ಆಟೋ ಉತ್ಪಾದನಾ ಸಂಸ್ಥೆಗಳಿಗೆ ಹೊಸ ರೂಲ್ಸ್ ಜಾರಿ ಮಾಡಿದ ಕೇಂದ್ರ ಸರ್ಕಾರ

ಕೇಂದ್ರ ಸರ್ಕಾರವು ಜಾರಿಗೆ ತಂದಿರುವ ಫೇಮ್ 2 ಯೋಜನೆ ಅಡಿ ಎಲೆಕ್ಟ್ರಿಕ್ ವಾಹನಗಳಿಗೆ ಗರಿಷ್ಠ ಮಟ್ಟದ ಸಬ್ಸಡಿ ಘೋಷಣೆ ಮಾಡಿದ್ದು, ಹೊಸ ಯೋಜನೆ ಫಲಾನುಭವಿ ಸಂಸ್ಥೆಗಳು ಕಡ್ಡಾಯವಾಗಿ ಶೇ.50 ಸ್ಥಳೀಯ ಬೀಡಿಭಾಗಗಳನ್ನು ಬಳಸಲೇಬೇಕೆಂಬ ಹೊಸ ನೀತಿಯನ್ನು ರೂಪಿಸಿ ಆದೇಶ ಹೊರಡಿಸಿದೆ.

ಆಟೋ ಉತ್ಪಾದನಾ ಸಂಸ್ಥೆಗಳಿಗೆ ಹೊಸ ರೂಲ್ಸ್ ಜಾರಿ ಮಾಡಿದ ಕೇಂದ್ರ ಸರ್ಕಾರ

ನೀತಿ ಆಯೋಗ ಶಿಫಾರಸ್ಸಿನಂತೆ ಫೇಮ್ 2 ಯೋಜನೆ ಅಡಿ ಫಲಾನುಭವಿ ಸಂಸ್ಥೆಗಳಿಗೆ ಸ್ಥಳೀಯ ಸಂಪನ್ಮೂಲ ಬಳಕೆಗೆ ಒತ್ತು ನೀಡುವಂತೆ ಸೂಚಿಸಲಾಗಿದ್ದು, ಕನಿಷ್ಠ ಶೇ.50 ರಷ್ಟು ಬೀಡಿಭಾಗಗಳು ಇಲ್ಲಿಯೇ ಅಭಿವೃದ್ಧಿ ಹೊಂದಿದ್ದಲ್ಲಿ ಮಾತ್ರವೇ ಹೊಸ ಯೋಜನೆಗೆ ಅರ್ಹರು ಎಂದು ಹೇಳಿದೆ.

ಇನ್ನು ಯುದ್ದಕ್ಕಿಂತ ಮಾರಕವಾಗಿ ಪರಿಣಮಿಸಿರುವ ಮಾಲಿನ್ಯ ಪರಿಸ್ಥಿತಿಯನ್ನು ತಿಳಿಗೊಳಿಸಲು ವಿಶ್ವಾದ್ಯಂತ ಎಲ್ಲಾ ರಾಷ್ಟ್ರಗಳು ತಮ್ಮದೇ ರೀತಿಯಲ್ಲಿ ಬೃಹತ್ ಯೋಜನೆಗಳನ್ನು ರೂಪಿಸುತ್ತಿದ್ದು, ಭಾರತ ಕೂಡಾ ಮಾಲಿನ್ಯ ತಗ್ಗಿಸುವ ನಿಟ್ಟಿನಲ್ಲಿ ಎಲೆಕ್ಟ್ರಿಕ್ ವಾಹನಗಳ ಅಭಿವೃದ್ಧಿ ಮತ್ತು ಮಾರಾಟಕ್ಕೆ ಹೆಚ್ಚಿನ ಒತ್ತು ನೀಡುತ್ತಿದೆ.

ಆಟೋ ಉತ್ಪಾದನಾ ಸಂಸ್ಥೆಗಳಿಗೆ ಹೊಸ ರೂಲ್ಸ್ ಜಾರಿ ಮಾಡಿದ ಕೇಂದ್ರ ಸರ್ಕಾರ

2030ರ ವೇಳೆಗೆ ದೇಶದಲ್ಲಿ ಶೇ.100ರಷ್ಟು ಎಲೆಕ್ಟ್ರಿಕ್ ವಾಹನಗಳನ್ನು ರಸ್ತೆಗಿಳಿಸುವ ಉದ್ದೇಶದಿಂದ ಕೇಂದ್ರ ಸರ್ಕಾರವು ಹಲವು ಬೃಹತ್ ಯೋಜನೆಗಳನ್ನು ರೂಪಿಸಿದ್ದು, ಇದೀಗ ಎಲೆಕ್ಟ್ರಿಕ್ ವಾಹನಾ ಉತ್ಪಾದನಾ ಸಂಸ್ಥೆಗಳಿಗೆ ಮತ್ತು ಎಲೆಕ್ಟ್ರಿಕ್ ಕಾರು ಖರೀದಿದಾರರಿಗೆ ವಿಶೇಷ ಸೌಲಭ್ಯಗಳನ್ನು ಘೋಷಣೆ ಮಾಡುತ್ತಿರುವ ಕೇಂದ್ರ ಸರ್ಕಾರವು ಭವಿಷ್ಯದ ಭಾರತಕ್ಕಾಗಿ ಮಹತ್ವದ ನಿರ್ಧಾರಗಳನ್ನು ಕೈಗೊಂಡಿದೆ.

ಆಟೋ ಉತ್ಪಾದನಾ ಸಂಸ್ಥೆಗಳಿಗೆ ಹೊಸ ರೂಲ್ಸ್ ಜಾರಿ ಮಾಡಿದ ಕೇಂದ್ರ ಸರ್ಕಾರ

ಹೆಚ್ಚುತ್ತಿರುವ ಜಾಗತಿಕ ತಾಪಮಾನದಿಂದ ಡೀಸೆಲ್ ಮತ್ತು ಪೆಟ್ರೋಲ್ ವಾಹನಗಳ ಉತ್ಪಾದನೆಗೆ ಬ್ರೇಕ್ ಹಾಕುವ ಉದ್ದೇಶದಿಂದ ಎಲ್ಲಾ ಆಟೋ ಉತ್ಪಾದಕರು ಸಹ ಎಲೆಕ್ಟ್ರಿಕ್ ವಾಹನಗಳ ಉತ್ಪಾದನೆಯತ್ತ ಮುಖಮಾಡಿದ್ದು, ಈ ಮಧ್ಯೆ ಎಲೆಕ್ಟ್ರಿಕ್ ಕಾರು ಖರೀದಿ ಯೋಜನೆಯಲ್ಲಿರುವ ಗ್ರಾಹಕರಿಗೆ ಕೇಂದ್ರ ಸರ್ಕಾರವು ಸಿಹಿಸುದ್ದಿ ನೀಡಿದೆ.

ಆಟೋ ಉತ್ಪಾದನಾ ಸಂಸ್ಥೆಗಳಿಗೆ ಹೊಸ ರೂಲ್ಸ್ ಜಾರಿ ಮಾಡಿದ ಕೇಂದ್ರ ಸರ್ಕಾರ

ಇದು ಎಲೆಕ್ಟ್ರಿಕ್ ವಾಹನಗಳ ಉತ್ಪಾದನೆಗೆ ಮತ್ತಷ್ಟು ಬಲ ತುಂಬುವುದಲ್ಲದೇ ಮಾರಾಟವನ್ನು ಸಹ ಉತ್ತೇಜಿಸಲು ಈ ಯೋಜನೆಯು ಭಾರೀ ಪ್ರಾಮುಖ್ಯತೆ ಪಡೆಯಲಿದ್ದು, ಈ ಹಿಂದೆ ಪರಿಚಯಿಸಲಾಗಿದ್ದ ಫೇಮ್ ಯೋಜನೆಯ ಎರಡನೇ ಹಂತದ ಅಭಿವೃದ್ದಿಗಾಗಿ ಬರೋಬ್ಬರಿ ರೂ.10 ಸಾವಿರ ಕೋಟಿ ಮೀಸಲು ಇರಿಸಲಾಗಿದೆ.

ಫೇಮ್ ಮೊದಲ ಹಂತದ ಯೋಜನೆಗಾಗಿ ಈಗಾಗಲೇ ರೂ. 795 ಕೋಟಿ ಖರ್ಚು ಮಾಡಿರುವ ಕೇಂದ್ರ ಸರ್ಕಾರವು ಮುಂದಿನ ಮೂರು ವರ್ಷಗಳ ಅವಧಿಗೆ ರೂ.10 ಸಾವಿರ ಕೋಟಿ ಮೀಸಲು ಇರಿಸಿದ್ದು, ಎಲೆಕ್ಟ್ರಿಕ್ ಕಾರುಗಳ ಸಬ್ಸಡಿ ಸೇರಿದಂತೆ ವಿವಿಧ ಯೋಜನೆಗಾಗಿ ಪ್ರತಿ ವರ್ಷ ರೂ.3,300 ಕೋಟಿ ಹಣ ನೀಡಲಿದೆ.

ಆಟೋ ಉತ್ಪಾದನಾ ಸಂಸ್ಥೆಗಳಿಗೆ ಹೊಸ ರೂಲ್ಸ್ ಜಾರಿ ಮಾಡಿದ ಕೇಂದ್ರ ಸರ್ಕಾರ

ಪರಿಸರ ಸ್ನೇಹಿ ಎಲೆಕ್ಟ್ರಿಕ್ ಕಾರುಗಳ ಮಾರಾಟವನ್ನು ಹೆಚ್ಚಿಸುವ ಸಂಬಂಧ ಕೇಂದ್ರ ಸರ್ಕಾರವು ಈಗಾಗಲೇ ಕೆಲವು ವಿಶೇಷ ಸೌಲಭ್ಯಗಳನ್ನು ಘೋಷಣೆ ಮಾಡಿದ್ದು, ಇದೀಗ ಎಲೆಕ್ಟ್ರಿಕ್ ಕಾರುಗಳ ಖರೀದಿಸುವ ಗ್ರಾಹಕರಿಗೆ ಅತಿ ಕಡಿಮೆ ಬಡ್ಡಿದರದಲ್ಲಿ ಸಾಲ ಸೌಲಭ್ಯವನ್ನು ಒದಗಿಸುವುದಲ್ಲದೇ ಪ್ರತಿ ಎಲೆಕ್ಟ್ರಿಕ್ ಕಾರಿನ ಮೇಲೂ ರೂ.50 ಸಾವಿರ ತೆರಿಗೆ ವಿನಾಯ್ತಿ ನೀಡುವುದಾಗಿ ಅಧಿಕೃತ ಸುತ್ತೋಲೆ ಹೊರಡಿಸಿದೆ.

ಆಟೋ ಉತ್ಪಾದನಾ ಸಂಸ್ಥೆಗಳಿಗೆ ಹೊಸ ರೂಲ್ಸ್ ಜಾರಿ ಮಾಡಿದ ಕೇಂದ್ರ ಸರ್ಕಾರ

ಇದಲ್ಲದೇ ಅತಿ ಕಡಿಮೆ ಬಡ್ಡಿದರದಲ್ಲಿ ಸಾಲ ಪಡೆಯುವಿಕೆಯ ಪ್ರಕ್ರಿಯೆಯನ್ನು ಸಹ ಸಡಿಸಲು ನಿರ್ಧರಿಸಲಾಗಿದ್ದು, ಈ ಸಂಬಂಧ ಹಣಕಾಸು ಇಲಾಖೆಗೆ ಮಹತ್ವದ ಸುತ್ತೋಲೆ ಹೊರಡಿಸಿರುವ ಪ್ರಧಾನಿ ಮಂತ್ರಿ ಕಾರ್ಯಾಲಯವು ಸಹ ಎಲೆಕ್ಟ್ರಿಕ್ ವಾಹನ ಹೆಚ್ಚಳಕ್ಕೆ ಪೂರಕವಾದ ಅಂಶಗಳಿಗೆ ಹೆಚ್ಚಿನ ಆದ್ಯತೆ ನೀಡುವಂತೆ ನಿರ್ದೆಶನ ಮಾಡಲಾಗಿದೆ.

ಆಟೋ ಉತ್ಪಾದನಾ ಸಂಸ್ಥೆಗಳಿಗೆ ಹೊಸ ರೂಲ್ಸ್ ಜಾರಿ ಮಾಡಿದ ಕೇಂದ್ರ ಸರ್ಕಾರ

ಸದ್ಯ ಭಾರತದಲ್ಲಿ ಎಲೆಕ್ಟ್ರಿಕ್ ಕಾರುಗಳ ಉತ್ಪಾದನೆ ಮತ್ತು ಮಾರಾಟಕ್ಕೆ ಹಲವು ಅವಕಾಶಗಳಿದ್ದರೂ ಸಹ ಗ್ರಾಹಕರು ಮಾತ್ರ ಪೆಟ್ರೋಲ್ ಮತ್ತು ಡಿಸೇಲ್ ಕಾರುಗಳ ಮೇಲೆಯೇ ಹೆಚ್ಚಿನ ಆಸಕ್ತಿ ತೋರುತ್ತಿದ್ದಾರೆ. ಹೀಗಾಗಿ ಗ್ರಾಹಕರನ್ನು ಸೆಳೆಯಲು ಕೇಂದ್ರ ಸರ್ಕಾರವು ಕೆಲವು ಮಹತ್ವದ ನಿರ್ಧಾರಗಳನ್ನು ಕೈಗೊಳ್ಳುತ್ತಿದೆ.

ಆಟೋ ಉತ್ಪಾದನಾ ಸಂಸ್ಥೆಗಳಿಗೆ ಹೊಸ ರೂಲ್ಸ್ ಜಾರಿ ಮಾಡಿದ ಕೇಂದ್ರ ಸರ್ಕಾರ

ಇನ್ನೊಂದು ಪ್ರಮುಖ ವಿಚಾರ ಅಂದ್ರೆ, 2020ರ ವೇಳೆಗೆ ಕನಿಷ್ಠ 25ರಷ್ಟು ಆದರೂ ಎಲೆಕ್ಟ್ರಿಕ್ ಕಾರು ಮತ್ತು ಬೈಕ್‌ಗಳು ಮಾರಾಟವಾಗುವಂತೆ ಮಾಡಬೇಕೆಂಬ ಕೇಂದ್ರದ ಯೋಜನೆಯು ಸದ್ಯದ ಪರಿಸ್ಥಿತಿಯಲ್ಲಿ ಅಸಾಧ್ಯ ಎನ್ನುವಂತಾಗಿದ್ದು, ತೀವ್ರಗತಿಯ ಬೆಳವಣಿಗೆ ಕೆಲವು ಜನಪರ ಯೋಜನೆಗಳನ್ನು ಘೋಷಣೆ ಮಾಡಲೇಬೇಕಾದ ಅವಶ್ಯಕತೆಯಿದೆ.

ಆಟೋ ಉತ್ಪಾದನಾ ಸಂಸ್ಥೆಗಳಿಗೆ ಹೊಸ ರೂಲ್ಸ್ ಜಾರಿ ಮಾಡಿದ ಕೇಂದ್ರ ಸರ್ಕಾರ

ಜೊತೆಗೆ ಎಲೆಕ್ಟ್ರಿಕ್ ಕಾರುಗಳನ್ನು ಖರೀದಿಸಿದರೂ ಹೆಚ್ಚಿನ ಪ್ರಮಾಣದ ಚಾರ್ಜಿಂಗ್ ಸ್ಟೆಷನ್‌ಗಳು ಇಲ್ಲದಿರುವುದರಿಂದ ಗ್ರಾಹಕರು ಹಿಂದೇಟು ಹಾಕುತ್ತಿದ್ದು, ಕೇಂದ್ರ ಸರ್ಕಾರದ ಹೊಸ ಯೋಜನೆ ಅಡಿ ಪ್ರತಿ 25 ಕಿ.ಮಿ ಗೆ ಒಂದು ಎಲೆಕ್ಟ್ರಿಕ್ ಚಾರ್ಜಿಂಗ್ ಸ್ಟೆಷನ್ ತೆರೆಯಲು ನಿರ್ಧರಿಸಲಾಗಿದೆ.

Most Read Articles

Kannada
English summary
FAME II Requires Minimum 50 Per Cent Localization. Read in Kannada.
Story first published: Friday, April 19, 2019, 19:23 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X