ಹೀಗಿರಲಿದೆ ನವೀಕೃತ ಮಿಟ್ಸುಬಿಷಿ ಮಾಂಟೆರೋ ಸ್ಪೋರ್ಟ್

ಕೆಲವು ವಾರಗಳ ಹಿಂದೆ, ಮಿಟ್ಸುಬಿಷಿ ಮೋಟಾರ್ಸ್ ಮಾಂಟೆರೋ ಸ್ಪೋರ್ಟ್/ಪಜೆರೋ ಸ್ಪೋರ್ಟ್‍‍ನ ನವೀಕೃತ ಆವೃತ್ತಿಯನ್ನು ಜುಲೈ 25ರಂದು ಬಿಡುಗಡೆಗೊಳಿಸುವುದಾಗಿ ತಿಳಿಸಿತ್ತು. ಬಿಡುಗಡೆಗೂ ಒಂದು ವಾರ ಮುಂಚೆ ಈ ವಾಹನದ ಫೋಟೋಗಳು ಲಭ್ಯವಾಗಿದ್ದು, ವಾಹನವು ಹೇಗೆ ಕಾಣಲಿದೆ ಎಂಬುದನ್ನು ತೋರಿಸುತ್ತಿವೆ.

ಹೀಗಿರಲಿದೆ ನವೀಕೃತ ಮಿಟ್ಸುಬಿಷಿ ಮಾಂಟೆರೋ ಸ್ಪೋರ್ಟ್

ಈ ಫೋಟೊಗಳಲ್ಲಿ ಜನಪ್ರಿಯ ಪಿಪಿವಿಯ ವಿನ್ಯಾಸವನ್ನು ಕಾಣಬಹುದು. ಆರಂಭದಿಂದಲೂ, ನಾವು ಸ್ಟ್ರಾಡಾ ಶೈಲಿಯನ್ನು ಹೊಂದಿರುವ ಮುಂಭಾಗದ ತುದಿಯ ಬಗ್ಗೆ ಮಾತನಾಡಿದ್ದೇವೆ. ಆದರೂ ಕೆಲವು ಬದಲಾವಣೆಗಳೊಂದಿಗೆ ಮಾಂಟೆರೋ ಸ್ಪೋರ್ಟ್ ತನ್ನ ಕಂಪನಿಯ ಉಳಿದ ಕಾರುಗಳಿಗಿಂತ ಭಿನ್ನವಾಗಿ ಕಾಣುತ್ತದೆ.

ಹೀಗಿರಲಿದೆ ನವೀಕೃತ ಮಿಟ್ಸುಬಿಷಿ ಮಾಂಟೆರೋ ಸ್ಪೋರ್ಟ್

ಗ್ರಿಲ್ ಮೂರು ಬಾರ್ ವಿನ್ಯಾಸವನ್ನು ಹೊಂದಿ ಮ್ಯಾಟ್ ಕ್ರೋಮ್‍‍ನಂತೆ ಕಾಣುತ್ತದೆ. ಅಲ್ಲದೆ, ಹೆಡ್‌ಲೈಟ್‌ನ ಶೇಪ್ ಅನ್ನು ಸ್ವಲ್ಪ ತಿರುಚಿರುವಂತೆ ಕಂಡುಬರುತ್ತದೆ. ಸಹಜವಾಗಿ, ಮುಂಭಾಗದ ಬಂಪರ್ ಹಾಗೂ ಲೈಟ್ ಜೋಡಣೆಯಲ್ಲಿ ಪ್ರಮುಖ ಬದಲಾವಣೆಗಳಾಗಿವೆ.

ಹೀಗಿರಲಿದೆ ನವೀಕೃತ ಮಿಟ್ಸುಬಿಷಿ ಮಾಂಟೆರೋ ಸ್ಪೋರ್ಟ್

ಸ್ಟ್ರಾಡಾದಿಂದ ಕೆಲವು ಅಂಶಗಳನ್ನು ಪಡೆದು, ನವೀಕರಿಸಿದ ಮಾಂಟೆರೋ ಸ್ಪೋರ್ಟ್‌ನ ಫಾಗ್ ಲೈಟ್‍‍ಗಳನ್ನು ಬಂಪರ್‌ನಿಂದ ಮೇಲಕ್ಕೆ ಜೋಡಿಸಲಾಗಿದೆ. ಪ್ಯಾನೆಲ್ ಹೆಚ್ಚಿನ ಪ್ರಮಾಣದ ಕಾರ್ನರ್ ಎಡ್ಜ್ ಗಳನ್ನು ಹೊಂದಿದೆ. ಇವಿಷ್ಟು ಕಾರಿನ ಮುಂಭಾಗದ ಬಗ್ಗೆಯಾದರೆ, ಹಿಂಭಾಗದಲ್ಲಿ ಉದ್ದನೆಯ ಟೇಲ್‍‍ಲೈಟ್‍‍ಗಳನ್ನು ಹಾಗೆಯೇ ಉಳಿಸಿಕೊಳ್ಳಲಾಗಿದೆ.

ಹೀಗಿರಲಿದೆ ನವೀಕೃತ ಮಿಟ್ಸುಬಿಷಿ ಮಾಂಟೆರೋ ಸ್ಪೋರ್ಟ್

ಮಿತ್ಸುಬಿಷಿ ಕೆಲವು ಅಡ್ಜಸ್ಟ್ ಮೆಂಟ್‍‍ಗಳನ್ನು ಮಾಡಿದಂತೆ ತೋರುತ್ತದೆಯಾದರೂ, ಲೈಟ್‍‍ಗಳು ಮೊದಲಿಗಿಂತ ಚಿಕ್ಕದಾಗಿ ಕಾಣುವುದರಿಂದ ಕೆಳಭಾಗದಲ್ಲಿರುವ ರಿಫ್ಲೆಕ್ಟರ್‍‍ಗಳನ್ನು ತೆಗೆದುಹಾಕಲಾಗಿದೆ. ಇದರ ಜೊತೆಗೆ ಟೇಲ್ ಲೈಟ್‍‍ಗಳು ಮೊದಲಿಗಿಂತ ಹೆಚ್ಚಿನ ಬೆಳಕನ್ನು ನೀಡಲಿದ್ದು, ಹೆಚ್ಚು ಎಲ್ಇಡಿ ಪೈಪ್‍‍ಗಳನ್ನು ಅಳವಡಿಸಲಾಗಿದೆ.

ಹೀಗಿರಲಿದೆ ನವೀಕೃತ ಮಿಟ್ಸುಬಿಷಿ ಮಾಂಟೆರೋ ಸ್ಪೋರ್ಟ್

ಹೋಂಡಾ ಸಿಟಿ ಮತ್ತು ಮಾರುತಿ ಸುಜುಕಿ ಸಿಯಾಜ್‌ಗೆ ಟಕ್ಕರ್ ನೀಡುತ್ತಿರುವ ಟೊಯೊಟಾ ಯಾರಿಸ್ ಖರೀದಿಗೆ ಈಗಲೇ ಟೆಸ್ಟ್ ಡ್ರೈವ್ ಮಾಡಿ..!

ಹೊಸ ಟೇಲ್‌ಗೇಟ್ ಸ್ಪಾಯ್ಲರ್‌ನೊಂದಿಗಿರುವ ಹಿಂಭಾಗದ ಬಂಪರ್‌ನ ಕೆಳಭಾಗಕ್ಕೆ ಹೊಸ ಗಾರ್ನಿಷ್ ಅಳವಡಿಸಲಾಗಿದೆ. ನವೀಕೃತ ವಾಹನವನ್ನು ಹೊಸ ಅಲಾಯ್ ವ್ಹೀಲ್‍‍ಗಳ ಸೆಟ್ ಪೂರ್ಣವಾಗಿಸುತ್ತದೆ. ಕಳೆದ ವಾರ ಬಿಡುಗಡೆಯಾದ ಟೀಸರ್ ವೀಡಿಯೊದಲ್ಲಿ ಪೂರ್ಣ ಪ್ರಮಾಣದ ಡಿಜಿಟಲ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಅನ್ನು ತೋರಿಸಲಾಗಿದೆ.

ಹೀಗಿರಲಿದೆ ನವೀಕೃತ ಮಿಟ್ಸುಬಿಷಿ ಮಾಂಟೆರೋ ಸ್ಪೋರ್ಟ್

ಈ ಸಮಯದಲ್ಲಿ ಅಪ್‍‍ಡೇಟ್‍‍ಗಳನ್ನು ಪೂರ್ತಿ ಸರಣಿಗೆ ಸ್ಟಾಂಡರ್ಡ್ ಆಗಿ ನೀಡಲಾಗುವುದೇ ಅಥವಾ ಟಾಪ್ ಮಾದರಿಗಳಿಗೆ ಮಾತ್ರ ಸೀಮಿತಗೊಳಿಸಲಾಗುವುದೇ ಎಂಬುದು ಇನ್ನೂ ತಿಳಿದುಬಂದಿಲ್ಲ. ಉಳಿದ ವಿನ್ಯಾಸವನ್ನು ಗೇರ್ ಸೆಲೆಕ್ಟರ್‌ಗೆ ಕೊಂಡೊಯ್ಯುವಂತೆ ಕಾಣುತ್ತದೆ. ನವೀಕೃತ ಮಾಂಟೆರೋ ಸ್ಪೋರ್ಟ್‌ಗೆ ಇನ್ನೂ ಹೆಚ್ಚಿನ ಫೀಚರ್‍‍ಗಳನ್ನು ಸೇರಿಸುವ ಸಾಧ್ಯತೆಗಳಿವೆ.

ಹೀಗಿರಲಿದೆ ನವೀಕೃತ ಮಿಟ್ಸುಬಿಷಿ ಮಾಂಟೆರೋ ಸ್ಪೋರ್ಟ್

ಆದರೆ ಮಿತ್ಸುಬಿಷಿ ಕಂಪನಿಯು ಉಳಿದ ಅಪ್‍‍ಡೇಟ್‍‍ಗಳ ಬಗ್ಗೆ ಮಾಹಿತಿಯನ್ನು ನೀಡುತ್ತಿಲ್ಲ. ಹಳೆಯ ವಾಹನದಲ್ಲಿರುವ ಎಂಜಿನ್ ಅನ್ನು ಈ ನವೀಕೃತ ವಾಹನದಲ್ಲಿಯೂ ಮುಂದುವರೆಸುವ ಸಾಧ್ಯತೆಗಳಿವೆ. ಮಾಂಟೆರೋ ಸ್ಪೋರ್ಟ್ 2.4 ಲೀಟರ್ ಎಂ‍ಐ‍‍ವಿ‍ಇ‍‍ಸಿ ಟರ್ಬೊಡೈಸೆಲ್ ಎಂಜಿನ್ ಹೊಂದಿರಲಿದೆ. ಈ ಎಂಜಿನ್ 178 ಬಿ‍‍ಹೆಚ್‍‍ಪಿ ಹಾಗೂ 430 ಎನ್ಎಂ ಟಾರ್ಕ್ ಉತ್ಪಾದಿಸಲಿದೆ. ನಾಲ್ಕು ವ್ಹೀಲ್‍‍ಗಳ ಡ್ರೈವ್ ಸಿಸ್ಟಂನಲ್ಲಿ ಇನ್ನೂ ಹಲವು ಅಪ್‍‍ಡೇಟ್‍‍ಗಳನ್ನು ಅಳವಡಿಸುವ ಸಾಧ್ಯತೆಗಳಿವೆ.

Most Read Articles

Kannada
English summary
The new 2020 Mitsubishi Montero Sport undisguised - Read in kannada
Story first published: Friday, July 19, 2019, 15:28 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X