ಹೊಸ ಕಾರು ಖರೀದಿದಾರರಿಗೆ ಸಿಹಿಸುದ್ದಿ- ಫೋರ್ಡ್ ಫಿಗೋ ಫೇಸ್‌ಲಿಫ್ಟ್ ಬೆಲೆಯಲ್ಲಿ ಭಾರೀ ಇಳಿಕೆ

ಫೋರ್ಡ್ ಸಂಸ್ಥೆಯು ಕಳೆದ ತಿಂಗಳಷ್ಟೇ ತನ್ನ ಜನಪ್ರಿಯ ಫಿಗೋ ಹೊಸ ಆವೃತ್ತಿಯನ್ನು ಬಿಡುಗಡೆ ಮಾಡಿದ್ದು, ಹೊಸ ಕಾರು ಬಿಡುಗಡೆಯಾದ ಕೇವಲ ಒಂದು ತಿಂಗಳ ಅಂತರದಲ್ಲಿ ಬೆಲೆ ಇಳಿಕೆ ಮಾಡಿರುವ ಫೋರ್ಡ್ ಸಂಸ್ಥೆಯು ಹೊಸ ದರ ಪಟ್ಟಿಯನ್ನು ಪ್ರಕಟಿಸಿದೆ.

ಹೊಸ ಕಾರು ಖರೀದಿದಾರರಿಗೆ ಸಿಹಿಸುದ್ದಿ- ಫೋರ್ಡ್ ಫಿಗೋ ಫೇಸ್‌ಲಿಫ್ಟ್ ಬೆಲೆಯಲ್ಲಿ ಭಾರೀ ಇಳಿಕೆ

ಹೊಸ ದರ ಪಟ್ಟಿಯಲ್ಲಿ ಅಚ್ಚರಿ ಎಂಬಂತೆ ಫಿಗೋ ಫೇಸ್‌ಲಿಫ್ಟ್ ಕಾರುಗಳ ಆರಂಭಿಕ ಆವೃತ್ತಿಗಳ ಬೆಲೆಯಲ್ಲಿ ತುಸು ಏರಿಕೆ ಮಾಡಿರುವ ಫೋರ್ಡ್ ಸಂಸ್ಥೆಯು ಹೈ ಎಂಡ್ ಆವೃತ್ತಿಗಳಲ್ಲಿ ಭಾರೀ ಪ್ರಮಾಣದ ದರ ಕಡಿತಗೊಳಿಸಿವೆ. ಹೊಸ ದರ ಪಟ್ಟಿ ಪ್ರಕಾರ, ಆರಂಭಿಕ ಆವೃತ್ತಿಯ ಎರಡು ಮಾದರಿಗಳ ಬೆಲೆ ಪ್ರಸ್ತುತ ಮಾರುಕಟ್ಟೆಯಲ್ಲಿರುವ ಬೆಲೆಗಿಂತ ರೂ.8 ಸಾವಿರ ಏರಿಕೆಯಾದಲ್ಲಿ ಹೈ ಎಂಡ್ ಮಾದರಿಗಳ ಬೆಲೆ ಪ್ರಸ್ತುತ ಮಾರುಕಟ್ಟೆಯಲ್ಲಿರುವ ಬೆಲೆಗಿಂತ ರೂ.39 ಸಾವಿರ ಇಳಿಕೆಯಾಗಿದೆ.

ಹೊಸ ಕಾರು ಖರೀದಿದಾರರಿಗೆ ಸಿಹಿಸುದ್ದಿ- ಫೋರ್ಡ್ ಫಿಗೋ ಫೇಸ್‌ಲಿಫ್ಟ್ ಬೆಲೆಯಲ್ಲಿ ಭಾರೀ ಇಳಿಕೆ

2019ರ ಫಿಗೋ ಕಾರುಗಳ ಹೊಸ ದರ ಪಟ್ಟಿ(ದೆಹಲಿ ಎಕ್ಸ್‌ಶೋರೂಂ ಪ್ರಕಾರ)

ವೆರಿಯೆಂಟ್ ಹಳೆಯ ದರ ಹೊಸ ದರ ಬದಲಾವಣೆಯಾದ ದರ
ಆ್ಯಂಬಿಯೆಂಟ್ ಎಂಟಿ (1.2ಲೀ ಪೆಟ್ರೋಲ್) ರೂ. 5.15 ಲಕ್ಷ

ರೂ. 5.23 ಲಕ್ಷ

ರೂ. 8,000 ಏರಿಕೆ

ಆ್ಯಂಬಿಯೆಂಟ್ ಎಂಟಿ (1.5ಲೀ ಡೀಸೆಲ್) ರೂ. 5.95 ಲಕ್ಷ

ರೂ. 6.15 ಲಕ್ಷ

ರೂ. 18,000 ಏರಿಕೆ

ಟೈಟಾನಿಯಂ ಎಂಟಿ (1.2ಲೀ ಪೆಟ್ರೋಲ್) ರೂ. 6.39 ಲಕ್ಷ

ರೂ. 6.00 ಲಕ್ಷ

ರೂ. 39,000 ಇಳಿಕೆ

ಟೈಟಾನಿಯಂ ಎಂಟಿ(1.5ಲೀ ಡೀಸೆಲ್) ರೂ. 7.19 ಲಕ್ಷ

ರೂ. 6.90 ಲಕ್ಷ

ರೂ. 29,000 ಇಳಿಕೆ

ಟೈಟಾನಿಯಂ ಬ್ಲೂ (1.2ಲೀ ಪೆಟ್ರೋಲ್) ರೂ. 6.94 ಲಕ್ಷ

ರೂ. 6.65 ಲಕ್ಷ

ರೂ. 29,000 ಇಳಿಕೆ
ಟೈಟಾನಿಯಂ ಬ್ಲೂ (1.5ಲೀ ಡೀಸೆಲ್) ರೂ. 7.74 ಲಕ್ಷ

ರೂ. 7.55 ಲಕ್ಷ

ರೂ. 19,000 ಇಳಿಕೆ
ಟೈಟಾನಿಯಂ ಎಟಿ (1.5ಲೀ ಪೆಟ್ರೋಲ್) ರೂ. 8.09 ಲಕ್ಷ

ರೂ. 7.70 ಲಕ್ಷ

ರೂ. 39,000 ಇಳಿಕೆ
ಹೊಸ ಕಾರು ಖರೀದಿದಾರರಿಗೆ ಸಿಹಿಸುದ್ದಿ- ಫೋರ್ಡ್ ಫಿಗೋ ಫೇಸ್‌ಲಿಫ್ಟ್ ಬೆಲೆಯಲ್ಲಿ ಭಾರೀ ಇಳಿಕೆ

ಇನ್ನು ಭಾರತೀಯ ಮಾರುಕಟ್ಟೆಯಲ್ಲಿ ಫಿಗೋ ಹ್ಯಾಚ್‌ಬ್ಯಾಕ್ ಮಾದರಿಗಳಿಗೆ ಅಷ್ಟಾಗಿ ಬೇಡಿಕೆ ಇಲ್ಲದ್ದಿದ್ದರೂ ಉತ್ತಮ ಎಂಜಿನ್ ಮತ್ತು ವಿನ್ಯಾಸಗಳು ನಿರ್ದಿಷ್ಟ ಮಟ್ಟದ ಗ್ರಾಹಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದ್ದು, ಈ ಬಾರಿ ಗ್ರಾಹಕರ ಆದ್ಯತೆಗೆ ತಕ್ಕಂತೆ ಕೆಲವು ಮಹತ್ವದ ಬದಲಾವಣೆಗಳೊಂದಿಗೆ ಮಾರುಕಟ್ಟೆಗೆ ಲಗ್ಗೆಯಿಟ್ಟಿರುವುದು ಗ್ರಾಹಕರ ಆಕರ್ಷಣೆಗೆ ಕಾರಣವಾಗಿದೆ.

ಹೊಸ ಕಾರು ಖರೀದಿದಾರರಿಗೆ ಸಿಹಿಸುದ್ದಿ- ಫೋರ್ಡ್ ಫಿಗೋ ಫೇಸ್‌ಲಿಫ್ಟ್ ಬೆಲೆಯಲ್ಲಿ ಭಾರೀ ಇಳಿಕೆ

ಫೋರ್ಡ್ ಸಂಸ್ಥೆಯು ಹೊಸ ಫಿಗೋ ಕಾರುಗಳನ್ನು ಡೀಸೆಲ್ ಮತ್ತು ಪೆಟ್ರೋಲ್ ಎರಡು ಆವೃತ್ತಿಯಲ್ಲೂ ಪರಿಚಯಿಸಿದ್ದು, ಡಿಸೇಲ್ ಆವೃತ್ತಿಯಲ್ಲಿ ಮೂರು ವೆರಿಯೆಂಟ್‌ಗಳು ಖರೀದಿ ಲಭ್ಯವಿದ್ದಲ್ಲಿ ಪೆಟ್ರೋಲ್ ವೆರಿಯೆಂಟ್‌ಗಳಲ್ಲಿ ಒಟ್ಟು ನಾಲ್ಕು ವೆರಿಯೆಂಟ್‌ಗಳನ್ನು ಆಯ್ಕೆ ಮಾಡಬಹುದು.

ಈ ಫೇಸ್‌ಲಿಫ್ಟ್ ಆವೃತ್ತಿಯ ಮತ್ತೊಂದು ವಿಶೇಷ ಅಂದ್ರೆ, ಪ್ರತಿ ಬಾರಿಯೂ ಕಾರು ಉತ್ಪಾದನಾ ಸಂಸ್ಥೆಗಳು ಹೊಸ ಕಾರುಗಳನ್ನು ಬಿಡುಗಡೆ ಮಾಡಿದಾಗ ಇಲ್ಲವೇ ಉನ್ನತಿಕರಿಸಿದಾಗ ಬೆಲೆ ಹೆಚ್ಚಳ ಮಾಡುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಆದ್ರೆ ಫೋರ್ಡ್ ಸಂಸ್ಥೆಯು ಈ ಬಾರಿ ಹೊಸ ಕಾರಿನ ಬೆಲೆಯನ್ನು ರೂ.70 ಸಾವಿರ ಕಡಿತಗೊಳಿಸಿ ಫೇಸ್‌ಲಿಫ್ಟ್ ಆವೃತ್ತಿಯನ್ನು ಹೊರತಂದಿರುವುದಲ್ಲದೇ ಇದೀಗ ಮತ್ತೆ ಬೆಲೆ ಇಳಿಕೆ ಮಾಡಿದೆ.

ಹೊಸ ಕಾರು ಖರೀದಿದಾರರಿಗೆ ಸಿಹಿಸುದ್ದಿ- ಫೋರ್ಡ್ ಫಿಗೋ ಫೇಸ್‌ಲಿಫ್ಟ್ ಬೆಲೆಯಲ್ಲಿ ಭಾರೀ ಇಳಿಕೆ

ಜೊತೆಗೆ ಹೊಸ ಫಿಗೋ ಫೇಸ್‌ಲಿಫ್ಟ್ ಆವೃತ್ತಿಯಲ್ಲಿ ಈ ಬಾರಿ ಕೆಲವು ಗುರತರ ಬದಲಾವಣೆಗಳನ್ನು ತರಲಾಗಿದ್ದು, ನವೀಕರಿಸಲಾದ ಫ್ರಂಟ್ ಮತ್ತು ರಿಯರ್ ಬಂಪರ್, ಹೊಸ ಹನಿಕೊಂಬ ಫ್ರಂಟ್ ಗ್ರೀಲ್, 15-ಇಂಚಿನ ಸ್ಪೋರ್ಟಿ ಲುಕ್ ಅಲಾಯ್ ಚಕ್ರಗಳು ಮತ್ತು ಟಾಪ್ ಎಂಡ್ ಆವೃತ್ತಿಯಾದ ಬ್ಲೂ ವೆರಿಯೆಂಟ್‌ನಲ್ಲಿ ಕಪ್ಪು ಮಿಶ್ರಿತ ರಿಯರ್ ವ್ಯೂ ಮಿರರ್, ಡೋರ್ಸ್ ಮತ್ತು ಬೂಟ್ ಲಿಪ್ ಸೌಲಭ್ಯವನ್ನು ಪಡೆದಿದೆ.

MOST READ: ಮಗುವಿನ ಪ್ರಾಣವನ್ನು ಉಳಿಸಲು 600 ಕಿ.ಮೀ ದೂರವನ್ನು ಕೇವಲ 720 ನಿಮಿಷಗಳಲ್ಲಿ ತಲುಪಿದ ಆಂಬ್ಯುಲೆನ್ಸ್ ಡ್ರೈವರ್

ಹೊಸ ಕಾರು ಖರೀದಿದಾರರಿಗೆ ಸಿಹಿಸುದ್ದಿ- ಫೋರ್ಡ್ ಫಿಗೋ ಫೇಸ್‌ಲಿಫ್ಟ್ ಬೆಲೆಯಲ್ಲಿ ಭಾರೀ ಇಳಿಕೆ

ಹಾಗೆಯೇ ಕಾರಿನ ಒಳಭಾಗದ ವಿನ್ಯಾಸವು ಈ ಬಾರಿ ಗ್ರಾಹಕರ ಆಕರ್ಷಣೆಗೆ ಕಾರಣವಾಗಿದ್ದು, ಆಟೋಮ್ಯಾಟಿಕ್ ಕ್ಲೈಮೆಟ್ ಕಂಟ್ರೋಲ್, ಕೀ ಲೆಸ್ ಎಂಟ್ರಿ, ಪುಶ್-ಬಟನ್ ಸ್ಟಾರ್ಟ್/ಸ್ಟಾಪ್, ಆಟೋಮ್ಯಾಟಿಕ್ ಹೆಡ್‌ಲ್ಯಾಂಪ್ ಮತ್ತು ವೈಪರ್ಸ್, ಪಾರ್ಕಿಂಗ್ ಕ್ಯಾಮೆರಾ, 7-ಇಂಚಿನ ಟಚ್‌ಸ್ಕ್ರೀನ್ ಇನ್ಪೋಟೈನ್‌ಮೆಂಟ್, ಆ್ಯಪಲ್ ಕಾರ್ ಪ್ಲೇ ಮತ್ತು ಆಂಡ್ರಾಯಿಡ್ ಆಟೋ ಪ್ರೇರಣೆ ಹೊಂದಿದೆ.

ಹೊಸ ಕಾರು ಖರೀದಿದಾರರಿಗೆ ಸಿಹಿಸುದ್ದಿ- ಫೋರ್ಡ್ ಫಿಗೋ ಫೇಸ್‌ಲಿಫ್ಟ್ ಬೆಲೆಯಲ್ಲಿ ಭಾರೀ ಇಳಿಕೆ

ಫೇಸ್‌ಲಿಫ್ಟ್ ಆವೃತ್ತಿಯು ಈ ಸುರಕ್ಷತೆಯಲ್ಲಿ ಮತ್ತಷ್ಟು ಬಲಿಷ್ಠತೆ ಪಡೆದಿದ್ದು, ಪ್ರತಿಯೊಂದು ವೆರಿಯೆಂಟ್‌ನಲ್ಲೂ ಕೂಡಾ ಡ್ಯುಯಲ್ ಏರ್‌ಬ್ಯಾಗ್, ಎಬಿಎಸ್ ಮತ್ತು ಇಬಿಡಿ, ರಿಯರ್ ಪಾರ್ಕಿಂಗ್ ಸೆನ್ಸಾರ್, ಸೀಟ್ ಬೆಲ್ಟ್ ರಿಮೆಂಡರ್, ಸ್ಪೀಡ್ ಅಲರ್ಟ್ ಸಿಸ್ಟಂ ಮತ್ತು ಟಾಪ್ ಎಂಡ್ ಆವೃತ್ತಿಯಲ್ಲಿ ಹೋಂದಾಣಿಕೆ ಮಾಡಬಹುದಾದ ರಿಯರ್ ಹೆಡ್ ರೆಸ್ಟ್, ಆರ್ ಏರ್‌ಬ್ಯಾಗ್‌ಗಳು, ಟ್ರಾನ್ಷನ್ ಕಂಟ್ರೋಲ್ ಮತ್ತು ಹಿಲ್-ಸ್ಟಾರ್ಟ್ ಅಸಿಸ್ಟ್ ಸೌಲಭ್ಯ ನೀಡಲಾಗಿದೆ.

MOST READ: 2020ಕ್ಕೆ ಮಾರುತಿ ಸುಜುಕಿ 7 ಸೀಟರ್ ವಿಟಾರಾ ಎಸ್‌ಯುವಿ ಬಿಡುಗಡೆ ಪಕ್ಕಾ!

ಹೊಸ ಕಾರು ಖರೀದಿದಾರರಿಗೆ ಸಿಹಿಸುದ್ದಿ- ಫೋರ್ಡ್ ಫಿಗೋ ಫೇಸ್‌ಲಿಫ್ಟ್ ಬೆಲೆಯಲ್ಲಿ ಭಾರೀ ಇಳಿಕೆ

ಎಂಜಿನ್ ಸಾಮರ್ಥ್ಯ ಮತ್ತು ಪರ್ಫಾಮೆನ್ಸ್

ಫಿಗೋ ಫೇಸ್‌ಲಿಫ್ಟ್ ಆವೃತ್ತಿಗಳು ಈ ಹಿಂದಿನಂತೆಯೇ 1.2-ಲೀಟರ್ ಪೆಟ್ರೋಲ್ ಎಂಜಿನ್ ಮತ್ತು 1.5-ಲೀಟರ್ ಡೀಸೆಲ್ ಎಂಜಿನ್ ಆಯ್ಕೆಯನ್ನು ಮುಂದುವರಿಸಿರುವ ಫೋರ್ಡ್ ಸಂಸ್ಥೆಯು ಈ ಬಾರಿ ಹೊಸದಾಗಿ ಟಾಪ್ ಎಂಡ್ ಆವೃತ್ತಿಯಾದ ಬ್ಲೂ ವೆರಿಯೆಂಟ್‌ನಲ್ಲಿ ಮಾತ್ರವೇ 1.5-ಲೀಟರ್ ಪೆಟ್ರೋಲ್ ಎಂಜಿನ್ ಬಳಕೆ ಮಾಡಿರುವುದು ಪ್ರಮುಖ ಬದಲಾವಣೆಯಾಗಿದೆ.

ಹೊಸ ಕಾರು ಖರೀದಿದಾರರಿಗೆ ಸಿಹಿಸುದ್ದಿ- ಫೋರ್ಡ್ ಫಿಗೋ ಫೇಸ್‌ಲಿಫ್ಟ್ ಬೆಲೆಯಲ್ಲಿ ಭಾರೀ ಇಳಿಕೆ

1.2-ಲೀಟರ್ ಪೆಟ್ರೋಲ್ ಎಂಜಿನ್‌ನಲ್ಲಿ 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್, 1.5-ಲೀಟರ್ ಪೆಟ್ರೋಲ್ ಎಂಜಿನ್‌ನಲ್ಲಿ 6-ಸ್ಪೀಡ್ ಟಾರ್ಕ್ ಕನ್ವರ್ಟರ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಮತ್ತು 1.5-ಲೀಟರ್ ಡೀಸೆಲ್ ಎಂಜಿನ್‌ನಲ್ಲಿ 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಆಯ್ಕೆ ನೀಡಿರುವ ಫೋರ್ಡ್ ಸಂಸ್ಥೆಯು ಈ ಬಾರಿ ಮಾರುತಿ ಸುಜುಕಿ ಸ್ವಿಫ್ಟ್, ಹ್ಯುಂಡೈ ಗ್ರ್ಯಾಂಡ್ ಐ10 ಮತ್ತು ಫೋಕ್ಸ್‌ವ್ಯಾಗನ್ ಪೋಲೊ ಕಾರುಗಳಿಗೆ ತೀವ್ರ ಪೈಪೋಟಿ ನೀಡುವ ವಿಶ್ವಾಸದಲ್ಲಿದೆ.

Most Read Articles

Kannada
Read more on ಫೋರ್ಡ್ ford
English summary
Ford Figo Revised Price List Revealed — Higher-Spec Models Now Cheaper. Read in Kannada
Story first published: Saturday, April 20, 2019, 19:54 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X