ದೇಶಿಯ ಮಾರುಕಟ್ಟೆಯಿಂದ ಕಣ್ಮರೆಯಾದ ಐದು ಫೋರ್ಡ್ ಕಾರುಗಳು

ಫೋರ್ಡ್ ಕಂಪನಿಯು ಹಲವು ವರ್ಷಗಳಿಂದ ದೇಶಿಯ ಮಾರುಕಟ್ಟೆಯಲ್ಲಿದೆ. ಅಮೇರಿಕಾ ಮೂಲದ ಫೋರ್ಡ್ ಕಂಪನಿಯು, ದೇಶಿಯ ಮಾರುಕಟ್ಟೆಯಲ್ಲಿ ಸಣ್ಣ ಕಾರುಗಳಿಂದ ಎಸ್‍‍ಯುವಿಗಳವರೆಗೆ ಹಲವು ರೀತಿಯ ಕಾರುಗಳನ್ನು ಮಾರಾಟ ಮಾಡುತ್ತದೆ.

ದೇಶಿಯ ಮಾರುಕಟ್ಟೆಯಿಂದ ಕಣ್ಮರೆಯಾದ ಐದು ಫೋರ್ಡ್ ಕಾರುಗಳು

ಇಕೋಸ್ಪೋರ್ಟ್, ಎಂಡೀವರ್, ಫಿಯೆಸ್ತಾ- ಫೋರ್ಡ್ ಕಂಪನಿಯ ಕೆಲವು ಜನಪ್ರಿಯ ವಾಹನಗಳಾಗಿವೆ. ಮಾರುಕಟ್ಟೆಯ ಅಗತ್ಯಗಳಿಗೆ ಅನುಗುಣವಾಗಿ ಕಂಪನಿಯು ಹಲವಾರು ವಾಹನಗಳನ್ನು ಬಿಡುಗಡೆಗೊಳಿಸಿತ್ತು. ಅವುಗಳಲ್ಲಿ ಕೆಲವು ವಾಹನಗಳು ಜನಪ್ರಿಯವಾಗಲಿಲ್ಲ. ಜೊತೆಗೆ ಮಾರುಕಟ್ಟೆಯಿಂದಲೇ ಕಣ್ಮರೆಯಾದವು. ಈ ರೀತಿಯಾಗಿ ದೇಶಿಯ ಮಾರುಕಟ್ಟೆಯಿಂದ ಕಣ್ಮರೆಯಾದ ಐದು ಫೋರ್ಡ್ ಕಾರುಗಳ ಬಗ್ಗೆ ನೋಡೋಣ.

ದೇಶಿಯ ಮಾರುಕಟ್ಟೆಯಿಂದ ಕಣ್ಮರೆಯಾದ ಐದು ಫೋರ್ಡ್ ಕಾರುಗಳು

ಫೋರ್ಡ್ ಎಸ್ಕಾರ್ಟ್

ಫೋರ್ಡ್ ಕಂಪನಿಯು 1995ರಲ್ಲಿ ದೇಶಿಯ ಮಾರುಕಟ್ಟೆಗೆ ಮರಳಿದಾಗ ಎಸ್ಕಾರ್ಟ್ ಕಾರ್ ಅನ್ನು ಬಿಡುಗಡೆಗೊಳಿಸಿತು. ಈ ಸೆಡಾನ್ ಕಾರ್ ಅನ್ನು 1996 ರಿಂದ 2001ರವರೆಗೆ ಮಾರಾಟ ಮಾಡಲಾಗುತ್ತಿತ್ತು. ಆದರೆ ಈ ಕಾರು ದೇಶಿಯ ಮಾರುಕಟ್ಟೆಯಲ್ಲಿ ಜನಪ್ರಿಯವಾಗಲಿಲ್ಲ.

ದೇಶಿಯ ಮಾರುಕಟ್ಟೆಯಿಂದ ಕಣ್ಮರೆಯಾದ ಐದು ಫೋರ್ಡ್ ಕಾರುಗಳು

ಎಸ್ಕಾರ್ಟ್ ಕಾರ್ ಅನ್ನು 1.6 ಲೀಟರಿನ ಪೆಟ್ರೋಲ್ ಹಾಗೂ ಡೀಸೆಲ್ ಎಂಜಿನ್‍‍ಗಳಲ್ಲಿ ಮಾರಾಟ ಮಾಡಲಾಗುತ್ತಿತ್ತು. ಪವರ್ ಸ್ಟೀಯರಿಂಗ್, ಪವರ್ ಫ್ರಂಟ್ ವಿಂಡೋ, ಒಆರ್‌ವಿಎಂ, ಏರ್ ಕಂಡೀಷನ್ ಹಾಗೂ ಮ್ಯೂಸಿಕ್ ಸಿಸ್ಟಂನಂತಹ ಹಲವು ಫೀಚರ್‍‍ಗಳನ್ನು ಹೊಂದಿದ್ದರೂ ಈ ಕಾರು ಗ್ರಾಹಕರನ್ನು ಸೆಳೆಯಲು ವಿಫಲವಾಯಿತು.

ದೇಶಿಯ ಮಾರುಕಟ್ಟೆಯಿಂದ ಕಣ್ಮರೆಯಾದ ಐದು ಫೋರ್ಡ್ ಕಾರುಗಳು

ಫೋರ್ಡ್ ಫ್ಯೂಷನ್

ಫೋರ್ಡ್ 2004ರಲ್ಲಿ ಭಾರತದಲ್ಲಿ ಫ್ಯೂಷನ್ ಕಾರ್ ಅನ್ನು ಬಿಡುಗಡೆಗೊಳಿಸಿತು. ಈ ಕಾರ್ ಅನ್ನು ಕ್ರಾಸ್ಒವರ್ ಎಂಬ ಹೊಸ ಸೆಗ್‍‍ಮೆಂಟಿನಲ್ಲಿ ಬಿಡುಗಡೆಗೊಳಿಸಲಾಯಿತು. ಈ ಕಾರು ಸುಮಾರು ಆರು ವರ್ಷಗಳ ಕಾಲ ಮಾರುಕಟ್ಟೆಯಲ್ಲಿತ್ತು.

ದೇಶಿಯ ಮಾರುಕಟ್ಟೆಯಿಂದ ಕಣ್ಮರೆಯಾದ ಐದು ಫೋರ್ಡ್ ಕಾರುಗಳು

ಹಲವರ ನೆಚ್ಚಿನ ಆಯ್ಕೆಯಾಗಿತ್ತು. ಹಲವರು ಈ ವಾಹನವನ್ನು ಕ್ರಾಸ್ಒವರ್ ಬದಲಿಗೆ ದೊಡ್ಡ ಹ್ಯಾಚ್‌ಬ್ಯಾಕ್ ಎಂದು ಪರಿಗಣಿಸಿದರು. ಕಾರು ಪ್ರಿಯರು ಈ ಕಾರ್ ಅನ್ನು ಖರೀದಿಸಲು ಹೆಚ್ಚಿನ ಉತ್ಸಾಹವನ್ನು ತೋರಲಿಲ್ಲ. ಈ ಕಾರ್ ಅನ್ನು 1.4 ಲೀಟರಿನ ಡೀಸೆಲ್ ಹಾಗೂ 1.6 ಲೀಟರಿನ ಪೆಟ್ರೋಲ್ ಎಂಜಿನ್‍‍ನಲ್ಲಿ ಮಾರಾಟ ಮಾಡಲಾಗುತ್ತಿತ್ತು.

ದೇಶಿಯ ಮಾರುಕಟ್ಟೆಯಿಂದ ಕಣ್ಮರೆಯಾದ ಐದು ಫೋರ್ಡ್ ಕಾರುಗಳು

ಫೋರ್ಡ್ ಫಿಯೆಸ್ಟಾ ಎಸ್

ಫೋರ್ಡ್ ಫಿಯೆಸ್ಟಾ, ದೇಶಿಯ ಮಾರುಕಟ್ಟೆಯಲ್ಲಿ ಜನಪ್ರಿಯವಾದ ಕಾರ್ ಆಗಿತ್ತು. ಫೋರ್ಡ್ ಈ ಸೆಡಾನ್‌ ಕಾರಿನ ಸ್ಪೋರ್ಟಿಯರ್ ಆವೃತ್ತಿಯನ್ನು ಸಹ ಎಸ್ ಎಂಬ ಹೆಸರಿನಲ್ಲಿ ಬಿಡುಗಡೆಗೊಳಿಸಿತು.

MOST READ: ವಾಹನ ಸವಾರರೇ ಎಚ್ಚರ: ನಕಲಿ ಪೊಲೀಸರಿಂದ ಹಗಲು ದರೋಡೆ

ದೇಶಿಯ ಮಾರುಕಟ್ಟೆಯಿಂದ ಕಣ್ಮರೆಯಾದ ಐದು ಫೋರ್ಡ್ ಕಾರುಗಳು

ಈ ಕಾರಿನಲ್ಲಿದ್ದ ಬಾಡಿ ಕಿಟ್‌ನಿಂದಾಗಿ ಈ ಕಾರು ಹೆಚ್ಚು ಆಕ್ರಮಣಕಾರಿ ಹಾಗೂ ಸ್ಪೋರ್ಟಿಯಾಗಿ ಕಾಣುತ್ತಿತ್ತು. ಫೋರ್ಡ್, ಈ ಕಾರಿನಲ್ಲಿ ಗಟ್ಟಿಯಾದ ಸಸ್ಪೆಂಷನ್ ಅನ್ನು ಅಳವಡಿಸಿತ್ತು. ಮಾರಾಟವಾಗುತ್ತಿದ್ದ ಕಾಲದಲ್ಲಿ ಈ ಕಾರು, ಕಾರು ಪ್ರಿಯರ ನೆಚ್ಚಿನ ಆಯ್ಕೆಯಾಗಿತ್ತು.

MOST READ: ಭಾರತದ ವಿವಿಧ ರಾಜ್ಯಗಳ ಪೊಲೀಸರ ಬಳಿಯಿರುವ ಬೈಕುಗಳಿವು

ದೇಶಿಯ ಮಾರುಕಟ್ಟೆಯಿಂದ ಕಣ್ಮರೆಯಾದ ಐದು ಫೋರ್ಡ್ ಕಾರುಗಳು

ಫೋರ್ಡ್ ಫಿಯೆಸ್ಟಾ ಎಫ್ಎಲ್

ಫೋರ್ಡ್ ಫಿಯೆಸ್ಟಾ ಕಾರಿನ ಸಾಂಪ್ರದಾಯಿಕ ವಿನ್ಯಾಸವನ್ನು 2014ರಲ್ಲಿ ಬದಲಿಸಲಾಯಿತು. ಮಧ್ಯಮ ಗಾತ್ರದ ಸೆಡಾನ್‌ನಲ್ಲಿ ಆಸ್ಟನ್ ಮಾರ್ಟಿನ್ ಕಾರಿನಲ್ಲಿದ್ದಂತಹ ಗ್ರಿಲ್ ಅಳವಡಿಸಲಾಯಿತು. ನಂತರ ಕಾರು ಪ್ರಿಯರು ಈ ಕಾರಿನ ಮೇಲಿನ ಆಸಕ್ತಿಯನ್ನು ಕಳೆದುಕೊಂಡರು.

MOST READ: ಕಾರ್ ಡೆಲಿವರಿ ಸಮಯದಲ್ಲಿ ಡ್ಯಾನ್ಸ್ ಮಾಡಿದ ಶೋರೂಂ ಸಿಬ್ಬಂದಿ

ದೇಶಿಯ ಮಾರುಕಟ್ಟೆಯಿಂದ ಕಣ್ಮರೆಯಾದ ಐದು ಫೋರ್ಡ್ ಕಾರುಗಳು

89 ಬಿಎಚ್‌ಪಿ ಪವರ್ ಹಾಗೂ 209 ಎನ್‌ಎಂ ಟಾರ್ಕ್ ಉತ್ಪಾದಿಸುವ 1.5-ಲೀಟರ್ ಟರ್ಬೋಚಾರ್ಜ್ಡ್ ಡೀಸೆಲ್ ಎಂಜಿನ್ ಅಳವಡಿಸಲಾದರೂ, ಈ ಸೆಡಾನ್ ಕಾರು ಗ್ರಾಹಕರನ್ನು ತನ್ನತ್ತ ಸೆಳೆಯಲಿಲ್ಲ. ಈ ಕಾರು ಮಾರುಕಟ್ಟೆಯಲ್ಲಿದ್ದ ಸಮಯದಲ್ಲಿ ಬಿಡುಗಡೆಯಾದ ಹೋಂಡಾ ಸಿಟಿ ಜನಪ್ರಿಯವಾದ ಕಾರಣ ಈ ಕಾರಿನ ಮಾರಾಟವು ಕುಸಿಯಿತು. ನಂತರ ಈ ಕಾರ್ ಅನ್ನು ಸ್ಥಗಿತಗೊಳಿಸಲಾಯಿತು.

ದೇಶಿಯ ಮಾರುಕಟ್ಟೆಯಿಂದ ಕಣ್ಮರೆಯಾದ ಐದು ಫೋರ್ಡ್ ಕಾರುಗಳು

ಫೋರ್ಡ್ ಮೊಂಡಿಯೊ

ಅಮೇರಿಕಾ ಮೂಲದ ಫೋರ್ಡ್ ಕಂಪನಿಯು ದೊಡ್ಡ ಗಾತ್ರದ ಎಸ್‍‍ಯುವಿಗಳನ್ನು ತಯಾರಿಸಲು ಹೆಸರುವಾಸಿಯಾಗಿದೆ. 2004ರಲ್ಲಿ, ಫೋರ್ಡ್ ಕಂಪನಿಯು, ಬಿಎಂಡಬ್ಲ್ಯು 3 ಸೀರಿಸ್, ಮರ್ಸಿಡಿಸ್ ಬೆಂಜ್ ಸಿ ಕ್ಲಾಸ್ ಹಾಗೂ ಆಡಿ ಎ4 ಕಾರುಗಳಿಗೆ ಪೈಪೋಟಿ ನೀಡಲು ಮೊಂಡಿಯೊ ಕಾರ್ ಅನ್ನು ಬಿಡುಗಡೆಗೊಳಿಸಿತು.

ದೇಶಿಯ ಮಾರುಕಟ್ಟೆಯಿಂದ ಕಣ್ಮರೆಯಾದ ಐದು ಫೋರ್ಡ್ ಕಾರುಗಳು

ಈ ಕಾರಿನಲ್ಲಿದ ಪೆಟ್ರೋಲ್ ಎಂಜಿನ್ 142 ಬಿಎಚ್‌ಪಿ ಪವರ್ ಉತ್ಪಾದಿಸಿದರೆ, ಡೀಸೆಲ್ ಎಂಜಿನ್ 128 ಬಿಎಚ್‌ಪಿ ಪವರ್ ಉತ್ಪಾದಿಸುತ್ತಿತ್ತು. ಆದರೆ ಹೆಚ್ಚು ಬೆಲೆಯನ್ನು ಹೊಂದಿದ್ದ ಕಾರಣ ಈ ಕಾರು ಹೆಚ್ಚಿನ ಪ್ರಮಾಣದಲ್ಲಿ ಮಾರಾಟವಾಗಲಿಲ್ಲ. ಆದ ಕಾರಣ ಈ ಕಾರ್ ಅನ್ನು 2006ರಲ್ಲಿ ಸ್ಥಗಿತಗೊಳಿಸಲಾಯಿತು.

Most Read Articles

Kannada
Read more on ಫೋರ್ಡ್ ford
English summary
Ford cars discontinued from Indian market - Read in kannada
Story first published: Saturday, August 24, 2019, 11:17 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X