ಮಾರಾಟದಲ್ಲಿ ಕುಸಿತ ಕಂಡ ಫೋರ್ಡ್ ಕಾರುಗಳು

ಕಳೆದ ನವೆಂಬರ್ ತಿಂಗಳಲ್ಲಿ ಫೋರ್ಡ್ ಇಂಡಿಯಾ ಕಂಪನಿಯು ತನ್ನ ಸರಣಿಯಲ್ಲಿರುವ ಕಾರುಗಳ ಮಾರಾಟದ ವರದಿಯನ್ನು ಬಹಿರಂಗಪಡಿಸಿದೆ. ಫೋರ್ಡ್ ಇಂಡಿಯಾ ಕಂಪನಿಯ ಕಾರುಗಳ ಮಾರಾಟದಲ್ಲಿ ಕುಸಿತ ಕಂಡಿದೆ.

ಮಾರಾಟದಲ್ಲಿ ಕುಸಿತ ಕಂಡ ಫೋರ್ಡ್ ಕಾರುಗಳು

ಕಳೆದ ನವೆಂಬರ್ ತಿಂಗಳಲ್ಲಿ ಫೋರ್ಡ್ ಇಂಡಿಯಾ ಕಂಪನಿಯ ಸರಣಿಯಲ್ಲಿರುವ ಒಟ್ಟು ಕಾರುಗಳ 5,392 ಯು‍‍ನಿ‍‍ಟ್‍ಗಳು ಮಾರಾಟವಾಗಿವೆ. ಕಳೆದ ವರ್ಷದ ನವೆಂಬರ್ ತಿಂಗಳಲ್ಲಿ 5,392 ಯು‍‍ನಿ‍‍ಟ್‍ಗಳು ಮಾರಾಟವಾಗಿತ್ತು. ಕಳೆದ ವರ್ಷದ ಮಾರಾಟಕ್ಕೆ ಹೋಲಿಸಿದರೆ ಶೇ.15 ರಷ್ಟು ಕುಸಿತವಾಗಿದೆ. ಫೋರ್ಡ್ ಕಂಪನಿಯ ಸರಣಿಯಲ್ಲಿ ಫೋರ್ಡ್ ಫಿಗೋ ಉತ್ತಮವಾಗಿ ಮಾರಾಟವಾಗುತ್ತಿದೆ.

ಮಾರಾಟದಲ್ಲಿ ಕುಸಿತ ಕಂಡ ಫೋರ್ಡ್ ಕಾರುಗಳು

ಕಳೆದ ನವೆಂಬರ್ ತಿಂಗಳಲ್ಲಿ ಫೋರ್ಡ್ ಫಿಗೋ ಕಾರಿನ 743 ಯು‍‍ನಿ‍‍ಟ್‍ಗಳು ಮಾರಾಟವಾಗಿವೆ. ಕಳೆದ ವರ್ಷದ ನವೆಂಬರ್ ತಿಂಗಳಲ್ಲಿ 116 ಯು‍‍ನಿ‍‍ಟ್‍ಗಳು ಮಾರಾಟವಾಗಿತ್ತು. ಅದೇ ರೀತಿ ಈ ವರ್ಷದ ಆಕ್ಟೋಬರ್ ತಿಂಗಳಲ್ಲಿ ಫೋರ್ಡ್ ಫಿಗೋ ಕಾರಿನ 967 ಯು‍‍ನಿ‍‍ಟ್‍ಗಳು ಮಾರಾಟವಾಗಿತ್ತು. ನವೆಂಬರ್ ತಿಂಗಳು ಬಂದಾಗ ಶೇ.23ರಷ್ಟು ಮಾರಾಟ ಕುಸಿದಿದೆ.

ಮಾರಾಟದಲ್ಲಿ ಕುಸಿತ ಕಂಡ ಫೋರ್ಡ್ ಕಾರುಗಳು

ಫಿಗೋ ಪೆಟ್ರೋಲ್ ಹಾಗೂ ಡೀಸೆಲ್ ರೂಪಾಂತರಗಳಲ್ಲಿಯೂ ಲಭ್ಯವಿದೆ. 1.2 ಲೀಟರ್ ಪೆಟ್ರೋಲ್ ಎಂಜಿನ್ 95 ಬಿಎಚ್‍ಪಿ ಪವರ್ ಮತ್ತು 120 ಎನ್‍ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ, ಎಂಜಿನ್ ನೊಂದಿಗೆ 5-ಸ್ಪೀಡ್ ಮ್ಯಾನುವಲ್ ಗೇರ್‍‍ಬಾಕ್ಸ್ ಅನ್ನು ಜೋಡಿಸಲಾಗಿದ. ಫಿಗೋ 1.5 ಲೀಟರ್ ಪೆಟ್ರೋಲ್ ಎಂಜಿನ್ 121 ಬಿಎಚ್‍‍ಪಿ ಮತ್ತು 150 ಎನ್‍ಎಂ ಟಾರ್ಕ್ ಉತ್ಪಾದಿಸುತ್ತದೆ. ಎಂಜಿನ್ ನೊಂದಿಗೆ 6-ಸ್ಪೀಡ್ ಆಟೋಮ್ಯಾಟಿಕ್ ಗೇರ್‍‍ಬಾಕ್ಸ್ ಅನ್ನು ಜೋಡಿಸಲಾಗಿದೆ.

ಮಾರಾಟದಲ್ಲಿ ಕುಸಿತ ಕಂಡ ಫೋರ್ಡ್ ಕಾರುಗಳು

ಕಳೆದ ನವೆಂಬರ್ ತಿಂಗಳಲ್ಲಿ ಫೋರ್ಡ್ ಆಸ್ಪೈರ್ ಕಾರಿನ 471 ಯು‍‍ನಿ‍‍ಟ್‍ಗಳು ಮಾರಾಟವಾಗಿವೆ. ಕಳೆದ ವರ್ಷದ ನವೆಂಬರ್ ತಿಂಗಳಲ್ಲಿ ಫೋರ್ಡ್ ಆಸ್ಪೈರ್ ಕಾರಿನ 1,583 ಯು‍‍ನಿ‍‍ಟ್‍ಗಳು ಮಾರಾಟವಾಗಿತ್ತು. ಕಳೆದ ಈ ವರ್ಷದ ನವೆಂಬರ್ ತಿಂಗಳಲ್ಲಿ ಶೇ.70ರಷ್ಟು ಕುಸಿತವಾಗಿದೆ.

ಮಾರಾಟದಲ್ಲಿ ಕುಸಿತ ಕಂಡ ಫೋರ್ಡ್ ಕಾರುಗಳು

ಆಸ್ಪೈರ್ ಕಾರಿನ 1.2 ಲೀಟರ್ ಪೆಟ್ರೋಲ್ ಎಂಜಿನ್ 95 ಬಿಎಚ್‍‍ಪಿ ಪವರ್ ಮತ್ತು 120 ಎನ್‍ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಎಂಜಿನ್‍‍ನೊಂದಿಗೆ 5-ಸ್ಪೀಡ್ ಗೇರ್‍‍ಬಾಕ್ಸ್ ಅನ್ನು ಜೋಡಿಸಲಾಗಿದೆ. ಅದೆ ರೀತಿ 1.5 ಲೀಟರ್ ಪೆಟ್ರೋ ಎಂಜಿನ್ 121 ಬಿಎಚ್‍‍ಪಿ ಪವರ್ ಮತ್ತು 136 ಎನ್‍ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಎಂಜಿನ್‍‍ನೊಂದಿಗೆ ಆಟೋಮ್ಯಾಟಿಕ್ ಗೇರ್‍‍ಬಾಕ್ಸ್ ಅನ್ನು ಜೋಡಿಸಲಾಗಿದೆ.

ಮಾರಾಟದಲ್ಲಿ ಕುಸಿತ ಕಂಡ ಫೋರ್ಡ್ ಕಾರುಗಳು

ಕಳೆದ ನವೆಂಬರ್ ತಿಂಗಳಲ್ಲಿ ಫೋರ್ಡ್ ಇಕೊಸ್ಪೋರ್ಟ್ ಕಾರಿನ 2,822 ಯುನಿ‍‍ಟ್‍‍ಗಳು ಮಾರಾಟವಾಗಿವೆ. ಕಳೆದ ವರ್ಷದ ನವೆಂಬರ್ ತಿಂಗಳಲ್ಲಿ ಫೋರ್ಡ್ ಇಕೊಸ್ಪೋರ್ಟ್ ಕಾರಿನ 2,724 ಯು‍‍ನಿ‍‍ಟ್‍ಗಳು ಮಾರಾಟವಾಗಿತ್ತು.

ಮಾರಾಟದಲ್ಲಿ ಕುಸಿತ ಕಂಡ ಫೋರ್ಡ್ ಕಾರುಗಳು

ಇಕೋಸ್ಪೋರ್ಟ್ ಪೆಟ್ರೋಲ್ ರೂಪಾಂತರವು 1.5 ಲೀಟರ್ ಎಂಜಿನ್ 121 ಬಿಎಚ್‍ಪಿ ಪವರ್ ಮತ್ತು 150 ಎನ್‍ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ 6 ರೂಪಾಂತರಗಳು 5-ಸ್ಪೀಡ್ ಮ್ಯಾನುವಲ್ ಗೇರ್‍‍ಬಾಕ್ಸ್ ಹೊಂದಿದ್ದರೆ ಟೈಟಾನಿಯಮ್ ಪ್ಲಸ್ ಟಿಐ-ವಿ‍ಸಿಟಿ ಪೆಟ್ರೋಲ್ ಮಾದರಿಯು 6-ಸ್ಪೀಡ್ ಆಟೋಮ್ಯಾಟಿಕ್ ಗೇರ್‍‍ಬಾಕ್ಸ್ ಜೋಡಿಸಲಾಗಿದೆ.

ಮಾರಾಟದಲ್ಲಿ ಕುಸಿತ ಕಂಡ ಫೋರ್ಡ್ ಕಾರುಗಳು

ಇಕೋ ಸ್ಪೋರ್ಟ್ಸ್ ಡೀಸೆಲ್ ರೂಪಾಂತರವು 1.5 ಲೀಟರ್ ಎಂಜಿನ್ 99 ಬಿ‍ಎಚ್‍‍ಪಿ ಪವರ್ ಮತ್ತು 205 ಎನ್‍ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಎಂಜಿನ್‍ನೊಂದಿಗೆ 5-ಸ್ಪೀಡ್ ಮ್ಯಾನುವಲ್ ಗೇರ್‍‍ಬಾಕ್ಸ್ ಅನ್ನು ಜೋಡಿಸಲಾಗಿದೆ.

ಮಾರಾಟದಲ್ಲಿ ಕುಸಿತ ಕಂಡ ಫೋರ್ಡ್ ಕಾರುಗಳು

ಕಳೆದ ನವೆಂಬರ್ ತಿಂಗಳಲ್ಲಿ ಫೋರ್ಡ್ ಕಂಪನಿಯ ಸರಣಿಯಲ್ಲಿರುವ ಉಳಿದ ಕಾರುಗಳಾದ ಫೋರ್ಡ್ ಇಂಡೀವರ್, ಫೋರ್ಡ್ ಫ್ರೀಸ್ಟೈಲ್ ಮತ್ತು ಫೋರ್ಡ್ ಮಸ್ಟಾಂಗ್ ಕಾರುಗಳ ಮಾರಾಟ ಕ್ರಮವಾಗಿ 724 ಯುನಿ‍‍ಟ್‍ಗಳು, 632 ಯುನಿ‍‍ಟ್‍ಗಳು ಮತ್ತು 0 ಯುನಿ‍‍ಟ್‍ಗಳಷ್ಟು ಆಗಿದೆ.

Most Read Articles

Kannada
Read more on ಫೋರ್ಡ್ ford
English summary
Ford India sales break up Nov 2019 - Read in Kannada
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X