊ ಕಾರಿನ ರಿಬ್ಯಾಡ್ಜ್ ಕಾರ್ ಆಗಿದೆ.

ತೀವ್ರ ಕುಸಿತ ಕಂಡ ಮಾರುತಿ ಸುಜುಕಿ ಕಾರುಗಳ ಮಾರಾಟ

ಸ್ವಿಫ್ಟ್‌ ಕಾರಿನ ಮಾರಾಟವು ಕಳೆದ ತಿಂಗಳು 37%ನಷ್ಟು ಕುಸಿದು 12,677 ಕ್ಕೆ ತಲುಪಿದೆ. 2018ರ ಜುಲೈ ತಿಂಗಳಲ್ಲಿ 19,993 ಯುನಿಟ್‌ಗಳ ಮಾರಾಟವಾಗಿತ್ತು. ಜುಲೈ 2019ರ ಮಾರಾಟಕ್ಕೆ ಹೋಲಿಸಿದರೆ 2019ರ ಜೂನ್‌ ತಿಂಗಳಿನಲ್ಲಿ ಮಾರಾಟವು 22%ನಷ್ಟು ಹೆಚ್ಚಾಗಿತ್ತು.

ತೀವ್ರ ಕುಸಿತ ಕಂಡ ಮಾರುತಿ ಸುಜುಕಿ ಕಾರುಗಳ ಮಾರಾಟ

ಜೂನ್ ತಿಂಗಳಿನಲ್ಲಿ 16,330 ಯುನಿಟ್‌ಗಳ ಮಾರಾಟವಾಗಿತ್ತು. ಮಾರುತಿ ಸುಜುಕಿ ಕಂಪನಿಯ ಮಾರಾಟದಲ್ಲಿ ಜಿಪ್ಸಿ ಹಾಗೂ ಓಮ್ನಿ ಕಾರುಗಳನ್ನು ಗಣನೆಗೆ ತೆಗೆದುಕೊಳ್ಳಲಾಗುವುದಿಲ್ಲ. ಈ ಎರಡೂ ಮಾದರಿಯ ಕಾರುಗಳನ್ನು ಈ ವರ್ಷದ ಆರಂಭದಿಂದ ಸ್ಥಗಿತಗೊಳಿಸಲಾಗಿದೆ.

Most Read Articles

Kannada
English summary
Decline in maruti suzuki car sales - Read in kannada
Story first published: Tuesday, August 13, 2019, 15:23 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X