ಸ್ಪಾಟ್ ಟೆಸ್ಟ್‌ನಲ್ಲಿ ಕಾಣಿಸಿಕೊಂಡ ಬಿಎಸ್-6 ಫೋರ್ಡ್ ಇಕೋಸ್ಪೋರ್ಟ್

ಅಮೆರಿಕಾದ ವಾಹನ ತಯಾರಕ ಕಂಪನಿಯಾದ ಫೋರ್ಡ್ ಮುಂದಿನ ವರ್ಷದಲ್ಲಿ ತಮ್ಮ ಬಿಎಸ್-6 ಇಕೋಸ್ಪೋರ್ಟ್ ಮಾದರಿಯನ್ನು ಭಾರತದಲ್ಲಿ ಬಿಡುಗಡೆ ಮಾಡಲು ಸಜ್ಜಾಗಿದೆ. ಇಕೋಸ್ಪೋರ್ಟ್ ಕಾಂಪ್ಯಾಕ್ಟ್-ಎಸ್‍ಯು‍ವಿ ಬಿಡುಗಡೆಗೊಳಿಸುವ ಮೊದಲು ಭಾರತದಲ್ಲಿ ಸ್ಪಾಟ್ ಟೆಸ್ಟ್ ನಡೆಸಲಾಗಿದೆ.

ಸ್ಪಾಟ್ ಟೆಸ್ಟ್‌ನಲ್ಲಿ ಕಾಣಿಸಿಕೊಂಡ ಬಿಎಸ್-6 ಇಕೋಸ್ಪೋರ್ಟ್

ಪ್ರಸ್ತುತ ತಲೆಮಾರಿನ ಎಕ್ಸ್‌ಯುವಿ 500 ಎಸ್‍‍ಯು‍ವಿಯನ್ನು ಬಿಎಸ್-6 ಎಂಜಿನ್ ಆಗಿ ನವೀಕರಿಸಲಾಗುತ್ತಿದೆ, ಇದರ ಸಲುವಾಗಿ ಭಾರತದಲ್ಲಿ ಸ್ಪಾಟ್ ಟೆಸ್ಟ್ ನಡೆಸಲಾಗಿದೆ ಎಂಬುದು ರಶ್ಲೇ ಸ್ಪೈ ಚಿತ್ರದಿಂದ ಬಹಿರಂಗವಾಗಿದೆ. ಕಂಪನಿಯು ತಮ್ಮ ಪ್ರಸ್ತುತ ಡೀಸೆಲ್ ಎಂಜಿನ್‍ ಮಾದರಿಗಳನ್ನು ಬಿಎಸ್-6 ಎಂಜಿನ್‍ ಮಾಲಿನ್ಯ ನಿಯಮಕ್ಕೆ ತಕ್ಕಂತೆ ನವೀಕರಿಸುವುದಾಗಿ ಹೇಳಿದೆ.

ಸ್ಪಾಟ್ ಟೆಸ್ಟ್‌ನಲ್ಲಿ ಕಾಣಿಸಿಕೊಂಡ ಬಿಎಸ್-6 ಇಕೋಸ್ಪೋರ್ಟ್

ಫೋರ್ಡ್ ಪ್ರಸ್ತುತ ಮಾದರಿಯು ಮೂರು ಎಂಜಿನ್ ಆಯ್ಕೆಗಳನ್ನು ಹೊಂದಿದೆ. 1.5 ಲೀಟರ್ ಮೂರು ಸಿಲಿಂಡರ್ ಪೆಟ್ರೋಲ್ ಎಂಜಿನ್ 121 ಬಿ‍ಹೆಚ್‍ಪಿ ಪವರ್ ಉತ್ಪಾದಿಸುತ್ತದೆ. 1.0 ಲೀಟರ್ ಮೂರು ಸಿಲಿಂಡರ್ ಟರ್ಬೊ-ಪೆಟ್ರೋಲ್ ಎಂಜಿನ್ 123 ಬಿ‍ಹೆಚ್‍‍ಪಿ ಪವರ್ ಉತ್ಪಾದಿಸಿದರೆ, 1.5 ಲೀಟರ್ ನಾಲ್ಕು ಸಿಲಿಂಡರ್ ಟರ್ಬೊ ಡೀಸೆಲ್ ಎಂಜಿನ್ 100 ಬಿ‍ಹೆಚ್‍‍ಪಿ ಪವರ್ ಅನ್ನು ಉತ್ಪಾದಿಸುತ್ತದೆ.

ಸ್ಪಾಟ್ ಟೆಸ್ಟ್‌ನಲ್ಲಿ ಕಾಣಿಸಿಕೊಂಡ ಬಿಎಸ್-6 ಇಕೋಸ್ಪೋರ್ಟ್

ಕಂಪನಿಯು ತಮ್ಮ ಡೀಸೆಲ್ ಎಂಜಿನ್‍ ಮಾದರಿಗಳನ್ನು ಬಿಎಸ್-6 ಎಂಜಿನ್ ಆಗಿ ನವೀಕರಿಸುವುದಾಗಿ ಖಚಿತಪಡಿಸಿದೆ. ಮಾರಾಟದಲ್ಲಿ ಇಳಿಕೆಯಾಗಿರುವುದರಿಂದ ಭಾರತದಲ್ಲಿ 1.0 ಲೀಟರ್ ಇಕೋಬೂಸ್ಟ್ ಎಂಜಿನ್ ಉತ್ಪಾದನೆಯನ್ನು ಸ್ಥಗಿತಗೊಳಿಸಿರುವುದಾಗಿ ಕಂಪನಿಯು ಖಚಿತಪಡಿಸಿದೆ.

ಸ್ಪಾಟ್ ಟೆಸ್ಟ್‌ನಲ್ಲಿ ಕಾಣಿಸಿಕೊಂಡ ಬಿಎಸ್-6 ಇಕೋಸ್ಪೋರ್ಟ್

ಪ್ರಸ್ತುತ ಜನರೇಷನ್ ಇಕೋಸ್ಪೋರ್ಟ್‍‍ನಲ್ಲಿ 1.5 ಲೀಟರ್ ಡೀಸೆಲ್ ಮತ್ತು ಪೆಟ್ರೋಲ್ ಎಂಜಿನ್‍‍ನೊಂದಿಗೆ 5 ಸ್ಪೀಡ್ ಮ್ಯಾನುವಲ್ ಗೇರ್‍‍ಬಾಕ್ಸ್ ಮತ್ತು ಪೆಟ್ರೋಲ್ ಎಂಜಿನ್ ಆಯ್ಕೆಯಲ್ಲಿ 6-ಸ್ಪೀಡ್ ಆಟೋಮ್ಯಾಟಿಕ್ ಗೇರ್‍‍ಬಾಕ್ಸ್ ಅನ್ನು ಅಳವಡಿಸಲಾಗಿದೆ. 1.0 ಲೀಟರ್ ಇಕೋಬೂಸ್ಟ್ ಎಂಜಿನ್‍‍ನೊಂದಿಗೆ 6-ಸ್ಪೀಡ್ ಮ್ಯಾನುವಲ್ ಗೇರ್‍‍ಬಾಕ್ಸ್ ಅನ್ನು ಅಳವಡಿಸಲಾಗಿದೆ. 1.0 ಲೀಟರ್ ಇಕೋಬೂಸ್ಟ್ ಎಂಜಿನ್ ಅನ್ನು ಸ್ಥಗಿತಗೊಳಿಸುವುದರಿಂದ ಮುಂಬರುವ ಮಾದರಿಯಲ್ಲಿ ಸ್ಟ್ಯಾಂಡರ್ಡ್ 6 ಸ್ಪೀಡ್ ಮ್ಯಾನುವಲ್ ಗೇರ್‍‍ಬಾಕ್ಸ್ ಅನ್ನು ಅಳವಡಿಸಬಹುದು.

ಸ್ಪಾಟ್ ಟೆಸ್ಟ್‌ನಲ್ಲಿ ಕಾಣಿಸಿಕೊಂಡ ಬಿಎಸ್-6 ಇಕೋಸ್ಪೋರ್ಟ್

ಫೋರ್ಡ್ 1.0 ಲೀಟರ್ ಇಕೋಬೂಸ್ಟ್ ಎಂಜಿನ್ ಅನ್ನು ಮಹೀಂದ್ರಾ 1.2- ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್‍ನೊಂದಿಗೆ ಬದಲಾಯಿಸುವ ಸಾಧ್ಯತೆಗಳಿವೆ, ಇದು ಕಂಪನಿಯ ಟಿಯು‍ವಿ 300 ಕಾಂಪ್ಯಾಕ್ಟ್-ಎಸ್‍ಯು‍ವಿ ಮಾದರಿಯಲ್ಲಿ ಕಾಣಿಸಿಕೊಂಡಿದೆ. ಇದು ಮಹೀಂದ್ರಾ ಮತ್ತು ಫೋರ್ಡ್ ನಡುವಿನ ಜಂಟಿ ಸಹಭಾಗಿತ್ವದ ಪರಿಣಾಮ ಎನ್ನಬಹುದು.

ಸ್ಪಾಟ್ ಟೆಸ್ಟ್‌ನಲ್ಲಿ ಕಾಣಿಸಿಕೊಂಡ ಬಿಎಸ್-6 ಇಕೋಸ್ಪೋರ್ಟ್

ಫೋರ್ಡ್ ಇಕೋಸ್ಪೋರ್ಟ್ ಭಾರತದಲ್ಲಿ 2013ರಲ್ಲಿ ಮೊದಲ ಬಾರಿಗೆ ಬಿಡುಗಡೆಯಾಯ್ತು, ಈ ವಿಭಾಗದ ಅತ್ಯಂತ ಹಳೆಯ ಮಾದರಿಗಳಲ್ಲಿ ಒಂದಾಗಿದೆ. ಕಾಂಪ್ಯಾಕ್ಟ್-ಎಸ್‍‍ಯು‍ವಿ ಭಾರತದಲ್ಲಿ ಯಶಸ್ವಿಯಾಗಿತ್ತು, ಈ ಹಿಂದೆ ಇಕೋಸ್ಪೋರ್ಟ್ ಕಂಪನಿಯ ಶ್ರೇಣಿಯ ಕಾರುಗಳಲ್ಲಿ ಹೆಚ್ಚು ಮಾರಾಟವಾಗಿತ್ತು.

MOST READ: ಹಳೆ ವಾಹನವನ್ನು ಗುಜರಿಗೆ ಹಾಕುವ ಮಾಲೀಕರಿಗೆ ಆಫರ್

ಸ್ಪಾಟ್ ಟೆಸ್ಟ್‌ನಲ್ಲಿ ಕಾಣಿಸಿಕೊಂಡ ಬಿಎಸ್-6 ಇಕೋಸ್ಪೋರ್ಟ್

ಭಾರತದಲ್ಲಿ ಮುಂಬರುವ ಹೊಸ ಮಾದರಿ ಇಕೋಸ್ಪೋರ್ಟ್ ಬಿಡುಗಡೆಯಾದ ಬಳಿಕ ಹ್ಯುಂಡೈ ವೆನ್ಯೂ, ಮಹೀಂದ್ರಾ ಎಕ್ಸ್‌ಯುವಿ 300, ಮಹೀಂದ್ರಾ ಟಿಯು‍ವಿ 300, ಟಾಟಾ ನೆಕ್ಸಾನ್ ಮತ್ತು ಮಾರುತಿ ಸುಜುಕಿ ವಿಟಾರಾ ಬ್ರೇಝಾ ಕಾರುಗಳಿಗೆ ಪೈಪೋಟಿ ನೀಡಲಿದೆ. ಇಕೋಸ್ಪೋರ್ಟ್ ಪೈಪೋಟಿ ನೀಡಲಿರುವ ಟಾಟಾ ನೆಕ್ಸಾನ್ ಕೂಡ ಮುಂದಿನ ವರ್ಷ ನವೀಕರಿಸಲಿದೆ.

MOST READ: ಬೈಕ್ ಚಲಾಯಿಸಿದ್ದು ಮಗ, ದಂಡ ಬಿದ್ದಿದ್ದು ಅಪ್ಪನಿಗೆ..!

ಸ್ಪಾಟ್ ಟೆಸ್ಟ್‌ನಲ್ಲಿ ಕಾಣಿಸಿಕೊಂಡ ಬಿಎಸ್-6 ಇಕೋಸ್ಪೋರ್ಟ್

ಇಕೋಸ್ಪೋರ್ಟ್ ಕಾಂಪ್ಯಾಕ್ಟ್ ಎಸ್‍‍ಯು‍ವಿಯು ಫೋರ್ಡ್ ಕಂಪನಿಯ ಅತ್ಯುತ್ತಮ ಮಾರಾಟವಾದ ವಾಹನಗಳಲ್ಲಿ ಒಂದಾಗಿದೆ. ಮುಂಬರುವ ಬಿಎಸ್-6 ಮಾಲಿನ್ಯ ನಿಯಮಕ್ಕೆ ತಕ್ಕಂತೆ ನವೀಕರಿಸಲಾಗುತ್ತಿದೆ. ಪ್ರಮುಖ ವಾಹನ ತಯಾರಕ ಕಂಪನಿಗಳು ತಮ್ಮ ಎಲ್ಲಾ ಮಾದರಿಗಳನ್ನು ಬಿಎಸ್-6 ಮಾಲಿನ್ಯ ನಿಯಮಕ್ಕೆ ತಕ್ಕಂತೆ ನವೀಕರಿಸಲು ಸಜ್ಜಾಗುತ್ತಿದೆ.

Source: Rushlane

Most Read Articles

Kannada
Read more on ಫೋರ್ಡ್ ford
English summary
Ford Ecosport BS-VI Spied Testing Ahead Of Debut At 2020 Auto Expo: Spy Pics & Details - Read in Kannada
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X