ಗ್ರಾಹಕನಿಗೆ ಮೋಸ ಮಾಡಿದ ಕಾರ್ ಡೀಲರ್‍‍ಗೆ 55 ಸಾವಿರ ದಂಡ

ಚಂಡೀಗಢದ ಜಿಲ್ಲಾ ಗ್ರಾಹಕ ನ್ಯಾಯಾಲಯವು ಚಂಡೀಗಢದಲ್ಲಿರುವ ಡೈನಾಮಿಕ್ ಮೋಟಾರ್ಸ್‍‍ಗೆ, ವಾರಂಟಿ ಅವಧಿಯಲ್ಲಿರುವ ವಾಹನದ ರಿಪೇರಿಗೆ ಶುಲ್ಕವನ್ನು ವಸೂಲಿ ಮಾಡಿದ ಕಾರಣಕ್ಕೆ ರೂ.55,000 ದಂಡ ವಿಧಿಸಿದೆ. ಈ ಹಣವನ್ನು ಗ್ರಾಹಕರಿಗೆ ಪರಿಹಾರದ ರೂಪದಲ್ಲಿ ನೀಡಲು ಆದೇಶಿಸಿದೆ.

ಗ್ರಾಹಕನಿಗೆ ಮೋಸ ಮಾಡಿದ ಕಾರ್ ಡೀಲರ್‍‍ಗೆ 55 ಸಾವಿರ ದಂಡ

ಇದರ ಜೊತೆಗೆ ವಾಹನಕ್ಕೆ ಯಾವುದೇ ಶುಲ್ಕ ವಿಧಿಸದೆ ರಿಪೇರಿ ಮಾಡಲು ಆದೇಶಿಸಿದೆ. ದೂರುದಾರರಾದ ಸೆಕ್ಟರ್ 26ರ ನಿವಾಸಿ ಪರ್‍‍ಭಾತ್ ಸಿಂಗ್‍‍ರವರು ದಿನಾಂಕ 2012ರ ಫೆಬ್ರವರಿ 9ರಂದು ಈ ಡೀಲರ್‍‍ರವರಿಂದ ಶೆವ್ರೊಲೆಟ್ ಬೀಟ್ ಕಾರ್ ಅನ್ನು ಖರೀದಿಸಿದ್ದರು. ಈ ಕಾರಿಗೆ ಮೂರು ವರ್ಷ ಅಥವಾ 1,00,000 ಕಿ.ಮೀಗಳ ವಾರಂಟಿ ನೀಡಲಾಗಿತ್ತು. ಈ ಕಾರಿನ ಮೊದಲ ಸರ್ವಿಸ್ ಅನ್ನು ಕಾರು 5,188 ಕಿ.ಮೀ ಚಲಿಸಿದ್ದಾಗ, 2012ರ ಏಪ್ರಿಲ್ 14ರಂದು ಮಾಡಲಾಗಿತ್ತು.

ಗ್ರಾಹಕನಿಗೆ ಮೋಸ ಮಾಡಿದ ಕಾರ್ ಡೀಲರ್‍‍ಗೆ 55 ಸಾವಿರ ದಂಡ

10,034 ಕಿ.ಮೀ ಚಲಿಸಿದ್ದಾಗ 2012ರ ಜುಲೈ 5ರಂದು ಎರಡನೇ ಸರ್ವಿಸ್ ಮಾಡಲಾಗಿತ್ತು. 2012ರ ಸೆಪ್ಟೆಂಬರ್ 10ರಂದು ಕಾರನ್ನು ಸರ್ವಿಸ್‍‍ಗೆ ತೆಗೆದುಕೊಂಡು ಹೋದಾಗ, ಡೀಲರ್‍‍ಗಳು ಈ ಕಾರಿನಲ್ಲಿ ತೊಂದರೆಯಿದೆ ಎಂದು ತಿಳಿಸಿ, ರಿಪೇರಿ ಖರ್ಚಿಗಾಗಿ ರೂ.6,548 ಪಡೆದರು.

ಗ್ರಾಹಕನಿಗೆ ಮೋಸ ಮಾಡಿದ ಕಾರ್ ಡೀಲರ್‍‍ಗೆ 55 ಸಾವಿರ ದಂಡ

ಇದಾದ ನಂತರವೂ ಪದೇ ಪದೇ ಕಾರನ್ನು ರಿಪೇರಿ ಮಾಡಿ, ಹಣ ಪಡೆದಿದ್ದಾರೆ. ಈ ರೀತಿ ರಿಪೇರಿಗಾಗಿ ಹಣ ಪಡೆದಾಗ ಕಾರಿನ ವಾರಂಟಿ ಅವಧಿ ಇನ್ನೂ ಮುಗಿದಿರಲಿಲ್ಲ. 2013ರ ಡಿಸೆಂಬರ್ 12ರಂದು ದೂರುದಾರರು ಹಮೀರ್‍‍ಪುರದಿಂದ ಚಂಡೀಗಢಕ್ಕೆ ಹೋಗುತ್ತಿದ್ದಾಗ ಕಾರು ಮಧ್ಯ ದಾರಿಯಲ್ಲಿ ಕೆಟ್ಟು ನಿಂತಿತ್ತು.

ಗ್ರಾಹಕನಿಗೆ ಮೋಸ ಮಾಡಿದ ಕಾರ್ ಡೀಲರ್‍‍ಗೆ 55 ಸಾವಿರ ದಂಡ

ಹತ್ತಿರದಲ್ಲಿಯೇ ಇದ್ದ ಮೆಕಾನಿಕ್ ಬಳಿ ಕಾರನ್ನು ಕೊಂಡೊಯ್ದು, ರೂ.27,000 ಕೊಟ್ಟು ರಿಪೇರಿ ಮಾಡಿಸಿದ್ದರು. ಕಾರನ್ನು ಪುನಃ ಡೈನಾಮಿಕ್ ಮೋಟಾರ್ಸ್ ಬಳಿ ತೆಗೆದುಕೊಂಡು ಹೋದಾಗ, ಕಾರು ಇನ್ನೂ ವಾರಂಟಿಯಲ್ಲಿದ್ದರೂ ರಿಪೇರಿ ಖರ್ಚೆಂದು ರೂ.55,075 ಪಡೆದಿದ್ದರು. ಆದರೆ ಹಣವನ್ನು ಏಕೆ ಪಡೆಯಲಾಗುತ್ತಿದೆ ಎಂಬುದನ್ನು ಡೀಲರ್ ತಿಳಿಸಲಿಲ್ಲ. ಕಾರಿನ ಉತ್ಪಾದನೆಯಲ್ಲಿಯೇ ದೋಷವಿರುವ ಕಾರಣ ದೂರುದಾರರು ವಾಹನವನ್ನು ಹಿಂದಕ್ಕೆ ಪಡೆದು ಬೇರೆ ಕಾರನ್ನು ನೀಡುವಂತೆ ಮನವಿ ಮಾಡಿಕೊಂಡರು. ಈ ಮನವಿಯನ್ನು ಡೀಲರ್ ಒಪ್ಪಲಿಲ್ಲ.

ಗ್ರಾಹಕನಿಗೆ ಮೋಸ ಮಾಡಿದ ಕಾರ್ ಡೀಲರ್‍‍ಗೆ 55 ಸಾವಿರ ದಂಡ

ಆದ ಕಾರಣ ಪರ್‍‍ಭಾತ್ ಸಿಂಗ್‍‍ರವರು ಗ್ರಾಹಕ ನ್ಯಾಯಾಲಯದ ಮೊರೆ ಹೋದರು. ಡೀಲರ್‍‍ರವರು ಕಾರು 40,147 ಕಿ.ಮೀ ಚಲಿಸಿದ್ದು, ಕಾಲ ಕಾಲಕ್ಕೆ ಸರಿಯಾಗಿ ಸರ್ವಿಸ್ ಮಾಡಿಸದ ಕಾರಣಕ್ಕೆ ಹೀಗಾಗಿದೆ, ಅದನ್ನು ಸರಿಪಡಿಸಲು ರೂ.55,075 ಪಡೆಯಲಾಗಿದೆ. ಕಾರನ್ನು 2013ರ ನವೆಂಬರ್ 30ರಂದು ಪೂರ್ತಿಯಾಗಿ ರಿಪೇರಿ ಮಾಡಲಾಗಿದೆ ಎಂದು ವಾದಿಸಿದರು.

MOST READ: ಅನಾವರಣಗೊಂಡ ದೇಶದ ಮೊದಲ ಎಲೆಕ್ಟ್ರಿಕ್ ಬೈಕ್

ಗ್ರಾಹಕನಿಗೆ ಮೋಸ ಮಾಡಿದ ಕಾರ್ ಡೀಲರ್‍‍ಗೆ 55 ಸಾವಿರ ದಂಡ

ದೂರುದಾರರು ರಿಪೇರಿಯಾದ ನಂತರ ತಮ್ಮ ಕಾರನ್ನು ಪಡೆಯದೇ ಇರುವ ಕಾರಣಕ್ಕೆ ಪ್ರತಿ ದಿನಕ್ಕೆ ರೂ.250 ಪಾರ್ಕಿಂಗ್ ಚಾರ್ಜ್ ನೀಡಬೇಕೆಂದು ವಾದಿಸಿದರು. ಈ ದೂರನ್ನು ತಡವಾಗಿ ದಾಖಲಿಸಿರುವ ಕಾರಣ ಈ ದೂರನ್ನು ಮಾನ್ಯ ಮಾಡಬಾರದೆಂದು ಗ್ರಾಹಕ ನ್ಯಾಯಾಲಯವನ್ನು ಕೋರಿದ್ದರು.

MOST READ: ಹೊಸ ಎಂಜಿನ್‍ನೊಂದಿಗೆ ಬರಲಿವೆ ವೆಸ್ಪಾ ಸ್ಕೂಟರ್‍‍ಗಳು

ಗ್ರಾಹಕನಿಗೆ ಮೋಸ ಮಾಡಿದ ಕಾರ್ ಡೀಲರ್‍‍ಗೆ 55 ಸಾವಿರ ದಂಡ

ಎರಡೂ ಕಡೆಯ ವಾದ ಪ್ರತಿವಾದ ಆಲಿಸಿದ ಗ್ರಾಹಕ ನ್ಯಾಯಾಲಯವು ಕಾರನ್ನು 2012ರ ಫೆಬ್ರವರಿ 9 ರಂದು ಖರೀದಿಸಲಾಗಿದ್ದು, ಕೊನೆಯ ಬಿಲ್ ಅನ್ನು 2014ರ ಫೆಬ್ರವರಿ 9 ರಂದು ನೀಡಲಾಗಿದೆ. ಕಾರು 1,00,000 ಕಿ.ಮೀ ಚಲಿಸಿಲ್ಲ. ಕಾರಿಗೆ ಮೂರು ವರ್ಷಗಳ ಅವಧಿಯ ವಾರಂಟಿ ನೀಡಲಾಗಿದ್ದು, ಎರಡು ವರ್ಷಗಳು ಮಾತ್ರ ಮುಗಿದಿವೆ. ಡೀಲರ್ ವಾರಂಟಿಯ ಷರತ್ತುಗಳನ್ನು ಉಲ್ಲಂಘಿಸಿದ್ದಾರೆ ಎಂದು ಅಭಿಪ್ರಾಯ ಪಟ್ಟಿತು.

MOST READ: ಡಜನ್ ಕಾರುಗಳನ್ನು ಬಿಡುಗಡೆಗೊಳಿಸಲಿದೆ ಟೊಯೊಟಾ

ಗ್ರಾಹಕನಿಗೆ ಮೋಸ ಮಾಡಿದ ಕಾರ್ ಡೀಲರ್‍‍ಗೆ 55 ಸಾವಿರ ದಂಡ

ವಾರಂಟಿಯ ಅವಧಿಯಲ್ಲಿರುವ ಕಾರಣ ಡೀಲರ್ ನೀಡಿರುವ ರೂ.55,075 ಬಿಲ್ ಸರಿಯಾದುದಲ್ಲ. ಡೀಲರ್‍‍ರವರು ನೀಡಿರುವ ಸೇವೆಯಲ್ಲಿ ಲೋಪವಿರುವುದು ಕಂಡು ಬಂದಿದೆ. ಪದೇ ಪದೇ ರಿಪೇರಿ ಮಾಡಿಸಿ, ಬಿಲ್‍‍ಗಳನ್ನು ಪಾವತಿಸಿರುವುದರಿಂದ ದೂರುದಾರರಿಗೆ ಮಾನಸಿಕ ಹಿಂಸೆಯಾಗಿರುತ್ತದೆ. ಆದ್ದರಿಂದ ಗ್ರಾಹಕರಿಗೆ ಪರಿಹಾರ ನೀಡಿ, ಯಾವುದೇ ಶುಲ್ಕ ಪಡೆಯದೇ ಕಾರಿನ ರಿಪೇರಿ ಮಾಡಬೇಕೆಂದು ಡೀಲರ್‍‍ಗೆ ಆದೇಶಿಸಿತು.

Source: ET Auto

Most Read Articles

Kannada
English summary
Firm fined Rs 55,000 for taking money for repairing car under warranty period - Read in kannada
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X