ಅನಾವರಣವಾಯ್ತು ಭಾರತದ ಮೊದಲ ಎಲೆಕ್ಟ್ರಿಕ್ ಟ್ರಕ್

ಇನ್ಫ್ರಾ ಪ್ರೈಮ್ ಲಾಜಿಸ್ಟಿಕ್ಸ್ ಟೆಕ್ನಾಲಜೀಸ್ (ಐ‍‍ಪಿ‍ಎಲ್‍‍ಟಿ) ರೈನೊ 5536 ಎಲೆಕ್ಟ್ರಿಕ್ ಟ್ರಕ್ ಅನ್ನು ಭಾರತದಲ್ಲಿ ಅನಾವರಣಗೊಳಿಸಿದೆ. ಐ‍‍ಪಿ‍ಎಲ್‍‍ಟಿ ರೈನೊ 5536 ಎಲೆಕ್ಟ್ರಿಕ್ ಟ್ರಕ್ ಅನ್ನು ದೇಶಿಯ ಮಾರುಕಟ್ಟೆಯಲ್ಲಿ 2020ರಲ್ಲಿ ಬಿಡುಗಡೆಗೊಳಿಸಲಾಗುವುದು. ಈ ಟ್ರಕ್ ಅನ್ನು ನಿರ್ಮಾಣ ಹಾಗೂ ಗಣಿಗಾರಿಕೆ ಉದ್ಯಮವನ್ನು ಗುರಿಯಾಗಿಟ್ಟುಕೊಂಡು ಅಭಿವೃದ್ಧಿಪಡಿಸಲಾಗಿದೆ.

ಅನಾವರಣವಾಯ್ತು ಭಾರತದ ಮೊದಲ ಎಲೆಕ್ಟ್ರಿಕ್ ಟ್ರಕ್

ಐ‍‍ಪಿಎಲ್‍‍ಟಿಯ ಪ್ರಕಾರ, ರೈನೊ 5536 ಟ್ರಕ್ ಅನ್ನು ನಿರ್ಮಾಣ ಹಾಗೂ ಗಣಿ ಉದ್ಯಮದಲ್ಲಿನ ಸಣ್ಣ ಪ್ರಮಾಣದ ಸಂಚಾರಕ್ಕಾಗಿ ಬಳಸಿಕೊಳ್ಳಬಹುದಾಗಿದೆ. ಗುರುಗ್ರಾಮ ಮೂಲದ ಐ‍‍ಪಿ‍ಎಲ್‍‍ಟಿ, ಸಂಚಾರಿ ಸೇವೆಗಳನ್ನು ನೀಡುವುದಕ್ಕೆ ಖ್ಯಾತಿಯನ್ನು ಪಡೆದಿದೆ. ಈ ಕಂಪನಿಯು ಈಗ ಟ್ರಕುಗಳನ್ನು ತಯಾರಿಸಿ ಮಾರಾಟ ಮಾಡಲು ಮುಂದಾಗಿದೆ. ರೈನೊ 5536 ಹೆಸರಿನಲ್ಲಿ ಟ್ರಕ್‍‍ಗಳನ್ನು ಅಭಿವೃದ್ಧಿಪಡಿಸಿ ಮಾರಾಟ ಮಾಡಲಿದೆ. ಭಾರತದ ಟ್ರಕ್ ಇತಿಹಾಸದಲ್ಲಿ ಇದೊಂದು ಐತಿಹಾಸಿಕ ಹೆಜ್ಜೆಯಾಗಿದೆ.

ಅನಾವರಣವಾಯ್ತು ಭಾರತದ ಮೊದಲ ಎಲೆಕ್ಟ್ರಿಕ್ ಟ್ರಕ್

ಎಲೆಕ್ಟ್ರಿಕ್ ವಾಹನಗಳ ಉದ್ಯಮವು ಭಾರತದಲ್ಲಿ ವ್ಯಾಪಕವಾಗಿ ಬೆಳವಣಿಗೆಯನ್ನು ಕಾಣುತ್ತಿದೆ. ಆದರೆ ಈ ಬೆಳವಣಿಗೆಯು ದ್ವಿಚಕ್ರ, ತ್ರಿಚಕ್ರ ಹಾಗೂ ನಾಲ್ಕು ಚಕ್ರದ ವಾಹನಗಳಿಗೆ ಮಾತ್ರ ಸೀಮಿತವಾಗಿದೆ. ಕಮರ್ಷಿಯಲ್ ಎಲೆಕ್ಟ್ರಿಕ್ ವಾಹನಗಳನ್ನು ಅಭಿವೃದ್ಧಿ ಪಡಿಸಲಾಗುತ್ತಿದ್ದರೂ ಅವು ಲೈಟ್ ಕಮರ್ಷಿಯಲ್ ವಾಹನಗಳಿಗೆ ಮಾತ್ರ ಸೀಮಿತವಾಗಿವೆ. ಯುರೋಪ್‍‍ನಲ್ಲಿ ಮರ್ಸಿಡಿಸ್-ಬೆಂಝ್, ವೊಲ್ವೋ, ಸ್ಕಾನಿಯಾದಂತಹ ಕಂಪನಿಗಳು ಈಗಾಗಲೇ ಎಲೆಕ್ಟ್ರಿಕ್ ಟ್ರಕ್‍‍ಗಳನ್ನು ಅಭಿವೃದ್ಧಿಪಡಿಸಿ ಮಾರಾಟ ಮಾಡುತ್ತಿವೆ.

ಅನಾವರಣವಾಯ್ತು ಭಾರತದ ಮೊದಲ ಎಲೆಕ್ಟ್ರಿಕ್ ಟ್ರಕ್

ಆದರೆ ಭಾರತದ ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ಟ್ರಕ್‍‍ಗಳ ಸೆಗ್‍‍ಮೆಂಟಿನಲ್ಲಿ ಅಂತಹ ಬೆಳವಣಿಗೆಗಳಾಗಿಲ್ಲ. ಮಹೀಂದ್ರಾ, ಟಾಟಾ ಮೋಟಾರ್ಸ್, ಬಿ‍‍ವೈಡಿ, ವೊಲ್ವೊ ಮುಂತಾದ ಕಂಪನಿಗಳು ಎಲೆಕ್ಟ್ರಿಕ್ ಬಸ್ಸುಗಳನ್ನು ಬಿಡುಗಡೆಗೊಳಿಸಿದ್ದರೂ, ಇದುವರೆಗೂ ಯಾವ ಕಂಪನಿಯು ಎಲೆಕ್ಟ್ರಿಕ್ ಟ್ರಕ್‍‍ಗಳನ್ನು ಬಿಡುಗಡೆಗೊಳಿಸಿಲ್ಲ. ಈ ಎಲ್ಲಾ ಸಂಗತಿಗಳನ್ನು ಪರಿಗಣಿಸಿದರೆ, ಐ‍‍ಪಿಎಲ್‍‍ಟಿ ರೈನೊ 5536 ಟ್ರಕ್ ಅನ್ನು ಅನಾವರಣಗೊಳಿಸಿ ಮಹತ್ವದ ಹೆಜ್ಜೆಯನ್ನಿಟ್ಟಿದೆ.

ಅನಾವರಣವಾಯ್ತು ಭಾರತದ ಮೊದಲ ಎಲೆಕ್ಟ್ರಿಕ್ ಟ್ರಕ್

ಇ‍‍ಟಿಆಟೊ ವೀಡಿಯೊದಲ್ಲಿರುವಂತೆ ಐಪಿ‍ಎಲ್‍‍ಟಿ ರೈನೊ 5536 ಟ್ರಕ್ ಅಭಿವೃದ್ಧಿಯ ಕೊನೆ ಹಂತದಲ್ಲಿದೆ. ಬಿಡುಗಡೆಗೊಳಿಸುವ ಮೊದಲು ಈ ಟ್ರಕ್ ಅನ್ನು ಪರೀಕ್ಷಾರ್ಥಾವಾಗಿ ಚಾಲನೆ ಮಾಡಲಾಗುವುದು. ವಿನ್ಯಾಸದ ಕಾರಣಕ್ಕಾಗಿ ಈ ಟ್ರಕ್ ಅನ್ನು ಅಭಿವೃದ್ಧಿ ಪಡಿಸುತ್ತಿರುವ ವಿಷಯವನ್ನು ಗುಟ್ಟಾಗಿಡಲಾಗಿತ್ತು. ಈ ಟ್ರಕ್ ಅನ್ನು ನೋಡಿದ ತಕ್ಷಣ ಭಾರತದ ರಸ್ತೆಗಳಲ್ಲಿ ಕಂಡು ಬರುವ ಟಾಟಾ ಎಲ್‍‍ಪಿಟಿ 2518 ಟ್ರಾಕ್ಟರ್ ಟ್ರೇಲರ್ ಟ್ರಕ್ ಅನ್ನು ನೋಡಿದಂತಾಗುತ್ತದೆ.

ಅನಾವರಣವಾಯ್ತು ಭಾರತದ ಮೊದಲ ಎಲೆಕ್ಟ್ರಿಕ್ ಟ್ರಕ್

ರೈನೊ 5536 ಟ್ರಕ್ ಅನ್ನು ಈ ಟ್ರಕ್ಕಿನ ಆಧಾರದ ಮೇಲೆ ಅಭಿವೃದ್ಧಿಪಡಿಸಲಾಗಿದೆಯೆಂದು ಹೇಳಲಾಗುತ್ತಿದೆಯಾದರೂ ಇದರ ಬಗ್ಗೆ ಖಚಿತವಾಗಿಲ್ಲ. ಐಪಿ‍ಎಲ್‍‍ಟಿ ರೈನೊ 5536 ಟ್ರಕ್‍‍ನಲ್ಲಿ ಅಳವಡಿಸಲಾಗಿರುವ 276 ಕಿ.ವ್ಯಾ ಬ್ಯಾಟರಿ 483 ಬಿ‍‍ಹೆಚ್‍‍ಪಿ ಪವರ್ ಉತ್ಪಾದಿಸುತ್ತದೆ.

ಅನಾವರಣವಾಯ್ತು ಭಾರತದ ಮೊದಲ ಎಲೆಕ್ಟ್ರಿಕ್ ಟ್ರಕ್

ಟಾರ್ಕ್ ಉತ್ಪಾದನೆಯ ಬಗ್ಗೆ ಖಚಿತ ಮಾಹಿತಿಯನ್ನು ನೀಡಲಾಗಿಲ್ಲ. ಆದರೆ ಈ ಬ್ಯಾಟರಿಯು ಹೆಚ್ಚಿನ ಪ್ರಮಾಣದ ಟಾರ್ಕ್ ಉತ್ಪಾದಿಸುವ ಸಾಧ್ಯತೆಗಳಿವೆ. ಐಪಿ‍ಎಲ್‍‍ಟಿ ಕಂಪನಿಯ ಪ್ರಕಾರ ರೈನೊ 5536 ಟ್ರಕ್‍‍ನ ಟಾಪ್ ಸ್ಪೀಡ್ ಪ್ರತಿ ಗಂಟೆಗೆ 90 ಕಿ.ಮೀಗಳಾಗಿರಲಿದೆ. ಇದರಲ್ಲಿರುವ ಲೋಡ್‍‍ನ ಆಧಾರದ ಮೇಲೆ ಬ್ಯಾಟರಿಯನ್ನು ಪೂರ್ತಿಯಾಗಿ ಚಾರ್ಜ್ ಮಾಡಿದಾಗ 200 - 300 ಕಿ.ಮೀವರೆಗೂ ಚಲಿಸಲಿದೆ.

ಅನಾವರಣವಾಯ್ತು ಭಾರತದ ಮೊದಲ ಎಲೆಕ್ಟ್ರಿಕ್ ಟ್ರಕ್

160 ಕಿ.ವ್ಯಾ ಫಾಸ್ಟ್ ಚಾರ್ಜರ್ ಬಳಸಿದರೆ ಬ್ಯಾಟರಿಯನ್ನು 90 ನಿಮಿಷಗಳಲ್ಲಿ ಪೂರ್ತಿಯಾಗಿ ಚಾರ್ಜ್ ಮಾಡಬಹುದು. ಕಂಪನಿಯು ಫಾಸ್ಟ್ ಚಾರ್ಜರ್‍‍ಗಳನ್ನು ಅಭಿವೃದ್ಧಿಪಡಿಸಲು ಪ್ರತ್ಯೇಕವಾದ ಎಂಜಿನಿಯರ್‍‍ಗಳ ತಂಡವನ್ನು ಹೊಂದಿದೆ. ಐ‍‍ಪಿ‍ಎಲ್‍‍ಟಿಯ ಫಾಸ್ಟ್ ಚಾರ್ಜರ್‍‍ಗಳನ್ನು ಯುನಿವರ್ಸಲ್ ಸ್ಟಾಂಡರ್ಡ್‍‍ಗಳಿಗೆ ತಕ್ಕಂತೆ ಅಭಿವೃದ್ಧಿಪಡಿಸಲಾಗಿದೆ.

ಅನಾವರಣವಾಯ್ತು ಭಾರತದ ಮೊದಲ ಎಲೆಕ್ಟ್ರಿಕ್ ಟ್ರಕ್

ಈ ಚಾರ್ಜರ್‍‍ಗಳಿಂದ ಬೇರೆ ಎಲೆಕ್ಟ್ರಿಕ್ ಟ್ರಕ್‍‍‍ನ ಬ್ಯಾಟರಿಗಳನ್ನು ಸಹ ಚಾರ್ಜ್ ಮಾಡಬಹುದು. ಫರೀದಾಬಾದ್‍‍ನಲ್ಲಿರುವ ಕಂಪನಿಯ ಉತ್ಪಾದನಾ ಘಟಕದಲ್ಲಿ 2020ರ ಜನವರಿಯಿಂದ ಈ ಟ್ರಕ್‍‍ಗಳ ಉತ್ಪಾದನೆಯನ್ನು ಶುರುಮಾಡಲಾಗುವುದು. ಕಂಪನಿಯು ಮೊದಲನೇ ವರ್ಷ 1,000ಕ್ಕೂ ಹೆಚ್ಚು ಟ್ರಕ್‍‍ಗಳನ್ನು ಮಾರಾಟ ಮಾಡುವ ಗುರಿಯನ್ನಿಟ್ಟುಕೊಂಡಿದೆ. ಈ ಟ್ರಕ್‍‍ನ ಬೆಲೆಗಳ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ.

ಅನಾವರಣವಾಯ್ತು ಭಾರತದ ಮೊದಲ ಎಲೆಕ್ಟ್ರಿಕ್ ಟ್ರಕ್

ಡ್ರೈವ್‍‍ಸ್ಪಾರ್ಕ್ ಅಭಿಪ್ರಾಯ

ಮೇಕ್ ಇನ್ ಇಂಡಿಯಾ ಅಭಿಯಾನದ ಅಂಗವಾಗಿ ಈ ಎಲೆಕ್ಟ್ರಿಕ್ ಟ್ರಕ್ ಅನ್ನು ಭಾರತದಲ್ಲಿ ಅಭಿವೃದ್ಧಿಪಡಿಸಲಾಗಿದೆ. ಐ‍‍ಪಿ‍ಎಲ್‍‍ಟಿ ಕಂಪನಿಯ ಬಗ್ಗೆ ಹೆಚ್ಚಿನ ಜನರಿಗೆ ತಿಳಿದಿಲ್ಲ. ಆದರೆ ಬೇರೆ ಕಂಪನಿಗಳಿಗಿಂತ ಮೊದಲೇ ಎಲೆಕ್ಟ್ರಿಕ್ ಟ್ರಕ್ ಅನ್ನು ದೇಶಿಯ ಮಾರುಕಟ್ಟೆಗಾಗಿ ಅಭಿವೃದ್ಧಿ ಪಡಿಸಿದೆ. ಇದಕ್ಕೆ ಕಂಪನಿಗೆ ಅಭಿನಂದನೆಗಳನ್ನು ಸಲ್ಲಿಸಲೇ ಬೇಕು. ಈ ಎಲೆಕ್ಟ್ರಿಕ್ ಟ್ರಕ್ ಭಾರತದಲ್ಲಿ ಬಿಡುಗಡೆಯಾದ ನಂತರ ಕ್ರಾಂತಿಕಾರಕ ಬೆಳವಣಿಗೆಗೆ ಸಾಕ್ಷಿಯಾಗಲಿದೆ.

Most Read Articles

Kannada
English summary
First Electric Truck In India Revealed: IPLT Rhino 5536 Performance, Range & Features. Read in kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X