Just In
- 18 min ago ಜೀವದ ಗೆಳೆಯನಿಗೆ ಸರ್ಪ್ರೈಸ್ ಆಗಿ 'ಬೈಕ್' ಉಡುಗೊರೆ ನೀಡಿದ ವಧು.. ಆತನ ಸಂತೋಷಕ್ಕೆ ಪಾರವೇ ಇರಲಿಲ್ಲ!
- 2 hrs ago ಇನ್ಮುಂದೆ ಟೋಲ್ ಪ್ಲಾಜಾಗಳು ಕಣ್ಮರೆ: ಖುಷಿ ಪಡುವ ಮುನ್ನ ಈ ಸುದ್ದಿ ನೋಡಿ...
- 3 hrs ago Bullet Train: ಭಾರತದಲ್ಲಿ ಮೊದಲ ಬಾರಿಗೆ ನವೀನ ರೀತಿಯ ಹಳಿ ಬಳಕೆ.. 320 ಕಿ.ಮೀ ವೇಗದಲ್ಲಿ ಓಡುತ್ತೆ ರೈಲು!
- 3 hrs ago ಬ್ರಿಟೀಷ್ ಮಾರುಕಟ್ಟೆಯನ್ನು ಆಳಲು ಹೊರಟ ಭಾರತೀಯ ಬೈಕ್: ಯುಕೆ ನಲ್ಲಿ ಟ್ರಯಂಫ್ಗೆ ನೇರ ಹಣಾಹಣಿ!
Don't Miss!
- Finance 25ನೇ ವಯಸ್ಸಿನಲ್ಲಿ 25,000 ರೂ.ನಿಂದ 7,000 ಕೋಟಿ ಗಳಿಸಿದ ವ್ಯಕ್ತಿ ಬಗ್ಗೆ ತಿಳಿಯಿರಿ
- Movies Yuva Review : ಕ್ಲಾಸ್-ಮಾಸ್; ಸ್ಯಾಂಡಲ್ವುಡ್ನ ಹೊಸ ಪರ್ವ ಈ ಯುವ, ಹೇಗಿದೆ ದೊಡ್ಮನೆ ಕುಡಿಯ ಅಬ್ಬರ?
- Lifestyle ಮೈ ತೂಕ ಕಡಿಮೆಯಾಗಲು ಈ ಪುದೀನಾ ನೀರು ಸಹಕಾರಿಯೇ? ಇದರ ಇತರ ಪ್ರಯೋಜನಗಳೇನು?
- News Poornachandra Tejaswi: ವಿಸ್ಮಯಲೋಕವನ್ನೇ ತೆರೆದಿಡುವ ತೇಜಸ್ವಿಯವರ ಪುಸ್ತಕಗಳು
- Technology ಬಜೆಟ್ ದರದಲ್ಲಿ ಬೆಸ್ಟ್ 5G ಫೋನ್ ಬೇಕಿದ್ರೆ, ಈ ಲಿಸ್ಟ್ ಒಮ್ಮೆ ಗಮನಿಸಿ!
- Sports Kohli vs Gambhir: ಹೈ-ವೋಲ್ಟೇಜ್ ಪಂದ್ಯದ ಬಗ್ಗೆ ಕೌಂಟರ್ ನೀಡಿದ ದಿನೇಶ್ ಕಾರ್ತಿಕ್
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ದುಬಾರಿ ಕಾರು ಖರೀದಿಸಿದ ಗ್ಲಾಮರಸ್ ಕ್ವೀನ್ ದಿಶಾ
ಬಾಲಿವುಡ್ ತಾರೆಯರು ರೇಂಜ್ ರೋವರ್ ಎಸ್ಯುವಿಗೆ ಮಾರುಹೋಗಿದ್ದಾರೆ. ಇದೇ ವರ್ಷದಲ್ಲಿ ರೇಂಜ್ ರೋವರ್ ಎಸ್ಯುವಿಗಳನ್ನು ಅನೇಕ ಜನಪ್ರಿಯ ಬಾಲಿವುಡ್ ತಾರೆಯರು ಖರೀದಿಸಿದ್ದಾರೆ. ಇತ್ತೀಚೆಗೆ ಬಾಲಿವುಡ್ ಗ್ಲಾಮರಸ್ ಕ್ವೀನ್ ದಿಶಾ ಪಟಾನಿ ಅವರು ಲ್ಯಾಂಡ್ ರೋವರ್ ಅನ್ನು ಖರೀದಿಸುವ ಮೂಲಕ ಇದೇ ಸಾಲಿನಲ್ಲಿ ಸೇರಿಕೊಂಡಿದ್ದಾರೆ.
ನಟಿ ದಿಶಾ ಪಟಾನಿ ಬಿಳಿ ಬಣ್ಣದ ರೇಂಜ್ ರೋವರ್ ಸ್ಪೋರ್ಟ್ ಎಸ್ಯುವಿಯನ್ನು ಖರೀದಿಸಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಹೊಸ ಕಾರಿನಲ್ಲಿ ಸವಾರಿ ಮಾಡುತ್ತಿರುವ ಚಿತ್ರವನ್ನು ಹಂಚಿಕೊಂಡಿದ್ದಾರೆ. ದಿಶಾ ಅವರೊಂದಿಗೆ ಇರುವ ದುಬಾರಿ ಕಾರುಗಳ ಸಂಗ್ರಹದಲ್ಲಿ ರೇಂಜ್ ರೋವರ್ ಸ್ಪೋರ್ಟ್ ಎಸ್ಯುವಿಯು ಹೊಸ ಸೇರ್ಪಡೆಯಾಗಿದೆ.
ಬಾಲಿವುಡ್ ಗ್ಲಾಮರಸ್ ಕ್ವೀನ್ ದಿಶಾ ಪಟಾನಿ ಸೋಷಿಯಲ್ ಮೀಡಿಯಾದಲ್ಲಿ ಹಾಟ್ ಫೋಟೋಗಳನ್ನು ಶೇರ್ ಮಾಡುತ್ತಾ ಸದಾ ಸುದ್ದಿಯಲ್ಲಿರುತ್ತಾರೆ. ಪಡ್ಡೆ ಹುಡುಗರ ನಿದ್ದೆಗೆಡುಸುತ್ತಿದ್ದ ನಟಿ ಹೊಸ ದುಬಾರಿ ಐಷಾರಾಮಿ ಕಾರು ಖರೀದಿಸುವ ಮೂಲಕ ಸುದ್ದಿಯಲ್ಲಿದ್ದಾರೆ. ಇವರು ಖರೀದಿಸಿದ ಹೊಸ ರೇಂಜ್ ರೋವರ್ ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ.1.52 ಕೋಟಿಗಳಾಗಿದೆ.
ದಿಶಾ ಅವರ ಬಳಿ ಹಲವಾರು ದುಬಾರಿ ಮತ್ತು ಐಷಾರಾಮಿ ಕಾರುಗಳ ಸಂಗ್ರಹವನ್ನು ಹೊಂದಿದ್ದಾರೆ. ಅವರ ಬಳಿ ಷೆವರ್ಲೆ ಕ್ರೂಜ್ ಮತ್ತು ಹೋಂಡಾ ಸಿವಿಕ್ ಮತ್ತು ಐಷಾರಾಮಿ ಕಾರುಗಳಾದ ಮರ್ಸಿಡಿಸ್ ಬೆಂಝ್ ಇ-ಕ್ಲಾಸ್ ಮತ್ತು ಬಿಎಂಡಬ್ಲ್ಯು 5-ಸೀರಿಸ್ ಅನ್ನು ಹೊಂದಿದ್ದಾರೆ. ಕೆಲವು ವರ್ಷಗಳ ಹಿಂದೆ ಅವರ ಹೋಂಡಾ ಸಿವಿಕ್ನಲ್ಲಿ ಅವರೇ ಡ್ರೈವ್ ಮಾಡಿ ಜಾಲಿ ರೈಡ್ ತೆರಳುತ್ತಿದ್ದರು.
ಇದೇ ವರ್ಷ ಸಲ್ಮಾನ್ ಖಾನ್, ರಣಬೀರ್ ಕಪೂರ್, ಕತ್ರಿನಾ ಕೈಫ್, ಮಲೈಕಾ ಅರೋರಾ, ಸಿದ್ಧಾರ್ಥ್ ಮಲ್ಹೋತ್ರಾ, ಇಮ್ರಾನ್ ಹಶ್ಮಿ ಮತ್ತು ಸಂಜಯ್ ದತ್ ಸೇರಿದಂತೆ ಹಲವಾರು ಜನಪ್ರಿಯ ಬಾಲಿವುಡ್ ತಾರೆಯರು ರೇಂಜ್ ರೋವರ್ ಎಸ್ಯುವಿಯನ್ನು ಖರೀದಿಸಿದ್ದಾರೆ.
ಸದ್ಯ ಬಾಲಿವುಡ್ನಲ್ಲಿ ಬಹುತೇಕ ನಟ-ನಟಿಯರ ಬಳಿ ರೇಂಜ್ ರೋವರ್ ಕಾರುಗಳ ಕಲೆಕ್ಷನ್ಗಳಿವೆ. ಇವುಗಳಲ್ಲಿ ಹೆಚ್ಚಾಗಿ ಸ್ಪೋರ್ಟ್ ವೆರಿಯೆಂಟ್ಗಳಿರುವುದೇ ಹೆಚ್ಚು. ಇದಕ್ಕೆ ಕಾರಣ ಐಷಾರಾಮಿ ವೈಶಿಷ್ಟ್ಯತೆಗಳೊಂದಿಗೆ ಉತ್ತಮ ಮಾದರಿಯ ಪರ್ಫಾಮೆನ್ಸ್ ಎಂಜಿನ್ಗಳ ಅಳವಡಿಕೆ ಹೊಂದಿವೆ ಎನ್ನಬಹುದು.
ಬಾಲಿವುಡ್ ನಟಿ ಖರೀದಿಸಿರುವ ರೇಂಜ್ ರೋವರ್ ಸ್ಪೋರ್ಟ್ ಎಸ್ಯುವಿಯು ಎಚ್ಎಸ್ಇ ಪೆಟ್ರೋಲ್ ರೂಪಾಂತರವಾಗಿದೆ. ಈ ಎಸ್ಯುವಿಯು 2.0 ಲೀಟರ್ ಪೆಟ್ರೋಲ್ ಯುನಿಟ್ ಅಥವಾ 3.0 ಲೀಟರ್ ಪೆಟ್ರೋಲ್ ಎಂಜಿನ್ ಎಂಬುದೇ ಎಂದು ತಿಳಿದುಬಂದಿಲ್ಲ.
MOST READ: ಬೈಕ್ ಚಲಾಯಿಸಿದ್ದು ಮಗ, ದಂಡ ಬಿದ್ದಿದ್ದು ಅಪ್ಪನಿಗೆ..!
ರೇಂಜ್ ರೋವರ್ ಎಸ್ಯುವಿಯ 2.0 ಲೀಟರ್ ಪೆಟೋಲ್ ಎಂಜಿನ್ 296 ಬಿಹೆಚ್ಪಿ ಪವರ್ ಮತ್ತು 400 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್ನೊಂದಿಗೆ 8 ಸ್ಪೀಡ್ ಆಟೋಮ್ಯಾಟಿಕ್ ಗೇರ್ಬಾಕ್ಸ್ ಅನ್ನು ಅಳವಡಿಸಲಾಗಿದೆ. ಇನ್ನೂ 3.0 ಲೀಟರ್ ಪೆಟ್ರೋಲ್ ಎಂಜಿನ್ 335 ಬಿಹೆಚ್ಪಿ ಪವರ್ ಮತ್ತು 450 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.
MOST READ: ಬೈಕ್ ಸವಾರನ ಪ್ರಾಣ ಉಳಿಸಿದ ಆಪಲ್ ವಾಚ್..!
ಎಸ್ಯುವಿಯ ಹೊರಭಾಗದಲ್ಲಿ ಪಿಕ್ಸೆಲ್ ಲೇಸರ್ ಎಲ್ಇಡಿ ಲ್ಯಾಂಪ್, ಅಟ್ಲಾಸ್ ಮೆಶ್ ಗ್ರಿಲ್ ಮತ್ತು ನವೀಕರಿಸಲಾದ ಬಂಪರ್ಗಳನ್ನು ಅಳವಡಿಸಲಾಗಿದೆ, ಇನ್ನು ಹಿಂಭಾಗದಲ್ಲಿ ಎಲ್ಇಡಿ ಟೇಲ್ ಲ್ಯಾಂಟ್, ಟಾಂಪರ್ಡ್ ರೇಕ್ ಮತ್ತು ರೇರ್ ವಿಂಡ್ಸ್ಕ್ರೀನ್ ಅನ್ನು ಅಳವಡಿಸಲಾಗಿದೆ.
MOST READ: ವಾಹನ ಸವಾರರಿಗೆ ಸಿಹಿ ಸುದ್ದಿ ನೀಡಿದ ಸಚಿವ ನಿತಿನ್ ಗಡ್ಕರಿ ..!
ಈ ಎಸ್ಯುವಿಯ ಇಂಟಿರಿಯರ್ನಲ್ಲಿ 12.3-ಇಂಚಿನ ಇಂಟರ್ಆಕ್ಟಿವ್ ಡ್ರೈವರ್ ಡಿಸ್ಪ್ಲೇ ಸಿಸ್ಟಂ, ಹೆಡ್ ಅಪ್ ಡಿಸ್ಪ್ಲೇ, ಪನೊರಾಮಿಕ್ ಸನ್ರೂಫ್, ತ್ರಿ ಜೋನ್ ಕ್ಲೈಮೇಟ್ ಕಂಟ್ರೋಲ್ ಮತ್ತು ಜೆಎಲ್ಆರ್ ವಿಶೇಷ ಮಾಹಿತಿಯುಳ್ಳ ಟಚ್ ಪ್ರೋ ಡ್ಯೂ ಇನ್ಪೋಟೇನ್ಮೆಂಟ್ ಸಿಸ್ಟಂ ಅನ್ನು ಹೊಂದಿದೆ.
ಹಲವು ವಿಶೇಷ ವೈಶಿಷ್ಟ್ಯಗಳನ್ನು ಹೊಂದಿರುವ ಐಷಾರಾಮಿ ರೇಂಜ್ ರೋವರ್ ಕಾರುಗಳು ಸಾಕಷ್ಟು ಜನಪ್ರಿಯತೆ ಹೊಂದಿವೆ. ಬಾಲಿವುಡ್ನ ಬಹುತೇಕ ನಟ - ನಟಿಯರು ರೇಂಜ್ ರೋವರ್ ಎಸ್ಯುವಿಗಳು ಖರೀದಿಸಿದ್ದಾರೆ ಎನ್ನುವುದೇ ಮತ್ತೊಂದು ವಿಶೇಷ.