ನಿಯಂತ್ರಣ ತಪ್ಪಿ ಹೆದ್ದಾರಿಯಲ್ಲಿ ಪಲ್ಟಿ ಹೊಡೆದ ಫೋರ್ಡ್ ಇಕೋಸ್ಪೋರ್ಟ್ - ಚಾಲಕ ಸೇಫ್

ಫೋರ್ಡ್ ಇಕೋಸ್ಪೋರ್ಟ್ ಪ್ರಸ್ಥುತ ಮಾರುಕಟ್ಟೆಯಲ್ಲಿರುವ ಕಾಂಪ್ಯಾಕ್ಟ್ ಎಸ್‍ಯುವಿ ಕಾರುಗಳಲ್ಲಿ ಹಳೆಯ ಮಾಡಲ್ ಅಂತಾನೇ ಹೇಳ್ಬೋದು. ಅದಾಗ್ಯೂ ಇದರಲ್ಲಿ ನೀಡಲಾದ ಅಧಿಕ ಸಾಮರ್ಥ್ಯದ ಎಂಜಿನ್, ಉತ್ತಮ ಡೈನಾಮಿಕ್ಸ್ ಮತ್ತು ಉತ್ತಮ ಗುಣಮಟ್ಟದ ನಿರ್ಮಾಣವನ್ನು ಹೊಂದಿರುವ ಈ ಕಾರು ಇಂದಿಗೂ ಸಹ ಅದೆಷ್ಟೋ ಜನರ ಅಚ್ಚುಮೆಚ್ಚಿನ ಕಾರಾಗಿದೆ.

ನಿಯಂತ್ರಣ ತಪ್ಪಿ ಹೆದ್ದಾರಿಯಲ್ಲಿ ಪಲ್ಟಿ ಹೊಡೆದ ಫೋರ್ಡ್ ಇಕೋಸ್ಪೋರ್ಟ್ - ಚಾಲಕ ಸೇಫ್

ಕಳೆದ ತಿಂಗಳು ದೇಶಿಯ ಮಾರುಕಟ್ಟೆಯಲ್ಲಿ ಫೋರ್ಡ್ ಇಕೋಸ್ಪೋರ್ಟ್ ಕಾರಿನ ಥಂಡರ್ ಎಡಿಷನ್ ಬಿಡುಗಡೆಯಾಗಿದ್ದು, ಇದು ಟೈಟಾನಿಯಂ 1.5 ಲೀಟರ್ ಪೆಟ್ರೋಲ್ ಎಂಜಿನ್ ವೇರಿಯೆಂಟ್‍ನಲ್ಲಿ ಆಯ್ಕೆಯಾಗಿ ಖರೀದಿ ಮಾಡಬಹುದಾಗಿದೆ. ಥಂಡರ್ ಎಡಿಷನ್ ಕಾರು ಹೊರ ವಿನ್ಯಾಸ ಮತ್ತು ಹೆಚ್ಚು ವೈಶಿಷ್ಟ್ಯತೆಗಳಲ್ಲಿ ಬದಲಾವಣೆಗಳಾನ್ನು ಹೊತ್ತು ಬಿಡುಗಡೆಗೊಂಡಿದ್ದು, ರೆಗ್ಯೂಲರ್ ಮಾದರಿಗಿಂತಲೂ ಸ್ಪೋರ್ಟಿ ಲುಕ್ ಅನ್ನು ಹೊಂದಿದೆ.

ನಿಯಂತ್ರಣ ತಪ್ಪಿ ಹೆದ್ದಾರಿಯಲ್ಲಿ ಪಲ್ಟಿ ಹೊಡೆದ ಫೋರ್ಡ್ ಇಕೋಸ್ಪೋರ್ಟ್ - ಚಾಲಕ ಸೇಫ್

ಫೋರ್ಡ್ ಸಂಸ್ಥೆಯ ಉತ್ಪಾದಕರು ಇತ್ತೀಚೆಗೆ ತಮ್ಮ ಟೈಟಾನಿಯಂ+ ವೇರಿಯೆಂಟ್‍ನಲ್ಲಿರುವ SYNC3 ಇನ್ಫೋಟೈನ್ಮೆಂಟ್ ಸಿಸ್ಟಂ, ಲೆಧರ್‍‍ನಿಂದ ಸಜ್ಜುಗೊಂಡ ಸೀಟ್‍ಗಳು ಮತ್ತು ಕ್ರೂಸ್ ಕಂಟ್ರೋಲರ್ ಅನ್ನು ಅಳವಡಿಸಲು ನಿಲ್ಲಿಸಿದರು. ಇವುಗಳ ನಂತರ ಇದೀಗ ಈ ಕಾರಿನ ಉತ್ಪಾದನ ಗುಣಮಟ್ಟದ ಕುರಿತಾಗಿ ಒಂದು ವಿಡಿಯೋ ಬಹಿರಂಗಗೊಂಡಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ಸಾಮಾಜಿಕ ಜಾಲತಾಣವಾದ ಫೇಸ್‍ಬುಕ್‍ನಲ್ಲಿ ಫೋರ್ಡ್ ಇಕೋಸ್ಪೋರ್ಟ್ ಎಸ್‍ಯುವಿ ಕಾರು ಪಠಾನ್‍‍ಕೋಟ್‍ನ ಹೆದ್ದಾರಿಯಲ್ಲಿ ಅಪಘಾತಕ್ಕೀಡಾಗಿದ್ದು, ಈ ದೃಶ್ಯವು ಸ್ಥಳೀಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ವಿಡಿಯೋವನ್ನು ಗಮನಿಸಿದ್ದಲ್ಲಿ, ನಿಯಂತ್ರಣ ತಪ್ಪಿದ ಫೋರ್ಡ್ ಇಕೋಸ್ಪೋರ್ಟ್ ಕಾರು ಪಲ್ಟಿ ಹೊಡೆದು ರಸ್ತೆಯ ಬದಿಯಲ್ಲಿ ಬಂದು ನಿಂತಿದೆ.

ಸಿಸಿಟಿವಿಯಲ್ಲಿ ಸೆರೆಹಿಡಿಯಲಾದ ಮೊದಲನೆಯ ವಿಡಿಯೋವನ್ನು ಗಮನಿಸಿದ್ದಲ್ಲಿ ಅತೀ ವೇಗದಲ್ಲಿ ಚಲಿಸುತ್ತಿದ್ದ ಫೋರ್ಟ್ ಇಕೋಸ್ಪೋರ್ಟ್ ಕಾರು ನಿಯಂತ್ರಣ ತಪ್ಪಿ ಪಲ್ಟಿ ಹೊಡೆದಿದೆ. ಪಲ್ಟಿ ಹೊಡೆದು ರಸ್ತೆ ಬದಿಯಲ್ಲಿ ನಿಂತಿದ್ದ ಕಾರಿನಿಂದ ಸರ್ವೇ ಸಾಧಾರಣವಾಗಿ ಚಾಲಕನು ಹೊರ ಬಂದಿದ್ದಾನೆ. ಇದರಿಂದ ಫೋರ್ಡ್ ಇಕೋಸ್ಪೋರ್ಟ್ ಕಾರಿನ ಉತ್ಪಾದನಾ ಗುಣಮಟ್ಟದ ಸಾಮರ್ಥ್ಯವನ್ನು ಈ ದೃಶ್ಯದಲ್ಲಿ ನೀವು ಕಾಣಬಹಾಗಿದೆ.

ಅಪಘಾತ ನಡೆದ ಸ್ಥಳದಲ್ಲಿಯೇ ಇದ್ದ ಸ್ಥಳೀಯರೊಬ್ಬರು, ಅತೀ ವೇಗದಲ್ಲಿ ಬರುತ್ತಿದ್ದ ಈ ಕಾರು ನಿಯಂತ್ರಣ ತಪ್ಪಿದಿರುವುದಾಗಿ ಮತ್ತು ಆ ಅಪಘಾತದಿಂದ ಚಾಲಕನು ಸಣ್ಣ ಪುಟ್ಟ ಗಾಯಗಳಿಂದ ಹೊರ ಬಂದಿದ್ದಾರೆ. ಹೀಗಾಗಿ ಫೋರ್ಡ್ ಇಕೋಸ್ಪೋರ್ಟ್ ಕಾರಿನ ಉತ್ಪಾದನಾ ಗುಣಮಟ್ಟವನ್ನು ಅವರು ಶ್ಲಾಘಿಸಿದ್ದಾರೆ.

ನಿಯಂತ್ರಣ ತಪ್ಪಿ ಹೆದ್ದಾರಿಯಲ್ಲಿ ಪಲ್ಟಿ ಹೊಡೆದ ಫೋರ್ಡ್ ಇಕೋಸ್ಪೋರ್ಟ್ - ಚಾಲಕ ಸೇಫ್

ಸುರಕ್ಷಾ ಸಾಧನಗಳು

ಅಪಘಾತಕ್ಕೀಡಾದ ಫೋರ್ಡ್ ಇಕೋಸ್ಪೋರ್ಟ್ ಕಾರು ಯಾವ ವೇರಿಯೆಂಟ್ ಎಂದು ಗುರುತಿಸಲಾಗಲಿಲ್ಲವಾದರೂ, ಈ ಕಾರಿನ ಟಾಪ್ ಎಂಡ್ ವೇರಿಯೆಂಟ್ 6 ಏರ್‍‍ಬ್ಯಾಗ್‍ಗಳು, ಎಬಿಎಸ್‍ನೊಂದಿಗೆ ಇಬಿಡಿ, ರಿಯರ್ ಪಾರ್ಕಿಂಗ್ ಸೆನ್ಸಾರ್ಸ್‍ನೊದಿಗೆ ಕ್ಯಾಮೆರಾ ಸೇರಿದಂತೆ ಇನ್ನು ಹಲವಾರು ಸುರಕ್ಷಾ ಸಾಧನಗಳನ್ನು ಒಳಗೊಂಡಿದೆ.

ನಿಯಂತ್ರಣ ತಪ್ಪಿ ಹೆದ್ದಾರಿಯಲ್ಲಿ ಪಲ್ಟಿ ಹೊಡೆದ ಫೋರ್ಡ್ ಇಕೋಸ್ಪೋರ್ಟ್ - ಚಾಲಕ ಸೇಫ್

ಹೋಂಡಾ ಸಿಟಿ ಮತ್ತು ಮಾರುತಿ ಸುಜುಕಿ ಸಿಯಾಜ್‌ಗೆ ಟಕ್ಕರ್ ನೀಡುತ್ತಿರುವ ಟೊಯೊಟಾ ಯಾರಿಸ್ ಖರೀದಿಗೆ ಈಗಲೇ ಟೆಸ್ಟ್ ಡ್ರೈವ್ ಮಾಡಿ..!

ಇನ್ನು ಹೊಸದಾಗಿ ಬಿಡುಗಡೆಗೊಂಡ ಇಕೋಸ್ಪೋರ್ಟ್ ಥಂಡರ್ ಎಡಿಷನ್ ಮಾದರಿಯು ದೆಹಲಿ ಎಕ್ಸ್‌ಶೋರೂಂ ಪ್ರಕಾರ ಪೆಟ್ರೋಲ್ ಮಾದರಿಯು ರೂ.10.18 ಲಕ್ಷಕ್ಕೆ ಮತ್ತು ಡಿಸೇಲ್ ಮಾದರಿಯು ರೂ.10.68 ಲಕ್ಷ ಬೆಲೆ ಹೊಂದಿದ್ದು, ಕಳೆದ ತಿಂಗಳ ಹಿಂದಷ್ಟೇ ಮಾರಾಟದಿಂದ ಸ್ಥಗಿತಗೊಳಿಸಲಾಗಿರುವ ಸಿಗ್ನೆಚೆರ್ ವೆರಿಯೆಂಟ್ ಸ್ಥಾನವನ್ನು ಥಂಡರ್‌ ಎಡಿಷನ್ ತುಂಬಲಿದೆ.

ನಿಯಂತ್ರಣ ತಪ್ಪಿ ಹೆದ್ದಾರಿಯಲ್ಲಿ ಪಲ್ಟಿ ಹೊಡೆದ ಫೋರ್ಡ್ ಇಕೋಸ್ಪೋರ್ಟ್ - ಚಾಲಕ ಸೇಫ್

ಇನ್ನು ಇಕೋಸ್ಪೋರ್ಟ್ ಥಂಡರ್‌ಬರ್ಡ್ ಜೊತೆಗೆ ಇತರೆ ವೆರಿಯೆಂಟ್‌ಗಳ ಬೆಲೆಯಲ್ಲೂ ಬದಲಾಣೆಗೊಳಿಸಿರುವ ಫೋರ್ಡ್ ಸಂಸ್ಥೆಯು ಆರಂಭಿಕವಾಗಿ ರೂ.8 ಸಾವಿರದಿಂದ ಟಾಪ್ ಎಂಡ್ ಮಾದರಿಯ ಮೇಲೆ ರೂ. 57 ಸಾವಿರ ಬೆಲೆ ಕಡಿತ ಮಾಡಿದೆ.

ನಿಯಂತ್ರಣ ತಪ್ಪಿ ಹೆದ್ದಾರಿಯಲ್ಲಿ ಪಲ್ಟಿ ಹೊಡೆದ ಫೋರ್ಡ್ ಇಕೋಸ್ಪೋರ್ಟ್ - ಚಾಲಕ ಸೇಫ್

ಹೀಗಾಗಿ ಸದ್ಯ ಮಾರುಕಟ್ಟೆಯಲ್ಲಿ ಇಕೋಸ್ಪೋರ್ಟ್ ಮಾದರಿಯು ಆರಂಭಿಕವಾಗಿ ಎಕ್ಸ್‌ಶೋರೂಂ ಪ್ರಕಾರ ರೂ.7.69 ಲಕ್ಷಕ್ಕೆ ಮತ್ತು ಟಾಪ್ ಎಂಡ್ ಬೆಲೆಯು ರೂ. 11.90 ಲಕ್ಷಕ್ಕೆ ಖರೀದಿ ಲಭ್ಯವಿದ್ದು, ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಇಕೋಸ್ಪೋರ್ಟ್ ಕಾರುಗಳು 13 ವೆರಿಯೆಂಟ್‌ಗಳಲ್ಲಿ ಖರೀದಿಗೆ ಲಭ್ಯವಿವೆ.

ನಿಯಂತ್ರಣ ತಪ್ಪಿ ಹೆದ್ದಾರಿಯಲ್ಲಿ ಪಲ್ಟಿ ಹೊಡೆದ ಫೋರ್ಡ್ ಇಕೋಸ್ಪೋರ್ಟ್ - ಚಾಲಕ ಸೇಫ್

ಇದರಲ್ಲಿ 6 ವೆರಿಯೆಂಟ್‌ಗಳು ಪೆಟ್ರೋಲ್ ಮಾದರಿಯಲ್ಲಿ ಮತ್ತು 7 ಮಾದರಿಗಳು ಡೀಸೆಲ್ ವೆರಿಯೆಂಟ್‌ನಲ್ಲಿ ಖರೀದಿಗೆ ಲಭ್ಯವಿದ್ದು, ಇದೀಗ ಹೊಸದಾಗಿ ಬಿಡುಗಡೆಯಾಗಿರುವ ಥಂಡರ್‌ಬರ್ಡ್ ವೆರಿಯೆಂಟ್ ಕೂಡಾ ಎರಡು ಆವೃತ್ತಿಯಲ್ಲೂ ಖರೀದಿಸಬಹುದಾಗಿದೆ.

ನಿಯಂತ್ರಣ ತಪ್ಪಿ ಹೆದ್ದಾರಿಯಲ್ಲಿ ಪಲ್ಟಿ ಹೊಡೆದ ಫೋರ್ಡ್ ಇಕೋಸ್ಪೋರ್ಟ್ - ಚಾಲಕ ಸೇಫ್

ಹೊಸ ಆವೃತ್ತಿಯ ಥಂಡರ್ ಎಡಿಷನ್ ಕಾರು ಈಗಿರುವ ಟೈಟಾನಿಯಂ ಮಾದರಿಗಿಂತ ಹೆಚ್ಚಿನ ಮಟ್ಟದ ತಾಂತ್ರಿಕ ಸೌಲಭ್ಯ ಹೊಂದಿದ್ದು, 1.5 ಲೀಟರ್ ಟಿ‍‍ಡಿ‍‍ಸಿ‍ಐ 4 ಸಿಲಿಂಡರ್ ಇನ್‍‍ಲೈನ್ ಡಿ‍ಒ‍‍ಹೆಚ್‍‍ಸಿ ಡೀಸೆಲ್ ಎಂಜಿನ್ 1.5-ಲೀಟರ್ ಪೆಟ್ರೋಲ್ ಎಂಜಿನ್ ಹೊಂದಿದೆ.

ನಿಯಂತ್ರಣ ತಪ್ಪಿ ಹೆದ್ದಾರಿಯಲ್ಲಿ ಪಲ್ಟಿ ಹೊಡೆದ ಫೋರ್ಡ್ ಇಕೋಸ್ಪೋರ್ಟ್ - ಚಾಲಕ ಸೇಫ್

ಬಿಡುಗಡೆಯಾದ ಇಕೋಸ್ಪೋರ್ಟ್ ಥಂಡರ್ ಆವೃತ್ತಿಯಲ್ಲಿ 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಜೋಡಣೆ ಮಾಡಲಾಗಿದ್ದು, ಹೆಡ್‌ಲ್ಯಾಂಪ್ ಕ್ಲಸ್ಟರ್, ಬ್ಲ್ಯಾಕ್ಡ್ ಔಟ್ ಫಾಗ್ ಲ್ಯಾಂಪ್ ಬಿಜೆಲ್ಸ್, ವಿಂಗ್ ಮಿರರ್, 17-ಇಂಚಿನ ಅಲಾಯ್ ವೀಲ್ಹ್, ಡ್ಯುಯಲ್ ಟೋನ್ ಬ್ಯಾನೆಟ್ ಸೌಲಭ್ಯ ಹೊಂದಿದೆ.

Most Read Articles

Kannada
English summary
Ford Ecosport Accident Rolls Over Multiple Times Driver Unhurt. Read In Kannada
Story first published: Wednesday, July 24, 2019, 11:48 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X