ಮರು ಜೀವ ಪಡೆಯುತ್ತಿರುವ ಭಾರತದ ಮೊದಲ ಮಾರುತಿ 800 ಕಾರು. ಈಗ ಹೇಗಿದೆ ನೀವೆ ನೋಡಿ

ಡಿಐಎ 6479 ಇದೊಂದು ಐತಿಹಾಸಿಕ ನಂಬರ್ ಪ್ಲೇಟ್. ಈ ನಂಬರ್ ಪ್ಲೇಟ್‍ನಲ್ಲಿ ಏನಿದೆ ಅಂತಹ ಸ್ಪೆಷಾಲಿಟಿ ಎಂದು ಕೇಳಿದರೆ. ಅದಕ್ಕೆ ನಮ್ಮ ಉತ್ತರ ಈ ನಂಬರ್ ಪ್ಲೇಟ್ ಅನ್ನು ಮಾರುತಿ ಸಂಸ್ಥೆಯು ಮಾರಾಟ ಮಾಡಿದ ಮೊದಲನೆಯ ಮಾರುತಿ 800 ಕಾರಿಗೆ ನೀಡಿದ ಸಂಖ್ಯೆ. ಶ್ರೀಮತಿ ಇಂದಿರಾ ಗಾಂಧಿಯವರೆ ಸ್ವತಹ ಈ ಮೊದಲ ಮಾರುತಿ 800 ಕಾರಿನ ಕೀಲಿಯನ್ನು ಮಾಲೀಕರಾದ ದಿವಂಗತ ಶ್ರೀ. ಹರ್ಪಲ್ ಸಿಂಗ್‍ರವರಿಗೆ ನೀಡಿದ್ದರು.

ಮರು ಜೀವ ಪಡೆಯುತ್ತಿರುವ ಭಾರತದ ಮೊದಲ ಮಾರುತಿ 800 ಕಾರು. ಈಗ ಹೇಗಿದೆ ನೀವೆ ನೋಡಿ

ಹರ್ಪಲ್ ಸಿಂಗ್‍‍ರವರು ಈ ಕಾರನ್ನು ದಶಕಗಳ ವರೆಗು ಬಳಸಲಾಗಿದ್ದು, 2010ರಲ್ಲಿ ಹರ್ಪಲ್ ಸಿಂಗ್‍‍ರವರ ಮರಣದ ನಂತರ ಮೊದಲ ಮಾರುತಿ 800 ಕಾರನ್ನು ತಮ್ಮ ಕುಟುಂಬ ಸದಸ್ಯರು ಬಳಸಲು ಮುಂದಾಗಲಿಲ್ಲವಾದ ಕಾರಣ ಅವು ಅವರ ಮನೆಯ ಹೊರಗೆಯೆ ತುಕ್ಕು ಹಿಡಿದ ಪರಸ್ಥಿತಿಯನ್ನು ಕಂಡಿತು.

ಮರು ಜೀವ ಪಡೆಯುತ್ತಿರುವ ಭಾರತದ ಮೊದಲ ಮಾರುತಿ 800 ಕಾರು. ಈಗ ಹೇಗಿದೆ ನೀವೆ ನೋಡಿ

ಆದರೆ ಇದೀಗ ಕಾರಿಗೆ ಮರು ಜೀವ ತುಂಬಲು ಮಾರುತಿ ಸುಜುಕಿ ಸೇವಾ ಕೇಂದ್ರಕ್ಕೆ ತಲುಪಿದ್ದು, ಮರು ಜೀವ ಪಡೆದುಕೊಳ್ಳುವ ಕಾರ್ಯದಲ್ಲಿರುವ ಕಾರಿನ ಕೆಲ ಚಿತ್ರಗಳು ಇಲ್ಲಿವೆ ನೋಡಿ. ಈ ಕಾರಿಗೆ ಇದೀಗ ಸಂಸ್ಥೆ ಕೆಲ ಅಪ್ಡೇಟೆಡ್ ಉಪಕರಣಗಳನ್ನು ನೀಡಲಾಗಿದ್ದು ಹೊಚ್ಚ ಹೊಸತರಂತೆ ಕಾಣಲು ಸಿದ್ಧಪಡಿಸುತ್ತಿದ್ದಾರೆ. ಈ ಕಾರಿನ ಪುನಃಸ್ಥಾಪನೆ ಕೆಲಸ ಹೆಚ್ಚು ವಿವರಗಳನ್ನು ನಾವು ಶೀಘ್ರದಲ್ಲೇ ನಿಮಗೆ ನೀಡಲಿದ್ದೇವೆ.

ಮರು ಜೀವ ಪಡೆಯುತ್ತಿರುವ ಭಾರತದ ಮೊದಲ ಮಾರುತಿ 800 ಕಾರು. ಈಗ ಹೇಗಿದೆ ನೀವೆ ನೋಡಿ

ಎಸ್ಎಸ್80 ಎಂದೂ ಕರೆಯಲಾಗುವ ಮಾರುತಿ 800, ಭಾರತದ ಅತಿದೊಡ್ಡ ಕಾರು ತಯಾರಕ ಮಾರುತಿ ಸುಜುಕಿ (ನಂತರ ಮಾರುತಿ ಉದ್ಯೋಗ್) ಹೊರಬಂದ ಮೊದಲ ಕಾರು ಎಂಬ ಖ್ಯಾತಿಯನ್ನು ಪಡೆದುಕೊಂಡಿದೆ.

ಮರು ಜೀವ ಪಡೆಯುತ್ತಿರುವ ಭಾರತದ ಮೊದಲ ಮಾರುತಿ 800 ಕಾರು. ಈಗ ಹೇಗಿದೆ ನೀವೆ ನೋಡಿ

ಹಿಂದೂಸ್ತಾನ್ ಅಂಬಾಸಿಡರ್‍‍ಗಳು ಮತ್ತು ಪ್ರೀಮಿಯರ್ ಪದ್ಮಿನಿಗಳಿಗೆ 1980 ರ ದಶಕದಲ್ಲಿ ಭಾರತದ ರಸ್ತೆಯ ಪ್ರಾಬಲ್ಯ ಹೊಂದಿದ್ದ ಈ ಕಾರು ಆಧುನಿಕ, ಕೈಗೆಟುಕುವ ಮತ್ತು ಇಂಧನ ದಕ್ಷ ಪರ್ಯಾಯವಾಗಿದೆ. ಮಾರುತಿ 800 ತ್ವರಿತವಾದ ಯಶಸ್ಸನ್ನು ಕಂಡಿತು, ಮತ್ತು ಸುಮಾರು 3 ದಶಕಗಳಿಂದ ಉತ್ಪಾದನೆಯಲ್ಲಿತ್ತು.

ಮರು ಜೀವ ಪಡೆಯುತ್ತಿರುವ ಭಾರತದ ಮೊದಲ ಮಾರುತಿ 800 ಕಾರು. ಈಗ ಹೇಗಿದೆ ನೀವೆ ನೋಡಿ

ಮಾರುತಿ 800 ಕಾರು ಮೊದಲಿಗೆ 796ಸಿಸಿ, 3 ಸಿಲೆಂಡರ್ ಎಫ್‍8ಡಿ ಪೆಟ್ರೋಲ್ ಎಂಜಿನ್ ಅನ್ನು ಪಡೆದುಕೊಂಡಿದ್ದು, ಈ ಎಂಜಿನ್ ಅನ್ನು ಇಂದಿಗು ಸಹ ಆಲ್ಟೋ 800 ಮತ್ತು ಒಮ್ನಿ ಕಾರುಗಳಲ್ಲಿ ಕಾಣಬಹುದಾಗಿದೆ. ಅಂತಹ ಎಂಜಿನಿನ ವಿಶ್ವಾಸಾರ್ಹತೆ ಮತ್ತು ಕಡಿಮೆ ನಿರ್ವಹಣಾ ಸ್ವರೂಪವು ಇದಾಗಿದ್ದು, ಅದು ಭಾರತದಲ್ಲಿ ಮಾರಾಟವಾದ ಕಾರುಗಳ ಗರಿಷ್ಠ ಸಂಖ್ಯೆಯನ್ನು ಹೊಂದಿದೆ.

ಈ ಕಾರು ಸಂಪೂರ್ಣವಾಗಿ ಮರುಜೀವ ಪಡೆದ ನಂತರ ನಿಮಗೆ ಹೆಚ್ಚು ಮಾಹಿತಿಯನ್ನು ನೀಡುತ್ತೇವೆ.

Source: Teambhp

Most Read Articles

Kannada
English summary
First Ever Maruti800 Car Is Getting Rebirth In Maruti Suzuki Service Center. Read In Kannada
Story first published: Friday, February 15, 2019, 17:17 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X