ಏರಿಕೆಯಾದ ಫೋರ್ಡ್ ಎಂಡೀವರ್ ಮಾರಾಟ

ಫೋರ್ಡ್ ಇಂಡಿಯಾ ಕಂಪನಿಯ ಎಂಡೀವರ್ ಎಸ್‍‍ಯುವಿಯ ಮಾರಾಟದಲ್ಲಿ ಶೇ.67ರಷ್ಟು ಏರಿಕೆಯಾಗಿದೆ. ಫೋರ್ಡ್ ಎಂಡೀವರ್ ಎಸ್‍‍ಯುವಿಯನ್ನು ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಎವರೆಸ್ಟ್ ಎಂದು ಕರೆಯಲಾಗುತ್ತದೆ.

ಏರಿಕೆಯಾದ ಫೋರ್ಡ್ ಎಂಡೀವರ್ ಮಾರಾಟ

ಭಾರತದಲ್ಲಿ ಫೋರ್ಡ್ ಎಂಡೀವರ್ 2016ರಲ್ಲಿ ಬಿಡುಗಡೆಯಾಗಿತ್ತು. ಈ ಎಸ್‍‍ಯುವಿಯು ಬಿಡುಗಡೆಯಾದಾಗಿನಿಂದ ಭಾರತದ ಅತಿ ಹೆಚ್ಚು ಮಾರಾಟವಾಗುವ 7 ಸೀಟಿನ ಪ್ರೀಮಿಯಂ ಎಸ್‍‍ಯುವಿಗಳಲ್ಲಿ ಒಂದಾಗಿದೆ. ಕಳೆದ ನವೆಂಬರ್ ತಿಂಗಳಲ್ಲಿ ಫೋರ್ಡ್ ಇಂಡೀವರ್ ಎಸ್‍‍ಯುವಿಯ ಒಟ್ಟು 724 ಯು‍‍ನಿಟ್‍ಗಳು ಮಾರಾಟವಾಗಿವೆ.

ಏರಿಕೆಯಾದ ಫೋರ್ಡ್ ಎಂಡೀವರ್ ಮಾರಾಟ

2018ರ ನವೆಂಬರ್ ತಿಂಗಳಿನಲ್ಲಿ ಶೇ.67 ರಷ್ಟು ಮಾರಾಟವಾಗಿತ್ತು. ಕಳೆದ ವರ್ಷದ ನವೆಂಬರ್ ತಿಂಗಳಿಗೆ ಹೋಲಿಸಿದರೆ ಈ ವರ್ಷ ಮಾರಾಟದಲ್ಲಿ ಶೇ.67ರಷ್ಟು ಹೆಚ್ಚಾಗಿದೆ.

ಏರಿಕೆಯಾದ ಫೋರ್ಡ್ ಎಂಡೀವರ್ ಮಾರಾಟ

ಈ ವರ್ಷದ ಅಕ್ಟೋಬರ್ ತಿಂಗಳಲ್ಲಿ ಒಟ್ಟು 700 ಯು‍‍ನಿ‍‍ಟ್‍ಗಳ ಮಾರಾಟವಾಗಿತ್ತು. ಕಳೆದ ಅಕ್ಟೋಬರ್ ತಿಂಗಳಿಗೆ ಹೋಲಿಸಿದರೆ ಶೇ.3 ರಷ್ಟು ಬೆಳೆವಣಿಗೆಯಾಗಿದೆ. ಎಂಡೀವರ್, ಫೋರ್ಡ್ ಇಂಡಿಯಾ ಕಂಪನಿಯ ಸರಣಿಯಲ್ಲಿ ಅತಿ ಹೆಚ್ಚು ಮಾರಾಟವಾಗುವ ಕಾರುಗಳಲ್ಲಿ ಮೂರನೇ ಸ್ಥಾನವನ್ನು ಪಡೆದುಕೊಂಡಿದೆ.

ಏರಿಕೆಯಾದ ಫೋರ್ಡ್ ಎಂಡೀವರ್ ಮಾರಾಟ

ಫೋರ್ಡ್ ಎಂಡೀವರ್ 2016ರಲ್ಲಿ ಬಿಡುಗಡೆಗೊಳಿಸಿದ್ದರೂ, ಈ ವರ್ಷ ಈ ಎಸ್‍‍ಯುವಿಯ ಮಿಡ್ ಲೈಫ್ ಅನ್ನು ನವೀಕರಿಸಲಾಗಿತ್ತು. ಎಸ್‍‍ಯುವಿಯ ಕಾಸ್ಮೆಟಿಕ್‍ ವಿನ್ಯಾಸದಲ್ಲಿ ಕೆಲವು ಬದಲಾವಣೆ ಮಾಡಲಾಗಿದ್ದು, ಕೆಲವು ಹೆಚ್ಚುವರಿ ಫೀಚರ್ಸ್‍‍ಗಳನ್ನು ಅಳವಡಿಸಲಾಗಿದೆ.

ಏರಿಕೆಯಾದ ಫೋರ್ಡ್ ಎಂಡೀವರ್ ಮಾರಾಟ

ಪ್ರಸ್ತುತ ದೇಶಿಯ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿರುವ ಫೋರ್ಡ್ ಎಂಡೀವರ್ ಎಸ್‍‍ಯುವಿಯಲ್ಲಿ 2.2 ಲೀಟರ್ ಡೀಸೆಲ್ ಎಂಜಿನ್ ಅಳವಡಿಸಲಾಗಿದ್ದು, ಈ ಎಂಜಿನ್ 158 ಬಿ‍‍ಹೆಚ್‍‍ಪಿ ಪವರ್ ಮತ್ತು 385 ಎನ್‍ಎಂ ಟಾರ್ಕ್ ಉತ್ಪಾದಿಸುತ್ತದೆ.

ಏರಿಕೆಯಾದ ಫೋರ್ಡ್ ಎಂಡೀವರ್ ಮಾರಾಟ

ಈ ಎಂಜಿನ್‍‍ನೊಂದಿಗೆ 6 ಸ್ಪೀ ಡ್ ಆಟೋಮ್ಯಾಟಿಕ್ ಗೇರ್‍‍ಬಾಕ್ಸ್ ಅನ್ನು ಅಳವಡಿಸಲಾಗಿದೆ. ಈ ಎಸ್‍‍ಯುವಿಯಲ್ಲಿರುವ 3.2-ಲೀಟರ್ ಡೀಸೆಲ್ ಎಂಜಿನ್ 197-ಬಿಎಚ್‌ಪಿ ಪವರ್ ಮತ್ತು 470 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ.

ಏರಿಕೆಯಾದ ಫೋರ್ಡ್ ಎಂಡೀವರ್ ಮಾರಾಟ

ಈ ಎಂಜಿನ್‍‍ನೊಂದಿಗೆ 6 ಸ್ಪೀಡ್ ಆಟೋಮ್ಯಾಟಿಕ್ ಗೇರ್‍‍‍ಬಾಕ್ಸ್ ಅನ್ನು ಅಳವಡಿಸಲಾಗಿದೆ. ಇದರೊಂದಿಗೆ 4x4 ಡ್ರೈವ್ ಟೆಕ್ನಾಲಜಿ ಸೌಲಭ್ಯ ಹೊಂದಿದೆ. ಈ ಎಸ್‍ಯುವಿಯ ಮುಂಭಾಗದಲ್ಲಿ ಫ್ರಂಟ್ ಗ್ರಿಲ್ ಮತ್ತು ಕ್ರೋಮ್ ಸ್ಲಾಟ್‌ಗಳನ್ನು ಅಳವಡಿಸಲಾಗಿದೆ.

ಏರಿಕೆಯಾದ ಫೋರ್ಡ್ ಎಂಡೀವರ್ ಮಾರಾಟ

ಈ ಎಸ್‍ಯುವಿಯಲ್ಲಿ ಹೆಡ್‌ಲ್ಯಾಂಪ್ ಯುನಿಟ್, ಎಲ್ಇಡಿ ಟೇಲ್‍ಲೈಟ್, 18-ಇಂಚಿನ ಅಲಾಯ್ ವ್ಹೀಲ್, ನವೀಕರಿಸಿದ ಫ್ರಂಟ್ ಬಂಪರ್, ಸೆಮಿ ಪ್ಯಾರಾಲೆಲ್ ಅಸಿಸ್ಟ್, ಪನರೋಮಿಕ್ ಸನ್‌ರೂಫ್ ಅನ್ನು ಅಳವಡಿಸಲಾಗಿದೆ.

ಏರಿಕೆಯಾದ ಫೋರ್ಡ್ ಎಂಡೀವರ್ ಮಾರಾಟ

ಈ ಎಸ್‍ಯುವಿ ಇಂಟಿರಿಯರ್‍‍ನಲ್ಲಿ ಸ್ಟೀಯರಿಂಗ್ ಮೌಟೆಂಡ್ ಆಡಿಯೋ ಕಂಟ್ರೋಲ್, ಡ್ಯುಯಲ್-ಜೋನ್ ಕ್ಲೈಮೆಟ್ ಕಂಟ್ರೋಲ್, 8.0-ಇಂಚಿನ ಟಚ್‌ಸ್ಕ್ರೀನ್ ಇನ್ಪೋಟೇನ್‌ಮೆಂಟ್ ಸಿಸ್ಟಂ ಜೊತೆ ಆ್ಯಪಲ್ ಕಾರ್ ಪ್ಲೇ, ಅಂಡ್ರಾಯಿಡ್ ಆಟೋ ಮತ್ತು 10-ಸ್ಪಿಕರ್ಸ್ ಸೌಂಡ್ ಸಿಸ್ಟಂ ಹೊಂದಿದೆ.

ಏರಿಕೆಯಾದ ಫೋರ್ಡ್ ಎಂಡೀವರ್ ಮಾರಾಟ

ಫೋರ್ಡ್ ಎಂಡೀವರ್ ಎಸ್‍‍ಯುವಿಯಲ್ಲಿ ಪ್ರಯಾಣಿಕರ ಸುರಕ್ಷತೆಗಾಗಿ ಏಳು ಏರ್‌ಬ್ಯಾಗ್, ಎಬಿಎಸ್ ಜೊತೆ ಇಬಿಡಿ, ಎಲೆಕ್ಟ್ರಾನಿಕ್ ಸ್ಟ್ಯಾಬಿಲಿಟಿ ಕಂಟ್ರೋಲ್, ಟ್ರಾಕ್ಷನ್ ಕಂಟ್ರೋಲ್, ಹಿಲ್ ಅಸಿಸ್ಟ್ ಮತ್ತು ಪಾರ್ಕಿಂಗ್ ಕ್ಯಾಮೆರಾವನ್ನು ಅಳವಡಿಸಲಾಗಿದೆ.

ಏರಿಕೆಯಾದ ಫೋರ್ಡ್ ಎಂಡೀವರ್ ಮಾರಾಟ

ಟೊಯೊಟಾ ಎಂಡೀವರ್ ಎಸ್‍ಯುವಿ ಬೆಲೆಯು ಭಾರತದ ಎಕ್ಸ್ ಶೋರೂಂ ಪ್ರಕಾರ ರೂ.29.2 ಲಕ್ಷದಿಂದ ರೂ,34 ಲಕ್ಷಗಳಾಗಿದೆ. ಟೊಯೊಟಾ ಎಂಡೀವರ್ ಎಸ್‍‍ಯುವಿ ದೇಶಿಯ ಮಾರುಕಟ್ಟೆಯಲ್ಲಿ ಟೊಯೊಟಾ ಫಾರ್ಚೂನರ್, ಮಹೀಂದ್ರಾ ಅಲ್ಟುರಾಸ್ ಜಿ4 ಮತ್ತು ಇಸುಝು ಎಂಯು-ಎಕ್ಸ್ ಎಸ್‍‍ಯುವಿಗಳಿಗೆ ಪೈಪೋಟಿ ನೀಡುತ್ತದೆ.

Most Read Articles

Kannada
Read more on ಫೋರ್ಡ್ ford
English summary
Ford Endeavour Sales Up By 67% In November 2019 In India - Read in Kannada
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X