ಭಾರೀ ದಂಡದ ಪ್ರಭಾವ- ಡಿಎಲ್ ಅರ್ಜಿಗಳಿಂದಾಗಿ ಆರ್‌ಟಿಓ ವೆಬ್‌ಸೈಟ್ ಜ್ಯಾಮ್

ಹೊಸ ಸಂಚಾರಿ ನಿಯಮ ಜಾರಿಯಿಂದಾಗಿ ದೇಶಾದ್ಯಂತ ಟ್ರಾಫಿಕ್ ಪೊಲೀಸರು ಭಾರೀ ಪ್ರಮಾಣದಲ್ಲಿ ದಂಡ ವಸೂಲಿ ಮಾಡಲಾಗುತ್ತಿದ್ದು, ಇಷ್ಟು ದಿನಗಳ ಕಾಲ ಡ್ರೈವಿಂಗ್ ಲೈಸೆನ್ಸ್ ಇಲ್ಲದೆ ಬಿಂದಾಸ್ ಆಗಿ ಓಡಾಡಿಕೊಂಡಿದ್ದ ವಾಹನ ಸವಾರರಿಗೆ ತಲೆಬಿಸಿ ಶುರುವಾಗಿದೆ.

ಭಾರೀ ದಂಡದ ಪ್ರಭಾವ- ಡಿಎಲ್ ಅರ್ಜಿಗಳಿಂದಾಗಿ ಆರ್‌ಟಿಓ ವೆಬ್‌ಸೈಟ್ ಜ್ಯಾಮ್

ಈ ಬಾರಿ ಸಿಕ್ಕಿಬಿದ್ದರೆ ಭಾರೀ ಪ್ರಮಾಣದ ದಂಡ ಪಾವತಿಸಬೇಕಾದ ಪರಿಸ್ಥಿತಿ ಎದುರಾಗುತ್ತೆ ಎಂಬುವುದನ್ನು ಅರಿತಿರುವ ವಾಹನ ಸವಾರರು ಡಿಎಲ್‌ಗಾಗಿ ಹರಸಾಹಸಪಡುತ್ತಿದ್ದು, ಒಂದೇ ಬಾರಿಗೆ ಲಕ್ಷಾಂತರ ವಾಹನ ಸವಾರರು ಹೊಸದಾಗಿ ಡಿಎಲ್‌ಗಾಗಿ ಅರ್ಜಿ ಸಲ್ಲಿಸಿದ್ದರಿಂದ ಕೆಲವು ಕಡೆಗಳಲ್ಲಿ ಆರ್‌ಟಿಓ ವೆಬ್‌ಸೈಟ್‌ಗಳೇ ಜ್ಯಾಮ್ ಆಗಿವೆ. ಮಾಹಿತಿಗಳ ಪ್ರಕಾರ ವಿವಿಧ ನಗರಗಳಲ್ಲಿ ಸುಮಾರು 1 ಲಕ್ಷಕ್ಕೂ ಅಧಿಕ ಸಂಖ್ಯೆಯಲ್ಲಿ ಹೊಸದಾಗಿ ಡಿಎಲ್ ಅರ್ಜಿಗಳು ಸಲ್ಲಿಕೆಯಾಗಿದ್ದು, ಕಾಯುವಿಕೆಯ ಅವಧಿ 1ರಿಂದ 2 ತಿಂಗಳು ಹೆಚ್ಚಳವಾಗುವ ಸಾಧ್ಯತೆಯಿದೆ.

ಭಾರೀ ದಂಡದ ಪ್ರಭಾವ- ಡಿಎಲ್ ಅರ್ಜಿಗಳಿಂದಾಗಿ ಆರ್‌ಟಿಓ ವೆಬ್‌ಸೈಟ್ ಜ್ಯಾಮ್

ಒಂದೇ ಬಾರಿಗೆ ಸಾವಿರಾರು ಸಂಖ್ಯೆಯಲ್ಲಿ ಹೊಸ ಅರ್ಜಿ ಸಲ್ಲಿಕೆಯಾದ್ದರಿಂದ ಆರ್‌ಟಿಓ ಅಧಿಕಾರಿಗಳೇ ದಂಗಾಗಿದ್ದು, ಲಕ್ಷಾಂತರ ವಾಹನ ಸವಾರರು ಇದುವರೆಗೂ ಡ್ರೈವಿಂಗ್ ಲೆಸೆನ್ಸ್ ಹೊಂದಿಲ್ಲದೆ ಇರುವ ಕರಾಳ ಸತ್ಯ ಇದೀಗ ಬಯಲಾಗುತ್ತಿದೆ.

ಭಾರೀ ದಂಡದ ಪ್ರಭಾವ- ಡಿಎಲ್ ಅರ್ಜಿಗಳಿಂದಾಗಿ ಆರ್‌ಟಿಓ ವೆಬ್‌ಸೈಟ್ ಜ್ಯಾಮ್

ಹೀಗಾಗಿ ಹೊಸ ಸಂಚಾರಿ ನಿಯಮದಿಂದಾಗಿ ಡಿಎಲ್ ಹೊಂದುವುದು ಇದೀಗ ವಾಹನ ಸವಾರರಿಗೆ ಅನಿವಾರ್ಯವಾಗಿ ಪರಿಣಮಿಸಿದ್ದು, ನೀವು ಕೂಡಾ ವಾಹನಕ್ಕೆ ಸಂಬಂಧಿಸಿದ ದಾಖಲೆಗಳನ್ನು ಹೊಂದಿಲ್ಲವಾದರೆ ಈ ಕೂಡಲೇ ಸರಿಪಡಿಸಿಕೊಂಡು ಭಾರೀ ದಂಡದಿಂದ ಬಚಾವ್ ಆಗುವುದು ಒಳಿತು.

ಭಾರೀ ದಂಡದ ಪ್ರಭಾವ- ಡಿಎಲ್ ಅರ್ಜಿಗಳಿಂದಾಗಿ ಆರ್‌ಟಿಓ ವೆಬ್‌ಸೈಟ್ ಜ್ಯಾಮ್

ಇನ್ನು ವಾಹನಗಳಿಗೆ ಸಂಬಂಧಿಸಿದ ದಾಖಲೆ ಹೊಂದಿದ್ದರೂ ಸಹ ಕೆಲವೊಮ್ಮೆ ದಂಡಕ್ಕೆ ಗುರಿಯಾಗಬಹುದಾದ ಪರಿಸ್ಥಿತಿ ಎದುರಾಗಬಹುದು. ಅದಕ್ಕೂ ಇದೀಗ ಪರಿಹಾರವಿದೆ. ಹೌದು, ಹೊಸ ಸಂಚಾರಿ ನಿಯಮ ಉಲ್ಲಂಘನೆಯ ಹೊರತಾಗಿಯೂ ದುಬಾರಿ ದಂಡದಿಂದ ತಪ್ಪಿಸಿಕೊಳ್ಳಲು ವಾಹನ ಸವಾರರಿಗೆ ಒಂದು ಅವಕಾಶವಿದೆ. ಹಾಗಂತ ಇದು ಎಲ್ಲಾ ಸಂಚಾರಿ ನಿಯಮ ಉಲ್ಲಂಘನೆ ಪ್ರಕರಣಗಳಿಗೂ ಅನ್ವಯವಾಗುವುದಿಲ್ಲ.

ಭಾರೀ ದಂಡದ ಪ್ರಭಾವ- ಡಿಎಲ್ ಅರ್ಜಿಗಳಿಂದಾಗಿ ಆರ್‌ಟಿಓ ವೆಬ್‌ಸೈಟ್ ಜ್ಯಾಮ್

ಕೆಲವೊಮ್ಮೆ ವಾಹನ ಮಾಲೀಕರು ಪ್ರಯಾಣದ ವೇಳೆ ವಾಹನಗಳ ಮೂಲ ದಾಖಲೆಗಳನ್ನು ಕೊಂಡೊಯ್ಯುವುದನ್ನ ಮರೆತುಬಿಡಬಹುದು. ಈ ವೇಳೆ ಒಂದು ಸಣ್ಣ ತಪ್ಪಿನಿಂದಾಗಿ ಟ್ರಾಫಿಕ್ ಪೊಲೀಸರ ಕೈಗೆ ಸಿಕ್ಕಿಬಿದ್ದು ಸಾವಿರಾರು ದಂಡ ಪಾವತಿಸುವ ಪರಿಸ್ಥಿತಿ ಎದುರಾಗಬಹುದು.

ಭಾರೀ ದಂಡದ ಪ್ರಭಾವ- ಡಿಎಲ್ ಅರ್ಜಿಗಳಿಂದಾಗಿ ಆರ್‌ಟಿಓ ವೆಬ್‌ಸೈಟ್ ಜ್ಯಾಮ್

ಆದ್ರೆ ನೀವು ವಾಹನ ಚಾಲನೆ ವೇಳೆ ಮೂಲ ಪ್ರತಿ ತಂದಿಲ್ಲ ಎಂಬ ಕಾರಣಕ್ಕೆ ಹೆದರಬೇಕಿಲ್ಲ. ಹೌದು, ಒಂದು ವೇಳೆ ನಿಮ್ಮ ಬಳಿ ವಾಹನಕ್ಕೆ ಸಂಬಂಧಿಸಿದ ಎಲ್ಲಾ ದಾಖಲೆಗಳನ್ನು ಹೊಂದಿದ್ದು, ಅವುಗಳನ್ನು ಪ್ರಯಾಣದ ವೇಳೆ ತೆಗೆದುಕೊಂಡ ಬಂದಿಲ್ಲ ಎಂಬ ಕಾರಣಕ್ಕೆ ಸಾವಿರಾರು ರೂಪಾಯಿ ದಂಡಕಟ್ಟಬೇಕಿಲ್ಲ.

MOST READ: ಯಾಕ್ರಿ ಲಂಚ ಕೊಡ್ತಿರಾ? ಇನ್ಮುಂದೆ ಸುಲಭದಲ್ಲೇ ಸಿಗಲಿದೆ ಡ್ರೈವಿಂಗ್ ಲೈಸೆನ್ಸ್..!!

ಭಾರೀ ದಂಡದ ಪ್ರಭಾವ- ಡಿಎಲ್ ಅರ್ಜಿಗಳಿಂದಾಗಿ ಆರ್‌ಟಿಓ ವೆಬ್‌ಸೈಟ್ ಜ್ಯಾಮ್

ಟ್ರಾಫಿಕ್ ಪೊಲೀಸರ ತಪಾಸಣೆ ವೇಳೆ ವಾಹನಕ್ಕೆ ಸಂಬಂಧಿಸಿದ ದಾಖಲೆಗಳು ಇಲ್ಲವಾದಲ್ಲಿ ಸಾವಿರಾರು ರೂಪಾಯಿ ದಂಡದ ಬದಲಾಗಿ ರೂ.100 ಚಲನ್ ಪಡೆದುಕೊಂಡು 15 ದಿನದೊಳಗಾಗಿ ಕೋರ್ಟ್‌ಗೆ ಮೂಲಪ್ರತಿಗಳನ್ನು ಸಲ್ಲಿಸುವ ಅವಕಾಶವಿದ್ದು, ಯಾವುದೇ ಕಾರಣಕ್ಕೂ ಭಯಕ್ಕೆ ಬಿದ್ದು ದಂಡ ಪಾವತಿ ಮಾಡುವುದಾಗಲಿ ಅಥವಾ ಲಂಚ ನೀಡಿ ತಪ್ಪಿಸಿಕೊಳ್ಳುವ ಪ್ರಯತ್ನ ಮಾಡಬೇಡಿ.

MOST READ: ಕೇವಲ 40 ರೂಪಾಯಿ ಆಸೆಗೆ ಬರೋಬ್ಬರಿ 40 ಲಕ್ಷ ಕಳೆದುಕೊಂಡ ಹ್ಯುಂಡೈ ಕಾರು ಚಾಲಕ..!

ಭಾರೀ ದಂಡದ ಪ್ರಭಾವ- ಡಿಎಲ್ ಅರ್ಜಿಗಳಿಂದಾಗಿ ಆರ್‌ಟಿಓ ವೆಬ್‌ಸೈಟ್ ಜ್ಯಾಮ್

ನಿಮ್ಮ ಬಳಿ ವಾಹನಕ್ಕೆ ಸಂಬಂಧಿಸಿದ ಎಲ್ಲಾ ದಾಖಲೆಗಳು ಸರಿಯಾಗಿದ್ದು, ಒಂದು ವೇಳೆ ಮನೆಯಲ್ಲಿ ಅಥವಾ ಕಚೇರಿಗಳಲ್ಲಿ ಮರೆತುಬಿಟ್ಟುಬಂದಾಗ ಮಾತ್ರವೇ ಈ ಅವಕಾಶವು ನಿಮ್ಮ ಸಹಾಯಕ್ಕೆ ಬರಲಿದೆ. ಕೇವಲ ರೂ.100 ದಂಡದೊಂದಿಗೆ ಕೋರ್ಟ್‌ಗೆ ಮೂಲಪ್ರತಿಗಳನ್ನು ಸಲ್ಲಿಕೆ ಮಾಡಿದಾಗ ಮಾತ್ರವೇ ಭಾರೀ ದಂಡದಿಂದ ಪಾರಾಗಬಹುದು.

MOST READ: ಕಾರ್ ರೀಪೆರಿಗೆ 3 ಲಕ್ಷ ಕೇಳಿದ್ದ ಡೀಲರ್ಸ್ ಅಸಲಿಯತ್ತು ಬಯಲಾಗಿದ್ದು ಲೋಕಲ್ ಗ್ಯಾರೇಜ್‌ನಲ್ಲಿ..!

ಭಾರೀ ದಂಡದ ಪ್ರಭಾವ- ಡಿಎಲ್ ಅರ್ಜಿಗಳಿಂದಾಗಿ ಆರ್‌ಟಿಓ ವೆಬ್‌ಸೈಟ್ ಜ್ಯಾಮ್

ಕೆಲವೊಮ್ಮೆ ಅವಸರದಲ್ಲಿ ಡ್ರೈವಿಂಗ್ ಲೆಸೆನ್ಸ್, ವಾಹನದ ಆರ್‌ಸಿ, ಮಾಲಿನ್ಯ ತಪಸಣಾ ಪತ್ರ ಅಥವಾ ವಿಮಾ ದಾಖಲೆಗಳನ್ನು ಮರೆತುಬಿಟ್ಟು ಪ್ರಯಾಣ ಮಾಡುವ ಸಂದರ್ಭದಲ್ಲಿ ಇದು ಸಹಾಯಕ್ಕೆ ಬರಲಿದ್ದು, ಇನ್ನುಳಿದ ಟ್ರಾಫಿಕ್ ನಿಯಮ ಉಲ್ಲಂಘನೆ ಪ್ರಕರಣಗಳಿಗೆ ಇದು ಯಾವುದೇ ಕಾರಣಕ್ಕೂ ಅನ್ವಯವಾಗುದಿಲ್ಲ.

ಭಾರೀ ದಂಡದ ಪ್ರಭಾವ- ಡಿಎಲ್ ಅರ್ಜಿಗಳಿಂದಾಗಿ ಆರ್‌ಟಿಓ ವೆಬ್‌ಸೈಟ್ ಜ್ಯಾಮ್

ಹೆಲ್ಮೆಟ್ ರಹಿತ ಪ್ರಯಾಣ, ಸೀಟ್ ಬೆಲ್ಟ್ ಇಲ್ಲದೇ ಕಾರು ಚಾಲನೆ, ತ್ರಿಬಲ್ ರೈಡಿಂಗ್, ರಾಂಗ್ ಸೈಡ್ ಪಾರ್ಕಿಂಗ್, ಡ್ರಂಕ್ ಅಂಡ್ ಡ್ರೈವ್, ಸಿಗ್ನಲ್ ಜಂಪ್, ಓವರ್ ಲೋಡ್ ಕ್ಯಾರಿ ಪ್ರಕರಣಗಳಿಗೆ ಸ್ಥಳದಲ್ಲೇ ದಂಡವಸೂಲಿ ಮಾಡಲಿದ್ದು, ವಾಹನ ದಾಖಲೆಗಳನ್ನು ಮರೆತುಬರುವ ಮಾಲೀಕರಿಗೆ ಮಾತ್ರ ದಂಡದಿಂದ ಬಚಾವ್ ಆಗುವ ಒಂದು ಅವಕಾಶ ನೀಡಲಾಗಿದೆ.

Most Read Articles

Kannada
English summary
Transport Department Servers Crash After Receiving Thousands Of Driver’s License Applications.
Story first published: Thursday, September 12, 2019, 19:12 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X