ಹೊಸ ನಿಯಮ ಜಾರಿಯಾದಾಗ ಸರ್ಕಾರಿ ಬಸ್‍‍ನಲ್ಲಿ ಓಡಾಡುತ್ತಾರಂತೆ ಈ ಸಚಿವರು..!

ದೆಹಲಿಯ ವಾಯು ಮಾಲಿನ್ಯ ಪ್ರಮಾಣವು ವಿಪರೀತ ಹದಗೆಟ್ಟಿದೆ. ಈ ಹಿನ್ನೆಲೆಯಲ್ಲಿ ದೆಹಲಿ ಸರ್ಕಾರವು ಹಲವಾರು ನಿಯಮಗಳನ್ನು ಜಾರಿಗೆ ತರುತ್ತಿದೆ. ಇದರಲ್ಲಿ ಸಮ ಬೆಸ ವಾಹನಗಳನ್ನು ರಸ್ತೆಗಿಳಿಸುವ ನಿಯಮವೂ ಒಂದು.

ಹೊಸ ನಿಯಮ ಜಾರಿಯಾದಾಗ ಸರ್ಕಾರಿ ಬಸ್‍‍ನಲ್ಲಿ ಓಡಾಡುತ್ತಾರಂತೆ ಈ ಸಚಿವರು..!

ದೆಹಲಿ ಸರ್ಕಾರವು ಮೂರನೇ ಬಾರಿಗೆ ಸಮ ಬೆಸ ನಿಯಮವನ್ನು ನವೆಂಬರ್ 4ರಿಂದ 15ರವರೆಗೆ ಜಾರಿಗೆ ತರಲಿದೆ. ದೆಹಲಿ ರಾಜ್ಯದ ಸಾರಿಗೆ ಸಚಿವರಾದ ಕೈಲಾಶ್ ಗೆಹ್ಲೊಟ್‍‍ರವರು ರಾಜಕಾರಣಿಗಳಿಗೆ ಹಾಗೂ ಜನಪ್ರತಿನಿಧಿಗಳಿಗೆ ಹೊಸ ನಿಯಮದಿಂದ ಯಾವುದೇ ರೀತಿಯ ವಿನಾಯಿತಿಯನ್ನು ನೀಡಲಾಗುವುದಿಲ್ಲವೆಂದು ಭರವಸೆ ನೀಡಿದ್ದಾರೆ.

ಹೊಸ ನಿಯಮ ಜಾರಿಯಾದಾಗ ಸರ್ಕಾರಿ ಬಸ್‍‍ನಲ್ಲಿ ಓಡಾಡುತ್ತಾರಂತೆ ಈ ಸಚಿವರು..!

ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿರುವ ಸಚಿವರು, ಈ ನಿಯಮ ಜಾರಿಯಾದ ನಂತರ ತಾವೂ ಸಹ ಮೆಟ್ರೊ, ಬಸ್ ಅಥವಾ ಕಾರ್ ಪೂಲಿಂಗ್‍‍ನಲ್ಲಿ ಸಂಚರಿಸುವುದಾಗಿ ತಿಳಿಸಿದ್ದಾರೆ. ಈ ಬಗ್ಗೆ ಮಾತನಾಡಿರುವ ಸಚಿವರು, ನಾವೂ ಸಹ ಜನ ಸಾಮಾನ್ಯರಂತೆ ಸಂಚರಿಸುತ್ತೇವೆ. ನೀವು ನನ್ನನ್ನು ಬಸ್ ಹಾಗೂ ಮೆಟ್ರೊಗಳಲ್ಲಿ ಕಾಣಬಹುದು.

ಹೊಸ ನಿಯಮ ಜಾರಿಯಾದಾಗ ಸರ್ಕಾರಿ ಬಸ್‍‍ನಲ್ಲಿ ಓಡಾಡುತ್ತಾರಂತೆ ಈ ಸಚಿವರು..!

ಇದರ ಜೊತೆಗೆ ನಾನು ಕಾರ್ ಪೂಲ್ ಅನ್ನು ಸಹ ಬಳಸುತ್ತೇನೆ. ನಾನು ಯಾವುದೇ ವಿನಾಯಿತಿಯನ್ನು ಪಡೆಯುವುದಿಲ್ಲ ಎಂದು ಹೇಳಿದರು. ಗೆಹ್ಲೋಟ್‍‍ರವರ ಪ್ರಕಾರ, ಸರ್ಕಾರವು ಈ ನಿಯಮವನ್ನು ಜಾರಿಗೊಳಿಸಲು ಸಿದ್ದತೆಗಳನ್ನು ಮಾಡಿಕೊಂಡಿದೆ. ಇದರಿಂದಾಗಿ ದೆಹಲಿಯ ವಾಯು ಮಾಲಿನ್ಯವು ಗಣನೀಯವಾಗಿ ಕಡಿಮೆಯಾಗಲಿದೆ.

ಹೊಸ ನಿಯಮ ಜಾರಿಯಾದಾಗ ಸರ್ಕಾರಿ ಬಸ್‍‍ನಲ್ಲಿ ಓಡಾಡುತ್ತಾರಂತೆ ಈ ಸಚಿವರು..!

ಕಳೆದ ತಿಂಗಳು, ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್‍‍ರವರು ಚಳಿಗಾಲದಲ್ಲಿ ನೆರೆಯ ಪಂಜಾಬ್, ಹರಿಯಾಣ ಮತ್ತು ಉತ್ತರ ಪ್ರದೇಶಗಳಲ್ಲಿ ಗದ್ದೆಗಳಿಗೆ ಬೆಂಕಿಯಿಡುವುದರಿಂದ ದೆಹಲಿಯಲ್ಲಿ ಉಂಟಾಗುವ ವಾಯು ಮಾಲಿನ್ಯವನ್ನು ನಿಯಂತ್ರಿಸಲು ಏಳು ಅಂಶಗಳ ಕ್ರಿಯಾ ಯೋಜನೆಯನ್ನು ಪ್ರಕಟಿಸಿದ್ದರು.

ಹೊಸ ನಿಯಮ ಜಾರಿಯಾದಾಗ ಸರ್ಕಾರಿ ಬಸ್‍‍ನಲ್ಲಿ ಓಡಾಡುತ್ತಾರಂತೆ ಈ ಸಚಿವರು..!

ಇವುಗಳಲ್ಲಿ ಸಮ ಬೆಸ ಯೋಜನೆಯ ಜಾರಿ, ದೀಪಾವಳಿಗಾಗಿ ಲೇಸರ್ ಪ್ರದರ್ಶನ, ಮಾಸ್ಕ್ ವಿತರಣೆ, ಮಾರ್ಷಲ್‌ಗಳ ನಿಯೋಜನೆ ಹಾಗೂ ಧೂಳು ನಿಯಂತ್ರಣ ಯೋಜನೆಗಳು ಸೇರಿವೆ. ಖಾಸಗಿ ಸಿಎನ್‌ಜಿ ವಾಹನಗಳು ಹಾಗೂ ಮಹಿಳೆಯರು ಚಲಾಯಿಸುವ ವಾಹನಗಳಿಗೆ ಸಮ ಬೆಸ ನಿಯಮದಿಂದ ವಿನಾಯಿತಿ ನೀಡಲಾಗಿದೆ.

ಹೊಸ ನಿಯಮ ಜಾರಿಯಾದಾಗ ಸರ್ಕಾರಿ ಬಸ್‍‍ನಲ್ಲಿ ಓಡಾಡುತ್ತಾರಂತೆ ಈ ಸಚಿವರು..!

ಈ ಯೋಜನೆಯಲ್ಲಿ ದ್ವಿಚಕ್ರ ವಾಹನಗಳಿಗೆ ವಿನಾಯಿತಿ ನೀಡುವ ಬಗ್ಗೆ ಇನ್ನೂ ಖಚಿತವಾದ ನಿರ್ಧಾರ ತೆಗೆದುಕೊಂಡಿಲ್ಲ. ದೆಹಲಿಯಲ್ಲಿ 70 ಲಕ್ಷಕ್ಕೂ ಹೆಚ್ಚು ದ್ವಿಚಕ್ರ ವಾಹನಗಳಿದ್ದು, ಅವುಗಳ ಬಗ್ಗೆ ಅಂತಿಮ ತೀರ್ಮಾನ ತೆಗೆದುಕೊಳ್ಳುವ ಮುನ್ನ ದೆಹಲಿ ಸರ್ಕಾರವು ಅವುಗಳಿಂದ ಉಂಟಾಗುವ ಮಾಲಿನ್ಯದ ವಿವಿಧ ಅಂಶಗಳನ್ನು ಅಧ್ಯಯನ ಮಾಡುತ್ತಿದೆ ಎಂದು ಗೆಹ್ಲೋಟ್ ಹೇಳಿದರು.

MOST READ: ಮೈಲಿಗಲ್ಲುಗಳ ಬಣ್ಣದ ಹಿಂದಿರುವ ಕಾರಣಗಳೇನು ಗೊತ್ತಾ?

ಹೊಸ ನಿಯಮ ಜಾರಿಯಾದಾಗ ಸರ್ಕಾರಿ ಬಸ್‍‍ನಲ್ಲಿ ಓಡಾಡುತ್ತಾರಂತೆ ಈ ಸಚಿವರು..!

ದ್ವಿಚಕ್ರ ವಾಹನಗಳಿಗೂ ಸಹ ಈ ನಿಯಮವನ್ನು ಅಳವಡಿಸುವುದು ಸರಿಯಲ್ಲ. ದೆಹಲಿಯಲ್ಲಿರುವ ಸಾರ್ವಜನಿಕ ಸಂಪರ್ಕ ವ್ಯವಸ್ಥೆಯು ಹೆಚ್ಚಿನ ಪ್ರಯಾಣಿಕರನ್ನು ಸಾಗಿಸುವ ಸಾಮರ್ಥ್ಯವನ್ನು ಹೊಂದಿಲ್ಲ. ಪ್ರಪಂಚದಲ್ಲಿರುವ ಯಾವುದೇ ಸಾರಿಗೆ ವ್ಯವಸ್ಥೆಯು ಒಂದೇ ಬಾರಿಗೆ 25 ರಿಂದ 30 ಲಕ್ಷ ಜನರನ್ನು ಸಾಗಿಸುವ ಸಾಮರ್ಥ್ಯವನ್ನು ಹೊಂದಿಲ್ಲವೆಂದು ಗೆಹ್ಲೋಟ್ ತಿಳಿಸಿದರು.

MOST READ: ವಿಮಾನಗಳಲ್ಲಿ ಬಿಳಿ ಬಣ್ಣವನ್ನೇ ಬಳಕೆ ಮಾಡುವುದರ ಹಿಂದಿನ ಕಾರಣವೇನು?

ಹೊಸ ನಿಯಮ ಜಾರಿಯಾದಾಗ ಸರ್ಕಾರಿ ಬಸ್‍‍ನಲ್ಲಿ ಓಡಾಡುತ್ತಾರಂತೆ ಈ ಸಚಿವರು..!

ನವೆಂಬರ್ 4ರಿಂದ 15ರ ಅವಧಿಯಲ್ಲಿ ಹೆಚ್ಚುವರಿಯಾಗಿ 2,000 ಬಸ್ಸುಗಳನ್ನು ಓಡಿಸಲಾಗುವುದು ಎಂದು ತಿಳಿಸಿದರು. ದೆಹಲಿ ಸರ್ಕಾರವು ಹೊಸ ಮೋಟಾರು ವಾಹನ ಕಾಯ್ದೆಯನ್ವಯ ನಿಯಮಗಳನ್ನು ಉಲ್ಲಂಘಿಸುವವರಿಗೆ ದಂಡ ವಿಧಿಸುವ ವಿಧಾನಗಳನ್ನು ರೂಪಿಸುತ್ತಿದೆ. ದಂಡದ ಮೊತ್ತವು ರೂ.20,000 ಆಗಿರಲಿದೆ ಎಂಬುದರ ಬಗ್ಗೆ ಪ್ರತಿಕ್ರಿಯಿಸಲು ಗೆಹ್ಲೋಟ್ ನಿರಾಕರಿಸಿದರು.

MOST READ: ವಾಹನ ಸವಾರರಿಗೆ ಸಿಹಿ ಸುದ್ದಿ ನೀಡಿದ ಸಚಿವ ನಿತಿನ್ ಗಡ್ಕರಿ ..!

ಹೊಸ ನಿಯಮ ಜಾರಿಯಾದಾಗ ಸರ್ಕಾರಿ ಬಸ್‍‍ನಲ್ಲಿ ಓಡಾಡುತ್ತಾರಂತೆ ಈ ಸಚಿವರು..!

ಜನರು ಭಾರಿ ದಂಡವನ್ನು ಪಾವತಿಸುವುದನ್ನು ನಾವು ಬಯಸುವುದಿಲ್ಲ. ಇದು ಈ ಕಾಯ್ದೆಯ ಉದ್ದೇಶವಲ್ಲ. ದಂಡದ ಮೊತ್ತದ ಬಗ್ಗೆ ನಾವು ಚರ್ಚಿಸುತ್ತಿದ್ದೇವೆ. ಕಳೆದ ಬಾರಿ ಈ ನಿಯಮವನ್ನು ಜಾರಿಗೊಳಿಸಿದ್ದ ಸಮಯದಲ್ಲಿ ಸ್ವಯಂಸೇವಕರನ್ನು ಸಂಚಾರ ದಟ್ಟಣೆಯ ಮೇಲ್ವಿಚಾರಣೆಗಾಗಿ ನಿಯೋಜಿಸಿದ್ದೇವು. ಸ್ವಯಂಸೇವಕರು ದಂಡ ವಿಧಿಸಲು ಸಾಧ್ಯವಿಲ್ಲವೆಂದು ತಿಳಿಸಿದರು.

ಹೊಸ ನಿಯಮ ಜಾರಿಯಾದಾಗ ಸರ್ಕಾರಿ ಬಸ್‍‍ನಲ್ಲಿ ಓಡಾಡುತ್ತಾರಂತೆ ಈ ಸಚಿವರು..!

ಸಾರ್ವಜನಿಕರಿಗೆ ಆಗುವ ಅನಾನುಕೂಲತೆಯನ್ನು ತಪ್ಪಿಸಲು ದೆಹಲಿ ಸರ್ಕಾರವು ಸಮ ಬೆಸ ಯೋಜನೆಯ ಬಗ್ಗೆ ಜಾಗೃತಿ ಮೂಡಿಸಲಿದೆ ಎಂದು ಅವರು ಹೇಳಿದರು. ನಾವು ದೆಹಲಿಯ ಹೊರಭಾಗಗಳಲ್ಲಿ ಹೋರ್ಡಿಂಗ್‌ಗಳನ್ನು ಹಾಕಲು ಯೋಜಿಸುತ್ತಿದ್ದೇವೆ. ಇದರಿಂದ ದೆಹಲಿಯ ಹೊರಗಿನಿಂದ ಬರುವ ಜನರು ಮಾಹಿತಿಯ ಕೊರತೆಯಿಂದಾಗಿ ಅನಾನುಕೂಲತೆಯನ್ನು ಎದುರಿಸುವುದು ತಪ್ಪಲಿದೆ.

ಹೊಸ ನಿಯಮ ಜಾರಿಯಾದಾಗ ಸರ್ಕಾರಿ ಬಸ್‍‍ನಲ್ಲಿ ಓಡಾಡುತ್ತಾರಂತೆ ಈ ಸಚಿವರು..!

ನಗರದಲ್ಲಿ ಧೂಳು ಮಾಲಿನ್ಯವನ್ನು ತಡೆಗಟ್ಟಲು ಸರ್ಕಾರವು ಹಲವಾರು ಕ್ರಮಗಳನ್ನು ಕೈಗೊಂಡಿದೆ ಎಂದು ರಾಜ್ಯ ಪರಿಸರ ಸಚಿವರೂ ಆಗಿರುವ ಗೆಹ್ಲೋಟ್ ಹೇಳಿದರು. ಯಾವುದೇ ಇಲಾಖೆಯಿಂದ ಯಾವುದಾದರೂ ಉಲ್ಲಂಘನೆ ಆಗಿದೆಯೇ ಎಂದು ನೋಡಲು ಪರಿಸರ ಇಲಾಖೆ ನಗರದ ವಿವಿಧ ಭಾಗಗಳಲ್ಲಿ ಪರಿಶೀಲನೆ ನಡೆಸುತ್ತಿದೆ.

ಹೊಸ ನಿಯಮ ಜಾರಿಯಾದಾಗ ಸರ್ಕಾರಿ ಬಸ್‍‍ನಲ್ಲಿ ಓಡಾಡುತ್ತಾರಂತೆ ಈ ಸಚಿವರು..!

ಹಲವಾರು ಸಂದರ್ಭಗಳಲ್ಲಿ ದಂಡವನ್ನು ಸಹ ವಿಧಿಸಲಾಗಿದೆ. ನಮ್ಮದೇ ಇಲಾಖೆಗಳಾದ ಪಿಡಬ್ಲ್ಯುಡಿ, ಡಿಎಂಆರ್‍‍ಸಿ, ದೆಹಲಿ ಜಲ ಮಂಡಳಿ ಹಾಗೂ ಡಿಡಿಎಗಳಿಗೂ ಸಹ ದಂಡ ವಿಧಿಸಲಾಗಿದೆ. ನಾನು ನಗರದಲ್ಲಿ ಕಾಮಗಾರಿ ನಡೆಯುವ ಸ್ಥಳಗಲಿಗೆ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದೇನೆ ಎಂದು ಸಚಿವರು ಹೇಳಿದರು.

ಹೊಸ ನಿಯಮ ಜಾರಿಯಾದಾಗ ಸರ್ಕಾರಿ ಬಸ್‍‍ನಲ್ಲಿ ಓಡಾಡುತ್ತಾರಂತೆ ಈ ಸಚಿವರು..!

ಸಾರ್ವಜನಿಕ ಸಾರಿಗೆಯಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣದ ಕುರಿತು, ದೆಹಲಿ ಮೆಟ್ರೊದಿಂದ ಇನ್ನೂ ಅನುಮೋದನೆ ದೊರೆತಿಲ್ಲವಾದರೂ, ದೆಹಲಿ ಸಾರಿಗೆ ನಿಗಮ (ಡಿಟಿಸಿ) ಬಸ್‌ಗಳಲ್ಲಿ ಇದನ್ನು ಜಾರಿಗೆ ತರಲು ಸರ್ಕಾರ ಸಂಪೂರ್ಣ ಸಿದ್ಧವಾಗಿದೆ ಎಂದು ಗೆಹ್ಲೋಟ್‍‍ರವರು ಹೇಳಿದರು.

ಹೊಸ ನಿಯಮ ಜಾರಿಯಾದಾಗ ಸರ್ಕಾರಿ ಬಸ್‍‍ನಲ್ಲಿ ಓಡಾಡುತ್ತಾರಂತೆ ಈ ಸಚಿವರು..!

ಅಕ್ಟೋಬರ್ 29 ರಿಂದ ಡಿಟಿಸಿ ಹಾಗೂ ಕ್ಲಸ್ಟರ್ ಸ್ಕೀಮ್ ಬಸ್‌ಗಳಲ್ಲಿ ಪ್ರಯಾಣಿಸುವ ಮಹಿಳೆಯರಿಗೆ ಉಚಿತ ಪ್ರಯಾಣಕ್ಕಾಗಿ ಪಿಂಕ್ ಪಾಸ್ ನೀಡಲಾಗುವುದು. ಸರ್ಕಾರವು ಪ್ರತಿಯೊಂದು ಪಾಸುಗಳಿಗಾಗಿ ರೂ.10ಗಳನ್ನು ಡಿಟಿಸಿಗೆ ಮರುಪಾವತಿ ಮಾಡಲಿದೆ ಎಂದು ಗೆಹ್ಲೋಟ್‍‍ರವರು ತಿಳಿಸಿದರು.

ಹೊಸ ನಿಯಮ ಜಾರಿಯಾದಾಗ ಸರ್ಕಾರಿ ಬಸ್‍‍ನಲ್ಲಿ ಓಡಾಡುತ್ತಾರಂತೆ ಈ ಸಚಿವರು..!

ಸಮ ಬೆಸ ಯೋಜನೆಯ ಸಮಯದಲ್ಲಿ ದೆಹಲಿ ಸರ್ಕಾರವು ನಗರ ಸಾರಿಗೆಯೊಂದಿಗೆ ಬೈಕ್ ಹಾಗೂ ಟ್ಯಾಕ್ಸಿಗಳನ್ನು ಸೇರಿಸುವ ಪ್ರಸ್ತಾಪವನ್ನು ಹೊಂದಿದೆ. ನಾವು ಇದನ್ನು ವಿರೋಧಿಸುವುದಿಲ್ಲ. ಆದರೆ ದೆಹಲಿಯಲ್ಲಿ ಬೈಕು-ಟ್ಯಾಕ್ಸಿಗಳು ಕಾರ್ಯನಿರ್ವಹಿಸಲು ನಿಯಮಗಳು ಅನುಮತಿ ಇಲ್ಲ. ಅನುಮತಿ ನೀಡುವ ಪ್ರಸ್ತಾಪವು ಪರಿಶೀಲನೆ ಪ್ರಕ್ರಿಯೆಯ ಮೂಲಕ ಸಾಗಬೇಕಾಗಿದೆ ಎಂದು ಅವರು ಹೇಳಿದರು.

ಹೊಸ ನಿಯಮ ಜಾರಿಯಾದಾಗ ಸರ್ಕಾರಿ ಬಸ್‍‍ನಲ್ಲಿ ಓಡಾಡುತ್ತಾರಂತೆ ಈ ಸಚಿವರು..!

ಸಮ ಬೆಸ ಯೋಜನೆಗೆ ವಿರೋಧವೂ ವ್ಯಕ್ತವಾಗಿದೆ. ಈ ಬಗ್ಗೆ ಮಾತನಾಡಿದ ಗೆಹ್ಲೋಟ್‍‍‍ರವರು, ಎಲ್ಲರಿಗೂ ಮಾಲಿನ್ಯ ಯುಕ್ತ ಗಾಳಿಯನ್ನು ನೀಡಬೇಕೆಂಬುದು ನಮ್ಮ ಆಶಯ. ನಾವು ಎಲ್ಲರಿಗೂ ಈ ನಿಯಮವನ್ನು ಯಶಸ್ವಿಗೊಳಿಸ ಬೇಕೆಂದು ಮನವಿ ಮಾಡಿಕೊಳ್ಳುತ್ತೇವೆ ಎಂದು ತಿಳಿಸಿದರು.

Most Read Articles

Kannada
English summary
Minister to use public transport - Read in Kannada
Story first published: Monday, October 14, 2019, 15:15 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Drivespark sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Drivespark website. However, you can change your cookie settings at any time. Learn more