ಬಿ‍ಎಸ್6 ಕಾರಣಕ್ಕೆ ಸ್ಥಗಿತಗೊಂಡ ಬೊಲೆರೊ ಡೀಸೆಲ್ 2.5

ಗ್ರಾಹಕರ ಮೆಚ್ಚಿನ ಮಹೀಂದ್ರಾ ಬೊಲೆರೊ ಕಾಲಕ್ಕೆ ತಕ್ಕಂತೆ ಹಲವು ಬದಲಾವಣೆಗಳ ಮೂಲಕ ಮಾರುಕಟ್ಟೆಗೆ ಲಗ್ಗೆ ಇಟ್ಟು ಜನರನ್ನು ಸೆಳೆಯುತ್ತಿತ್ತು, ಮಹೀಂದ್ರಾ ಬೊಲೆರೊ ಇದುವರೆಗೆ ಭಾರತದಲ್ಲಿ ಹೆಚ್ಚು ಮಾರಾಟವಾದ ಯುಟಿಲಿಟಿ ವಾಹನ ಹಾಗೂ ಮಹೀಂದ್ರಾ ಕಂಪನಿಗೆ ದೀರ್ಘಕಾಲದವರೆಗೆ ಹೆಚ್ಚು ಮಾರಾಟವಾದ ವಾಹನವಾಗಿದೆ.

ಬಿ‍ಎಸ್6 ಕಾರಣಕ್ಕೆ ಸ್ಥಗಿತಗೊಂಡ ಬೊಲೆರೊ ಡೀಸೆಲ್ 2.5

ಮಹೀಂದ್ರಾ ಬೊಲೆರೊ 2000 ದಿಂದ ಪ್ರಾರಂಭವಾಗಿ ಇಲ್ಲಿಯವರೆಗೂ ಅದೆ ಡಿಎನ್ಎಯನ್ನು ಹೊಂದಿದ್ದು, ಆದರೂ ಇದು ಕಾಲಕ್ಕೆ ತಕ್ಕ ಹಾಗೇ ಹಲವು ಬದಲಾವಣೆಗಳನ್ನು ಮಾಡಿದೆ. ಆದರೆ ಈಗ ಬೊಲೆರೊ 2.5ಲೀಟರ್ ಎಂಜಿನ್ ಹೊಂದಿರುವ ಬೊಲೆರೊ ಮಾದರಿಯನ್ನು ಸ್ಥಗಿತಗೊಳಿಸಲು ನಿರ್ಧರಿಸಿದೆ, ಇದಕ್ಕೆ ಮುಖ್ಯ ಕಾರಣ ಮುಂಬರುವ ಕಟ್ಟುನಿಟ್ಟಾದ ಬಿಎಸ್-6 ಮಾಲಿನ್ಯ ನಿಯಮಕ್ಕೆ ತಕ್ಕಂತೆ ಇಲ್ಲ ಎಂಬುವುದಕ್ಕೆ ಸ್ಥಗಿತಗೊಳಿಸಿದ್ದಾರೆ. ಇದು ಹಲವು ವರ್ಷಗಳಿಂದ ತನ್ನ ಶ್ರೇಣಿಯ ಒಂದು ಭಾಗವಾಗಿತ್ತು.

ಬಿ‍ಎಸ್6 ಕಾರಣಕ್ಕೆ ಸ್ಥಗಿತಗೊಂಡ ಬೊಲೆರೊ ಡೀಸೆಲ್ 2.5

ಮಹೀಂದ್ರಾ ಬೊಲೆರೊ 2.5ಲೀಟರ್ ಡೀಸೆಲ್ ಎಂಜಿನ್ 63 ಪಿಎಸ್ ಪವರ್ ಮತ್ತು 195 ಎನ್‍ಎಂ ಟಾರ್ಕ್ ಅನ್ನು ಉತ್ಪಾದಿಸುವ ಗುಣ ಹೊಂದಿದ್ದು, 5-ಸ್ಪೀಡ್ ಮ್ಯಾನುವಲ್ ಗೇರ್‍‍ಬಾಕ್ಸ್ ಜೋಡಿಸಲಾಗಿದೆ. ಮಹೀಂದ್ರಾ ಈ ನಿರ್ಧಾರದ ಹಿಂದಿನ ಮತ್ತೊಂದು ಪ್ರಮುಖ ಅಂಶವೆಂದರೆ ಬಿಎನ್ಎಸ್‍ವಿಪಿ (ಭಾರತ್ ನ್ಯೂ ಸೇಫ್ಟಿ ವೆಹಿಕಲ್ ಅಸೆಸ್ಮೆಂಟ್ ಪ್ರೋಗ್ರಾಂ) ಸುರಕ್ಷತಾ ಮಾನದಂಡವು ಭಾರತದಲ್ಲಿ ಮಾರಾಟವಾಗುವ ಎಲ್ಲಾ ಕಾರುಗಳಿಗೆ ಕಡ್ಡಾಯವೆಂದು ಮತ್ತೊಮ್ಮೆ ತಿಳಿಸಿದೆ. 2.5 ಲೀಟರ್ ಯುನಿಟ್‍ನಿಂದ ನಡೆಸಲ್ಪಡುವ ಬೊಲೆರೊದ ನಿಯಮಿತ ಆವೃತ್ತಿಗಳನ್ನು ಸ್ಥಗಿತಗೊಳಿಸಿದೆ.

ಬಿ‍ಎಸ್6 ಕಾರಣಕ್ಕೆ ಸ್ಥಗಿತಗೊಂಡ ಬೊಲೆರೊ ಡೀಸೆಲ್ 2.5

ಬಿಎನ್ಎಸ್‍ವಿಎ‍ಪಿ ಮಾನದಂಡಗಳ ಪ್ರಕಾರ ಉತ್ಪಾದಕರು ತಮ್ಮ ಕಾರುಗಳಲ್ಲಿ ಎ‍ಬಿಎಸ್, ಏರ್‍‍ಬ್ಯಾಗ್ ಮತ್ತು ಸೀಟ್‍ಬೆಲ್ಟ್ ಇನ್ನಿತರ ಸ್ಟ್ಯಾಂಡರ್ಡ್ ಆದ ಸುರಕ್ಷತಾ ವಸ್ತುಗಳನ್ನು ಒಳಗೊಂಡಿರಬೇಕು. ಆದರೆ 2.5 ಲೀಟರ್ ಬೊಲೆರೊ ಮಾದರಿಗಳಲ್ಲಿ ಯಾವುದೇ ಸುರಕ್ಷತಾ ವೈಶಿಷ್ಟ್ಯತೆಗಳನ್ನು ಹೊಂದಿರಲಿಲ್ಲ, ಇದರಿಂದ ಸ್ಥಗಿತಗೊಳಿಸಲಾಗಿದೆ.

ಬಿ‍ಎಸ್6 ಕಾರಣಕ್ಕೆ ಸ್ಥಗಿತಗೊಂಡ ಬೊಲೆರೊ ಡೀಸೆಲ್ 2.5

ಇದರ ಅರ್ಥ ಬೊಲೆರೊ ಇನ್ನೂ ಮುಂದೆ ಮಾರುಕಟ್ಟೆಯಲ್ಲಿ ಲಭ್ಯವಿರುವುದಿಲ್ಲ ಎಂದೆಲ್ಲಾ, ಮಹೀಂದ್ರಾ ಇತ್ತೀಚೆಗೆ ಸುರಕ್ಷತಾ ವೈಶಿಷ್ಟ್ಯಗಳನ್ನು ಅಪ್‍‍ಡೇಟ್ ಮಾಡಿದ ಬೊಲೆರೊ ಪವರ್ ಪ್ಲಸ್ ಮಾರುಕಟ್ಟೆಯಲ್ಲಿ ದೊರೆಯಲಿದೆ. ಬೊಲೆರೊ ಪವರ್ ಪ್ಲಸ್ ಎ‍‍ಬಿಎಸ್, ಡ್ರೈವರ್ ಬದಿಯ ಏರ್‍‍ಬ್ಯಾಗ್, ರಿರ್ವಸ್ ಪಾರ್ಕಿಂಗ್ ಸೆನ್ಸಾರ್ ಸ್ಪೀಡ್ ಅಲರ್ಟ್ ಮತ್ತು ಸೀಟ್ ಬೆಲ್ಟ್ ಮುಂತಾದ ಸ್ಟ್ಯಾಂಡರ್ಡ್ ಆಗಿರುವ ವೈಶಿಷ್ಟ್ಯಗಳನ್ನು ಹೊಂದಿದೆ. ಎಂಎಚ್‍ಎಡಬ್ಲ್ಯುಕೆ ಡಿ 70 1.5ಲೀಟರ್ ಡೀಸೆಲ್ ಎಂಜಿನ್ 71 ಪಿಎಸ್ ಪವರ್ ಮತ್ತು 195 ಎನ್‍ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಬಿ‍ಎಸ್6 ಕಾರಣಕ್ಕೆ ಸ್ಥಗಿತಗೊಂಡ ಬೊಲೆರೊ ಡೀಸೆಲ್ 2.5

ಬಿಎಸ್-6 ವರ್ಷನ್ ಇದೇ ವರ್ಷ ಬಿಡುಗಡೆಗೊಳ್ಳಬೇಕಾಗಿತ್ತು, ಆದರೆ ಹಲವು ಕಾರಣಗಳಿಂದ ಮುಂದಿನ ವರ್ಷ 2020ರ ಆರಂಭದಲ್ಲಿ ಬಿಡುಗಡೆಯಾಗಲಿದೆ. ಈಗಾಗಲೇ ಈ ಎಂಜಿನ್‍‍ಗೆ ಬಿಎಸ್-6 ಸರ್ಟಿಫಿಕೆಟ್ ಅನ್ನು ಎಆರ್‍ಎಐ ನೀಡಿದೆ. ಮಹೀಂದ್ರಾ ಈಗಾಗಲೇ ಖಚಿತಪಡಿಸಿದೆ ಮುಂದಿನ ವರ್ಷ ಅಪ್‍‍ಗ್ರೇಡ್ ಆದ ಬಿಎಸ್-6 ಮಾಲಿನ್ಯ ನಿಯಮಕ್ಕೆ ತಕ್ಕಂತೆ 2.5 ಲೀಟರ್ ಡೀಸೆಲ್ ಎಂಜಿನ್ ಹೊಂದಿರುವ ಬೊಲೆರೊ ಬಿಡುಗಡೆ ಮಾಡಲಿದೆ ಎಂದು.

MOST READ: ಸೀಟ್ ಬೆಲ್ಟ್ ಧರಿಸದ ಪೊಲೀಸರನ್ನೇ ಅಡ್ಡಗಟ್ಟಿದ ಭೂಪ..!

ಬಿ‍ಎಸ್6 ಕಾರಣಕ್ಕೆ ಸ್ಥಗಿತಗೊಂಡ ಬೊಲೆರೊ ಡೀಸೆಲ್ 2.5

ಮಹೀಂದ್ರಾ ಸಂಸ್ಥೆಯು ಉತ್ಪಾದನೆ ಮಾಡುವ ಎಲ್ಲಾ ಹೊಸ 2.0 ಲೀಟರ್ ಟರ್ಬೋ ಡೀಸೆಲ್ ಎಂಜಿನ್ ಅನ್ನು ಸಹ ಅಭಿವೃದ್ದಿಪಡಿಸುತ್ತಿದ್ದಾರೆ. ಅದು ತನ್ನ ಮುಂದಿನ ಎಲ್ಲಾ ಹೊಸ ಮಾದರಿಗಳಿಗೆ ಶಕ್ತಿ ತುಂಬಲಿದೆ. ಇದು ಮುಂದಿನ ಪೀಳಿಗೆಯ ಥಾರ್, ಹೊಸ ಸ್ಕಾರ್ಪಿಯೋ ಮತ್ತು ಹೊಸ ಎಕ್ಸ್‍ಯುವಿ 500 ಕಾರಿಗೆ ಅಳವಡಿಸುತ್ತಾರೆ. ಎಕ್ಸ್ಯುವಿ 500 ಹೊರತುಪಡಿಸಿ ಇತರ ಎರಡು ವಾಹನಗಳು ಹಲವು ಬಾರಿ ಸ್ಪಾಟ್ ಟೇಸ್ಟಿಂಗ್‍‍ಗೆ ಒಳಪಡಿಸಿದ್ದು, ಮುಂಬರುವ 2020ರಲ್ಲಿ ಈ ವಾಹನಗಳನ್ನು ದೆಹಲಿ ಆಟೋ ಎಕ್ಸ್ ಪೋ‍ದಲ್ಲಿ ಪ್ರದರ್ಶಿಸಲಿದೆ.

MOST READ: ತಡೆದು ನಿಲ್ಲಿಸಿದ್ದು ಒಂದು ಕಾರಣಕ್ಕೆ, ದಂಡ ವಿಧಿಸಿದ್ದು ಇನ್ನೊಂದಕ್ಕೆ..!

ಬಿ‍ಎಸ್6 ಕಾರಣಕ್ಕೆ ಸ್ಥಗಿತಗೊಂಡ ಬೊಲೆರೊ ಡೀಸೆಲ್ 2.5

ಹೊಸ ತಲೆಮಾರಿನ ಥಾರ್ ಹಿಂದಿನ ಪೀಳಿಗೆಯ ಮಾದರಿಗಿಂತ ದೊಡ್ಡದಾಗಿದೆ, ಹೆಚ್ಚು ಪವರ್‍‍‍ಫುಲ್ ಮತ್ತು ಹಲವು ವೈಶಿಷ್ಟ್ಯಗಳನ್ನು ಹೊಂದಿದೆ. ಇನ್ನೂ ಸ್ಕಾರ್ಪಿಯೋ ಪ್ಲಾಟ್‍‍ಫಾರ್ಮ್ ಆಧರಿಸಿ ಹಾರ್ಡ್‍‍ಟಾಪ್ ಫ್ರಂಟ್ ಫೇಸಿಂಗ್ ರೇರ್ ಸೀಟ್ ಹೀಗೆ ಹಲವಾರು ವೈಶಿಷ್ಟ್ಯಗಳನ್ನು ಹೊಂದಿಕೊಂಡು ಮುಂದೆ ಬರಲಿದೆ.

MOST READ: ಭಾರತದಲ್ಲಿ ಐಕಾನಿಕ್ ಯಜ್ಡಿ ಬೈಕ್‌ಗಳ ಮರುಬಿಡುಗಡೆ ಪಕ್ಕಾ

ಬಿ‍ಎಸ್6 ಕಾರಣಕ್ಕೆ ಸ್ಥಗಿತಗೊಂಡ ಬೊಲೆರೊ ಡೀಸೆಲ್ 2.5

ನಗರಗಳಲ್ಲಿ ಅಷ್ಟೇ ಅಲ್ಲದೇ ಗ್ರಾಮೀಣ ಭಾಗದಲ್ಲಿಯೂ ಹೆಚ್ಚು ಗ್ರಾಹಕರನ್ನು ಹೊಂದಿರುವ ಮಹೀಂದ್ರಾ ಬೊಲೆರೊ 2.5 ಲೀಟರ್ ಎಂಜಿನ್ ಕಾರು ಸ್ಥಗಿತಗೊಂಡರು ಹೊಸ ಅಪಡೇಟ್ ವರ್ಷನ್ ಬೊಲೆರೊ ಮುಂದೆ ಬರಲಿರುವುದಕ್ಕೆ ಬೊಲೆರೊ ಕಾರು ಪ್ರಿಯರಿಗೆ ಇದು ಸಂತಸದ ವಿಷಯ. ಬೊಲೆರೊ ಮುಂದಿನ ವರ್ಷ ಎಸ್‍‍ಯುವಿ ವಿಭಾಗದಲ್ಲಿ ತನ್ನ ಪಾರುಪತ್ಯ ಮೆರೆಯಲು ಸಜ್ಜಾಗುತ್ತಿದೆ.

Most Read Articles

Kannada
English summary
2.5 liter diesel Mahindra Bolero DISCONTINUED:BS6 effect - Read in Kannada
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X