ಗೂರ್ಖಾ ಅಪ್‍‍ಗ್ರೇಡ್ ಮಾಡಲಿದೆ ಫೋರ್ಸ್ ಮೋಟಾರ್ಸ್

ಪುಣೆ ಮೂಲದ ಫೋರ್ಸ್ ಮೋಟಾರ್ಸ್ ಕಳೆದ ಕೆಲವು ವರ್ಷಗಳಿಂದ ಪ್ರಸ್ತುತ ತಲೆಮಾರಿನ ಫೋರ್ಸ್ ಗೂರ್ಖಾವನ್ನು ಮಾರಾಟ ಮಾಡುತ್ತಿದೆ. ಈ ವಾಹನವನ್ನು ಈಗಾಗಲೇ ಹಲವಾರು ಬಾರಿ ಮರು ಅಭಿವೃದ್ಧಿ ಪಡಿಸಲಾಗಿತ್ತು. ಕಳೆದ ಬಾರಿಯ ಅಪ್ ಗ್ರೇಡ್ ನಲ್ಲಿ ಈ ವಾಹನದಲ್ಲಿ ಎಬಿಎಸ್, ಸೀಟ್ ಬೆಲ್ಟ್ ರಿಮೆಂಡರ್, ಒವರ್ ಸ್ಪೀಡ್ ವಾರ್ನಿಂಗ್ ಮತ್ತು ಹಿಂಭಾಗದಲ್ಲಿ ಪಾರ್ಕಿಂಗ್ ಸೆನ್ಸಾರ್ ಗಳನ್ನು ಅಳವಡಿಸಲಾಗಿತ್ತು. ಫೋರ್ಸ್ ಗೂರ್ಖಾ ವಾಹನದಲ್ಲಿ ಹಲವಾರು ಅಪ್ ಗ್ರೇಡ್ ಗಳನ್ನು ಮಾಡಲಾಗಿದ್ದರೂ ಹೊಸ ಸಂಚಾರಿ ಸುರಕ್ಷತಾ ನಿಯಮಗಳಿಗೆ ಅನುಸಾರವಾಗಿ ಇನ್ನೂ ಹಲವಾರು ಬದಲಾವಣೆಗಳನ್ನು ಅಳವಡಿಸುವುದು ಅವಶ್ಯಕವಾಗಿದೆ.

ಗೂರ್ಖಾ ಅಪ್‍‍ಗ್ರೇಡ್ ಮಾಡಲಿದೆ ಫೋರ್ಸ್ ಮೋಟಾರ್ಸ್

ಆಟೋ ಕಾರ್ ಇಂಡಿಯಾ ವರದಿಯ ಪ್ರಕಾರ, ಫೋರ್ಸ್ ಮೋಟಾರ್ಸ್ ಹೊಸ ತಲೆಮಾರಿನ ಗೂರ್ಖಾ ವಾಹನವನ್ನು ಅಭಿವೃದ್ದಿ ಪಡಿಸುತ್ತಿದ್ದು, ಈಗಿರುವ ಹಳೆ ತಲೆಮಾರಿನ ವಾಹನವನ್ನು ಬದಲಿಸಲಿದೆ. ಈ ಹೊಸ ವಾಹನದ ಸಂಪೂರ್ಣ ಹೊರ ವಿನ್ಯಾಸವು ಬದಲಾಗಲಿದೆ. ಈ ಹೊಸದಾದ ಹೊರ ವಿನ್ಯಾಸ ಹೊಂದಲಿರುವ ಗೂರ್ಖಾ ವಾಹನವು 1ನೇ ಅಕ್ಟೋಬರ್ 2019 ರಿಂದ ಜಾರಿಗೆ ಬರಲಿರುವ ಹೊಸ ಸುರಕ್ಷತಾ ನಿಯಮಗಳಲ್ಲಿ ಅರ್ಹತೆ ಪಡೆಯುವ ನಿರೀಕ್ಷೆಯಿದೆ. ಹೊಸ ಗೂರ್ಖಾ ವಾಹನವು ಹೊಸ ಮತ್ತು ಹೆಚ್ಚಿನ ಕಂಫರ್ಟ್ ಫೀಚರ್ ಗಳನ್ನು ಪಡೆಯಲಿದೆ. ಹೊಸ ವಾಹನವನ್ನು ಡಿಸೆಂಬರ್ 2019ರಿಂದ ಉತ್ಪಾದಿಸಲಾಗುವುದು.

ಗೂರ್ಖಾ ಅಪ್‍‍ಗ್ರೇಡ್ ಮಾಡಲಿದೆ ಫೋರ್ಸ್ ಮೋಟಾರ್ಸ್

ನಂತರ 2020 ರ ಆಟೋ ಎಕ್ಸ್ ಪೋ ದಲ್ಲಿ ಹೊಸ ಗೂರ್ಖಾ ವಾಹನವನ್ನು ಅನಾವರಣಗೊಳಿಸಲಾಗುವುದು. ಹೊಸ ಹೊರಗಡೆಯ ವಿನ್ಯಾಸವನ್ನು ಹೊಂದಲಿರುವ ಗೂರ್ಖಾ ವಾಹನದಲ್ಲಿ 2.2 ಲೀಟರಿನ ಬಿಎಸ್ 6 ಆಧಾರಿತ ಡೀಸೆಲ್ ಎಂಜಿನ್ ಅಳವಡಿಸಲಾಗುವುದು.

ಗೂರ್ಖಾ ಅಪ್‍‍ಗ್ರೇಡ್ ಮಾಡಲಿದೆ ಫೋರ್ಸ್ ಮೋಟಾರ್ಸ್

ಈ ಹೊಸ ಎಂಜಿನನ್ನು ಮರ್ಸಿಡಿಸ್ ಬೆಂಜ್ ನಲ್ಲಿರುವ ತಂತ್ರಜ್ಣಾನದಿಂದ ಅಳವಡಿಸಿಕೊಳ್ಳಲಾಗುವುದು ಎಂದು ತಿಳಿದು ಬಂದಿದೆ. ಈ ಎಂಜಿನ್ 140 ಬಿಹೆಚ್‍ಪಿ ಪವರ್ ಉತ್ಪಾದಿಸುತ್ತದೆ. ಫೋರ್ಸ್ ಮೋಟಾರ್ಸ್ ಈಗಿರುವ 85 ಬಿಹೆಚ್‍ಪಿ ಯನ್ನು ಬದಲಿಸುವ ಸಾಧ್ಯತೆಗಳಿವೆ.

ಗೂರ್ಖಾ ಅಪ್‍‍ಗ್ರೇಡ್ ಮಾಡಲಿದೆ ಫೋರ್ಸ್ ಮೋಟಾರ್ಸ್

ಹೊಸ ಗೂರ್ಖಾ ಹೊಸ ವಾಹನದಲ್ಲೂ ಗೂರ್ಖಾ ಎಕ್ಸ್ ಟ್ರಿಮ್ ನಲ್ಲಿರುವ ಫೀಚರ್ ಗಳನ್ನು ಅಳವಡಿಸುವ ಸಾಧ್ಯತೆಗಳಿವೆ. ಹೊಸ ವಾಹನದಲ್ಲಿ ಹೊಸ ಮಲ್ಟಿ ಲಿಂಕ್ ಸಸ್ಪೆಂಷನ್ ಸಿಸ್ಟಮ್, ಲೋ ರೇಂಜಿನ ಟ್ರಾನ್ಸ್ ಫರ್ ಕೇಸ್ ಮತ್ತು ಕೆಲವು ಆಫ್ ರೋಡ್ ಫೀಚರ್ ಗಳನ್ನು ಹೊಂದಲಿದೆ. ಹೊಸ ಫೋರ್ಸ್ ಗೂರ್ಖಾ 2020ರ ಕೊನೆಯ ಭಾಗದಲ್ಲಿ ಬಿಡುಗಡೆಯಾಗುವ ಸಾಧ್ಯತೆಗಳಿವೆ. ಈ ವಾಹನದ ಬೆಲೆಗಳ ಬಗ್ಗೆ ಯಾವುದೇ ಮಾಹಿತಿಗಳು ಇಲ್ಲದೇ ಇದ್ದರೂ, ಭಾರತದಲ್ಲಿನ ಎಕ್ಸ್ ಶೋರೂಂ ದರಗಳಂತೆ ರೂ. 14 ಲಕ್ಷಗಳಾಗುವ ಸಾಧ್ಯತೆಗಳಿವೆ.

ಗೂರ್ಖಾ ಅಪ್‍‍ಗ್ರೇಡ್ ಮಾಡಲಿದೆ ಫೋರ್ಸ್ ಮೋಟಾರ್ಸ್

ಈಗಿರುವ ಗೂರ್ಖಾ ಎಕ್ಸ್ ಟ್ರಿಮ್ ನಲ್ಲಿ 2.2 ಲೀಟರಿನ 4 ಸಿಲಿಂಡರ್ ನ ಸಿಆರ್‍‍ಡಿಐ ಎಂಜಿನ್ ಇದ್ದು, ಅದು 140 ಬಿಹೆಚ್‍ಪಿ ಯನ್ನು 3,800 ಆರ್‍‍ಪಿಎಂ ನಲ್ಲಿ ಮತ್ತು 321 ಎನ್ಎಂ ಟಾರ್ಕ್ ಅನ್ನು 1,600 ಆರ್‍‍ಪಿಎಂ ನಲ್ಲಿ ಉತ್ಪಾದಿಸಲಿದೆ. ಈ ಎಂಜಿನ್ 5 ಸ್ಪೀಡಿನ ಮ್ಯಾನುವಲ್ ಟ್ರಾನ್ಸ್ ಮಿಷನ್ ಹೊಂದಿದೆ. ಈ ವಾಹನದ ಬೆಲೆಯು ಭಾರತದ ಎಕ್ಸ್ ಶೋ ರೂಂ ದರದಂತೆ ರೂ. 13 ಲಕ್ಷಗಳು.

MOST READ: ವೆಸ್ಪಾ ಅರ್ಬನ್ ಕ್ಲಬ್ 125 ಸ್ಕೂಟರ್ ಬೆಲೆ ಬಹಿರಂಗ

ಗೂರ್ಖಾ ಅಪ್‍‍ಗ್ರೇಡ್ ಮಾಡಲಿದೆ ಫೋರ್ಸ್ ಮೋಟಾರ್ಸ್

ಡ್ರೈವ್‍ಸ್ಪಾರ್ಕ್ ಅಭಿಪ್ರಾಯ

ಫೋರ್ಸ್ ನ ಗೂರ್ಖಾ ದಲ್ಲಿ ಅಪ್ ಗ್ರೇಡ್ ಅವಶ್ಯಕತೆ ಇದೆ. ಬಹಳ ಜನ ಈ ವಾಹನವನ್ನು ಇಷ್ಟ ಪಟ್ಟರೂ ಸುರಕ್ಷತಾ ನಿಯಮಗಳನ್ನು ಅಳವಡಿಸಿಕೊಳ್ಳದ ಕಾರಣ ಖರೀದಿಸಲು ಹಿಂಜರಿಯುತ್ತಿದ್ದಾರೆ. ಮುಂದಿನ ತಲೆಮಾರಿನ ವಾಹನದಲ್ಲಿ ಈ ನಿಯಮಗಳನ್ನು ಅಳವಡಿಸಿ ಕೊಳ್ಳುತ್ತಿರುವ ಕಾರಣ ಹೆಚ್ಚಿನ ಜನರು ಖರೀದಿಸುವ ಸಾಧ್ಯತೆಗಳಿವೆ. ಫೋರ್ಸ್ ಮೋಟಾರ್ಸ್ ಮಾರುಕಟ್ಟೆಯಲ್ಲಿ ಹೆಚ್ಚಿನ ಹಿಡಿತ ಸಾಧಿಸಬೇಕಾದರೆ ವಾಹನದ ಬೆಲೆಯನ್ನು ಸ್ಪರ್ಧಾತ್ಮಕ ಬೆಲೆಯಲ್ಲಿ ನಿಗದಿಪಡಿಸುವುದು ಅವಶ್ಯಕ.

Most Read Articles

Kannada
English summary
Force Motors Upgrades The Gurkha — Expected Launch In 2020 - Read in Kannada
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X