ಮಾಢಿಫೈ ವಾಹನಗಳನ್ನು ಬಿಡುಗಡೆ ಮಾಡಲಿದೆ ಮಹೀಂದ್ರಾ

ಇತ್ತೀಚೆಗೆ ಭಾರತದ ಸುಪ್ರೀಂ ಕೋರ್ಟ್ ಗ್ರಾಹಕರು ಹೊಂದಿರುವ ಕಾರ್ ಅನ್ನು ಯಾವುದೇ ರೀತಿಯಲ್ಲಿ ಮಾಢಿಫೈ ಮಾಡುವುದನ್ನು ಕಾನೂನುಬಾಹಿರವೆಂದು ಆದೇಶಿಸಿತು. ವಾಹನ ತಯಾರಕರು ತಮ್ಮ ಉತ್ಪಾದನಾ ಘಟಕಗಳಲ್ಲಿಯೇ ಮಾಢಿಫೈ ಆವೃತ್ತಿಗಳನ್ನು ತಯಾರಿಸಿ ಅದನ್ನು ಮಾರಾಟ ಮಾಡಿದರೆ, ಅಂತಹ ವಾಹನಗಳ ಮೇಲೆ ಯಾವುದೇ ನಿಷೇಧ ಹೇರಲಾಗುವುದಿಲ್ಲ. ಮಹೀಂದ್ರಾ ಕಂಪನಿಯು ತನ್ನ ಸರಣಿಯಲ್ಲಿರುವ ಕಾರುಗಳನ್ನು ಗ್ರಾಹಕರು ಇಷ್ಟಪಡುವ ರೀತಿಯಲ್ಲಿ ಮಾಢಿಫೈ ಮಾಡಿ ತಯಾರಿಸಿ ಮಾರಾಟ ಮಾಡುತ್ತಿದೆ. ಮಾಢಿಫೈ ಆದ ಕಾರುಗಳು ಬೇರೆ ಕಾರುಗಳಿಗಿಂತ ವಿಭಿನ್ನವಾಗಿ ಕಾಣುವುದರಿಂದ ಜನರು ಈ ರೀತಿಯ ಕಾರುಗಳನ್ನು ಹೊಂದಲು ಬಯಸುತ್ತಾರೆ. ಮಹೀಂದ್ರಾ ಕಂಪನಿಯು ಈ ರೀತಿಯಾಗಿ ಮಾಢಿಫೈ ಮಾಡಿರುವ 11 ಕಾರುಗಳ ಬಗ್ಗೆ ತಿಳಿಯೋಣ.

ಮಾಢಿಫೈ ವಾಹನಗಳನ್ನು ಬಿಡುಗಡೆ ಮಾಡಲಿದೆ ಮಹೀಂದ್ರಾ

ಕೆ‍‍ಯು‍‍ವಿ ಎಕ್ಸ್ ಟ್ರೀಂ

ಕೆಯುವಿ100 ಮಹೀಂದ್ರಾ ಸರಣಿಯ ಕಾರುಗಳಲ್ಲಿ ಕೈಗೆಟುಕುವ ದರದಲ್ಲಿ ಮಾರಾಟವಾಗುವ ವಾಹನವಾಗಿದೆ. ಈ ಕಾರ್ ಅನ್ನು ಮೈಕ್ರೊ ಎಸ್‌ಯುವಿ ವಿನ್ಯಾಸದಲ್ಲಿ ಮಾರಾಟ ಮಾಡಲಾಗುತ್ತಿದೆ. ಈ ದರದಲ್ಲಿ ಮಾರುತಿ ಸುಜುಕಿ ಕಂಪನಿಯ ಇಗ್ನಿಸ್‌ ಕಾರಿಗೆ ಪ್ರತಿಸ್ಪರ್ಧಿಯಾಗಿದೆ. ಸೌಮ್ಯ ಸ್ವಭಾವದಂತೆ ಕಾಣುವ ಹಾಗೂ ವೇಗವುಳ್ಳ ಕೆಯುವಿ100 ಕಾರ್ ಅನ್ನು ಮಾಢಿಫೈ ಮಾಡಿ, 2018 ಆಟೋ ಎಕ್ಸ್ ಪೋದಲ್ಲಿ ಮಹೀಂದ್ರಾ ಕೆಯುವಿ ಎಕ್ಸ್ ಟ್ರೀಂ ಆಗಿ ಪ್ರದರ್ಶಿಸಲಾಗಿತ್ತು. ಈ ಕಾರು ಕೆಯುವಿ100 ಕಾರಿನ ಮಾಢಿಫೈ ಆವೃತ್ತಿಯಾಗಿದೆ. ಬುಚ್ ಸ್ಟೈಲಿಂಗ್ ಹೊಂದಿರುವ ಕಾರು ವಿಶೇಷವಾಗಿ ಕಾಣುತ್ತದೆ. ಈ ಕಾರಿನಲ್ಲಿ ಹಲವಾರು ಅಂಶಗಳನ್ನು ಅಳವಡಿಸಲಾಗಿದ್ದು, ಆಕ್ರಮಣಕಾರಿ ಸ್ಟೈಲಿಂಗ್ ಪಡೆದಿದೆ. ಕೆಯುವಿ ಎಕ್ಸ್ ಟ್ರೀಂ ಹ್ಯಾಚ್‍‍ಬ್ಯಾಕ್ ಕಾರ್ ಆಗಿರುವುದಿಲ್ಲ.

ಮಾಢಿಫೈ ವಾಹನಗಳನ್ನು ಬಿಡುಗಡೆ ಮಾಡಲಿದೆ ಮಹೀಂದ್ರಾ

ಟಿಯುವಿ ಆರ್ಮರ್

ಮಹೀಂದ್ರಾ ಕಂಪನಿಯ ಟಿಯುವಿ ಆರ್ಮರ್, ಇದು ಮೂಲತಃ ಲ್ಯಾಡರ್-ಫ್ರೇಮ್ ಟಿಯುವಿ 300 ಎಸ್‌ಯುವಿನ ಕಸ್ಟಮೈಸ್ಡ್ ಆವೃತ್ತಿಯಾಗಿದೆ. ಈ ಕಾರ್ ಅನ್ನು ಶಸ್ತ್ರಸಜ್ಜಿತ ವಾಹನವೆಂದು ತಪ್ಪಾಗಿ ಭಾವಿಸಲಾಗುತ್ತದೆ. ಈ ಕಾರಿನಲ್ಲಿದ್ದ ಹಲವಾರು ವಿನ್ಯಾಸಗಳನ್ನು ಮಾರ್ಪಾಡು ಮಾಡಲಾಗಿದೆ. ವಾಸ್ತವವಾಗಿ ಈ ವಿನ್ಯಾಸಗಳಿಂದಾಗಿ ಕಸ್ಟಮ್ ಆಕ್ಸೆಸರೀಸ್ ಹಾಗೂ ಕ್ಲಾಡಿಂಗ್‍‍ಗಳು ಜೊತೆಯಾಗಿರುವುದರಿಂದ ಈ ಕಾರು ಯುದ್ಧಕ್ಕೆ ಹೋಗಲು ಸಿದ್ಧವಾದ ವಾಹನದಂತೆ ಕಾಣುತ್ತದೆ. ಆದ್ದರಿಂದ ಈ ಕಾರಿಗೆ ಟಿಯುವಿ ಆರ್ಮರ್ ಎಂಬ ಹೆಸರಿಡಲಾಗಿದೆ.

ಮಾಢಿಫೈ ವಾಹನಗಳನ್ನು ಬಿಡುಗಡೆ ಮಾಡಲಿದೆ ಮಹೀಂದ್ರಾ

ಥಾರ್ ಡೇಬ್ರೇಕ್

2016 ರ ದೆಹಲಿ ಆಟೋ ಎಕ್ಸ್‌ಪೋದಲ್ಲಿ ಥಾರ್ ಡೇ ಬ್ರೇಕ್ ಪ್ರಮುಖ ಆಕರ್ಷಣೆಯಾಗಿತ್ತು. ಈ ಕಾರು ಥಾರ್‌ ಕಾರಿನ ಕಸ್ಟಮೈಸ್ಡ್ ಆವೃತ್ತಿಯಾಗಿದ್ದು ಅನೇಕ ಕಾಸ್ಮೇಟಿಕ್ ಬದಲಾವಣೆಗಳನ್ನು ಪಡೆದಿದೆ. ಮುಂಭಾಗದಲ್ಲಿ ಎಲ್‌ಇಡಿ ಡಿಆರ್‌ಎಲ್‌ಗಳಿದ್ದರೆ, ಹಿಂಭಾಗದಲ್ಲಿ ಎಲ್‌ಇಡಿ ಟೈಲ್‌ಲ್ಯಾಂಪ್‌ಗಳು, ಮರುವಿನ್ಯಾಸಗೊಳಿಸಲಾದ ಡೋರ್‍‍ಗಳು ಹಾಗೂ ಮಾರ್ಪಡಾದ ಬಾಡಿವರ್ಕ್‍‍ಗಳನ್ನು ಹೊಂದಿದೆ. ಡೇಬ್ರೇಕ್ ಆವೃತ್ತಿಯಲ್ಲಿರುವ ಇತರ ಬದಲಾವಣೆಗಳೆಂದರೆ ವ್ರೆಂಚ್ ಕಸ್ಟಮ್ ಫ್ರಂಟ್ ಬಂಪರ್, ಹುಡ್ ಸ್ಕೂಪ್, ಸ್ನಾರ್ಕೆಲ್, ಟ್ವೀಕ್ಡ್ ಸಸ್ಪೆಂಷನ್ ಹಾಗೂ ಎತ್ತರದ ಗ್ರೌಂಡ್ ಕ್ಲಿಯರೆನ್ಸ್.

ಮಾಢಿಫೈ ವಾಹನಗಳನ್ನು ಬಿಡುಗಡೆ ಮಾಡಲಿದೆ ಮಹೀಂದ್ರಾ

ಥಾರ್ ವಂಡರ್‍‍ಲಸ್ಟ್

ದೆಹಲಿಯ ಆಟೋ ಎಕ್ಸ್‌ಪೋದಲ್ಲಿಯೇ ಮಹೀಂದ್ರಾ ಥಾರ್‍‍ನ ಮತ್ತೊಂದು ವಿಶೇಷ ಆವೃತ್ತಿಯಾದ ಥಾರ್ ವಂಡರ್‍‍ಲಸ್ಟ್ ಕಾರ್ ಅನ್ನು ಅನಾವರಣಗೊಳಿಸಲಾಗಿತ್ತು. ವಾಸ್ತವವಾಗಿ ಈ ಕಾರ್ ಅನ್ನು ಡೇಬ್ರೇಕ್ ಥಾರ್‌ನ ಆವೃತ್ತಿಯನ್ನು ತಿರುಚಿ ನಿರ್ಮಿಸಲಾಗಿದೆ. ಈ ಕಾರಿನಲ್ಲಿ ಗುಲ್‍‍ವಿಂಗ್ ಶೈಲಿಯ ಹಿಂಬಾಗಿಲುಗಳು, ಹೊಸ ವಿನ್ಯಾಸದ ಮುಂಭಾಗದ ಗ್ರಿಲ್, ಕಸ್ಟಮ್ ಫೆಂಡರ್‌ಗಳು ಹಾಗೂ ಹೆಚ್ಚು ಅಗಲವನ್ನು ಹೊಂದಿರುವ ಆಫ್-ರೋಡ್ ಸ್ಪೆಕ್ ಟಯರ್‌ಗಳಿವೆ. ವಿಂಚ್ ಹಾಗೂ ಕಸ್ಟಮ್ ಟ್ವಿನ್ ಎಕ್ಸಾಸ್ಟ್ ಸೆಟಪ್‍‍ಗಳನ್ನು ಹೊಂದಿ ತಯಾರಾಗಿರುವ ಕಾರಣ ಜನರ ಗಮನವನ್ನು ತನ್ನತ್ತ ಸೆಳೆಯುತ್ತದೆ.

ಸ್ಕಾರ್ಪಿಯೋ ಡಾರ್ಕ್ ಹಾರ್ಸ್

ಮಹೀಂದ್ರಾ ಕಂಪನಿಯು ಸ್ಕಾರ್ಪಿಯೋ ಎಸ್‍‍ಯು‍‍ವಿಯ ಹಲವಾರು ಆವೃತ್ತಿಗಳನ್ನು ಬಿಡುಗಡೆಗೊಳಿಸಿದೆ. ಅವುಗಳಲ್ಲಿ ಸ್ಕಾರ್ಪಿಯೋ ಡಾರ್ಕ್ ಹಾರ್ಸ್ ಸಹ ಒಂದಾಗಿದೆ. ಸ್ಟ್ಯಾಂಡರ್ಡ್ ಸ್ಕಾರ್ಪಿಯೋಗೆ ಹೋಲಿಸಿದರೆ ಇದು ಒರಟಾದ ನೋಟವನ್ನು ಹೊಂದಿದೆ. ಈ ಕಾರಿನ ಮುಂಭಾಗದಲ್ಲಿರುವ ಫಾಸ್ಕಿಯಾವನ್ನು ನೋಡುತ್ತಿದ್ದರೆ ತಲೆ ತಿರುಗಿದಂತಾಗುತ್ತದೆ. ಬಾಕ್ಸೀ ವೈರ್-ಮೆಶ್ ಗ್ರಿಲ್, ಕಸ್ಟಮ್ ಥ್ರೀ-ಪಾಡ್ ಹೆಡ್‌ಲ್ಯಾಂಪ್‌ ಹಾಗೂ ಬಾನೆಟ್‌ನ ಮೇಲಿರುವ ದೊಡ್ಡ ಇನ್‍‍ಟೇಕ್‍‍ನೊಂದಿಗೆ ಎರಡು ಫಾಗ್ ಲ್ಯಾಂಪ್‍‍ಗಳ ಜೊತೆಗಿರುವ ಕಸ್ಟಮ್ ಬಂಪರ್‍‍ಗಳು ಡಾರ್ಕ್‌ಹಾರ್ಸ್ ವಿನ್ಯಾಸಕ್ಕೆ ಹೊಸ ಮೆರುಗು ನೀಡುತ್ತವೆ. ಮ್ಯಾಟ್ ಗ್ರೇ ಬಣ್ಣದ ಜೊತೆಗೆ ಆರೇಂಜ್ ಬಣ್ಣವನ್ನು ಹೊಂದಿದ್ದು, ಆಕರ್ಷಕವಾಗಿ ಕಾಣಿಸುತ್ತದೆ.

ಮಾಢಿಫೈ ವಾಹನಗಳನ್ನು ಬಿಡುಗಡೆ ಮಾಡಲಿದೆ ಮಹೀಂದ್ರಾ

ಸ್ಕಾರ್ಪಿಯೋ ಎಕ್ಸ್ ಟ್ರೀಂ

ಸ್ಕಾರ್ಪಿಯೋ ಎಕ್ಸ್ ಟ್ರೀಂ ಹೆಸರೇ ಸೂಚಿಸುವಂತೆ, ಸ್ಟಾಂಡರ್ಡ್ ಸ್ಕಾರ್ಪಿಯೋದ ಎಕ್ಸ್ ಟ್ರೀಂ ಆವೃತ್ತಿಯಾಗಿದೆ. ಸ್ಕಾರ್ಪಿಯೋ ಎಕ್ಸ್ ಟ್ರೀಂ ಡ್ಯುಯಲ್ ಕ್ಯಾಬ್ ಪಿಕಪ್ ಟ್ರಕ್ ಲುಕ್ ಸೇರಿದಂತೆ ಪ್ರಮುಖ ಬದಲಾವಣೆಗಳನ್ನು ಹೊಂದಿದೆ. ವ್ಹೀಲ್ ಆರ್ಕ್ ಹಾಗೂ ಬಂಪರ್‌ಗಳಲ್ಲಿ ಗ್ರೇ ಬಣ್ಣದ ಪ್ಲಾಸ್ಟಿಕ್ ಕ್ಲಾಡಿಂಗ್ ಬಳಕೆಯಿಂದಾಗಿ ವಿಶೇಷ ನೋಟವನ್ನು ಪಡೆಯುತ್ತದೆ. ಮೆಟಲ್ ಬಾರ್‍‍ಗೆ ಅಳವಡಿಸಲಾದ ಆಕ್ಸಿಲರಿ ಲ್ಯಾಂಪ್‍‍ಗಳು ಹೆಚ್ಚಿನ ಬೆಳಕನ್ನು ನೀಡುತ್ತವೆ. ಪೂರ್ಣ ಸೆಟಪ್ ಅನ್ನು ಮುಂಭಾಗದ ಬಂಪರ್‌ನಲ್ಲಿ ಜೋಡಿಸಲಾಗಿದೆ. ಈ ವಿಶೇಷ ಕಸ್ಟಮೈಸ್ ಮಾಡಿದ ಸ್ಕಾರ್ಪಿಯೋ ಪಿಕಪ್‌ನಲ್ಲಿನ ಇತರ ಮೋಡ್‌ಗಳಲ್ಲಿ ಸನ್‌ರೂಫ್, ಕಸ್ಟಮ್ ರೂಫ್ ಹಳಿಗಳು ಮತ್ತು ಪ್ರಕಾಶಮಾನವಾದ ಯೆಲ್ಲೋ ಕಸ್ಟಮ್ ಪೇಂಟ್ ಸ್ಕೀಮ್ ಸೇರಿವೆ.

ಮಾಢಿಫೈ ವಾಹನಗಳನ್ನು ಬಿಡುಗಡೆ ಮಾಡಲಿದೆ ಮಹೀಂದ್ರಾ

ಸ್ಕಾರ್ಪಿಯೋ ಮೌಂಟೆನೇರ್

ಎಕ್ಸ್ ಟ್ರೀಂ ಕಾರು ಅಷ್ಟೊಂದು ಎಕ್ಸ್ ಟ್ರೀಂ ಆಗಿರದಿದ್ದರೂ, ಸ್ಕಾರ್ಪಿಯೋ ಮೌಂಟೆನೇರ್ ಹೆಸರಿಗೆ ತಕ್ಕಂತೆಯಿದೆ. ಇದರಲ್ಲಿ ಒಂದೇ ಕ್ಯಾಬ್ ಪಿಕಪ್ ಟ್ರಕ್ ವಿನ್ಯಾಸವನ್ನು ನೀಡಲಾಗಿದ್ದು, ಒರಟಾದ ನೋಟವನ್ನು ಹೊಂದಿರುತ್ತದೆ. ಮೌಂಟೆನೇರ್ ಮುಂಭಾಗದಲ್ಲಿ ಹೊಸ ಗ್ರಿಲ್ ಹಾಗೂ ಮೂರು-ಪಾಡ್ ಹೆಡ್‌ಲ್ಯಾಂಪ್‌ಗಳಿದ್ದು, ಸಿಂಗಲ್ ಕ್ಯಾಬ್ ಪಿಕಪ್ ಟ್ರಕ್ ಬಾಡಿ ಗ್ರೇ ಮಿಶ್ರಿತ ಕೆಂಪು ಬಣ್ಣವನ್ನು ಹೊಂದಿದೆ. ಮಹೀಂದ್ರಾ ಈ ಕಸ್ಟಮ್ ಕಿಟ್‌ಗೆ ಬ್ಲ್ಯಾಕ್ಡ್ ಡೀಪ್ ಡಿಶ್ ಅಲಾಯ್ ವ್ಹೀಲ್‌ಗಳ ಜೊತೆಗೆ ಆಫ್-ರೋಡಿಂಗ್ ಟಯರ್‌ಗಳನ್ನು ಅಳವಡಿಸಿದೆ. ಬಂಪರ್ ಮೌಂಟೆಡ್ ಟೋಯಿಂಗ್ ರಿಂಗ್ಸ್, ಸೈಡ್ ಸ್ಕೂಪ್, ಸಿಆರ್‌ಸಿ ಸ್ಟೀಲ್ ರಿಯರ್ ಮೆಟಲ್ ಬಂಪರ್ ಹಾಗೂ ಸ್ನಾರ್ಕೆಲ್ ಸೇರಿದಂತೆ ಹಲವಾರು ಆಡ್ ಆನ್‌ಗಳನ್ನು ನೀಡಲಾಗಿದೆ. ಕಾರಿನ ಸೈಡಿನಲ್ಲಿ ಅಳವಡಿಸಲಾದ ಪಿಕ್‍ಆಕ್ಸ್, ಜನರ ಗಮನವನ್ನು ತನ್ನತ್ತ ಸೆಳೆಯಲಿದೆ.

ಮಾಢಿಫೈ ವಾಹನಗಳನ್ನು ಬಿಡುಗಡೆ ಮಾಡಲಿದೆ ಮಹೀಂದ್ರಾ

ಬೊಲೆರೊ ಆಟಿಟ್ಯೂಡ್

ಬೊಲೆರೊ ಆಟಿಟ್ಯೂಡ್ ಸಹ ತನ್ನ ಹೆಸರಿಗೆ ತಕ್ಕಂತಹ ಆಟಿಟ್ಯೂಡ್ ಹೊಂದಿದೆ. ಬೊಲೆರೊ ಆಟಿಟ್ಯೂಡ್ ಟ್ರೈಪಾಡ್ ಪ್ರೊಜೆಕ್ಟರ್‌ಗಳೊಂದಿಗೆ ಸಿಂಗಲ್-ಕ್ಯಾಬ್ ಪಿಕಪ್ ಟ್ರಕ್ ಬಾಡಿ, ಕಸ್ಟಮ್ ಗ್ರಿಲ್ ಮತ್ತು ಟೋವಿಂಗ್ ರಿಂಗ್, ಫ್ರಂಟ್ ಬಂಪರ್, ಹುಡ್ ಸ್ಕೂಪ್, ಕ್ವಾಡ್ ಆಕ್ಸಿಲರಿ ಲೈಟ್‌ಗಳನ್ನು ರೂಫ್‍‍ನ ಮೇಲೆ ಅಳವಡಿಸಲಾಗಿದೆ. ಸ್ನಾರ್ಕೆಲ್ ಹಾಗೂ ಪಿಕ್‍ಆಕ್ಸ್ ಗಳನ್ನು ಸೈಡಿನಲ್ಲಿ ಅಳವಡಿಸಲಾಗಿದೆ. ಇದರ ಬ್ರೈಟ್ ಆರೇಂಜ್ ಬಣ್ಣದಿಂದಾಗಿ ಬ್ಲಾಕ್ ಕ್ಲಾಡಿಂಗ್‌ನಿಂದ ವ್ಯತಿರಿಕ್ತವಾಗಿದೆ, ಇಂಟಿರಿಯರ್‍‍ನಲ್ಲಿ ರಿವರ್ಸ್ ಎಕ್ಸ್ ಟಿರಿಯರ್ ಬಣ್ಣವಿದ್ದು, ಬ್ಲಾಕ್ ಮಿಶ್ರಿತ ಆರೇಂಜ್ ಬಣ್ಣವು ಎದ್ದು ಕಾಣುತ್ತದೆ.

ಮಾಢಿಫೈ ವಾಹನಗಳನ್ನು ಬಿಡುಗಡೆ ಮಾಡಲಿದೆ ಮಹೀಂದ್ರಾ

ಬೊಲೆರೊ ಸ್ಟಿಂಗರ್

ಮಹೀಂದ್ರಾ ಸ್ಟಿಂಗರ್ ಬ್ಯಾಡ್ಜ್ ಅನ್ನು ಹಲವು ಬೊಲೆರೊ ಆಧಾರಿತ ಕಸ್ಟಮ್‍‍ಗಳಲ್ಲಿ ಅಳವಡಿಸಲಾಗಿದೆ. ಇದು ಹಳೆಯ ಬೊಲೆರೊ ಕಾರಿನ ಮೇಲೆ ಆಧಾರಿತವಾಗಿದೆ. ರೌಂಡ್ ಹೆಡ್‌ಲ್ಯಾಂಪ್‌ಗಳು ಹಾಗೂ ಇಂಡಿಕೇಟರ್‍‍ಗಳನ್ನು ಒಳಗೊಂಡಿದೆ. ಸಾಮಾನ್ಯವಾದ ಕಾರಿನಲ್ಲಿ ಬಾಕ್ಸೀ ಮಾದರಿಯ ಯೂನಿಟ್‍‍ಗಳಿರುತ್ತವೆ. ದಪ್ಪದಾದ ಡ್ಯುಯಲ್ ಟೋನ್ ಬಂಪರ್‍‍ಯಿದ್ದು, ರಿಜಿಸ್ಟ್ರೇಷನ್ ಪ್ಲೇಟ್ ಹೌಸಿಂಗ್ ಬಳಿ ನಾಲ್ಕು ಫಾಗ್‌ಲ್ಯಾಂಪ್‌ಗಳಿವೆ. ಮಾರ್ಪಡಿನಲ್ಲಿ ಹೆಚ್ಚು ಗಮನಸೆಳೆಯುವುದು ಕಸ್ಟಮ್ ಫ್ರಂಟ್ ಬಾನೆಟ್, ಫೆಂಡರ್‌ಗಳಲ್ಲಿ ಫಾಕ್ಸ್ ಏರ್ ವೆಂಟ್ ಹಾಗೂ ಡ್ಯುಯಲ್ ಕ್ಯಾಬ್ ಪಿಕಪ್ ಬಾಡಿಗಳಿವೆ.

ಮಾಢಿಫೈ ವಾಹನಗಳನ್ನು ಬಿಡುಗಡೆ ಮಾಡಲಿದೆ ಮಹೀಂದ್ರಾ

ಬೊಲೆರೊ ಸ್ಟಿಂಗರ್ 2

ಈ ಕಾರು ಸ್ಟಿಂಗರ್ ಬೊಲೆರೊದ ಹೊಸ ಆವೃತ್ತಿಯ ಮೇಲೆ ಆಧಾರಿತವಾಗಿದೆ. ಮುಂಭಾಗದ ತುದಿಯು ಮೊದಲಿನಂತೆಯೇ ಕಂಡರೂ, ಬಾನೆಟ್‌ನಲ್ಲಿ ಫಾಕ್ಸ್ ಏರ್ ವೆಂಟ್‍‍ಗಳಿವೆ. ವಿಂಡ್‌ಶೀಲ್ಡ್ ಮೇಲೆ ನಾಲ್ಕು ವಾರ್ನಿಂಗ್ ಲೈಟ್‍‍ಗಳಿವೆ. ಡ್ಯುಯಲ್ ಕ್ಯಾಬ್ ಬಾಡಿಯ ಮೇಲೆ ನೀಲಿ ಬಣ್ಣವಿದ್ದು, ಪಿಕಪ್ ಹಲವಾರು ಪ್ಲಾಸ್ಟಿಕ್ ಕ್ಲಾಡಿಂಗ್‍‍ಗಳನ್ನು ಹೊಂದಿದೆ. ಇದರಿಂದಾಗಿ ವಿಭಿನ್ನವಾಗಿ ಕಾಣುತ್ತದೆ. ಸ್ಟಿಂಗರ್ 2, ಕಾರಿನಲ್ಲಿ ಸ್ನ್ಯಾಜಿ ಸೆಟ್‍‍‍ನ ಅಲಾಯ್‍‍ಗಳನ್ನು ಹೊಂದಿದೆ.

ಮಾಢಿಫೈ ವಾಹನಗಳನ್ನು ಬಿಡುಗಡೆ ಮಾಡಲಿದೆ ಮಹೀಂದ್ರಾ

ಡಿಸಿ ಮರಾಜೊ

ವಿಶೇಷ ಆವೃತ್ತಿಯ ಮರಾಜೊ ಕಾರ್ ಅನ್ನು ಡಿಸಿ ಡಿಸೈನ್‍‍ನಿಂದ ಮಾಡಿಫೈ ಮಾಡಲಾಗಿದ್ದು, ಈ ಕಾರ್ ಅನ್ನು ಮೊದಲ ಬಾರಿಗೆ ಸೆಪ್ಟೆಂಬರ್ 2018 ರಲ್ಲಿ ಎಂಪಿವಿ ಬಿಡುಗಡೆ ಸಮಾರಂಭದಲ್ಲಿ ಅನಾವರಣಗೊಳಿಸಲಾಗಿತ್ತು. ಈ ಕಾರಿನಲ್ಲಿ ಎಂಪಿವಿ ಕಾರಿನ ಇಂಟಿರಿಯರ್‍‍ನಲ್ಲಿ ಹಾಗೂ ಹೊರಭಾಗದಲ್ಲಿ ಕೆಲವು ಸಣ್ಣ ಬದಲಾವಣೆಗಳಿವೆ. ಈ ಎಲ್ಲಾ ಫೀಚರ್‍‍ಗಳನ್ನು ಹೊಂದಿರುವ ಈ ಕಾರಿನ ಬೆಲೆ ರೂ.5.25 ಲಕ್ಷಗಳಾಗಿದೆ. ಈ ಕಾರಿನಲ್ಲಿ ಎರಡು ಸೋಫಾ, ರೆಕ್ಲೈನರ್‌ಗಳು, ಡ್ಯಾಶ್‍‍ಬೋರ್ಡ್‍‍ನ ಜೊತೆಗೆ ಲೆದರ್ ಅಪ್ ಹೋಲ್‍‍‍ಸ್ಟರಿ, ಎಲ್‌ಸಿಡಿ ಸ್ಕ್ರೀನ್, ಚಿಲ್ಲರ್ ಜೊತೆಗೆ ಆಂಬಿಯಂಟ್ ಲೈಟ್‍‍ಗಳನ್ನು ನೀಡುತ್ತದೆ. ಈ ಡಿಸಿ ಕಾರಿನ ಇಂಟಿರಿಯರ್‍‍ನಲ್ಲಿ ಲೆದರ್, ವುಡ್ ಹಾಗೂ ಕ್ರೋಮ್ ಮುಖ್ಯ ಘಟಕಗಳಾಗಿವೆ ಈ ಕಾರ್ ಅನ್ನು ಹತ್ತಿರದಲ್ಲಿರುವ ಡೀಲರ್‍‍ರವರಿಂದ ಪಡೆಯಬಹುದು.

Most Read Articles

Kannada
English summary
11 custom-built Mahindra SUVs you can buy straight from the factory. Read in kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X