ಭಾರತದಲ್ಲಿ ಬಿಡುಗಡೆಯಾಗಲಿರುವ 5 ಎಲೆಕ್ಟ್ರಿಕ್ ಕಾರುಗಳಿವು

ಈಗ ಎಲ್ಲಿ ನೋಡಿದರೂ ಎಲೆಕ್ಟ್ರಿಕ್ ವಾಹನಗಳದೇ ಮಾತು. ಎಲೆಕ್ಟ್ರಿಕ್ ವಾಹನಗಳು ಪರಿಸರ ಸ್ನೇಹಿಯಾಗಿರಲಿದ್ದು, ಮಾಲಿನ್ಯವನ್ನು ತಡೆಗಟ್ಟಲಿವೆ. ಕೇಂದ್ರ ಸರ್ಕಾರವು ಸಹ ಎಲೆಕ್ಟ್ರಿಕ್ ವಾಹನಗಳ ಬಳಕೆಯನ್ನು ಉತ್ತೇಜಿಸಲು ಹಲವಾರು ಕ್ರಮಗಳನ್ನು ಕೈಗೊಳ್ಳುತ್ತಿದೆ.

ಭಾರತದಲ್ಲಿ ಬಿಡುಗಡೆಯಾಗಲಿರುವ 5 ಎಲೆಕ್ಟ್ರಿಕ್ ಕಾರುಗಳಿವು

ದೇಶಿಯ ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ವಾಹನಗಳು ಹಿಂದೆಂದಿಗಿಂತಲೂ ಈಗ ಹೆಚ್ಚಿನ ಸದ್ದು ಮಾಡುತ್ತಿವೆ. ಸ್ಟಾರ್ಟ್ ಅಪ್ ಕಂಪನಿಗಳಿಂದ ಹಿಡಿದು, ವಾಹನಗಳ ತಯಾರಿಕೆಯಲ್ಲಿ ಮುಂಚೂಣಿಯಲ್ಲಿರುವ ಕಂಪನಿಗಳವರೆಗೆ ಅನೇಕ ಕಂಪನಿಗಳು ತಮ್ಮ ಎಲೆಕ್ಟ್ರಿಕ್ ವಾಹನಗಳನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸುತ್ತಿವೆ. 2020ರಲ್ಲಿ ಯಾವೆಲ್ಲಾ ಕಂಪನಿಗಳು ತಮ್ಮ ಕಂಪನಿಯ ಎಲೆಕ್ಟ್ರಿಕ್ ಕಾರುಗಳನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲಿವೆ ಎಂಬುದನ್ನು ಈ ಲೇಖನದಲ್ಲಿ ನೋಡೋಣ.

ಭಾರತದಲ್ಲಿ ಬಿಡುಗಡೆಯಾಗಲಿರುವ 5 ಎಲೆಕ್ಟ್ರಿಕ್ ಕಾರುಗಳಿವು

1. ನಿಸ್ಸಾನ್ ಲೀಫ್

ನಿಸ್ಸಾನ್ ಇಂಡಿಯಾ, ತನ್ನ ಯಶಸ್ವಿ ಎಲೆಕ್ಟ್ರಿಕ್ ಹ್ಯಾಚ್‌ಬ್ಯಾಕ್ ಕಾರ್ ಆದ ನಿಸ್ಸಾನ್ ಲೀಫ್ ಅನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸುವುದಾಗಿ ಈ ವರ್ಷದ ಜನವರಿಯಲ್ಲಿ ಘೋಷಿಸಿತ್ತು. ನಿಸ್ಸಾನ್ ಲೀಫ್ ಕಾರಿನ ಎರಡನೇ ತಲೆಮಾರಿನ ಕಾರ್ ಅನ್ನು ಈಗ ಮಾರಾಟ ಮಾಡಲಾಗುತ್ತಿದೆ. ಈ ಕಾರು ವಿಶ್ವದಲ್ಲೇ ಅತಿ ಹೆಚ್ಚು ಮಾರಾಟವಾದ ಎಲೆಕ್ಟ್ರಿಕ್ ವಾಹನವಾಗಿದೆ.

ಭಾರತದಲ್ಲಿ ಬಿಡುಗಡೆಯಾಗಲಿರುವ 5 ಎಲೆಕ್ಟ್ರಿಕ್ ಕಾರುಗಳಿವು

ನಿಸ್ಸಾನ್ ಲೀಫ್ ಕಾರಿನಲ್ಲಿ 40 ಕಿಲೋವ್ಯಾಟಿನ ಬ್ಯಾಟರಿಯನ್ನು ಒಂದು ಬಾರಿ ಚಾರ್ಜ್‌ ಮಾಡಿದರೆ 400 ಕಿ.ಮೀ ಚಲಿಸಬಹುದು. ವಿದ್ಯುತ್ ಸರಬರಾಜಿನ ಸಾಮರ್ಥ್ಯದ ಮೇಲೆ ಬ್ಯಾಟರಿಯು 8 ರಿಂದ 16 ಗಂಟೆಗಳಲ್ಲಿ ಪೂರ್ತಿಯಾಗಿ ಚಾರ್ಜ್ ಆಗುತ್ತದೆ. ಲೀಫ್ ಕಾರಿನಲ್ಲಿರುವ ವಿಶೇಷವಾದ ಚಾರ್ಜಿಂಗ್ ಫೀಚರ್ ಕೇವಲ 40 ನಿಮಿಷಗಳಲ್ಲಿ ಬ್ಯಾಟರಿಯನ್ನು 80% ಚಾರ್ಜ್ ಮಾಡುತ್ತದೆ. ನಿಸ್ಸಾನ್ ಕಾರು ಎಲೆಕ್ಟ್ರಿಕ್ ವಾಹನಗಳ ಸೆಗ್‍‍ಮೆಂಟಿನಲ್ಲಿರುವ ಪ್ರೀಮಿಯಂ ಕೊಡುಗೆಯಾಗಿದೆ. ಈ ಕಾರಿನ ಬೆಲೆಯು ಸುಮಾರು ರೂ.30ರಿಂದ 35 ಲಕ್ಷಗಳಾಗಲಿದೆ.

ಭಾರತದಲ್ಲಿ ಬಿಡುಗಡೆಯಾಗಲಿರುವ 5 ಎಲೆಕ್ಟ್ರಿಕ್ ಕಾರುಗಳಿವು

2. ಎಂಜಿ ಇಝಡ್ಎಸ್

ಎಂಜಿ ಮೋಟಾರ್ ಇಂಡಿಯಾ, ತನ್ನ ಮೊದಲ ಎಲೆಕ್ಟ್ರಿಕ್ ಎಸ್‌ಯುವಿಯನ್ನು ಭಾರತದಲ್ಲಿ ಈ ವರ್ಷದ ಡಿಸೆಂಬರ್ ವೇಳೆಗೆ ಬಿಡುಗಡೆಗೊಳಿಸುವುದಾಗಿ ತಿಳಿಸಿದೆ. ವಿಶ್ವ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿರುವ ಎಂ‍‍ಜಿ ಇ‍‍ಝಡ್‍ಎಸ್ 150 ಹೆಚ್‍‍ಪಿಯ ಎಲೆಕ್ಟ್ರಿಕ್ ಮೋಟಾರ್ ಹೊಂದಿದ್ದು, 3.1 ಸೆಕೆಂಡುಗಳಲ್ಲಿ 0 ಕಿ.ಮೀ ನಿಂದ 50 ಕಿ.ಮೀ ಆಕ್ಸಲರೇಟ್ ಮಾಡುವ ಸಾಮರ್ಥ್ಯವನ್ನು ಹೊಂದಿದೆ.

ಭಾರತದಲ್ಲಿ ಬಿಡುಗಡೆಯಾಗಲಿರುವ 5 ಎಲೆಕ್ಟ್ರಿಕ್ ಕಾರುಗಳಿವು

ಎನ್‌ಇಡಿಸಿ (ನ್ಯೂ ಯುರೋಪಿಯನ್ ಡ್ರೈವಿಂಗ್ ಸೈಕಲ್) ಪ್ರಕಾರ, ಎಸ್‍‍ಯುವಿಯಲ್ಲಿರುವ ಬ್ಯಾಟರಿಯನ್ನು ಒಂದು ಬಾರಿ ಚಾರ್ಜ್‌ ಮಾಡಿದರೆ, 335 ಕಿ.ಮೀ ದೂರ ಚಲಿಸುತ್ತದೆ. ಬ್ರಿಟನ್ ಮೂಲದ ವಾಹನ ತಯಾರಕ ಕಂಪನಿಯಾದ ಎಂ‍‍ಜಿ, ದೇಶಿಯ ಮಾರುಕಟ್ಟೆಯಲ್ಲಿ ಇಝಡ್ಎಸ್ ಕಾರ್ ಅನ್ನು ಈ ವರ್ಷದ ಡಿಸೆಂಬರ್ ವೇಳೆಗೆ ಬಿಡುಗಡೆಗೊಳಿಸಲಿದೆ. ಈ ಕಾರಿನ ಬೆಲೆಯು ರೂ.25ಲಕ್ಷಗಳಾಗಿರಲಿದೆ.

ಭಾರತದಲ್ಲಿ ಬಿಡುಗಡೆಯಾಗಲಿರುವ 5 ಎಲೆಕ್ಟ್ರಿಕ್ ಕಾರುಗಳಿವು

3. ಮಾರುತಿ ವ್ಯಾಗನ್ ಆರ್ ಇವಿ

ಮಾರುತಿ ಸುಜುಕಿ ಕಂಪನಿಯು, ಮುಂದಿನ ವರ್ಷದ ವೇಳೆಗೆ ಭಾರತದಲ್ಲಿ ತನ್ನ ಮೊದಲ ಎಲೆಕ್ಟ್ರಿಕ್ ಕಾರ್ ಅನ್ನು ಬಿಡುಗಡೆಗೊಳಿಸುವುದಾಗಿ ಇತ್ತೀಚಿಗಷ್ಟೇ ದೃಢಪಡಿಸಿತ್ತು. ಭಾರತದ ಅತಿದೊಡ್ಡ ಕಾರು ತಯಾರಕ ಕಂಪನಿಯಾದ ಮಾರುತಿ ಸುಜುಕಿ, ಈಗಾಗಲೇ ವ್ಯಾಗನ್ಆರ್ ಎಲೆಕ್ಟ್ರಿಕ್ ಕಾರ್ ಅನ್ನು ಅಭಿವೃದ್ಧಿ ಪಡಿಸಿದೆ. ಕಳೆದ ವರ್ಷ ದೆಹಲಿಯಲ್ಲಿ ನಡೆದ ಮೂವ್ ಗ್ಲೋಬಲ್ ಮೊಬಿಲಿಟಿ ಶೃಂಗಸಭೆಯಲ್ಲಿ ಈ ಎಲೆಕ್ಟ್ರಿಕ್ ಕಾರ್ ಅನ್ನು ಪ್ರದರ್ಶಿಸಲಾಗಿತ್ತು.

ಭಾರತದಲ್ಲಿ ಬಿಡುಗಡೆಯಾಗಲಿರುವ 5 ಎಲೆಕ್ಟ್ರಿಕ್ ಕಾರುಗಳಿವು

ಎಲೆಕ್ಟ್ರಿಕ್ ವ್ಯಾಗನ್ ಆರ್ ಲಿಥಿಯಂ-ಐಯಾನ್ ಬ್ಯಾಟರಿ ಪ್ಯಾಕ್ ಅನ್ನು ಹೊಂದಿರಲಿದೆ. ಈ ಬ್ಯಾಟರಿಯನ್ನು ಒಂದು ಬಾರಿ ಚಾರ್ಜ್ ಮಾಡಿದರೆ, 200 ಕಿ.ಮೀವರೆಗೂ ಚಲಿಸಬಹುದು. ಈ ಕಾರಿನಲ್ಲಿ ವೇಗದ ಚಾರ್ಜರ್‍‍ಗಳನ್ನು ಅಳವಡಿಸಲಾಗುತ್ತದೆಯೇ ಇಲ್ಲವೇ ಎಂಬುದನ್ನು ಮಾರುತಿ ಸುಜುಕಿ ಕಂಪನಿಯು ಬಹಿರಂಗಪಡಿಸಿಲ್ಲ. ಮಾರುತಿ ಸುಜುಕಿ ಕಂಪನಿಯು 2020ರಲ್ಲಿ ವ್ಯಾಗನ್ ಆರ್ ಎಲೆಕ್ಟ್ರಿಕ್ ಕಾರ್ ಅನ್ನು ಬಿಡುಗಡೆಗೊಳಿಸಲಿದೆ. ಈ ಕಾರಿನ ಬೆಲೆ ಸುಮಾರು ರೂ.7 ಲಕ್ಷಗಳಾಗಲಿದೆ.

ಭಾರತದಲ್ಲಿ ಬಿಡುಗಡೆಯಾಗಲಿರುವ 5 ಎಲೆಕ್ಟ್ರಿಕ್ ಕಾರುಗಳಿವು

4. ಮಹೀಂದ್ರಾ ಇ-ಕೆ‍‍ಯುವಿ 100

ಮಹೀಂದ್ರಾ ಕಂಪನಿಯು, ಈ ವರ್ಷದ ಹಬ್ಬದ ವೇಳೆಗೆ ಇ-ಕೆಯುವಿ 100 ಕಾರ್ ಅನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲಿದೆ. ಈ ಕಾರಿನ ಬೆಲೆಯು ಸುಮಾರು ರೂ.7 ಲಕ್ಷದಿಂದ 9 ಲಕ್ಷಗಳವರೆಗೆ ಇರಲಿದೆ. ಕೆಲವೊಂದು ಸಣ್ಣ ಪುಟ್ಟ ವಿನ್ಯಾಸ ಬದಲಾವಣೆಗಳನ್ನು ಹೊರತುಪಡಿಸಿದರೆ ಈ ಎಲೆಕ್ಟ್ರಿಕ್ ಕಾರು, ಸಾಮಾನ್ಯ ಆವೃತ್ತಿಯ ಕೆ‍‍ಯುವಿ100 ಕಾರಿನಂತೆಯೇ ಇದೆ.

ಭಾರತದಲ್ಲಿ ಬಿಡುಗಡೆಯಾಗಲಿರುವ 5 ಎಲೆಕ್ಟ್ರಿಕ್ ಕಾರುಗಳಿವು

ಈ ಎಲೆಕ್ಟ್ರಿಕ್ ಕಾರ್ ಅನ್ನು ಚಾರ್ಜ್ ಮಾಡಲು 3 ಹಂತದ ಎಸಿ ಇಂಡಕ್ಷನ್, 31 ಕಿ.ವ್ಯಾ ಎಲೆಕ್ಟ್ರಿಕ್ ಮೋಟಾರಿನ ಲಿಥಿಯಂ ಐಯಾನ್ ಬ್ಯಾಟರಿಗೆ ಪ್ಯಾಕ್ ಇರಲಿದೆ. ಒಂದು ಬಾರಿ ಈ ಬ್ಯಾಟರಿಯನ್ನು ಚಾರ್ಜ್ ಮಾಡಿದರೆ ಈ ಎಲೆಕ್ಟ್ರಿಕ್ ಕಾರು 140 ಕಿ.ಮೀವರೆಗೂ ಚಲಿಸುತ್ತದೆ. ವೇಗದ ಚಾರ್ಜರ್‍‍ನೊಂದಿಗೆ ಈ ಬ್ಯಾಟರಿಯನ್ನು ಒಂದು ಗಂಟೆಯಲ್ಲಿ 80%ನಷ್ಟು ಚಾರ್ಜ್ ಮಾಡಬಹುದು.

ಭಾರತದಲ್ಲಿ ಬಿಡುಗಡೆಯಾಗಲಿರುವ 5 ಎಲೆಕ್ಟ್ರಿಕ್ ಕಾರುಗಳಿವು

5. ಟಾಟಾ ಆಲ್ಟ್ರೋಜ್

ಟಾಟಾ ಮೋಟಾರ್ಸ್, ತನ್ನ ಎಲೆಕ್ಟ್ರಿಕ್ ಕಾರ್ ಆದ ಆಲ್ಟ್ರೋಜ್ ಅನ್ನು 2020ರಲ್ಲಿ ಬಿಡುಗಡೆಗೊಳಿಸಲಿದೆ. ಟಾಟಾ ಮೋಟಾರ್ಸ್ ಈ ಎಲೆಕ್ಟ್ರಿಕ್ ಕಾರ್ ಅನ್ನು ಆಲ್ಫಾ ಪ್ಲಾಟ್‍‍ಫಾರಂ ಅಡಿಯಲ್ಲಿ ತಯಾರಿಸಲಿದೆ.

ಭಾರತದಲ್ಲಿ ಬಿಡುಗಡೆಯಾಗಲಿರುವ 5 ಎಲೆಕ್ಟ್ರಿಕ್ ಕಾರುಗಳಿವು

ಟಾಟಾ ಆಲ್ಟ್ರೊಜ್ ಇವಿಯಲ್ಲಿರುವ ಬ್ಯಾಟರಿಯನ್ನು ಒಂದು ಬಾರಿಗೆ ಚಾರ್ಜ್ ಮಾಡಿದರೆ 300 ಕಿ.ಮೀವರೆಗೂ ಚಲಿಸಬಹುದು. ಟಾಟಾ ಆಲ್ಟ್ರೊಜ್ ಇವಿ ಸಹ ವೇಗದ ಚಾರ್ಜಿಂಗ್‌ ಅನ್ನು ಹೊಂದಿರಲಿದ್ದು, ಒಂದು ಗಂಟೆಯಲ್ಲಿ 80%ನಷ್ಟು ಚಾರ್ಜ್ ಮಾಡಬಹುದು. ಟಾಟಾ ಆಲ್ಟ್ರೊಜ್ ಇವಿಯ ಬೆಲೆಯು ಸುಮಾರು ರೂ.14ಲಕ್ಷಗಳಾಗಿರಲಿದೆ.

Most Read Articles

Kannada
English summary
Five Best Electric Vehicles Expected to Launch in India soon - Read in kannada
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X