ಈ ಟ್ರಕ್ ಚಾಲಕನ ಮೇಲೆ ಬಿತ್ತು 2 ಲಕ್ಷ ದಂಡ..!

ಮೋಟಾರು ವಾಹನ ಕಾಯ್ದೆ ಜಾರಿಗೆ ಬಂದ ನಂತರ ಸಂಚಾರಿ ನಿಯಮವನ್ನು ಉಲ್ಲಂಘನೆಗೆ ವಾಹನ ಸವಾರರಿಗೆ ದಾಖಲೆಯ ಪ್ರಮಾಣದಲ್ಲಿ ದಂಡವನ್ನು ವಿಧಿಸುತ್ತಿದ್ದಾರೆ. ಇದೀಗ ಸಂಚಾರ ನಿಯಮ ಉಲ್ಲಂಘಿಸಿದ ಟ್ರಕ್​​ ಚಾಲಕನೋರ್ವನಿಗೆ ಬರೋಬ್ಬರಿ 2 ಲಕ್ಷ ರೂಪಾಯಿ ದಂಡ ವಿಧಿಸುವ ಮೂಲಕ ಟ್ರಾಫಿಕ್ ಪೊಲೀಸರು​ ಹೊಸ ದಾಖಲೆ ಸೃಷ್ಟಿಸಿದ್ದಾರೆ.

ಈ ಟ್ರಕ್ ಚಾಲಕನ ಮೇಲೆ ಬಿತ್ತು 2 ಲಕ್ಷ ದಂಡ..!

ಓವರ್ ಲೋಡ್ ಸೇರಿದಂತೆ ಇತರ ಸಂಚಾರ ನಿಮಯ ಉಲ್ಲಂಘನೆಗೆ ದಾಖಲೆ ಪ್ರಮಾಣದ ದಂಡ ಹಾಕಲಾಗಿದೆ. ಹೊಸ ಮೋಟಾರು ವಾಹನ ಕಾಯ್ದೆ ಜಾರಿಗೆ ಬಂದ ಬಳಿಕ ದೇಶದಲ್ಲಿ ವಿಧಿಸಿದ ದುಬಾರಿ ಮೊತ್ತ ಇದಾಗಿದೆ . ಈ ಹಿಂದೆ ಒಡಿಶಾದಲ್ಲಿ ಲಾರಿ ಚಾಲಕರೊಬ್ಬರಿಗೆ ರೂ. 86,000 ದಂಡ ವಿಧಿಸಿದರು. ಅಂತೆಯೇ ರಾಜಸ್ಥಾನದ ಟ್ರಕ್ ಡ್ರೈವರ್ ಒಬ್ಬ‍‍ನಿಗೆ ಬರೋಬ್ಬರಿ ರೂ. 1.41 ಲಕ್ಷ ದಂಡ ಹಾಕಲಾಗಿತ್ತು.

ಈ ಟ್ರಕ್ ಚಾಲಕನ ಮೇಲೆ ಬಿತ್ತು 2 ಲಕ್ಷ ದಂಡ..!

ಅದುವೇ ದೇಶದಲ್ಲಿಯೇ ಅತ್ಯಧಿಕ ದಂಡವಾಗಿತ್ತು, ಈ ಬೆನ್ನಲ್ಲೇ ದೆಹಲಿಯಲ್ಲಿ ಟ್ರಕ್​​ ಚಾಲಕನಿಗೆ 2 ಲಕ್ಷ ದಂಡ ವಿಧಿಸುವ ಮೂಲಕ ಹಿಂದಿನ ದಾಖಲೆ ಮುರಿದು ಹೊಸ ದಾಖಲೆ ಸೃಷ್ಟಿಸಿದ್ದಾರೆ. ಒವರ್ ಲೋಡ್ ಮಾಡಿಕೊಂಡು ಹೋಗುತ್ತಿದ್ದ ಹರಿಯಾಣ ಮೂಲದ ಟ್ರಕ್​​ ಚಾಲಕ ದೆಹಲಿಯ ಜಿ.ಟಿ. ಕರ್ನಲ್ ರಸ್ತೆಯಲ್ಲಿ ಟ್ರಾಫಿಕ್ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ. ಈ ವೇಳೆ ದೆಹಲಿ ಟ್ರಾಫಿಕ್ ಪೊಲೀಸರು ಸಂಚಾರಿ ನಿಯಮ ಉಲ್ಲಂಘನೆಗೆ 2 ಲಕ್ಷ ರೂ. ದಂಡ ವಿಧಿಸಿದ್ದಾರೆ.

ಈ ಟ್ರಕ್ ಚಾಲಕನ ಮೇಲೆ ಬಿತ್ತು 2 ಲಕ್ಷ ದಂಡ..!

ಹರಿಯಾಣ ಮೂಲದ ರಾಮ್ ಕಿಶನ್ ಎಂಬಾತನು 25 ಟನ್‍ ಭಾರವನ್ನು ಸಾಗಿಸಲು ಪರವಾನಗಿ ಅನ್ನು ಹೊಂದಿದ್ದರು. ಆದರೆ ಆತನ ಟ್ರಕ್ ಪೊಲೀಸರ ಕೈಗೆ ಸಿಕ್ಕಿ‍‍ಬಿದ್ದಾಗ 43 ಟನ್ ಭಾರದ ಲೋಡ್ ಅನ್ನು ಮಾಡಿದ್ದ, ಅಂದರೆ ಪರವಾನಗಿ ಪಡೆದಿರುವುದಕ್ಕಿಂತ 18 ಟನ್ ಹೆಚ್ಚಿನ ಲೋಡ್ ಅನ್ನು ಮಾಡಿದ್ದನು.

ಈ ಟ್ರಕ್ ಚಾಲಕನ ಮೇಲೆ ಬಿತ್ತು 2 ಲಕ್ಷ ದಂಡ..!

ಬಳಿಕ ರೂ. 2,00,500 ಲಕ್ಷ ದೆಹಲಿಯ ರೋಹಿಣಿ ನ್ಯಾಯಾಲಯದಲ್ಲಿ ರಾಮ್ ಕಿಶನ್ ಎಂಬಾತ ಟ್ರಾಫಿಕ್ ಉಲ್ಲಂಘನೆ ದಂಡವನ್ನು ಪಾವತಿಸಿ ಟ್ರಕ್ ಬಿಡಿಸಿಕೊಂಡು ಹೋಗಿದ್ದಾರೆ ಎನ್ನಲಾಗಿದೆ. ಚಾಲಕ ಡ್ರೈವಿಂಗ್ ಲೈಸೆನ್ಸ್ ಹೊಂದಿರಲಿಲ್ಲ ಹೀಗೆ 10 ಸಂಚಾರಿ ನಿಯಮಗಳ ಉಲ್ಲಂಘನೆಗಾಗಿ ದುಬಾರಿ ದಂಡ ವಿಧಿಸಲಾಗಿದೆ ಎಂಬ ವರದಿ ಇದೆ.

ಈ ಟ್ರಕ್ ಚಾಲಕನ ಮೇಲೆ ಬಿತ್ತು 2 ಲಕ್ಷ ದಂಡ..!

ಹಿಂದಿನ ದುಬಾರಿ ಮೊತ್ತದ ದಂಡದ ಪ್ರಕರಣದಲ್ಲಿ, ರಾಜಸ್ಥಾನದ ಭಗವಾನ್‌ ರಾಮ್‌ ಎಂಬ ಟ್ರಕ್​ ಮಾಲಿಕನಿ​ಗೆ ಟ್ರಕ್​ನಲ್ಲಿ ನಿಯಮಕ್ಕಿಂತ ಹೆಚ್ಚಿನ ಸರಕು ತುಂಬಿದ್ದಕ್ಕಾಗಿ ಓವರ್​ಲೋಡ್​ ನಿಯಮದನ್ವಯ ದಂಡ ವಿಧಿಸಲಾಗಿತ್ತು. ಸೆಪ್ಟೆಂಬರ್​ 5 ರಂದು ದೆಹಲಿ ಟ್ರಾಫಿಕ್ ಪೊಲೀಸರು ದಂಡ ವಿಧಿಸಿ ಟ್ರಕ್​ ವಶಕ್ಕೆ ಪಡೆದಿದ್ದರು. ಬಳಿಕ ಸೆಪ್ಟೆಂಬರ್​ 9 ರಂದು ಕೋರ್ಟ್​ನಲ್ಲಿ ದಂಡ ಪಾವತಿಸಿ ವಾಹನ ಮಾಲಿಕನು ಟ್ರಕ್ ಅನ್ನು ಬಿಡಿಸಿಕೊಂಡರು

ಈ ಟ್ರಕ್ ಚಾಲಕನ ಮೇಲೆ ಬಿತ್ತು 2 ಲಕ್ಷ ದಂಡ..!

ರಾಜಸ್ಥಾನದ ಭಗವಾನ್‌ ರಾಮ್‌ ಪ್ರಕರಣದಲ್ಲಿ ಟ್ರಕ್​ನಲ್ಲಿ ನಿಯಮಕ್ಕಿಂತ ಹೆಚ್ಚಿಗೆ ತುಂಬಿಸಲಾಗಿದ್ದ ಸರಕಿಗೆ ಮೊದಲ ಒಂದು ಟನ್​ಗೆ 20 ಸಾವಿರ ಮತ್ತು ಆ ನಂತರ ಪ್ರತಿಯೊಂದು ಟನ್​ಗೆ 2 ಸಾವಿರದಂತೆ ಓವರ್​ಲೋಡ್​ ಮಾಡಿದ್ದಕ್ಕಾಗಿ ಒಟ್ಟು ರೂ. 48 ಸಾವಿರ ದಂಡ ವಿಧಿಸಲಾಗಿದೆ. ಅಲ್ಲದೇ ಆರ್​ಸಿ ಮತ್ತು​ ಪರವಾನಿಗೆ ಇಲ್ಲದ್ದಕ್ಕಾಗಿ ಪ್ರತ್ಯೇಕವಾಗಿ ದಂಡ ವಿಧಿಸಲಾಗಿದೆ. ಎಲ್ಲಾ ಸೇರಿ ಡ್ರೈವರ್​ಗೆ ರೂ. 70,800 ಮತ್ತು ಇಷ್ಟೇ ಮೊತ್ತದ ದಂಡವನ್ನು ಟ್ರಕ್​ ಮಾಲಿಕನಿಗೆ ವಿಧಿಸಲಾಗಿದೆ. ಹೀಗಾಗಿ ದಂಡದ ಒಟ್ಟು ಮೊತ್ತ ರೂ. 1,41,600 ದಂಡ ವಿಧಿಸಿದ್ದರು.

MOST READ: ಸೀಟ್ ಬೆಲ್ಟ್ ಧರಿಸದ ಪೊಲೀಸರನ್ನೇ ಅಡ್ಡಗಟ್ಟಿದ ಭೂಪ..!

ಈ ಟ್ರಕ್ ಚಾಲಕನ ಮೇಲೆ ಬಿತ್ತು 2 ಲಕ್ಷ ದಂಡ..!

ಸಂಚಾರಿ ನಿಯಮ ಉಲ್ಲಂಘನೆಗೆ ದುಬಾರಿ ದಂಡದ ವಿಧಿಸುವುದನ್ನು ಕಂಡಿಸಿ ಯುವ ಕಾಂಗ್ರೆಸ್ ಸದಸ್ಯರು ಸೆಪ್ಟೆಂಬರ್ 11 ರಂದು ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರ ಮನೆ ಮುಂದೆ ಧರಣಿ ನಡೆಸಿದ್ದರು. ಪ್ರತಿಭಟನೆಯಲ್ಲಿ ಸ್ಕೂಟರನ್ನು ಎಸೆದು ತೀವ್ರವಾಗಿ ಅಕ್ರೋಶ ವ್ಯಕ್ತಪಡಿಸಿದರು. ಇದೆ ರೀತಿ ದೇಶದಲ್ಲಿ ಹಲವು ಕಡೆಗಳಲ್ಲಿ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

MOST READ: ತಡೆದು ನಿಲ್ಲಿಸಿದ್ದು ಒಂದು ಕಾರಣಕ್ಕೆ, ದಂಡ ವಿಧಿಸಿದ್ದು ಇನ್ನೊಂದಕ್ಕೆ..!

ಈ ಟ್ರಕ್ ಚಾಲಕನ ಮೇಲೆ ಬಿತ್ತು 2 ಲಕ್ಷ ದಂಡ..!

ಆದರೆ ದೇಶದಲ್ಲಿ ಅಪಘಾತದ ಸಂಖ್ಖೆ ದಿನೇ ದಿನೇ ಹೆಚ್ಚುತ್ತಲೇ ಇದೆ. ಇದನ್ನು ತಡೆಯಲು ಸರ್ಕಾರ ಸಾಕಷ್ಟು ಕ್ರಮಗಳನ್ನು ಕೈಗೊಂಡರೂ ಪ್ರಯೋಜನವಾಗಿಲ್ಲ, ಅಷ್ಟೇ ಅಲ್ಲದೇ ಈ ಹಿಂದೆ ಸಂಚಾರಿ ನಿಯಮ ಜಾರಿಯಲ್ಲಿದ್ದಾಗ ಅದನ್ನು ಗಾಳಿಗೆ ತೂರುವವರ ಸಂಖ್ಖೆ ಹೆಚ್ಚದಾಗ ಕೇಂದ್ರ ಸರ್ಕಾರ ಹೆಚ್ಚಿನ ದಂಡ ವಿಧಿಸುವುದರ ಜೊತೆಗೆ ಶಿಕ್ಷೆಗೊಳಪಡಿಸುವ ರೀತಿಯ ಹೊಸ ಮೋಟಾರು ವಾಹನ ತಿದ್ದುಪಡಿ ವಿಧೇಯಕ ಜಾರಿಗೆ ತಂದರು. ಆದರೆ ದಂಡ ಪ್ರಮಾಣ ತುಂಬಾ ದುಬಾರಿಯಾಗಿದ್ದು, ಮಧ್ಯಮವರ್ಗದವರನ್ನು ಸಂಕಷ್ಟಕ್ಕೆ ಇಡಾಗುತ್ತಾರೆ ಎಂಬ ಸಾರ್ವಜನಿಕರ ವಾದವನ್ನು ಸರ್ಕಾರ ಯಾವ ರೀತಿ ಪರಿಗಣಿಸುತ್ತಾರೆ ಎಂಬುವುದನ್ನು ಕಾದು ನೋಡಬೇಕು.

Source: IndiaToday

Most Read Articles

Kannada
English summary
Delhi police issues a fine of Rs 2 lakh to a truck driver - Read in kannada
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X