ಆಟೋ ಉದ್ಯಮ ಕುಸಿತಕ್ಕೆ ಹೊಸ ಕಾರಣ ಕೊಟ್ಟ ಕೇಂದ್ರ ಸಚಿವೆ..!

ಭಾರತದ ಆಟೋಮೊಬೈಲ್ ಉದ್ಯಮವು ಹಿಂದೆಂದೂ ಕಂಡು ಕೇಳರಿಯದ ರೀತಿಯಲ್ಲಿ ಕುಸಿತವನ್ನು ಕಾಣುತ್ತಿದೆ. ಈ ಕುಸಿತದ ತೀವ್ರತೆ ಎಷ್ಟಿದೆಯೆಂದರೆ ಕೆಲ ಕಂಪನಿಗಳು ಉತ್ಪಾದನೆಯನ್ನು ಸ್ಥಗಿತಗೊಳಿಸುತ್ತಿದ್ದರೆ, ಕೆಲ ಕಂಪನಿಗಳು ಉದ್ಯೋಗಿಗಳನ್ನು ಕೆಲಸದಿಂದ ವಜಾಗೊಳಿಸುತ್ತಿವೆ.

ಆಟೋ ಉದ್ಯಮ ಕುಸಿತಕ್ಕೆ ಹೊಸ ಕಾರಣ ಕೊಟ್ಟ ಕೇಂದ್ರ ಸಚಿವೆ..!

ಕಾರು ತಯಾರಕ ಕಂಪನಿಗಳು ತಮ್ಮ ವಾಹನಗಳನ್ನು ಅಪ್‍‍‍ಡೇಟ್‍ಗೊಳಿಸುತ್ತಿದ್ದರೂ, ತಮ್ಮ ವಾಹನಗಳ ಮೇಲೆ ಭಾರೀ ಪ್ರಮಾಣದ ರಿಯಾಯಿತಿಯನ್ನು ನೀಡುತ್ತಿದ್ದರೂ ಗ್ರಾಹಕರನ್ನು ಸೆಳೆಯಲು ವಿಫಲವಾಗುತ್ತಿವೆ. ಇತ್ತೀಚಿಗೆ ವಾಹನ ಉದ್ಯಮದಲ್ಲಿನ ಕುಸಿತದ ಬಗ್ಗೆ ಮಾತನಾಡಿದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‍‍ರವರು ಬದಲಾಗುತ್ತಿರುವ ಜನರ ಮನಸ್ಥಿತಿಯೇ ವಾಹನ ಉದ್ಯಮದ ಕುಸಿತಕ್ಕೆ ಕಾರಣವಾಗಿದೆ ಎಂದು ಹೇಳಿದರು.

ಆಟೋ ಉದ್ಯಮ ಕುಸಿತಕ್ಕೆ ಹೊಸ ಕಾರಣ ಕೊಟ್ಟ ಕೇಂದ್ರ ಸಚಿವೆ..!

ಹೊಸ ತಲೆಮಾರಿನ ಜನರು ವಾಹನಗಳನ್ನು ಖರೀದಿಸುವ ಬದಲು ಕ್ಯಾಬ್ ಸೇವೆಗಳಾದ ಒಲಾ ಹಾಗೂ ಉಬರ್‍‍ಗಳಿಗೆ ಹೆಚ್ಚಿನ ಆದ್ಯತೆ ನೀಡುತ್ತಿದ್ದಾರೆ ಎಂದು ಹೇಳಿದರು. ಆಟೋಮೊಬೈಲ್ ಉದ್ಯಮವು ಇಂತಹ ಕೆಟ್ಟ ಪರಿಸ್ಥಿತಿಯನ್ನು ಎದುರಿಸಲು ಇದೂ ಒಂದು ಕಾರಣವೆಂದು ಹಣಕಾಸು ಸಚಿವರು ಹೇಳಿದರು.

ಆಟೋ ಉದ್ಯಮ ಕುಸಿತಕ್ಕೆ ಹೊಸ ಕಾರಣ ಕೊಟ್ಟ ಕೇಂದ್ರ ಸಚಿವೆ..!

ಬಿಎಸ್6 ಮಾಲಿನ್ಯ ನಿಯಮಗಳಿಗೆ ತಕ್ಕಂತೆ ವಾಹನಗಳನ್ನು ಅಭಿವೃದ್ಧಿಪಡಿಸುತ್ತಿರುವುದು ಹಾಗೂ ವಾಹನಗಳ ನೋಂದಣಿ ಶುಲ್ಕವನ್ನು ಹೆಚ್ಚಿಸುವ ಪ್ರಸ್ತಾಪಗಳೂ ಸಹ ಕುಸಿತಕ್ಕೆ ಕಾರಣವಾಗಿವೆ. ಉದ್ಯಮದ ಚೇತರಿಕೆಗೆ ಅಗತ್ಯವಾದ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದೂ ಸಹ ಸಚಿವರು ತಿಳಿಸಿದರು.

ಆಟೋ ಉದ್ಯಮ ಕುಸಿತಕ್ಕೆ ಹೊಸ ಕಾರಣ ಕೊಟ್ಟ ಕೇಂದ್ರ ಸಚಿವೆ..!

ಇನ್ನು ದೇಶದ ಆಟೋಮೊಬೈಲ್ ಉದ್ಯಮದ ಬಗ್ಗೆ ಹೇಳುವುದಾದರೆ, ಮಾರಾಟವು ಸತತ ಹತ್ತನೇ ತಿಂಗಳೂ ಸಹ ಕುಸಿತವನ್ನು ಕಂಡಿದೆ. ಪ್ಯಾಸೆಂಜರ್ ವೆಹಿಕಲ್ ಸೆಗ್‍‍ಮೆಂಟಿನ ಮಾರಾಟವು ಆಗಸ್ಟ್‌ನಲ್ಲಿ 30.9%ಕ್ಕೆ ಕುಸಿದು, 1,95,558 ವಾಹನಗಳ ಮಾರಾಟವಾಗಿದೆ. ಈ ಮಾರಾಟ ಪ್ರಮಾಣವು 2018ರ ಆಗಸ್ಟ್ ನಲ್ಲಿ 2,82,809 ಯುನಿಟ್‌ಗಳಷ್ಟಿತ್ತು.

ಆಟೋ ಉದ್ಯಮ ಕುಸಿತಕ್ಕೆ ಹೊಸ ಕಾರಣ ಕೊಟ್ಟ ಕೇಂದ್ರ ಸಚಿವೆ..!

ವರ್ಷದ ಮಾರಾಟಕ್ಕೆ ಹೋಲಿಸಿದರೆ, ಭಾರತದ ಅತಿದೊಡ್ಡ ಕಾರು ತಯಾರಕ ಮಾರುತಿ ಸುಜುಕಿ ಕಂಪನಿಯು ಕಳೆದ ವರ್ಷಕ್ಕೆ ಹೋಲಿಸಿದರೆ 36%ನಷ್ಟು ಕುಸಿತ ಕಂಡಿದೆ. ಕಳೆದ ವರ್ಷ 1,45,624 ವಾಹನಗಳ ಮಾರಾಟವಾಗಿದ್ದರೆ, ಈ ವರ್ಷ 39,173 ವಾಹನಗಳ ಮಾರಾಟವಾಗಿದೆ.

ಆಟೋ ಉದ್ಯಮ ಕುಸಿತಕ್ಕೆ ಹೊಸ ಕಾರಣ ಕೊಟ್ಟ ಕೇಂದ್ರ ಸಚಿವೆ..!

ಎಲ್ಲಾ ಕಂಪನಿಗಳಿಗಿಂತ ಹೆಚ್ಚಿನ ಪ್ರಮಾಣದ ಕುಸಿತವನ್ನು ಕಂಡಿರುವುದು ಟಾಟಾ ಮೋಟಾರ್ಸ್‌ ಕಂಪನಿ. ಈ ಕಂಪನಿಯು 2019ರ ಆಗಸ್ಟ್‌ ತಿಂಗಳಿನಲ್ಲಿ 60%ನಷ್ಟು ಕುಸಿತ ಕಂಡಿದೆ. ಕಳೆದ ವರ್ಷ 18,420 ವಾಹನಗಳ ಮಾರಾಟವಾಗಿದ್ದರೆ ಈ ವರ್ಷ ಕೇವಲ 7,316 ವಾಹನಗಳ ಮಾರಾಟವಾಗಿದೆ.

MOST READ: ಹೆಲ್ಮೆಟ್‍ ಹಾಕದ ಕಾರು ಚಾಲಕನಿಗೆ ಬಿತ್ತು ದಂಡ..!

ಆಟೋ ಉದ್ಯಮ ಕುಸಿತಕ್ಕೆ ಹೊಸ ಕಾರಣ ಕೊಟ್ಟ ಕೇಂದ್ರ ಸಚಿವೆ..!

ಕಳೆದ ವರ್ಷದ ಪರ್ಫಾಮೆನ್ಸ್ ಗೆ ಹೋಲಿಸಿದರೆ, ಸ್ಕೋಡಾ ಕಂಪನಿಯು 12.5%ನಷ್ಟು ಕಡಿಮೆ ಪ್ರಮಾಣದ ಕುಸಿತವನ್ನು ಕಂಡಿದೆ. 2018ರಲ್ಲಿ ಸ್ಕೋಡಾ ಕಂಪನಿಯು 1,330 ವಾಹನಗಳನ್ನು ಮಾರಾಟ ಮಾಡಿದ್ದರೆ, ಈ ವರ್ಷ 1,164 ವಾಹನಗಳನ್ನು ಮಾರಾಟ ಮಾಡಿದೆ.

MOST READ: ಪೆಟ್ರೋಲ್, ಡೀಸೆಲ್ ಮಾರಾಟಕ್ಕೂ ಹೊಡೆತ ಕೊಟ್ಟ ಹೊಸ ಟ್ರಾಫಿಕ್ ರೂಲ್ಸ್

ಆಟೋ ಉದ್ಯಮ ಕುಸಿತಕ್ಕೆ ಹೊಸ ಕಾರಣ ಕೊಟ್ಟ ಕೇಂದ್ರ ಸಚಿವೆ..!

ಕೊರಿಯಾ ಮೂಲದ ಹ್ಯುಂಡೈ ಕಳೆದ ವರ್ಷಕ್ಕಿಂತ 17%ನಷ್ಟು ನಷ್ಟ ಅನುಭವಿಸಿದೆ. ಕಳೆದ ವರ್ಷ 45,801 ವಾಹನಗಳನ್ನು ಮಾರಾಟ ಮಾಡಿದ್ದರೆ, ಈ ವರ್ಷ 13,150 ವಾಹನಗಳನ್ನು ಮಾರಾಟ ಮಾಡಲಾಗಿದೆ.

MOST READ: ಚಪ್ಪಲಿ, ಲುಂಗಿ, ಬನಿಯನ್ ಧರಿಸಿದರೂ ಬೀಳಲಿದೆ ದಂಡ..!

ಆಟೋ ಉದ್ಯಮ ಕುಸಿತಕ್ಕೆ ಹೊಸ ಕಾರಣ ಕೊಟ್ಟ ಕೇಂದ್ರ ಸಚಿವೆ..!

ಹೋಂಡಾ ಕಂಪನಿಯೂ ಸಹ ಕಳೆದ ವರ್ಷಕ್ಕೆ ಹೋಲಿಸಿದರೆ 51.3%ರಷ್ಟು ನಷ್ಟವನ್ನು ಅನುಭವಿಸಿದೆ. ನಿಸ್ಸಾನ್ ಹಾಗೂ ಫಿಯೆಟ್ ಕಂಪನಿಗಳು ಕ್ರಮವಾಗಿ 54.5% ಹಾಗೂ 56.5%ನಷ್ಟು ಕುಸಿತವನ್ನು ಅನುಭವಿಸಿವೆ. ಈ ವರ್ಷ ರೆನಾಲ್ಟ್ ಕಂಪನಿಯ ಮಾರಾಟವು 13.1%ನಷ್ಟು ಕುಸಿದಿದ್ದರೆ, ಟೊಯೊಟಾ ಕಂಪನಿಯ ಮಾರಾಟವು 24.3%ನಷ್ಟು ಕುಸಿದಿದೆ.

ಆಟೋ ಉದ್ಯಮ ಕುಸಿತಕ್ಕೆ ಹೊಸ ಕಾರಣ ಕೊಟ್ಟ ಕೇಂದ್ರ ಸಚಿವೆ..!

ವಿವಿಧ ಸೆಗ್‍‍ಮೆಂಟ್‍‍ಗಳಲ್ಲಿನ ವಾಹನ ಮಾರಾಟವು 2018ರ ಜುಲೈ ತಿಂಗಳಿನಲ್ಲಿ ವಾಹನಗಳ ಮಾರಾಟವು 22,45,223 ಯುನಿಟ್‌ಗಳಾಗಿತ್ತು. ಈ ಪ್ರಮಾಣವು 2019ರ ಆಗಸ್ಟ್ ತಿಂಗಳಿನಲ್ಲಿ 18.71%ನಷ್ಟು ಕುಸಿದು 18,25,148 ಯುನಿಟ್‍‍ಗಳಿಗೆ ಇಳಿದಿದೆ. ಆಗಸ್ಟ್ ತಿಂಗಳಿನಲ್ಲಿ ಎಲ್ಲಾ ಸೆಗ್‍‍ಮೆಂಟ್‍‍ಗಳ ವಾಹನ ಮಾರಾಟವು ಕುಸಿದಿದೆ.

Most Read Articles

Kannada
English summary
Millennials Prefer Ola, Uber to New Cars: Nirmala Sitharaman On Auto Sector Slowdown - Read in kannada
Story first published: Wednesday, September 11, 2019, 16:38 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X